Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ‘55 ನಿಮಿಷದ ಒಂದು ಪ್ರೇಮ ಕಥೆ’ ನಾಟಕವನ್ನು 2015ರಲ್ಲಿ 9 ಕಲಾವಿದರು ಒಂದೇ ಸಮಯಕ್ಕೆ ಬೆಂಗಳೂರಿನ 9 ರಂಗಮಂದಿರಗಳಲ್ಲಿ ಪ್ರಾರಂಭಿಸಿ ಒಂದೇ ಸಮಯಕ್ಕೆ ಮುಗಿಸಿ ಲಿಮ್ಕಾ ದಾಖಲೆ ನಿರ್ಮಿಸುವಲ್ಲಿ ಯಶಸ್ವಿಯಾಗಿತ್ತು. ಈಗ ಇಡೀ ಕರ್ನಾಟಕದ ಮೂವತ್ತೊಂದು ಜಿಲ್ಲೆಗಳಲ್ಲೂ ಒಂದೇ ದಿನ ಪ್ರಯೋಗಗೊಳ್ಳುವ ಮುಖೇನ ಮತ್ತೊಮ್ಮೆ ರಂಗಭೂಮಿಯಲ್ಲಿ ಎರಡನೇ ಬಾರಿ ಲಿಮ್ಕಾ ದಾಖಲೆ ಬರೆಯುವ ಪ್ರಯತ್ನಕ್ಕೆ ದಾಪುಗಾಲಿಡಲು ಸಿದ್ಧವಾಗಿದೆ. 31 ಜುಲೈ, 31 ಜಿಲ್ಲೆ, 31 ಕಲಾವಿದರು, 31 ರಂಗಮಂದಿರ ಏಕಕಾಲಕ್ಕೆ ಇಡೀ ಕರ್ನಾಟಕದಾದ್ಯಂತ ಒಂದೇ ದಿನ ಒಂದೇ ಸಮಯಕ್ಕೆ ಪ್ರದರ್ಶನಗೊಳ್ಳುತ್ತಿರುವ ನಾಟಕ. ಕನ್ನಡ ರಂಗಭೂಮಿಯಲ್ಲಿ ವಿಶಿಷ್ಟವಾಗಿ ದಾಖಲೆ ಮಾಡಲು, 2023ರ ಲಿಮ್ಕಾ ದಾಖಲೆಗೆ ಸಿದ್ಧವಾಗುತ್ತಿರುವ ನಾಟಕವೇ ‘55 ನಿಮಿಷದ ಒಂದು ಪ್ರೇಮಕಥೆ’. ಇದಕ್ಕಾಗಿ 3 ತಿಂಗಳಿಂದ ತಂಡ ಶ್ರಮವಹಿಸುತ್ತಿದ್ದು 220ಕ್ಕೂ ಹೆಚ್ಚು ತಂತ್ರಜ್ಞರು 31 ಕಲಾವಿದರು ಇತಿಹಾಸ ಸೃಷ್ಟಿಸುವಲ್ಲಿ ನಿರತರಾಗಿದ್ದಾರೆ. ಕಲಾವಿದರ ಹೆಸರು, ಪ್ರದರ್ಶಿಸುತ್ತಿರುವ ಸ್ಥಳ ಹಾಗೂ ರಂಗಮಂದಿರದ ಹೆಸರು 1) ರಾಜಗುರು ಹೊಸಕೋಟೆ – ರವೀಂದ್ರ ಕಲಾಕ್ಷೇತ್ರ,…
ಸಾಹಿತ್ಯ ಮತ್ತು ಸಂಸ್ಕೃತಿ ಇಂದಿನ ಸಮಾಜಕ್ಕೆ ಬಹು ಮುಖ್ಯವಾಗಿವೆ. ‘ಯುವಪಡೆ ಸಾಹಿತ್ಯದ ಕಡೆ’ ಎನ್ನುವುದು ಖಿದ್ಮಾ ಫೌಂಡೇಷನ್ ಧ್ಯೇಯವಾಗಿದೆ. ಪವಿತ್ರ ಸ್ವಾತಂತ್ರ ಭಾರತದ 75 ನೇ ಅಮೃತ ಮಹೋತ್ಸವದ ಸವಿ ನೆನಪಿಗಾಗಿ ಖಿದ್ಮಾ ಫೌಂಡೇಶನ್ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ರಾಜ್ಯ ಮಟ್ಟದ ವಿದ್ಯಾರ್ಥಿಗಳ ಕವನ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಆಯ್ಕೆಯಾದ ಕವಿತೆಗಳನ್ನು ವೇದಿಕೆಯಲ್ಲಿ ವಾಚಿಸಲು ಅವಕಾಶ ನೀಡುವುದರ ಜೊತೆಗೆ, ಪುಸ್ತಕದ ರೂಪದಲ್ಲಿ ಸ್ಮರಣ ಸಂಚಿಕೆ ಹೊರತರುವ ತಯಾರಿಯಲ್ಲಿದ್ದೇವೆ. ಆಸಕ್ತರು 30/07/ 2023 ಭಾನುವಾರಕ್ಕೆ ಮುಂಚಿತವಾಗಿ ನಿಮ್ಮ ಹೆಸರನ್ನು 73491 97313 ಈ ನಂಬರಿಗೆ ವಾಟ್ಸಾಪ್ ಮೂಲಕ ನೋಂದಾಯಿಸಿಕೊಳ್ಳಬೇಕೆಂದು ಖಿದ್ಮಾ ಫೌಂಡೇಶನ್ ರಾಜ್ಯ ಸಂಚಾಲಕರಾದ ಆಮಿರ್ ಬನ್ನೂರು ತಿಳಿಸಿದ್ದಾರೆ
ಬೆಂಗಳೂರು : ಕಳೆದ 55 ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದು, ತನ್ನದೇ ಆದ ಮಹತ್ವದ ಸ್ಥಾನವನ್ನು ಪಡೆದಿರುವ ಭಾರತೀಯ ವಿದ್ಯಾಭವನದ ಪತ್ರಿಕೋದ್ಯಮ ಕಾಲೇಜು ಹೊಸ ಶೈಕ್ಷಣಿಕ ವರ್ಷದ ಪತ್ರಿಕೋದ್ಯಮದ ತರಗತಿಗಳನ್ನು ಆರಂಭಿಸುತ್ತಿದೆ. ಆಗಸ್ಟ್ 2023ರಿಂದ ಆರಂಭವಾಗಲಿರುವ ಒಂದು ವರ್ಷದ ಸ್ನಾತಕೋತ್ತರ ಪತ್ರಿಕೋದ್ಯಮ ಡಿಪ್ಲೊಮದ ಪ್ರವೇಶಕ್ಕೆ ಅರ್ಹರಿಂದ ಅರ್ಜಿಆಹ್ವಾನಿಸಿದೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಮಹತ್ವದ ಸಾಧನೆಯನ್ನು ಮಾಡಿರುವ ಹಲವು ಸಾಧಕರು ಇಲ್ಲಿ ವಿಶೇಷ ತರಬೇತಿ ನೀಡಲಿದ್ದಾರೆ. ಮುದ್ರಣ ಮಾಧ್ಯಮ, ದೃಶ್ಯ ಮಾಧ್ಯಮ ಮತ್ತು ಕಾರ್ಪೊರೇಟ್ ಜರ್ನಲಿಸಂ ಈ ಮೂರೂ ಕ್ಷೇತ್ರದಲ್ಲಿ ಇಲ್ಲಿ ವಿಶೇಷ ತರಬೇತಿ ನಡೆಯಲಿದ್ದು, ಕಾಲಕ್ಕೆ ತಕ್ಕಂತೆ ಪಠ್ಯಕ್ರಮದಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಲಾಗಿದೆ. ಆನ್ಲೈನ್ ಪತ್ರಿಕೋದ್ಯಮ, ಸಾಮಾಜಿಕ ಜಾಲ ತಾಣಗಳ ನಿಯಂತ್ರಣ ಹಾಗೂ ನಿರ್ವಹಣೆಯಂತಹ ನೂತನ ಬೆಳವಣಿಗೆಗಳನ್ನು ಕಲಿಸಲಾಗುವುದು. ಯಾವುದೇ ಪದವಿ ಪಡೆದವರು ಅರ್ಜಿಸಲ್ಲಿಸಬಹುದಾಗಿದೆ. ತರಗತಿಗಳು ಆಗಸ್ಟ್ ತಿಂಗಳ ಮೊದಲ ವಾರದಿಂದ ಆರಂಭವಾಗಲಿದೆ. ಪ್ರವೇಶಕ್ಕೆ ಮತ್ತು ಇತರ ವಿವರಗಳಿಗೆ ಬೆಳಿಗ್ಗೆ 10ರಿಂದ ಸಂಜೆ 6ಗಂಟೆಯವರೆಗೂ ಭಾರತೀಯ ವಿದ್ಯಾ ಭವನದ ಕಚೇರಿಯನ್ನು ಸಂಪರ್ಕಿಸಬಹುದು.ಹೆಚ್ಚಿನ ಮಾಹಿತಿಗಾಗಿ…
