Author: roovari

ಮೈಸೂರು : ಮಂಡ್ಯ ರಮೇಶ್ ನೇತೃತ್ವದ ನಟನ ರಂಗಶಾಲೆಯು ಕಳೆದ ಅನೇಕ ವರ್ಷಗಳಿಂದ ರಂಗಭೂಮಿಯಲ್ಲಿ ನಿರಂತರ ಕ್ರಿಯಾಶೀಲವಾಗಿದ್ದು ರಂಗಭೂಮಿಯ ಅಧ್ಯಯನ, ಪ್ರಾತ್ಯಕ್ಷಿಕೆ, ಪ್ರಯೋಗ, ಪ್ರದರ್ಶನಗಳ ಮೂಲಕ ಶ್ರೇಷ್ಠತೆಯನ್ನು ಸಾಧಿಸುವುದರತ್ತ ಸತತವಾಗಿ ಪ್ರಯತ್ನ ಶೀಲವಾಗಿದೆ. ತನ್ನ ಚಟುವಟಿಕೆಯ ಭಾಗವಾಗಿ ಕನ್ನಡ ಆಧುನಿಕ ರಂಗಭೂಮಿಗೆ ವಿಶೇಷ ಕೊಡುಗೆ ನೀಡಿದ ರಂಗ ಸಂಘಟಕ, ಚಿಂತಕ ಕೆ.ವಿ. ಸುಬ್ಬಣ್ಣ ಅವರ ಸ್ಮರಣಾರ್ಥ ‘ಸುಬ್ಬಣ್ಣ ಸ್ಮರಣೆ’ ಕಾರ್ಯಕ್ರಮವನ್ನು ಪ್ರತಿವರ್ಷ ಜುಲೈ ತಿಂಗಳಲ್ಲಿ ನಡೆಸುತ್ತಾ ಬಂದಿದ್ದು, 20232ನೇ ಸಾಲಿನ ನಟನದ ಜುಲೈ ತಿಂಗಳ ಎಲ್ಲಾ ಕಾರ್ಯಕ್ರಮಗಳನ್ನು ಸುಬ್ಬಣ್ಣರ ಸ್ಮರಣೆಗೆ ಅರ್ಪಿಸಿದೆ. ಜುಲೈ 01ರಿಂದ ಆರಂಭವಾಗಿ ಪ್ರತಿ ವಾರಾಂತ್ಯಗಳಲ್ಲಿ ವಿವಿಧ ನಾಟಕಗಳ ಪ್ರದರ್ಶನ, ರಂಗ ಕಾರ್ಯಾಗಾರ ನಡೆದಿದ್ದು, 2023ರ ಸುಬ್ಬಣ್ಣ ಸ್ಮರಣೆಯ ಕಡೆಯ ಕಾರ್ಯಕ್ರಮವಾಗಿ ಜುಲೈ 30ರಂದು ಬೆಳಗ್ಗೆ 10ಕ್ಕೆ ಸರಿಯಾಗಿ ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ನಟನ ರಂಗಶಾಲೆಯಲ್ಲಿ ‘ರಂಗಶಿಕ್ಷಣ; ವರ್ತಮಾನ ಮತ್ತು ಭವಿಷ್ಯದ ಅವಕಾಶಗಳು’ ಎಂಬ ವಿಷಯದ ಕುರಿತು ರಂಗಚರ್ಚೆಯನ್ನು ಆಯೋಜನೆ ಮಾಡಲಾಗಿದೆ. ಈ ರಂಗಚರ್ಚೆಯಲ್ಲಿ ಹಿರಿಯ ರಂಗಕರ್ಮಿ, ನಿವೃತ್ತ…

