Author: roovari

ಓದಿದ್ದು ಭೌತಚಿಕಿತ್ಸಕಿ/ಫಿಸಿಯೋಥೆರಪಿಸ್ಟ್. ಯಕ್ಷಗಾನದ ಅತಿಯಾದ ಒಲವು. ಹೀಗೆ ವೃತ್ತಿ ಹಾಗೂ ಪ್ರವೃತ್ತಿಯನ್ನು ಜೊತೆಗೆ ಸರಿ ಸಮಾನವಾಗಿ ಸ್ವೀಕರಿಸಿ ಯಕ್ಷಗಾನ ರಂಗದಲ್ಲಿ ತನ್ನದೇಯಾದ ಛಾಪು ಮೂಡಿಸುತ್ತಿರುವ ಪ್ರತಿಭೆ ಸಂಧ್ಯಾ ನಾಯಕ್. 13.03.1996ರಂದು ಸದಾನಂದ ನಾಯಕ್ ಮತ್ತು ನಂದಿನಿ ನಾಯಕ್ ಇವರ ಮಗಳಾಗಿ ಜನನ. ತಾಯಿಯ ಪ್ರೇರಣೆ ಹಾಗೂ ಯಕ್ಷಗಾನದ ವೇಷಭೂಷಣ, ಅಲ್ಲಿರುವ ಹಾಡು, ನಾಟ್ಯ ಹಾಗೂ ಮಾತುಗಾರಿಕೆ ಎಲ್ಲವನ್ನೂ ಕೂಡಿದ ಯಕ್ಷಗಾನದ ಮೇಲಿನ ಆಸಕ್ತಿ ನನ್ನನ್ನು ಸೆಳೆಯಿತು ಎಂದು ಹೇಳುತ್ತಾರೆ ಸಂಧ್ಯಾ. ಪ್ರಸಾದ್ ಕುಮಾರ್ ಮೊಗೆಬೆಟ್ಟು, ಮಂಜುನಾಥ್ ಕುಲಾಲ್, ಪ್ರತೀಶ್ ಕುಮಾರ್, ರತ್ನಾಕರ್ ಆಚಾರ್ ಪುತ್ತೂರು ಇವರ ಯಕ್ಷಗಾನದ ಗುರುಗಳು. ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:- ಪ್ರಸಂಗವನ್ನು ಓದಿ, ಪಾತ್ರದ ಬಗ್ಗೆ ಯೂಟ್ಯೂಬ್ ಮುಖಾಂತರ ಯಾವ ರೀತಿಯಲ್ಲೆಲ್ಲ ಅಭಿನಯ ಆಗಲಿ ಮಾತುಗಾರಿಕೆಯಾಗಲಿ ಹೇಗೆ ಮಾಡಬಹುದು ಎಂದು ನೋಡುತ್ತೇನೆ. ಹಾಗೆಯೇ ಗುರುಗಳಲ್ಲಿ ಕೇಳಿ ತಿಳಿದುಕೊಳುತ್ತೇನೆ. ಶ್ವೇತಕುಮಾರ ಚರಿತ್ರೆ, ಲವಕುಶ, ಬಬ್ರುವಾಹನ ಕಾಳಗ, ರಾಣಿ ಶಶಿಪ್ರಭೆ ಇವರ ನೆಚ್ಚಿನ…

Read More

ಮೂಡುಬಿದಿರೆ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೂಡುಬಿದಿರೆ ತಾಲೂಕು ಘಟಕ ಮತ್ತು ರೋಟರಿ ಕ್ಲಬ್ ಮೂಡುಬಿದಿರೆ ಇವುಗಳ ಜಂಟಿ ಆಶ್ರಯದಲ್ಲಿ ಅಕ್ಕರೆ ಸಾಹಿತ್ಯ ವೇದಿಕೆ, ಅಳಿಯೂರು ಇದರ “ಕಥೆ ಕೇಳುವ ಬನ್ನಿ” ಸರಣಿಯ ಎರಡನೇ ಕಾರ್ಯಕ್ರಮ ದಿನಾಂಕ 21-08-2023ರ ಸೋಮವಾರದ ಸಂಜೆ 07:30ಕ್ಕೆ ಮೂಡುಬಿದಿರೆಯ ರೋಟರಿ ಶಾಲೆಯ ‘ಸಮ್ಮಿಲನ ಸಭಾಂಗಣ’ದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ.ಸಾ.ಪ. ಮೂಡುಬಿದಿರೆ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ ವೇಣುಗೋಪಾಲ ಶೆಟ್ಟಿ ಕೆ. ವಹಿಸಲಿದ್ದು, ಅತಿಥಿಯಾಗಿ ರೋಟರಿ ಕ್ಲಬ್ ಮೂಡುಬಿದಿರೆಯ ಅಧ್ಯಕ್ಷರಾದ ರೊ.ನಾಗರಾಜ್‌ ಬಿ. ಭಾಗವಹಿಸುತ್ತಾರೆ. ಕಾರ್ಯಕ್ರಮದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ವಿಜಯಶ್ರೀ ಹಾಲಾಡಿ, ಶ್ರೀಮತಿ ಅನಿತಾ ಶೆಟ್ಟಿ ಮೂಡುಬಿದಿರೆ, ಶ್ರೀ ಮಹಾದೇವ ಮೂಡುಕೊಣಾಜೆ, ಶ್ರೀ ಇಂದು ಚೇತನ ಬೋರುಗುಡ್ಡೆ ಕಥೆ ಹೇಳಲಿದ್ದಾರೆ.

Read More

ಉಡುಪಿ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಹೆಬ್ರಿ ತಾಲೂಕು ಘಟಕ ಇದರ ಕನ್ನಡ ಡಿಂಡಿಮ ಸರಣಿಯ ಮೂರನೆಯ ಕಾರ್ಯಕ್ರಮವು ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಹೆಬ್ರಿಯ ಅಕ್ಷರ ಸಾಹಿತ್ಯ ಸಂಘ ಮತ್ತು ಶರಣ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ದಿನಾಂಕ 18-08-2023 ಶುಕ್ರವಾರದಂದು ನಡೆಯಿತು. ಈ ಕಾರ್ಯಕ್ರಮವು ಕ.ಸಾ.ಪ. ಹೆಬ್ರಿ ಘಟಕದ ಅಧ್ಯಕ್ಷರಾದ ಶ್ರೀನಿವಾಸ ಭಂಡಾರಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಜಿಲ್ಲಾ ಕ.ಸಾ.ಪ. ಕೋಶಾಧ್ಯಕ್ಷರಾದ ಶ್ರೀ ಮನೋಹರ ಪಿ. ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದ ನಂತರ ಎಸ್.ಆರ್. ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಶ್ರೀ ದೀಪಕ್ ಎನ್. ಅವರು ನಿಯೋಜಿತ ಉಪನ್ಯಾಸ ನೀಡುತ್ತಾ “ಕನ್ನಡ ಸಾಹಿತ್ಯವು ಸಮೃದ್ದ ಸಾಹಿತ್ಯವನ್ನು ಹೊಂದಿದೆ. ಆಸ್ಥಾನ ಪರಂಪರೆಯಲ್ಲಿದ್ದ ಕನ್ನಡವು ನಡುಗನ್ನಡ ಸಮಯದಲ್ಲಿ ಜನಸಾಮಾನ್ಯರತ್ತ ಹೊರಳಿತು. ವಚನಕಾರರು ಜನ ಸಾಮಾನ್ಯರಿಗೆ ಅರ್ಥವಾಗುವಂತಹ ಸಾಹಿತ್ಯ ರಚನೆಯನ್ನು ಮಾಡಿದರು. ಸಾಹಿತ್ಯ ಶ್ರೀಮಂತವಾಯಿತು. ಸಾಹಿತ್ಯವು ಜನಸಾಮಾನ್ಯರೆಡೆಗೆ ಬಂದಾಗ ಉಳಿಯುತ್ತದೆ” ಎಂದರು. ಉಡುಪಿ ಜಿಲ್ಲಾ ಕ.ಸಾ.ಪ. ಅಧ್ಯಕ್ಷರಾದ ನೀಲಾವರ ಸುರೇಂದ್ರ…

Read More

ಉಡುಪಿ: ಉಡುಪಿ ಅಜ್ಜರಕಾಡಿನ ವಿದ್ಯಾ ವಾಚಸ್ಪತಿ ಡಾ. ಬನ್ನಂಜೆ ಗೋವಿಂದಾಚಾರ್ಯ ಸ್ಮಾರಕ ನಗರ ಕೇಂದ್ರ ಗ್ರಂಥಾಲಯದಲ್ಲಿ ದಿನಾಂಕ 18-08-2023ರಂದು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗಾಗಿ ಗ್ರಂಥಾಲಯ ಮತ್ತು ಡಿಜಿಟಲ್ ಗ್ರಂಥಾಲಯ ಹಾಗೂ ಗ್ರಂಥಗಳ ಮಹತ್ವದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಹಾಗೂ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಉಪಾಧ್ಯಕ್ಷರಾದ ವಸಂತಿ ಶೆಟ್ಟಿ ಬ್ರಹ್ಮಾವರ ಇವರು ಉದ್ಘಾಟಿಸಿ ಗ್ರಂಥಾಲಯ ಮತ್ತು ಗ್ರಂಥಗಳ ಮಹತ್ವದ ಬಗ್ಗೆ ಉಪನ್ಯಾಸವನ್ನು ನೀಡಿದರು. “ಜ್ಞಾನದೇಗುಲಗಳಾದ ಗ್ರಂಥಾಲಯದ ಸದ್ಬಳಕೆ ಮಾಡಿಕೊಂಡರೆ ಜೀವನದ ಅಂಧಕಾರವು ದೂರಾವಾಗಿ ಜ್ಞಾನವೆಂಬ ಬೆಳಕು ನಮ್ಮ ಜೀವನದಲ್ಲಿ ನೆಲೆಗೊಳ್ಳುತ್ತದೆ. ಆದುದರಿಂದ ಆದಷ್ಟು ಗ್ರಂಥಾಲಯಗಳ ಸದುಪಯೋಗಪಡಿಸಿಕೊಳ್ಳಬೇಕು. ವಿದ್ಯಾರ್ಥಿ ಜೀವನವು ಬದುಕಿನ ಪ್ರಮುಖವಾದ ಘಟ್ಟ. ಈ ಜೀವನದಲ್ಲಿ ಮೊಬೈಲ್ ಹಾಗೂ ದುಶ್ಚಟಗಳಿಂದ ದೂರವಿದ್ದು ಜೀವನದ ಮೌಲ್ಯಗಳನ್ನು ಅರಿತು ಇನ್ನಷ್ಟು ಹೆಚ್ಚಿಸಿಕೊಳ್ಳುವಂತೆ ಮತ್ತು ಜೀವನದಲ್ಲಿ ಎಂತಹ ಪರಿಸ್ಥಿತಿ ಬಂದರೂ ಮಾನಸಿಕ ಖಿನ್ನತೆಗೆ ಒಳಗಾಗದೇ ಆತ್ಮಸ್ಥೆರ್ಯ ಹಾಗೂ ಆತ್ಮವಿಶ್ವಾಸದಿಂದ ಜೀವನವನ್ನು ಎದುರಿಸಬೇಕು. ದೈನಂದಿನ ಪಾಠ ಪ್ರವಚನಗಳನ್ನು ಕೇಳಿ ತಮ್ಮಲ್ಲಿಯೇ…

Read More

ಮಂಗಳೂರು : ಮಂಗಳೂರು ರಾಮಕೃಷ್ಣ ಮಠದ ನೂತನ ಯೋಜನೆ ‘ಭಜನ್‌ ಸಂಧ್ಯಾ’ ಕಾರ್ಯಕ್ರಮವು ರಾಮಕೃಷ್ಣ ಮಠದಲ್ಲಿ ದಿನಾಂಕ 02-07-2023ರಂದು ಉದ್ಘಾಟನೆಗೊಂಡಿತ್ತು. ದಿನಾಂಕ 09-07-2023ರಂದು ಅಪೂರ್ವವಾದ ಎರಡನೇ ಭಜನ್ ಸಂಧ್ಯಾ ಕಾರ್ಯಕ್ರಮವು ಅದ್ಭುತವಾಗಿ ನೆರವೇರಿದೆ. ಕಾರ್ಯಕ್ರಮದಲ್ಲಿ ಬಾಲ ಭಜನಾ ಕಲಿಕಾ ತಂಡ, ಯೂತ್ ಸೆಂಟರ್ ಪಡೀಲ್, ಮಂಗಳೂರು ಇವರು ಭಜನಾ ಸೇವೆಯನ್ನು ಅತ್ಯಂತ ಶ್ರದ್ಧೆಯಿಂದ ಮಾಡಿದರು. ದಿನಾಂಕ 06-08-2023ರಂದು ಸಂಜೆ 4 ಗಂಟೆಗೆ ಮಂಗಳೂರಿನ ಶ್ರೀ ವಿಶ್ವೇಶ್ವರ ಭಜನಾ ಮಂಡಳಿ, ಕಡವಿನಬಾಗಿಲು, ಬೋಳಾರ ಇವರಿಂದ ಮೂರನೆಯ ಭಜನ್‌ ಸಂಧ್ಯಾ ಕಾರ್ಯಕ್ರಮ ಮತ್ತು  ದಿನಾಂಕ 13-08-2023ರಂದು ಶ್ರೀ ವಿಠೋಭ ರುಕ್ಮಾಯಿ ಭಜನಾ ಮಂದಿರ, ತೊಕ್ಕೊಟ್ಟು ಇವರಿಂದ ನಾಲ್ಕನೇ ಭಜನ್ ಸಂಧ್ಯಾ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿದೆ. ಎರಡನೇ ಭಜನ್ ಸಂಧ್ಯಾ ಕಾರ್ಯಕ್ರಮ ಮೂರನೆಯ ಭಜನ್‌ ಸಂಧ್ಯಾ ಕಾರ್ಯಕ್ರಮ ನಾಲ್ಕನೇ ಭಜನ್ ಸಂಧ್ಯಾ ಕಾರ್ಯಕ್ರಮ ಭಜನಾ ತಂಡದ ಸೇವೆಯ ನಂತರ ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಇವರಿಂದ ಆಶೀರ್ವಚನ ನಡೆಯಿತು. ಈ ಸಂದರ್ಭಗಳಲ್ಲಿ ಆಶ್ರಮದ ವತಿಯಿಂದ…

Read More

ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ತಿಂಗಳ ಕೂಟದಲ್ಲಿ ದಿನಾಂಕ 15-08-2023ರಂದು ಪುತ್ತೂರು ಸಮೀಪದ ಭಾರತಿ ನಗರದ ಶ್ರೀ ಬಲಮುರಿ ವಿದ್ಯಾಗಣಪತಿ ದೇವಳದ ಆಶ್ರಯದಲ್ಲಿ ‘ಶ್ರೀ ಕೃಷ್ಣ ಸಂಧಾನ’ ಎಂಬ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಶ್ರೀ ಪದ್ಮನಾಭ ಭಟ್ ಬಡೆಕ್ಕಿಲ, ಶ್ರೀ ಸತೀಶ್ ಇರ್ದೆ, ಶ್ರೀ ಆನಂದ ಸವಣೂರು, ಶ್ರೀ ಮುರಳಿಧರ ಕಲ್ಲೂರಾಯ, ಶ್ರೀ ಪರೀಕ್ಷಿತ್ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ಭಾಸ್ಕರ್ ಬಾರ್ಯ ಮತ್ತು ಶ್ರೀ ಭಾಸ್ಕರ್ ಶೆಟ್ಟಿ ಸಾಲ್ಮರ (ಶ್ರೀ ಕೃಷ್ಣ), ಶ್ರೀ ವೇಣುಗೋಪಾಲ ಭಟ್ ಮಾಂಬಾಡಿ (ಧರ್ಮರಾಯ), ಶ್ರೀ ರಾಮಚಂದ್ರ ಭಟ್ ದೇವರಗುಂಡಿ (ದ್ರೌಪದಿ), ಶ್ರೀ ಚಂದ್ರಶೇಖರ್ ಭಟ್ ಬಡೆಕ್ಕಿಲ (ಭೀಮ), ಶ್ರೀ ದುಗ್ಗಪ್ಪ ಎನ್. (ವಿದುರ) ಸಹಕರಿಸಿದರು.

Read More

ಮಂಡ್ಯ : ಡಾ. ಪ್ರದೀಪ ಕುಮಾರ ಹೆಬ್ರಿ ಅವರು ಒಂದು ವರ್ಷಗಳ ಕಾಲ ‘ಕುಂದಾನಗರಿ’ ಕನ್ನಡ ದಿನಪತ್ರಿಕೆಯಲ್ಲಿ ‘ಪುಸ್ತಕ ಪ್ರೀತಿ’ ಅಂಕಣದಲ್ಲಿ ಬರೆದ ನಾಡಿನ ವಿವಿಧ ಲೇಖಕರ 306 ಕೃತಿಗಳ ಪರಿಚಯ ಲೇಖನಗಳ ಕೃತಿ ‘ಪುಸ್ತಕ ಪ್ರೀತಿ’ ಇದರ ಲೋಕಾರ್ಪಣಾ ಸಮಾರಂಭ 77ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ದಿನದಂದು (ದಿನಾಂಕ 15-08-2023) ಮಂಡ್ಯದ ಡ್ಯಾಫೊಡಿಲ್ಸ್ ಇಂಟರ್ ನ್ಯಾಶನಲ್ ಪಬ್ಲಿಕ್ ಶಾಲಾ ಆವರಣದಲ್ಲಿ ನಡೆಯಿತು. ನಿವೃತ್ತ ಪ್ರಾಂಶುಪಾಲ ಪ್ರೊ. ಕೆ.ನಾಗಾನಂದ ಹಾಗೂ ವಿ.ಎಲ್.ಎನ್. ಎಜುಕೇಶನ್ ಟ್ರಸ್ಟ್ ನ ಕಾರ್ಯದರ್ಶಿ ಸುಜಾತ ಕೃಷ್ಣರವರು ಇನ್ನಿತರ ಶಿಕ್ಷಕರ ಒಡಗೂಡಿ ಕೃತಿ ಲೋಕಾರ್ಪಣೆ ಮಾಡಿ ಡಾ. ಹೆಬ್ರಿ ಅವರನ್ನು ಸನ್ಮಾನಿಸಿದರು. ಕೃತಿ ಹಾಗೂ ಕೃತಿಕಾರರನ್ನು ಪರಿಚಯಿಸಿದ ಕವಿಯತ್ರಿ ಹಾಗೂ ಕನ್ನಡ ಭಾಷಾ ಶಿಕ್ಷಕಿ ಜಿ. ಅಶ್ವಿನಿ‌ ಇವರು “ಈ ಕೃತಿಯು 306 ಬೇರೆ ಬೇರೆ ಲೇಖಕರ ಕೃತಿಗಳ ಪರಿಚಯಾತ್ಮಕ ಕೃತಿ. ಬೆಳಗಾವಿಯ ಕುಂದಾನಗರಿ ಕನ್ನಡ ದಿನಪತ್ರಿಕೆಯಲ್ಲಿ ನಿರಂತರ ಒಂದು ವರ್ಷಗಳ ಕಾಲ ಪ್ರಕಟವಾಗಿ ಹೆಬ್ರಿಯವರ ಸಾಹಿತ್ಯ ಪ್ರೀತಿಯನ್ನು…

Read More

ಕಾಸರಗೋಡು : ರಂಗಚಿನ್ನಾರಿ ಕಾಸರಗೋಡು (ರಿ) ಇದರ ಮಹಿಳಾ ಘಟಕ ನಾರಿಚಿನ್ನಾರಿಯ 8ನೇ ಸರಣಿ ಕಾರ್ಯಕ್ರಮ ‘ಓಣಂ ಸಂಧ್ಯಾ’ವು ಕಾಸರಗೋಡಿನ ‘ಪದ್ಮಗಿರಿ ಕಲಾ ಕುಟೀರ’ದಲ್ಲಿ ದಿನಾಂಕ 26-08-2023 ಶನಿವಾರದಂದು ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾರಿಚಿನ್ನಾರಿಯ ಗೌರವಧ್ಯಕ್ಷರು ಹಾಗೂ ಖ್ಯಾತ ಲೆಕ್ಕ ಪರಿಶೋಧಕರಾದ ಶ್ರೀಮತಿ ತಾರಾ ಜಗದೀಶ್ ಇವರು ವಹಿಸಲಿದ್ದು, ಕಾಸರಗೋಡಿನ ಕೇಂದ್ರೀಯ ವಿಶ್ವವಿದ್ಯಾಲಯದ ಸಮಾಜ ಸೇವಾ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಲಕ್ಷ್ಮೀ ಇವರು ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸಾಹಿತಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಮತ್ತು ನಾಟ್ಯ ಗುರುಗಳಾದ ವಿದುಷಿ ಶಶಿಕಲಾ ಟೀಚರ್ ಇವರಿಗೆ ಗೌರವಾರ್ಪಣೆ ಮಾಡಲಾಗುವುದು. ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಇವರ ಐದು ಕೃತಿಗಳಾದ ಏಕತಾರಿ ಸಂಚಾರಿ (ಕವನ ಸಂಕಲನ), ಕೊಕ್ಕೊ ಕೋಕೋ (ಮಕ್ಕಳ ನಾಟಕ), ಶಿವರಾಮ ಕಾರಂತರ ಕನ್ನಡ ಪ್ರಜ್ಞೆ (ಸಂಪಾದಿತ), ಕನಕದಾಸೆರ್ನ ರಾಮಧಾನ್ಯ ಚರಿತೆ (ಅನುವಾದ) ಮತ್ತು ಮೊಗೇರಿ ಗೋಪಾಲಕೃಷ್ಣ ಅಡಿಗ (ವಾಚಿಕೆ) ಅನಾವರಣಗೊಳ್ಳಲಿವೆ. ಈ ಐದು ಕೃತಿಗಳನ್ನು ಅನಾವರಣಗೊಳಿಸುವವರು ವಿಜಯಲಕ್ಷ್ಮೀ ಶ್ಯಾನ್ ಭೋಗ್, ಸರ್ವಮಂಗಳ ಜಯ್ ಪುಣಿಚಿತ್ತಾಯ,…

Read More

ಮಂಗಳೂರು : ನಡೂರು ಶ್ರೀ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮೇಳದವರು ನಗರದ ಡಾನ್‌ಬಾಸ್ಕೋ ಹಾಲ್‌ನಲ್ಲಿ ‘ಕೃಷ್ಣ ಗಾರುಡಿ’ ಯಕ್ಷಗಾನ ಪ್ರದರ್ಶಿಸಿದರು. ಈ ವೇಳೆ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಎಸ್‌. ಪ್ರದೀಪ್‌ ಕುಮಾರ ಕಲ್ಕೂರ ಅವರು “ಮಳೆಗಾಲದಲ್ಲಿ ಯಕ್ಷಗಾನ ಕಲಾವಿದರಿಗೆ ಪ್ರೋತ್ಸಾಹ ಅಗತ್ಯ” ಎಂದರು. ಕರ್ನಾಟಕ ಯಕ್ಷಧಾಮ ಮತ್ತು ಕಲ್ಕೂರ ಪ್ರತಿಷ್ಠಾನ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಭಾಗವತರಾದ ಶ್ರೀ ಸದಾಶಿವ ಅಮೀನ್ ಅವರನ್ನು ಗಣ್ಯರ ಉಪಸ್ಥಿತಿಯಲ್ಲಿ ಸಮ್ಮಾನಿಸಲಾಯಿತು. ಸಿ.ಎ. ಶಿವಾನಂದ ಪೈ. ಪಿ.ಲಕ್ಷ್ಮೀ ನಾರಾಯಣ ಉಪಾಧ್ಯ, ಪೊಳಲಿ ನಿತ್ಯಾನಂದ ಕಾರಂತ ಮೊದಲಾದವರು ಉಪಸ್ಥಿತರಿದ್ದರು. ಶ್ರೀ ಜನಾರ್ದನ ಹಂದೆ ಸ್ವಾಗತಿಸಿ, ವಂದಿಸಿದರು. ಕೊನೆಗೆ ಯಕ್ಷಗಾನ ಪ್ರದರ್ಶನ ಮನೋಜ್ಞವಾಗಿ ನೆರವೇರಿತು.

Read More

ಉಡುಪಿ : ಸುಶಾಸನ ಉಡುಪಿ ಪ್ರಾಯೋಜಕತ್ವದಲ್ಲಿ ಸುಧಾಕರ ಆಚಾರ್ಯರ ಕಲಾರಾಧನೆಯ 33ನೇ ವರ್ಷದ ಸ್ವಾತಂತ್ರ್ಯೋತ್ಸವ ತಾಳಮದ್ದಳೆ ಕಾರ್ಯಕ್ರಮವು ಉಡುಪಿ ಕಿದಿಯೂರು ಹೊಟೇಲ್‌ನಲ್ಲಿ ದಿನಾಂಕ 15-08-2023 ಮಂಗಳವಾರದಂದು ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಯಕ್ಷಧ್ರುವ ಪಟ್ಲ ಫೌಂಡೇಶನ್ ಸಂಸ್ಥಾಪಕ ಪಟ್ಟ ಸತೀಶ ಶೆಟ್ಟಿಯವರು “ಯಕ್ಷಗಾನ ತಾಳಮದ್ದಳೆಯ ಮೂಲಕ ‘ಕಾಶ್ಮೀರ ವಿಜಯ’ ಪ್ರಸ್ತುತಿಯೊಂದಿಗೆ ಜನಮಾನಸದಲ್ಲಿ ರಾಷ್ಟ್ರಭಕ್ತಿಯನ್ನು ಜಾಗೃತಿಗೊಳಿಸುವ ಸಂಕಲ್ಪ ಶ್ಲಾಘನೀಯ. ದೇಶಪ್ರೇಮವನ್ನು ಉದ್ದೀಪನಗೊಳಿಸುವ ಕಥೆಯಾಧಾರಿತ ಸ್ವರಾಜ್ಯ ವಿಜಯ, ಹೈದರಾಬಾದ್ ವಿಜಯ, ಕಾಶ್ಮೀರ ವಿಜಯ ಎನ್ನುವ ಪ್ರಸಂಗಗಳನ್ನು ಪ್ರಸ್ತುತಪಡಿಸಿದ ಹೆಚ್ಚುಗಾರಿಕೆಯೊಂದಿಗೆ 33 ವರ್ಷಗಳಿಂದ ಸ್ವಾತಂತ್ರ್ಯೋತ್ಸವದಂದು ತಾಳಮದ್ದಳೆ ಆಯೋಜಿಸಿಕೊಂಡು ಬರುತ್ತಿರುವ ಸುಧಾಕರ ಆಚಾರ್ಯರದ್ದು ಐತಿಹಾಸಿಕ ಹೆಜ್ಜೆಯಾಗಿದೆ” ಎಂದು ಹೇಳಿದರು. ಪ್ರಸಂಗಕರ್ತ ಪ್ರೊ. ಪವನ್ ಕಿರಣ್ ಕೆರೆ ಪ್ರಸ್ತಾವನೆಗೈದರು. ಶಾಸಕರಾದ ಯಶ್ ಪಾಲ್ ಎ. ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ ಶುಭ ಹಾರೈಸಿದರು. ಅಮೆರಿಕ ನ್ಯೂಜೆರ್ಸಿಯ ಪುತ್ತಿಗೆ ಮಠದ ಅರ್ಚಕ ರಾಘವೇಂದ್ರ ಮೂಡುಬಿದಿರೆ, ಹರ್ಷದ ಪ್ರಕಾಶ್ ರಿಟೇಲ್ ಪೈ.ಲಿ.ನ ಎಂ.ಡಿ. ಶ್ರೀ ಕೆ. ಸೂರ್ಯಪ್ರಕಾಶ್, ತೋಟದಮನೆ ದಿವಾಕರ ಶೆಟ್ಟಿ,…

Read More