Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಪ್ರೊ. ಎಸ್. ವಿ. ಪರಮೇಶ್ವರ ಭಟ್ಟ ಪ್ರತಿಷ್ಠಾನ ಮಂಗಳೂರು ಇವರು ಕನ್ನಡ ವಿಭಾಗ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯ ಮಂಗಳೂರು ಇದರ ಸಹಯೋಗದಲ್ಲಿ ಆಯೋಜಿಸುವ ‘ಪ್ರೊ. ಎಸ್.ವಿ. ಪರಮೇಶ್ವರ ಭಟ್ಟ ಸಂಸ್ಮರಣ ಪ್ರಶಸ್ತಿ ಪ್ರದಾನ ಸಮಾರಂಭ – 2025’ ದಿನಾಂಕ 21 ಫೆಬ್ರವರಿ 2025ರ ಶುಕ್ರವಾರದಂದು ಸಂಜೆ 4.00 ಗಂಟೆಗೆ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಸಾನ್ನಿಧ್ಯ ಸಭಾಂಗಣದಲ್ಲಿ ನಡೆಯಲಿದೆ 2024ನೇ ಸಾಲಿನ ಪ್ರಶಸ್ತಿಗೆ ಖ್ಯಾತ ಸಾಹಿತಿಗಳು ಹಾಗೂ ಪ್ರಕಾಶಕರಾದ ವಾಮನ ನಂದಾವರ ಮತ್ತು ಶ್ರೀಮತಿ ಚಂದ್ರಕಲಾ ನಂದಾವರ ಆಯ್ಕೆಯಾಗಿದ್ದು, ನಿಟ್ಟೆ ವಿಶ್ವವಿದ್ಯಾನಿಲಯದ ಮಾನವಿಕ ವಿಭಾಗದ ಪ್ರಭಾರ ಮುಖ್ಯಸ್ಥರಾದ ಡಾ. ಸಾಯಿಗೀತ ಅಭಿನಂದಿಸಲಿದ್ದಾರೆ. 2025ನೇ ಸಾಲಿನ ಪ್ರಶಸ್ತಿಗೆ ಕಾಸರಗೋಡಿನ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಪಿ. ಶ್ರೀಕೃಷ್ಣ ಭಟ್ ಆಯ್ಕೆಯಾಗಿದ್ದು, ಮಂಗಳೂರಿನ ವಿಶ್ರಾಂತ ಕನ್ನಡ ಪ್ರಾಧ್ಯಾಪಕರಾದ ಡಾ. ಮೀನಾಕ್ಷಿ ರಾಮಚಂದ್ರ ಅಭಿನಂದಿಸಲಿದ್ದಾರೆ. ಎಸ್. ವಿ. ಪಿ. ಪ್ರತಿಷ್ಠಾನ, ಮಂಗಳೂರು ಇದರ ಅಧ್ಯಕ್ಷರಾದ ಡಾ. ಬಿ. ಎ. ವಿವೇಕ ರೈ ಇವರ…
“ಕಾವ್ಯೇಷು ನಾಟಕ ರಮ್ಯಂ.”ಎಂಬುದು ನಾಟಕದ ಬಗ್ಗೆ ಹಿತವಾದ ಭಾವವನ್ನು ವ್ಯಕ್ತಪಡಿಸುವ ಉಕ್ತಿ. ಶ್ರಾವ್ಯ ಮತ್ತು ದೃಶ್ಯ ಎರಡು ಮಾಧ್ಯಮವನ್ನೊಳಗೊಂಡು ಪ್ರೇಕ್ಷಕರನ್ನು ರಂಜಿಸುವುದು ನಾಟಕ. ಚಾರಿತ್ರಿಕ ನಾಟಕ, ಸಾಮಾಜಿಕ ನಾಟಕ, ಧಾರ್ಮಿಕಕ್ಕೆ ಸಂಬಂಧಪಟ್ಟ ನಾಟಕ, ಅವುಗಳಲ್ಲಿಯೂ ಗಂಭೀರ ನಾಟಕ ಮತ್ತು ಗಂಭೀರ ನಾಟಕವನ್ನು ಪಾತ್ರಗಳ ಮೂಲಕ ನಕ್ಕು ನಗಿಸುವ ಹಾಸ್ಯಮಯ ನಾಟಕಗಳೂ ಇವೆ. ನಾಟಕಗಳಲ್ಲಿ ತಮ್ಮ ನಟನಾ ಕೌಶಲ್ಯ ಮತ್ತು ವಿಡಂಬನಾತ್ಮಕ ವಾಕ್ಚಾತುರ್ಯದ ಮೂಲಕ ಸಮಾಜದ, ರಾಜಕೀಯದ ಅಂಕುಡೊಂಕುಗಳನ್ನು ಎತ್ತಿ ತೋರಿಸಿ, ಜನತೆಯನ್ನು ಮತ್ತು ಸಮಾಜವನ್ನು ಸರಿದಾರಿಗೆ ತರಲು ಪ್ರಯತ್ನ ಪಟ್ಟವರಲ್ಲಿ ಮಾಸ್ಟರ್ ಹಿರಣ್ಣಯ್ಯ ಒಬ್ಬರು. ಇವರ ಹೆಸರು ಕೇಳದವರು ಇಲ್ಲ, ಪರಿಚಯ ಇಲ್ಲದವರಿಲ್ಲ. ಇವರ ಮೂಲ ಹೆಸರು ನರಸಿಂಹಮೂರ್ತಿ. ಇವರು ಕೆ. ಹಿರಣ್ಣಯ್ಯ ಮತ್ತು ಶಾರದಮ್ಮ ದಂಪತಿಗಳ ಒಬ್ಬನೇ ಮಗನಾಗಿ 15 ಫೆಬ್ರವರಿ 1934 ರಂದು ಮೈಸೂರಿನಲ್ಲಿ ಜನಿಸಿದರು. ತಂದೆಯಿಂದಲೇ ರಂಗ ಶಿಕ್ಷಣ ಪಡೆದವರು. ಹಿರಣ್ಣಯ್ಯನವರ ಎಳವೆಯಲ್ಲಿಯೇ ಅವರ ತಂದೆ ತಮ್ಮ ಕುಟುಂಬವನ್ನು ಮದ್ರಾಸಿಗೆ ಸ್ಥಳಾಂತರಿಸಿದರು. ಮದ್ರಾಸಿಗೆ ಬಂದ ಮೇಲೆ ತಮಿಳು,…
ಬೆಂಗಳೂರು : ಕರ್ನಾಟಕ ಲಲಿತಕಲಾ ಅಕಾಡಮಿಯಿಂದ ಕೊಡಮಾಡುವ 2022-23ನೇ ಸಾಲಿನ ‘ವರ್ಣಶ್ರೀ’ ಪ್ರಶಸ್ತಿಗೆ ಖ್ಯಾತ ಚಿತ್ರ ಕಲಾವಿದೆ ವೀಣಾ ಶ್ರೀನಿವಾಸ್ ಆಯ್ಕೆಯಾಗಿದ್ದಾರೆ. ಮಂಗಳೂರು ಕೆ. ಎಸ್. ರಾವ್ ರೋಡ್ ನಿವಾಸಿಯಾಗಿರುವ ವೀಣಾ ಶ್ರೀನಿವಾಸ್ ಕಾವಿ ಕಲೆಯಲ್ಲಿ ಹೆಸರು ಗಳಿಸಿದ್ದಾರೆ. 16ನೆಯ ಶತಮಾನದ ಸಾಂಪ್ರದಾಯಕ ಕಲಾಪ್ರಕಾರವಾಗಿರುವ ಕಾವಿ ಕಲೆಯ ಪುನರುಜ್ಜಿವನ ಮತ್ತು ಪ್ರಚಾರದಲ್ಲಿ ದೊಡ್ಡ ಕೊಡುಗೆ ನೀಡಿರುವ ಇವರು ಯುವ ಜನಾಂಗದಲ್ಲಿಯೂ ಕಾವಿ ಕಲೆಯ ಬಗ್ಗೆ ಆಸಕ್ತಿ ಮೂಡಿಸುವಲ್ಲಿ ಶ್ರಮಿಸುತ್ತಿದ್ದಾರೆ. ಎಂ. ಆರ್. ಪಾವಂಜೆಯವರ ಶಿಷ್ಯೆ ಯಾಗಿರುವ ವೀಣಾ ಅವರ ಅಜ್ಜ ವೆಂಕಟ್ರಾಯ ಕಾಮತ್ ಮುಂಬಯಿಯ ಜೆ. ಜೆ. ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿದ್ದರು.
ಕಾಸರಗೋಡು : ಮನಸ್ಸಿಗೆ ಸಂತೋಷ ನೀಡುವ ಸಂಗೀತದಿಂದ ಆತಂಕ ನೆಮ್ಮದಿ ಒತ್ತಡ, ನಿವಾರಣೆಯಾಗುತ್ತದೆ. ಸಂಗೀತ ಆಲಿಸುವ ಮೂಲಕ ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ. ಜೀವನದ ಪ್ರತಿಯೊಂದು ಕ್ಷಣದಲ್ಲೂ ಪ್ರಮುಖ ಪಾತ್ರವಹಿಸುವ ಸಂಗೀತ ಮನಸು ಕದಡಿದಾಗ ಶಾಂತಗೊಳಿಸುತ್ತದೆ. ಸಂಗೀತದಿಂದ ಗುರುತಿಸಿಕೊಳ್ಳಬೇಕು. ಕರೋಕೆ ಗಾಯಕರ ಸಮ್ಮಿಲನ ಕಾರ್ಯಕ್ರಮದ ಮೂಲಕ ಸಂಗೀತ ಕಲಾವಿದರನ್ನು ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದು ಮಂಗಳೂರು ನಗರ ಸಹಾಯಕ ಯೋಜನಾ ಅಧಿಕಾರಿ, ಖ್ಯಾತ ರಂಗಭೂಮಿ ಹಾಗೂ ಸಂಗೀತ ಕಲಾವಿದ ನಾಗೇಂದ್ರ ಮಂಗಳೂರು ಅವರು ಹೇಳಿದರು. ಸಾಮಾಜಿಕ-ಸಾಂಸ್ಕೃತಿಕ ಸಂಸ್ಥೆಯಾದ ರಂಗಚಿನ್ನಾರಿ ಕಾಸರಗೋಡು ಇದರ ಸಂಗೀತ ಘಟಕ ಸ್ವರ ಚಿನ್ನಾರಿ ನೇತೃತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಬೆಂಗಳೂರು ಇದರ ಸಹಯೋಗದೊಂದಿಗೆ ದಿನಾಂಕ 09 ಫೆಬ್ರವರಿ 2025 ರಂದು ಕರಂದಕ್ಕಾಡ್ ನ ಪದ್ಮಗಿರಿ ಕಲಾ ಕುಟೀರದಲ್ಲಿ ಆಯೋಜಿಸಿದ ಪ್ರತಿಭಾನ್ವಿತ ಕರೋಕೆ ಗಾಯಕರ ಸಮ್ಮಿಲನ ‘ಅಂತರ್ಧ್ವನಿ’ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಖ್ಯಾತ ವೈದ್ಯರಾದ ಡಾ. ಕೆ. ಶಾನುಭೋಗ್ ರವರು…
ಬೆಂಗಳೂರು : ಅಂತರಂಗ ಬಹಿರಂಗ ತಂಡ ಪ್ರಸ್ತುತ ಪಡಿಸುವ ‘ಅನುಮಾನದ ಅವಾಂತರ’ ಹಾಸ್ಯ ನಾಟಕ ಪ್ರದರ್ಶನವನ್ನು ದಿನಾಂಕ 16 ಫೆಬ್ರವರಿ 2025ರಂದು ಸಂಜೆ 7-00 ಗಂಟೆಗೆ ಬಸವನಗುಡಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಟರ್ ವಾಡಿಯಾ ಸಭಾಂಗಣದಲ್ಲಿ ಆಯೋಜಿಲಾಗಿದೆ. ಮೋಲಿಯರ್ ಮೂಲ ಕಥೆಯನ್ನು ಎಂ. ರಾಮಾರಾವ್ ಅನುವಾದಿಸಿದ್ದು, ಎಸ್. ವಿಕಾಸ್ ನಿರ್ದೇಶನ ಮಾಡಿದ್ದಾರೆ. ಬುಕ್ ಮೈ ಶೋನಲ್ಲಿ ಟಿಕೆಟ್ ಲಭ್ಯವಿದ್ದು, ನೇರ ಬುಕ್ಕಿಂಗ್ಗಾಗಿ 86605 47776 ಸಂಖ್ಯೆಯನ್ನು ಸಂಪರ್ಕಿಸಬಹುದು. ಹವ್ಯಾಸಿ ರಂಗಭೂಮಿಯಲ್ಲಿ ಸಾಕಷ್ಟು ಪರಿಣಿತಿಯನ್ನು ಪಡೆದಂತಹ ಹತ್ತಾರು ಹುಡುಗರು ಸೇರಿ ಸ್ಥಾಪಿಸಲ್ಪಟ್ಟ ಸಂಸ್ಥೆಯೇ ‘ಅಂತರಂಗ ಬಹಿರಂಗ’. ಈ ತಂಡದ ಮುಖ್ಯ ಉದ್ದೇಶ ಹೊಸ ಕಲಾವಿದರಿಗೆ ಅವಕಾಶ ಹಾಗೂ ಆಧುನಿಕ ಕಾಂಟೆಂಪರರಿ ವಿಷಯ ಆಧಾರಿತ ಕಥಾ ವಸ್ತು ಕೊಡುವುದು. ಅದರಂತೆಯೇ ನಡೆದು ಬರುತ್ತಿದ್ದು, ಇದರ ಜೊತೆಗೆ ನಮ್ಮ ನಾಡಿನ ಸಂಸ್ಕೃತಿ, ಸಂಸ್ಕಾರ, ಸಾಂಸ್ಕೃತಿಕ ವಿಚಾರಧಾರೆಗಳನ್ನು ಮುಂದಿನ ಪೀಳಿಗೆಗೆ ಒಯ್ಯುವುದು ಹಾಗೂ ಆದಷ್ಟು ಹಳೆ ಪ್ರೇಕ್ಷಕರ ಜೊತೆ ಜೊತೆಗೆ ಹೊಸ ಪ್ರೇಕ್ಷಕರನ್ನು ರಂಗಭೂಮಿಗೆ ಆಕರ್ಷಿಸುವುದು…
ಬೆಂಗಳೂರು : ಕರ್ನಾಟಕ ಲಲಿತಕಲಾ ಅಕಾಡಮಿಯಿಂದ ಕೊಡಮಾಡುವ ‘ವರ್ಣಶ್ರೀ’ ಪ್ರಶಸ್ತಿಗೆ ಖ್ಯಾತ ಚಿತ್ರ ಕಲಾವಿದ ಸೈಯ್ಯದ್ ಆಸಿಫ್ ಅಲಿ ಆಯ್ಕೆಯಾಗಿದ್ದಾರೆ. ಸೈಯದ್ ಆಸಿಫ್ ಮೂಲತಃ ಮಂಗಳೂರಿನವರಾಗಿದ್ದು ಫೈನ್ ಆರ್ಟ್ನಲ್ಲಿ ಹೆಸರು ಗಳಿಸಿದ್ದಾರೆ. ಆಧುನಿಕ ಮತ್ತು ಪ್ರಾಚೀನ ಕಲೆಗಳ ಬೆಳವಣಿಗೆಗೆ ದೊಡ್ಡ ಕೊಡುಗೆ ನೀಡಿರುವ ಇವರು ಸಾಂಸ್ಕೃತಿಕ ಹಾಗೂ ಪಾರಂಪರಿಕ ಕಲೆಗಳಿಗೆ ಸಂಬಂಧಿಸಿದಂತೆ ಹಲವಾರು ಪ್ರದರ್ಶನಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಇವರು ಮಂಗಳೂರಿನ ಮಹಾಲಸಾ ಕಾಲೇಜ್ ಆಫ್ ವಿಶುವಲ್ ಆರ್ಟ್ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಮಂಗಳೂರು : ಪ್ರೊ. ಎಸ್.ವಿ. ಪರಮೇಶ್ವರ ಭಟ್ಟ ಪ್ರತಿಷ್ಠಾನ ಮಂಗಳೂರು ಇದರ ವತಿಯಿಂದ ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯ ಕನ್ನಡ ವಿಭಾಗದ ಸಹಯೋಗದಲ್ಲಿ ‘ಪ್ರೊ. ಎಸ್.ವಿ. ಪರಮೇಶ್ವರ ಭಟ್ಟ ಸಂಸ್ಮರಣ ಪ್ರಶಸ್ತಿ ಪ್ರದಾನ ಸಮಾರಂಭ -2025’ವನ್ನು ದಿನಾಂಕ 21 ಫೆಬ್ರವರಿ 2025ರಂದು ಸಂಜೆ 4-00 ಗಂಟೆಗೆ ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಸಾನ್ನಿಧ್ಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಸಾಹಿತಿಗಳು, ಪ್ರಕಾಶಕರಾದ ಡಾ. ವಾಮನ ನಂದಾವರ ಮತ್ತು ಶ್ರೀಮತಿ ಚಂದ್ರಕಲಾ ನಂದಾವರ ಇವರು 2024ನೆಯ ಸಾಲಿನ ಪ್ರಶಸ್ತಿ ಪುರಸ್ಕೃತರು ಹಾಗೂ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಪಿ. ಶ್ರೀಕೃಷ್ಣ ಭಟ್ ಇವರು 2025ನೆಯ ಸಾಲಿನ ಪ್ರಶಸ್ತಿ ಪುರಸ್ಕೃತರು. ಈ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನು ಎಸ್.ವಿ.ಪಿ. ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಬಿ.ಎ. ವಿವೇಕ ರೈ ಇವರು ವಹಿಸಲಿದ್ದು, ಸಂತ ಅಲೋಶಿಯಸ್ ಸ್ವಾಯತ್ತ ಮಹಾವಿದ್ಯಾಲಯದ ಕುಲಸಚಿವರಾದ ಡಾ. ಅಲ್ವಿನ್ ವಿ. ಡೆ’ಸಾ ಇವರು ಶುಭಾಶಂಸನೆ ಗೈಯಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಅಂಕಿತ ಪುಸ್ತಕ ಬೆಂಗಳೂರು…
ಮಂಗಳೂರು: ಮಂಗಳೂರಿನ ಆರ್ಟ್ ಕೆನರಾ ಟ್ರಸ್ಟ್ ವತಿಯಿಂದ ಖ್ಯಾತ ಕವಿ ಬಿ.ಆರ್. ಲಕ್ಷ್ಮಣ ರಾವ್ ಅವರೊಂದಿಗಿನ ಸಂವಾದ ಕಾರ್ಯಕ್ರಮ ದಿನಾಂಕ 09 ಫೆಬ್ರವರಿ 2025 ರಂದು ಮಂಗಳೂರಿನ ಕೊಡಿಯಾಲ್ ಗುತ್ತು ಕಲೆ ಸಂಸ್ಕೃತಿ ಕೇಂದ್ರದಲ್ಲಿ ನಡೆಯಿತು. ಸಂವಾದದಲ್ಲಿ ಮಾತನಾಡಿದ ಖ್ಯಾತ ಕವಿ ಬಿ.ಆರ್. ಲಕ್ಷ್ಮಣ ರಾವ್ “ನನ್ನನ್ನು ಭಾವಗೀತೆಗಳಿಂದಲೇ ಗುರುತಿಸುತ್ತಾರೆ. ಭಾವಗೀತೆಗಳು ಅರಮನೆಯ ಹೆಬ್ಬಾಗಿಲಿನಂತೆ. ಒಳಗಡೆಗೂ ಹೋಗಬೇಕು. ಭಾವಗೀತೆಗಳ ಬಗ್ಗೆ ಮಾತನಾಡುವಾಗ ಅದರಲ್ಲಿರುವ ಕಾವ್ಯಾಂಶಗಳ ಬಗ್ಗೆ ಮಾತಾಡಿ, ನನ್ನ ಕವನಗಳು ಜನಮಾನಸದಲ್ಲಿ ಉಳಿದಿದೆ ಎನ್ನುವಾಗ ಸಾರ್ಥಕತೆ ಮತ್ತು ಕವನ ಪದ್ಯವಾಗಿ ಹಾಡಾಗಿ ಉಳಿದಾಗ ಖುಷಿಯಾಗುತ್ತದೆ. ಗಂಭೀರ ಕವನಗಳೂ ನವ್ಯ ಕವನಗಳೂ ಉಳಿದಿವೆ ಎಂದ ಅವರು ಮೂವತ್ತು ವರ್ಷಗಳ ಹಿಂದೆ ಕ್ಯಾಸೆಟ್ ಕಾಲದಲ್ಲಿ ಮದ್ರಾಸಿಗೆ ಹೋಗಿದ್ದೆವು ರೆಕಾರ್ಡ್ಗೆ. ಅಲ್ಲಿಂದ ರೆಕಾರ್ಡ್ ಮುಗಿಸಿ ರೈಲಿನಲ್ಲಿ ನಾನು ಸಿ. ಅಶ್ವತ್ ಬಾಲಿ ವಾಪಾಸು ಬರಲು ನಿಂತಿದ್ದಾಗ ಇಬ್ಬರು ಪೊಲೀಸರು ಬಂದು ಅಶ್ವತ್ರಿಗೆ ಅಡ್ಡ ಬಿದ್ದು ನಮಸ್ಕರಿಸಿ ನಿಮ್ಮ ಅಭಿಮಾನಿಗಳು ನಾವು ನಿಮ್ಮ ಹಾಡು ಕೇಳಿ ಮಲಗೋದು…
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತು 2023ರ ಜನವರಿಯಿಂದ ಡಿಸಂಬರ್ ಅಂತ್ಯದವರೆಗೂ ಪ್ರಕಟವಾದ ಕೃತಿಗಳನ್ನು ಒಟ್ಟು 52 ದತ್ತಿಗಳ 56 ಪ್ರಶಸ್ತಿಗಳಿಗೆ ಬರಹಗಾರರಿಂದ ಪುಸ್ತಕಗಳನ್ನು ಆಹ್ವಾನಿಸಿತ್ತು. ಇದರಲ್ಲಿ ವಸುದೇವ ಭೂಪಾಲಂ ದತ್ತಿಯಲ್ಲಿ ನಾಲ್ಕು ಪುಸ್ತಕಗಳಿಗೂ ಮತ್ತು ರತ್ನಾಕರವರ್ಣಿ-ಮುದ್ದಣ ಅನಾಮಿಕ ದತ್ತಿಯಲ್ಲಿ ಎರಡು ಪುಸ್ತಕಗಳಿಗೂ ಬಹುಮಾನ ನೀಡಲಾಗುತ್ತದೆ. ಇದಕ್ಕೆ ರಾಜ್ಯ, ದೇಶ ಮತ್ತು ವಿದೇಶಗಳಿಂದಲೂ ನಾಲ್ಕು ಸಾವಿರ ಕೃತಿಗಳು ಬಂದಿದ್ದು ಅವುಗಳಲ್ಲಿ ಹನ್ನೆರಡು ಜನ ಪರಿಣಿತರ ಸಮಿತಿ ಪ್ರಾಥಮಿಕವಾಗಿ ಆಯ್ಕೆ ಮಾಡಿತ್ತು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರ ನೇತೃತ್ವದ ಸಮಿತಿ ಪಾರದರ್ಶಕವಾಗಿ ಕೆಳಕಂಡ ಅಂತಿಮ ಪಟ್ಟಿಯನ್ನು ಆಯ್ಕೆ ಮಾಡಿದ್ದು, ಶೀಘ್ರವಾಗಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಧ್ಯಕ್ಷರು ತಿಳಿಸಿದ್ದಾರೆ. ಈ ಪುಸ್ತಕ ದತ್ತಿ ಪ್ರಶಸ್ತಿಗಳಿಂದ ‘ಪುಸ್ತಕ ಸಂಸ್ಕೃತಿ ನಮ್ಮಲ್ಲಿ ಇನ್ನಷ್ಟು ಬೆಳೆಯಲಿದೆ ಎಂದು ಆಶಿಸಿರುವ ಅವರು ಯುವಜನರು ಪುಸ್ತಕಗಳನ್ನು ಪ್ರಕಟಿಸಲು ಇದು ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದಿದ್ದಾರೆ. ಬರಹಗಾರರ ಸಂಖ್ಯೆ ಇನ್ನಷ್ಟು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕನ್ನಡಾಭಿಮಾನಿಗಳು ಇನ್ನಷ್ಟು ‘ಪುಸ್ತಕ…
ಉಡುಪಿ : ಆದರ್ಶ ಆಧ್ಯಾಪಕ, ಕವಿ, ಲೇಖಕ, ಯಕ್ಷಗಾನ ಕಲಾವಿದ, ತಾಳಮದ್ದಳೆ ಅರ್ಥದಾರಿ ಕೀರ್ತಿಶೇಷ ಅಂಬಾತನಯ ಮುದ್ರಾಡಿಯವರ ಸಂಸ್ಮರಣೆಯಲ್ಲಿ ಉಡುಪಿ ರಂಗಭೂಮಿಯು ತಲ್ಲೂರು ಫ್ಯಾಮಿಲಿ ಟ್ರಸ್ಟಿನ ಸಹಯೋಗದಲ್ಲಿ ನೀಡುವ ‘ಪುಸ್ತಕ ಪ್ರಶಸ್ತಿ’ಯ ದ್ವಿತೀಯ ವರ್ಷದ ಪುರಸ್ಕಾರಕ್ಕೆ ಬೆಂಗಳೂರಿನ ಉಪನ್ಯಾಸಕರಾದ ಎನ್.ಸಿ. ಮಹೇಶ್ ಇವರ ‘ಸಾಕುತಂದೆ ರೂಮಿ’ ನಾಟಕ ಕೃತಿಯು ಆಯ್ಕೆಯಾಗಿದೆ. ಮೂವರು ತೀರ್ಪುಗಾರರ ಸಮಿತಿಯ ಸಲಹೆಯಂತೆ ಈ ಕೃತಿಯನ್ನು ಆಯ್ಕೆ ಮಾಡಲಾಗಿದೆ ಎಂದು ರಂಗಭೂಮಿ (ರಿ.) ಉಡುಪಿ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟರು ತಿಳಿಸಿರುವರು. ಅಂಬಾತನಯ ಮುದ್ರಾಡಿಯವರ ಸಂಸ್ಮರಣೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಪ್ರಕಟವಾದ ಕನ್ನಡ ನಾಟಕ ಕೃತಿಗೆ ನೀಡಲಾಗುವ ದ್ವಿತೀಯ ವರ್ಷದ ಈ ಪ್ರಶಸ್ತಿಯು ಪ್ರಶಸ್ತಿ ಪತ್ರ, ಸ್ಮರಣಿಕೆ ಮತ್ತು ರೂಪಾಯಿ ಹದಿನೈದು ಸಾವಿರ ನಗದು ಬಹುಮಾನವನ್ನು ಒಳಗೊಂಡಿದ್ದು, ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 27 ಮಾರ್ಚ್ 2025ರಂದು ‘ವಿಶ್ವರಂಗಭೂಮಿ ದಿನಾಚರಣೆ’ಯಂದು ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಜರುಗಲಿದೆ. ಕಳೆದ ವರ್ಷ ಈ ಪ್ರಶಸ್ತಿಯು ರಂಗಭೂಮಿಗೆ…