Read More

ಬೆಂಗಳೂರು : ಶಾಸ್ತ್ರೀಯ ನೃತ್ಯ ಕ್ಷೇತ್ರ ಬಹಳ ವಿಸ್ತಾರವಾಗಿ ಬೆಳೆಯುತ್ತಿದೆ. ಸಹಜವಾಗಿಯೇ ರಂಗಪ್ರವೇಶಗಳೂ ಮೇಲಿಂದ ಮೇಲೆ ಆಗುತ್ತಿರುತ್ತವೆ. ಆದರೆ ಎಲ್ಲೋ ಒಂದು ಕಡೆ ಈ ರಂಗಪ್ರವೇಶಗಳು ಏಕತಾನತೆಯಿಂದ ಕೂಡಿರುತ್ತವೆ ಎಂಬ ಅಸಮಾಧಾನ ಕೂಡ ಕೇಳಿಬರುತ್ತಿರುತ್ತದೆ. ಹಾಗೆಂದು ತೀರಾ ನಿರಾಸೆಗೊಳ್ಳುವ ಅವಶ್ಯಕತೆ ಖಂಡಿತ ಇಲ್ಲ. ಆಗಾಗೊಮ್ಮೊಮ್ಮೆ ವಿಶೇಷ ವಿನ್ಯಾಸದ ರಂಗಪ್ರವೇಶಗಳೂ ವೇದಿಕೆಗೆ ಬರುತ್ತಾ ಭರವಸೆಯನ್ನು ಮೂಡಿಸುತ್ತವೆ. ಅಂತಹ ಒಂದು ರಂಗಪ್ರವೇಶ ಈಚೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಿತು. ಮೈಸೂರಿನ ಶ್ರೀ ದುರ್ಗಾ ನೃತ್ಯ ಅಕಾಡೆಮಿಯ ಕಲಾನಿರ್ದೇಶಕಿ, ಗುರು ಶ್ರೀಮತಿ ಶ್ರೀವಿದ್ಯಾ ಶಶಿಧರ್, ತಮ್ಮ ಪ್ರತಿಭಾವಂತ ಶಿಷ್ಯೆ ಶ್ರೀಮತಿ ಪ್ರಣತಿ ಎಸ್. ವಾಟಾಳ್ ಅವರ ರಂಗಪ್ರವೇಶ ಕಾರ್ಯಕ್ರಮವು ದಿನಾಂಕ 23-07-2023ರಂದು ನಡೆಯಿತು. ಗುರುವಾಗಿ ಶ್ರೀವಿದ್ಯಾ ಅವರಿಗೂ ಇದು ರಂಗಪ್ರವೇಶವೇ. ಏಕೆಂದರೆ ಅವರ ಮಾರ್ಗದರ್ಶನದ ಮೊದಲ ರಂಗಪ್ರವೇಶ ಇದು. ಆದರೆ ಪ್ರದರ್ಶನದ ಒಟ್ಟಂದವನ್ನು ಕಂಡಾಗ, ಪಾಂಡಿತ್ಯಪೂರ್ಣ ಗುರುಗಳ ಮಾರ್ಗದರ್ಶನದಲ್ಲಿ ಅನುಭವೀ ನರ್ತಕಿಯೊಬ್ಬಳ ಪ್ರದರ್ಶನದಂತಿತ್ತು ಅಂದಿನ ಕಾರ್ಯಕ್ರಮ. ಮೂರು ಹೊಸಬಗೆಯ ವಿಭಿನ್ನ ಕೃತಿಗಳನ್ನು ಹೊರತುಪಡಿಸಿದರೆ, ಮಿಕ್ಕೆಲ್ಲ ಬಂಧಗಳೂ…

