Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು : ಅಯೋಧ್ಯಾ ಪಬ್ಲಿಕೇಷನ್ಸ್ ಪ್ರಕಟಿಸುವ ಡಾ. ಮೀನಾಕ್ಷಿ ರಾಮಚಂದ್ರ ಇವರ ‘ನರಾಧಮರ ನಡುವೆ’ ಕಾದಂಬರಿ ಲೋಕಾರ್ಪಣೆ ಕಾರ್ಯಕ್ರಮವು ಬೆಂಗಳೂರಿನ ಬಸವನ ಗುಡಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಇದರ ವಾಡಿಯಾ ಸಭಾಂಗಣದಲ್ಲಿ ದಿನಾಂಕ 02-09-2023ರಂದು ಸಂಜೆ ಗಂಟೆ 5ಕ್ಕೆ ನಡೆಯಲಿದೆ. ವಿಂಗ್ ಕಮಾಂಡರ್ ಬಿ. ಎಸ್. ಸುದರ್ಶನ್, ಕ್ಯಾಪ್ಟನ್ ನವೀನ ನಾಗಪ್ಪ, ರೋಹಿತ್ ಚಕ್ರತೀರ್ಥ ಹಾಗೂ ಮೋಹನ ವಿಶ್ವ ಇವರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಮಂಗಳೂರು : ತುಳುನಾಡ ತುಡರ್ (ರಿ.) ಪ್ರಸ್ತುತಪಡಿಸುವ ‘ದೈವೊದ ಬೂಳ್ಯ’ ನಾಟಕದ ಪ್ರದರ್ಶನವು ರೋಮಾಂಚನಕಾರಿ ರಂಗತಂತ್ರದೊಂದಿಗೆ ದಿನಾಂಕ 02-09-2023ರ ಸಂಜೆ 5.30ಕ್ಕೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ. ತುಳುನಾಡಿನ ಬೀಡೊಂದರಲ್ಲಿ ಸುಮಾರು 400 ವರ್ಷಗಳಷ್ಟು ಹಿಂದೆ ಜರಗಿದ ಸತ್ಯಘಟನೆಯೊಂದರ ಪರತಿಮಂಗಣೆ ಪಾಡ್ದಣದ ಕಥಾನಕವನ್ನು ಆಧರಿಸಿದ ಬಿ.ಕೆ.ಗಂಗಾಧರ ಕಿರೋಡಿಯನ್ ನಿರ್ದೇಶನದಲ್ಲಿ ಸಿನೆಮಾ ರೂಪದಲ್ಲಿ ನೋಮೊದ ಬೂಳ್ಯ ಪ್ರದರ್ಶನವಾಗಿತ್ತು. ಇದೇ ಕೃತಿ ದೈವೊದ ಬೂಳ್ಯ ಎಂಬ ಹೆಸರಿನಲ್ಲಿ ಕೆಲವು ದೃಶ್ಯಗಳ ಬದಲಾವಣೆಯೊಂದಿಗೆ ಹೊಸ ರೀತಿಯ ರೋಮಾಂಚನಕಾರಿ ರಂಗತಂತ್ರದೊಂದಿಗೆ ಗಂಗಾಧರ ಕಿರೋಡಿಯನ್ ನಿರ್ದೇಶನ ಹಾಗೂ ನಯನಾ ಕೋಟ್ಯಾನ್ ಸಹನಿರ್ದೇಶನದಲ್ಲಿ ಮೂಡಿಬಂದಿದೆ. ಈ ನಾಟಕಕ್ಕೆ ವಿದ್ವಾಂಸ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹಾಗೂ ಶ್ರೀ ಬಿ.ಕೆ ಗಂಗಾಧರ ಕಿರೋಡಿಯಾನ್ ಗೀತೆ ರಚನೆ ಮಾಡಿದ್ದು, ಶ್ರೀ ಎ.ಕೆ ವಿಜಯ (ಕೋಕಿಲಾ) ಸಂಗೀತ ನೀಡಿರುವ ಈ ನಾಟಕಕ್ಕೆ ಶ್ರೀ ವಿದ್ದು ಉಚ್ಚಿಲ್ ಇವರ ಸಹಕಾರವಿದೆ.
ನಮ್ಮ ನಾಡಿನ ಗಂಡುಕಲೆ ಯಕ್ಷಗಾನ. ಹಿಮ್ಮೇಳದಲ್ಲಿ ಭಾಗವತರ ಭಾಗವತಿಕೆಗೆ ಮುಮ್ಮೇಳದ ಕಲಾವಿದರು ಭಾರೀ ವೇಷಧರಿಸಿ ನಾಟ್ಯ ಹಾಗೂ ಮಾತುಗಾರಿಕೆಯೊಂದಿಗೆ ಅಭಿನಯಿಸುವ ಅಬ್ಬರದ ಕಲೆ ಇದಾಗಿದೆ. ತಲೆತಲಾಂತರಗಳಿಂದ ಪುರುಷರೇ ಈ ಕಲೆಯನ್ನು ಅರಸಿಕೊಂಡು ಬಂದಿರುವರು. ಆದರೆ ಈಗ ಕಾಲ ಬದಲಾಗಿದೆ. ಸ್ತ್ರೀಯರು ಸಹ ಎಲ್ಲಾ ಕ್ಷೇತ್ರದಲ್ಲಿ ಮುಂದುವರಿದು ಇಂದು ಯಕ್ಷಗಾನದಲ್ಲೂ ಅನನ್ಯ ಪ್ರತಿಭೆಯಾಗಿ ಹೊರಹೊಮ್ಮುತ್ತಿರುವರು. ಅಂತಹ ಅನನ್ಯ ಯಕ್ಷಗಾನ ಪ್ರತಿಭೆಯಲ್ಲಿ ನಾವಿಂದು ಓರ್ವ ಮಹಿಳಾ ಯಕ್ಷಗಾನ ಕಲಾವಿದೆಯ ಬಗ್ಗೆ ತಿಳಿಯೋಣ. ದಕ್ಷಿಣ ಕನ್ನಡ ಜಿಲ್ಲೆಯ ಪೇಜಾವರ ಟಿ.ಆರ್. ಸುಂದರ್ ಭಟ್ ಹಾಗೂ ಶ್ರೀಮತಿ ವಾರಿಜ ಎಸ್. ಭಟ್ ಇವರ ಮಗಳಾಗಿ 01.09.1974ರಂದು ಪೂರ್ಣಿಮಾ ಪ್ರಶಾಂತ್ ಶಾಸ್ತ್ರಿ ಅವರ ಜನನ. ಬಿ.ಎ. ಇನ್ ಹೋಂ ಸೈನ್ಸ್ ಇವರ ವಿದ್ಯಾಭ್ಯಾಸ. ಪೂರ್ಣಿಮಾ ಅವರು ಯಕ್ಷಗಾನ ರಂಗಕ್ಕೆ ಬರಲು ಮೂಲ ಪ್ರೇರಣೆ ಇವರ ತಂದೆ. ಯಕ್ಷಗಾನ ಗುರುಗಳು:- ಶ್ರೀ ಬಾಲಸುಬ್ರಮಣ್ಯ ಭಟ್, ರಾಮಚಂದ್ರ ಭಟ್ ಎಲ್ಲೂರು, ರವಿ ಅಲೆವೂರಾಯ, ಶ್ರೀಮತಿ ಪೂರ್ಣಿಮಾ ಯತೀಶ್ ರೈ. ರಂಗಕ್ಕೆ ಹೋಗುವ…
ವಿಟ್ಲ: ಯಕ್ಷಭಾರತ ಸೇವಾ ಪ್ರತಿಷ್ಠಾನ ಇದರ 8ನೇ ವರ್ಷದ ‘ವಿಟ್ಲ ಯಕ್ಷೋತ್ಸವ 2023’ ಕಾರ್ಯಕ್ರಮವು ವಿಟ್ಲ ಶ್ರೀ ಭಗವತೀ ದೇವಸ್ಥಾನದ ರಂಗಮಂಟಪದಲ್ಲಿ ನಡೆಯಲಿದೆ. ದಿನಾಂಕ 02-09-2023ರಂದು ಮಧ್ಯಾಹ್ನ 3ರಿಂದ ಮಕ್ಕಳ ಯಕ್ಷಗಾನ, ತೆಂಕುತಿಟ್ಟಿನ ನುರಿತ ಕಲಾವಿದರಿಂದ ಯಕ್ಷಗಾನ, ಸಮ್ಮಾನ ಹಾಗೂ ಸಭಾ ಕಾರ್ಯಕ್ರಮ ಹಾಗೂ ಸನ್ಮಾನ ಕಾರ್ಯಕ್ರಮವನ್ನೂಳಗೊಂಡಿದೆ. ಅಂದು ಮದ್ಯಾಹ್ನ ಘಂಟೆ 3.00ಕ್ಕೆ ಯಕ್ಷಭಾರತ ಸೇವಾ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ನಾಟ್ಯ ಗುರು ಸಬ್ಬಣಕೋಡಿ ರಾಮ ಭಟ್ ಅವರ ನಿರ್ದೇಶನದಲ್ಲಿ ‘ಕದಂಬ ಕೌಶಿಕೆ’ ಯಕ್ಷಗಾನ ಬಯಲಾಟ ನಡೆಯಲಿದೆ. ರಾತ್ರಿ ಘಂಟೆ 7.00ರಿಂದ ತೆಂಕು ತಿಟ್ಟಿನ ನುರಿತ ಕಲಾವಿದರಿಂದ ‘ಸುದರ್ಶನೋಪಖ್ಯಾನ’ ಎಂಬ ಬಯಲಾಟ ನಡೆಯಲಿದ್ದು, ಈ ಕಾರ್ಯಕ್ರಮದ ಹಿಮ್ಮೇಳದಲ್ಲಿ ಭಾಗವತಾರಾಗಿ ಶ್ರೀ ರವಿಚಂದ್ರ ಕನ್ನಡಿಕಟ್ಟೆ ಹಾಗೂ ದೇವರಾಜ್ ಆಚಾರ್ಯ, ಚಂಡೆ,ಮದ್ದಳೆಯಲ್ಲಿ ಶ್ರೀ ಚಂದ್ರಶೇಖರ ಸಾರಪಾಡಿ ಮತ್ತು ಶ್ರೀಧರ್ ವಿಟ್ಲ, ಚಕ್ರತಾಳದಲ್ಲಿ ವಸಂತ ವಾಮದಪದವು ಸಹಕರಿಸಲಿದ್ದಾರೆ. ಮುಮ್ಮೇಳದ ಪ್ರಧಾನ ಪಾತ್ರಗಳಲ್ಲಿ ವಸಂತ ಗೌಡ ಕಾಯರ್ತಡ್ಕ, ಚಂದ್ರಶೇಖರ ಧರ್ಮಸ್ಥಳ, ಹರೀಶ್ ಶೆಟ್ಟಿ ಮಣ್ಣಾಪು, ಬಾಲಕೃಷ್ಣ ಗೌಡ ಮಿಜಾರ್,…
ಮಂಗಳೂರು : ಶಕ್ತಿ ನಗರದಲ್ಲಿನ ಶಕ್ತಿ ವಿದ್ಯಾ ಸಂಸ್ಥೆಗಳು ಮತ್ತು ಮಂಗಳೂರು ಸಂಸ್ಕೃತ ಸಂಘ ಕೊಡಿಯಾಲ್ ಬೈಲ್ ಮಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ದಿನಾಂಕ 26-08-2023ರಂದು ‘ಸಂಸ್ಕೃತೋತ್ಸವ’ವು ಅದ್ದೂರಿಯಾಗಿ ನೆರವೇರಿತು. ಶಕ್ತಿ ವಿದ್ಯಾ ಸಂಸ್ಥೆಗಳ ಸಂಸ್ಥಾಪಕರಾದ ಡಾ. ಕೆ.ಸಿ. ನಾಯಕ್ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಕ್ತಿ ವಸತಿ ಶಾಲೆಯ ಪ್ರಾಚಾರ್ಯರಾದ ಶ್ರೀ ರವಿಶಂಕರ ಹೆಗಡೆ ಉಪಸ್ಥಿತರಿದ್ದು, ಸಂಸ್ಕೃತೋತ್ಸವದ ನಿಮಿತ್ತ ನಡೆದ ಎಲ್ಲಾ ಸಂಸ್ಕೃತ ಸ್ಪರ್ಧೆಗಳ ಉದ್ಘಾಟನೆಯನ್ನು ವಿದ್ವಾನ್ ಶ್ರೀ ಗಿರಿಧರ ಭಟ್ ಅವರು ನೆರವೇರಿಸಿದರು. ಮಂಗಳೂರು ಸಂಸ್ಕೃತ ಸಂಘದ ಗೌರವಾಧ್ಯಕ್ಷರಾದ ಶ್ರೀ ಕೆ.ಪಿ. ವಾಸುದೇವ ರಾವ್, ಸಂತ ಆಲೋಶಿಯಸ್ ಮಹಾ ವಿದ್ಯಾಲಯ ಮಂಗಳೂರು ಇದರ ನಿವೃತ್ತ ಪ್ರಾಧ್ಯಾಪಕರಾದ ಡಾ. ಶ್ರೀಪತಿ ರಾವ್ ಮತ್ತು ಕೆನರಾ ಮಹಾ ವಿದ್ಯಾಲಯ ಮಂಗಳೂರು ಇದರ ನಿವೃತ್ತ ಪ್ರಾಧ್ಯಾಪಕರಾದ ಶ್ರೀಮತಿ ಜಯ ಕುಮಾರಿ ಇವರುಗಳ ಜೀವಮಾನದ ಸಂಸ್ಕೃತ ಸೇವೆಗಾಗಿ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಉದ್ಘಾಟನೆಯ ಬಳಿಕ ಮಂಗಳೂರು ತಾಲೂಕಿನ ವಿವಿಧ…
ಮಂಗಳೂರು : ಪುರಭವನದಲ್ಲಿ ಶ್ರೀ ಶಿರಡಿ ಸಾಯಿ ಬಾಬಾ ಮಂದಿರದ ಸಾಯಿ ಶಕ್ತಿ ಬಳಗ ಚಿಲಿಂಬಿ ವತಿಯಿಂದ ಪುರಾಣ ಪುಣ್ಯ ಕಥೆ ‘ಬೊಳ್ಳಿ ಮಲೆತ ಶಿವಶಕ್ತಿಲು’ ತುಳು ಪೌರಾಣಿಕ ನಾಟಕದ ಪ್ರದರ್ಶನ ದಿನಾಂಕ 27-08-2023ರಂದು ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಅವಧೂತ ವಿನಯ್ ಗುರೂಜಿಯವರು ಮಾತನಾಡುತ್ತಾ “ಯಕ್ಷಗಾನ, ನಾಟಕ ಕಲೆಯಲ್ಲ ಅದೊಂದು ತಪಸ್ಸು. ಮಂಗಳೂರಿನ ಜನರು ಎಲ್ಲರಿಗೂ ಮಂಗಳ ಬಯಸುವವರು, ಕೊರೊನಾ ಬಂದರೂ ತುಳುನಾಡಿನಲ್ಲಿ ಕೋಲ, ತಂಬಿಲ, ನಾಗಾರಾಧನೆ ನಿಂತಿಲ್ಲ. ಮಂಗಳೂರಿನ ಜನರು ಕಲಾವಿದರನ್ನು ಬೆಳೆಸುವ ರೀತಿ ಎಲ್ಲಿಯೂ, ಯಾರೂ ಬೆಳೆಸಲ್ಲ” ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಶಿಕ್ಷಕಿ ಅಹಲ್ಯಾ, ನಟ ಭೋಜರಾಜ್ ವಾಮಂಜೂರು, ಬಿ.ಎಸ್. ಕಾರಂತ್, ನಿರೂಪಕಿ ಪ್ರಿಯಾ ಹರೀಶ್, ಸೌಂಡ್ ಎಂಜಿನಿಯರ್ ಅಶೋಕ್ ಕ್ರಾಸ್ತಾ ಇವರನ್ನು ಸನ್ಮಾನಿಸಲಾಯಿತು. ಕಲಾವಿದರಾದ ನವೀನ್ ಶೆಟ್ಟಿ, ನಾಗೇಶ್ ದೇವಾಡಿಗ, ತಾರಾನಾಥ ಉರ್ವ, ಧನಪಾಲ್ ಶೆಟ್ಟಿ, ತಸ್ಮಯಿ ಕೊಡಿಯಾಲ್ ಬೈಲ್ ಇವರನ್ನು ಗೌರವಿಸಲಾಯಿತು. ಮಾಜಿ ಶಾಸಕ ಜೆ.ಆರ್. ಲೋಬೊ, ಮಾಜಿ ಸಚಿವ ರಮಾನಾಥ ರೈ,…