ಕಾಸರಗೋಡು: ಕಾಸರಗೋಡಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯಾದ ರಂಗಚಿನ್ನಾರಿ ಕಾಸರಗೋಡು(ರಿ.) ಇದರ ಮಹಿಳಾ ಘಟಕ ನಾರಿ ಚಿನ್ನಾರಿಯು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ‘ಶ್ರಾವಣ ಧಾರಾ’ ಸರಣಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮವು ದಿನಾಂಕ 30-07-2023ರಂದು ಅಪರಾಹ್ನ 2.30ರಿಂದ ಕಾಸರಗೋಡಿನ ಬ್ಯಾಂಕ್ ರಸ್ತೆಯ ಜಿ.ಯು.ಪಿ ಶಾಲೆಯ ಮುಂಭಾಗದ ಟೌನ್ ಬ್ಯಾಂಕ್ ಹಾಲ್ ನಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಕಾಸರಗೋಡಿನ ಮಾನವ ಹಕ್ಕು ಸಂಘಟನೆಯ ರಾಜ್ಯಾಧ್ಯಕ್ಷೆಯಾದ ಜುಲೇಖಾ ಮಾಹಿನ್ ಉದ್ಘಾಟಿಸಲಿದ್ದು, ಖ್ಯಾತ ಲೆಕ್ಕ ಪರಿಶೋಧಕರೂ ಹಾಗೂ ನಾರಿಚಿನ್ನಾರಿಯ ಗೌರವಾಧ್ಯಕ್ಷೆಯೂ ಆದ ಶ್ರೀಮತಿ ತಾರಾ ಜಗದೀಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆರೋಗ್ಯ ತಜ್ಞೆ ಡಾ. ಸಂಗೀತ ಸಚ್ಚಿದಾನಂದ್, ಬಿ.ಎ.ಎಂ.ಎಸ್ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಹಿರಿಯ ಸಮಾಜ ಸೇವಕಿಯಾದ ಮಂಜುಳಾ ರಾವ್ ಹಾಗೂ ಸಮಾಜ ಸೇವಕಿ ಚಂದ್ರಾವತಿ ಇವರಿಗೆ ಗೌರವಾರ್ಪಣೆ ನಡೆಯಲಿರುವುದು. ಸಭಾಕಾರ್ಯಕ್ರಮದ ಬಳಿಕ ನಡೆಯಲಿರುವ ವಿಚಾರ ಸಂಕಿರಣದಲ್ಲಿ ಆರೋಗ್ಯ ತಜ್ಞೆಯಾದ ಡಾ.ಸಂಗೀತ ಸಚ್ಚಿದಾನಂದ್ ಎಮ್.ಬಿ.ಬಿ.ಎಸ್ ಇವರು ‘ಮಳೆಗಾಲದ ಆಹಾರ ಮತ್ತು…
