Subscribe to Updates
Get the latest creative news from FooBar about art, design and business.
Author: roovari
ಸುರತ್ಕಲ್ : ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿ (ರಿ.) ಇದರ ‘ನಲ್ವತ್ತರ ನಲಿವು -14’ ಸರಣಿಯಲ್ಲಿ ಪ್ರಸ್ತುತ ಪಡಿಸುವ ‘ನೃತ್ಯೋಲ್ಲಾಸ ಕಾರ್ಯಕ್ರಮ’ವನ್ನು ದಿನಾಂಕ 10 ಆಗಸ್ಟ್ 2025ರಂದು ಸಂಜೆ ಗಂಟೆ 4-45ಕ್ಕೆ ನಾಟ್ಯಾಂಜಲಿ ಕಲಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿಯ ಗೌರವಾಧ್ಯಕ್ಷರಾದ ಕರ್ಮಯೋಗಿ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಇವರು ವಹಿಸಲಿದ್ದು, ಶಾಂತಲಾ ನಾಟ್ಯ ಪ್ರಶಸ್ತಿ ಪುರಸ್ಕೃತ ಗುರು ಉಳ್ಳಾಲ ಮೋಹನ ಕುಮಾರ್ ಇವರು ದೇವತಾ ಜ್ಯೋತಿ ಪ್ರಜ್ವಲನೆ ಮಾಡಲಿದ್ದಾರೆ. ಶ್ರೀವಿದ್ಯಾ ಇವರ ಶಿಷ್ಯೆ ಕುಮಾರಿ ರೆಮೋನ ಎವಟ್ ಪಿರೇರಾ ಇವರನ್ನು ಅಭಿನಂದಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಸಂಸ್ಥೆಯ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನಗೊಳ್ಳಲಿದೆ.
ಉಡುಪಿ : ಚಿರಂತನ ಚಾರಿಟೇಬಲ್ ಟ್ರಸ್ಟ್ ಸುರತ್ಕಲ್, ಸಪ್ತಕ ಬೆಂಗಳೂರು ಮತ್ತು ಮ್ಯಾಕ್ಸ್ ಮೀಡಿಯಾ ಉಡುಪಿ ಇವರ ಜಂಟಿ ಸಹಯೋಗದೊಂದಿಗೆ ಪ್ರಸ್ತುತ ಪಡಿಸುವ ‘ಸ್ವರ್ ಸ್ವಾದ್’ ಸಂಗೀತ ಕಛೇರಿಯನ್ನು ದಿನಾಂಕ 10 ಆಗಸ್ಟ್ 2025ರಂದು ಸಂಜೆ 4-00 ಗಂಟೆಗೆ ಉಡುಪಿಯ ಯಕ್ಷಗಾನ ಕಲಾರಂಗದ ಇನ್ಫೋಸಿಸ್ ಹಾಲ್ ನಲ್ಲಿ ಆಯೋಜಿಸಲಾಗಿದೆ. ಗಿಲಿಗುಂಡಿಯ ಕುಮಾರಿ ಸಂಗೀತ ಹೆಗ್ಡೆ ಇವರ ಹಾಡುಗಾರಿಕೆ, ತನ್ಮಯ್ ಡಿಯೊಚಾಕೆ ಇವರ ಹಾರ್ಮೋನಿಯಂ ಏಕವ್ಯಕ್ತಿ ವಾದನ ಮತ್ತು ವಿದುಷಿ ಗೌರಿ ಪತಾರೆ ಇವರ ಹಾಡುಗಾರಿಕೆಗೆ ತಬಲಾದಲ್ಲಿ ಗುರುಮೂರ್ತಿ ವೈದ್ಯ, ಆಶಾಯ್ ಕುಲಕರ್ಣಿ ಹಾಗೂ ಹಾರ್ಮೋನಿಯಂನಲ್ಲಿ ಗುರುಪ್ರಸಾದ್ ಹೆಗ್ಡೆ ಇವರು ಸಾಥ್ ನೀಡಲಿದ್ದಾರೆ.
ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಮಾಂಡ್ ಸೊಭಾಣ್ ಸಹಯೋಗದಲ್ಲಿ ಕೊಂಕಣಿ ಮಾನ್ಯತಾ ದಿನಾಚರಣೆ ಅಂಗವಾಗಿ ದಿನಾಂಕ 20 ಆಗಸ್ಟ್ 2025ರಂದು ಬೆಳಿಗ್ಗೆ ಘಂಟೆ 9.00 ರಿಂದ ಸಂಜೆ 4.00ರವರೆಗೆ ಶಕ್ತಿನಗರದ ಕಲಾಂಗಣ್ ಸಭಾಂಗಣದಲ್ಲಿ ಕೊಂಕಣಿಯ ವಿವಿಧ ಮನೋರಂಜನಾ ಸ್ಪರ್ಧೆಗಳನ್ನು ಏರ್ಪಡಿಸಿದೆ. ಬೆಳಿಗ್ಗೆ ಘಂಟೆ 9.00ಕ್ಕೆ ಉದ್ಘಾಟನಾ ಸಮಾರಂಭದೊಂದಿಗೆ ವಿವಿಧ ಸ್ಪರ್ಧೆಗಳು ನಡೆಯಲಿವೆ. ಸಂಜೆ ಘಂಟೆ 4.00ಕ್ಕೆ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಮತ್ತು ಸಮಾರೋಪ ಸಮಾರಂಭ ನಡೆಯಲಿದೆ. ಪ್ರೌಢಶಾಲೆ ಮತ್ತು ಕಾಲೇಜು ವಿಭಾಗಗಳಲ್ಲಿ (ಪಿಯುಸಿ ಮತ್ತು ಪದವಿ ಜೊತೆಯಾಗಿ ಹಾಗೂ ಇತರೆ ಕೋರ್ಸುಗಳು ಸೇರಿ) ಈ ಸ್ಪರ್ಧೆಯು ನಡೆಯಲಿದ್ದು, ಪ್ರತಿ ತಂಡಕ್ಕೆ 20 ನಿಮಿಷಗಳ ಕಾಲಾವಕಾಶ ನೀಡಲಾಗಿದೆ. ನಿರ್ದಿಷ್ಟ ತಂಡಗಳು ಕಾರ್ಯನಿರ್ವಹಣೆ, ಕಿರುನಾಟಕ, ಭಾವಗೀತೆ, ಕಾಮಿಡಿ, ವೊವಿಯೊ, ಗುಮಟ್, ಸಂಗೀತ, ನೃತ್ಯ ಇತ್ಯಾದಿಗಳನ್ನು ಪ್ರದರ್ಶಿಸಬಹುದು. ಕಾರ್ಯನಿರ್ವಾಹಕರು (ಎಂ.ಸಿ.) ಸೇರಿದಂತೆ ತಂಡದಲ್ಲಿ ಕನಿಷ್ಟ 10, ಗರಿಷ್ಟ 15 ಸದಸ್ಯರು ಇರಬೇಕು. ಕಾರ್ಯಕ್ರಮದ ದಿನದಂದು ಬೆಳಿಗ್ಗೆ ಘಂಟೆ 9.00ಕ್ಕೆ ಪ್ರದರ್ಶನದ ಅನುಕ್ರಮವನ್ನು ತಿಳಿಸಲಾಗುವುದು.…
ಮಂಡ್ಯ : ಮಂಡ್ಯ ಜಿಲ್ಲೆಯ ರಾಜ್ಯಮಟ್ಟದ ಕನ್ನಡ ಮಾಸಪತ್ರಿಕೆ ‘ಜೀವನಾಡಿ’ ಪತ್ರಿಕೆಯು ರಾಜ್ಯಮಟ್ಟದ ಕನ್ನಡ ಸಾಹಿತ್ಯ ಸ್ಪರ್ಧೆ 2025 ಏರ್ಪಡಿಸಿದ್ದು, ಕನ್ನಡ ಕಥಾ ಸ್ಪರ್ಧೆ, ಕನ್ನಡ ಪ್ರಬಂಧ ಸ್ಪರ್ಧೆ ಮತ್ತು ಕನ್ನಡ ಕವನ ಸ್ಪರ್ಧೆಗಳು ನಡೆಯಲಿವೆ. ಕಥೆ, ಪ್ರಬಂಧ, ಕವಿತೆಗಳು ಸ್ವ-ರಚನೆಯಾಗಿದ್ದು, ಬೇರೆಲ್ಲೂ ಪ್ರಕಟವಾಗಿರಬಾರದು. ಕಥೆ 2,500 ಪದಗಳಿಗೆ ಮೀರಬಾರದು. ಪ್ರಬಂಧ 2,000 ಪದಗಳಿಗೆ ಮೀರಿರಬಾರದು. ಕವಿತೆ 24 ಸಾಲುಗಳನ್ನು ಮೀರಿರಬಾರದು. ಅನುವಾದಿತ ಕಥೆ ಪ್ರಬಂಧ ಕವಿತೆಗಳಿಗೆ ಅವಕಾಶವಿಲ್ಲ. ದಿನಾಂಕ 15 ಆಗಸ್ಟ್ 2025 ಕೊನೆಯ ದಿನವಾಗಿದ್ದು, ಈ ಕೆಳಗಿನ ವಿಳಾಸಕ್ಕೆ ಕಳುಹಿಸತಕ್ಕದ್ದು. ಜೀವನಾಡಿ ಮಾಸಪತ್ರಿಕೆ, ನಂ.3, ‘ಚೈತ್ರ’, ಚಾಲುಕ್ಯ ರಸ್ತೆ, ನಾಡಪ್ರಭು ಕೆಂಪೇಗೌಡ ಬಡಾವಣೆ, ಕಿರಗಂದೂರು ಬಿ.ಒ., ಮಂಡ್ಯ. ಹೆಚ್ಚಿನ ವಿವರಗಳಿಗೆ ಡಾ. ಎಚ್.ಎಸ್. ಮುದ್ದೇಗೌಡ 98451 98098 ಅಥವಾ ಎಂ.ಪಿ. ಕೇಶವ ಕಾಮತ್ 94483 46276 ಸಂಖ್ಯೆಯನ್ನು ಸಂಪರ್ಕಿಸಿರಿ. ಸನ್ಮಾನ ಪ್ರಶಸ್ತಿ ಫಲಕ ಪ್ರಶಸ್ತಿ ಪತ್ರ ಮತ್ತು ನಗದು ಬಹುಮಾನ ನೀಡಲಾಗುವುದು.
ಬೆಂಗಳೂರು : ಸ್ವರತರಂಗ್ ಸಂಗೀತ ಅಕಾಡೆಮಿ (ರಿ.) ಪ್ರಸ್ತುತ ಪಡಿಸುವ ಸಂಗೀತ್ ಅರ್ಚನಾ – ಸಂತೂರ್ ವಾದನ ಕಾರ್ಯಕ್ರಮವನ್ನು ದಿನಾಂಕ 09 ಆಗಸ್ಟ್ 2025ರಂದು ಸಂಜೆ 6-00 ಗಂಟೆಗೆ ಬೆಂಗಳೂರಿನ ಗಿರಿನಗರದಲ್ಲಿರುವ ದೇವಕೃಪಾ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಧಾರವಾಡದ ಸಿತಾರ್ ವಾದಕ ಉಸ್ತಾದ್ ಶಫೀಕ್ ಖಾನ್ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಗುರುರಾಜ್ ಜೋಶಿ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ನವದೆಹಲಿಯ ಡಾ. ಬಿಪುಲ್ ಕುಮಾರ್ ರಾಯ್ ಇವರ ಸಂತೂರ್ ವಾದನಕ್ಕೆ ಬೆಂಗಳೂರಿನ ಕಾರ್ತಿಕ್ ಕೃಷ್ಣ ತಬಲಾ ಸಾಥ್ ನೀಡಲಿದ್ದಾರೆ.
ತನ್ನ ವಿಶಿಷ್ಟ ಶೀರ್ಷಿಕೆಯಿಂದಲೇ ಗಮನ ಸೆಳೆಯುವ ಕಾದಂಬರಿ ಡಾ. ಬಿ. ಜನಾರ್ದನ ಭಟ್ ಅವರ ‘ಬೂಬರಾಜ ಸಾಮ್ರಾಜ್ಯ’. ಅವರ ಇತರ ಎಲ್ಲ ಕಾದಂಬರಿಗಳಂತೆ ಇಲ್ಲಿಯೂ ಸಾಂಸ್ಕೃತಿಕ-ಐತಿಹಾಸಿಕ ವಿವರಗಳೊಂದಿಗೆ ಕಲ್ಪನೆಯನ್ನೂ ಬೆಸೆದು ವಾಸ್ತವವಾದಿ ಶೈಲಿಯಲ್ಲಿ ಕಥೆಯನ್ನು ಅವರು ಹೆಣೆದಿದ್ದಾರೆ. ಹೆಜ್ಜೆ ಹೆಜ್ಜೆಗೂ ಕುತೂಹಲ ಮೂಡಿಸಿಕೊಂಡು ಹೋಗುವ ಒಂದು ಕಥಾನಕ ಇಲ್ಲಿದೆ. ಕಾದಂಬರಿಯ ಹೊರಕವಚದಲ್ಲಿ ಕರಾವಳಿಯ ಬೂಬಾವರ ಎಂಬ ಒಂದು ಹಳ್ಳಿಯಲ್ಲಿರುವ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆಯುವ ಕೊಳಕು ರಾಜಕೀಯದ ಸುಳಿಯೊಳಗೆ ಸಿಕ್ಕಿ ನಲುಗುವ ಕೃಷ್ಣಚಂದ್ರ ಎಂಬ ಒಬ್ಬ ಪ್ರಾಮಾಣಿಕ, ಕರ್ತವ್ಯನಿಷ್ಠ, ಇತಿಹಾಸ ಉಪನ್ಯಾಸಕನ ಸುತ್ತ ನಡೆಯುವ ಕಥೆಯಿದೆ. ಆತ ಓರ್ವ ಸಾಹಿತಿಯೂ ಹೌದು. ಪಿ.ಹೆಚ್.ಡಿ.ಗಾಗಿ ಸಂಶೋಧನೆ ನಡೆಸುವ ತಯಾರಿಯಲ್ಲಿದ್ದಾನೆ. ಬೂಬಾವರದ ಇತಿಹಾಸದಲ್ಲಿ ಪ್ರಾಚೀನ ಕಾಲದಲ್ಲಿ ಭೂವರಾಹ ಪಾಂಡ್ಯನೆಂಬ ರಾಜನ ಆಡಳಿತವಿತ್ತು ಮತ್ತು ಅವರು ವಿದೇಶಿಯರಿಗೆ ಗುಲಾಮರ ಮತ್ತು ವೇಶ್ಯೆಯರ ಸಾಗಾಣಿಕೆಯನ್ನು ಮಾಡುತ್ತಿದ್ದರು ಎಂಬ ವಿಚಾರ ತಿಳಿದು ಅದೇ ವಿಷಯವನ್ನು ತನ್ನ ಅಧ್ಯಯನಕ್ಕಾಗಿ ಆಯ್ದುಕೊಳ್ಳುತ್ತಾನೆ. ಬೂಬಾವರದಲ್ಲಿದ್ದ ಗೇಟ್ ಭಾರತಿ ಎಂಬ ವೇಶ್ಯಾ ಕುಟುಂಬಕ್ಕೆ ಸೇರಿದವಳು…
ಮಂಗಳೂರು : ಕನ್ನಡ ಭವನ ಮತ್ತು ಗ್ರಂಥಾಲಯ (ರಿ) ಕನ್ನಡ ಭವನ ಪ್ರಕಾಶನ ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕ ಇದರ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗಾಗಿ ಏಕದಿನ ಸಾಹಿತ್ಯ ಅಭಿಯಾನ ಕನ್ನಡದ ನಡಿಗೆ ಶಾಲೆಯ ಕಡೆಗೆ ದಿನಾಂಕ 06 ಆಗಸ್ಟ್ 2025ರ ಬುಧವಾರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಬೋಳಾರ ಇಲ್ಲಿ ಹಮ್ಮಿಕೊಳ್ಳಲಾಯಿತು. ಶಾಲಾ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಈ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಶ್ರೀಮತಿ ರೇಖಾ ಸುದೇಶ್ ರಾವ್ ಇವರು ಕನ್ನಡ ಶಾಲನ್ನು ಹಾಕಿ, ಅತಿಥಿ ಅಭ್ಯಾಗತರನ್ನು ಸ್ವಾಗತಿಸಿದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಮಾಲತಿಯವರು ಹಾಗೂ ಶಿಕ್ಷಣಾಧಿಕಾರಿ ಸುಷ್ಮಾ ಕಿಣಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಗೌರವಾಧ್ಯಕ್ಷರು ಡಾ. ರವೀಂದ್ರ ಜೆಪ್ಪು ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಶ್ರೀ ಉಮೇಶ್ ರಾವ್ ಕುಂಬಳೆ ಕಾರ್ಯಧ್ಯಕ್ಷರು ಪ್ರಾಸ್ತಾವಿಕ ನುಡಿಯೊಂದಿಗೆ ಆಂಗ್ಲ ಭಾಷೆಯನ್ನು ಕನ್ನಡಕ್ಕೆ ಪರಿವರ್ತಿಸುವ ರಸಪ್ರಶ್ನೆ ನಡೆಸಿಕೊಟ್ಟರು. ಶಾಲಾ ಮುಖ್ಯೋಪಾಧ್ಯಾಯನಿ…
ಪುತ್ತೂರು : ಪುತ್ತೂರಿನ ದರ್ಬೆ ವಿದ್ಯಾನಗರದಲ್ಲಿರುವ ಬಹುವಚನಂ ಇದರ ವತಿಯಿಂದ ವಾಗರ್ಥ ಯಕ್ಷ ಬಳಗ ಪ್ರಸ್ತುತಿಯಲ್ಲಿ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮವನ್ನು ದಿನಾಂಕ 10 ಆಗಸ್ಟ್ 2025ರಂದು ಸಂಜೆ 4-30 ಗಂಟೆಗೆ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಯಕ್ಷ ಕಲಾಕೇಂದ್ರದಲ್ಲಿ ಆಯೋಜಿಸಿಲಾಗಿದೆ. ‘ಅಂಗದ ಸಂಧಾನ’ ಪ್ರಸಂಗದ ಹಿಮ್ಮೇಳದಲ್ಲಿ ಭಾಗವತರು ಮುಂಡಾಳಗುತ್ತು ಪ್ರಶಾಂತ ರೈ, ಚಂಡೆಯಲ್ಲಿ ಶ್ರೀಧರ ವಿಟ್ಲ ಮತ್ತು ಮದ್ದಲೆಯಲ್ಲಿ ಬಾಲ ಸುಬ್ರಹ್ಮಣ್ಯ ಹಾಗೂ ಮುಮ್ಮೇಳದಲ್ಲಿ ರಾಧಾಕೃಷ್ಣ ಕಲ್ಚಾರ್ ಮತ್ತು ಗಣೇಶ ಶೆಟ್ಟಿ ಕನ್ನಡಿಕಟ್ಟೆ ಸಹಕರಿಸಲಿದ್ದಾರೆ.