ಮಡಿಕೇರಿ : ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವದ ಅಂಗವಾಗಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೊಡಗು ಜಿಲ್ಲಾ ಸಂಸ್ಥೆ, ಕೊಡವ ಮಕ್ಕಡ ಕೂಟ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ರೆಜಿತ್ ಕುಮಾರ್ ಗುಹ್ಯ ತಿಳಿಸಿದ್ದಾರೆ. ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ಬಿ. ದೇವಯ್ಯ (ಮಹಾವೀರ ಚಕ್ರ ಪುರಸ್ಕೃತರು) ಅವರ 58ನೇ ಪುಣ್ಯಸ್ಮರಣೆ ದಿನಾಚರಣೆ ಸೆಪ್ಟೆಂಬರ್ 7ರಂದು ಜರುಗಲಿದ್ದು, ಆ ಪ್ರಯುಕ್ತ ಕೊಡಗು ಜಿಲ್ಲಾ ಸಂಸ್ಥೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ‘ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ’ ಅವರ ಬಗ್ಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ. ಸೆಪ್ಟೆಂಬರ್ 7ರಂದು ಮಧ್ಯಾಹ್ನ 2.30 ಗಂಟೆಗೆ ಮಡಿಕೇರಿ ಪತ್ರಿಕಾ ಭವನ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಆಸಕ್ತ ವಿದ್ಯಾರ್ಥಿಗಳು ಸೆಪ್ಟೆಂಬರ್ 4ರ ಒಳಗಾಗಿ ಪ್ರಬಂಧವನ್ನು ಪ್ರೆಸ್ ಕ್ಲಬ್ ಕಚೇರಿಗೆ ತಲುಪಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಪ್ರೆಸ್ ಕ್ಲಬ್ ಖಜಾಂಚಿ ಬೊಳ್ಳಜಿರ ಬಿ. ಅಯ್ಯಪ್ಪ 9880778047 ಅವರನ್ನು ಸಂಪರ್ಕಿಸಲು ಕೋರಲಾಗಿದೆ.
