Subscribe to Updates
Get the latest creative news from FooBar about art, design and business.
Author: roovari
ತಲಕಾಡು : ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಲಕಾಡು ಇದರ ಆಂತರಿಕ ಗುಣಮಟ್ಟ ಭರವಸಾ ಕೋಶ ಸಾಂಸ್ಕೃತಿಕ ವೇದಿಕೆ ಮತ್ತು ಕನ್ನಡ ವಿಭಾಗ ಆಯೋಜಿಸಿರುವ ಮೈಸೂರಿನ ನಿರಂತರ ರಂಗ ತಂಡ ಪ್ರಸ್ತುತ ಪಡಿಸುವ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ರಚಿಸಿರುವ ‘ಕೃಷ್ಣೇಗೌಡನ ಆನೆ’ ನಾಟಕ ಪ್ರದರ್ಶನವನ್ನು ದಿನಾಂಕ 07 ಆಗಸ್ಟ್ 2025ರಂದು ಬೆಳಗ್ಗೆ 11-30 ಗಂಟೆಗೆ ತಲಕಾಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ಆಯೋಜಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಇವರ ಸಹಕಾರದೊಂದಿಗೆ ಹಮ್ಮಿಕೊಂಡ ಈ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಶ್ರೀಯುತ ಸಾಧಿಕ್ ಪಾಷಾ ಇವರು ನಾಟಕಕ್ಕೆ ಚಾಲನೆ ನೀಡಲಿದ್ದು, ಜೀವನ್ ಕುಮಾರ್ ಬಿ. ಹೆಗ್ಗೋಡು ಇವರು ಈ ನಾಟಕದ ವಿನ್ಯಾಸ ಮತ್ತು ನಿರ್ದೇಶನ ಮಾಡಿರುತ್ತಾರೆ.
ಮಂಗಳೂರು : ನೃತ್ಯ ಗುರುಗಳ ಸಂಘಟನೆಯಾದ ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್ ಆಯೋಜಿಸಿದ ನೃತ್ಯ ಕ್ಷೇತ್ರದಲ್ಲಿ ಸತತ 170 ಗಂಟೆಗಳ ಕಾಲ ಭರತನಾಟ್ಯ ಮ್ಯಾರಥಾನ್ ಮಾಡಿ ಗೋಲ್ಡನ್ ಬುಕ್ ರೆಕಾರ್ಡ್ ಮಾಡಿದ ಸೌರಭ ನೃತ್ಯಕಲಾ ಪರಿಷತ್ ಸಂಸ್ಥೆಯ ಡಾ .