Author: roovari

ಒಂದು ಸಂಗೀತ ಕಾರ್ಯಕ್ರಮ ಅತಿಯಾದ ಭಾವನಾತ್ಮಕ ಅಂಶಗಳನ್ನು ಒಳಗೊಂಡಿದ್ದರೆ ಕೇಳುವವರಿಗೆ ಒಂದು ಮಟ್ಟದ ರಂಜನೆಯನ್ನು ಕೊಟ್ಟೀತು. ಆದರೆ ಅದರಿಂದ ಮೆದುಳಿಗೆ ಯಾವುದೇ ಆಹಾರ ದಕ್ಕಲಾರದು. ಕೆಲವು ಬಾರಿ ಅತಿಯಾದ ಬೌದ್ಧಿಕ ವ್ಯಾಪಾರವಿದ್ದರೆ ಶೋತೃ ವರ್ಗ ರಂಜನೆಗೆ ಒಳಗಾಗುವ ಬದಲು ಕೇಳಿ ದಣಿಯುತ್ತದೆ. ಬುದ್ಧಿ ಮತ್ತು ಭಾವ ಎರಡೂ ನೆಲೆಗಳಿಗೂ ಕೂಡ ಸರಿಯಾದ ಆಹಾರವಿದ್ದರೆ ಕೇಳುಗನು ಆನಂದ ಪಡುವಂತೆ ಆಗುತ್ತದೆ. ದಿನಾಂಕ 17 ಜೂನ್ 2023ರಂದು ಪರ್ಕಳದ ಡಾ. ಕೃಷ್ಣಮೂರ್ತಿ ಭಟ್ ಅವರ ಮನೆಯಲ್ಲಿ ನಡೆದ ರಾಗಧನ ಗೃಹ ಸಂಗೀತ ಮಾಲಿಕೆಯ ಸಂಗೀತ ಕಚೇರಿಯಲ್ಲಿ ಇಂಥದೊಂದು ಸೊಗಸಾದ ಕಾರ್ಯಕ್ರಮವನ್ನು ಸವಿಯುವ ಅವಕಾಶ ಕೇಳುಗರಿಗೆ ಒದಗಿತು. ಶ್ರೀಮತಿ ಕಾಂಚನ ಶ್ರೀರಂಜಿನಿ ಹಾಗೂ ಶ್ರೀಮತಿ ಕಾಂಚನ ಶ್ರುತಿರಂಜನಿ ಇವರ ದ್ವಂದ್ವ ಕರ್ನಾಟಕ ಸಂಗೀತ ಕಾರ್ಯಕ್ರಮ ಒಂದು ಸೊಗಸಾದ ಅನುಭವವನ್ನು ಕೊಟ್ಟಿತು. ಕಳೆದ ಶತಮಾನದ ಪ್ರಾರಂಭದಿಂದಲೂ ಕಾಂಚನ ಎನ್ನುವುದು ಕರ್ನಾಟಕದ ತಿರುವಯ್ಯಾರು ಎಂದೇ ಪ್ರಸಿದ್ಧ. ಖ್ಯಾತ ಪಿಟೀಲು ವಾದಕ ಕಾಂಚನ ಸುಬ್ಬರತ್ನಂ ಅವರ ಮಕ್ಕಳಾದ ಇವರು ಅವಧಾನ…