Read More

ಪುತ್ತೂರು: ಭರತನಾಟ್ಯ ಕಲಾವಿದೆಯಾಗಿರುವ ಲೇಖಕಿ ನರಿಮೊಗರು ಗ್ರಾಮದ ಶ್ರೀಮತಿ ಅಪರ್ಣಾ ಕೊಡೆಂಕಿರಿ ಅವರು ತುಳು ಲಿಪಿಯಲ್ಲಿ ಬರೆದ ಪ್ರಪ್ರಥಮ ಭಗವದ್ಗೀತೆ ಪುಸ್ತಕವನ್ನು ದಿನಾಂಕ 10-07-2023ರಂದು ಶ್ರೀ ಕ್ಷೇತ್ರ ಸುಬ್ರಹ್ಮಣ್ಯದಲ್ಲಿ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಬಿಡುಗಡೆಗೊಳಿಸಿದರು. ಮೂಲತಃ ನೃತ್ಯ ವಿದುಷಿ ಆಗಿರುವ ಶ್ರೀಮತಿ ಅಪರ್ಣಾ ಕೊಡೆಂಕಿರಿ ಇವರು ತುಳು ಭಾಷೆಯ ಮೇಲಿನ ಪ್ರೀತಿ, ಅಕ್ಕರೆಯನ್ನು ಭಗವದ್ಗೀತೆ ಅನುವಾದದ ಮೂಲಕ ತುಳುನಾಡಿನ ಜನತೆಗೆ ಸಮರ್ಪಿಸಿದ್ದಾರೆ. ಇದರಲ್ಲಿ ತುಳು ಲಿಪಿಯ ವರ್ಣಮಾಲೆಯ ಸಹಿತ ಸಂಪೂರ್ಣ ಭಗವದ್ಗೀತೆಯನ್ನು ತುಳು ಹಾಗೂ ಕನ್ನಡದಲ್ಲಿ ಅಕ್ಕಪಕ್ಕದ ಪುಟಗಳಲ್ಲಿ ಸುಲಭವಾಗಿ ಹೊಂದಿಸಿ ನೋಡುವಂತೆ ನೀಡಲಾಗಿದೆ. ಎಡಪುಟದಲ್ಲಿ ತುಳುವಿನಲ್ಲೇ ಅರ್ಥ ಸಹಿತ ಶ್ಲೋಕ, ಬಲಪುಟದಲ್ಲಿ ಕನ್ನಡದಲ್ಲಿ ಶ್ಲೋಕ ಹಾಗೂ ಕನ್ನಡ ಲಿಪಿಯಲ್ಲಿ ಬರೆದ ತುಳು ಭಾಷಾರ್ಥ ನೀಡಲಾಗಿದೆ. ತುಳು ಲಿಪಿ ಕಲಿಯುವವರಿಗೆ ಭಗವದ್ಗೀತೆಯಿಂದಲೇ ಪ್ರಾರಂಭಿಸುವ ಅವಕಾಶ, ಲಿಪಿ ಬಲ್ಲವರಿಗೆ ತುಳುವಿನಲ್ಲೇ ಓದುವ ಅವಕಾಶವನ್ನು ಅಪರ್ಣಾ ಮಾಡಿಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಹಾಗೂ ವೇದವ್ಯಾಸ ಸಂಶೋಧನಾ ಕೇಂದ್ರದ ನಿರ್ದೇಶಕ ಆನಂದತೀರ್ಥ ಸಗ್ರಿ…

Read More

ಮೂಲ್ಕಿ : ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ವ್ಯಾಸಮಹರ್ಷಿ ವೇದಪಾಠ ಶಾಲೆಯಲ್ಲಿ ಮಧ್ವ ಸಿದ್ಧಾಂತ ತಂತ್ರಸಾರದ ತಾಳೆಗರಿಯ ಮೂಲ ಪಠ್ಯವನ್ನು ವಿಶೇಷ ತಂತ್ರಜ್ಞಾನದ ಮೂಲಕ ಪುಸ್ತಕದಲ್ಲಿ ಪ್ರಕಟಿಸುವ ಮೂಲಕ ಮಾಧ್ವ ತಂತ್ರಸಾರದಿಂದ ಅರ್ಚಿತ ದೇವಾಲಯಗಳಿಗೆ ನೀಡುವ ಧ್ಯೇಯದಿಂದ ‘ಮೆಮೆರಾಂಡಮ್ ಆಫ್ ಅಂಡರ್ ಸ್ಟ್ಯಾಂಡಿಂಗ್’ ಕಾರ್ಯಕ್ರಮ ದಿನಾಂಕ 24-07-2023ರಂದು ನಡೆಯಿತು. ಅಮೆರಿಕಾದಲ್ಲಿ ವಿಜ್ಞಾನಿಯಾಗಿದ್ದು, ಪ್ರಸ್ತುತ ಬೆಂಗಳೂರಿನ ತಾರಾ ಪ್ರಕಾಶನ ಮುಖ್ಯಸ್ಥ ಪ್ರೊ.ಮುಕುಂದ್ ಅವರು ಈ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಾ “ಸನಾತನ ಭಾರತೀಯ ಜ್ಞಾನ ಭಂಡಾರಗಳು ತಾಳೆಗರಿಯಲ್ಲಿ ಅಡಕವಾಗಿದ್ದು, ಅವುಗಳನ್ನು ಅಧ್ಯಯನಕಾರರು ಮತ್ತು ಯುವ ಪೀಳಿಗೆಗೆ ನಿಸ್ವಾರ್ಥವಾಗಿ ಮುಟ್ಟಿಸುವ ಕಾರ್ಯ ಅಗತ್ಯವಿದೆ. ತಾಳೆಗರಿಯಲ್ಲಿ ಬರವಣಿಗೆಯು ಕೊರೆದು ಮಾಡಲ್ಪಟ್ಟಿದ್ದು, ಸುಮಾರು ಸಾವಿರ ವರ್ಷ ಪುರಾತನವಾದ ತಾಳೆಗರಿಗಳು ಶಿಥಿಲವಾಗಿ, ಪುಡಿಯಾಗುವ ಕಾರಣ ವಿಶೇಷ ಕಾಂತೀಯ ತಂತ್ರಜ್ಞಾನದ ಮೂಲಕ ವಿವಿಧ ಆಯಾಮಗಳಲ್ಲಿ ಅವುಗಳ ಪಡಿಯಚ್ಚು ಪಡೆದು ವಿದ್ವಾಂಸರಿಂದ ಅಧ್ಯಯನ ನಡೆಸಿದ ಬಳಿಕ ಮುದ್ರಿಸಲಾಗುತ್ತದೆ. ಭಾರತೀಯ ತಾಳೆಗರಿಗಳು ಕೇವಲ ಶಾಸ್ತ್ರಕ್ಕೆ ಸೀಮಿತವಾಗದೆ ವಿಜ್ಞಾನ ತಂತ್ರಜ್ಞಾನ ಹಾಗೂ ವೈದ್ಯಕೀಯ ಅಗಾಧ…