ಶ್ರೀವಿದ್ಯಾ ರವರ ಶಿಷ್ಯೆ ರೆಮೋನಾ ಎವೆಟ್ ಪಿರೇರಾ ಇವರಿಗೆ ಅಭಿನಂದನಾ ಸಮಾರಂಭ ದಿನಾಂಕ 03 ಆಗಸ್ಟ್ 2025ರ ಭಾನುವಾರದಂದು ಮಂಗಳೂರಿನ ಶರವು ದೇವಳದ ದ್ಯಾನ ಮಂದಿರದಲ್ಲಿ ನಡೆಯಿತು. ಸಮಾರಂಭದಲ್ಲಿ ರೆಮೋನಾ ಎವೆಟ್ ಪಿರೇರಾ ಇವರನ್ನು ಅಭಿನಂದಿಸಿದ ಶರವು ಕ್ಷೇತ್ರದ ಶಿಲೆ ಶಿಲೆ ಮೊಕ್ತೇಸರರಾದ ರಾಘವೇಂದ್ರ ಶಾಸ್ತ್ರಿಯವರು ಮಾತನಾಡಿ “ಸಾಧನೆಯಿಂದ ಯಶಸ್ಸು ಖಂಡಿತಾ ದೊರೆಯುತ್ತದೆ. ಮನುಷ್ಯ ಸಾಧನೆಯಿಂದ ಏನನ್ನೂ ಸಾಧಿಸಬಹುದು. ಸಾಧನೆ ಎಂದರೆ ಒಬ್ಬ ವ್ಯಕ್ತಿ ತನಗೆ ತಾನೇ ಹಾಕಿಕೊಂಡ ಗುರಿಯನ್ನು ತಲಪುವುದು ಅಥವಾ ಒಂದು ನಿರ್ದಿಷ್ಟ ಕೆಲಸವನ್ನು ಯಶಸ್ವಿಯಾಗಿ ಪೂರ್ತಿಗೊಳಿಸಿ ಅದರಲ್ಲಿ ತೃಪ್ತಿ ಹೊಂದುವುದು. ಇಂದು ರೆಮೋನಾ ಊಟ ತಿಂಡಿ ನಿದ್ರೆ ದೈನಂದಿನ ನಿತ್ಯ ಕಾರ್ಯಗಳನ್ನು ಹತೋಟಿಯಲ್ಲಿಟ್ಟುಕೊಂಡು ನೃತ್ಯ ಕ್ಷೇತ್ರದಲ್ಲಿ…
ಹಾಸನ : 2007 ಜೂಲೈ 18 ರಂದು, ರತ್ನಕಲಾ ಪದ್ಮ ಕುಟೀರ ಟ್ರಸ್ಟ್ (ರ್) ನ ಭಾಗವಾಗಿ, ಸತತವಾಗಿ 18 ವರ್ಷಗಳಿಂದ ಹಾಸನದ ನಾಟ್ಯಕಲಾ ನಿವಾಸ್ ಸಂಸ್ಥೆಯು ಹಲವಾರು ದೇಶಗಳಲ್ಲಿ ಪ್ರಖ್ಯಾತಿ ಹೊಂದಿರುವ ವಿಶೇಷ ಸಂಸ್ಥೆಯಾಗಿ ಇಂದು ಹಾಸನದ ಹೆಸರನ್ನ ಭೂಪಟದಲ್ಲಿ ದಾಖಲಿಸಿದೆ. ಭಾರತೀಯ ನೃತ್ಯ ಪರಂಪರೆಯ ವಿಭಿನ್ನ ಶೈಲಿಗಳ ಜೊತೆಯಲ್ಲಿ, ವಿದೇಶಿಯ ನೃತ್ಯ ಪರಂಪರೆಯನ್ನ ಹಾಸನದ ಜನಕ್ಕೆ ಪರಿಚಯಿಸಿದ ಹೆಗ್ಗಳಿಕೆ ಈ ಸಂಸ್ಥೆಗೆ ಸೇರುತ್ತದೆ. 02 ಆಗಸ್ಟ್ 2025 ರಂದು ಹಾಸನದ ಹಾಸನಾಂಬಾ ಕಲಾಕ್ಷೇತ್ರದಲ್ಲಿ ತನ್ನ 18ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ‘ ಹರಿಹರ ಸುತ’ – ಅಯ್ಯಪ ಸ್ವಾಮಿಯ ಚರಿತ್ರೆ ಆಧಾರಿತ ನೃತ್ಯ ನಾಟಕವನ್ನು ಸುಮಾರು 100 ಸಂಸ್ಥೆಯ ಮಕ್ಕಳೊಂದಿಗೆ ಪ್ರಸ್ತುತಪಡೆಸಿತು. ಮೈಸೂರಿನ ಖ್ಯಾತ ವಾದ್ಯ ಕಲಾವಿದರುಗಳಾದ ಶ್ರೀಯುತ ವಿಕ್ರಂ ಭರದ್ವಾಜ, ಶ್ರೀ ಸಮೃದ್ದ್ ಶ್ರೀನಿವಾಸ್ , ಶ್ರೀ ಸುಜೇಯೇಂದ್ರ, ಶ್ರೀ ವಿನಯ್ ರಂಗದೊಳ್ ಹಾಗು ಕೇರಳದ ಶ್ರೀ ಹರಿದಾಸ್ ಸೇರಿದಂತೆ ಶ್ರೀ ಸುಬ್ಬ್ರಮಣ್ಯ ರಾವ್ ಹಾಗು ಶ್ರೀ…
ಬೆಂಗಳೂರು : ಉತ್ಥಾನ ಮಾಸಪತ್ರಿಕೆಯು ಕಳೆದ ಐದು ದಶಕಗಳಿಂದ ರಾಜ್ಯ ಮಟ್ಟದ ವಾರ್ಷಿಕ ಕಥಾ ಸ್ಪರ್ಧೆ ಆಯೋಜಿಸುತ್ತಿದ್ದು, ಈ ಬಾರಿ 2025ನೇ ಸಾಲಿನ ಸ್ಪರ್ಧೆಗೆ ಕಥೆಯನ್ನು ಆಹ್ವಾನಿಸಲಾಗಿದೆ. ಕಥೆಯು 3000 ಪದಗಳ ಮಿತಿಯಲ್ಲಿರಬೇಕು. ಕಥೆಗಳು ಸ್ವತಂತ್ರವಾಗಿರಬೇಕು ಮತ್ತು ಬೇರೆಲ್ಲೂ ಪ್ರಕಟಣೆ ಅಥವಾ ಸ್ವೀಕೃತವಾಗಿರಬಾರದು. ಒಬ್ಬರು ಒಂದು ಕಥೆಯನ್ನು ಮಾತ್ರ ಕಳುಹಿಸಬಹುದು. ಕಥೆಯನ್ನು ಅಂಚೆ ಮೂಲಕ ಅಥವಾ ನುಡಿ ಇಲ್ಲವೇ ಯೂನಿಕೋಡ್ ತಂತ್ರಾಂಶದಲ್ಲಿ ಸಿದ್ದಪಡಿಸಿ ಇ-ಮೇಲ್ ಮೂಲಕ ಕಳುಹಿಸಬಹುದಾಗಿದೆ. ಕಥೆಗಳು ತಲುಪಲು ಅಕ್ಟೋಬರ್ 10 ಕೊನೆಯ ದಿನವಾಗಿದ್ದು, ಲೇಖಕರು ತಮ್ಮ ಹೆಸರು, ವಿಳಾಸ, ಕಿರುಪರಿಚಯ ಮುಂತಾದ ವಿವರಗಳನ್ನು ಪ್ರತ್ಯೇಕ ಪುಟದಲ್ಲಿ ಬರೆದು ಕಳುಹಿಸಬೇಕು. ಜೊತೆಗೆ ಲೇಖಕರ ಭಾವಚಿತ್ರವೂ ಇರಬೇಕು. ಕಥೆಗಳನ್ನು ಇ-ಮೇಲ್ : [email protected] ಅಥವಾ ಸಂಪಾದಕರು, ಉತ್ಥಾನ ವಾರ್ಷಿಕ ಕಥಾ ಸ್ಪರ್ಧೆ -2025, ಕೇಶವ ಶಿಲ್ಪ, ಕೆಂಪೇಗೌಡನಗರ, ಬೆಂಗಳೂರು -04 ಇಲ್ಲಿಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ 7795441894 ಈ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.
ಮಂಗಳೂರು : ಮಂಗಳೂರಿನ ಭ್ರಾಮರೀ ಯಕ್ಷಮಿತ್ರರು ಟ್ರಸ್ಟ್ ಆಶ್ರಯದಲ್ಲಿ ಆಯೋಜಿಸಲಾದ ಎಂಟನೇ ವರ್ಷದ ಭ್ರಾಮರಿ ಯಕ್ಷವೈಭವ ಕಾರ್ಯಕ್ರಮ ದಿನಾಂಕ 01 ಆಗಸ್ಟ್ 2025ರ ಶನಿವಾರದಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಶಾಸಕ ಡಿ. ವೇದವ್ಯಾಸ ಕಾಮತ್ ಮಾತನಾಡಿ “ಸಾಮಾಜಿಕ ಜಾಲತಾಣವನ್ನು ಕೂಡ ಸಮಾಜದ ಶ್ರೇಯಸ್ಸಿಗೆ, ಕಲಾಕ್ಷೇತ್ರದ ಪ್ರೋತ್ಸಾಹಕ್ಕೂ ವಿನಿಯೋಗಿಸಲು ಬಹಳಷ್ಟು ಅವಕಾಶವಿದೆ. ಈ ನಿಟ್ಟಿನಲ್ಲಿ ವಾಟ್ಸಾಪ್ ಗ್ರೂಪ್ನಿಂದ ಆರಂಭವಾದ ಭ್ರಾಮರೀ ಯಕ್ಷಮಿತ್ರರು ಬಳಗ ಈಗ ಟ್ರಸ್ಟ್ ಮೂಲಕ ಪ್ರತೀ ವರ್ಷ ಮಳೆಗಾಲದ ಕಾಲದಲ್ಲಿ ರಾತ್ರಿ ಇಡೀ ಯಕ್ಷಗಾನ ಪ್ರದರ್ಶಿಸುವ ಕಾರ್ಯಯೋಜನೆ ಹಾಕಿಕೊಳ್ಳುವುದು ಅಭಿನಂದನೀಯ” ಎಂದು ಹೇಳಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಟಿ. ಜಿ. ರಾಜಾರಾಮ್ ಭಟ್ ಮಾತನಾಡಿ “ವಾಟ್ಸಾಪ್ ಗ್ರೂಪ್ನಿಂದ ಆರಂಭವಾದ ಭ್ರಾಮರೀ ಯಕ್ಷಮಿತ್ರರು ಈಗ ಟ್ರಸ್ಟ್ ಮುಖೇನ ಯಕ್ಷಗಾನದ ಬಗ್ಗೆ ಸರ್ವರಿಗೂ ಆಸಕ್ತಿ ಮೂಡಿಸುವ ಕಾರ್ಯ ನಡೆಸುತ್ತಿರುವುದು ಅಭಿನಂದನೀಯ” ಎಂದರು. ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷರಾದ ಭಾಸ್ಕರ್…
ಕಟೀಲು : ಮಯೂರ ಪ್ರತಿಷ್ಠಾನ (ರಿ.) ಮಂಗಳೂರು ಇದರ ಪ್ರಥಮ ವಾರ್ಷಿಕೋತ್ಸವ ಪ್ರಯುಕ್ತ ‘ಮಯೂರಯಾನ -1′ ಕಾರ್ಯಕ್ರಮವನ್ನು ದಿನಾಂಕ 09 ಆಗಸ್ಟ್ 2025ರಂದು ಸಂಜೆ 5-00 ಗಂಟೆಗೆ ಕಟೀಲು ರಥಬೀದಿಯಲ್ಲಿರುವ ಶ್ರೀ ಸರಸ್ವತೀ ಸದನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ‘ಅಶ್ವಮೇಧ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಕೋಟೇಶ್ವರ : ಶ್ವೇತಛತ್ರ ಯಕ್ಷಮಿತ್ರ (ರಿ.) ಕೋಣಿ ಕುಂದಾಪುರ ಇವರ ಸಂಯೋಜನೆಯಲ್ಲಿ ತೆಂಕು ಹಾಗೂ ಬಡಗಿನ ಪ್ರಖ್ಯಾತ ಕಲಾವಿದರ ಕೂಡುವಿಕೆಯಲ್ಲಿ ಅದ್ದೂರಿ ಯಕ್ಷಗಾನ ಪ್ರದರ್ಶನವನ್ನು ದಿನಾಂಕ 10 ಆಗಸ್ಟ್ 2025ರಂದು ಮಧ್ಯಾಹ್ನ 3-30 ಗಂಟೆಗೆ ಕೋಟೇಶ್ವರ ಹಾಲಾಡಿ ರಸ್ತೆಯಲ್ಲಿರುವ ಯುವ ಮೆರಿಡಿಯನ್ ಗ್ರ್ಯಾಮಿ ಬಾಲ್ ರೂಮ್ ಇಲ್ಲಿ ಆಯೋಜಿಸಲಾಗಿದೆ. ಕೀರಿಕಾಡು ಮಾ. ವಿಷ್ಣು ಭಟ್ಟ ರಚಿಸಿರುವ ಶ್ವೇತಕುಮಾರ ಚರಿತ್ರೆ ಎಂಬ ಪ್ರಸಂಗದ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ತೆಂಕು ಹಿಮ್ಮೇಳದಲ್ಲಿ ಶ್ರೀಮತಿ ಕಾವ್ಯಶ್ರೀ ಅಜೇರು, ಮದ್ದಲೆಯಲ್ಲಿ ಕೃಷ್ಣಪ್ರಕಾಶ್ ಉಳಿತ್ತಾಯ ಮತ್ತು ಚಂಡೆಯಲ್ಲಿ ಚಂದ್ರಶೇಖರ್ ಆಚಾರ್ಯ ಗುರುವಾಯನಕೆರೆ ಹಾಗೂ ಬಡಗು ಹಿಮ್ಮೇಳದಲ್ಲಿ ಸುರೇಶ್ ಶೆಟ್ಟಿ ಎಸ್., ಕುಮಾರಿ ಚಿಂತನಾ ಹೆಗಡೆ ಮಾಳ್ಕೋಡು, ಮದ್ದಲೆಯಲ್ಲಿ ಸುನಿಲ್ ಭಂಡಾರಿ, ಎನ್.ಜಿ. ಹೆಗಡೆ ಮತ್ತು ಚಂಡೆಯಲ್ಲಿ ಶಿವಾನಂದ ಕೋಟ, ರಾಧಾಕೃಷ್ಣ ಕುಂಜತ್ತಾಯ ಇವರುಗಳು ಸಹಕರಿಸಲಿದ್ದಾರೆ. ಮುಮ್ಮೇಳದಲ್ಲಿ ಕೊಡ್ಲಾಡಿ ಸುಭಾಶ್ಚಂದ್ರ ಶೆಟ್ಟಿ, ನವೀನ್ ಶೆಟ್ಟಿ ಐರ್ ಬೈಲು, ಸುಧೀರ್ ಉಪ್ಪೂರು, ವಿಶ್ವನಾಥ್ ಕಿರಾಡಿ, ನಾಗೇಶ್ ಆಚಾರ್ಯ ಬೈಲೂರು, ಸೀತಾರಾಮ್ ಕುಮಾರ್ ಕಟೀಲು,…
ಮೂಡಬಿದಿರೆ : ಶಿವರಾಮ ಕಾರಂತ ಪ್ರತಿಷ್ಠಾನ ವತಿಯಿಂದ ನೀಡಲಾಗುವ 2025ರ ಸಾಲಿನ ಶಿವರಾಮ ಕಾರಂತ ಪ್ರಶಸ್ತಿ ಮತ್ತು ಪುರಸ್ಕಾರ ಪ್ರದಾನ ಸಮಾರಂಭ ದಿನಾಂಕ 13 ಆಗಸ್ಟ್ 2025ರಂದು ಸಂಜೆ ಘಂಟೆ 5.00ಕ್ಕೆ ಸೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ನಡೆಯಲಿದೆ. ಶಿವರಾಮ ಕಾರಂತ ಪ್ರತಿಷ್ಠಾನ ಮೂಡುಬಿದಿರೆ ಇದರ ಅಧ್ಯಕ್ಷೆಯಾದ ಜಯಶ್ರೀ ಅಮರನಾಥ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಹಿರಿಯ ಲೇಖಕ ಪ್ರೊ. ಎನ್. ಟಿ. ಭಟ್, ಚಿಂತಕ ಪ್ರೊ. ಬರಗೂರು ರಾಮಚಂದ್ರಪ್ಪ ಮತ್ತು ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಶಿವರಾಮ ಕಾರಂತ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ. ಜಯಪ್ರಕಾಶ ಮಾವಿನಕುಳಿ ತಿಳಿಸಿದ್ದಾರೆ.
‘ಮಾತು ಎಂಬ ವಿಸ್ಮಯ’ ಡಾ. ಮೀನಾಕ್ಷಿ ರಾಮಚಂದ್ರ ಇವರು ಮಲೆಯಾಳದಿಂದ ಕನ್ನಡಕ್ಕೆ ಅನುವಾದಿಸಿರುವ ಸಜಿ ಎಂ. ನರಿಕ್ಕುಯಿ ಇವರ ಒಂದು ಅಪೂರ್ವ ಕೃತಿ. ಮನುಷ್ಯನು ತನ್ನ ಜೀವನದಲ್ಲಿ ಯಶಸ್ಸು ಸಾಧಿಸಬೇಕಿದ್ದರೆ, ಸುಖ ಶಾಂತಿ ನೆಮ್ಮದಿಗಳನ್ನು ಪಡೆಯಬೇಕಿದ್ದರೆ, ಯಾವ ರೀತಿಯ ಧನಾತ್ಮಕ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಅನ್ನುವುದನ್ನು ಲೇಖಕರು ಈ ಕೃತಿಯಲ್ಲಿ ಅತ್ಯಂತ ವ್ಯವಸ್ಥಿತವಾಗಿ ಮತ್ತು ಶಿಸ್ತುಬದ್ದವಾಗಿ ವಿವರಿಸಿದ್ದಾರೆ. ನಾವು ಆಡುವ ಬಹಿರಂಗದ ಮಾತ್ರವಲ್ಲದೆ ಅಂತರಂಗದೊಳಗಿನ ಮಾತುಗಳು ಹೇಗೆ ನಮ್ಮ ಜೀವನದಲ್ಲಿ ವಿಸ್ಮಯಕರವಾದ ಬದಲಾವಣೆಗಳನ್ನು ಉಂಟುಮಾಡಬಹುದು ಅನ್ನುವುದನ್ನು ಸನ್ನಿವೇಶ-ಸಂದರ್ಭಗಳ ಉಲ್ಲೇಖಗಳ ಮೂಲಕ ಸೋದಾಹರಣವಾಗಿ ಚಿತ್ರಿಸಿದ್ದಾರೆ. ಈ ಕೃತಿಯಲ್ಲಿ ಒಟ್ಟು ಐದು ಭಾಗಗಳಿವೆ. ಪ್ರತಿಯೊಂದು ಭಾಗವನ್ನು 8-10 ಅಧ್ಯಾಯಗಳಾಗಿ ವಿಂಗಡಿಸಲಾಗಿದೆ. ಪ್ರತಿ ಅಧ್ಯಾಯದ ಕೊನೆಗೂ ಆ ಅಧ್ಯಾಯವು ಹೇಳುವ ವಿಚಾರಗಳ ಸಾರಸತ್ವದ ಮೇಲೆ ಬೆಳಕು ಚೆಲ್ಲುವ ಒಂದು ವಾಕ್ಯವನ್ನು ನೀಡಲಾಗಿದೆ. ಇದು ತರಗತಿಯಲ್ಲಿ ಅಧ್ಯಾಪಕರು ಪಾಠ ಮಾಡುವ ರೀತಿಯಲ್ಲಿದೆ. ಓದುಗರು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಇದು ಸಹಕಾರಿ. ‘ಮಾತಿನ ಮಾಂತ್ರಿಕ ಶಕ್ತಿ’ ಎಂಬ ಮೊದಲ ಭಾಗದಲ್ಲಿ ಒಂಭತ್ತು…
ಬೆಂಗಳೂರು : ಬುದ್ದ, ಬಸವ, ಗಾಂಧಿ ಸಾಂಸ್ಕೃತಿಕ ಟ್ರಸ್ಟ್, ಪ್ರೊ. ಕೃಷ್ಣಪ್ಪ ಟ್ರಸ್ಟ್ ಹಾಗೂ ವೀರಲೋಕ ಪಬ್ಲಿಕೇಶನ್ ಸಹಕಾರದಲ್ಲಿ ದಿನಾಂಕ 03 ಜುಲೈ 2025ರಂದು ಆಯೋಜಿಸಿದ ರಾಜ್ಯ ಮಟ್ಟದ ವೈಜ್ಞಾನಿಕ, ವೈಚಾರಿಕ ಸಾಹಿತ್ಯ ಸಮಾವೇಶ-2025 ಕಾರ್ಯಕ್ರಮವು ಶೇಷಾದ್ರಿಪುರಂ ಕಾಲೇಜಿನಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಶಿಕ್ಷಣ ತಜ್ಞೆ ಡಾ. ಗೀತಾ ರಾಮಾನುಜಂ “ನಮ್ಮ ಜೀವನದಲ್ಲಿ ವೈಜ್ಞಾನಿಕ ವಿಚಾರಗಳನ್ನು ಬೆಳೆಸಿಕೊಂಡು, ಸಾಂಪ್ರದಾಯಕವಾಗಿ ತುಂಬಿರುವ ಮೌಢ್ಯದ ಬೇರು ಕಿತ್ತೊಗಯದೇ ಇದ್ದರೇ ಬಡತನವನ್ನು ಕಿತ್ತೊಗೆಯಲು ಸಾಧ್ಯವಿಲ್ಲ. ವೈಜ್ಞಾನಿಕವಾಗಿ ವಿಷಯ ವಿಶ್ಲೇಷಣೆ ಮಾಡದಿದ್ದರೆ ಈ ಸಮಾಜ, ದೇಶ ಬೆಳವಣಿಗೆ ಆಗುವುದಿಲ್ಲ. ನಾವು ಬರೆಯುವ ಸಾಹಿತ್ಯ ಸೂಕ್ಷ್ಮತೆ ಪಡೆದುಕೊಳ್ಳದೇ ಇದ್ದರೆ, ವೈಚಾರಿಕತೆಯ ಅಂಶ ಮೈಗೂಡಿಸಿಕೊಳ್ಳದೇ ಹೋದರೇ, ಪ್ರಶ್ನಿಸುವ ಮತ್ತು ಉತ್ತರ ಪಡೆಯುವ ಮನೋಧರ್ಮವನ್ನು ರೂಪಿಸಿಕೊಳ್ಳದಿದ್ದರೆ ಸಮಾಜಕ್ಕೆ ಏನನ್ನು ಮಾಡಲು ಸಾಧ್ಯವಿಲ್ಲ. ಸಾಹಿತಿಯಾಗಿ ನಮ್ಮ ಸುತ್ತಮುತ್ತ ನಡೆಯುತ್ತಿರುವ ಸೂಕ್ಷ್ಮತೆಗಳನ್ನು ಗಮನಿಸುತ್ತಿರಬೇಕು. ಸಾಹಿತಿ ಜನರ ನಡುವೆ ಹೋಗದೇ ಇದ್ದರೆ, ನಾವು ಬರೆಯುವ ಸಾಹಿತ್ಯ ಯಾರಿಗೆ ಮುಟ್ಟುತ್ತಿದೆ ಎಂದು ಪ್ರಶ್ನಿಸಿಕೊಳ್ಳದೇ…