ಪುತ್ತೂರು : ತುಳು ಅಪ್ಪೆ ಕೂಟ ಪುತ್ತೂರು ವತಿಯಿಂದ ಶ್ರೀ ಮಹಾಲಿಂಗೇಶ್ವರ ದೇವಾಲಯದ ನಟರಾಜ ವೇದಿಕೆಯಲ್ಲಿ ದಿನಾಂಕ 27-08-2023ರ ಭಾನುವಾರ ಉದಿಪನ, ತಮ್ಮನ ಬಲ್ಮನ, ಪಂಚ ಮಿನದನ ಲೇಸ್ ನಡೆಯಿತು. ಈ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದ ಒಡಿಯೂರು ಸಂಸ್ಥಾನದ ಸಾಧ್ವಿ ಶ್ರೀ ಮಾತಾನಂದಮಯೀ “ಸಂಸ್ಕೃತಿಯ ಜೀವಾಳ ಸಂಸ್ಕಾರ. ಆ ಸಂಸ್ಕಾರಕ್ಕೆ ಮೂಲ ತಾಯಿ. ಆಕೆಯಲ್ಲಿ ದೈವಶಕ್ತಿ, ಭಕ್ತಿ, ನೈತಿಕತೆ ಬೇಕು. ತುಳುವಿಗೆ ಸಂಬಂಧಿಸಿದಂತೆ ಅಪ್ಪೆ ಕೂಟದಂತಹ ಒಗ್ಗೂಡುವಿಕೆಯೊಂದಿಗೆ ತುಳುನಾಡ ಸಂಸ್ಕೃತಿ, ಶ್ರೀಮಂತಿಕೆಯನ್ನು ಉಳಿಸಿ, ಬೆಳೆಸುವ ಕಾರ್ಯ ನಡೆಯಲಿದೆ. ಮಾರ್ಗದರ್ಶನ, ಪ್ರಯತ್ನ ಉದ್ದೇಶವಿದ್ದರೆ ಕಾರ್ಯ ಸಫಲತೆಯಾಗುತ್ತದೆ. ತುಳು ಭಾಷೆ, ಸಂಸ್ಕೃತಿ ಪ್ರೀತಿಯಿಂದ ಕೂಡಿದೆ. ಕ್ರಿ.ಶ. 2ನೇ ಶತಮಾನದಲ್ಲೇ ತುಳು ಭಾಷೆ ಚಾಲ್ತಿಯಲ್ಲಿದ್ದ ಕುರಿತು ಆಗಿನ ಬರಹಗಳು ಸಾಬೀತುಪಡಿಸಿವೆ. ಜಾಗತೀಕರಣದ ಗಾಳಿಯ ನಡುವೆ ತುಳುವನ್ನು ಉಳಿಸಿಕೊಂಡು ಹೋಗುವ ಕೆಲಸ ಆಗಬೇಕು” ಎಂದು ಆಶಯ ವ್ಯಕ್ತಪಡಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, “ಮುಂದಿನ 6…
ಬಂಟ್ವಾಳ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಸ್ಥಾಪಕಾಧ್ಯಕ್ಷ ಶ್ರೀ ಪಟ್ಲ ಸತೀಶ್ ಶೆಟ್ಟಿ ಅವರ ಆಶಯದಂತೆ ಯಕ್ಷಧ್ರುವ ಯಕ್ಷ ಶಿಕ್ಷಣ ಅಭಿಯಾನದಡಿಯಲ್ಲಿ ದಿನಾಂಕ 26-08-2023ರಂದು ಬಂಟ್ವಾಳ ತಾಲೂಕಿನ ಕೊಯಿಲ ಸರಕಾರಿ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಯಕ್ಷ ತರಬೇತಿ ಕಾರ್ಯಕ್ರಮದ ಉದ್ಘಾಟನೆ ನಡೆಯಿತು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದರಾದ ಶ್ರೀ ಸರಪಾಡಿ ಅಶೋಕ ಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ದುರ್ಗಾದಾಸ್ ಶೆಟ್ಟಿ ಮಾವಂತೂರು ಇವರು ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸದಸ್ಯ ಹಿಲಾರಿ ಡಿಸೋಜ, ರಂಗಭೂಮಿ ಕಲಾವಿದ ರತ್ನದೇವ್ ಪುಂಜಾಲಕಟ್ಟೆ, ಶಿಕ್ಷಕರಾದ ಧನಂಜಯ, ಜ್ಯೋತಿ, ಆಶಾಲತಾ, ಪ್ರಶ್ಮಿತ, ಸುಶ್ಮಿತ ಮೊದಲಾದವರು ಉಪಸ್ಥಿತರಿದ್ದರು. ಯಕ್ಷ ಗುರು ಪ್ರೇಮರಾಜ್ ಕೊಯಿಲ ಇವರು ವಿದ್ಯಾರ್ಥಿಗಳಿಗೆ ಯಕ್ಷಗಾನ ನಾಟ್ಯ ತರಗತಿ ಪ್ರಾರಂಭಿಸಿದರು. ಶಾಲಾ ಮುಖ್ಯ ಶಿಕ್ಷಕಿ ಸೌಮ್ಯಾ ಎಚ್. ಸ್ವಾಗತಿಸಿ, ಸಹ ಶಿಕ್ಷಕರಾದ ಪ್ರವೀಣ್ ಕಾಮತ್ ವಂದಿಸಿ, ರಮೇಶ್ ಮಯ್ಯ ಕಾರ್ಯಕ್ರಮ ನಿರೂಪಿಸಿದರು. ಸುಮಾರು ಎಂಭತ್ತಮೂರು ಮಂದಿ ವಿದ್ಯಾರ್ಥಿಗಳು…
ಪುತ್ತೂರು : ಶ್ರೀ ಆಂಜನೇಯ 55ರ ಸಂಭ್ರಮ ಇದರ ಅಂಗವಾಗಿ, ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠ ಕಲ್ಲಮೆ ಇಲ್ಲಿ ನಡೆಯಲಿರುವ ಶ್ರೀ ರಾಮಾಯಣ ದರ್ಶನಂ ತಾಳಮದ್ದಳೆ ಸಪ್ತಾಹದ ಪ್ರಯುಕ್ತ ದಿನಾಂಕ 26-08-2023ರಂದು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ವತಿಯಿಂದ ‘ಶ್ರೀರಾಮ ವನ ಗಮನ’ ಎಂಬ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ಲಕ್ಷ್ಮೀನಾರಾಯಣ ಭಟ್ ಬಟ್ಯಮೂಲೆ, ಶ್ರೀ ಗಿರೀಶ್ ಮುಳಿಯಾಲ, ಚಂಡೆ ಮದ್ದಳೆಗಳಲ್ಲಿ ಶ್ರೀ ಪದ್ಯಾಣ ಶಂಕರನಾರಾಯಣ ಭಟ್, ಶ್ರೀ ಮುರಳೀಧರ ಕಲ್ಲೂರಾಯ ಕುಂಜೂರುಪಂಜ, ಶ್ರೀ ಅಚ್ಯುತ ಪಾಂಗಣ್ಣಾಯ ಕೋಡಿಬೈಲು ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ಭಾಸ್ಕರ ಬಾರ್ಯ (ದಶರಥ), ಶ್ರೀ ಶ್ರೀಧರ್ ರಾವ್ ಕುಂಬ್ಳೆ (ಕೈಕೇಯಿ), ಶ್ರೀ ಪಕಳಕುಂಜ ಶ್ಯಾಮ್ ಭಟ್ (ಮಂಥರೆ), ಶ್ರೀ ದಿವಾಕರ ಆಚಾರ್ಯ ಗೇರುಕಟ್ಟೆ (ಶ್ರೀ ರಾಮ) ಮತ್ತು ಶ್ರೀ ದುಗ್ಗಪ್ಪ ನಡುಗಲ್ಲು (ಲಕ್ಷ್ಮಣ) ಸಹಕರಿಸಿದರು. ಶ್ರೀ ದೇವಳದ ವ್ಯವಸ್ಥಾಪಕರಾದ ಡಾ. ಸೀತಾರಾಮ ಭಟ್ ಕಲ್ಲಮೆ ದೀಪ ಪ್ರಜ್ವಲನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ…