Subscribe to Updates
Get the latest creative news from FooBar about art, design and business.
Author: roovari
ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮವು ದಿನಾಂಕ 29-01-2024ರ ಸೋಮವಾರ ಸಂಜೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಮಂಗಳೂರಿನ ಮಾನಸ ಕುಲಾಲ್ ನೃತ್ಯ ಪ್ರದರ್ಶನ ನೀಡಲಿದ್ದು, ಈ ಕಾರ್ಯಕ್ರಮವು ಸಂಜೆ ಗಂಟೆ 6.25 ರಿಂದ ನಡೆಯಲಿದೆ. ಕೆ. ಧರ್ಣಪ್ಪ ಸಾಲಿಯಾನ್ ಹಾಗೂ ಜಯಲಕ್ಷ್ಮಿ ಡಿ. ಸಾಲಿಯಾನ್ ದಂಪತಿಗಳ ಸುಪುತ್ರಿಯಾಗಿರುವ ಮಾನಸ ಕುಲಾಲ್ ತನ್ನ ನೃತ್ಯ ಅಭ್ಯಾಸವನ್ನು ಹದಿನೈದು ವರ್ಷಗಳಿಂದ ಮಂಗಳೂರಿನ ಭರತಾoಜಲಿ (ರಿ) ಕೊಟ್ಟಾರ, ನೃತ್ಯ ಸಂಸ್ಥೆಯ ಗುರು ಶ್ರೀಮತಿ ಪ್ರತಿಮಾ ಶ್ರೀಧರ್ ಹಾಗೂ ಗುರು ಶ್ರೀ ಶ್ರೀಧರ ಹೊಳ್ಳ ಇವರಲ್ಲಿ ಪಡೆಯುತ್ತಿದ್ದಾರೆ. ಭರತನಾಟ್ಯದಲ್ಲಿ ವಿದ್ವತ್ ಪೂರ್ಣಗೊಳಿಸಿರುವ ಇವರು ಕರ್ನಾಟಕ ನೃತ್ಯ ಸಂಗೀತ ಅಕಾಡೆಮಿಯ ವತಿಯಿಂದ ಶಿಷ್ಯ ವೇತನವನ್ನು ಪಡೆದಿರುತ್ತಾರೆ. ಹಲವಾರು ಏಕ ವ್ಯಕ್ತಿ ನೃತ್ಯ ಪ್ರದರ್ಶನಗಳನ್ನು ನೀಡಿರುವ ಇವರು ತನ್ನ ಗುರುಗಳೊಂದಿಗೆ 200 ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಸಕ್ರಿಯ…
ಕಾರ್ಕಳ: ಕಾರ್ಕಳ ಹಿರ್ಗಾನದ ಕುಂದೇಶ್ವರ ಕ್ಷೇತ್ರ ವಾರ್ಷಿಕ ಜಾತ್ರೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತೆಂಕು- ಬಡಗು ತಿಟ್ಟಿನ ಕಲಾ ಸವ್ಯಸಾಚಿ ರಕ್ಷಿತ್ ಪಡ್ರೆಗೆ ‘ಕುಂದೇಶ್ವರ ಸಮ್ಮಾನ್ ಪ್ರಶಸ್ತಿ’ಯನ್ನು ದಿನಾಂಕ 22-01-2024ರ ಸೋಮವಾರದಂದು ಪ್ರದಾನ ಮಾಡಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ವಿ. ಸುನಿಲ್ ಕುಮಾರ್ ಮಾತನಾಡಿ “ಧಾರ್ಮಿಕ ಕಾರ್ಯಕ್ರಮಗಳ ಜೊತೆಯಲ್ಲಿ ನಾಟಕ ಮತ್ತು ಯಕ್ಷಗಾನದ ಮೂಲಕ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುವ ಕುಂದೇಶ್ವರದಿಂದ ಕಲೆಗೆ ಪ್ರೋತ್ಸಾಹ ನೀಡುವ ಕೆಲಸ ಆಗುತ್ತಿದೆ.” ಎಂದರು. ಯಕ್ಷಗಾನ ಕಲಾವಿದ ರಕ್ಷಿತ್ ಪಡ್ರೆಗೆ ಪ್ರಶಸ್ತಿಯನ್ನು ಪ್ರದಾನಮಾಡಿ ಮಾತನಾಡಿದ ಕೇಮಾರು ಸಾಂದೀಪನಿ ಆಶ್ರಮದ ಈಶ ವಿಠಲದಾಸ ಸ್ವಾಮೀಜಿ “ ನಿರಂತರವಾಗಿ ಶ್ರೇಷ್ಠ ಕಲಾವಿದರನ್ನು ಗುರುತಿಸಿ ‘ಕುಂದೇಶ್ವರ ಸಮ್ಮಾನ್ ಪ್ರಶಸ್ತಿ’ಯನ್ನು ಪ್ರದಾನ ಮಾಡುತ್ತಾ ಬಂದಿರುವ ಕುಂದೇಶ್ವರ ಕ್ಷೇತ್ರದ ಆಡಳಿತ ಮಂಡಳಿ ಈ ಬಾರಿ ಯಕ್ಷಗಾನದಲ್ಲಿ ವಿಶೇಷ ಸಾಧನೆ ಮಾಡಿದ ರಕ್ಷಿತ್ ಪಡ್ರೆಗೆ ಪ್ರಶಸ್ತಿ ನೀಡುವ ಮೂಲಕ ಯುವ ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸ ಮಾಡಿದೆ.“ ಎಂದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಕದ್ರಿ ನವನೀತ ಶೆಟ್ಟಿ ಮಾತನಾಡಿ…
ಬದಿಯಡ್ಕ: ಪಂಜಿಕಲ್ಲು ಶಾಲೆಯ ವಿದ್ಯಾರಂಗದ ಆಶ್ರಯದಲ್ಲಿ ‘ಅರಳುವ ಮೊಗ್ಗುಗಳು’ ಮಕ್ಕಳ ಚಟುವಟಿಕೆಯ ಕಾರ್ಯಕ್ರಮವು ದಿನಾಂಕ 25-01-2024ರಂದು ನಡೆಯಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಪಂಜಿಕಲ್ಲಿನ ಎಸ್. ವಿ. ಎ. ಯು. ಪಿ. ಶಾಲೆಯ ಸಂಸ್ಕ್ರತ ಶಿಕ್ಷಕಿ ಪಿ. ವಿಜಯಲಕ್ಷ್ಮಿ ಮಾತನಾಡಿ “ಕಲಾವಿದರಿಗೆ ಹಾಗೂ ಸಾಹಿತಿಗಳಿಗೆ ಪರಿಸರವೂ ಪಠ್ಯ. ಪರಿಸರದಲ್ಲಿನ ವಿಶೇಷಗಳೇ ಕವಿಯ ಕಲ್ಪನೆಗೆ ಜೀವ ತುಂಬುತ್ತವೆ. ಇದು ಸಾಹಿತ್ಯದ ಶಕ್ತಿ.” ಎಂದು ಹೇಳಿದರು. ಮುಖ್ಯ ಅತಿಥಿಯಾಗಿದ್ದ ವಿದ್ಯಾರಂಗದ ಸಂಚಾಲಕಿ ಹಾಗೂ ಶಿಕ್ಷಕಿಯಾದ ಕೆ. ನಳಿನಾಕ್ಷಿ ಮಾತನಾಡಿ “ನಿರಂತರ ಅಧ್ಯಯನದಿಂದ ಮಾತ್ರ ಸಾಹಿತ್ಯ ರಚನಾ ಶಕ್ತಿ ಕರಗತವಾಗುತ್ತದೆ. ಎಳವೆಯಲ್ಲಿ ಓದುವಿಕೆ ಸಹಿತ ಇತರ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಹೇಳಿದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಕನ್ನಡ ಸಾಹಿತಿ ವಿರಾಜ್ ಅಡೂರು ಮಾತನಾಡಿ “ಕಲಾವಿದರಿಗೆ ಹಾಗೂ ಸಾಹಿತಿಗಳಿಗೆ ಮಾನಸಿಕ ದೃಢತೆ ಹೆಚ್ಚು. ಸಮಸ್ಯೆಯನ್ನು ಧೈರ್ಯದಿಂದ ಎದುರಿಸಿ ಪರಿಹಾರ ಕಂಡುಕೊಳ್ಳುವ ಜಾಣ್ಮೆ ಅವರಿಗೆ ಇದೆ. ಶೈಕ್ಷಣಿಕ ಬದುಕಿನಲ್ಲಿ ವಿದ್ಯಾರ್ಥಿಗಳು ವಿಚಾರಗಳ ಕ್ರೋಢೀಕರಣ ಮಾಡಬೇಕು.” ಎಂದು ಹೇಳಿದರು. ಕಾರ್ಯಕ್ರಮದಲ್ಲಿ…
ಪುತ್ತೂರು : ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿನ ಶ್ರೀ ಶಂಕರ ಸಭಾಭವನದಲ್ಲಿ ದಿನಾಂಕ 20-01-2024ರಂದು ಯುವಗಾಯಕಿ ಸೂರ್ಯಗಾಯತ್ರಿ ಹಾಗೂ ತಂಡದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು. ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಹತ್ತನೆಯ ವರ್ಷಾಚರಣೆ ‘ದಶಾಂಬಿಕೋತ್ಸವ’ ಪ್ರಯುಕ್ತ ನಡೆದ ಈ ವಿಶೇಷ ಕಾರ್ಯಕ್ರಮದಲ್ಲಿ ಸಹಸ್ರಾರು ಜನ ಸಂಗೀತಾಸಕ್ತರು ಭಾಗಿಯಾಗಿ ರಸಾನುಭೂತಿಯನ್ನು ಆಸ್ವಾದಿಸಿದರು. ಪುತ್ತೂರಿಗೆ ಮೊಟ್ಟಮೊದಲ ಬಾರಿಗೆ ಆಗಮಿಸಿದ್ದ ಸೂರ್ಯಗಾಯತ್ರಿ ಅಂಬಿಕಾ ಸಂಸ್ಥೆಯಲ್ಲಿ ತನ್ನ ಹಾಡನ್ನು ಆರಂಭಿಸುವಾಗ ತನ್ನ ತಾಯಿ ರಚಿಸಿದ ಗಣಪತಿ ಸ್ತುತಿ ‘ಅಂಬಿಕಾ ಹೃದಯಾನಂದ ಮಾತೃಭಿ ಪರಿಪೂಜಿತಂ’ ಹಾಡಿನೊಂದಿಗೆ ಆರಂಭಿಸಿ ನೆರೆದವರ ಮನಸೂರೆಗೈದರು. ಸೂರ್ಯಗಾಯತ್ರಿಗೆ ಎಳೆಯ ವಯಸ್ಸಿನಲ್ಲಿಯೇ ಸಾಕಷ್ಟು ಖ್ಯಾತಿ ತಂದುಕೊಟ್ಟಿದ್ದ ಹನುಮಾನ್ ಚಾಲೀಸಾ ಹಾಡನ್ನು ಹಾಡಿ ಇಡಿಯ ಸಭೆ ತನ್ನೊಂದಿಗೆ ಹಾಡುವಂತೆ ಪ್ರೇರೇಪಿಸಿದರು. ‘ಜಯ ಹನುಮಾನ್ ಜ್ಞಾನಗುಣ ಸಾಗರ’ ಸಾಲುಗಳು ಸೂರ್ಯಗಾಯತ್ರಿ ಕಂಠದಿಂದ ಹೊರಹೊಮ್ಮುತ್ತಿದ್ದಂತೆ ಇಡಿಯ ಸಭೆ ಕರತಾಡನದ ಮೂಲಕ ಸ್ವಾಗತಿಸಿದ್ದು ವಿಶೇಷವಾಗಿತ್ತು. ಇತ್ತೀಚೆಗೆ ಪ್ರಧಾನಮಂತ್ರಿ ನರೇಂದ್ರ…
ಮಂಗಳೂರು : ಹಳೆಯ ತಲೆಮಾರಿನ ಅರ್ಥಧಾರಿಗಳಾದ ದಿ. ಬೊಂಡಾಲ ಜನಾರ್ದನ ಶೆಟ್ಟಿ ಮತ್ತು ದಿ. ರಾಮಣ್ಣ ಶೆಟ್ಟಿ ಸಂಸ್ಮರಣಾರ್ಥ ಪ್ರತಿ ವರ್ಷ ನೀಡುವ ‘ಬೊಂಡಾಲ ಪ್ರಶಸ್ತಿ’ 2023-24ನೇ ಸಾಲಿಗೆ ಕಟೀಲು ಮೇಳದ ಖ್ಯಾತ ವೇಷಧಾರಿ ಮೋಹನ್ ಕುಮಾರ್ ಅಮ್ಮುಂಜೆ ಆಯ್ಕೆಯಾಗಿದ್ದಾರೆ. ಯಕ್ಷಾಂಗಣ ಮಂಗಳೂರು ಅಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರ ಸಂಚಾಲಕತ್ವದ ಆಯ್ಕೆ ಸಮಿತಿಯ ಶಿಫಾರಸಿನ ಮೇರೆಗೆ ಪ್ರಶಸ್ತಿ ನೀಡಲಾಗುವುದು ಎಂದು ಬೊಂಡಾಲ ಚ್ಯಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಹೇಳಿದ್ದಾರೆ. ಬಟ್ಲಬೆಟ್ಟು ಅಮ್ಮುಂಜೆಯ ದಿ. ವೆಂಕಪ್ಪ ಬೆಳ್ಚಡ ಮತ್ತು ದಿ. ಸುಶೀಲಾ ದಂಪತಿಗೆ 1973 ಜುಲೈ 4ರಂದು ಜನಿಸಿದ ಮೋಹನ್ ಕುಮಾರ್ ಎಸ್.ಎಸ್.ಎಲ್.ಸಿ.ವರೆಗೆ ಓದಿದ್ದಾರೆ. ಗುಂಡಿಲಗುತ್ತು ಶಂಕರ ಶೆಟ್ಟರಿಂದ ಪ್ರಾಥಮಿಕ ಹೆಜ್ಜೆಗಾರಿಕೆಯನ್ನು ಕಲಿತ ಅವರು 1991ರಲ್ಲಿ ಯಕ್ಷಗಾನ ರಂಗಕ್ಕೆ ಬಂದರು. ಮುಂದೆ ಪಡ್ರೆ ಚಂದು ಅವರಿಂದಲೂ ನಾಟ್ಯಾಭ್ಯಾಸ ಮಾಡಿ ಬಳಿಕ ಶ್ರೀ ಧರ್ಮಸ್ಥಳ ಯಕ್ಷಗಾನ ತರಬೇತಿ ಕೇಂದ್ರ ಸೇರಿ ಕೋಳ್ಯೂರು ರಾಮಚಂದ್ರ ರಾಯರಿಂದ ಎಲ್ಲಾ ಬಗೆಯ ನೃತ್ಯಗಳಲ್ಲಿ…
ಚಿಲಿಂಬಿ : ‘ಕಲಾ ಸಾಧನ ಮ್ಯೂಸಿಕ್ ಸ್ಕೂಲ್’ನ ವತಿಯಿಂದ ನಗರದ ಚಿಲಿಂಬಿ ಶಾರದಾ ಮಹೋತ್ಸವ ಸಮಿತಿಯ ಸಭಾಂಗಣದಲ್ಲಿ ದಿನಾಂಕ 06-01-2024ರಂದು ‘ಸಂಗೀತ ಸಂಭ್ರಮ’ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾತನಾಡುತ್ತಾ “ಪರಂಪರೆಯೊಂದಿಗೆ ಬೆಳೆದು ಬಂದಿರುವ ಸಂಗೀತ ಮನಸ್ಸಿಗೆ ಮುದ ನೀಡುವ ಅದ್ಭುತ ಕಲಾ ಸಾಧನ. ಸಂಗೀತ ನಮ್ಮ ತನು ಮತ್ತು ಮನಕ್ಕೆ ವಿಶೇಷವಾದ ಚೇತನವನ್ನು ನೀಡುವ ಶಕ್ತಿಯನ್ನು ಹೊಂದಿದೆ ಎಂದು ಹೇಳಿದರು. ಈ ಸಂದರ್ಭ ನಡೆದ ಸಂಗೀತ ಸಂಭ್ರಮದಲ್ಲಿ ಹಾರ್ಮೋನಿಯಂನಲ್ಲಿ ಕಲಾವಿದ ತೇಜಸ್ ಕಟೋಟಿ ಮತ್ತು ತಬಲಾದಲ್ಲಿ ಸುಮಿತ್ ಎಸ್. ನಾಯಕ್ ಸಂಗೀತ ಕಾರ್ಯಕ್ರಮ ನೀಡಿದರು. ಚಿಲಿಂಬಿ ಬಾಲಕರ ಶಾರದೋತ್ಸವ ಸಮಿತಿಯ ಅಧ್ಯಕ್ಷ ಸುಬ್ರಾಯ ನಾಯಕ್, ಶಾರದಾ ಮಹಿಳಾ ಮಂಡಲದ ಅಧ್ಯಕ್ಷೆ ಅಡಿಗೆ ಪದ್ಮಾ ಶೆಣೈ, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಲಾ ಸಾಧನ ಮ್ಯೂಸಿಕ್ ಸ್ಕೂಲ್‌ನ…
ಸುರತ್ಕಲ್ : ಸಮಗ್ರ ಗ್ರಾಮೀಣ ಆಶ್ರಮ ಪೆರ್ನಾಲು, ಉಡುಪಿ ಜಿಲ್ಲೆ, ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟ (ರಿ) ಕರ್ನಾಟಕ-ಕೇರಳ, ಕರಾವಳಿ ಲೇಖಕರ ವಾಚಕಿಯರ ಸಂಘ, ದಕ್ಷಿಣ ಕನ್ನಡ ಜಿಲ್ಲೆ (ರಿ), ಕಾಸರಗೋಡು ಮತ್ತು ಗೋವಿಂದ ದಾಸ ಕಾಲೇಜು, ಸುರತ್ಕಲ್ ಇವರ ಸಂಯುಕ್ತ ಅಶ್ರಯದಲ್ಲಿ ಸುರತ್ಕಲ್ ಗೋವಿಂದ ದಾಸ ಕಾಲೇಜಿನಲ್ಲಿ ಬುಡಕಟ್ಟು ಯುವ ಬರಹಗಾರರ ಕಮ್ಮಟದ ಸಮಾರೋಪ ಸಮಾರಂಭವು ದಿನಾಂಕ 14-01-2024 ರಂದು ಶಿಬಿರಾರ್ಥಿಗಳ ಅನುಭವದ ಹಂಚಿಕೆಯೊಂದಿಗೆ ಮೂಡಿ ಬಂತು. ಹಿರಿಯ ಲೇಖಕಿ ಬಿ.ಎಂ. ರೋಹಿಣಿಯವರು ಮಾತನಾಡಿ “ಶಿಬಿರಾರ್ಥಿಗಳು ತಮ್ಮ ಬರೆಯುವ ಹವ್ಯಾಸದ ಜೊತೆಗೆ ಬದುಕನ್ನು ಉನ್ನತೀಕರಿಸುವ ನೆಲೆಯಲ್ಲಿ ಶ್ರಮಿಸುವುದನ್ನು ಮರೆಯಬಾರದು. ನಮ್ಮನ್ನು ಅರೋಗ್ಯವಂತ ಮನಸ್ಥಿತಿಯಲ್ಲಿ ಇಡಲು ಸಾಹಿತ್ಯ ಸಹಕರಿಸುತ್ತದೆ.” ಎಂದರು. ಸಂಪನ್ಮೂಲ ವ್ಯಕ್ತಿಯಾದ ಶಂಶುದ್ದೀನ್ , ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟದ ‘ನಮ್ಮ ನ್ಯಾಯ ಕೂಟ’ದ ಅಧ್ಯಕ್ಷ ಬಾಲರಾಜ್ ಕೋಡಿಕಲ್, ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ-ಕೇರಳದ ಅಧ್ಯಕ್ಷೆ ಸುಶೀಲ ನಾಡ, ಕಮ್ಮಟದ ನಿರ್ದೇಶಕರಾದ ಡಾ. ಸಬಿತಾ ಗುಂಡ್ಮಿ, ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಅಧ್ಯಕ್ಷೆ…
ಉಡುಪಿ : ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಚತುರ್ಥ ಪರ್ಯಾಯ ಮಹೋತ್ಸವ ಪ್ರಯುಕ್ತ ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆ ‘ಹರ್ಷ’ ಸ್ವರಾಂಜಲಿ ಕಾರ್ಯಕ್ರಮವು ದಿನಾಂಕ 17-01-2024ರಂದು ಅಜ್ಜರಕಾಡು ಟೌನ್‌ಹಾಲ್‌ನಲ್ಲಿ ನೆರವೇರಿತು. ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಹರ್ಷ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಸೂರ್ಯಪ್ರಕಾಶ್ ಕೆ., ಆಪರೇಶನ್ ಡೈರೆಕ್ಟರ್ ಅಶೋಕ್ ಕುಮಾರ್ ಕೆ., ಮಾರ್ಕೆಟಿಂಗ್ ಡೈರೆಕ್ಟರ್ ಹರೀಶ್ ಎಂ., ಎಚ್.ಆರ್. ಡೈರೆಕ್ಟರ್ ಸುರೇಶ್ ಎಂ., ಇನ್ಫ್ರಾಸ್ಟ್ರಕ್ಟರ್ ಡೈರೆಕ್ಟರ್ ರಾಜೇಶ್ ಉದ್ಘಾಟಿಸಿದರು. ಚಿತ್ರನಟಿ ವಿನಯಾ ಪ್ರಸಾದ್ ಕಾರ್ಯಕ್ರಮ ನಡೆಸಿಕೊಟ್ಟರು. ಈ ಬಾರಿಯ ಶಾಸ್ತ್ರೀಯ ಸಂಗೀತದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ‘ಅರಾಜ್’ ಎಂಬ ಯುವ ಪ್ರತಿಭೆಗಳ ತಂಡ ‘ಹರ್ಷ ಸ್ವರಾಂಜಲಿ’ ಕಾರ್ಯಕ್ರಮದ ಮೂಲಕ ಸಂಗೀತ ಲೋಕವನ್ನೇ ಸೃಷ್ಟಿಸಿ, ಸಂಗೀತಾಸಕ್ತರನ್ನು ಮಂತ್ರಮುಗ್ಧಗೊಳಿಸಿತು. ಪ್ರತೀಕ್ ಸಿಂಗ್ ಗಾಯನಕ್ಕೆ ಇಶಾನ್ ಘೋಷ್ (ತಬಲಾ), ಮೆಹ್ತಾಬ್ ಅಲಿ ನಿಯಾಝ್ (ಸಿತಾರ್), ವನರಾಜ್ ಶಾಸ್ತ್ರೀ (ಸಾರಂಗಿ), ಎಸ್.…
ಬೆಂಗಳೂರು : ಸಂಪತ್ ಮರಾಠೆ ಮತ್ತು ಮಮತಾ ಮರಾಠೆ ಅವರ ಪುತ್ರಿ ಮಾಹಿ ಮರಾಠೆ ಅವರ ಭರತನಾಟ್ಯ ರಂಗ ಪ್ರವೇಶ ಬೆಂಗಳೂರಿನ ಜಯನಗರದ ವಿವೇಕ ಆಡಿಟೋರಿಯಂನಲ್ಲಿ ದಿನಾಂಕ 06-01-2024ರಂದು ನಡೆಯಿತು. ಸಾಂಪ್ರದಾಯಿಕ ಪುಷ್ಪಾಂಜಲಿಯೊಂದಿಗೆ ನೃತ್ಯ ಆರಂಭವಾಯಿತು. ನಂತರ ರುದ್ರ ಶ್ಲೋಕ ಪ್ರಸ್ತುತಪಡಿಸಲಾಯಿತು. ಶಿವನ ಗುಣ ಮತ್ತು ಶಕ್ತಿಯನ್ನು ಕಲಾವಿದೆ ಪರಿಪೂರ್ಣವಾಗಿ ಅಭಿವ್ಯಕ್ತಪಡಿಸಿದರು. ಪುರಂದರದಾಸರ ಕೃತಿ ಜಗದೋದ್ಧಾರನ ಆಡಿಸಿದಳೆಶೋದೆ ಮೂಲಕ ವಿಸ್ಮಯ, ಭಕ್ತಿ ಮುಂತಾದ ಹಲವು ಭಾವಗಳನ್ನು ನಿರ್ವಹಿಸಿ ಪ್ರೇಕ್ಷಕರನ್ನು ಮೂಕವಿಸ್ಮಿತಗೊಳಿಸಿದರು. ವಿಠಲನನ್ನು ಸ್ತುತಿಸುವ ಬೃಂದಾವನಿ ವೇಣು ಅಭಂಗ್ ಪ್ರಸ್ತುತ ಪಡಿಸಿದ್ದು ವಿಶೇಷವಾಗಿತ್ತು. ಭರತನಾಟ್ಯದ ಕೊನೆಯ ಭಾಗ ತಿಲ್ಲಾನ ಮತ್ತು ಮಂಗಳದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಉದಯ ಕುಮಾರ್ (ನಟುವಾಂಗ), ವಿದ್ವಾನ್ ಶ್ರೀವತ್ಸ (ಹಾಡುಗಾರಿಕೆ), ವಿದ್ವಾನ್ ಗುರುಮೂರ್ತಿ (ಮೃದಂಗ), ವಿದ್ವಾನ್ ಶಂಕರ್ ರಾಮನ್ (ವೀಣೆ), ವಿದ್ವಾನ್ ಭಾರ್ಗವ ಹಾಲಂಬಿ (ರಿದಮ್ ಪ್ಯಾಡ್), ವಿದ್ವಾನ್ ಕಾರ್ತಿಕ್ (ಕೊಳಲು) ಉತ್ತಮ ಸಹಕಾರ ನೀಡಿದರು.
ಮಂಗಳೂರು : ಮಂಗಳೂರಿನ ಕುದ್ಮುಲ್ ರಂಗರಾವ್ ಸಭಾಂಗಣ ಪುರಭವನದಲ್ಲಿ ದಿನಾಂಕ 23-03-2024 ಮತ್ತು 24-03-2024ರಂದು ನಡೆಯಲಿರುವ 26ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೊಸ ಪುಸ್ತಕಗಳ ಬಿಡುಗಡೆಗೆ ಅವಕಾಶವಿದೆ. ಪುಸ್ತಕ ಬಿಡುಗಡೆ ಮಾಡಲಿಚ್ಛಿಸುವವರು ದಿನಾಂಕ 31-01-2024ರ ಒಳಗೆ ಕೃತಿಯ ವಿವರಗಳೊಂದಿಗೆ ದೂರವಾಣಿ ಮೂಲಕ ಹೆಸರನ್ನು ವಿನಯ ಆಚಾರ್ಯ ಎಚ್. ಗೌರವ ಕಾರ್ಯದರ್ಶಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು 9008851030 ಇವರಲ್ಲಿ ನೋಂದಣಿ ಮಾಡಬಹುದು ಎಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ ತಿಳಿಸಿದ್ದಾರೆ.