Read More

ಬೆಂಗಳೂರು : ಜತಿನ್ ಅಕಾಡಮಿ ಆಫ್ ಡ್ಯಾನ್ಸ್ (ರಿ.) ಪ್ರಸ್ತುತ ಪಡಿಸುವ ವಿದುಷಿ ಶ್ರೀಮತಿ ಅರ್ಚನಾ ಪುಣ್ಯೇಷ್ ಇವರ ಶಿಷ್ಯೆಯಾದ  ಕುಮಾರಿ ಪ್ರಜ್ಞಾ.ಪಿ.ಶರ್ಮ ಇವರ ಭರತನಾಟ್ಯ ರಂಗಪ್ರವೇಶವು ದಿನಾಂಕ 29-07-2023ರ ಸಂಜೆ 5.30ಕ್ಕೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ತೆಲುಗು ವಿಜ್ಞಾನ ಸಮಿತಿಯ ಶ್ರೀ ಕೃಷ್ಣದೇವರಾಯ ಕಲಾ ಮಂದಿರದಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಗೌರವ ಅತಿಥಿಯಾಗಿ ಚಾವ್ಯ ನೃತ್ಯ ನಿಕೇತನದ ನಿರ್ದೇಶಕಿಯಾದ ರಾಜ್ಯೋತ್ಸವ ಹಾಗೂ ಶಾಂತಲಾ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಕಲಾಶ್ರೀ ಶ್ರೀಮತಿ ಸುನಂದ ದೇವಿ ಹಾಗೂ ಮುಖ್ಯ ಅತಿಥಿಗಳಾಗಿ ಅಂಧ ನೃತ್ಯ ಕಲಾವಿದರ ಮಾರ್ಗದರ್ಶಕಿ, ನೃತ್ಯ ಶಿಕ್ಷಕಿ ಮತ್ತು ಸಂಯೋಜಕಿ, ಭರತನಾಟ್ಯ ಮತ್ತು ಕಥಕ್ ಕಲಾವಿದೆಯಾದ ಕರ್ನಾಟಕ ಕಲಾಶ್ರೀ ಡಾ. ಸುಪರ್ಣಾ ವೆಂಕಟೇಶ್, ಕಲಾಯೋಗಿ ಪ್ರತಿಷ್ಠಾನದ ಅಧ್ಯಕ್ಷರು ಮತ್ತು ಕಲಾವಿದರ ಸಂಘದ ಯುವ ಬರಹಗಾರ ಹಾಗೂ ಕಲಾ ವಿಮರ್ಶಕ ಶ್ರೀ.ಎಸ್.ನಂಜುಂಡ ರಾವ್, ಬೆಂಗಳೂರಿನ ಐ.ಸಿ.ಸಿ.ಆರ್. ದಕ್ಷಿಣ ವಲಯ ಕಚೇರಿಯ ವಲಯ ನಿರ್ದೇಶಕರರಾದ ಶ್ರೀ.ಕೆ.ಅಯ್ಯನಾರ್, ಕಲಬುರ್ಗಿಯ ಎಸ್‌.ಎಂ.ಎನ್‌.ಕೆ.ಎಸ್.ಇದರ ಭರತನಾಟ್ಯ ಕಲಾವಿದರಾದ ವಿದ್ವಾನ್ ಶ್ರೀ.ಮಂಜುನಾಥ್ ಎನ್…

