Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ತುಳು ಕೂಟ (ರಿ.) ಕುಡ್ಲ ಇದರ ‘ಬಂಗಾರ್ ಪರ್ಬದ ಸರಣಿ ವೈಭವೊ-6’ ಇದರ ಅಂಗವಾಗಿ ದಿನಾಂಕ 18-08-2023ರಂದು ‘ತುಳುವರೆ ಹಳ್ಳಿ ಗೊಬ್ಬುಲು’ ಹಾಗೂ ದಿನಾಂಕ 19-08-2023ರಂದು ‘ತುಳು ಪ್ರತಿಭಾ ಪುರಸ್ಕಾರ ಪ್ರದಾನ -2023’ ಈ ಎರಡೂ ಕಾರ್ಯಕ್ರಮಗಳು ಕೊಡ್ಮಾಣ್ ಸರಕಾರಿ ಪ್ರೌಢ ಶಾಲೆಯಲ್ಲಿ ನಡೆಯಲಿದೆ. ದಿನಾಂಕ 18-08-2023ರಂದು ತುಳು ಕೂಟದ ಅಧ್ಯಕ್ಷರಾದ ಶ್ರೀ ಬಿ. ದಾಮೋದರ ನಿಸರ್ಗ ಇವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವು ನಡೆಯುವುದು. ಮಂಗಳೂರಿನ ಅಳಪೆಯಲ್ಲಿರುವ ಜ್ಞಾನ ವಿಕಾಸ ಕೇಂದ್ರದ ಸಂಯೋಜಕರು ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಸರಳಾ ಕುಲಾಲ್ ಇವರು ದೀಪ ಪ್ರಜ್ವಲನೆ ಮಾಡಲಿರುವರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ತಿನ ಮಾಜಿ ಸದಸ್ಯರಾದ ಶ್ರೀ ಬಿ. ಪದ್ಮನಾಭ ಕೋಟ್ಯಾನ್, ಮೇರಮಜಲು ಗ್ರಾಮ ಪಂಚಾಯತಿನ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಶ್ರೀ ಸತೀಶ ನಾಯಗ ಮತ್ತು ಕೊಡ್ಮಾಣ್ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಟಿ. ಭಾಸ್ಕರ್…
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಪಂಪ ಸಭಾಗಂಣದಲ್ಲಿ ಡಾ.ವಿನಾಯಕ ಕೃಷ್ಣ ಗೋಕಾಕರ 104ನೇ ಜನ್ಮ ದಿನಾಚರಣೆಯು ದಿನಾಂಕ 10-08-2023ರಂದು ನಡೆಯಿತು. ಗೋಕಾಕರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು “ಕನ್ನಡ ಸಾಹಿತ್ಯಕ್ಕೆ ಧೀಮಂತಿಕೆ ತಂದು ಕೊಟ್ಟ ಬರಹಗಾರ ಡಾ.ವಿನಾಯಕ ಕೃಷ್ಣ ಗೋಕಾಕರು. ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಮೊದಲ ಕನ್ನಡಿಗ ಅಧ್ಯಕ್ಷರು. ಜೊತೆಗೆ ಜ್ಞಾನಪೀಠ ಆಯ್ಕೆ ಸಮಿತಿಯ ಅಧ್ಯಕ್ಷರಾದ ಮೊದಲ ಕನ್ನಡದ ಅಕ್ಷರ ಸಂತರು. ಡಾ.