Author: roovari

ಅವಿನಾಶ್ ಬೈಪಾಡಿತ್ತಾಯ ಹುಟ್ಟಿದ್ದು 14.09.1974 ರಂದು ಈಗಿನ ಕಡಬ ತಾಲೂಕಿನ, ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕೆಂಚಭಟ್ರೆ ಎಂಬ ಗ್ರಾಮದಲ್ಲಿ. ಅಪ್ಪ ಹರಿನಾರಾಯಣ ಬೈಪಾಡಿತ್ತಾಯ, ಅಮ್ಮ ಲೀಲಾವತಿ ಬೈಪಾಡಿತ್ತಾಯ. ಪ್ರಾಥಮಿಕ, ಪ್ರೌಢ ವಿದ್ಯಾಭ್ಯಾಸದ ಬಳಿಕ ಮನೆಯ ಆರ್ಥಿಕ ಸ್ಥಿತಿಗತಿ ಅನುಕೂಲವಿಲ್ಲದ ಕಾರಣದಿಂದಾಗಿ ತಿಪಟೂರಿನಲ್ಲಿ ಎಕ್ಕಾರಿನ ಸದಾನಂದ ರಾಯರ ಕೃಪೆಯಿಂದ ಅವರ ಹೋಟೆಲಲ್ಲಿ ಕೆಲಸ ಮಾಡುತ್ತಾ, ಕಲ್ಪತರು ಕಾಲೇಜಿನಲ್ಲಿ ಬಿಎಸ್ಸಿ (ಸಿಬಿಝಡ್) ವಿದ್ಯಾಭ್ಯಾಸ ಪೂರೈಸಿದೆ. ಕಡಬ, ಕೆಂಚಭಟ್ರೆ ಸುತ್ತಮುತ್ತ ಯಾವುದೇ ಪೂಜೆ, ಪುನಸ್ಕಾರ ಅಥವಾ ಶುಭ ಸಮಾರಂಭಗಳಲ್ಲಿ ಸಂಜೆ ಯಕ್ಷಗಾನ ತಾಳಮದ್ದಳೆ ಇರುತ್ತಿತ್ತು. ಅದೇ ರೀತಿ ಆ ಪರಿಸರವೇ ಯಕ್ಷಗಾನದ ಪರಿಸರವಾಗಿತ್ತು. ಹೀಗಾಗಿ, ಅಪ್ಪ ಅಮ್ಮನ ಜೊತೆಗೆ ಹೋಗುತ್ತಿದ್ದೆ. ರಕ್ತಗತವಾಗಿ ಯಕ್ಷಗಾನದ ಆಕರ್ಷಣೆಯಿತ್ತು. ಸಣ್ಣವನಿರುವಾಗಲೇ ಅಂದರೆ ನಾನಿನ್ನೂ ಅಂಗನವಾಡಿಯಲ್ಲಿರುವಾಗಲೇ ಅಪ್ಪ-ಅಮ್ಮ ಇಬ್ಬರೂ ಸೇರಿಕೊಂಡು ಅಣ್ಣನಿಗೆ ಚೆಂಡೆ, ನನಗೆ ಮದ್ದಳೆ ಕಲಿಸಿದರು. ಅದು ಶಾಸ್ತ್ರೀಯವಾದ ಕಲಿಕೆ ಆಗಿರಲಿಲ್ಲ. ತಾಳಕ್ಕೆ ಮತ್ತು ಪದ್ಯಕ್ಕೆ ನುಡಿಸುವುದನ್ನು ಮನೆಯಲ್ಲೇ ಹೇಳಿಕೊಟ್ಟಿದ್ದರು. ಆ ಕಾಲದಲ್ಲಿ ಹಿಮ್ಮೇಳದವರು ಕಡಿಮೆ. ಹೀಗಾಗಿ ಬಾಲವಾಡಿಯಲ್ಲಿರುವಾಗಲೇ ರಾಮಕುಂಜದ…

Read More

ಮೂಡುಬಿದಿರೆ : ವಿದ್ಯಾಗಿರಿಯ ‘ಕುವೆಂಪು ಸಭಾಂಗಣ’ದಲ್ಲಿ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಹಿಂದಿ ವಿಭಾಗ ಮತ್ತು ಕೆ.ಎನ್. ಭಟ್ ಶಿರಾಡಿಪಾಲ್ ಜನ್ಮಶತಮಾನೋತ್ಸವ ಸಮಿತಿ ಏರ್ಪಡಿಸಿದ ‘ಹಿಂದಿ ದಿವಸ್’ ಕಾರ್ಯಕ್ರಮವು ದಿನಾಂಕ 14-09-2023ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆಯವರು ಕೆ.ಎನ್. ಭಟ್ ಶಿರಾಡಿಪಾಲ್ ಜನ್ಮಶತಮಾನೋತ್ಸವ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ “ಬದುಕಿನುದ್ದಕ್ಕೂ ಕಷ್ಟ ಪರಂಪರೆಗಳನ್ನೇ ಎದುರಿಸಿದ ಶಿಕ್ಷಕರಾಗಿದ್ದ ಕೆ.ಎನ್. ಭಟ್ ಶಿರಾಡಿಪಾಲ್ 38 ಕೃತಿಗಳ ರಚನೆ ಮಾಡಿದ್ದಾರೆ. ಅವರ ಅನೇಕ ಲೇಖನಗಳು ಆ ಕಾಲದ ಪ್ರಸಿದ್ಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ರವೀಂದ್ರನಾಥ ಠಾಗೋರರ ‘ಸಾಧನಾ’ ಕೃತಿಯನ್ನು ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಕಾವ್ಯ ಮತ್ತು ಗದ್ಯ ಎರಡೂ ಪ್ರಕಾರಗಳಲ್ಲಿ ನಿರಂತರ ಬರೆದ ಶಿರಾಡಿಪಾಲ್ ಅವರ ಸಮಗ್ರ ಸಾಹಿತ್ಯ ಸಂಪುಟ ಪ್ರಕಟಗೊಳ್ಳಬೇಕು” ಎಂದು ಹೇಳಿದರು. ಸಮಾರಂಭದಲ್ಲಿ ಪಾಲಡ್ಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಆಂಡ್ಯ್ಯೂ ಡಿ’ಸೋಜ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ‘ಹಿಂದಿ ದಿವಸ್’ನ ಮಹತ್ತ್ವವನ್ನು ವಿವರಿಸಿದರು. ಶತನಮನ ಶತಸನ್ಮಾನ…

Read More

ಮಂಗಳೂರು : ಸನಾತನ ನಾಟ್ಯಾಲಯದ ಆಶ್ರಯದಲ್ಲಿ ‘ಸನಾತನ ನೃತ್ಯೋತ್ಸವ’ವು ದಿನಾಂಕ 17-09-2023ರಂದು ಸಂಜೆ 5.30ಕ್ಕೆ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಜರಗಲಿದೆ. ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಶ್ರೀ ಸುಧೀರ್ ಶೆಟ್ಟಿ ಕಣ್ಣೂರು ಇವರು ಗೌರವಾನ್ವಿತ ಅತಿಥಿಯಾಗಿ ಪಾಲ್ಗೊಳ್ಳಲಿದ್ದು, ಯುವ ವಾಗ್ಮಿ ಲತೇಶ್ ಬಾಕ್ರಬೈಲ್ ಇವರು ‘ಶಿಕ್ಷಣದಲ್ಲಿ ರಾಷ್ಟ್ರೀಯತೆ’ ವಿಷಯದಲ್ಲಿ ಭಾಷಣ ಮಾಡಲಿದ್ದಾರೆ. ಸನಾತನ ನಾಟ್ಯಾಲಯದ ನೃತ್ಯ ಗುರುಗಳಾದ ವಿದುಷಿ ಶಾರದಾಮಣಿ ಶೇಖರ್ ಮತ್ತು ವಿದುಷಿ ಶೀಲತಾ ನಾಗರಾಜ್ ಶಿಷ್ಯವೃಂದದವರಿಂದ ಭರತನಾಟ್ಯ ವೈವಿದ್ಯ ನಡೆಯಲಿದೆ.

Read More

ಮಂಗಳೂರು : ಕೊಂಕಣಿ ಸಾಹಿತಿಗಳು ಮತ್ತು ಕಲಾವಿದರ ಸಂಘಟನೆಯ ಆಶ್ರಯದಲ್ಲಿ ನಡೆಯುವ ಸರಣಿ ಕಾರ್ಯಕ್ರಮ ‘ಥ್ರೂ ಮೈ ವಿಂಡೋ’ ದಿನಾಂಕ 02-09-2023ರ ಶನಿವಾರದಂದು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ನಡೆಯಿತು. ಲೂವಿಸ್ ಕಣ್ಣಪ್ಪ ಅವರ ಭಾವಚಿತ್ರಕ್ಕೆ ಫುಷ್ಪನಮನ ಸಲ್ಲಿಸುವುದರ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕೊಂಕಣಿಯ ಪ್ರಪ್ರಥಮ ಪತ್ರಿಕೆ ‘ದರ‍್ವೆಂ’ ಸ್ಥಾಪಕ ಮತ್ತು ವ್ಯವಸ್ಥಾಪಕ ಸರದಾರ ಲೂವಿಸ್ ಕಣ್ಣಪ್ಪ ಅವರ ಬದುಕು ಮತ್ತು ಬರೆಹದ ಕುರಿತು ನವದೆಹಲಿ ಸಾಹಿತ್ಯ ಅಕಾಡೆಮಿಯ ಶ್ರೀಮತಿ ಶ್ಯಾಮಲಾ ಮಾಧವ ವಿಶೇಷ ಉಪನ್ಯಾಸ ನೀಡಿದರು. “ನಾವೆಲ್ಲರೂ ಕಾನಾಟಿ (ಅರ್ಥಾತ್ ದಪ್ಪ ಕನ್ನಡಕ ಧರಿಸುವ) ಅಜ್ಜ ಎಂದೇ ಕರೆಯುತಿದ್ದ ನಮ್ಮಜ್ಜ ಲೂವಿಸ್ ಕಣ್ಣಪ್ಪನವರಿಂದಲೇ ನನ್ನ ಬರವಣಿಗೆಗೆ ಮೊದಲ ಪ್ರೇರಣೆ ದೊರೆಯಿತು. ಸ್ವಾತಂತ್ಯ ಪರ್ವದಲ್ಲಿ ಮದ್ರಾಸ್‌ ವಿದ್ಯಾನಿಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಮ್.ಎ. ಮತ್ತು ಎಲ್. ಟಿ. ಪದವಿ ಪಡೆದಿದ್ದ ಲೂವಿಸ್ ಕಣ್ಣಪ್ಪನವರು ಮಂಗಳೂರು ಹಂಪನಕಟ್ಟೆಯ ಸರಕಾರಿ ಕಾಲೇಜಿನಲ್ಲಿ (ಇಂದಿನ ವಿಶ್ವವಿದ್ಯಾನಿಲಯ ಕಾಲೇಜು) ಪ್ರಾಂಶುಪಾಲರಾಗಿ, ನಂತರ ದಕ್ಷಿಣ ಕನ್ನಡ ಜಿಲ್ಲೆಯ…

Read More

ಮಂಗಳೂರು : ಶ್ರೀ ಶಾರದಾ ನಾಟ್ಯಾಲಯ ಹೊಸಬೆಟ್ಟು ಇದರ ರಜತ ಸಂಭ್ರಮದ ಪ್ರಯುಕ್ತ ‘ನೃತ್ಯ ಶರಧಿ’ ಸರಣಿ ಕಾರ್ಯಕ್ರಮವು ದಿನಾಂಕ 07-09-2023ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು. ಕರ್ನಾಟಕ ಕಲಾಶ್ರೀ ವಿದುಷಿ ಶ್ರೀಮತಿ ಶಾರದಾಮಣಿ ಶೇಖರ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕದ್ರಿ ನೃತ್ಯ ವಿದ್ಯಾನಿಲಯ ಚಾರಿಟೇಬಲ್ ಟ್ರಸ್ಟ್ (ರಿ) ಇದರ ನೃತ್ಯ ನಿರ್ದೇಶಕರಾದ ನಾಟ್ಯ ವಿಶಾರದ ಶ್ರೀ ಯು.ಕೆ. ಪ್ರವೀಣ್ ಇವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದರು ಮತ್ತು ಈರ್ವರೂ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಲಿ ಎಂದು ಶುಭ ಹಾರೈಸಿದರು. ಪುಷ್ಪಾಂಜಲಿ, ಗಣಪತಿ ಸ್ತುತಿಯೊಂದಿಗೆ ಶುಭಾರಂಭಗೊಂಡ ಕಾರ್ಯಕ್ರಮ ನಾಟ್ಯದ ಅಧಿದೇವನಾದ ನಟರಾಜನಿಗೆ, ರಂಗ ದೇವತೆಗಳಿಗೆ, ದಿಕ್ಪಾಲಕರಿಗೆ ಹಾಗೂ ಗುರುಗಳಿಗೆ ನಮಿಸಿ ಕಾರ್ಯಕ್ರಮ ಮುಂದುವರಿಯಿತು. ಪುಟಾಣಿ ಮಕ್ಕಳು ಶ್ಯಾಮಲೆ ಮೀನಾಕ್ಷಿ ಅವರ ಹಾಡಿಗೆ ನರ್ತಿಸಿದರು. ನಟರಾಜ, ಸರಸ್ವತಿ, ಗುರು ಹಾಗೂ ಪ್ರೇಕ್ಷಕರಿಗೆ ವಂದಿಸುವ ನಾಟ್ಯಗಣಪತಿಗೆ ನಮನ ಎಂಬ ನೃತ್ಯ ಪ್ರೇಕ್ಷಕರ ಮನಸ್ಸಿಗೆ ಮುದನೀಡಿತು. ಶಿವನ ಕುರಿತಾದ ‘ನಟನಂ ಆಡಿನಾರ್’ ಮತ್ತು ‘ಕಂಡೆ…

Read More

ಉಡುಪಿ: ಬೈಲೂರು ಮಹಿಷಮರ್ದಿನಿ ದೇವಸ್ಥಾನದಲ್ಲಿ ಸಿಂಹ ಮಾಸದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ‘ತರಣಿ ಸೇನ ಕಾಳಗ’ ಪ್ರಸಂಗದ ಯಕ್ಷಗಾನ ತಾಳ ಮದ್ದಳೆ ಕೂಟ ದಿನಾಂಕ 08-09-23ರ ಶುಕ್ರವಾರ ಸಂಜೆ ನಡೆಯಿತು. ಬೈಲೂರು ಮಹಿಷಮರ್ದಿನಿ ಯಕ್ಷಗಾನ ಮಂಡಳಿ ಸದಸ್ಯರು ಹಾಗೂ ಅತಿಥಿ ಕಲಾವಿದರು ಸೇರಿ ನಡಿಸಿಕೊಟ್ಟ ಈ ಕಾರ್ಯಕ್ರಮದ ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀಯುತ ದೇವಿಪ್ರಸಾದ್ ಕಟೀಲ್, ಮೃದಂಗದಲ್ಲಿ ಗುರುಗಳಾದ ಶ್ರೀಯುತ ಮುರಳಿಧರ್ ಭಟ್ ಕಟೀಲ್, ಚಂಡೆಯಲ್ಲಿ  ಶ್ರೀಯುತ ಗಣೇಶ್ ಭಟ್, ಚಕ್ರತಾಳದಲ್ಲಿ ಶ್ರೀಯುತ ಜಯಕರ ಬೈಲೂರು ಸಹಕರಿಸಿದರು. ಅರ್ಥದಾರಿಗಳಾಗಿ ಶ್ರೀರಾಮನಾಗಿ ಶ್ರೀಯುತ ಜಯರಾಮ ಆಚಾರ್, ವಿಭಿಷಣನಾಗಿ ಶ್ರೀಯುತ ಗಣೇಶ್ ಭಟ್ ಉಡುಪಿ, ತರಣಿ ಸೇನನಾಗಿ ಶ್ರೀಯುತ ಶ್ರೀಶ ಆಚಾರ್ ಮಟ್ಟು ಕಟಪಾಡಿ, ರಾವಣನಾಗಿ ಶ್ರೀಯುತ ನಾಗರಾಜ್ ಉಪಾಧ್ಯ ಮಾರ್ಪಳ್ಳಿ ಭಾಗವಹಿಸಿದರು.

Read More

ಮಂಗಳೂರು: ವಿದ್ವಾನ್ ಡಾ. ಪ್ರಭಾಕರ ಅಡಿಗ ಕದ್ರಿ ಸಂಪಾದಿತ ಕೃತಿ ‘ಲಘು ಶಾಕಲಮ್’ ಬಿಡುಗಡೆ ಕಾರ್ಯಕ್ರಮವು ಕಲ್ಕೂರ ಪ್ರತಿಷ್ಠಾನದ ಆಶ್ರಯದಲ್ಲಿ ದಿನಾಂಕ 16-09-2023ರಂದು ಸಂಜೆ 4.30ಕ್ಕೆ ಕದ್ರಿ ಕಂಬಳ ರಸ್ತೆಯ ಮಲ್ಲಿಕಾ ಬಡಾವಣೆಯ ಮಂಜು ಪ್ರಾಸಾದದ ವಾದಿರಾಜ ಮಂಟಪದಲ್ಲಿ ನಡೆಯಲಿದೆ. ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಎಸ್. ಪ್ರದೀಪ ಕುಮಾರ ಕಲ್ಕೂರ ಅಧ್ಯಕ್ಷತೆ ವಹಿಸಿ ಕೃತಿ ಬಿಡುಗಡೆಗೊಳಿಸುವರು. ಉಡುಪಿ ಸಂಸ್ಕೃತ ಕಾಲೇಜಿನ ಡಾ. ಶಿವಪ್ರಸಾದ ತಂತ್ರಿ ಶುಭಾಶಂಸನೆಗೈಯ್ಯಲಿದ್ದು ಕೃತಿಕಾರ ಡಾ. ಪ್ರಭಾಕರ ಅಡಿಗರು ಕೃತಿಯನ್ನು ಪರಿಚಯಿಸಲಿದ್ದಾರೆ. ಜೋಯಿಸರು, ಪುರೋಹಿತರಾಗಿರುವ ವಿದ್ವಾನ್ ಹರಿಪ್ರಸಾದ ಭಟ್ ಅವರ ಪ್ರಾಯೋಜಕತ್ವದಲ್ಲಿ ಮುದ್ರಣಗೊಂಡಿರುವ ಈ ಕೃತಿ ಬಿಡುಗಡೆ ಸಮಾರಂಭದಲ್ಲಿ ಅರ್ಚಕ ಬೆಳ್ಮಣ್ ಬಿ. ಶ್ರೀಧರ ಭಟ್, ಜ್ಯೋತಿಷಿ ವಿದ್ವಾನ್ ಮುರಲೀ ತಂತ್ರಿ ಬೈಲೂರು, ಅರ್ಚಕ, ಜ್ಯೋತಿಷಿ ವೇ.ಮೂ. ಶ್ರೀಕಾಂತ ಸಾಮಗ ಭಾಗವಹಿಸಲಿದ್ದಾರೆ.

Read More

ಮೈಸೂರು : ‘ಪರಿವರ್ತನ ರಂಗ ಸಮಾಜ’ ಪ್ರಸ್ತುತ ಪಡಿಸುವ ಪ್ರೊ. ಎಸ್.ಆರ್. ರಮೇಶ್ ವಿನ್ಯಾಸ ಮತ್ತು ನಿರ್ದೇಶನದ ‘ಅಂಗಳದಲ್ಲಿ ಮಂಗಳ ಹಕ್ಕಿಯ ನೆರಳು’ ನಾಟಕ ಪ್ರದರ್ಶನವು ದಿನಾಂಕ 16-09-2023 ಮತ್ತು 17-09-2023ರಂದು ಮೈಸೂರಿನ ನಮನ ಕಲಾ ಮಂಟಪದಲ್ಲಿ ಸಂಜೆ ಗಂಟೆ 6-30ಕ್ಕೆ ನಡೆಯಲಿದೆ. ನಾಟಕ ‘ಅಂಗಳದಲ್ಲಿ ಮಂಗಳ ಹಕ್ಕಿಯ ನೆರಳು’ ಜಗತ್ತಿನ ಶ್ರೇಷ್ಠ ನಾಟಕಕಾರರಲ್ಲಿ ಒಬ್ಬರಾದ ಅತೊಲ್ ಫುಗಾರ್ಡ್ 2014ರಲ್ಲಿ ರಚಿಸಿದ ‘ದಿ ಶಾಡೋ ಆಫ್ ದಿ ಹಮ್ಮಿಂಗ್ ಬರ್ಡ್’ ನಾಟಕದಿಂದ ಪ್ರೇರಿತ ಕೃತಿ. ಸ್ವತಃ ಅತೊಲ್ ಫುಗಾರ್ಡ್ ನಟಿಸಿರುವ ಈ ಕೃತಿಗೆ ಮುಖ್ಯ ಪ್ರೇರಣೆ ಅವರು ಅಮೆರಿಕದಲ್ಲಿ ನೆಲೆಸಿರುವಾಗ ಕಂಡ ಹಮ್ಮಿಂಗ್ ಬರ್ಡಿನ ನೆರಳು. ಪ್ಲೇಟೋ ರಚಿಸಿದ ‘ದಿ ರಿಪಬ್ಲಿಕ್’ ಕೃತಿ ಕೇಂದ್ರ ಬಿಂದು ಸಹ ನೆರಳು. ಪ್ಲೇಟೋನ ತಾತ್ವಿಕ ರೂಪಕ ಹಾಗೂ ಫುಗಾರ್ಡ್ ಕಂಡ ಹಕ್ಕಿಯ ನೆರಳಿನ ನಡುವಿನ ಜಿಜ್ಞಾಸೆ ‘ದಿ ಶಾಡೋ ಆಫ್ ಹಮ್ಮಿಂಗ್ ಬರ್ಡ್’. ಈ ಕೃತಿಯನ್ನು ಮೂಲವಾಗಿಟ್ಟುಕೊಂಡು ಕನ್ನಡದ ನೆಲೆಗೆ ತಕ್ಕಂತೆ ಮೈಸೂರಿನ ರಂಗ…

