Subscribe to Updates
Get the latest creative news from FooBar about art, design and business.
Author: roovari
ಪೆರಿಯ : ಬೇಕಲದ ಗೋಕುಲಂ ಗೋಶಾಲೆಯಲ್ಲಿ ದಿನಾಂಕ 23 ಅಕ್ಟೋಬರ್ 2025ರಂದು ಪರಂಪರಾ ವಿದ್ಯಾಪೀಠದ ಅಡಿಯಲ್ಲಿ ನಡೆಯುತ್ತಿರುವ ಐದನೇಯ ದೀಪಾವಳಿ ಸಂಗೀತೋತ್ಸವದಲ್ಲಿ ಎ. ಅನಂತ ಪದ್ಮನಾಭನ್ ಇವರ ವೀಣಾ ಕಛೇರಿ ಪ್ರೇಕ್ಷಕರಿಗೆ ರಸದೌತಣ ನೀಡಿತು. ಕರ್ನಾಟಕ, ಹಿಂದೂಸ್ತಾನಿ, ಪಾಶ್ಚಾತ್ಯ ಸಂಗೀತವನ್ನು ಏಕಕಾಲದಲ್ಲಿ ಕೇಳುವಾಗ ಅದು ಸಂಗೀತದ ತ್ರಿವೇಣಿ ಸಂಗಮವಾಗಿತ್ತು. ನಾಟ್ಟ, ಗಾನಮೂರ್ತಿ, ಸರಸ್ವತಿ, ಕಪಿ, ಸಿಂಧು ಭೈರವಿ ರಾಗಗಳಲ್ಲಿ ಕೀರ್ತನೆಗಳನ್ನು ತಮ್ಮದೇ ಶೈಲಿಯಲ್ಲಿ ವೀಣೆಯನ್ನು ನುಡಿಸಿದರು. ಪಕ್ಕ ವಾದ್ಯದಲ್ಲಿ ಚೇರ್ತಲ ದಿನೇಶ್ ಮೃದಂಗ, ಡಾ. ಸುರೇಶ್ ವೈದ್ಯನಾಥನ್ ಘಟವನ್ನು ಹಾಗೂ ಪಯ್ಯನ್ನೂರು ಗೋವಿಂದ ಪ್ರಸಾದ್ ಮೋರ್ಸಿಂಗ್ ನುಡಿಸಿದರು. ಕಲಾವತಿಯವರ ಸೋಪಾನ ಸಂಗೀತ, ಬದರಿ ವಿಶ್ವನಾಥ್ ಇವರ ಸಂಗೀತೋತ್ಸವದೊಂದಿಗೆ ಐದನೇ ದಿನದ ಸಂಗೀತೋತ್ಸವ ಆರಂಭವಾಯಿತು. ವರುಣ ಲಕ್ಷ್ಮಿ, ವಿದ್ಯಾ ಹರಿಕೃಷ್ಣ, ಯೋಗ ಕೀರ್ತನೆ, ರಮ್ಯಾ ನಂಬೂತಿರಿ, ಹೃದಯೇಶ್ ಕೃಷ್ಣನ್, ಮಾತಂಗಿ ಸತ್ಯಮೂರ್ತಿ ಮತ್ತು ಎನ್.ಜೆ. ನಂದಿನಿ ಇವರಿಂದ ಸಂಗೀತ ಕಛೇರಿಗಳು, ಯೋಗ ವಂದನಾ ಇವರಿಂದ ವೀಣಾ ಕಛೇರಿ ಮತ್ತು ಘಟ ವಿದ್ವಾಂಸ ಡಾಕ್ಟರ್…
ಕಾರ್ಕಳ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯಕ್ಷ ರಂಗಾಯಣ ಕಾರ್ಕಳ ಆಯೋಜಿಸುವ ತಿಂಗಳ ಕಾರ್ಯಕ್ರಮ ‘ನಾಟಕದ ಮಾತು ಕತೆ’ ಜಾಗತಿಕ ನೆಲೆಯ ನಾಟಕ ಸಾಹಿತ್ಯ ಕೃತಿಗಳನ್ನು ಪರಿಚಯಿಸುವ ಉಪನ್ಯಾಸ ಹಾಗೂ ಕಥನ ಮಾಲಿಕೆ ಕಾರ್ಯಕ್ರಮವು ದಿನಾಂಕ 25 ಅಕ್ಟೋಬರ್ 2025ರ ಶನಿವಾರ ಸಂಜೆ ಘಂಟೆ 4.00 ರಿಂದ 6.00ರ ವರೆಗೆ ಕಾರ್ಕಳದ ಕೋಟಿ ಚೆನ್ನಯ ಥೀಂ ಪಾರ್ಕ್ ಆವರಣದಲ್ಲಿ ನಡೆಯಲಿದೆ. ಇದು ಈ ಸರಣಿಯ 6 ನೇ ಉಪನ್ಯಾಸವಾಗಿದ್ದು, ಕಾರ್ಯಕ್ರಮದಲ್ಲಿ ಉಪನ್ಯಾಸದ ಬಿ. ಆರ್. ವೆಂಕಟರಮಣ ಐತಾಳ ಇವರು ಸೋಫೋಕ್ಲಿಸ್ ಮಹಾಕವಿಯ ‘ಈಡಿಪಸ್ ನಾಟಕಗಳು’ ಕುರಿತು ಮಾತನಾಡಲಿದ್ದಾರೆ.