ಕಾರ್ಕಳ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಮತ್ತು ಕಾರ್ಕಳ ತಾಲೂಕು ಘಟಕದ ಸಹಯೋಗದಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಪ್ರಯುಕ್ತ ನಗರದ ಪ್ರಕಾಶ್ ಹೊಟೇಲ್ನಲ್ಲಿ ದಿನಾಂಕ 17-07-2023ರಂದು ‘ಕಾರ್ಕಳ ಕುಂದಾಪ್ರ ಕನ್ನಡ ಹಬ್ಬ 2023’ ಕಾರ್ಯಕ್ರಮವು ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಶ್ರೀ ಕೆ. ಜಯಪ್ರಕಾಶ್ ಹೆಗ್ಡೆಯವರು ಮಾತನಾಡುತ್ತಾ “ಭಾಷೆ ಯಾವುದೇ ಇರಲಿ ಒಟ್ಟಾಗಿ ಭಾಷೆಯ ಬೆಳವಣಿಗೆಗೆ ನಾವೆಲ್ಲ ಶ್ರಮಿಸಬೇಕು. ಭಾಷೆಗಳ ಅಧ್ಯಯನ ಇಂದಿನ ಅಗತ್ಯ. ಕುಂದಾಪ್ರ ಕನ್ನಡ ಭಾಷೆಯ ಇನ್ನು ಹೆಚ್ಚಿನ ಅಧ್ಯಯನಕ್ಕಾಗಿ ಅಧ್ಯಯನ ಪೀಠ ಹಾಗೂ ಆಕಾಡೆಮಿ ಸ್ಥಾಪನೆ ಸಂಬಂಧ ಸರಕಾರ ಮಟ್ಟದಲ್ಲಿ ಶ್ರಮಿಸಲಾಗುವುದು. ಶಿಕ್ಷಕರು ಮಕ್ಕಳಿಗೆ ಶಿಕ್ಷಣ ನೀಡಬಹುದು. ಆದರೆ ಮಗುವಿಗೆ ಸಂಸ್ಕಾರ ಕೊಡುವವರೇ ತಾಯಿ. ಆದ್ದರಿಂದ ಮಾತೃಭಾಷೆ ಮೊದಲು ಕಲಿಯುವ ಭಾಷೆಯಾಗಬೇಕು. ಭಾಷೆಯ ಆಚರಣೆ ಒಂದು ದಿನಕ್ಕೆ ಸೀಮಿತವಾಗದಿರಲಿ” ಎಂದು ಹೇಳಿದರು. ಸಾಹಿತಿ ಶ್ರೀ ಓಂ ಗಣೇಶ್ ಉಪ್ಪುಂದ ‘ಭಾಷಿ ಅಲ್ಲ ಬದ್ಕ್’ ಕುರಿತ ಉಪನ್ಯಾಸ…
ಉಡುಪಿ : ಕೇರಳದ ಗ್ರಂಥಾಲಯ ಚಳವಳಿಯ ಪಿತಾಮಹ ಪಿ.ಎನ್. ಪಣಿಕ್ಕರ್ ಪುಣ್ಯತಿಥಿ ಅಂಗವಾಗಿ ಹಮ್ಮಿಕೊಳ್ಳಲಾದ ‘ಓದುವ, ಡಿಜಿಟಲ್ ಓದುವ ದಿನ ಮತ್ತು ಓದುವ ತಿಂಗಳು’ ಆಚರಣೆ ಪ್ರಯುಕ್ತ ಪುಸ್ತಕ ಪ್ರದರ್ಶನ ಮತ್ತು ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಅಜ್ಜರಕಾಡು ವಿದ್ಯಾವಾಚಸ್ಪತಿ ಡಾ.ಬನ್ನಂಜೆ ಗೋವಿಂದಾಚಾರ್ಯ ಸ್ಮಾರಕ ನಗರ ಕೇಂದ್ರ ಗ್ರಂಥಾಲಯದಲ್ಲಿ ದಿನಾಂಕ 18-07-2023ರಂದು ನಡೆಯಿತು. ಮಕ್ಕಳು ಹಾಗೂ ಸಾರ್ವಜನಿಕರನ್ನು ಗ್ರಂಥಾಲಯದತ್ತ ಆಕರ್ಷಿಸಿ, ಅವರಲ್ಲಿ ಪುಸ್ತಕ ಓದುವ ಹವ್ಯಾಸ ಮತ್ತು ಗ್ರಂಥಾಲಯಗಳ ಮಹತ್ವದ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಈ ಓದುವ ತಿಂಗಳು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಉದ್ಘಾಟಿಸಿ ಮಾತನಾಡುತ್ತಾ “ಪುಸ್ತಕಗಳಲ್ಲಿ ಆಗಾಧ ಮಾಹಿತಿ ಸಿಗುವುದರಿಂದ ಮಕ್ಕಳು ಬಾಲ್ಯದಿಂದಲೇ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಓದು ನಮ್ಮ ಹವ್ಯಾಸವಾದಾಗ ಮುಂದೆ ಓದುವ ಪ್ರವೃತ್ತಿ ಬೆಳೆಯುತ್ತದೆ. ಗ್ರಂಥಾಲಯಗಳು ವಿವಿಧ ತರಹದ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಓದುವ ಪ್ರವೃತ್ತಿಯನ್ನು ಉತ್ತೇಜಿಸಬೇಕು. ಇದು ಹೈಟೆಕ್ ಗ್ರಂಥಾಲಯವಾಗಿದ್ದು, ಎಲ್ಲಾ ತರಹದ ಪುಸ್ತಕಗಳು ಲಭ್ಯವಿದೆ.…
ತೆಕ್ಕಟ್ಟೆ: ಯಶಸ್ವೀ ಕಲಾವೃಂದ(ರಿ.)ಕೊಮೆ, ತೆಕ್ಕಟ್ಟೆ ಇವರ ಆಶ್ರಯದಲ್ಲಿ ತೆಕ್ಕಟ್ಟೆ ಹಯಗ್ರೀವದಲ್ಲಿ ‘ಕುಂದಾಪುರ ಕನ್ನಡ ದಿನಾಚರಣೆ’ಯು ದಿನಾಂಕ 16-07-2023ರಂದು ನಡೆಯಿತು. ಈ ಕಾರ್ಯಕ್ರಮದ ಪ್ರಯುಕ್ತ ಆಯೋಜಿಸಿದ ‘ಗ್ವಲ್ ಗ್ವಲ್ಲಿ’ ಯಕ್ಷಗಾನದ ಸಂದರ್ಭದಲ್ಲಿ ಹೊಸ ವೇಷಭೂಷಣ ಹೊಂದಿದ ಬಾಲಗೋಪಾಲರಿಗೆ ತುರಾಯಿ ಸಿಕ್ಕಿಸುವುದರ ಮೂಲಕ ‘ಪ್ರಸಾಧನ’ ನೂತನ ಯಕ್ಷಾಭರಣವನ್ನು ಆನಂದ ಸಿ.ಕುಂದರ್ ಉದ್ಘಾಟಿಸಿ ಮಾತನಾಡುತ್ತಾ, “ಕಣ್ಣಂಗೆ ಕಾಂಬುಕೇ ಸಿಗ್ದಿದ್ ಅಟ್ಟಣಿಗೆ ಆಟ, ದೊಂದಿ ಬೆಳಕಿನ ಆಟ, ಹವ್ಯಾಸಿ ಜೋಡಾಟ ಹೀಗೆ ಹಲವ್ ಬಗಿ ಆಟ ಮಾಡಿ, ದಶಮ ಸಂಭ್ರಮದಲ್ ದೂಳ್ ಎಬ್ಸಿ ಬಿಟ್ ಸಂಘ ಯಶಸ್ವಿ. ಹೂವಿನ್ಕೋಲ್ ಅಲ್ಲಲ್ ಮನಿ ಮನಿಗ್ ಹೋಯ್ ಮತ್ ಆ ಸಾಂಪ್ರದಾಯಿಕ ಕಲಿಗ್ ಜೀವ ಕೊಟ್ ಸಂಸ್ಥೆ ಯಶಸ್ವಿ. ಕರಾವಳಿ ಭಾಗದಲ್ ಬಾಳ ವರ್ಷದಿಂದ ಒಳ್ಳೆ ಗುರುಗಳನ್ ಸರ್ಸಕಂಡ್ ವರ್ಷದಲ್ ಆರ್ ತಿಂಗಳೂ ತರಗತಿ ಮಾಡಿ ಮೇಲ್ಪಂಕ್ತಿಯಲ್ ಇಪ್ ಸಂಘ ಯಶಸ್ವಿ. ಯಶಸ್ವಿ ಸಂಘಕ್ ಕೊಟ್ ಕೊಡುಗೆ ಹಾಳಾತಿಲ್ಲೆ. ಕೊಟ್ಟದ್ದ್ಕ್ಕೂ ಮೂರ್ ಪಟ್ ಜಾಸ್ತಿ ಆಯ್ ಸಮಾಜಕ್ ಪ್ರಯೋಜನಕ್ ಬತ್ತತ್”…