Read More

ಉಡುಪಿ : ಭಾವನಾ ಫೌಂಡೇಷನ್ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಸಂಯೋಜನೆಯಲ್ಲಿ ಕಲಾಕೃತಿಗಳ ಪ್ರದರ್ಶನ ದಿನಾಂಕ 15-09-2023 ರಿಂದ 24-09-2023ರ ವರೆಗೆ ಬಡಗುಪೇಟೆಯ “ಹತ್ತು ಮೂರು ಇಪ್ಪತ್ತೆಂಟು ಗ್ಯಾಲರಿ”ಯಲ್ಲಿ ನಡೆಯಲಿದೆ. ಕಲಾವಿದರಾದ ಜನಾರ್ದನ ಹಾವಂಜೆ ಹಾಗೂ ಸಂತೋಷ್ ಪೈಇವರ ಗಣೇಶ ಹಾಗೂ ಕೃಷ್ಣನಿಗೆ ಸಂಬಂಧಿಸಿದ ಕಲಾಕೃತಿಗಳು “ಮಾರುತ ಪ್ರಿಯ” ಎನ್ನುವ ಶೀರ್ಷಿಕೆಯಡಿಯಲ್ಲಿ ಪ್ರದರ್ಶನಗೊಳ್ಳಲಿದೆ. ಗಣಪತಿ ಹಾಗೂ ಕೃಷ್ಣನ ಬಗೆಗಿನ ಅನುಭವಗಳನ್ನು ಕಲಾಸಕ್ತರಿಗೆ ಹಂಚುವ ಕಲಾಪ್ರದರ್ಶನ ಇದಾಗಿದ್ದು, ಸುಮಾರು 18 ಕಾವಿ ಕಲೆಯ ಕಲಾಕೃತಿಗಳೂ, 12 ಛಾಯಾಚಿತ್ರಗಳೂ ಇಲ್ಲಿ ಪ್ರದರ್ಶನಗೊಳ್ಳುತ್ತವೆ. ಇದರ ಜೊತೆಗೆ ಬಹುಶಿಸ್ತೀಯ ಅನುಭವಗಳನ್ನು ಪಡೆಯಲು ದಿನಾಂಕ 16-09-2023 ರ ಶನಿವಾರ ವಾಸ್ತುಶಾಸ್ತ್ರಜ್ಞ ಸುಬ್ರಹ್ಮಣ್ಯ ಭಟ್ಟರೊಂದಿಗೆ ಹಾಗೂ ದಿನಾಂಕ 20-09-2023ರ ಬುಧವಾರ ಸಂಜೆ 5ಕ್ಕೆ ನಾಡೋಜ ಕೆ.ಪಿ.ರಾವ್‌ ಇವರೊಂದಿಗೆ ಚಿಂತನ ಮಂಥನ ಕಾರ್ಯಕ್ರಮವೂ ಇದೆ. 18-09-2023ರ ಸೋಮವಾರದಂದು ಸಂಜೆ ಘಂಟೆ 6.00ಕ್ಕೆ ಯಕ್ಷಗುರು ಹಾವಂಜೆ ಮಂಜುನಾಥಯ್ಯ ಹಾಗೂ ವಿದುಷಿ ಅಕ್ಷತಾ ವಿಶು ರಾವ್‌ ಇವರಿಂದ “ಭೂ-ಕೈಲಾಸ” ವಾಚನ-ಪ್ರವಚನ ನಡೆಯಲಿದೆ. ದಿನಾಂಕ…

Read More

ಪುತ್ತೂರು : ಪುತ್ತೂರಿನ ಸ್ಕೌಟಿಂಗ್ ಸೆಂಟರ್ ಬೊಳುವಾರು ಶಾಲಾವಠಾರದ ಅಭಿಜ್ಞಾನ ಮಕ್ಕಳ ನಾಟಕ ಬಳಗ ಪ್ರಯೋಗಿಸುವ ಮೂಲಕಥೆ ಸಚ್ಚಿದಾನಂದ ಹೆಗ್ಗಡೆಯವರ ಮಕ್ಕಳ ನಾಟಕ ‘ಕಾರಂತಜ್ಜನಿಗೊಂದು ಪತ್ರ’ ದಿನಾಂಕ 15-09-2023ರಂದು ಅಪರಾಹ್ನ 3 ಘಂಟೆಗೆ ಬಂಟರ ಭವನ ಕೊಂಬೆಟ್ಟುವಿನ ಶ್ರೀ ರಾಮಕೃಷ್ಣ ಪ್ರೌಢ ಶಾಲೆಯಲ್ಲಿ, ದಿನಾಂಕ 16-09-2023ರಂದು ಅಪರಾಹ್ನ 2 ಘಂಟೆಗೆ ಬೊಳುವಾರು ಶಾಲಾವಠಾರದ ಸ್ಕೌಟಿಂಗ್ ಸೆಂಟರಿನಲ್ಲಿ ಮತ್ತು ದಿನಾಂಕ 19-09-2023ರಂದು ಸಂಜೆ 5 ಘಂಟೆಗೆ ಮಹಾಲಿಂಗೇಶ್ವರ ದೇವಳ ವಠಾರದ ಗಣೇಶೋತ್ಸವ ವೇದಿಕೆಯಲ್ಲಿ ಪ್ರದರ್ಶನಗೊಳ್ಳಲಿದೆ. ಈ ನಾಟಕಕ್ಕೆ ರಂಗಪಠ್ಯ ಮತ್ತು ನಿರ್ದೇಶನ ಐ.ಕೆ.ಬೊಳುವಾರು ಮಾಡಿದ್ದು, ನೃತ್ಯ, ವಸ್ತ್ರ ವಿನ್ಯಾಸ ಹಾಗೂ ಪ್ರಸಾಧನ ಶ್ರೀಮತಿ ರೂಪಕಲಾ ಕೆ. ಮತ್ತು ರಂಗನಿರ್ಮಾಣ ಹಾಗೂ ನಿರ್ವಹಣೆ ಶ್ರೀಮತಿ ಸುನೀತಾ ಎಂ. ಇವರದ್ದು. ‘ಕಾರಂತಜ್ಜನಿಗೊಂದು ಪತ್ರ’ ಮಕ್ಕಳ ನಾಟಕದ ಪಾತ್ರವರ್ಗದಲ್ಲಿ ತೃಶಾ, ಸಾಯಿ ಕೀರ್ತನ್, ಚೈತ್ರೇಶ್, ವಿದೀಕ್ಷಾ, ನೇತ್ರಾ, ಹರ್ಷಿಣಿ, ಧನ್ವಿತಾ, ನಿರೀಕ್ಷಾ, ನಿಶಾ, ಶ್ರೀಕೃತಿ, ಧೃತಿ, ರಶ್ಮಿ ಕೆ., ಶ್ರೇಯಾ, ಸುನೇಧಿ, ಅಚಲ್, ಸಮರ್ಥ, ಸಂಭ್ರಮ ರೈ,…

Read More