Read More

ಮಂಗಳೂರು: ಸನಾತನ ನಾಟ್ಯಾಲಯ ಮಂಗಳೂರು ಆಯೋಜಿಸುವ 2022ನೇ ಸಾಲಿನ ಭರತನಾಟ್ಯದ ವಿದ್ವತ್ ಅಂತಿಮ ಪರೀಕ್ಷೆಯನ್ನು ಪೂರೈಸಿದ ಸನಾತನ ನಾಟ್ಯಾಲಯದ ವಿದ್ಯಾರ್ಥಿಗಳನ್ನು ಅಭಿನಂದಿಸುವ ಕಾರ್ಯಕ್ರಮ ‘ಸನಾತನ ನೃತ್ಯ ಪ್ರೇರಣಾ’ ದಿನಾಂಕ 29-07-2023ರ ಶನಿವಾರ ಸಂಜೆ 5.30ಕ್ಕೆ ಮಂಗಳೂರು ಕುದ್ಮುಲ್ ರಂಗರಾವ್‌ ಪುರಭವನದಲ್ಲಿ ನಡೆಯಲಿದೆ. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಅಧ್ಯಕ್ಷರಾದ ಪಟ್ಲ ಶ್ರೀ ಸತೀಶ್ ಶೆಟ್ಟಿಯವರು ಅಧ್ಯಕ್ಷತೆ ವಹಿಸಲಿರುವ ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಂಗಳೂರು ಭಾರತೀಯ ಜೀವ ವಿಮಾ ನಿಗಮದ ನಿವೃತ್ತ ಹಿರಿಯ ಶಾಖಾಧಿಕಾರಿಯಾದ ಶ್ರೀ ಎಲ್.ದಿವಾಕರ್ ಹಾಗೂ ಉಡುಪಿ ಮಣಿಪಾಲದ ಹೆಜ್ಜೆ ಗೆಜ್ಜೆಯ ನೃತ್ಯ ಗುರುಗಳಾದ ವಿದುಷಿ ಯಶ ರಾಮಕೃಷ್ಣ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ವಿದ್ವತ್ ಅಂತಿಮ ಪರೀಕ್ಷೆಯನ್ನು ಪೂರೈಸಿದ ವಿದುಷಿ ಅಮೃತಾ.ವಿ, ಅನನ್ಯಾ ಕುಂಡಂತ್ತಾಯ, ಅಪೂರ್ವ ಅಲೆವೂರಾಯ, ನಾಗರಶ್ಮಿ, ತುಳಸಿ, ಸಾಹಿತ್ಯ ಸುರೇಶ್, ರೀನಾ ಕಿಶೋರ್ ಹಾಗೂ ರಿಯಾ ಕಿಶೋರ್ ಇವರನ್ನು ಅಭಿನಂದಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಸನಾತನ ನಾಟ್ಯಾಲಯದ ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.