ಮಂಗಳೂರು : ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಪ್ರಾಯೋಜಕತ್ವದಲ್ಲಿ ದಾಸಸಾಹಿತ್ಯ ಸೇವಾ ಪ್ರತಿಷ್ಠಾನದ ವತಿಯಿಂದ ರಾಮಕೃಷ್ಣ ಆಶ್ರಮದ ಸಹಯೋಗದೊಂದಿಗೆ ದೇಶದ ಉದ್ದಗಲಕ್ಕೂ ಸಾವಿರಾರು ಸಂಗೀತ ಕಾರ್ಯಕ್ರಮಗಳನ್ನು ನೀಡಿರುವ ನಾಡಿನ ಹೆಸರಾಂತ ಕಂಚಿನ ಕಂಠದ ಗಾಯಕ, ಪ್ರತಿಷ್ಠಿತ ಶಾರದಾ ಪುರಸ್ಕಾರ ಪುರಸ್ಕೃತ ಶಿರಸಿಯ ಶ್ರೀ ವಿನಾಯಕ ಹೆಗ್ಡೆಯವರು ಹರಿದಾಸರ ಕೃತಿ ಕೀರ್ತನೆಗಳ ಗಾಯನ ಕಾರ್ಯಕ್ರಮ ನೀಡಲಿದ್ದಾರೆ. ತಬಲಾದಲ್ಲಿ ರಾಜೇಶ್ ಭಾಗ್ವತ್ ಹಾಗೂ ಹಾರ್ಮೋನಿಯಂನಲ್ಲಿ ಹೇಮಂತ್ ಭಾಗ್ವತ್ ಸಾಥ್ ನೀಡಲಿದ್ದಾರೆ. ಈ ಕಾರ್ಯಕ್ರಮವು ದಿನಾಂಕ : 29-07-2023ರಂದು ಶನಿವಾರ ಸಂಜೆ ಗಂಟೆ 5.15ರಿಂದ 7.30ರವರಿಗೆ ರಾಮಕೃಷ್ಣ ಆಶ್ರಮದ ವಿವೇಕಾನಂದ ಸಭಾಂಗಣದಲ್ಲಿ ನಡೆಯಲಿದೆ. ದಾಸಸಾಹಿತ್ಯ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಎಂ.ಎಸ್. ಗುರುರಾಜ್ ತಮ್ಮೆಲ್ಲರಿಗೂ ಪ್ರೀತಿ ಪೂರ್ವಕವಾದ ಆಹ್ವಾನ ನೀಡಿದ್ದಾರೆ.
ಮಂಗಳೂರು : ಭರತಾಂಜಲಿ ಕೊಟ್ಟಾರ ಮಂಗಳೂರು ಇದರ ವತಿಯಿಂದ ಶ್ರೀ ಮಹಾಗಣಪತಿ ದೇವಸ್ಥಾನ ಗಣೇಶಪುರದಲ್ಲಿ ಗುರುಪೂರ್ಣಿಮೆ ಪ್ರಯುಕ್ತ ‘ಗುರು ನಮನ ಮತ್ತು ಮಾತಾಪಿತರ ಚರಣ ಪೂಜನ’ ಕಾರ್ಯಕ್ರಮ ದಿನಾಂಕ 23-07-2023ರಂದು ನಡೆಯಿತು. ಶಕ್ತಿನಗರದ ಶಕ್ತಿ ರೆಸಿಡೆನ್ಸಿಯಲ್ ಶಾಲೆ ಇಲ್ಲಿನ ಪ್ರಾಂಶುಪಾಲರಾದ ವಿದ್ವಾನ್ ರವಿಶಂಕರ್ ಹೆಗಡೆಯವರು ಈ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡುತ್ತಾ “ಭಾರತದ ಎಲ್ಲಾ ಕಲಾಪ್ರಕಾರಗಳಲ್ಲಿಯೂ ಗುರು ಪರಂಪರೆ ನಡೆದುಕೊಂಡು ಬಂದಿರುವುದರಿಂದ ಇಲ್ಲಿನ ಸಂಸ್ಕೃತಿ ಭದ್ರವಾಗಿದೆ. ನಮ್ಮ ದೇಶದ ಪರಂಪರೆ ಅತ್ಯಂತ ಶ್ರೇಷ್ಠವಾದದ್ದು ಎಂದು ಅಭಿಪ್ರಾಯಪಟ್ಟರು. ಆಚಾರ್ಯ ಎಂದರೆ ವಿದ್ಯೆಯನ್ನು ತಾನು ಆಳವಾಗಿ ಅಭ್ಯಾಸ ಮಾಡಿ ಅದನ್ನು ವಿದ್ಯಾರ್ಥಿಗಳಿಗೆ ಮನದಟ್ಟಾಗುವಂತೆ ಪಾಠ ಮಾಡುವುದಷ್ಟೇ ಅಲ್ಲ ಅದನ್ನು ತಾನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡವನಾಗಿರಬೇಕು. ಆಗ ಮಾತ್ರ ಆತ ಆಚಾರ್ಯ ಅಥವಾ ಗುರು ಎಂದು ಕರೆಸಿಕೊಳ್ಳುತ್ತಾನೆ. ಒಬ್ಬ ಶಿಕ್ಷಕ ಕೇವಲ ಜ್ಞಾನವನ್ನು ನೀಡುತ್ತಾನೆ, ಆದರೆ ಗುರುವು ನಮ್ಮ ಆಧ್ಯಾತ್ಮಿಕ ಬೆಳವಣಿಗೆಗೆ ಜವಾಬ್ದಾರನಾಗಿರುತ್ತಾನೆ. ನಮ್ಮೊಳಗಿನ ಬುದ್ಧಿವಂತಿಕೆಯನ್ನು ಜಾಗೃತಗೊಳಿಸಿ ನಮ್ಮನ್ನು ಒಳಕ್ಕೆ ತಿರುಗಿಸಲು ಪ್ರೋತ್ಸಾಹಿಸುತ್ತಾನೆ. ಕರೋನ ನಂತರದ…
ಮಂಗಳೂರು : ದ.ಕ. ಜಿಲ್ಲಾ ಕ.ಸಾ.ಪ.ದ ವತಿಯಿಂದ ಮನೆ-ಮನಗಳಲ್ಲಿ ಸಾಹಿತ್ಯ ಕಾರ್ಯಕ್ರಮದಡಿಯಲ್ಲಿ ಶ್ರೀ ಕೇಶವ ಕುಡ್ಲ ಇವರ ‘ಸಾಹಿತ್ಯ ಮತ್ತು ಸಂವಾದ’ ಕಾರ್ಯಕ್ರಮವು ದಿನಾಂಕ 30-07-2023ರಂದು ಆದಿತ್ಯವಾರ ಸಂಜೆ ಗಂಟೆ ನಾಲ್ಕಕ್ಕೆ ನಡೆಯಲಿದೆ. ಕೋಡಿಕಲ್ ನ ಜೆ.ಬಿ.ಲೋಬೋ ರಸ್ತೆಯಲ್ಲಿರುವ ಕೇಶವ ಕುಡ್ಲ ಇವರ ಮನೆ ‘ನೆಲೆ’ಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವು ದ.ಕ. ಜಿಲ್ಲಾ ಕ.ಸಾ.ಪ.ದ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಹಿರಿಯ ಕವಿ ಮತ್ತು ಸಾಹಿತಿಯಾದ ಡಾ. ವಸಂತ ಕುಮಾರ್ ಪೆರ್ಲ ಇವರು ಸಂವಾದ ನಡೆಸಿಕೊಡುವ ಈ ಕಾರ್ಯಕ್ರಮದಲ್ಲಿ ಕ.ಸಾ.ಪ. ಮಂಗಳೂರು ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ ಮಂಜುನಾಥ್ ಎಸ್. ರೇವಣ್ಕರ್ ಉಪಸ್ಥಿತರಿರುವರು. ಶ್ರೀ ಕೇಶವ ಕುಡ್ಲ ನಿವೃತ್ತ ವಿಮಾ ಅಭಿವೃದ್ಧಿ ಅಧಿಕಾರಿ ಹಾಗೂ ಕ.ಸಾ.ಪ.ದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ತಮ್ಮೆಲ್ಲರಿಗೂ ಈ ಕಾರ್ಯಕ್ರಮಕ್ಕೆ ಆದರದ ಸ್ವಾಗತ ಕೋರಿದ್ದಾರೆ.