Subscribe to Updates
Get the latest creative news from FooBar about art, design and business.
Author: roovari
ತುಮಕೂರು : ಡಮರುಗ ರಂಗ ಸಂಪನ್ಮೂಲ ಕೇಂದ್ರ (ರಿ.) ತುಮಕೂರು ಅಭಿನಯಿಸುವ, ಮೆಳೇಹಳ್ಳಿ ದೇವರಾಜ್ ರಚಿಸಿ ನಿರ್ದೇಶಿಸಿದ ‘ಮುಟ್ಟಾದಳೇ ಪುಟ್ಟಿ’ ನಾಟಕದ ಪ್ರದರ್ಶನವು ದಿನಾಂಕ 13-08-2023ರ ಸಂಜೆ 6.30ಕ್ಕೆ ತುಮಕೂರಿನ ಬೆಳ್ಳಾವಿ ಹೊಬಳಿಯ ವಕ್ಕೋಡಿ ಗೊಲ್ಲರಹಟ್ಟಿಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ವಕ್ಕೋಡಿ ಗೊಲ್ಲರಹಟ್ಟಿಯ ಪ್ರಧಾನ ಅರ್ಚಕರಾದ ಪೂಜಾರ್ ಶ್ರೀ ಚಿಕ್ಕಣ್ಣ, ಮಹಿಳಾಪರ ಚಿಂತಕಿ ಹಾಗೂ ಸಾಹಿತಿಗಳಾದ ಶ್ರೀಮತಿ ಬಿ.ಸಿ.ಶೈಲಾ ನಾಗರಾಜ್, ವಕ್ಕೋಡಿ ಗೊಲ್ಲರಹಟ್ಟಿಯ ಕಾಡುಗೊಲ್ಲ ಮುಖಂಡರಾದ ಶ್ರೀ ಚಿನ್ನಪ್ಪ ಹಾಗೂ ಹೆಗ್ಗರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ರೇವಣ್ಣ ಭಾಗವಹಿಸಲಿದ್ದಾರೆ.
ಕಾಸರಗೋಡು : ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀಸಂಸ್ಥಾನ ಎಡನೀರು ಮಠ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳ ತೃತೀಯ ಚಾತುರ್ಮಾಸ್ಯ ವ್ರತಾಚರಣೆ ಪ್ರಯುಕ್ತ ‘ನೃತ್ಯಾರ್ಪಣಂ’ ಭರತನಾಟ್ಯ ಕಾರ್ಯಕ್ರಮವು ದಿನಾಂಕ 14-08-2023ರಂದು ಕಾಸರಗೋಡಿನ ಶ್ರೀ ಎಡನೀರು ಮಠದಲ್ಲಿ ನಡೆಯಲಿದೆ. ಸನಾತನ ನಾಟ್ಯಾಲಯದ ನೃತ್ಯ ಗುರುಗಳಾದ ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್ ಮತ್ತು ವಿದುಷಿ ಶ್ರೀಲತಾ ನಾಗರಾಜ್ ಇವರ ವಿದ್ಯಾರ್ಥಿಗಳಾದ ನಾಟ್ಯವಿದುಷಿ ವಾಣಿಶ್ರೀ ವಿ., ಕುಮಾರಿ ದೀಪಶ್ರೀ ವಿ. ಹಾಗೂ ಕುಮಾರಿ ನಿಧಿಶ್ರೀ ನಿ. ಇವರು ಕಾರ್ಯಕ್ರಮ ನೀಡಲಿದ್ದಾರೆ. ಹಿಮ್ಮೇಳದಲ್ಲಿ ಸಹಕರಿಸುವ ಕಲಾವಿದರು ನಟುವಾಂಗದಲ್ಲಿ ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್, ಹಾಡುಗಾರಿಕೆಯಲ್ಲಿ ಕುಮಾರಿ ವಸುಧಾಶ್ರೀ ಕೋಳಿಕ್ಕಜೆ, ಮೃದಂಗ ವಾದನದಲ್ಲಿ ವಿದ್ವಾನ್ ರಾಜನ್ ಕಣ್ಣೂರು, ಕೊಳಲುವಾದನದಲ್ಲಿ ಮಾಸ್ಟರ್ ಅಭಿಷೇಕ್ ಮತ್ತು ನೃತ್ಯ ನಿರೂಪಣೆ ನಾಟ್ಯವಿದುಷಿ, ಶ್ರೀಲತಾ ನಾಗರಾಜ್ ಇವರಿಂದ.
ಬೆಂಗಳೂರು : ಲೇಖಕ ಆಂಟನ್ ಚೇಖೋವ್ ಇವರ ‘ವಾರ್ಡ್ ನಂ.06’ ನಾಟಕದ ಕನ್ನಡ ಅನುವಾದ ‘ಕತ್ತಲೆ ದಾರಿ ದೂರ’ ನಾಟಕವನ್ನು ಬ್ಯಾಂಗ್ಲೋರ್ ಪ್ಲೇಯರ್ಸ್ ದಿನಾಂಕ 19-08-2023ರಂದು ಬೆಂಗಳೂರಿನ ಮಲ್ಲತ್ತಳ್ಳಿಯ ಕಲಾಗ್ರಾಮದಲ್ಲಿ ಪ್ರಸ್ತುತಪಡಿಸಲಿದ್ದಾರೆ. ಡಿ.ಆರ್.ನಾಗರಾಜ್ ಕನ್ನಡಕ್ಕೆ ಅನುವಾದಿಸಿರುವ ಈ ನಾಟಕ ನಿರ್ದೇಶನ ಶ್ರೀ ನಿಧಿ ಬಿ.ಎಸ್ ಅವರದ್ದು. ನಾಟಕದ ಬಗ್ಗೆ : ಕತ್ತೆಲೆ ದಾರಿ ದೂರ ಕನ್ನಡ ನಾಟಕರಂಗದಲ್ಲಿ ಅದರದ್ದೆ ಆದ ದೂರದ ದಾರಿಯನ್ನು ಹುಡುಕಿಕೊಂಡು ತನ್ನದೇ ಛಾಪನ್ನು ಮೂಡಿಸಿದೆ. ಈ ಕೃತಿಯು ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ಮನಸುಗಳ ನಡುವೆ ನಡೆಯುವ ಒಂದು ಕಥೆ. ಭ್ರಷ್ಟ ಅಧಿಕಾರಿಯು ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುವುದು ಈ ನಾಟಕದಲ್ಲಿ ಸ್ಪಷ್ಟವಾಗುತ್ತದೆ. ಆಂಟನ್ ಚೇಖೋವ್ ಪ್ರಕಾರ ‘ಒಬ್ಬ ಪಾತ್ರಧಾರಿಯ ಕರ್ತವ್ಯ ಪ್ರಶ್ನೆಗಳನ್ನು ಹುಡುಕುವುದೇ ಹೊರತು ಉತ್ತರಗಳನ್ನು ಹುಡುಕುವುದಲ್ಲ. ಡಿ.ಆರ್.ನಾಗರಾಜ್‌ರವರು ಓದುಗರನ್ನು ಕತ್ತಲೆ ದಾರಿ ದೂರ ಮೂಲಕ ಸಂಕೀರ್ಣ ಪ್ರಶ್ನೆಗಳ ಬಳಿ ಕರೆದೊಯ್ಯುತ್ತಾರೆ. ಇದರಲ್ಲಿ ಬರುವ ಮುಖ್ಯ ಪಾತ್ರಧಾರಿಗಳು ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಾಂಕೇತಿಕ ಪ್ರತಿನಿಧಿಗಳಾಗಿ ಅವ್ಯವಸ್ಥೆಯ ವಿರುದ್ಧ ದನಿ…
ಉಡುಪಿ : ಕಲ್ಯಾಣಪುರದ ಮಿಲಾಗ್ರಿಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಯಕ್ಷಶಿಕ್ಷಣ ತರಬೇತಿ ಅಧಿಕೃತವಾಗಿ ದಿನಾಂಕ 09-08-2023ರಂದು ಉದ್ಘಾಟನೆಗೊಂಡಿತು. ಸಂಸ್ಥೆಯ ಅಧ್ಯಕ್ಷರಾದ ಅತೀ ವಂದನೀಯ ವೆಲೇರಿಯನ್ ಮೆಂಡೋನ್ಸ, ಶಾಲಾ ಮುಖ್ಯೋಪಾಧ್ಯಾಯನಿ ಸಿಸ್ಟರ್ ಅನಿತಾ ಡಿಸೋಜಾ ಮತ್ತು ನಿವೃತ್ತ ಶಿಕ್ಷಕಿ ಮಾರ್ಸಲೀನ್ ಶೆರಾ ಉಪಸ್ಥಿತರಿದ್ದರು. ಟ್ರಸ್ಟಿನ ಕಾರ್ಯದರ್ಶಿ ಮುರಳಿ ಕಡೆಕಾರ್ ಪ್ರಸ್ತಾವಿಕ ಮಾತುಗಳನ್ನಾಡಿದರು. ಟ್ರಸ್ಟಿನ ವಿಶ್ವಸ್ಥರಾದ ಶ್ರೀಮತಿ ಮೀನಾ ಲಕ್ಷಣೀ ಅಡ್ಯಂತಾಯ ಅಭ್ಯಾಗತರಾಗಿ ಪಾಲುಗೊಂಡರು. ಗುರುಗಳಾಗಿ ಕುಮಾರಿ ಪ್ರಣಮ್ಯ ತಂತ್ರಿ ವಿದ್ಯಾರ್ಥಿಗಳನ್ನು ತರಬೇತಿಗೊಳಿಸುತ್ತಿದ್ದಾರೆ. ಯಕ್ಷಶಿಕ್ಷಣ ಟ್ರಸ್ಟಿನಲ್ಲಿ ಮೂವರು ಹುಡುಗಿಯರು ತಲಾ ಎರಡು ಶಾಲೆಗಳಲ್ಲಿ ಗುರುಗಳಾಗಿ ಕಾರ್ಯನಿರ್ವಹಿಸುತ್ತಿರುವುದು ನಾವೆಲ್ಲ ಅಭಿಮಾನ ಪಡುವ ಸಂಗತಿಯಾಗಿದೆ.
ಮಂಗಳೂರು : ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಆಶ್ರಯದಲ್ಲಿ ಮೈಸೂರಿನ ಅಂಬಾರಿ ಪ್ರಕಾಶನ ‘ಯಕ್ಷ ದೀವಟಿಗೆ’ ಕೃತಿಯ ಲೋಕಾರ್ಪಣೆಯು ದಿನಾಂಕ 14-08-2023ರ ಸಂಜೆ 5.30ಕ್ಕೆ ನಡೆಯಲಿದೆ. ಹೆಚ್. ಸುಜಯೀಂದ್ರ ಹಂದೆಯವರ ಯಕ್ಷ ಪ್ರಬಂಧಗಳ ಸಂಕಲನದ ಅನಾವರಣ ಕಾರ್ಯಕ್ರಮವು ಮಂಗಳೂರಿನ ಎಂ.ಜಿ. ರಸ್ತೆ ಯಲ್ಲಿರುವ ಕಲ್ಕೂರ ಪ್ರತಿಷ್ಠಾನದ ಕಚೇರಿಯಲ್ಲಿ ನಡೆಯಲಿದೆ. ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಯಕ್ಷಗಾನ ವಿದ್ವಾಂಸರಾದ ಡಾ.ಎಂ.ಪ್ರಭಾಕರ್ ಜೋಶಿಯವರು ಕೃತಿಯನ್ನು ಬಿಡುಗಡೆ ಗೊಳಿಸಲಿದ್ದಾರೆ.