Read More

ಮೂಡುಬಿದಿರೆ : ಶ್ರೀ ಯಕ್ಷದೇಗುಲ ಕಾಂತಾವರ (ರಿ.)ದ ಇಪ್ಪತ್ತೊಂದನೇ ವಾರ್ಷಿಕ ‘ಯಕ್ಷೋಲ್ಲಾಸ 2023’ ಕಾರ್ಯಕ್ರಮವು ಶ್ರೀ ಕ್ಷೇತ್ರ ಕಾಂತಾವರದಲ್ಲಿ ದಿನಾಂಕ 23-07-2023ರಂದು ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಂತಾವರ ಧರ್ಮದರ್ಶಿ ಡಾ. ಜೀವಂಧರ ಬಲ್ಲಾಳ್ ಮಾತನಾಡುತ್ತಾ “ಕಷ್ಟ ಕಾಲದಲ್ಲಿ ಜೀವನಕ್ಕಾಗಿ ಯಕ್ಷಗಾನವನ್ನು ನಂಬಿ ಬದುಕು ಸಾಗಿದ ಅದೆಷ್ಟೋ ಕಲಾವಿದರು ಈಗಿಲ್ಲ. ಆದರೂ ಅವರು ಉಳಿಸಿದ ಈ ಯಕ್ಷಗಾನ ಇಂದಿಗೂ ಶ್ರೀಮಂತವಾಗಿದೆ. ಪುತ್ತೂರು ಶ್ರೀಧರ ಭಂಡಾರಿ ತಂಬಾ ಕಷ್ಟದಿಂದ ನಮ್ಮೂರಿನ ಸ್ವಂತ ಮೇಳ ಮಾಡಿಕೊಂಡು ನಷ್ಟ ಹೊಂದಿದಾಗ ಮತ್ತೆ ಮಾತೃ ಸಂಸ್ಥೆ ಧರ್ಮಸ್ಥಳ ಮೇಳಕ್ಕೆ ಹೋಗು. ಅಲ್ಲಿ ನಿನ್ನ ಸ್ಥಾನ ಇನ್ನೂ ಖಾಲಿ ಇದೆ ಎಂದು ಹೇಳಿ ಕಳುಹಿಸಿದವನೇ ನಾನು. ಶ್ರೀಧರ ಭಂಡಾರಿಯಿಂದಾಗಿ ನಮ್ಮ ಕ್ಷೇತ್ರಕ್ಕೂ ತುಂಬಾ ಹೆಸರು ಬರುವಂತಾಯಿತು.” ಎಂದು ಹೇಳಿದರು. ವರ್ಕಾಡಿ ತಾರಾನಾಥ ಬಲ್ಯಾಯರಿಗೆ ‘ಪುತ್ತೂರು ಶ್ರೀ ಶ್ರೀಧರ ಭಂಡಾರಿ ಸಂಸ್ಕರಣಾ ಪ್ರಶಸ್ತಿ’ ಹಾಗೂ ವೇಣೂರು ಶ್ರೀ ಸದಾಶಿವ ಕುಲಾಲ್ ಅವರಿಗೆ ‘ಬಾಯಾರು ಪ್ರಕಾಶ್ಚಂದ್ರ ರಾವ್ ಸಂಸ್ಕರಣಾ ಪ್ರಶಸ್ತಿ’…

Read More

76ನೆಯ ಸ್ವಾತಂತ್ರೋತ್ಸವದ ಪ್ರಯುಕ್ತ ಸಾಹಿತ್ಯ ಗಂಗಾ ಧಾರವಾಡ ಮತ್ತು ಗೋಲ್ಡನ್ ಗ್ಲೋಬ್ ಟ್ರಸ್ಟ್ ದೆಹಲಿ ಇವರ ಸಹಯೋಗದಲ್ಲಿ ರಾಜ್ಯಮಟ್ಟದ ಗೀತಗಾಯನ ಸ್ಪರ್ಧೆ ಏರ್ಪಡಿಸಲಾಗಿದೆ. ಮೊದಲ ಬಹುಮಾನ ರೂ.3000/-, ಎರಡನೆಯ ಬಹುಮಾನ ರೂ.2000/-, ಮೂರನೆಯ ಬಹುಮಾನ ರೂ.1000/- ಮತ್ತು ಎರಡು ಮೆಚ್ಚುಗೆ ಬಹುಮಾನ ರೂ.500/- ನಗದು ಮತ್ತು ಡಿಜಿಟಲ್ ಪ್ರಶಸ್ತಿ ಪತ್ರ ನೀಡಲಾಗುವುದು. ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಡಿಜಿಟಲ್ ಪ್ರಮಾಣ ಪತ್ರ ನೀಡಲಾಗುವುದು, ಸ್ಪರ್ಧೆಯ ನಿಯಮಗಳು – * 18-45 ವರ್ಷದೊಳಗಿನ ಉದಯೋನ್ಮುಖ ಗಾಯಕ ಮತ್ತು ಗಾಯಕಿಯರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. * ಭಾವಗೀತೆ, ದೇಶಭಕ್ತಿಗೀತೆ ಮತ್ತು ಶಾಸ್ತ್ರೀಯ ಸಂಗೀತಕ್ಕೆ ಸಂಬಂಧಿಸಿದ ಗೀತೆಗಳನ್ನು ಮಾತ್ರ ಸ್ಪರ್ಧೆಗೆ ಸ್ವೀಕರಿಸಲಾಗುವುದು. * ಗಾಯಕ ಮತ್ತು ಗಾಯಕಿಯರು ತಾವು ಹಾಡಿದ ಒಂದು ಹಾಡನ್ನು ವಿಡಿಯೋ ಮಾಡಿ ಕಳುಹಿಸಬೇಕು. * ಗಾಯಕ ಮತ್ತು ಗಾಯಕಿಯರು ತಮ್ಮ ಪರಿಚಯ, ಒಂದು ಫೋಟೋ, ವಯೋಮಿತಿ ತಿಳಿಸುವ ಒಂದು ದಾಖಲೆ ಮತ್ತು ಗೀತ ರಚನಾಕಾರರ ಪರಿಚಯವನ್ನು ಪ್ರತ್ಯೇಕವಾಗಿ ಕಳುಹಿಸಬೇಕು. * ಹಾಡು ಕಳುಹಿಸಲು…

Read More

ನವದೆಹಲಿ : ಸಂತ ಫಿಲೋಮಿನಾ ಕಾಲೇಜಿನ ಭೌತಶಾಸ್ತ್ರ ವಿಭಾಗದ ಪ್ರಥಮ ಎಂ.ಎಸ್ಸಿ ತರಗತಿಯಲ್ಲಿ ಅಧ್ಯಯನ ನಡೆಸುತ್ತಿರುವ ಶ್ರೇಯ ಕೆ.ಎಚ್.ಗೆ ನವದೆಹಲಿಯ ‘ನವಶ್ರೀ ಕಲೆ ಮತ್ತು ಸಂಸ್ಕೃತಿ ಸಂಸ್ಥೆ’ ನಡೆಸಿದ ರಾಷ್ಟ್ರೀಯ ಮಟ್ಟದ ಕರಕುಶಲ ಸ್ಪರ್ಧೆ ‘ಶಿಲ್ಪ್ ಆಕಾರ್’ನಲ್ಲಿ ಪ್ರಥಮ ಸ್ಥಾನ ದೊರೆತಿದೆ. ಇವರು ಕೆ.ಹರಿಶ್ಚಂದ್ರ ಆಚಾರ್ಯ ಕೋಡಂಬು ಹಾಗೂ ಶುಭ ದಂಪತಿಗಳ ಸುಪುತ್ರಿಯಾಗಿರುತ್ತಾರೆ. ‘ಶಿಲ್ಪ್ ಆಕಾರ್’ ಕಲೆ ಮತ್ತು ಕರಕುಶಲಕ್ಕೆ ಸಂಬಂಧಿಸಿದ ರಾಷ್ಟ್ರಮಟ್ಟದ ಸ್ಪರ್ಧೆಯಾಗಿದೆ. ಇದರಲ್ಲಿ ಭಾಗವಹಿಸುವವರು ತಮ್ಮ ಸೃಜನಶೀಲತೆ ಮತ್ತು ಕಲಾತ್ಮಕ ಕೌಶಲ್ಯಗಳನ್ನು ವಿವಿಧ ಸಾಂಪ್ರದಾಯಿಕ ಅಥವಾ ಸಮಕಾಲೀನ ಕಲಾಕೃತಿಗಳನ್ನು ತಯಾರಿಸಿ ಪ್ರದರ್ಶಿಸುತ್ತಾರೆ. ಆರ್ಟಿಜೆನ್ ಆರ್ಟ್ ಗ್ಯಾಲರಿಯಲ್ಲಿ ನಡೆದ ‘ಡ್ರಾಯಿಂಗ್, ಪೇಂಟಿಂಗ್, ಆರ್ಟ್ ಮತ್ತು ಕ್ರಾಫ್ಟ್’ ಪ್ರದರ್ಶನದಲ್ಲಿ ಅವರ ಕರಕುಶಲ ವಸ್ತುಗಳನ್ನು ಪ್ರದರ್ಶಿಸಲಾಯಿತು. ಅರ್ಟಿಜೆನ್ ಆರ್ಟ್ ಗ್ಯಾಲರಿಯಲ್ಲಿ ದಿನಾಂಕ : 21-04-2023ರಂದು ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ಪತ್ರದೊಂದಿಗೆ ಬಹುಮಾನವನ್ನು ವಿತರಿಸಲಾಗಿದೆ.