ವಿನಾಯಕ ಕೃಷ್ಣ ಗೋಕಾಕರೆಂದರೆ ನಮ್ಮ ಕಣ್ಣಮುಂದೆ ನಿಲ್ಲುವ ಎತ್ತರದ ವ್ಯಕ್ತಿತ್ವ, ಕನ್ನಡಕದ ಹಿಂದಿನ ಆಳವಾದ ಒಳನೋಟದ ಕಣ್ಣು, ಗಂಭೀರ ನಿಲುವು. ಬಾಹ್ಯ ನೋಟಕ್ಕೆ ಮಾತ್ರವಲ್ಲದೆ ವ್ಯಕ್ತಿತ್ವದಿಂದಲೂ ಗೋಕಾಕರು ಎತ್ತರದ ವ್ಯಕ್ತಿಯಾಗಿದ್ದರು. ಗುರು ಗೋವಿಂದ ಭಟ್ಟರನ್ನು ಹಾಗೂ ಶಿಶುನಾಳ ಶರಿಫರ ಬಗೆಗಿನ ಸಾಕಷ್ಟು ಮಾಹಿತಿಗಳು ಅವರಲ್ಲಿತ್ತು.. ಗೋಕಾಕರಿಗೆ 1960ರಲ್ಲಿ ‘ದ್ಯಾವಾ ಪೃಥವೀ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1961ರಲ್ಲಿ ಕೇಂದ್ರ ಸರ್ಕಾರದಿಂದ ‘ಪದ್ಮಶ್ರೀ’ ಪ್ರಶಸ್ತಿ, ‘ಭಾರತ ಸಿಂಧುರಶ್ಮಿ’…
ಉಡುಪಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬ್ರಹ್ಮಾವರ ತಾಲೂಕು ಘಟಕ ಹಾಗೂ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರ ಗುಂಡ್ಮಿ ಇದರ ಆಶ್ರಯದಲ್ಲಿ ‘ಕಾದಂಬರಿ ಮರು ಓದು – ವಿಮರ್ಶೆ’ ಕಾರ್ಯಕ್ರಮವು ದಿನಾಂಕ 13-08-2023ರಂದು ಗುಂಡ್ಮಿಯ ಸದಾನಂದ ರಂಗ ಮಂದಿರದಲ್ಲಿ ಸಂಜೆ 4.00ರಿಂದ ನಡೆಯಲಿದೆ. ಯಕ್ಷ ಕಲಾವಿದರಾದ ಕೆ.ಸೀತಾರಾಮ ಸೋಮಯಾಜಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಕ.ಸಾ.ಸ ಉಡುಪಿ ಜಿಲ್ಲೆಯ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡಲಿದ್ದಾರೆ. ಕಲಾ ಕೇಂದ್ರದ ಕಾರ್ಯದರ್ಶಿಯಾದ ವಿ.ರಾಜಶೇಖರ ಹೆಬ್ಬಾರರ ಉಪಸ್ಥಿತಿಯಲ್ಲಿ ಕ.ಸಾ.ಪ ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷರಾದ ಗುಂಡ್ಮಿ ರಾಮಚಂದ್ರ ಐತಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಶ್ರೀ ರಾಮಚಂದ್ರ ಹೆಗಡೆ ಕೊಂಡದಕುಳಿ ಇವರು ‘ಮಹಾಭಾರತದ ಪಾತ್ರ’ ಕೃತಿಯ ಬಗ್ಗೆ ಹವ್ಯಕ ಭಾಷೆಯಲ್ಲಿ ಮತ್ತು ನಿವೃತ್ತ ಶಿಕ್ಷಣಾಧಿಕಾರಿಗಳಾದ ಶ್ರೀ ಶಿವಾನಂದ ಮಯ್ಯ ಇವರು ಡಾ.ಶಿವರಾಮ ಕಾರಂತರ ಕೃತಿಯಾದ ‘ಧರ್ಮರಾಯನ ಸಂಸಾರ’ ವಿಷಯಗಳ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.