ವಿಟ್ಲ : ಯಕ್ಷಮಿತ್ರರು ವಿಟ್ಲ ವಾಟ್ಸಾಪ್ ಬಳಗದವರ ಸಹಕಾರದೊಂದಿಗೆ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ವಿಟ್ಲ ಬಸವನಗುಡಿ, ವಿಟ್ಲ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಜೇಸಿ ಪೆವಿಲಿಯನ್ ಸಭಾಂಗಣದಲ್ಲಿ ದಿನಾಂಕ 13-08-2023ರಂದು ಮಧ್ಯಾಹ್ನ ಗಂಟೆ 1.30ರಿಂದ ‘ವಿಟ್ಲ ಯಕ್ಷೋತ್ಸವ’ ನಡೆಯಲಿದೆ. ಮಧ್ಯಾಹ್ನ ಗಂಟೆ 1.30ಕ್ಕೆ ತೆಂಕು ಬಡಗು ತಿಟ್ಟಿನ ದ್ವಂದ್ವ ಭಾಗವತಿಕೆಯೊಂದಿಗೆ ವಾಚಿಕೋತ್ಸವ, ಸಂಜೆ ಸಭಾ ಕಾರ್ಯಕ್ರಮದಲ್ಲಿ ಉತ್ಸವ ಗೌರವಾರ್ಪಣೆ, ಸಂಜೆ ಗಂಟೆ 7.30ರಿಂದ ತುಳು ಕಲೋತ್ಸವದಲ್ಲಿ ಯಕ್ಷಲೋಕದಲ್ಲಿ ಐತಿಹಾಸಿಕ ದಾಖಲೆ ಮಾಡಿದ ಅನಂತ ರಾಮ ಬಂಗಾಡಿ ವಿರಚಿತ ‘ಕಾಡಮಲ್ಲಿಗೆ’ ಯಕ್ಷಗಾನ ಬಯಲಾಟ ನಡೆಯಲಿದೆ. ಸಭಾ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಶ್ರೀ ಕ್ಷೇತ್ರ ಕಟೀಲಿನ ಶ್ರೀಹರಿನಾರಾಯಣದಾಸ ಅಸ್ರಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕರಾದ ರಾಜೇಶ್ ನಾಯ್ಕ್ ಯು., ಅಶೋಕ್ ಕುಮಾರ್ ರೈ, ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಮೂಹ ಸಂಸ್ಥೆ ಮುಖ್ಯಸ್ಥ ಡಾ.ಎಂ. ಮೋಹನ ಆಳ್ವ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷರಾದ…
ಉಡುಪಿ : ಶ್ರೀ ಅನಂತಪದ್ಮನಾಭ ಯಕ್ಷಗಾನ ಮಂಡಳಿ ಪೆರ್ಡೂರು ಮೇಳ ಇವರಿಂದ ಶ್ರೀ ರಾಮಕೃಷ್ಣ ಯಕ್ಷಗಾನ ಕಲಾ ಮಂಡಳಿ ಕುತ್ಪಾಡಿ ಇದರ ಸಹಾಯಾರ್ಥವಾಗಿ ದಿನಾಂಕ 13-08-2023 ರವಿವಾರದಂದು ಯಕ್ಷಗಾನ ಪ್ರದರ್ಶನ ನಡೆಯಲಿದೆ. ದೇವದಾಸ್ ಈಶ್ವರಮಂಗಲ ವಿರಚಿತ ಹಾಗೂ ಬೆಳ್ಳಿಹಬ್ಬದ ವರ್ಷಾಚರಣೆಯಲ್ಲಿರುವ ಅಪರೂಪದ ‘ಪವಿತ್ರ ಪದ್ಮಿನಿ’ ಎಂಬ ಪ್ರಸಂಗವು ಮಧ್ಯಾಹ್ನ 2.30ಕ್ಕೆ ಉಡುಪಿಯ ಅಜ್ಜರಕಾಡು ಪುರಭವನದ ವೇದಿಕೆಯಲ್ಲಿ ನಡೆಯಲಿದೆ. ರಂಗದ ವಿಶೇಷತೆ: 25 ವರ್ಷಗಳ ನಂತರ ಮತ್ತೊಮ್ಮೆ ಪೆರ್ಡೂರು ರಂಗದಲ್ಲಿ “ಪವಿತ್ರ ಪದ್ಮಿನಿ”. ಮರುಕಳಿಸಿದ ‘ಜನ್ಸಾಲೆ, ಕಡತೋಕ ಮತ್ತು ಮಲ್ಯ’ ಜೋಡಿಯ ಮೋಡಿ. ‘ಬಾಳ್ಕಲ್, ಬಿದ್ಕಲ್ ಕಟ್ಟೆ ಮತ್ತು ಮುಂಡಾಡಿ’ ಇವರ ಹಿಮ್ಮೇಳದ ರಸದೌತಣ. ಯಕ್ಷ ಸಿಂಹಸ್ವರ ಬಿರುದಾಂಕಿತ ಥಂಡಿಮನೆಯವರ ಗತ್ತುಗಾಂಭಿರ್ಯದ ಕಮಲತೇಜ. ಆದಿತ್ಯ ಮತ್ತು ಶಶಾಂಕ ಎಂಬ ಕಥಾನಾಯಕರಾಗಿ ರಂಗದ ರಂಗನ್ನು ಹೆಚ್ಚಿಸುವ ‘ಕಡಬಾಳ್ ಮತ್ತು ಕಾ.ಚಿಟ್ಟಾಣಿ’. ತೊಂಬಟ್ಟು ಮತ್ತು ಬೇರೊಳ್ಳಿ’ ‘ವೈಭವ ಮತ್ತು ಅಮೋಘ’ ಎಂಬ ಖಳನಾಯಕ ಜೋಡಿಯಾಗಿ ಮಿಂಚಿನ ಸಂಚಾರ. ಪವಿತ್ರ ಪದ್ಮಿನಿಯಾಗಿ ಯಲಗುಪ್ಪ ಹಾಗೂ ಉಪ್ಪೂರು ಮೋಡಿ…
ಉಡುಪಿ: ಜಿ.ಪಂ ಉಡುಪಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಉಡುಪಿ, ಪುಣ್ಯಕೋಟಿ ಅನುಷ್ಠಾನ ಬೆಂಬಲ ಸಂಸ್ಥೆ ಹಾಗೂ ಜಲಜೀವನ ಮಿಷನ್ ಯೋಜನೆಯಡಿ ಶಶಿಚಂದ್ರ ಯಕ್ಷಗಾನ ಬಳಗ ಉಡುಪಿ ಇವರ ಸಹಯೋಗದಲ್ಲಿ ‘ಮನೆ ಮನೆಗೆ ಗಂಗೆ’ ಎನ್ನುವ ಯಕ್ಷಗಾನ ಪ್ರದರ್ಶನ ದಿನಾಂಕ 20-07-2023 ರಿಂದ 07-08-2023ರ ವರಿಗೆ ಉಡುಪಿ ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳಲ್ಲಿ ನಡೆಯಿತು. ದಿನಾಂಕ 20-07-2023ರಂದು ಕೋಟದ ಕೋಟತಟ್ಟು ಗ್ರಾ.ಪಂ ವ್ಯಾಪ್ತಿಯ ವಿವೇಕ ಪದವಿ ಪೂರ್ವ ಕಾಲೇಜಿನಲ್ಲಿ ಉದ್ಘಾಟನೆಗೊಂಡು ಈ ಜಾಗೃತಿ ಯಕ್ಷಗಾನ ಪ್ರದರ್ಶನವು ದಿನಾಂಕ 07-08-2023ರಂದು ಉಡುಪಿಯ 80 ಬಡಗಬೆಟ್ಟು ರಾಜೀವಿ ನಗರದ ಸರಕಾರಿ ಪ್ರೌಢಶಾಲೆಯಲ್ಲಿ ಸಮಾರೂಪ ಗೊಂಡಿತು. ಪ್ರೊ.ಪವನ್ ಕಿರಣ್ಕೆರೆ ವಿರಚಿತ ಈ ಪ್ರಸಂಗದ ಪ್ರದರ್ಶನದಲ್ಲಿ ವಸುಂಧರನಾಗಿ ಪಂಜು ಪೂಜಾರಿ ಕಮಲಶಿಲೆ, ಗಂಗೆಯಾಗಿ ಸುಧೀರ್ ಉಪ್ಪೂರು ಹಾಗೂ ರಂಗನಾಗಿ ಕಾರ್ತಿಕ್ ಪಾಂಡೇಶ್ವರ ಅಭಿನಯಿಸಿದ್ದು, ಹಿಮ್ಮೇಳದಲ್ಲಿ ಭಾಗವತರಾಗಿ ಚಂದ್ರಕಾಂತ ರಾವ್ ಮೂಡುಬೆಳ್ಳೆ ಹಾಗೂ ಸುದೀಪ್ ಚಂದ್ರ ಶೆಟ್ಟಿ ನೇಗದ್ದೆ, ಮದ್ದಳೆ ವಾದಕರಾಗಿ ಶಶಿಕುಮಾರ್ ಆಚಾರ್ಯ ತೆಂಕನಿಡಿಯೂರು…
ಮಂಗಳೂರು : ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ತು ಮಂಗಳೂರು ಮತ್ತು ಶಾರದಾ ವಿದ್ಯಾ ಸಂಸ್ಥೆ ಮಂಗಳೂರು ಇದರ ಸಹಯೋಗದೊಂದಿಗೆ ‘ಬಾಲ ನೃತ್ಯ ಪ್ರತಿಭೋತ್ಸವ -2023’ ಕಾರ್ಯಕ್ರಮವು ದಿನಾಂಕ 13-08-2023 ಆದಿತ್ಯವಾರದಂದು ಸಂಜೆ ಘಂಟೆ 4ಕ್ಕೆ ಮಂಗಳೂರಿನ ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ನಡೆಯಲಿದೆ. ಶಾರದಾ ವಿದ್ಯಾ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ.ಬಿ.ಪುರಾಣಿಕ್ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಕಾರ್ಯಕ್ರಮವು ಪರಿಷತ್ತಿನ ಅಧ್ಯಕ್ಷರಾದ ವಿದ್ವಾನ್ ಶ್ರೀ ಯು.ಕೆ. ಪ್ರವೀಣ್ ಇವರ ಸಭಾಧ್ಯಕ್ಷತೆಯಲ್ಲಿ ನಡೆಯಲಿದ್ದು, ಪರಿಷತ್ತಿನ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿರುವರು. ಮಂಗಳೂರಿನ ಹದಿನೈದು ಬಾಲಪ್ರತಿಭೆಗಳು ನೃತ್ಯಪ್ರದರ್ಶನ ನೀಡಲಿರುವರು. ಈ ಕಾರ್ಯಕ್ರಮಕ್ಕೆ ನೃತ್ಯಕಲಾ ಪರಿಷತ್ತಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ತಮ್ಮೆಲ್ಲರಿಗೂ ಆದರದ ಸ್ವಾಗತವನ್ನು ಕೋರಿದ್ದಾರೆ.
ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು, ಪುತ್ತೂರು ಇದರ ತಿಂಗಳ ಸರಣಿ ತಾಳಮದ್ದಳೆ ಕಾರ್ಯಕ್ರಮವು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಶ್ರಯದಲ್ಲಿ ನಡೆಯಿತು. ಕ್ಷೇತ್ರದ ರಾಜಗೋಪುರದಲ್ಲಿ ‘ಗಂಗಾ ಸಾರಥ್ಯ-ಅಂಬಾ ಶಪಥ’ ಎಂಬ ಪ್ರಸಂಗದ ತಾಳಮದ್ದಳೆ ಕಾರ್ಯಕ್ರಮವು ದಿನಾಂಕ 07-08-2023ರಂದು ಸಂಜೆ ನಡೆಯಿತು. ಹಿಮ್ಮೇಳದಲ್ಲಿ ಸತೀಶ್ ಇರ್ದೆ, ಶ್ರೀಪತಿ ಭಟ್ ಉಪ್ಪಿನಂಗಡಿ, ಅಚ್ಯುತ ಪಾಂಗಣ್ಣಾಯ ಕೋಡಿಬೈಲು, ಆದಿತ್ಯ ನಾರಾಯಣ ಸಹಕರಿಸಿದರು. ಮುಮ್ಮೇಳದಲ್ಲಿ ಪರುಶುರಾಮ (ಪೂಕಳ ಲಕ್ಷ್ಮೀನಾರಾಯಣ ಭಟ್), ಭೀಷ್ಮ (ಪಕಳಕುಂಜ ಶ್ಯಾಮ್ ಭಟ್), ಗಂಗೆ (ಕುಂಬ್ಳೆ ಶ್ರೀಧರ್ ರಾವ್), ಅಕೃತವೃಣ (ಭಾಸ್ಕರ್ ಬಾರ್ಯ) ಮತ್ತು ಅಂಬೆ (ಶುಭಾ ಜೆ.ಸಿ. ಅಡಿಗ) ಸಹಕರಿಸಿದರು.