Read More

ಮಂಗಳೂರು: ಶಾರದಾ ಮಹೋತ್ಸವದ ಪ್ರಯುಕ್ತ ನಗರದ ಕೊಡಿಯಾಲ್‌ ಬೈಲಿನ ಶಾರದಾ ವಿದ್ಯಾಲಯದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ ಅಗಸ್ಟ್ 5ರಂದು ‘ಸಾಂಸ್ಕೃತಿಕ ಸ್ಪರ್ಧೆ’ಗಳನ್ನು ಏರ್ಪಡಿಸಲಾಗಿದೆ. ‘ಪುಟಾಣಿ’, ‘ಶಿಶು’, ‘ಬಾಲ’ ಮತ್ತು ‘ಕಿಶೋರ’ ವಿಭಾಗಗಳಲ್ಲಿ ಸ್ಪರ್ಧೆಯು ನಡೆಯುತ್ತದೆ. ‘ಪುಟಾಣಿ’ ವಿಭಾಗ ಯು.ಕೆ.ಜಿ. ಮಕ್ಕಳಿಗೆ, ‘ಶಿಶು’ ವಿಭಾಗ 1ರಿಂದ 4ನೇ ತರಗತಿಯ ವಿದ್ಯಾರ್ಥಿಗಳಿಗೆ, ‘ಬಾಲ’ ವಿಭಾಗ 5ರಿಂದ 7ನೇ ತರಗತಿಯ ವಿದ್ಯಾರ್ಥಿಗಳಿಗೆ ಮತ್ತು ‘ಕಿಶೋರ’ ವಿಭಾಗ 8ರಿಂದ 10ನೇ ತರಗತಿಯವರಿಗೆ ಬೆಳಿಗ್ಗೆ 9ರಿಂದ ಸ್ಪರ್ಧೆಗಳು ನಡೆಯಲಿವೆ. ಕಥೆ ಹೇಳುವುದು, ಚಿತ್ರ ಬಿಡಿಸುವುದು, ರಂಗೋಲಿ ಹಾಕುವುದು, ಕರ್ನಾಟಕ ಶಾಸ್ತ್ರೀಯ ಸಂಗೀತ, ಭರತನಾಟ್ಯ, ಭಜನೆ, ಕುಣಿತ ಭಜನೆ, ಕೊಟ್ಟಿಗೆ ಕಟ್ಟುವ ಸ್ಪರ್ಧೆ, ಏಕಪಾತ್ರಾಭಿನಯ, ಭಾವಗೀತೆ, ಜಾನಪದ ನೃತ್ಯ ಹಾಗೂ ಗೀತಾ ಕಂಠ ಪಾಠ ಸ್ಪರ್ಧೆಗಳು ಇರುತ್ತವೆ. ಗೂಗಲ್ ಪಾರ್ಮ್ ಲಿಂಕ್ ಹಾಗೂ ಸ್ಪರ್ಧೆಯ ನಿಯಮಗಳು ಶಾಲಾ ವೆಬ್ ಸೈಟ್ www.sharadavidyalaya.inನಲ್ಲಿ ಲಭ್ಯವಿದೆ. ಮಾಹಿತಿಗೆ (0824- 2492628/2493089/9019730479) ಸಂಪರ್ಕಿಸಬಹುದು.

Read More