ಹೊಸದುರ್ಗ : ರಂಗಭೂಮಿಗೆ ಅಪೂರ್ವ ಕೊಡುಗೆ ನೀಡಿದವರಿಗೆ ಚಿತ್ರದುರ್ಗ ಜಿಲ್ಲೆಯ ಶ್ರೀ ಶಿವಕುಮಾರ ಕಲಾಸಂಘ ಕೊಡಮಾಡುವ ‘ಶ್ರೀ ಶಿವಕುಮಾರ ಪ್ರಶಸ್ತಿ’ಗೆ ನಟಿ, ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ಆಯ್ಕೆಯಾಗಿದ್ದಾರೆ. 2004ರಿಂದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಹೆಸರಿನಲ್ಲಿ ನೀಡಲಾಗುವ ಪ್ರಶಸ್ತಿಯು ರೂಪಾಯಿ 50,000 ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ. 02 ನವೆಂಬರ್ 2025 ರಿಂದ 07 ನವೆಂಬರ್ 2025ರ ವರೆಗೆ ಸಾಣೇಹಳ್ಳಿಯಲ್ಲಿ ನಡೆಯುವ ರಾಷ್ಟ್ರೀಯ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಾಣೇಹಳ್ಳಿಯ ತರಳಬಾಳು ಶಾಖಾ ಮಠದ ಪೀಠಾಧ್ಯಕ್ಷ ಪಂಡಿತಾರಾಧ್ಯ ಸ್ವಾಮೀಜಿ ತಿಳಿಸಿದ್ದಾರೆ.
ಉಡುಪಿ : ಗಿರಿಬಳಗ (ರಿ.) ಕುಂಜಾರುಗಿರಿ ಇವರು ದೀಪಾವಳಿ ಹಬ್ಬದ ಪ್ರಯುಕ್ತ ಪ್ರಸ್ತುತಪಡಿಸುವ “ಛತ್ರಪತಿ ಶಿವಾಜಿ” ಕನ್ನಡ ಐತಿಹಾಸಿಕ ನಾಟಕದ ಪ್ರದರ್ಶನವು ದಿನಾಂಕ 25 ಅಕ್ಟೋಬರ್ 2025ರಂದು ಉಡುಪಿಯ ಶಾರದಾ ಕಲ್ಯಾಣ ಮಂಟಪ ರಸ್ತೆಯಲ್ಲಿರುವ ಐ. ವೈ. ಸಿ. ಸಭಾಂಗಣದಲ್ಲಿ ಸಂಜೆ ಘಂಟೆ 6.30ರಿಂದ ನಡೆಯಲಿದೆ. ಖ್ಯಾತ ಸಾಹಿತಿ ಶಶಿರಾಜ್ ರಾವ್ ಕಾವೂರು ರಚಿಸಿರುವ ಈ ನಾಟಕದ ರಂಗ ಕಲ್ಪನೆ, ವಿನ್ಯಾಸ ಮತ್ತು ನಿರ್ದೇಶನವನ್ನು ಗಣೇಶ್ ರಾವ್ ಎಲ್ಲೂರು ಮಾಡಿದ್ದಾರೆ. ಗಿರೀಶ್ ತಂತ್ರಿ ಉಡುಪಿ ಸಂಗೀತದಲ್ಲಿ ಸಹಕರಿಸಲಿದ್ದು, ಶಂಕರ್ ಬೆಳಲಕಟ್ಟೆ ಶಿವಮೊಗ್ಗ ಬೆಳಕು ಸಂಯೋಜನೆಯಲ್ಲಿ, ರಾಜು ಆಚಾರ್ಯ ಸಾಗರ ಹಾಗೂ ಭಾಸ್ಕರ ಆಚಾರ್ಯ ಸಾಗರ ವಸ್ತ್ರಾಲಂಕಾರದಲ್ಲಿ, ಜಗದೀಶ್ ಚೆನ್ನಂಗಡಿ ಉಡುಪಿ ಪ್ರಸಾದನದಲ್ಲಿ ಹಾಗೂ ಮಹೇಶ್ ಹೊನ್ನಾವರ ರಂಗಸಜ್ಜಿಕೆಯಲ್ಲಿ ಸಹಕರಿಸಲಿದ್ದಾರೆ. ಈ ನಾಟಕಕ್ಕೆ ಪ್ರವೇಶ ಉಚಿತವಾಗಿದೆ.
ಕಾಸರಗೋಡು: ಕಾಸರಗೋಡು ