Subscribe to Updates
Get the latest creative news from FooBar about art, design and business.
Author: roovari
ಉಡುಪಿ : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿಶ್ವಕರ್ಮ ಸಮಾಜದ 20ರಿಂದ 45 ವರ್ಷದೊಳಗಿನ ಬರಹಗಾರರಿಗಾಗಿ ಸ್ವರಚಿತ ಸಣ್ಣಕಥೆ ಮತ್ತು ಕವನ ಸ್ಪರ್ಧೆ ಆಯೋಜಿಸಲಾಗಿದೆ. ಕಥೆಯು ಎ4 ಅಳತೆಯ ಕಾಗದದಲ್ಲಿ 02 ಪುಟ ಮೀರದಂತೆ, ಕವಿತೆಯು 01 ಪುಟ ಮೀರದಂತೆ ಸ್ವಹಸ್ತಾಕ್ಷರದಲ್ಲಿ ಬರೆದು, ವಯಸ್ಸಿನ ದಾಖಲೆ, ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಮತ್ತು ಭಾವಚಿತ್ರ ಲಗ್ತೀಕರಿಸಿ 20-08-2023ರೊಳಗೆ ಕೆ.ಮುರಳೀಧರ, ಪ್ರಧಾನ ಕಾರ್ಯದರ್ಶಿ, ವಿಶ್ವಕರ್ಮ ಒಕ್ಕೂಟ, ಶ್ರೀಕೃಷ್ಣ, ಅಮ್ಮಾ ಲೇಔಟ್, ಕನ್ನರ್ಪಾಡಿ, ಕಡೆಕಾರು ಅಂಚೆ, ಉಡುಪಿ -576103. ವಿಳಾಸಕ್ಕೆ ಕಳುಹಿಸಿಕೊಡಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9448348200 ಸಂಪರ್ಕಿಸಬಹುದು.
ಕಿನ್ನಿಗೋಳಿ : ಅನಂತ ಪ್ರಕಾಶದ ಗಾಯತ್ರೀ ಪ್ರಕಾಶನದಿಂದ ಈವರೆಗೆ 168 ಕೃತಿಗಳು ಪ್ರಕಟವಾಗಿದ್ದು 169ನೆಯದಾಗಿ ಶ್ರೀ ರಾಧಾಕೃಷ್ಣ ಕಲ್ಚಾರ್ ಅವರ ಲೇಖನಗಳ ಕೃತಿ ‘ತಲ್ಲಣಿಸದಿರು ಮನವೆ’, 170ನೆಯ ಕಾದಂಬರಿ ಕೃತಿ ‘ಕೂಡುಮನೆ’,ಹಾಗೂ 171ನೆಯ ಕೃತಿ ಟಿ.ಎಂ. ರಮೇಶ್ ಅವರ ಲಲಿತಪ್ರಬಂಧಗಳ ಸಂಕಲನ ‘ನಗುಬಿಗು’ ಬಿಡುಗಡೆ ಸಮಾರಂಭ ದಿನಾಂಕ 28-07-2023ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಮೂಡಬಿದಿರೆಯ ಡಾ. ಮೋಹನ ಆಳ್ವ ಮಾತನಾಡುತ್ತಾ “ಗ್ರಾಮೀಣ ಪ್ರದೇಶಗಳಲ್ಲಿ ಕನ್ನಡ ಮತ್ತು ಸಾಹಿತ್ಯದ ಕೆಲಸಗಳು ನಡೆಯುತ್ತಲೇ ಇರುತ್ತವೆ. ಆ ಮೂಲಕ ಕನ್ನಡದ ಮನಸ್ಸುಗಳು ಸದಾ ಕ್ರಿಯಾಶೀಲವಾಗಿತ್ತದೆ.” ಎಂದು ಹೇಳಿದರು. ಡಾ. ಭಾಸ್ಕರಾನಂದ ಕುಮಾರ್ ಮಾತನಾಡಿ “ಕಿನ್ನಿಗೋಳಿಯ ಅನಂತ ಪ್ರಕಾಶ ಸಂಸ್ಥೆ ನಡೆಸಿಕೊಂಡು ಬರುತ್ತಿರುವ ಸಾಹಿತ್ಯ ಚಟುವಟಿಕೆಗಳು ಅಭಿನಂದನೀಯ. ಕಲ್ಚಾರ್ ಅವರ ಕೃತಿಯ ಓದು ಪುರಾಣದ ಜ್ಞಾನದಾಹಿಗೆ ಉತ್ತಮ ಕೃತಿ.” ಎಂದರು. ಉಡುಪಿಯ ಮುರಳಿ ಕಡೆಕಾರ್ ಮಾತನಾಡಿ, “ತಾಳಮದ್ದಳೆ ಕ್ಷೇತ್ರದಲ್ಲಿ ಹೆಸರು ಮಾಡಿರುವ ಕಲ್ಚಾರ್ ಅವರ ಕಾದಂಬರಿ ‘ಕೂಡುಮನೆ’ ಸರಾಗವಾಗಿ ಓದಿಸಿಕೊಂಡು ಹೋಗುವ ಉತ್ತಮ ಕೃತಿ. ಹಿಂದಿನ ಕೂಡು…
ಮಂಗಳೂರು : ತುಳು ಕೂಟ (ರಿ.) ಕುಡ್ಲ ಇದರ ‘ಬಂಗಾರ ಪರ್ಬ’ 5ನೆಯ ಸರಣಿ ಕಾರ್ಯಕ್ರಮ’ವು ಶ್ರೀ ಕ್ಷೇತ್ರ ಶರವು ದೇವಾಲಯದ ಸಭಾಂಗಣದಲ್ಲಿ ದಿನಾಂಕ 29-07-2023ರಂದು ಜರಗಿತು. ಈ ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿದ ಶ್ರೀ ಕ್ಷೇತ್ರ ಶರವು ದೇವಾಲಯದ ಶಿಲೆ ಶಿಲೆ ಮೊಕ್ತೇಸರರಾದ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮಾತನಾಡುತ್ತಾ “ತುಳು ಭಾಷೆಯನ್ನು ನಾವು ತುಳುವರೇ ಮರೆತರೆ ಭಾಷಾ ಬೆಳವಣಿಗೆ ನಡೆಯದು. ಬೇರೆ ಬೇರೆ ಭಾಷೆಗಳನ್ನು ಕಲಿತರೂ ಮಾತೃಭಾಷೆಯನ್ನು ನಮ್ಮ ಮುಂದಿನ ಪೀಳಿಗೆಗೆ ನಾವೇ ತಲಪಿಸಬೇಕು. ಹಾಗಾದಾಗ ಮಾತ್ರ ಭಾಷೆಗೊಂದು ಸ್ಥಿರತೆ ಬರುತ್ತದೆ. ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ವಾಸಿಸುವಾಗಲೂ ತುಳುವನ್ನು ಪ್ರೀತಿಯಿಂದ ತೌಳವ ಮಂದಿಗಳೂ ಆಡುವಂತಾಗುತ್ತದೆ. ತುಳುಕೂಟ ಬಂಗಾರ್ ಪರ್ಬದ ಸಂಭ್ರಮಾಚರಣೆಯನ್ನು ನಡೆಸುತ್ತಿರುವಈ ಸಂದರ್ಭದಲ್ಲಿ ಅದಕ್ಕೆ ಬೇಕಾಗುವ ಜನ ಜಾಗೃತಿಯನ್ನು ಮತ್ತು ತುಳು ಕೃಷಿಯನ್ನು ಮಾಡುತ್ತಾ ಬರುತ್ತಿದೆ. ಶ್ರೀಕ್ಷೇತ್ರದಲ್ಲೂ ತುಳುವಿಗೆ ಸಂಬಂಧಪಟ್ಟಂತೆ ಅನೇಕ ಕಾರ್ಯಕ್ರಮಗಳಿಗೆ ಅವಕಾಶ ನೀಡುತ್ತಿದ್ದೇವೆ. ಎಲ್ಲರೂ ಒಟ್ಟಾಗಿ ತುಳುತೇರನ್ನು ಎಳೆಯೋಣ.” ಎ೦ದು ಹೇಳಿದರು. ಆತ್ಮಶಕ್ತಿ ವಿವಿದೋದ್ದೇಶ ಸಹಕಾರಿ…
ಮಂಗಳೂರು : ಬೆಂಗಳೂರು ದೂರದರ್ಶನದ ಚಂದನ ವಾಹಿನಿಯಲ್ಲಿ ಭಾಸ್ಕರ ರೈ ಕುಕ್ಕುವಳ್ಳಿಯವರು ಸಂಯೋಜಿಸಿದ ‘ತುಳುನಾಡ ಆಟಿದ ಕೂಟ’ ಪಟ್ಟಾಂಗ ಕಾರ್ಯಕ್ರಮ ಇದೇ ಜುಲೈ 29ರಂದು ಶನಿವಾರ ಬೆಳಿಗ್ಗೆ ಗಂ.9.30ರಿಂದ ಪ್ರಸಾರಗೊಳ್ಳಲಿದೆ. ಇದರಲ್ಲಿ ತುಳುನಾಡಿನ ಆಟಿ ತಿಂಗಳ ವಿಶೇಷತೆ, ಆಟಿ ಮತ್ತು ಆಷಾಢಕ್ಕಿರುವ ವ್ಯತ್ಯಾಸ, ಆಟಿಯ ಆಚರಣೆಗಳು, ತಿಂಡಿ – ತಿನಿಸು, ಪಾಲೆ ಕಷಾಯ, ಆಟಿ ಕಳೆಂಜ, ಚೆನ್ನೆಮಣೆ ಮತ್ತಿತರ ಆಟಗಳ ಕುರಿತು ಸ್ವಾರಸ್ಯಕರ ಚರ್ಚೆ ಹಾಗೂ ಪ್ರಾತ್ಯಕ್ಷಿಕೆ ನಡೆಯಲಿದೆ. ಸಂವಾದದಲ್ಲಿ ಕನ್ನಡ ಹಾಗೂ ತುಳು ಎರಡೂ ಭಾಷೆಗಳನ್ನು ಬಳಸಲಾಗಿದೆ. ಮಾತುಕತೆಯಲ್ಲಿ ಜಾನಪದ ತಜ್ಞ ಹಾಗೂ ಲೇಖಕ ಡಾ.ಗಣನಾಥ ಶೆಟ್ಟಿ ಎಕ್ಕಾರ್, ಲೇಖಕಿಯರಾದ ವಿಜಯಲಕ್ಷ್ಮೀ ಕಟೀಲ್, ಅಕ್ಷತಾ ರಾಜ್ ಪೆರ್ಲ ಹಾಗೂ ಜನಪದ ಗಾಯಕಿ ಅಕ್ಷತಾ ಕುಡ್ಲ ಭಾಗವಹಿಸಿದ್ದಾರೆ. ಮಾಧ್ಯಮ ಸಂಯೋಜಕ ಮತ್ತು ಸಾಹಿತಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿಯವರು ಸಂವಾದವನ್ನು ನಡೆಸಿಕೊಡುವರು. ಜುಲೈ 22ರಂದು ಬೆಂಗಳೂರು ದೂರದರ್ಶನದ ಸ್ಟುಡಿಯೋದಲ್ಲಿ ಕಾರ್ಯಕ್ರಮದ ಚಿತ್ರೀಕರಣ ನಡೆದಿದೆ. ಹಿರಿಯ ಕಾರ್ಯಕ್ರಮ ನಿರ್ಮಾಪಕಿ ಎನ್.ಪಂಕಜ ಚಂದನ ವಾಹಿನಿಯ…
ಬೆಂಗಳೂರು : ವೀರಲೋಕ ಪ್ರತಿಷ್ಠಾನವು ಅತ್ಯಂತ ವಿನೂತನವಾದ ‘ಕಥಾ ಸಂಕ್ರಾಂತಿ -2024’ ಶೀರ್ಷಿಕೆಯಡಿ ಕಥಾ ಸ್ಪರ್ಧೆಯನ್ನು ಆಯೋಜಿಸುತ್ತಿದೆ. ಕನ್ನಡ ಕಥೆಗಾರರ ಪಾಲಿಗೆ ಇದೊಂದು ಅತ್ಯಪೂರ್ವ ಅವಕಾಶ. ಈ ಕಥಾ ಸ್ಪರ್ಧೆಯ ಸಂಪಾದಕತ್ವವನ್ನು ಹಿರಿಯ ಕಥೆಗಾರರಾದ ಶ್ರೀ ಕೇಶವ ಮಳಗಿ ಅವರು ವಹಿಸಿಕೊಂಡಿದ್ದಾರೆ. ಮೊದಲ ಬಹುಮಾನಕ್ಕೆ ಆಯ್ಕೆಯಾಗುವ ಕಥೆಗೆ ರೂ.55,000/-, ಎರಡನೆಯ ಬಹುಮಾನ ರೂ.30,000/-, ಮೂರನೆಯ ಬಹುಮಾನ ರೂ.20,000/- ಹಾಗೂ ತೀರ್ಪುಗಾರರ ಮೆಚ್ಚುಗೆ ಗಳಿಸುವ ಏಳು ಕಥೆಗಳಿಗೆ ತಲಾ 3 ಸಾವಿರ ರೂ. ಬಹುಮಾನ ನೀಡಲಾಗುವುದೆಂದು ವೀರಲೋಕ ಪ್ರತಿಷ್ಠಾನದ ಸಂಸ್ಥಾಪಕ ವೀರಕಪುತ್ರ ಶ್ರೀನಿವಾಸ್ ತಿಳಿಸಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸುವವರು 2023ರವರೆಗೆ ತಮ್ಮ ಯಾವುದೇ ‘ಕಥಾ ಸಂಕಲನ’ವನ್ನು ಪ್ರಕಟಿಸಿರಬಾರದು. ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದರೆ ಈವರೆಗೆ ನಿಮ್ಮ ಒಂದೂ ಕಥಾಸಂಕಲನ ಪ್ರಕಟವಾಗಿರಬಾರದು. ಬೇರೆ ಪ್ರಕಾರದ ಪುಸ್ತಕಗಳ ಪ್ರಕಟಣೆಗೆ ಈ ನಿಯಮ ಅನ್ವಯಿಸುವುದಿಲ್ಲ. ಕಥೆಗಳನ್ನು ಸೆಪ್ಟೆಂಬರ್ 5ರೊಳಗೆ ಕಳುಹಿಸಬೇಕು. ಕಥೆಗಳನ್ನು ಕಳುಹಿಸಬೇಕಾದ ಇ ಮೇಲ್ : [email protected] ಮಾಹಿತಿಗೆ ಮೊಬೈಲ್ : 70221 22121.
ಕೊಡಿಯಾಲಬೈಲ್ : ಅಕ್ಕಮಹಾದೇವಿ ವೀರಶೈವ ಮಹಿಳಾ ಸಂಘ ಮಂಗಳೂರು ಇದರ 10ನೇ ವಾರ್ಷಿಕೋತ್ಸವ ಹಾಗೂ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಮಹಿಳೆಯರಿಗೆ ಜಿಲ್ಲಾ ಮಟ್ಟದ ಸಾಮೂಹಿಕ ದೇಶಭಕ್ತಿ ಗೀತೆ ಸ್ಪರ್ಧೆಯನ್ನು ಆಗಸ್ಟ್ 13ರಂದು ಬೆಳಗ್ಗೆ 9ರಿಂದ ಕೊಡಿಯಾಲ್ ಬೈಲ್ನ ಶಾರದಾ ವಿದ್ಯಾಲಯದಲ್ಲಿ ಆಯೋಜಿಸಲಾಗಿದೆ. ಸಮಯಾವಕಾಶ 3ರಿಂದ 5 ನಿಮಿಷ. ಕನ್ನಡ ಗೀತೆಗಳನ್ನು ಹಾಡಬೇಕು ಹಾಗೂ ತಂಡದಲ್ಲಿ 5ರಿಂದ 6 ಮಂದಿಗೆ ಮಾತ್ರ ಅವಕಾಶವಿದೆ. 25 ವರ್ಷ ಮೇಲ್ಪಟ್ಟವರು ಮಾತ್ರ ಭಾಗವಹಿಸಬಹುದು. ಆಧಾರ್ ಪ್ರತಿ ಕಡ್ಡಾಯವಾಗಿದೆ. ಆಗಸ್ಟ್ 8ರ ಸಂಜೆ 6 ಗಂಟೆಯ ಒಳಗೆ ನೋಂದಣಿ ಮಾಡಬೇಕು. ಮೊದಲು ಬಂದ 20 ತಂಡಗಳಿಗೆ ಮಾತ್ರ ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ 8123578912 ಸಂಪರ್ಕಿಸಬಹುದು.
ಮಂಗಳಾದೇವಿ : ದಾಸ ಸಾಹಿತ್ಯ ಸೇವಾ ಪ್ರತಿಷ್ಠಾನವು ಶ್ರೀಶಾ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ, ರಾಮಕೃಷ್ಣ ಆಶ್ರಮದ ಸಹಯೋಗದೊಂದಿಗೆ ರಾಮಕೃಷ್ಣ ಆಶ್ರಮದ ಸಭಾಂಗಣದಲ್ಲಿ ದಿನಾಂಕ 29-07-2023ರಂದು ಖ್ಯಾತ ಗಾಯಕ ವಿನಾಯಕ ಹೆಗ್ಡೆ ಅವರಿಂದ ಹರಿದಾಸರ ಕೃತಿ ಕೀರ್ತನೆಗಳ ಗಾಯನ ಕಾರ್ಯಕ್ರಮ ನಡೆಯಿತು. ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಾಜಿ ಮಹಾರಾಜ್ ಉದ್ಘಾಟಿಸಿ ಮಾತನಾಡಿ, “ದಾಸಸಾಹಿತ್ಯ ಸೇವಾ ಪ್ರತಿಷ್ಠಾನವು ನಿಯಮಿತವಾಗಿ ತಿಂಗಳಿಗೊಂದರಂತೆ ನಾಡಿನ ಖ್ಯಾತ ಗಾಯಕರನ್ನು ಕರೆಸಿ ನಮ್ಮ ಆಶ್ರಮದ ಸಭಾಂಗಣದಲ್ಲಿ ಹರಿದಾಸರ ಕೃತಿಗಳ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ. ಮಠದ ಭಕ್ತರಿಗೂ, ನಮಗೂ ಕೀರ್ತನೆಗಳನ್ನು ಆಲಿಸುವ ಅವಕಾಶ ಸಿಗುತ್ತಿದೆ. ಮುಂದೆಯೂ ಈ ಬಗೆಯ, ಕಾರ್ಯಕ್ರಮಗಳು ಮುಂದುವರೆಯಲಿ” ಎಂದರು. ದಾಸಸಾಹಿತ್ಯ ಸೇವಾ ಪ್ರತಿಷ್ಠಾನ ಹಾಗೂ ಶ್ರೀಶಾ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಂ.ಎಸ್. ಗುರುರಾಜ್ ಸ್ವಾಗತಿಸಿ, ಪ್ರಸ್ತಾಪಿಸಿ, “ದಾಸ ಸಾಹಿತ್ಯವು ನಮ್ಮಲ್ಲಿ ಸನ್ನಡತೆ, ಸಚ್ಚಾರಿತ್ರ್ಯಗಳನ್ನು ಮೂಡಿಸುವ ಅಪೂರ್ವ, ಅತ್ಯಮೂಲ್ಯ ಸಾಹಿತ್ಯ. ಇದನ್ನು ಆಸಕ್ತರಿಗೆ ತಲುಪಿಸುವ ಸತ್ಕಾರ್ಯ ನಡೆಯುತ್ತಿದೆ.” ಎಂದರು. ಈ ಕಾರ್ಯಕ್ರಮದಲ್ಲಿ ವಿದ್ಯಾ ರಾವ್ ನಿರೂಪಿಸಿ,…
ಬೆಂಗಳೂರು : ವಿಮೂವ್ ಥಿಯೇಟರ್ ಅರ್ಪಿಸುವ ಅಭಿಶೇಕ್ ಅಯ್ಯಂಗಾರ್ ರಚಿಸಿ, ನಿರ್ದೇಶಿಸಿದ ‘ಬೈ2 ಕಾಫಿ’ ಕನ್ನಡ ನಾಟಕವು ದಿನಾಂಕ 03-08-2023 ರಂದು ಬೆಂಗಳೂರಿನ ರಂಗಶಂಕರದಲ್ಲಿ ಪ್ರದರ್ಶನಗೊಳ್ಳಲಿದೆ. ‘ಬೈ2 ಕಾಫಿ’ ನಾಟಕವು ಮಧ್ಯಮ ವರ್ಗದ ಕುಟುಂಬದಲ್ಲಿ ನೆಲೆಸಿರುವ ತಾಯಿ ಮತ್ತು ಮಗನ ನಡುವಿನ ಸಂಘರ್ಷದ ಭಾವನೆಗಳ ಬಗ್ಗೆ. ಒಬ್ಬ ಧರ್ಮನಿಷ್ಠ ತಾಯಿಯು ತನ್ನ ಮಗನ ಸಂತೋಷದ ಬಗ್ಗೆ ನಿರಂತರವಾಗಿ ಚಿಂತಿಸುತ್ತಾಳೆ ಮತ್ತು ಈಗ ಯುನೈಟೆಡ್ ಸ್ಟೇಟ್ಸ್ನಲ್ಲಿ ನೆಲೆಸಿರುವ ಮಗನ ತ್ವರಿತ ವಿವಾಹಕ್ಕಾಗಿ ಬಯಸುತ್ತಾಳೆ ಮಗ ಬೆಂಗಳೂರು ನಗರಕ್ಕೆ ವಾರ್ಷಿಕ ವಾಡಿಕೆಯಂತೆ ಭೇಟಿ ನೀಡುತ್ತಿದ್ದಾನೆ ಮತ್ತು ತನ್ನ ತಾಯಿಯ ಧಾರ್ಮಿಕ ತತ್ವಗಳಿಗೆ ಎಳೆಯಲ್ಪಡುತ್ತಾನೆ. ಅವರಿಬ್ಬರೂ ಪೂಜೆಗಾಗಿ ದೇವಸ್ಥಾನಕ್ಕೆ ರಾತ್ರಿ ಹೊರಡುತ್ತಾರೆ. ಆಗ ಅವರ ಕಾರು ನಡುರಸ್ತೆಯಲ್ಲಿ ಕೆಟ್ಟು ನಿಲ್ಲುತ್ತದೆ. ಬೆರೇನು ಮಾಡಲು ಸಾಧ್ಯವಾಗದೆ ಅವರಿಬ್ಬರೂ ಸ್ಥಳೀಯ ಹೋಟೆಲ್ನಲ್ಲಿ ಬೈ 2 ಕಾಫಿಗಾಗಿ ಕೂರುತ್ತಾರೆ. ಮಗ, ತಾಯಿ, ಬೈ2 ಕಾಫಿ, ಹೋಟಲ್ ನ ಬೆಂಚು, ಅರ್ಧರಾತ್ರೆ, ಇವುಗಳ ಮಧ್ಯೆ ಅವರಿಬ್ಬರ ಸಂಬಂಧಗಳು, ನಂಬಿಕೆಗಳು, ಪದ್ಧತಿಗಳು ಮತ್ತು…
ಕಾಸರಗೋಡು : ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಕಾಸರಗೋಡಿನ ಕಛೇರಿಯಲ್ಲಿ ಸುಗಮ-ಭಕ್ತಿ-ಭಾವ-ಜನಪದ ಗೀತೆಗಳ ರಾಗ ಸಂಯೋಜನೆ, ಪ್ರಚಾರ, ಕವಿಗಳ ಮತ್ತು ಗಾಯಕರ ಪ್ರೋತ್ಸಾಹಕ್ಕಾಗಿ ಪ್ರತ್ಯೇಕ ಘಟಕ ರೂಪೀಕರಿಸುವುದರ ಪೂರ್ವಭಾವಿ ಸಭೆಯು ದಿನಾಂಕ 27-07-2023ರಂದು ನಡೆಯಿತು. ಈ ಸಭೆಯನ್ನು ಉದ್ಘಾಟಿಸಿದ ಹಿರಿಯ ಸಾಹಿತಿ, ಕವಿ ಶ್ರೀಕೃಷ್ಣಯ್ಯ ಅನಂತಪುರ ಅವರು ಮಾತನಾಡುತ್ತಾ “ಕಾಸರಗೋಡಿನಲ್ಲಿ ಸಮರ್ಥ ಕವಿಗಳು ಅನೇಕರಿದ್ದರೂ ಅಖಿಲ ಕರ್ನಾಟಕ ಮಟ್ಟದಲ್ಲಿ ಅವರನ್ನು ಗುರುತಿಸುವ, ಅವರ ಕೃತಿಗಳನ್ನು ಜನರಿಗೆ ತಲುಪಿಸುವ ಕೆಲಸ ಆಗುತ್ತಿಲ್ಲ. ಕಾಸರಗೋಡಿನ ಕನ್ನಡಿಗರ ಸಾಹಿತ್ಯವನ್ನು ಅನಾವರಣಗೊಳಿಸುವುದರ ಜತೆಗೆ ರಾಗ ಸಂಯೋಜಿಸಿ ಹಾಡಲು ಇದೇ ಮೊದಲ ಬಾರಿಗೆ ಸಮಿತಿಯ ರೂಪೀಕರಣ ಆಗುತ್ತಿರುವುದು ನಿಜಕ್ಕೂ ಶ್ಲಾಘನೀಯ” ಎಂಬುದಾಗಿ ಅವರು ಸಂತಸವನ್ನು ವ್ಯಕ್ತ ಪಡಿಸಿದರು. ರಂಗ ಚಿನ್ನಾರಿಯ ನಿರ್ದೇಶಕ, ಸಿನಿಮಾ ನಟ, ರಂಗ ನಿರ್ದೇಶಕ ಕಾಸರಗೋಡು ಚಿನ್ನಾ ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ “ಗಾಯಕರಿಗೆ ಮತ್ತು ಹಿನ್ನೆಲೆ ಸಂಗೀತಕ್ಕೆ ಪ್ರಾಮುಖ್ಯತೆ ಕೊಡುವ ಮೂಲಕ ಕಾಸರಗೋಡಿನಲ್ಲಿ ಪ್ರತಿಭಾವಂತರನ್ನು ಗುರುತಿಸಿ ವೇದಿಕೆ ಒದಗಿಸುವುದೇ ಈ ನೂತನ ಘಟಕದ ಉದ್ದೇಶ”…
ಬೆಂಗಳೂರು : ಬೆಂಗಳೂರಿನ ‘ರಚನಾ ಡಾನ್ಸ್ ಅಕಾಡೆಮಿ’ ತನ್ನದೇ ಆದ ವೈಶಿಷ್ಟ್ಯಗಳಿಂದ ನೃತ್ಯಕ್ಷೇತ್ರದಲ್ಲಿ ಗಮನಾರ್ಹ ಸ್ಥಾನ ಪಡೆದಿದೆ. ಈ ನೃತ್ಯ ಸಂಸ್ಥೆಯನ್ನು ಸ್ಥಾಪಿಸಿದ ವಿದುಷಿ ಕಾವ್ಯ ದಿಲೀಪ್ ಸ್ವತಃ ಉತ್ತಮ ನೃತ್ಯಕಲಾವಿದೆ ಹಾಗೂ ನಿಷ್ಠೆಯಿಂದ ತಾನು ಕಲಿತ ವಿದ್ಯೆಯನ್ನು ನೃತ್ಯಾಕಾಂಕ್ಷಿಗಳಿಗೆ ಸಂಪೂರ್ಣವಾಗಿ ಧಾರೆ ಎರೆಯುವ ಬದ್ಧತೆಯುಳ್ಳ ನೃತ್ಯ ಗುರು. ಈಕೆಯ ಕಲಾತ್ಮಕ ನೃತ್ಯ ತರಬೇತಿಯಲ್ಲಿ ರೂಪುಗೊಂಡ ಕಲಾಶಿಲ್ಪ ದೀಕ್ಷಾ ಶಂಕರ್ ಇವರು ಶ್ರೀಮತಿ ಬಿ.ಹೆಚ್.ಸುಮನಾ ಮತ್ತು ಹೆಚ್.ಸಿ.ರವಿಶಂಕರ್ ಅವರ ಪುತ್ರಿಯಾಗಿದ್ದಾರೆ. ಕಳೆದ 12 ವರ್ಷಗಳಿಂದ ನೃತ್ಯ ಶಿಕ್ಷಣವನ್ನು ಆಸಕ್ತಿಯಿಂದ ಪಡೆಯುತ್ತಿದ್ದಾಳೆ. ದಿನಾಂಕ 06-08-2023ರ ಭಾನುವಾರದಂದು ಸಂಜೆ 5 ಗಂಟೆಗೆ ಬಸವೇಶ್ವರನಗರದ ಕೆ.ಇ.ಎ. ಪ್ರಭಾತ್ ರಂಗಮಂದಿರದಲ್ಲಿ ದೀಕ್ಷಾ ಶಂಕರ್ ವಿದ್ಯುಕ್ತವಾಗಿ ರಂಗಪ್ರವೇಶ ಮಾಡಲಿದ್ದಾಳೆ. ಕಲಾವಿದೆಯ ಈ ನೃತ್ಯ ಕಾರ್ಯಕ್ರಮಕ್ಕೆ ಎಲ್ಲರಿಗೂ ಆತ್ಮೀಯ ಸ್ವಾಗತ. ದೀಕ್ಷಾಳಿಗೆ 7ನೆಯ ವಯಸ್ಸಿನ ಎಳವೆಯಲ್ಲಿಯೇ ನೃತ್ಯಾಸಕ್ತಿ ಮೂಡಿದ್ದು, ಅದಕ್ಕೆ ಪ್ರೋತ್ಸಾಹದ ನೀರೆರೆದವರು ತಾಯಿ ಸುಮನಾ. ಮೊದಲಗುರು ಅರ್ಚನಾ ಪುಣ್ಯೇಶ್. ಅನಂತರ ವಿದುಷಿ ಕಾವ್ಯಾ ದಿಲೀಪ್ ಅವರಲ್ಲಿ ಮಾರ್ಗದರ್ಶನ ಪಡೆದ…