Subscribe to Updates
Get the latest creative news from FooBar about art, design and business.
Author: roovari
ಉಡುಪಿ : ರಾಗ ಧನ ಸಂಸ್ಥೆಯು ದಿನಾಂಕ : 26-06-2022ರಂದು ಹಮ್ಮಿಕೊಂಡ ಗೃಹ ಸಂಗೀತ ಕಾರ್ಯಕ್ರಮ ರಾಗ ರತ್ನ ಮಾಲಿಕೆ -1 ಶ್ರೀಮತಿ ನಯನ ಮತ್ತು ಶ್ರೀ ನರಸಿಂಹ ನಾಯಕ್ ಇವರ ಆತಿಥ್ಯ ಮತ್ತು ಸಹ ಪ್ರಯೋಜತ್ವದಲ್ಲಿ ನಡೆಯಿತು. ಮಣಿಪಾಲದ ಇವರ ನಿವಾಸ “ಶ್ರೀ ನಿಕೇತನ”ದಲ್ಲಿ ಬೆಂಗಳೂರಿನ ಗಾಯಕರಾದ ಶ್ರೀ ಹರಿಹರನ್ ಎಂ.ಬಿ. ಮತ್ತು ಶ್ರೀ ಎಸ್. ಅಶೋಕ್ ಹಾಡುಗಾರಿಕೆಯಲ್ಲಿ ಶ್ರೀ ವಿಶ್ವಜಿತ್ ವಯೊಲಿನ್ ನಲ್ಲಿ, ಶ್ರೀ ಅನಿರುದ್ಧ್ ಎಸ್. ಭಟ್ ಮೃದಂಗದಲ್ಲಿ ಮೋರ್ಸಿಂಗ್ ನಲ್ಲಿ ಶ್ರೀ ಡಿ.ವಿ. ಪ್ರಸನ್ನ ಸಹಕರಿಸಿದರು. ದಿನಾಂಕ : 14-07-2023ರಂದು ರಾಗ ರತ್ನ ಮಾಲಿಕೆ -2 ಕಾರ್ಯಕ್ರಮವು ನಡೆಯಿತು. ಶ್ರೀಮತಿ ಉಷಾ ಕೆಂಬ್ಬಾರ್ ಇವರ ಆತಿಥ್ಯದಲ್ಲಿ ಮಣಿಪಾಲದ ಇವರ ನಿವಾಸ ‘ಜಲದರ್ಶಿನಿ’ಯಲ್ಲಿ ಶ್ರೀ ಮುಡಿಕೊಂಡಾನ್ ರಮೇಶ್, ಚೆನ್ನೈ – ಇವರ ವೀಣಾ ವಾದನ ಕಛೇರಿ ನಡೆಯಿತು. ಮೃದಂಗದಲ್ಲಿ ಡಾ. ಬಾಲಚಂದ್ರ ಆಚಾರ್ ಮತ್ತು ಶ್ರೀ ಶಿಸುಪಾದಕೃಷ್ಣ ಸಹಕರಿಸಿದರು. ಪೂರ್ವಭಾವಿಯಾಗಿ ‘ನಾಮ ಸಂಕೀರ್ತನೆ – ಶ್ರೀಮತಿ ಉಷಾ…
ಹವ್ಯಾಸಿ ಯಕ್ಷಗಾನ ರಂಗದಲ್ಲಿ ಎಲ್ಲಾ ರೀತಿಯ ವೇಷಗಳನ್ನು ಮಾಡುವವರ ಸಂಖ್ಯೆ ಬಹಳಷ್ಟು ಕಡಿಮೆ ಇದೆ. ಅದರಲ್ಲಿಯೂ ಇತ್ತಿಚಿನ ದಿನಗಳಲ್ಲಿ ಸ್ತ್ರೀ ವೇಷ ಮಾಡುವವರ ಸಂಖ್ಯೆ ಬಹಳಷ್ಟು ಕಡಿಮೆ ಇದೆ. ಇಂತಹ ಸಮಯದಲ್ಲಿ ಅನೇಕ ವರ್ಷಗಳಿಂದ ಅನೇಕ ಸಂಘ ಸಂಸ್ಥೆಗಳಲ್ಲಿ ಸಂಪ್ರದಾಯ ಶೈಲಿಯಲ್ಲಿಯೇ ನಾಟ್ಯ, ಅಭಿನಯ, ಮಾತು ಹೀಗೆ ಯಕ್ಷಗಾನದ ಎಲ್ಲಾ ವಿಭಾಗಗಲ್ಲಿಯೂ ಕಲಾಭಿಮಾನಿಗಳ ಮನದಲ್ಲಿ ಸಂತಸವನ್ನುಂಟು ಮಾಡಿದ ಹವ್ಯಾಸಿ ಯಕ್ಷ ಕಲಾವಿದ ಕೆ ಶಂಕರ ದೇವಾಡಿಗ. 10.05.1967ರಂದು ಉಡುಪಿ ಜಿಲ್ಲೆಯ ಸಾಲಿಗ್ರಾಮದ ಕಾರ್ಕಡದ ಗೋವಿಂದ ದೇವಾಡಿಗ ಹಾಗೂ ಪದ್ದು ದೇವಾಡಿಗ ಮಗನಾಗಿ ಜನನ. ಆರನೇ ತರಗತಿವರೆಗೆ ವಿದ್ಯಾಭ್ಯಾಸ. ಕಾರ್ಕಡದಲ್ಲಿ ಯಕ್ಷಗಾನ ತರಬೇತಿ ನಡೆಯುತಿತ್ತು, ಕುಟುಂಬದಲ್ಲಿ ಯಕ್ಷಗಾನ ಹಿನ್ನಲೆ ಇಲ್ಲದೇ ಇದ್ದರೂ ಯಕ್ಷಗಾನದ ಆಸಕ್ತಿ ತುಂಬಾ ಇತ್ತು. ಹಾಗಾಗಿ ಯಕ್ಷಗಾನ ಕಲಿಯಲು ಪ್ರಾರಂಭಿಸಿದರು. ಯಕ್ಷಗಾನದ ಪ್ರಥಮ ಗುರುಗಳು ಸುಬ್ರಾಯ ಮಲ್ಯ ಹಳ್ಳಾಡಿಯವರು. ಯಕ್ಷಗಾನ ರಂಗದ ಎಲ್ಲಾ ಪೌರಾಣಿಕ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು. ಅಂಬೆ, ದ್ರೌಪದಿ, ಸುಭದ್ರೆ, ಸುರುಚಿ ನೆಚ್ಚಿನ ವೇಷಗಳು. ಯಕ್ಷಗಾನದ…
ಮಂಗಳೂರು : ಕನ್ನಡ ಸಾಹಿತ್ಯ ಪರಿಷತ್ತು ದಕ್ಷಿಣ ಕನ್ನಡ ಜಿಲ್ಲಾ ಘಟಕ ಮತ್ತು ಮಂಗಳೂರಿನ ಸಪ್ನ ಬುಕ್ ಹೌಸ್ ಆಶ್ರಯದಲ್ಲಿ ದಿನಾಂಕ : 02-07-2023ರಂದು ಸತೀಶ್ ಚಪ್ಪರಿಕೆ ಅವರ ‘ಘಾಂದ್ರುಕ್’ ಕಾದಂಬರಿ ಹಾಗೂ ಲೇಖಕರ ಜತೆ ಸಂವಾದ ಕಾರ್ಯಕ್ರಮವು ಕೆ. ಎಸ್. ರಾವ್ ರಸ್ತೆಯ ಸಪ್ನ ಬುಕ್ ಹೌಸ್ನಲ್ಲಿ ನಡೆಯಿತು. ‘ಘಾಂದ್ರುಕ್’ ಕಾದಂಬರಿ ಬಿಡುಗಡೆಗೊಳಿಸಿ ಮಾತನಾಡಿದ ಹಿರಿಯ ಕವಿ, ಸಾಹಿತಿ ಡಾ. ವಸಂತಕುಮಾರ್ ಪೆರ್ಲ “ಲೇಖಕ ಸತೀಶ್ ಚಪ್ಪರಿಕೆ ಅವರು ‘ಘಾಂದ್ರುಕ್’ ಕನ್ನಡ ಕಾದಂಬರಿಯನ್ನು ವಿಶಿಷ್ಟ ರೀತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಪ್ರವಾಸ ಕಥನದಂತಿರುವ ಕೃತಿಯು ಓದುಗನ ಮನಗೆಲ್ಲುತ್ತದೆ. ‘ಘಾಂದ್ರುಕ್’ ಅಂದರೆ ಹಿಮಾಲಯದ ತಪ್ಪಲಿನ ಟಿಬೆಟ್ನಲ್ಲಿ ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಒಂದು ಹಳ್ಳಿಯ ಹೆಸರು. ಹಳ್ಳಿಯೊಂದರಿಂದ ನಗರಕ್ಕೆ ಬಂದು ಐಟಿ ಕಂಪನಿಯ ಸಿಇಒ ಆಗುವ ಹಂತಕ್ಕೆ ಬೆಳೆದ ಯುವಕನಿಗೆ ಹಣ, ಬೌದ್ಧಿಕ ಸುಖಕ್ಕೆ ಒಂದು ಮಿತಿ ಇದೆ ಅನಿಸುತ್ತದೆ ಮತ್ತು ಇದರ ಆಚೆಗೂ ಒಂದು ಬದುಕಿದೆ ಎಂಬ ಒಳಅರಿವು ಮೂಡುತ್ತದೆ. ನಂತರ ಆತ ಹೊರ ಜಗತ್ತಿನ…
ಆಂಧ್ರ ಪ್ರದೇಶ: ನವದೆಹಲಿಯ ಗೋಲ್ಡನ್ ಗ್ಲೋಬ್ ಟ್ರಸ್ಟ್ ಮತ್ತು ವಿಶಾಖಪಟ್ಟಣದ ಪ್ರತಿಮಾ ಫೌಂಡೇಶನ್ ಜಂಟಿ ಸಹಯೋಗದಲ್ಲಿ ಆಗಸ್ಟ್ ತಿಂಗಳ 5 ಮತ್ತು 6ನೇ ತಾರೀಕಿನಂದು ಆಂಧ್ರ ಪ್ರದೇಶದ ಗುಂಟೂರಿನಲ್ಲಿ ‘ದಕ್ಷಿಣ ಭಾರತೀಯ ಭಾಷೆಗಳ ಸಮಕಾಲೀನ ಕಥನ ಸಾಹಿತ್ಯ’ದ ಕುರಿತು ನಡೆಯಲಿರುವ ಒಂದು ದಿನದ ರಾಷ್ಟ್ರಮಟ್ಟದ ವಿಚಾರಗೋಷ್ಠಿಗೆ ಯುವ ವಿಮರ್ಶಕ ಮತ್ತು ಲಲಿತ ಪ್ರಬಂಧಕಾರರಾದ ವಿಕಾಸ ಹೊಸಮನಿಯವರು ಕನ್ನಡ ಭಾಷೆಯ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದು ‘ಸಮಕಾಲೀನ ಕನ್ನಡ ಕಥಾ ಸಾಹಿತ್ಯ’ ಎಂಬ ವಿಷಯದ ಬಗ್ಗೆ ಪ್ರಬಂಧವನ್ನು ಮಂಡಿಸಲಿದ್ದಾರೆ. ಮೂಲತಃ ಅರ್ಥಶಾಸ್ತ್ರದ ವಿದ್ಯಾರ್ಥಿಯಾಗಿದ್ದರೂ ಆಧುನಿಕ ಕನ್ನಡ ಸಾಹಿತ್ಯ, ಭಾರತೀಯ ಸಾಹಿತ್ಯ ಮತ್ತು ಇಂಗ್ಲಿಷ್ ಸಾಹಿತ್ಯವನ್ನು ಓದಿಕೊಂಡಿರುವ ವಿಕಾಸ ಹೊಸಮನಿಯವರು ಹೊಸ ಒಳನೋಟಗಳಿಂದ ಕೂಡಿದ ಸಾಹಿತ್ಯಿಕ ಲೇಖನಗಳ ಮೂಲಕ ಕನ್ನಡ ವಿಮರ್ಶಾ ಕ್ಷೇತ್ರದಲ್ಲಿ ಭರವಸೆಯನ್ನು ಮೂಡಿಸಿದ ಯುವ ಪ್ರತಿಭೆಯಾಗಿದ್ದಾರೆ. ಸಾಹಿತ್ಯ ಗಂಗಾ ಧಾರವಾಡ ಸಂಸ್ಥೆಯ ಮುಖ್ಯಸ್ಥರಾಗಿ ಮತ್ತು ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸಂಚಾಲಕರಾಗಿ, ರಾಜ್ಯಮಟ್ಟದ ಸಾಹಿತ್ಯಿಕ ಸ್ಪರ್ಧೆ ಮತ್ತು ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಇವರ ‘ಕನ್ನಡಿ ಮತ್ತು…
ಸುಬ್ರಹ್ಮಣ್ಯ: ಮನಸ್ಸನ್ನು ಅರಳಿಸುವ ಭಾರತೀಯ ಕಲಾ ಪ್ರಕಾರಗಳು ಎಂದೆಂದಿಗೂ ವಿದ್ಯಾರ್ಥಿಗಳಿಗೆ ಸಂತಸ ನೀಡುವುದರೊಂದಿಗೆ ಪಠ್ಯ ವಿಚಾರದಲ್ಲಿ ಹುಮ್ಮಸ್ಸಿನಿಂದ ತೊಡಗಿಕೊಳ್ಳಲು ಸ್ಪೂರ್ತಿ ನೀಡುತ್ತದೆ. ಪ್ರಫುಲ್ಲಿತ ಮನಸುಗಳ ನಿರ್ಮಾಣಕ್ಕೆ ಕಲಾಸಂಪತ್ತು ಅಭೂತಪೂರ್ವ ಕೊಡುಗೆ ನೀಡಿದೆ. ವಿದ್ಯಾರ್ಥಿಗಳು ತಮ್ಮ ಕಲಾಸಂಪತ್ತಿನ ಶ್ರೇಷ್ಠತೆಗೆ ತಮ್ಮದೆ ಆದ ಕೊಡುಗೆ ನೀಡಬೇಕು ಎನ್ನುವ ಉದ್ದೇಶದಿಂದ ಪ್ರತಿಭಾ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ಎಸ್ಎಸ್ಪಿಯು ಕಾಲೇಜಿನ ಪ್ರಾಚಾರ್ಯ ಸೋಮಶೇಖರ ನಾಯಕ್ ಹೇಳಿದರು. ಸುಬ್ರಹ್ಮಣ್ಯದ ಎಸ್.ಎಸ್.ಪಿ.ಯು.ಕಾಲೇಜಿನ ಬೆಳ್ಳಿಹಬ್ಬ ಸಭಾಂಗಣದಲ್ಲಿ ಶನಿವಾರ ಕಾಲೇಜಿನ ಸಾಂಸ್ಕೃತಿಕ ಸಂಘವನ್ನು ಉದ್ಘಾಟಿಸಿ ಪ್ರತಿಭಾ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ವಿಶೇಷ ಪ್ರತಿಭೆಗಳನ್ನು ಗುರುತಿಸಿ ಅವುಗಳನ್ನು ಪೋಷಿಸುವ ಉದ್ದೇಶದಿಂದ ಕಲಾ ಪ್ರದರ್ಶನ ಏರ್ಪಡಿಸಲಾಗಿದೆ. ಸಂಸ್ಥೆಯ ವಿದ್ಯಾರ್ಥಿಗಳ ಪ್ರತಿಭೆಯು ಸರ್ವರಿಗೂ ತಿಳಿಸುವ ಉದ್ದೇಶದಿಂದ ಸಾಂಸ್ಕೃತಿಕ ತಂಡ ರಚಿಸಲಾಗುತ್ತದೆ. ತಂಡವನ್ನು ಸಂಘದ ಸಂಚಾಲಕರ ನೇತೃತ್ವದಲ್ಲಿ ಸಾರ್ವಜನಿಕ ವೇದಿಕೆಯಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲು ಸಜ್ಜುಗೊಳಿಸಲಾಗುವುದು. ಕುಕ್ಕೆ ಸೇರಿದಂತೆ ವಿವಿಧ ಊರುಗಳಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕಾಲೇಜಿನ ತಂಡವನ್ನು ಕಳುಹಿಸುವ ವ್ಯವಸ್ಥೆ ಮಾಡಲಾಗುವುದು…
ಮಂಗಳೂರು: ಕುಳಾಯಿಯ ಶ್ರೀ ವಿಷ್ಣುಮೂತಿ೯ ಯಕ್ಷಗಾನ ಮಂಡಳಿಯ ಮಾಸಿಕ ಹುಣ್ಣಿಮೆ ತಾಳಮದ್ದಳೆ ಕಾರ್ಯಕ್ರಮದ ಅಂಗವಾಗಿ ಶ್ರೀ ರಾಮ ವನಾಗಮನ ಮತ್ತು ಪಾದುಕಾ ಪ್ರಧಾನ ಎಂಬ ಯಕ್ಷಗಾನ ತಾಳಮದ್ದಳೆ ದಿನಾಂಕ 03-07-2023ನೇ ಸೋಮವಾರ ಸಂಜೆ ಕುಳಾಯಿಯ ಶ್ರೀ ವಿಷ್ಣುಮೂತಿ೯ ದೇವಸ್ಥಾನದ ಆವರಣದಲ್ಲಿ ನಡೆಯಿತು. ಹಿಮ್ಮೇಳದಲ್ಲಿ ಭಾಗವತಾರಾಗಿ ಪುತ್ತಿಗೆ ರಘುರಾಮ ಹೊಳ್ಳ ಭಾಗವಹಿಸಿದ್ದು ಚಂಡೆ ಹಾಗೂ ಮದ್ದಳೆಯಲ್ಲಿ ಲಕ್ಷೀಶ ಅಮ್ಮಣ್ಣಾಯ, ಚಿತ್ರಾಪುರ ಸುಬ್ರಹ್ಮಣ್ಯ ಹಾಗೂ ಸುರೇಶ್ ಕಾಮತ್ ಭಾಗವಹಿಸಿದ್ದು ಅರ್ಥಧಾರಿಗಳಾಗಿ ಶಂಭು ಶಮ೯ ದಶರಥನಾಗಿ, ಸುಣ್ಣಂಬಂಳ ವಿಶ್ವೇಶ್ವರ ಭಟ್ ಶ್ರೀ ರಾಮನಾಗಿ, ವಾಸುದೇವ ರಂಗಾ ಭಟ್ ಭರತನಾಗಿ, ಹರೀಶ್ ಬೊಳಂತಿಮೊಗರು ಕೈಕೇಯಿಯಾಗಿ ಹಾಗೂ ವಾದಿರಾಜ ಕಲ್ಲೂರಾಯ ಲಕ್ಷಣನಾಗಿ ಭಾಗವಹಿಸಿದರು.