Read More

ಬೆಂಗಳೂರು: ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ 20ನೇ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 24-06-2023 ರ ಶನಿವಾರದಂದು ಬೆಂಗಳೂರಿನ ಕುಮಾರಪಾರ್ಕ್ ಪೂರ್ವದಲ್ಲಿರುವ ಗಾಂಧಿ ಭವನದ ಮಹದೇವ ದೇಸಾಯಿ ಸಭಾಂಗಣದಲ್ಲಿ ನಡೆಯಿತು. ಡಾ| ಪಿ. ಎಸ್. ಶಂಕರ್, ಕೌಶಿಕ್ ಕೂಡುರಸ್ತೆ, ಪ್ರೊ.ಬಿ.ಎನ್.ಶ್ರೀರಾಮ, ಜಿ. ಎಚ್. ಕೃಷ್ಣಮೂರ್ತಿ ಅವರಿಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಪ್ರಶಸ್ತಿ ನೀಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಲವು ಸಾಹಿತಿಗಳು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಭಂಗ ಬರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದಾಗ, ಮಾತನಾಡಿದ ಸಿದ್ದರಾಮಯ್ಯನವರು “ಸಾಹಿತಿಗಳ ಬಗ್ಗೆ ತಮಗೆ ಅಪಾರ ಗೌರವ ಇದೆ. ಸಮಾಜವನ್ನು ತಿದ್ದುವ ನಿಮ್ಮ ಗೌರವಕ್ಕೆ ಧಕ್ಕೆ ಬರಲು ಬಿಡುವುದಿಲ್ಲ” ಎಂದರು. ಸಂಘದ ಅಧ್ಯಕ್ಷ ನಡೆಸಾಲೆ ಪುಟ್ಟಸ್ವಾಮಯ್ಯ ಮಾತನಾಡಿ “ರಾಜ್ಯದಲ್ಲಿ ಮೂರು ವರ್ಷದಿಂದ ಗ್ರಂಥಾಲಯಗಳಿಗೆ ಪುಸ್ತಕ ಖರೀದಿ ಮಾಡಿಲ್ಲ. ಬಜೆಟ್‌ನಲ್ಲಿ ಪುಸ್ತಕ ಖರೀದಿಗೆ ರೂ25 ಕೋಟಿ ಹಾಗೂ ಜ್ಞಾನಭಾಗ್ಯ ಯೋಜನೆಗೆ ರೂ50 ಕೋಟಿ ಮೀಸಲಿಡಬೇಕು ಎಂದರು.” ನಾಡೋಜ ಹಂ.ಪ.ನಾಗರಾಜಯ್ಯ ಸಾಹಿತಿಗಳಿಗೆ…

Read More

ಕಾಸರಗೋಡು: ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿ ಆಶ್ರಯದಲ್ಲಿ ಕನ್ನಡ ಪತ್ರಿಕಾ ದಿನಾಚರಣೆಯು ದಿನಾಂಕ 01-07-2023 ರಂದು ನಡೆಯಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಕವಿ, ಹಿರಿಯ ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ “ಕನ್ನಡ ಹೋರಾಟಕ್ಕೆ ಶಕ್ತಿ ತುಂಬುವಲ್ಲಿ ಕಾಸರಗೋಡಿನ ಪತ್ರಿಕೆಗಳ ಕೊಡುಗೆ ಗಣನೀಯವಾದದ್ದು. ಕನ್ನಡದ ಅಸ್ತಿತ್ವವನ್ನು ಭದ್ರಪಡಿಸಲು ಕನ್ನಡ ಪತ್ರಕರ್ತರು ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ. ಭಾಷಾವಾರು ಪ್ರಾಂತ್ಯ ರಚನೆಯಾದಾಗ ಅಚ್ಚಗನ್ನಡ ಪ್ರದೇಶ ಕಾಸರಗೋಡು ಅನ್ಯಾಯವಾಗಿ ಕೇರಳಕ್ಕೆ ಸೇರಿಸಲ್ಪಟ್ಟಿತು. ಅಂದಿನಿಂದಲೇ ಇಲ್ಲಿ ಕನ್ನಡಿಗರ ಹೋರಾಟ ಪ್ರಾರಂಭಿಸಲಾಯಿತು. ಕನ್ನಡ ಪತ್ರಕರ್ತರು ಮಾತ್ರವಲ್ಲದೆ ಪತ್ರಿಕೆಗಳ ಮಾಲಕರೂ ಆ ಹೋರಾಟದಲ್ಲಿ ಸಕ್ರಿಯರಾಗುವ ಮೂಲಕ ವರದಿ, ಲೇಖನಗಳಿಂದ ಜಾಗೃತಿ ಮೂಡಿಸಿ ಸರ್ವ ಕನ್ನಡಿಗರನ್ನು ಬಡೆದೆಬ್ಬಿಸಿದರು. ಕಾಸರಗೋಡು ಸಮಾಚಾರ, ನಾಡ ಪ್ರೇಮಿ ಮತ್ತು ಕಾಸರಗೋಡು ಕನ್ನಡ ಕಹಳೆ ಸಹಿತ ಹಲವು ಪತ್ರಿಕೆಗಳು ಕನ್ನಡಿಗರ ಹೋರಾಟಕ್ಕೆ ಸ್ಫೂರ್ತಿ ನೀಡಿದವು. ಈಗಲೂ ಪತ್ರಿಕೆಗಳು ಕನ್ನಡದ ಅವಗಣನೆಯ ವಿರುದ್ಧ ಧ್ವನಿಯೆತ್ತುತ್ತಲೇ ಇವೆ” ಎಂದು ಹೇಳಿದರು. ಲೇಖಕಿ, ಕಲಾವಿದೆ, ವಿದುಷಿ ಅನುಪಮಾ ರಾಘವೇಂದ್ರ…

Read More

ಮಂಗಳೂರು: ಸಾಯಿಶಕ್ತಿ ಯಕ್ಷಕಲಾ ಬಳಗದಿಂದ ನಗರದ ಪುರಭವನದಲ್ಲಿ ದಿನಾಂಕ : 03-07-2023ರಂದು ಸೀನ್ ಸೀನರಿಯ ಯಕ್ಷನಾಟಕ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಉದ್ಘಾಟಿಸಿ ಮಾತನಾಡುತ್ತಾ “ಯಾವುದೇ ಕಲೆಯ ಮೂಲ ಆಶಯ ಮತ್ತು ಮೌಲ್ಯಕ್ಕೆ ಚ್ಯುತಿ ಬಾರದಂತೆ ವಿಭಿನ್ನ ರೀತಿಯ ಪ್ರಯೋಗಗಳು ಸ್ವಾಗತಾರ್ಹವಾಗಿರುವುದರೊಂದಿಗೆ, ಪ್ರಸ್ತುತ ಕಾಲಘಟಕ್ಕೆ ಅದರ ಅನಿವಾರ್ಯತೆಯೂ ಇದೆ. ಯಕ್ಷಗಾನದಲ್ಲೂ ಅನೇಕ ಪ್ರಯೋಗಗಳು ನಡೆಯುತ್ತಿದ್ದು, ಈ ಮೂಲಕ ಜಗತ್ತಿಗೆ ಕಲೆಯ ಹಿರಿಮೆಯನ್ನು ತೋರಿಸಿಕೊಟ್ಟಿದೆ. ಸೀನ್ ಸೀನರಿಯೂ ಕೂಡಾ ಅಂತಹ ಪ್ರಯೋಗಗಳಲ್ಲಿ ಒಂದಾಗಿದ್ದು ಯಶಸ್ವಿಯಾಗಲಿ” ಎಂದು ಶುಭ ಹಾರೈಸಿದರು. ಕಟೀಲು ಯಕ್ಷಗಾನ ಮೇಳಗಳ ಯಜಮಾನ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಸಾಲಿಗ್ರಾಮ ಮೇಳದ ಯಜಮಾನ ಪಳ್ಳಿ ಕಿಶನ್ ಹೆಗ್ಡೆ, ವಿದ್ವಾಂಸ ಡಾ.ಎಂ. ಪ್ರಭಾಕರ ಜೋಷಿ, ಸಾಯಿಶಕ್ತಿ ಕಲಾ ಬಳಗ ಮುಂಬಯಿ ಸಂಚಾಲಕ ಬಾಲಕೃಷ್ಣ ಶೆಟ್ಟಿ ಅಜೆಕಾರು, ಶಿರಡಿ ಸಾಯಿ ಮಂದಿರದ ಮುಖ್ಯಸ್ಥ ವಿಶ್ವಾಸ್ ಕುಮಾರ್ ದಾಸ್, ಯಕ್ಷನಾಟಕದ ನಿರ್ಮಾಪಕಿ ಲಾವಣ್ಯ ವಿಶ್ವಾಸ ಕುಮಾರ್,…

Read More

ಮಂಗಳೂರು: ಶ್ರೀ ಗುರುಪೂರ್ಣಿಮೆಯ ಪ್ರಯುಕ್ತ ಜೆಪ್ಪು ಭಿಕ್ಷು ಲಕ್ಷ್ಮಣಾನಂದ ಸಭಾಭವನದಲ್ಲಿ ಭಾಗವತ ಶ್ರೀ ಯೋಗೀಶ್ ಕುಮಾರ್ ಜೆಪ್ಪು ಹಾಗೂ ಯಕ್ಷಗುರು ವರ್ಕಾಡಿ ರವಿ ಅಲೆವೂರಾಯರನ್ನು ಗೌರವಿಸಿ ಗುರುವಂದನೆ ಮಾಡಲಾಯಿತು. ಶ್ರೀರಾಮ ಕ್ಷತ್ರಿಯ ಮಹಿಳಾ ಯಕ್ಷ ವೃಂದದ ವಾರಿಜಾ ಕೊರಗಪ್ಪ, ಶಾಲಿನಿ ರಾಮಚಂದ್ರ, ಕಲ್ಪನಾ ವೆಂಕಟೇಶ್, ಜಯಲಕ್ಷೀ ನರಸಿಂಹ, ಗಾಯತ್ರೀ ಯೋಗೀಶ್, ಗೌರಿ, ಮೀರಾ, ಸ್ವರ್ಣಲತಾ ಲಕ್ಷೀನಾರಾಯಣ, ಗಾಯತ್ರೀ ನಾಗೇಶ್ ಉಪಸ್ಥಿತರಿದ್ದರು. ದೇಶೀಯ ಗುರುಪರಂಪರೆ ಮತ್ತು ಗುರುಕುಲ ಶಿಕ್ಷಣದ ಬಗ್ಗೆ ಶ್ರೀ ಯೋಗೀಶ್ ಕುಮಾರ್ ಉಪನ್ಯಾಸವಿತ್ತರು.

Read More

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು 2023ನೇ ಸಾಲಿನ ʻಅಭಯಲಕ್ಷ್ಮೀ ದತ್ತಿನಿಧಿʼ ಪ್ರಶಸ್ತಿಗೆ ಡಾ. ಎಚ್‌.ಎ. ಪಾರ್ಶ್ವನಾಥ ಹಾಗೂ ಶ್ರೀಮತಿ ಪ್ರೇಮಾ ಭಟ್‌ ಅವರನ್ನು ಆಯ್ಕೆ ಮಾಡಲಾಗಿದೆ. ಶ್ರೀಮತಿ ಪಿ. ಅಭಯಕುಮಾರ್‌ ಅವರು ತಮ್ಮ ಪತಿ ದಿ. ಎಸ್‌.ಎ. ಅಭಯಕುಮಾರ್‌ ಅವರ ಪುಣ್ಯ ಸ್ಮರಣಾರ್ಥ ಕನ್ನಡಿಗರ ಸಾರ್ವಭೌಮ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ʻಅಭಯಲಕ್ಷ್ಮೀ ದತ್ತಿನಿಧಿʼ ಹೆಸರಿನಲ್ಲಿ ವಿಶೇಷ ದತ್ತಿ ನಿಧಿಯನ್ನು ಸ್ಥಾಪಿಸಿ, ಸಾಹಿತ್ಯ ಹಾಗೂ ರಂಗಭೂಮಿ ಕ್ಷೇತ್ರದ ಮೂಲಕ ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸುತ್ತಿರುವ ಇಬ್ಬರನ್ನು ಗುರುತಿಸಿ ಈ ಪ್ರಶಸ್ತಿ ಪ್ರದಾನ ಮಾಡಬೇಕು ಎನ್ನವುದು ದತ್ತಿ ದಾನಿಗಳ ಆಶಯವಾಗಿದೆ. ದತ್ತಿಯ ಆಶಯದಂತೆ ರಂಗಭೂಮಿ ಕ್ಷೇತ್ರದಲ್ಲಿ ಅಗಣಿತ ಸೇವೆ ಸಲ್ಲಿಸಿದ ಹಾಗೂ ಸಾಹಿತ್ಯ ಕ್ಷೇತ್ರದ ಮೂಲಕ ಕನ್ನಡ ನಾಡು ನುಡಿಯ ಸೇವೆಯಲ್ಲಿ ಗುರುತಿಸಿಕೊಂಡಿರುವ ಇಬ್ಬರನ್ನು ಆಯ್ಕೆ ಸಮಿತಿ ಆಯ್ಕೆ ಮಾಡಿದ್ದು. ಪ್ರಶಸ್ತಿಯು ತಲಾ ರೂ10,000/-(ಹತ್ತು ಸಾವಿರ) ನಗದು, ಫಲ ತಾಂಬೂಲ ಹಾಗೂ ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. 2023ನೇ ಸಾಲಿನ ಈ ಪ್ರಶಸ್ತಿಗಾಗಿ ರಂಗಭೂಮಿ…

Read More

ಬದಿಯಡ್ಕ : ರಂಗಸಿರಿ ಸಾಂಸ್ಕೃತಿಕ ವೇದಿಕೆ ಬದಿಯಡ್ಕ ಇದರ ನೇತೃತ್ವದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರಕಾರ ಸಹಯೋಗದೊಂದಿಗೆ ಬದಿಯಡ್ಕ ಗ್ರಾಮ ಪಂಚಾಯತಿನಾದ್ಯಂತ ನಡೆಯುತ್ತಿರುವ “ಗ್ರಾಮ ಪರ್ಯಟನೆ” ಅಭಿಯಾನದ 5ನೇ ಸರಣಿ ಕಾರ್ಯಕ್ರಮ ದಿನಾಂಕ 02-07-2023 ರಂದು ಕನ್ನೆಪ್ಪಾಡಿ ಆಶ್ರಯ ಆಶ್ರಮದಲ್ಲಿ ನಡೆಯಿತು. ಸಂಘಟನೆಯ ಅಧ್ಯಕ್ಷೆ ಶ್ರೀಮತಿ ಪ್ರಭಾವತಿ ಕೆದಿಲಾಯ ಪುಂಡೂರು ಇವರ ಅಧ್ಯಕ್ಷತೆಯಲ್ಲಿ ಜರಗಿದ ಸಭಾಕಾರ್ಯಕ್ರಮದಲ್ಲಿ ಪತ್ರಕರ್ತ ಜಯ ಮಣಿಯಂಪಾರೆಯವರು “ಗಡಿನಾಡಿನ ಕನ್ನಡ ಮಾಧ್ಯಮದ ಸವಾಲುಗಳು” ಎಂಬ ವಿಷಯದ ಬಗ್ಗೆ ವಿಚಾರ ಮಂಡಿಸಿದರು. ಈ ಸಂದರ್ಭದಲ್ಲಿ ಸಾಮಾಜಿಕ ಧಾರ್ಮಿಕ ಮುಂದಾಳು ಸುಬ್ರಹ್ಮಣ್ಯ ಭಟ್ ನೀರ್ಚಾಲು ಇವರನ್ನು ಸನ್ಮಾನಿಸಲಾಯಿತು. ಆಶ್ರಯ ಆಶ್ರಮದ ಜನಸೇವಾ ವಿಶ್ವಸ್ಥ ನಿಧಿ ಅಧ್ಯಕ್ಷರಾದ ಶ್ರೀ ಕೃಷ್ಣ ಭಟ್ ಪುದುಕೋಳಿ ಶುಭಾಶಂಸನೆಗೈದರು. ಯಕ್ಷ ಗುರು ಸೂರ್ಯನಾರಾಯಣ ಪದಕಣ್ಣಾಯ, ಕರಿಂಬಿಲ ಲಕ್ಷ್ಮಣ ಪ್ರಭು, ಗುಣಾಜೆ ಶಿವಶಂಕರ ಭಟ್, ರಮೇಶ್ ಕಳೇರಿ, ದಿನೇಶ್ ಬೊಳುಂಬು ಮೊದಲಾದವರು ಉಪಸ್ಥಿತರಿದ್ದರು. ಈಸಂದರ್ಭದಲ್ಲಿ ಭಾಗವತಿಕೆಯ ರಂಗಪ್ರವೇಶಗೈದ ಕು.ವರ್ಷಾ ಲಕ್ಷ್ಮಣ್ ಬದಿಯಡ್ಕ ಅವರನ್ನು ಗೌರವಿಸಲಾಯಿತು.…

Read More

“ಕಾಂತಾರ” ಸಿನಿಮಾದಲ್ಲಿ ‘ಕಾಡಿನಲ್ಲಿ ಒಂದು ಸೊಪ್ಪು ಸಿಗ್ತದೆ’ ಎಂಬ ಡೈಲಾಗ್ ನಿಂದ ಚಿಕ್ಕ ಪಾತ್ರದ ಮೂಲಕ ಅಪಾರ ಜನಮನ್ನಣೆ ಪಡೆದುಕೊಂಡ ನಮ್ಮ ಕರಾವಳಿಯ ಹೆಮ್ಮೆಯ ನಟಿ ಚಂದ್ರಕಲಾ ರಾವ್ ಕದಿಕೆ. ಉಡುಪಿ ಜಿಲ್ಲೆಯ ಕದಿಕೆಯ ಬಡನಿಡಿಯೂರು ಗ್ರಾಮದ ದಿ. ಟಿ. ಕೇಶವ ರಾವ್ ಹಾಗೂ ಶಾರದರವರ ಸುಪುತ್ರಿಯಾದ  ಚಂದ್ರಕಲಾ ರಾವ್ ಕದಿಕೆ ಇವರು ನೃತ್ಯದ ಮೂಲಕ ವೇದಿಕೆಗೆ ಪಾದಾರ್ಪಣೆ ಮಾಡಿದರು. ಎಂಟನೇ ತರಗತಿಯಲ್ಲಿ ನಾಟಕ ರಂಗವನ್ನು ಪ್ರವೇಶಿಸಿದ ಇವರ ಮೊದಲನೇ ನಾಟಕ ಬೈರನ ಬದುಕು. ನಾಟಕ ರಂಗಕ್ಕೆ ಇವರನ್ನು  ಪರಿಚಯಿಸಿದವರು ವಾಸು ಮಾಸ್ಟರ್.  2000ನೇ ಇಸವಿಯಲ್ಲಿ ನಾಟಕ ರಂಗಕ್ಕೆ ಪ್ರವೇಶ ಮಾಡಿದ ನಂತರ ಉಡುಪಿ ರಂಗಭೂಮಿಯಲ್ಲಿ ನಾಲ್ಕು ವರ್ಷ ಸೇವೆ ಸಲ್ಲಿಸಿ, ನಂತರದ ದಿನಗಳಲ್ಲಿ ನಾಟಕ ರಂಗವನ್ನೇ ತನ್ನ ಕಾಯಕ ವೃತ್ತಿಯಾಗಿಸಿಕೊಂಡು ಸುಮಾರು  500ಕ್ಕಿಂತಲೂ ಮೇಲ್ಪಟ್ಟು ನಾಟಕಗಳಲ್ಲಿ  ಅಭಿನಯಿಸಿದ್ದಾರೆ. ಒಂದು ಪಾತ್ರದ ಬಗ್ಗೆ ನಟನೆ ಮಾಡುವ ಮೊದಲು ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರ ? ಪಾತ್ರದ ಬಗ್ಗೆ ಮೊದಲೇ ಯಾರಾದರೂ ತಿಳಿಸಿ…

Read More

ಮಂಗಳಾದೇವಿ : ಮಂಗಳೂರು ರಾಮಕೃಷ್ಣ ಮಠದ ನೂತನ ಯೋಜನೆ ‘ಭಜನ್‌ ಸಂಧ್ಯಾ’ ಕಾರ್ಯಕ್ರಮಕ್ಕೆ ದಿನಾಂಕ : 02-07-2023ರಂದು ಚಾಲನೆ ನೀಡಲಾಯಿತು. ಮಠದ ಪ್ರಾರ್ಥನಾ ಮಂದಿರದಲ್ಲಿ ವಿವಿಧ ಭಜನಾ ಮಂಡಳಿಗಳು ಪ್ರತಿ ತಿಂಗಳ ಮೊದಲ ಮತ್ತು ಎರಡನೇ ರವಿವಾರ ಭಜನಾ ಸೇವೆ ನೀಡಲಿವೆ. ಕಾರ್ಯಕ್ರಮವನ್ನು ಮಂಗಳೂರಿನ ಎಸ್.ಸಿ.ಎಸ್‌. ಆಸ್ಪತ್ರೆಯ ಮುಖ್ಯಸ್ಥ ಡಾ. ಜೀವರಾಜ್ ಸೊರಕೆ ಅವರು ಉದ್ಘಾಟಿಸಿದರು, ಈ ಸಂದರ್ಭ ಮಾತನಾಡಿದ ಅವರು “ರಾಮಕೃಷ್ಣ ಮಠದ ಈ ಸಾನ್ನಿಧ್ಯದಲ್ಲಿ ಭಜನೆ ಸಲ್ಲಿಸುವುದು ಒಂದು ಸುಕೃತವೇ ಸರಿ. ಇದಕ್ಕೆ ಅನುವು ಮಾಡಿಕೊಟ್ಟ ಸ್ವಾಮೀಜಿ ಶ್ಲಾಘನೆಗೆ ಪಾತ್ರರು, ಭಜನಾ ಸೇವೆ ನಿರತರವಾಗಿ ಮುಂದುವರಿಯಲಿ” ಎಂದರು. ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಜಿತಕಾಮಾನಂದ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ಸಮಾಜ ಸೇವಕ ಸೀತಾರಾಮ ಎ. ಉಪಸ್ಥಿತರಿದ್ದರು. ಕ್ಯಾ. ಗಣೇಶ್ ಕಾರ್ಣಿಕ್ ಸ್ವಾಗತಿಸಿ ಪ್ರಸ್ತಾಪಿಸಿದರು. ರಾಮಕೃಷ್ಣ ಮಿಷನ್‌ನ ಮೌಲ್ಯ ಶಿಕ್ಷಣ ಕಾರ್ಯಕ್ರಮಗಳ ಸಂಯೋಜಕ ರಂಜನ್‌ ಬೆಳ್ಳರ್ಪಾಡಿ ಅವರು ವಂದಿಸಿ, ಮಂಜುಳಾ ನಿರೂಪಿಸಿದರು. ಭಜನ್ ಸಂಧ್ಯಾದ ಮೊದಲ ಕಾರ್ಯಕ್ರಮದಲ್ಲಿ…

Read More

ಉಡುಪಿ: ಯಕ್ಷಗಾನ ಕಲಾರಂಗ (ರಿ) ಆಯೋಜಿಸಿದ ‘ಯವಕ್ರೀತೋಪಾಖ್ಯಾನ’ ಬಡಗುತಿಟ್ಟು ಯಕ್ಷಗಾನ ಪ್ರದರ್ಶನವು 2 ಜುಲೈ, 2023ರ ಭಾನುವಾರ ಉಡುಪಿಯ ಪೂರ್ಣಪ್ರಜ್ಞ ಸಭಾಭವನದಲ್ಲಿ ನೆರವೇರಿತು. ಈ ಯಕ್ಷಗಾನದ ಪದ್ಯ ರಚನೆ ಐ. ಡಿ. ಗಣಪತಿ ಅವರು ಮಾಡಿದ್ದು ಹಿಮ್ಮೇಳದಲ್ಲಿ ಭಾಗವತರಾಗಿ ರಾಮಕೃಷ್ಣ ಹೆಗಡೆ ಹಿಲ್ಲೂರು ಮತ್ತು ಪ್ರಸನ್ನ ಭಟ್ ಬಾಳ್ಕಲ್, ಮದ್ದಳೆಗಾರರಾಗಿ ಸುನೀಲ್‌ ಭಂಡಾರಿ ಕಡತೋಕ ಮತ್ತು ರಾಘವೇಂದ್ರ ಹೆಗಡೆ ಯಲ್ಲಾಪುರ, ಚೆಂಡೆಯಲ್ಲಿ ಪ್ರಜ್ವಲ್ ಮುಂಡಾಡಿ ಮತ್ತು ಸೃಜನ್ ಹಾಲಾಡಿ ಸಹಕರಿಸಿದರು. ಮುಮ್ಮೇಳದಲ್ಲಿ ವಿಶ್ವರಥನಾಗಿ ಪ್ರಸನ್ನ ಶೆಟ್ಟಿಗಾರ್, ಹೇಮಾವತಿಯಾಗಿ ಗೋವಿಂದ ವಂಡಾರು, ಇಂದ್ರನಾಗಿ ಗಣಪತಿ ಗುಂಡಿಬೈಲ್ ವಿಶ್ವಾಮಿತ್ರನಾಗಿ ಥಂಡಿಮನೆ ಶ್ರೀಪಾದ ಭಟ್, ನಾರದನಾಗಿ ಅಶೋಕ ಭಟ್‌ ಸಿದ್ಧಾಪುರ, ವಸಿಷ್ಠನಾಗಿ ಸುಬ್ರಹ್ಮಣ್ಯ ಕೋಣಿ , ಬ್ರಹ್ಮನಾಗಿ ಚಂದ್ರಕುಮಾರ್ ನೀರ್ಜಡ್ಡು, ವಿಶಾಖೆಯಾಗಿ ಸುಧೀರ್ ಉಪ್ಪೂರು, ಚಿತ್ರಲೇಖೆಯಾಗಿ ಶ್ರೀಕಾಂತ ರಟ್ಟಾಡಿ, ರೈಭ್ಯನಾಗಿ ಕೃಷ್ಣಯಾಜಿ ಬಳ್ಕೂರು, ಯವಕ್ರೀತನಾಗಿ ವಿದ್ಯಾಧರ ಜಲವಳ್ಳಿ, ಭಾರದ್ವಾಜನಾಗಿ ಆನಂದ ಭಟ್ ಕೆಕ್ಕಾರು, ವಟು ಇಂದ್ರನಾಗಿ ಹಾಗೂ ಶೂದ್ರಕನಾಗಿ ಶ್ರೀಧರ ಭಟ್‌ ಕಾಸರಕೋಡು, ಪರಾವಸುವಾಗಿ ಈಶ್ವರ…

Read More