ಪುತ್ತೂರು : ಪುತ್ತೂರಿನ ಬೊಳುವಾರಿನಲ್ಲಿರುವ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘವು ‘ಶ್ರೀ ಆಂಜನೇಯ 55’ಕ್ಕೆ ಪೂರಕವಾಗಿ ತಾಳಮದ್ದಳೆ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಶ್ರೀ ರಾಘವೇಂದ್ರಸ್ವಾಮಿ ಮಠ, ಕಲ್ಲಮೆ ಸರ್ವೆ, ಪುತ್ತೂರು ಇದರ ಸಹಭಾಗಿತ್ವದಲ್ಲಿ ದಿನಾಂಕ 26-08-2023ರಿಂದ 01-09-2023ರವರೆಗೆ ನಡೆಯುವ ‘ಶ್ರೀ ರಾಮಾಯಣ ದರ್ಶನಂ’ ತಾಳಮದ್ದಳೆ ಸಪ್ತಾಹದ ಆಮಂತ್ರಣ ಪತ್ರಿಕೆಯನ್ನು ಶ್ರೀ ಮಠದ ಧರ್ಮದರ್ಶಿ ಡಾ.ಸೀತಾರಾಮ ಭಟ್ ಇವರು ಬಿಡುಗಡೆಗೊಳಿಸಿ ಶುಭಹಾರೈಸಿದರು. ಸಂಘದ ಅಧ್ಯಕ್ಷರಾದ ಶ್ರೀ ಭಾಸ್ಕರ್ ಬಾರ್ಯ ಪ್ರಾರ್ಥನೆ ಸಲ್ಲಿಸಿ ಸ್ವಾಗತಿಸಿದರು. ಕಾರ್ಯದರ್ಶಿ ಆನಂದ ಸವಣೂರು ವಂದಿಸಿದರು. ಶ್ರೀಮತಿ ಅನುರಾಧ ಎಸ್. ಭಟ್, ಮಹಿಳಾ ಯಕ್ಷಗಾನ ಸಂಘದ ಅಧ್ಯಕ್ಷೆ ಶ್ರೀಮತಿ ಪ್ರೇಮಲತಾ ರಾವ್, ಗೌರವ ಕಾರ್ಯದರ್ಶಿ ಟಿ. ರಂಗನಾಥ ರಾವ್, ಸಹಕಾರ್ಯದರ್ಶಿ ಅಚ್ಯುತ ಪಾಂಗಣ್ಣಾಯ ಕೋಡಿಬೈಲು, ಅರ್ಚಕರಾದ ಸುಧೀಂದ್ರ ಅಡಿಗ, ನಿರಂಜನ ಭಟ್ ಮೂಡಬಿದ್ರೆ, ಗುಂಪೆ ಕೇಶವ ಭಟ್ ಮೊದಲಾದವರು ಉಪಸ್ಥಿತರಿದ್ದರು.
ಮಡಿಕೇರಿ : ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆ ವತಿಯಿಂದ ರಾಷ್ಟ್ರೀಯ ಶಿಶು ಕಲ್ಯಾಣ ಸಂಸ್ಥೆಯ ಕಾರ್ಯಕ್ರಮದ ಅಂಗವಾಗಿ ‘ರಾಷ್ಟ್ರೀಯ ವರ್ಣಚಿತ್ರ ಸ್ಪರ್ಧೆ’ಯು (ಕೊಡಗು ಜಿಲ್ಲೆಯವರಿಗೆ ಮಾತ್ರ) ದಿನಾಂಕ 27-08-2023ರಂದು ನಡೆಯಲಿದೆ. ಸ್ಪರ್ಧೆಗೆ ಹೆಸರು ನೋಂದಾಯಿಸಲು 25-08-2023 ಕೊನೆಯ ದಿನಾಂಕವಾಗಿದೆ. ಸ್ಪರ್ಧಾ ವಿವರ ಮತ್ತು ಹೆಚ್ಚಿನ ಮಾಹಿತಿಗೆ ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆ ‘ಚೇತನ ಚಿಲುಮೆ’ (ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣದ ಹತ್ತಿರ) ದೂ.ಸಂ.9880985939, 9480745776ನ್ನು ಸಂಪರ್ಕಿಸಬಹುದು.
ಉಡುಪಿ : ಆದಿಉಡುಪಿ ಪ್ರೌಢಶಾಲೆಯಲ್ಲಿ ಯಕ್ಷಶಿಕ್ಷಣ ಉದ್ಘಾಟನೆ ದಿನಾಂಕ 10-08-2023 ಗುರುವಾರದಂದು ಶಾಲಾ ಸಭಾಭವನದಲ್ಲಿ ನೆರವೇರಿತು. ಯಕ್ಷಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಮುರಲಿ ಕಡೆಕಾರ್ ಮಾತನಾಡಿ “ಈ ಬಾರಿ ಎಪ್ಪತ್ತು ಪ್ರೌಢಶಾಲೆಗಳಲ್ಲಿ ಯಕ್ಷಗಾನ ಕಲಿಕೆ ಆರಂಭಗೊಂಡಿದೆ. ಇನ್ನಷ್ಟು ಶಾಲೆಗಳಿಂದ ಬೇಡಿಕೆ ಬರುತ್ತಿದ್ದು, ಗುರುಗಳ ಕೊರತೆಯಿಂದಾಗಿ ಕೋರಿಕೆ ಈಡೇರಿಸಲಾಗುತ್ತಿಲ್ಲ. ಇದು ಯಕ್ಷಶಿಕ್ಷಣದ ಬಗೆಗಿರುವ ಆಸಕ್ತಿಯ ದ್ಯೋತಕವಾಗಿದೆ” ಎಂಬುದಾಗಿ ನುಡಿದರು. ಮುಖ್ಯ ಶಿಕ್ಷಕ ಶ್ರೀ ರವೀಂದ್ರರು ಸ್ವಾಗತಿಸಿದರು. ಶಾಲಾ ಸಂಚಾಲಕ ಶ್ರೀ ಟಿ.ಕೆ.ಗಣೇಶ್ ರಾವ್, ಉಡುಪಿ ಮೆಸ್ಕಾಂ ಅಧಿಕಾರಿ ಶ್ರೀ ಎಸ್.ಗಣರಾಜ ಭಟ್, ಯಕ್ಷಗಾನ ಗುರುಗಳಾದ ಶ್ರೀ ಶಾಂತಾರಾಮ ಆಚಾರ್ಯ ಶುಭಹಾರೈಸಿದರು. ಶಿಕ್ಷಕರಾದ ಶ್ರೀ ಡೇವಿಡ್ ಅಲ್ಬರ್ಟ್. ಶ್ರೀ ಸುರೇಶ ನಾಯ್ಕ, ಶ್ರೀ ಅಶೋಕ್ ಹಾಗೂ ಶ್ರೀ ಸುಧಾಕರ ಉಪಸ್ಥಿತರಿದ್ದರು. ಶಿಕ್ಷಕ ಶ್ರೀ ಉಮೇಶ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ಶಾಲೆಯ ಆಸಕ್ತ 40 ವಿದ್ಯಾರ್ಥಿಗಳು ಯಕ್ಷಗಾನ ಕಲಿಯುತ್ತಿದ್ದಾರೆ.
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕಲೆ ಮತ್ತು ಸಾಹಿತ್ಯ ಪ್ರಬಲವಾದ ಸಾಧನವಾಗಿತ್ತು. ಅಮಾಯಕ ಜನ ಮನದ ಭಾವನೆಗಳಿಗೆ ಸ್ಪಂದನೆಯನ್ನು ನೀಡುತ್ತಾ ಸ್ವತಂತ್ರ ಭಾರತದ ಕಲ್ಪನೆಗಳನ್ನು ಹುಟ್ಟುಹಾಕುವಲ್ಲಿ ಕಲೆ ಮತ್ತು ಸಾಹಿತ್ಯ ಪ್ರಧಾನ ಪಾತ್ರ ವಹಿಸಿತ್ತು. ಭಾರತೀಯ ನೋವಿನ ಚಿತ್ರಣ, ಬ್ರಿಟಿಷ್ ರ ಕ್ರೂರತೆಯ ಕಲ್ಪನೆ, ಸಾಂಸ್ಕೃತಿಕ ಅಧಃಪತನ, ಧಾರ್ಮಿಕತೆಯ ಕ್ಷೀಣಿಸುವಿಕೆ .. .. ಹೀಗೆ ಹಲವು ಸೋಲುಗಳನ್ನು ಜನರಿಗೆ ಪರಿಚಯಿಸುವ ಪ್ರಭಾವಿ ಮಾಧ್ಯಮವಾಗಿ ಕಲೆ ಮತ್ತು ಸಾಹಿತ್ಯ ಕಾರ್ಯ ನಿರ್ವಹಿಸುತ್ತು. ಸಂವೇದನಾಶೀಲತೆಯನ್ನು ಹುಟ್ಟುಹಾಕುವ ಮೂಲಕ ರಾಷ್ಟ್ರೀಯ ಭಾವನೆಗಳನ್ನು ಹೆಚ್ಚಿಸಿ, ಸ್ವಾತಂತ್ರ್ಯದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಶ್ರಮಿಸಿದ ಕಲಾವಿದರು, ಲೇಖಕರು ಹಲವರು. ತಮ್ಮ ಕವನ, ಲೇಖನ, ನಾಟಕ, ಚಿತ್ರಕಲೆ, ಹಾಡು, ನೃತ್ಯ, ಜಾನಪದ ಕಲೆಗಳ ಮೂಲಕ ದೇಶಭಕ್ತಿಯ ಭಾವನೆಗಳನ್ನು ಉದ್ದೀಪಿಸಿದ ಮಹಾನ್ ಕಲಾವಿದರು ಸಾಹಿತಿಗಳು ನಿತ್ಯ ಸ್ಮರಣೀಯರು. ಸರೋಜಿನಿ ನಾಯ್ಡು : (13-02-1879 – 02-03-1949) ‘ತೊಟ್ಟಿಲು ತೂಗುವ ಕೈ ಜಗವನ್ನೇ ಆಳಬಲ್ಲುದು’ ಎಂಬುದನ್ನು ತಮ್ಮ ಜೀವನಕ್ರಮದ ಮೂಲಕ ಜಗತ್ತಿಗೆ ತೋರಿಕೊಟ್ಟ ಮಹಾನ್ ಮಹಿಳಾ…
ಭರತನಾಟ್ಯ, ಯಕ್ಷಗಾನ ಕೇವಲ ಮನೋರಂಜನೆ ಆಯ್ಕೆಯಲ್ಲ. ಈ ಭಾರತೀಯ ಕಲೆಗೆ ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಪ್ರಶಸ್ತ ಸ್ಥಾನವಿದೆ. ಈ ನೃತ್ಯ ಕ್ಷೇತ್ರದಲ್ಲಿ ಚಿರಪರಿಚಿತ ಹಾಗೂ ಬಹುಮುಖ ಪ್ರತಿಭೆ, ಯಕ್ಷಗಾನ ಕಲಾವಿದೆ ಶ್ವೇತಾ ಅರೆಹೊಳೆ. ಅರೆಹೊಳೆ ಪ್ರತಿಷ್ಠಾನದ ಅಧಕ್ಷ ಅರೆಹೊಳೆ ಸದಾಶಿವ ರಾವ್ ಹಾಗೂ ಗೀತಾ ಅರೆಹೊಳೆ ಇವರ ಮಗಳಾಗಿ 16.12.2000 ರಂದು ಕೇರಳದ ತ್ರಿಶೂರಿನಲ್ಲಿ ಜನನ. ಪತ್ರಿಕೋದ್ಯಮದಲ್ಲಿ ಪದವಿಯನ್ನು ಪಡೆದಿರುತ್ತಾರೆ. 6ನೇ ವಯಸ್ಸಿನಲ್ಲಿಯೇ ನೃತ್ಯಾಭ್ಯಾಸ ಆರಂಭಿಸಿ, ಪೂರ್ಣ ಪ್ರಮಾಣದ ನೃತ್ಯಾಭ್ಯಾಸವನ್ನು ಗುರುಗಳಾದ ಯು.ಕೆ ಪ್ರವೀಣ್ ಅವರಲ್ಲಿ ಪೂರೈಸಿದ್ದಾರೆ. ಭರತನಾಟ್ಯ ಜೂನಿಯರ್, ಸೀನಿಯರ್ ಮುಗಿಸಿದ್ದಾರೆ. ನೃತ್ಯದ ಜೊತೆಗೆ ಸಂಗೀತದಲ್ಲೂ ಆಸಕ್ತಿ ಹೊಂದಿರುವ ಶ್ವೇತಾ, ಉಷಾ ಪ್ರವೀಣ್ ಅವರಲ್ಲಿ ಸಂಗಿತ ಜೂನಿಯರ್ ಮುಗಿಸಿದ್ದಾರೆ, ಜೊತೆಗೆ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಅವರಲ್ಲಿ ಭರತನಾಟ್ಯ ಪ್ರಿ ವಿದ್ವತ್ ಪೂರೈಸಿದ್ದಾರೆ. ಕಲಗದ್ದೆ, ನಾಟ್ಯ ವಿನಾಯಕ ದೇವರ ಆಶೀರ್ವಾದ ಮತ್ತು ಇವರ ಹೆತ್ತವರ ಪ್ರೋತ್ಸಾಹದಿಂದ ಯಕ್ಷಗಾನ ರಂಗದಲ್ಲಿ ಕೂಡ ತಮ್ಮ ಪ್ರತಿಭೆಯನ್ನು ಯಕ್ಷಗುರು ಮಂಜುನಾಥ್ ಕುಲಾಲ್ ಐರೋಡಿ ಅವರ…
ತುಮಕೂರು : ಡಮರುಗ ರಂಗ ಸಂಪನ್ಮೂಲ ಕೇಂದ್ರ (ರಿ.) ತುಮಕೂರು ಅಭಿನಯಿಸುವ, ಮೆಳೇಹಳ್ಳಿ ದೇವರಾಜ್ ರಚಿಸಿ ನಿರ್ದೇಶಿಸಿದ ‘ಮುಟ್ಟಾದಳೇ ಪುಟ್ಟಿ’ ನಾಟಕದ ಪ್ರದರ್ಶನವು ದಿನಾಂಕ 13-08-2023ರ ಸಂಜೆ 6.30ಕ್ಕೆ ತುಮಕೂರಿನ ಬೆಳ್ಳಾವಿ ಹೊಬಳಿಯ ವಕ್ಕೋಡಿ ಗೊಲ್ಲರಹಟ್ಟಿಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ವಕ್ಕೋಡಿ ಗೊಲ್ಲರಹಟ್ಟಿಯ ಪ್ರಧಾನ ಅರ್ಚಕರಾದ ಪೂಜಾರ್ ಶ್ರೀ ಚಿಕ್ಕಣ್ಣ, ಮಹಿಳಾಪರ ಚಿಂತಕಿ ಹಾಗೂ ಸಾಹಿತಿಗಳಾದ ಶ್ರೀಮತಿ ಬಿ.ಸಿ.ಶೈಲಾ ನಾಗರಾಜ್, ವಕ್ಕೋಡಿ ಗೊಲ್ಲರಹಟ್ಟಿಯ ಕಾಡುಗೊಲ್ಲ ಮುಖಂಡರಾದ ಶ್ರೀ ಚಿನ್ನಪ್ಪ ಹಾಗೂ ಹೆಗ್ಗರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ರೇವಣ್ಣ ಭಾಗವಹಿಸಲಿದ್ದಾರೆ.
ಕಾಸರಗೋಡು : ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀಸಂಸ್ಥಾನ ಎಡನೀರು ಮಠ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳ ತೃತೀಯ ಚಾತುರ್ಮಾಸ್ಯ ವ್ರತಾಚರಣೆ ಪ್ರಯುಕ್ತ ‘ನೃತ್ಯಾರ್ಪಣಂ’ ಭರತನಾಟ್ಯ ಕಾರ್ಯಕ್ರಮವು ದಿನಾಂಕ 14-08-2023ರಂದು ಕಾಸರಗೋಡಿನ ಶ್ರೀ ಎಡನೀರು ಮಠದಲ್ಲಿ ನಡೆಯಲಿದೆ. ಸನಾತನ ನಾಟ್ಯಾಲಯದ ನೃತ್ಯ ಗುರುಗಳಾದ ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್ ಮತ್ತು ವಿದುಷಿ ಶ್ರೀಲತಾ ನಾಗರಾಜ್ ಇವರ ವಿದ್ಯಾರ್ಥಿಗಳಾದ ನಾಟ್ಯವಿದುಷಿ ವಾಣಿಶ್ರೀ ವಿ., ಕುಮಾರಿ ದೀಪಶ್ರೀ ವಿ. ಹಾಗೂ ಕುಮಾರಿ ನಿಧಿಶ್ರೀ ನಿ. ಇವರು ಕಾರ್ಯಕ್ರಮ ನೀಡಲಿದ್ದಾರೆ. ಹಿಮ್ಮೇಳದಲ್ಲಿ ಸಹಕರಿಸುವ ಕಲಾವಿದರು ನಟುವಾಂಗದಲ್ಲಿ ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್, ಹಾಡುಗಾರಿಕೆಯಲ್ಲಿ ಕುಮಾರಿ ವಸುಧಾಶ್ರೀ ಕೋಳಿಕ್ಕಜೆ, ಮೃದಂಗ ವಾದನದಲ್ಲಿ ವಿದ್ವಾನ್ ರಾಜನ್ ಕಣ್ಣೂರು, ಕೊಳಲುವಾದನದಲ್ಲಿ ಮಾಸ್ಟರ್ ಅಭಿಷೇಕ್ ಮತ್ತು ನೃತ್ಯ ನಿರೂಪಣೆ ನಾಟ್ಯವಿದುಷಿ, ಶ್ರೀಲತಾ ನಾಗರಾಜ್ ಇವರಿಂದ.