ಮೈಸೂರು: ಕರ್ನಾಟಕ ರಂಗಭೂಮಿಗೆ ಅಪಾರ ಕೊಡುಗೆ ನೀಡಿರುವ ಗುರು ಶ್ರೀ ಕೆ.ವಿ. ಸುಬ್ಬಣ್ಣನವರ ನೆನಪಿನಲ್ಲಿ ತಿಂಗಳಿಡೀ ನಟನದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ 01-07-2023ರಂದು ನಾಡಿನ ಪ್ರಖ್ಯಾತ ರಂಗಕರ್ಮಿ ಕಲ್ಕತ್ತಾದ ಮನೀಶ್ ಮಿತ್ರ ಅವರಿಂದ ‘ಸಾವಯವ ರಂಗಭೂಮಿ’ಯ ಕುರಿತಾದ ಕಾರ್ಯಾಗಾರ ನಡೆಯಿತು. “ತಿಂಗಳಿಡೀ ನಡೆಯುವ ನಾಟಕ ಪ್ರದರ್ಶನಗಳು, ರಂಗಕಾರ್ಯಾಗಾರ, ರಾಷ್ಟ್ರೀಯ ವಿಚಾರ ಸಂಕಿರಣ, ರಂಗಚರ್ಚೆ, ರಂಗಗೀತೆಗಳು, ಸಾಕ್ಷಚಿತ್ರ ಪ್ರದರ್ಶನಗಳನ್ನು ಗುರು ಸುಬ್ಬಣ್ಣ ಅವರಿಗೆ ಅರ್ಪಿಸಲಾಗಿದೆ” ಎಂದು ನಟನ ರಂಗಶಾಲೆಯ ಪ್ರಾಂಶುಪಾಲರಾದ ಶ್ರೀ ಮೇಘಸಮೀರ ಅವರು ತಿಳಿಸಿದರು. ಮನೀಶ್ ಮಿತ್ರ ಅವರು ಭಾರತದಾದ್ಯಂತ ಹುಟ್ಟುಹಾಕಿರುವ ರಂಗಾಂದೋಲನದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಶಿಬಿರದಲ್ಲಿ ಪಾಲ್ಗೊಂಡ ಆಸಕ್ತ ಶಿಬಿರಾರ್ಥಿಗಳು ಅಭಿನಯದ ಹೊಸ ಹೊಸ ಮಜಲುಗಳನ್ನು ಹಾಗೂ ಸಾವಯವ ರಂಗಭೂಮಿಯ ಕುರಿತಾಗಿ ಪ್ರಾತ್ಯಕ್ಷಿಕೆಗಳ ಮೂಲಕ, ಉಸಿರಾಟದ ನಿಯಂತ್ರಣದ ಮೂಲಕ ಮತ್ತು ಮಾತಿನ ಗ್ರಹಿಕೆಗಳ ಮೂಲಕ ಮನೀಶ್ ಮಿತ್ರ ಅವರಿಂದ ಶಿಬಿರದಲ್ಲಿ ಅಭ್ಯಾಸ ಮಾಡಿ ತಿಳಿದುಕೊಂಡರು. ಇದೊಂದು ಅಪರೂಪದ ಅರ್ಥಪೂರ್ಣ ಕಾರ್ಯಕ್ರಮವಾಗಿತ್ತು. ಈ ಸಂದರ್ಭದಲ್ಲಿ ನಟನದ ಸಂಸ್ಥಾಪಕರಾದ…
ಬ್ರಹ್ಮಾವರ: ಮಂದಾರ (ರಿ.) ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ಗಾಂಧಿನಗರ ಬೈಕಾಡಿ ಬ್ರಹ್ಮಾವರ ಇದರ ವತಿಯಿಂದ ಮಳೆಗಾಲದ ಕಾರ್ಯಕ್ರಮ ಅಂಗವಾಗಿ ಆಯೋಜಿಸಲಾದ ಜನಮನದಾಟ ರಂಗತಂಡ ಮತ್ತು ಸತ್ಯಶೋಧನ ರಂಗಸಮುದಾಯ ಹೆಗ್ಗೋಡು ಪ್ರಸ್ತುತಪಡಿಸಿದ “ರೊಟ್ಟಿಯ ಸಲುವಾಗಿ ಇಷ್ಟೆಲ್ಲ” ಎಂಬ ನಾಟಕವು ದಿನಾಂಕ 01-07-2023 ರಂದು ಬ್ರಹ್ಮವಾರದ ಎಸ್. ಎಂ. ಎಸ್ ಪ. ಪೂ. ಕಾಲೇಜಿನ ಸಭಾಂಗಣದಲ್ಲಿ ಪ್ರದರ್ಶನಗೊಂಡಿತು. ಈ ಕಾರ್ಯಕ್ರಮವನ್ನು ತಮಟೆ ಬಾರಿಸುವುದರ ಮೂಲಕ ಉದ್ಘಾಟಿಸಲಾಯಿತು. ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ ಘಟಕದ ಅಧ್ಯಕ್ಷರಾದ ಶ್ರೀ ರಾಮಚಂದ್ರ ಐತಾಳ್, ಲೇಖಕಿ ಸುಧಾ ಆಡುಕಳ, ರಾಘವೇಂದ್ರ ಶೆಟ್ಟಿ ಕರ್ಜೆ, ಬ್ರಹ್ಮಾವರದ ಎಸ್.ಎಮ್.ಎಸ್ ಪ.ಪೂ ಕಾಲೇಜಿನ ಪ್ರಾಂಶುಪಾಲರಾದ ಐವನ್ ಡೊನಾತ್ ಸುವಾರಿಸ್ ಉಪಸ್ಥಿತರಿದ್ದರು.
ಕಾಸರಗೋಡು : ನುಳ್ಳಿಪ್ಪಾಡಿಯ ಕನ್ನಡ ಭವನ ಮತ್ತು ಗ್ರಂಥಾಲಯದ ಬಾಲ ಪ್ರತಿಭಾ ಪುರಸ್ಕಾರವಾದ ‘ಭರವಸೆಯ ಬೆಳಕು’ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. 21 ವರ್ಷದೊಳಗಿರುವ ಪ್ರತಿಭೆಗಳು ಅರ್ಜಿ ಸಲ್ಲಿಸಬಹುದು. ಸಾಹಿತ್ಯ, ಕಲೆ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಯೋಗ, ಸಂಗೀತ, ಹರಿಕಥೆ, ಯಕ್ಷಗಾನ, ಭಾಷಣ, ಕ್ರೀಡೆ ಮುಂತಾದ ನಾಡು, ನುಡಿ, ಸಂಸ್ಕೃತಿಯಲ್ಲಿ ಅಪ್ರತಿಮ ಸಾಧನೆ ಮಾಡಿದ ಕೇರಳ ರಾಜ್ಯದ ಆಯ್ದ 10 ಮಂದಿಗೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಿಂದ ಐವರಿಗೆ ಪ್ರಶಸ್ತಿ ನೀಡಲಾಗುವುದು. ಪ್ರತಿಭಾ ಸಾಕ್ಷಿ ಪ್ರಮಾಣಗಳನ್ನು ಹಾಗೂ ಭಾವಚಿತ್ರ, ಆಧಾರ್ ಕಾರ್ಡ್ ಪ್ರತಿಯೊಂದಿಗೆ ಕನ್ನಡ ಭವನ ಗ್ರಂಥಾಲಯದ ಅಧ್ಯಕ್ಷ ವಾಮನ್ ರಾವ್ ಬೇಕಲ್, ನುಳ್ಳಿಪ್ಪಾಡಿ, ಕಾಸರಗೋಡು -671121 ವಿಳಾಸಕ್ಕೆ ಅಥವಾ 9633073400, ಸಂಚಾಲಕಿ ಸಂಧ್ಯಾರಾಣಿ ಟೀಚರ್-9747093552, ಕಾರ್ಯದರ್ಶಿ ವಸಂತ ಕೆರೆಮನೆ-9995667277 ಅವರ ವಾಟ್ಸ್ ಅಪ್ ನಂಬರಿಗೆ ಕಳುಹಿಸಬಹುದು. ಆಗಸ್ಟ್ 15ರಂದು ನಡೆಯುವ ಕನ್ನಡ ಭವನ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಈ ಪ್ರಶಸ್ತಿ ನೀಡಲಾಗುವುದು. ಪ್ರೊಫೈಲ್ ಗಳನ್ನು ಜು.20ರೊಳಗೆ ತಲುಪಿಸಬೇಕು ಎಂಬ ಸೂಚನೆಯೊಂದಿಗೆ ತಮ್ಮ…
ಕಾರ್ಕಳ : ಮಕ್ಕಳ ಸಾಹಿತ್ಯ ಸಂಗಮ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕಾಸರಗೋಡು ಹಾಗೂ ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆಯ ಜಂಟಿ ಆಶ್ರಯದಲ್ಲಿ ಲೇಖಕಿ ಶ್ರೀಮತಿ ಸಾವಿತ್ರಿ ಮನೋಹರ್ ಅವರ 22ನೇ ನಾಟಕ ಕೃತಿ “ನಮ್ಮ ಸಂಸಾರ ಅನ್ ಲೈನ್ ಅವಾಂತರ” ಪ್ರಕಾಶ್ ಹೋಟೆಲ್ ನ ಸಂಭ್ರಮ ಸಭಾಂಗಣದಲ್ಲಿ ದಿನಾಂಕ :29-06-2023ರಂದು ಲೋಕಾರ್ಪಣೆಗೊಂಡಿತು. ಶ್ರೀಮತಿ ಸಾವಿತ್ರಿ ಮನೋಹರ್ ಹಿರಿಯ ಲೇಖಕಿ ಶ್ರೀಮತಿ ಇಂದಿರಾ ಹಾಲಂಬಿ ಕೃತಿಯನ್ನು ಲೋಕಮುಖಕ್ಕೆ ಅನಾವರಣಗೊಳಿಸಿ ನಾಟಕದ ತುಂಬೆಲ್ಲ ಹರಡಿಕೊಂಡಿರುವ ಸಂಸಾರಿಕ ಬಂಧ ಹೊಸ ರೂಪ ಹೊತ್ತು ನಿಂತ ಸ್ತ್ರೀವಾದ ಹಾಸ್ಯ ಲೇಪದೊಂದಿಗೆ ಸುಖಾಂತ್ಯಗೊಂಡಿರುವ ಬಗೆಯನ್ನು ಮೆಚ್ಚಿಕೊಂಡರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡ ಶಿಕ್ಷಣ ತಜ್ಞ ಡಾ. ಮಹಾಬಲೇಶ್ವರ ರಾವ್ ಮಾತನಾಡಿ, “ನಾಟಕದಲ್ಲಿ ವಾಸ್ತವ ಪ್ರಜ್ಞೆ ಹಾಸು ಹೊಕ್ಕಾಗಿರುವ ರೀತಿ, ಲೇಖಕಿಯ ಬರವಣಿಗೆಯ ಪ್ರೀತಿ, ಸಂಸಾರವೇ ಸಾಹಿತ್ಯವಾಗುವ ನೀತಿ ಇಲ್ಲಿ ನಾಟಕದ ರೂಪಕ್ಕೆ ಇಂಬು ಕೊಡುವಂತಿದೆ” ಎಂದರು. ಮುಖ್ಯ ಅತಿಥಿ ಮಕ್ಕಳ ಸಾಹಿತ್ಯ ಸಂಗಮದ ಕೋಶಾಧಿಕಾರಿ ಶ್ರೀ ಅನಂತಪದ್ಮನಾಭ…