Author: roovari

ಉಡುಪಿ : ಕಾರ್ಕಳ ತಾಲೂಕು, ಕಾಂತಾವರದಲ್ಲಿರುವ ಶ್ರೀ ಯಕ್ಷದೇಗುಲ ಕಾಂತಾವರ (ರಿ.) ಇದರ 21ನೇ ವಾರ್ಷಿಕೋತ್ಸವ ಪ್ರಯುಕ್ತ ಸಂಯೋಜಿಸುವ ನಿರಂತರ ಹನ್ನೆರಡು ತಾಸಿನ ಕಲೆಗಾಗಿ, ಕಲಾವಿದನಿಗಾಗಿ, ಕಲಾಸೇವೆ ‘ಯಕ್ಷೋಲ್ಲಾಸ -2023’ ಯಕ್ಷಗಾನ, ಸಂಸ್ಕರಣೆ, ಪ್ರಶಸ್ತಿ ಪುರಸ್ಕಾರ ಹಾಗೂ ತಾಳಮದ್ದಳೆ ಬಯಲಾಟವು ದಿನಾಂಕ : 23-07-2023ನೇ ಆದಿತ್ಯವಾರ ಬೆಳಿಗ್ಗೆ ಗಂಟೆ 10-00ರಿಂದ ರಾತ್ರಿ 10-00ರ ತನಕ ಶ್ರೀ ಕ್ಷೇತ್ರ ಕಾಂತಾವರದಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಶ್ರೀಕ್ಷೇತ್ರ ಕಾಂತಾವರದ ಪ್ರಧಾನ ಅರ್ಚಕರಾದ ಶ್ರೀ ಕೃಷ್ಣಮೂರ್ತಿ ಭಟ್ ಇವರ ಉಪಸ್ಥಿತಿಯಲ್ಲಿ ಬಾರಾಡಿಬೀಡಿನ ಶ್ರೀಮತಿ ಸುಮತಿ ಆರ್. ಬಲ್ಲಾಳ್ ಇವರು ಉದ್ಘಾಟಿಸಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ‘ನಾಸ ಛ್ಛೇಧನ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ನಂತರ ನಡೆಯಲಿರುವ ಸಭಾ ಸಂಭ್ರಮ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಕಾಂತಾವರದ ಧರ್ಮದರ್ಶಿಗಳಾದ ಡಾ. ಕೆ. ಜೀವಂಧರ ಬಲ್ಲಾಳ್‌ ಬಾರಾಡಿಬೀಡು ಇವರು ವಹಿಸಲಿದ್ದಾರೆ. ಯಕ್ಷಗಾನ ಕಲಾ ಪೋಷಕರಾದ ಶ್ರೀ ಬಿ. ಭುಜಬಲಿ ಧರ್ಮಸ್ಥಳ, ಮೂಡಬಿದ್ರಿಯ ವಿಜಯಲಕ್ಷ್ಮೀ ಕ್ಯಾಶ್ಯೂಸ್ ಮಾಲಕರಾದ ಶ್ರೀ ಎ.ಕೆ. ರಾವ್, ಬಜಗೋಳಿಯ…

Read More

ಬಜಪೆ: ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಪಿ.ಯು ಕಾಲೇಜಿನಲ್ಲಿ ಯಕ್ಷಗಾನ ತರಬೇತಿ ಕೇಂದ್ರದ ಉದ್ಘಾಟನೆ ದಿನಾಂಕ 13-07-2023ರ ಗುರುವಾರದಂದು ನಡೆಯಿತು. ಯಕ್ಷಗಾನ ಕಲಾವಿದ, ಸಂಘಟಕ ಮತ್ತು ಪ್ರಸಂಗಕರ್ತರಾಗಿದ್ದ ತಿಮ್ಮಪ್ಪ ಗುಜರನ್ ತಳಕಲ ಅವರ ಸ್ಮರಣಾರ್ಥ ಯಕ್ಷಗಾನ ತರಬೇತಿ ಕೇಂದ್ರವನ್ನು ಕೊಳಂಬೆ ಕಜೆ ಮಹಿಷಂದಾಯ-ಖಂಡಿಗತ್ತಾಯ-ಪಿಲ್ಚಾಂಡಿ ದೈವಸ್ಥಾನದ ಆನುವಂಶಿಕ ಆಡಳಿತ ಮೊಕ್ತಸರ ಹರಿಪ್ರಸಾದ್ ಶೆಟ್ಟಿ ಉದ್ಘಾಟಿಸಿದರು. ಟ್ರಸ್ಟಿ ದೀಪಕ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ತಳಕಲ ಕಾಶೀ ವಿಶ್ವನಾಥೇಶ್ವರ ಯಕ್ಷಗಾನ ಮಂಡಳಿಯ ಸಂಚಾಲಕಿ ಯೋಗಾಕ್ಷಿ ತಳಕಲ, ತರಬೇತುದಾರರಾದ ಶ್ರಾವ್ಯ ತಳಕಲ, ಅನನ್ಯ ಮುರನಗರ, ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸುಧಾಕರ ಶೆಟ್ಟಿ ಉಪಸ್ಥಿತರಿದ್ದರು. ಯಕ್ಷಗಾನ ತರಬೇತಿ ಕೇಂದ್ರದ ಕಾರ್ಯದರ್ಶಿ ಯಶಸ್ವಿನಿ ವಂದಿಸಿ, ನಿರ್ದೇಶಕ ಶ್ರೀ ವಿನಯ್‌ ಕುಮಾರ್ ಅದ್ಯಪಾಡಿ ನಿರೂಪಿಸಿದರು.

Read More

ಬಂಟ್ವಾಳ: ಯಕ್ಷಕಲಾ ಪೊಳಲಿ, ಎಸ್. ಆರ್ ಹಿಂದೂ ಫ್ರೆಂಡ್ಸ್, ಪೊಳಲಿಯ ಷಷ್ಟಿ ಯಕ್ಷಗಾನ ಸಮಿತಿ ಹಾಗೂ ಜಗದೀಶ್ ನಲ್ಕ ಅಭಿಮಾನಿ ಬಳಗ ಇವುಗಳ ಸಹಭಾಗಿತ್ವದಲ್ಲಿ ಇತ್ತೀಚೆಗೆ ನಿಧನರಾದ ಶ್ರೀ ಸಸಿಹಿತ್ಲು ಮೇಳದ ಹಿರಿಯ ಕಲಾವಿದರಾದ ದಿ. ಜಗದೀಶ ನಲ್ಕೆಯವರ ಸಂಸ್ಮರಣಾ ಕಾರ್ಯಕ್ರಮವು ದಿನಾಂಕ 16-07-2023 ರಂದು ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆಯಿತು. ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್‌ ಶೆಟ್ಟಿ ಅವರು ಸಂಸ್ಮರಣಾ ಭಾಷಣಗೈದರು. ಪೊಳಲಿಯ ಯಕ್ಷಕಲಾ ಸಂಚಾಲಕ ವೆಂಕಟೇಶ್‌ ನಾವಡ ಪೊಳಲಿ, ಸಸಿಹಿತ್ಲು ಮೇಳದ ಸಂಚಾಲಕ ರಾಜೇಶ್‌ ಗುಜರನ್, ಚಂದ್ರಶೇಖರ ದೇವಾಡಿಗ ಪೊಳಲಿ, ಸೇಸಪ್ಪ ದೇವಾಡಿಗ ಪೊಳಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ . ದಿ. ಜಗದೀಶ್ ನಲ್ಕೆ ಯವರ ಪತ್ನಿ ಹೇಮಾವತಿ ಜಗದೀಶ್ ನಲ್ಕೆ ಅವರಿಗೆ ದಾನಿಗಳಿಂದ ಸಂಗ್ರಹಿಸಿದ ಮೊತ್ತವನ್ನು ನೀಡಲಾಯಿತು. ಬಿ ಜನಾರ್ದನ ಅಮ್ಮುಂಜೆ ಕಾರ್ಯಕ್ರಮ ನಿರೂಪಿಸಿದರು. ಸಂಸ್ಮರಣ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ‘ಕರ್ಣಪರ್ವ’ ಯಕ್ಷಗಾನ ಬಯಲಾಟ ನಡೆಯಿತು.

Read More

ಮಡಿಕೇರಿ: ಮಡಿಕೇರಿಯ ಸಮರ್ಥ ಕನ್ನಡಿಗರು ಸಂಸ್ಥೆಯ ವತಿಯಿಂದ ಆನ್ ಲೈನ್ ಗಾಯನ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದಾರೆ. ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನವಂಬರ್ ತಿಂಗಳಲ್ಲಿ ಸಂಸ್ಥೆ ಆಯೋಜಿಸುವ ಪ್ರತಿಭೋತ್ಸವದಲ್ಲಿ ಬಹುಮಾನ ನೀಡಲಾಗುವುದು. ಗಾಯನ ಸ್ಪರ್ಧೆಯ ನಿಯಮಗಳು: ವೈಯಕ್ತಿಕ ಸ್ಪರ್ಧೆ, ಭಕ್ತಿಗೀತೆಗಳನ್ನೇ ಹಾಡಬೇಕು. ಕಾಲಾವಕಾಶ 3 ನಿಮಿಷಗಳು, ಕರೋಕೆ ಬಳಸಿ ಹಾಡುವಂತಿಲ್ಲ, ಸ್ಪರ್ಧೆಗೆ ಯಾವುದೇ ಶುಲ್ಕವಿಲ್ಲ, ಹಾಡಿನ ವೀಡಿಯೋ ಕಳುಹಿಸಲು ಕೊನೆಯ ದಿನಾಂಕ 30-07-2023, ವೀಡಿಯೋ ಕಳುಹಿಸಬೇಕಾದ ಮೊಬೈಲ್ ಸಂಖ್ಯೆ :1) 9740875383- 5 ರಿಂದ 10 ವರ್ಷದ ಸ್ಪರ್ಧಾಳುಗಳಿಗೆ, 2)9632870102- 11 ರಿಂದ 18 ವರ್ಷದ ಸ್ಪರ್ಧಾಳುಗಳಿಗೆ, 3) 8150007006- 18 ವರ್ಷ ಮೇಲ್ಪಟ್ಟವರಿಗೆ. ಹೆಚ್ಚಿನ ಮಾಹಿತಿಗಳಿಗೆ “ಸಮರ್ಥ ಕನ್ನಡಿಗರು” ಜಿಲ್ಲಾ ಸಂಚಾಲಕಿ ಕೆ.ಜಯಲಕ್ಷ್ಮಿಯವರನ್ನು 9663119670 ಸಂಪರ್ಕಿಸಬಹುದಾಗಿದೆ.

Read More

ಮಂಗಳೂರು: ಎಲ್ಲ ಬಗೆಯ ಕಲೆಗಳ ಶಾಸ್ತ್ರ-ಪ್ರಯೋಗ-ಸೌಂದರ್ಯಗಳ ಆಯಾಮಗಳನ್ನು ವೈಜ್ಞಾನಿಕ ಹಾಗೂ ತಾತ್ತ್ವಿಕ ನೆಲೆಯಲ್ಲಿ ಅರ್ಥೈಸಿ-ಆಸ್ವಾದಿಸಿ-ಅನುಭವವನ್ನು ಬರಹಕ್ಕಿಳಿಸಲು ತರಬೇತಿ ನೀಡುವ ಉದ್ದೇಶವನ್ನು ಹೊತ್ತು ಹೊಸ ಬಗೆಯ ಶೈಕ್ಷಣಿಕ ಹಾಗೂ ವೃತ್ತಿಸಾಧ್ಯತೆಗಳನ್ನು ಹೊಂದಿರುವ ಪದವಿ ಕೋರ್ಸ್ ಗಳ ಬಗ್ಗೆ ಮಾಹಿತಿ ಕಾರ್ಯಕ್ರಮವು ದಿನಾಂಕ 13-07-2023 ರಂದು ನಗರದ ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ ನಡೆಯಿತು. ಪ್ರೊ. ವರದೇಶ ಹಿರೇಗಂಗೆಯವರು ನೆರೆದ ಕಲಾವಿದರಿಗೆ ಹಾಗೂ ಕಲಾಸಂಘಟನೆಗಳ ಸಹೃದಯರಿಗೆ ಮಾಹಿತಿ ನೀಡಿದರು. ಸಾಹಿತ್ಯದಿಂದ ತೊಡಗಿ ಸಿನೆಮಾದವರೆಗೂ, ಯಾವುದೇ ಬಗೆಯ ಕಲೆಗಳಲ್ಲಿ ಆಸಕ್ತಿಹೊಂದಿದ ವಿದ್ಯಾರ್ಥಿಗಳಿಗೆ ಬಿ.ಎ.(ಏಸ್ಥಟಿಕ್ಸ್ ಎಂಡ್ ಪೀಸ್ ಸ್ಟಡೀಸ್), ಎಂ. ಎ.(ಇಕೊಸೊಫಿಕಲ್ ಏಸ್ಥಟಿಕ್ಸ್) ಹಾಗೂ ಎಂ.ಎ.(ಆರ್ಟ್ ಎಂಡ್ ಪೀಸ್ ಸ್ಟಡೀಸ್) ಎಂಬ ಕೋರ್ಸ್ ಗಳ ಪ್ರವೇಶ ಪಡೆದು, ತಮ್ಮ ಕಲಾಜ್ಞಾನವನ್ನು ಸಮಗ್ರವಾಗಿ ವಿಸ್ತರಿಸಿಕೊಂಡು, ಸೂಕ್ತ ಉದ್ಯೋಗವನ್ನೂ ಪಡೆಯುವ ಅವಕಾಶವಿದೆ ಎಂದು ಪ್ರೊ. ಹಿರೇಗಂಗೆಯವರು ವಿವರಿಸಿದರು. ಮಣಿಪಾಲ ಎಕಾಡೆಮಿ ಆಫ್ ಹೈಯರ್ ಎಜುಕೇಶನ್(ಮಾಹೆ)ನಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಗಾಂಧಿಯನ್ ಸೆಂಟರ್ ಫಾರ್ ಫಿಲೊಸಾಫಿಕಲ್ ಆರ್ಟ್ಸ್ ಎಂಡ್ ಸಯನ್ಸಸ್’ ಎಂಬ ವಿಭಾಗದ ಮುಖ್ಯಸ್ಥರಾಗಿರುವ ಪ್ರೊ.…

Read More

ಉಡುಪಿ : ಯಕ್ಷಶಿಕ್ಷಣ ಟ್ರಸ್ಟ್ ಆಶ್ರಯದಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರ ಆಶಯದಂತೆ ಮೂಡುಬೆಳ್ಳೆಯ ಸೈಂಟ್ ಲಾರೆನ್ಸ್ ಪ್ರೌಢಶಾಲೆಯಲ್ಲಿ ಯಕ್ಷಶಿಕ್ಷಣ ತರಗತಿಯನ್ನು ಶಾಲಾ ಮುಖ್ಯಸ್ಥರಾದ ವಂದನೀಯ ಪ್ರದೀಪ್ ಕಾರ್ಡೋಝಾ ಇವರು ದಿನಾಂಕ : 18-07-2023ರಂದು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಯಕ್ಷಗಾನ ಗುರುಗಳಾದ ಶಾಂತಾರಾಮ ಆಚಾರ್ಯ ಉಪಸ್ಥಿತರಿದ್ದರು. ನಿವೃತ್ತ ಶಿಕ್ಷಕ ಪದ್ಮನಾಭ ನಾಯಕ್ ಶುಭಾಶಂನೆಗೈದು, ಶಾಲಾ ಮುಖ್ಯೋಪಾಧ್ಯಾಯಿನಿ ಸುನೀತಾ ಕಾಮತ್ ಸ್ವಾಗತಿಸಿ, ಯಕ್ಷಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪಾಧ್ಯಕ್ಷ ವಿ.ಜಿ ಶೆಟ್ಟಿ, ವಿದ್ಯಾಪ್ರಸಾದ್, ಶಿಕ್ಷಕರಾದ ಸುಧೀರ್ ನಾಯಕ್ ನಿರ್ವಹಿಸಿದ ಕಾರ್ಯಕ್ರಮದ ಕೊನೆಯಲ್ಲಿ ಜಾನ್ ಕ್ಯಾಸ್ಟಲೀನೋ ವಂದನಾರ್ಪಣೆಗೈದರು.

Read More

ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ, ಬೊಳುವಾರು – ಪುತ್ತೂರು ಇವರ ಸಂಯೋಜನೆಯಲ್ಲಿ ಬನ್ನೂರಿನ ಶ್ರೀ ಬಲಮುರಿ ವಿದ್ಯಾಗಣಪತಿ ದೇವಸ್ಥಾನದಲ್ಲಿ ತಿಂಗಳ ಮೂರನೇ ಮಂಗಳವಾರ ನಡೆಯುವ ಯಕ್ಷಗಾನ ತಾಳಮದ್ದಲೆಯು ದಿನಾಂಕ : 18-07-2023ರಂದು ‘ಭೀಷ್ಮ ವಿಜಯ’ ಆಖ್ಯಾನದೊಂದಿಗೆ ನಡೆಯಿತು. ಪುಳು ಈಶ್ವರ ಭಟ್ ಈ ಕಲಾ ಸೇವೆಯನ್ನು ನಡೆಸಿಕೊಟ್ಟರು. ಹಿಮ್ಮೇಳದಲ್ಲಿ ಭಾಗವತರಾಗಿ ಎಲ್.ಎನ್. ಭಟ್ ಬಟ್ಯಮೂಲೆ, ಶ್ರೀಪತಿ ನಾಯಕ್ ಅಜೇರ್, ಆನಂದ ಸವಣೂರು, ಚೆಂಡೆ ಮದ್ದಲೆಯಲ್ಲಿ ದಂಬೆ ಈಶ್ವರ ಶಾಸ್ತ್ರೀ, ಅಮೋಘ, ಆದಿತ್ಯ ಭಾಗವಹಿಸಿದರು. ಪಾತ್ರವರ್ಗದಲ್ಲಿ ಭೀಷ್ಮನ ಪಾತ್ರದಲ್ಲಿ ಶ್ರೀ ಗುಂಡ್ಯಡ್ಕ ಈಶ್ವರ ಭಟ್ ಮತ್ತು ಶ್ರೀ ಭಾಸ್ಕರ ಬಾರ್ಯ, ಪರಶುರಾಮನಾಗಿ ಶ್ರೀ ಭಾಸ್ಕರ ಶೆಟ್ಟಿ ಸಾಲ್ಮರ, ಸಾಲ್ವನಾಗಿ ಶ್ರೀ ಕುಂಬ್ಳೆ ಶ್ರೀಧರ ರಾವ್, ಅಂಬೆಯಾಗಿ ಶ್ರೀ ಚಂದ್ರಶೇಖರ ಭಟ್ ಬಡೆಕ್ಕಿಲ ಹಾಗೂ ವೃದ್ಧ ವಿಪ್ರನಾಗಿ ಶ್ರೀ ಸಚ್ಚಿದಾನಂದ ಪ್ರಭು ಭಾಗವಹಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಪ್ರೇಕ್ಷಕ ವೃಂದ ತಾಳಮದ್ದಲೆಯ ಮೆರುಗನ್ನು ಹೆಚ್ಚಿಸಿತು.