ಉಡುಪಿ: ಸಾಹಿತಿ, ಹವ್ಯಾಸಿ ಪತ್ರಕರ್ತ, ಅಂಕಣ ಬರಹಗಾರ ಮರವಂತೆ ಪ್ರಕಾಶ್ ಪಡಿಯಾರ್ ದಿನಾಂಕ 05 ಆಗಸ್ಟ್ 2025ರ ಮಂಗಳವಾರದಂದು ಕಾರ್ಕಳದ ಹೊಸಬೆಳಕು ಆಶ್ರಮದಲ್ಲಿ ನಿಧನರಾದರು. ಇವರಿಗೆ 64ವರ್ಷ ವಯಸ್ಸಾಗಿತ್ತು ಸಾಹಿತ್ಯ, ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಪಡಿಯಾರ್, ಗ್ರಾಮೀಣ ಭಾಗದ ಸಮಸ್ಯೆ ಕುರಿತು ಬರೆದ ವರದಿಗಳು, ಆಡಳಿತ ವ್ಯವಸ್ಥೆಯ ಗಮನ ಸೆಳೆದು ಫಲಶ್ರುತಿ ಪಡೆಯುತ್ತಿದ್ದವು. ಹಲವಾರು ಸಂಘಸಂಸ್ಥೆಗಳು ಅವರನ್ನು ಸನ್ಮಾನಿಸಿದ್ದವು. ಕೆಲವು ವರ್ಷ ಕಾಲ ಜೀವವಿಮಾ ಏಜೆಂಟರಾಗಿ, ಮಾಧ್ಯಮಗಳಿಗೆ ಜಾಹೀರಾತು ಸಂಗ್ರಾಹಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಅನಾರೋಗ್ಯ ಸಮಸ್ಯೆಯಿಂದ ಮಾನಸಿಕವಾಗಿ ನೊಂದಿದ್ದ ಪಡಿಯಾರ್, ಜೀವನ ನಿರ್ವಹಣೆ ಎದುರಿಸಲು ಅಸಹಾಯಕರಾಗಿ ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು ಮತ್ತು ತಾರಾನಾಥ ಮೇಸ್ತ ಶಿರೂರು ಮೂಲಕ ಕಾರ್ಕಳದ ಹೊಸಬೆಳಕು ಆಶ್ರಮದಲ್ಲಿ ಆಶ್ರಯ ಪಡೆದಿದ್ದರು. . ಮೃತರು ಪತ್ನಿ, ಪುತ್ರಿಯರನ್ನು ಅಗಲಿದ್ದಾರೆ
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಿಲಾಗ್ರಿಸ್ ಕಾಲೇಜ್, ಹಂಪನಕಟ್ಟೆ ಮಂಗಳೂರು, ಆಂತರಿಕ ಗುಣಮಟ್ಟ ಖಾತರಿ ಕೋಶ, ಕನ್ನಡ ವಿಭಾಗದ ಸಹಯೋಗದೊಂದಿಗೆ ಜ್ಞಾನಪೀಠ ಪ್ರಶಸ್ತಿ ವಿಜೇತ ವಿನಾಯಕ ಕೃಷ್ಣ ಗೋಕಾಕ್ ಇವರ ಕವಿ ಕಾವ್ಯ ಸಾಹಿತ್ಯ – ಪರಂಪರೆಯ ಮಾಲಿಕೆ 5 ಕಾರ್ಯಕ್ರಮವು ದಿನಾಂಕ 7 ಆಗಸ್ಟ್ 2025ರ ಗುರುವಾರ ಅಪರಾಹ್ನ ಘಂಟೆ 2:00ರಿಂದ ಮಂಗಳೂರಿನ ಹಂಪನಕಟ್ಟೆಯಲ್ಲಿರುವ ಮಿಲಾಗ್ರಿಸ್ ಕಾಲೇಜು ಆವರಣದಲ್ಲಿ ನಡೆಯಲಿದೆ. ದ. ಕ. ಜಿಲ್ಲಾ ಕ. ಸಾ. ಪ. ಇದರ ಅಧ್ಯಕ್ಷರಾದ ಡಾ. ಎಂ. ಪಿ. ಶ್ರೀನಾಥ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಮಂಗಳೂರಿನ ಹಂಪನಕಟ್ಟೆಯಲ್ಲಿರುವ ಮಿಲಾಗ್ರಿಸ್ ಕಾಲೇಜು ಇದರ ಪ್ರಾಂಶುಪಾಲರಾದ ರೆ. ಡಾ. ಅಶ್ವಿನ್ ಸೆರವೊ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕ. ಸಾ. ಪ. ಬೆಂಗಳೂರಿನ ಕೇಂದ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರಾದ ಡಾ. ಮಾಧವ ಎಂ. ಕೆ. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದು, ಮಿಲಾಗ್ರಿಸ್ ಕಾಲೇಜ್ ಮಂಗಳೂರು ಇಲ್ಲಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಸೌಮ್ಯ…