Read More

ಉಳ್ಳಾಲ: ಖ್ಯಾತ ನಾಟಕಕಾರ, ನಟ ಪಂಡಿತ್ ಹೌಸಿನ ಪಿಲಾರು ನಿವಾಸಿ ಗಿರೀಶ್ ಪಿಲಾರ್ (60) ಅಲ್ಪಕಾಲದ ಅಸೌಖ್ಯದಿಂದ ದಿನಾಂಕ 18-07-2023 ನೇ ಮಂಗಳವಾರ ಆಸ್ಪತ್ರೆಯಲ್ಲಿ ನಿಧನರಾದರು. ‘ದೇವೆರೆ ತೀರ್ಪು’, ‘ಆರ್ ಅತ್ತ್ ಈರ್’, ‘ಕೈಕೊರ್ಪೆರ್’, ‘ಬಲಿಪಡೆ ಉಂತುಲೆ’, ‘ಎಂಕುಲತ್‌ ನಿಕುಲು’, ‘ಎಂಕುಲ್ ಎನ್ನಿಲೆಕ ಅತ್ತ್’, ‘ಡಿಸೆಂಬರ್-1’ ಸೇರಿದಂತೆ 20ಕ್ಕೂ ಹೆಚ್ಚು ತುಳು ನಾಟಕಗಳನ್ನು ಬರೆದು ನಿರ್ದೇಶಿಸಿದ್ದರು. ಇವರು ಬರೆದು ನಿರ್ದೇಶಿಸಿದ ‘ದೇವೆರೆ ತೀರ್ಪು’ ನಾಟಕಕ್ಕೆ ಜಿಲ್ಲಾಮಟ್ಟದ ಪ್ರಶಸ್ತಿ ಲಭಿಸಿತ್ತು. ‘ಕೈಕೊರ್ಪೆರ್’ ನಾಟಕ ಬೆಳ್ತಂಗಡಿಯ ಪುಂಜಾಲ ಕಟ್ಟೆಯಲ್ಲಿ ಯಶಸ್ವಿ ಪ್ರದರ್ಶನ ಕಂಡು ಪ್ರಶಸ್ತಿ ಪಡೆದುಕೊಂಡಿತ್ತು. ‘ಬಲಿಪಡೆ ಉಂತುಲೆ’ ನಾಟಕವು 40 ಪ್ರದರ್ಶನ ಕಂಡಿತ್ತು. ನವನೀತ್ ಶೆಟ್ಟಿ ಕದ್ರಿ ರಚಿಸಿ ಶರವು ಕಲಾವಿದರು ನಟಿಸಿದ ‘ಕಾರ್ನಿಕದ ಶನೀಶ್ವರೆ’ ನಾಟಕವು ಗಿರೀಶ್ ಪಿಲಾರ್ ನಿರ್ದೇಶನದಲ್ಲಿ ಯಶಸ್ವೀ 30 ಪ್ರದರ್ಶನಗಳನ್ನು ಕಂಡಿತ್ತು. ದಿನೇಶ್ ಕಂಕನಾಡಿ ಅವರ ನಾಟಕ ‘ಮಾಸ್ಟ್ರ್ ದಾನೆ ಮನಿಪುಜೆರ್’ ನಾಟಕದಲ್ಲಿ ಪ್ರಧಾನ ಭೂಮಿಕೆಯಲ್ಲಿ ನಟಿಸಿದ್ದರು. ಹಲವು ನಾಟಕಗಳಲ್ಲಿ ಸ್ತ್ರೀ ಪಾತ್ರಧಾರಿಯಾಗಿ ಗಮನ ಸೆಳೆದಿದ್ದ ಇವರು…

Read More

ಬೆಂಗಳೂರು: ಶ್ರೀ ದುರ್ಗಾ ನೃತ್ಯ ಅಕಾಡೆಮಿ ಚಾರಿಟೇಬಲ್ ಟ್ರಸ್ಟ್ ಮೈಸೂರು (ರಿ) ಹಾಗೂ ಡಾ|| ಜೆ.ಪಿ. ಕಲ್ಪನಾ ಮತ್ತು ಕುಟುಂಬದವರು ಅರ್ಪಿಸುವ ಗುರು ವಿದುಷಿ ಶ್ರೀಮತಿ ಶ್ರೀವಿದ್ಯಾ ಶಶಿಧರ್ ಇವರ ಶಿಷ್ಯೆಯಾದ ಶ್ರೀಮತಿ ಪ್ರಣತಿ ಎಸ್ ವಾಟಾಳ್ ಇವರ ಭರತನಾಟ್ಯ ರಂಗಪ್ರವೇಶವು ದಿನಾಂಕ 23-07-2023ರ ಭಾನುವಾರ ಸಂಜೆ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯದ ನಿವೃತ್ತ ಪೊಲೀಸ್ ಮಹಾನಿರ್ದೇಶಕರಾದ ಶ್ರೀ ಶಂಕರ್ ಬಿದರಿ, ಬೆಂಗಳೂರಿನ ಸುಪ್ರಸಿದ್ಧ ಸಂಗೀತ ಮತ್ತು ನೃತ್ಯ ವಿದ್ವಾಂಸರು, ವಿಮರ್ಶಕರು ಮತ್ತು ಅಂಕಣಕಾರರಾದ ಸಂಗೀತ ಕಲಾರತ್ನ ಡಾ. ಎಂ. ಸೂರ್ಯಪ್ರಸಾದ್ ಹಾಗೂ ಕಾರ್ಯಕ್ರಮದಲ್ಲಿ ವಿಶೇಷ ಅಭ್ಯಾಗತರಾಗಿ ಮಂಗಳೂರಿನ ನೃತ್ಯಭಾರತಿ ಕದ್ರಿಯ ಕರ್ನಾಟಕ ಕಲಾಶ್ರೀ ಗುರು ಶ್ರೀಮತಿ ಗೀತಾ ಸರಳಾಯ, ಮಂಡ್ಯದ ಗುರುದೇವ ನೃತ್ಯ ಅಕಾಡೆಮಿಯ ಗುರು ಡಾ. ಶ್ರೀಮತಿ ಚೇತನಾ ರಾಧಾಕೃಷ್ಣ ಹಾಗೂ ಮಂಗಳೂರಿನ ಹೊಸಬೆಟ್ಟುವಿನ ಶ್ರೀ ಶಾರದಾ ನೃತ್ಯಾಲಯದ ನೃತ್ಯ ವಿದುಷಿ ಶ್ರೀಮತಿ ಭಾರತಿ ಸುರೇಶ್‌ ಭಾಗವಹಿಸಲಿದ್ದಾರೆ. ಈ…

Read More

ಮೂಡಬಿದ್ರಿ: ಹೊಸ ಹೊಸ ಪ್ರಯೋಗಗಳನ್ನು ಹಚ್ಚಿಕೊಂಡು, ಸಮಾಜಕ್ಕೆ ತನ್ನದೇ ಆದ ರೀತಿಯಲ್ಲಿ ಹಲವಾರು ಕೊಡುಗೆಗಳನ್ನು ನೀಡಿರುವ ಆಳ್ವಾಸ್ ವಿದ್ಯಾಸಂಸ್ಥೆಯ ಪದವಿ ಕಾಲೇಜಿನಲ್ಲಿ ದಿನಾಂಕ : 15-07-2023ರಂದು “ಭರತನಾಟ್ಯದಲ್ಲಿ ತಾಳಾವಧಾನ” ಎಂಬ ಹೊಸ ಪ್ರಯೋಗಗಳನ್ನು ಒಳಗೊಂಡ ಶೈಕ್ಷಣಿಕ ಸರ್ಟಿಫಿಕೇಟ್ ಕೋರ್ಸಿನ ಸಮಾರೋಪ ಸಮಾರಂಭ ನಡೆಯಿತು. ಇದನ್ನು ಭರತನಾಟ್ಯ ಕ್ಷೇತ್ರಕ್ಕೆಂದೇ ಅನ್ವೇಷಿಸಿ, ರೂಪಿಸಿದವರು ಯುವ ವಿದ್ವಾಂಸರಾದ ಭರತನಾಟ್ಯ ಕಲಾವಿದ ವಿದ್ವಾನ್ ಮಂಜುನಾಥ ಎನ್. ಪುತ್ತೂರು. ಈ ಕೋರ್ಸಿನಲ್ಲಿ ನಾಲ್ಕು ಅಧ್ಯಾಯಗಳಿದ್ದು, ಹೊಸ ಪ್ರಯೋಗಗಳನ್ನು ಮತ್ತು ಹಲವಾರು ಚಟುವಟಿಕೆಗಳನ್ನು ಒಳಗೊಂಡಿದೆ. ಆಳ್ವಾಸ್ ಪದವಿ ಕಾಲೇಜಿನ ಆರು ಮಂದಿ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಕುರಿಯನ್, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಶ್ರೀಮತಿ ಅಂಜಲಿ ಹಾಗೂ ವಿದ್ವಾನ್ ಮಂಜುನಾಥ ಎನ್. ಪುತ್ತೂರು ಉಪಸ್ಥಿತರಿದ್ದರು.

Read More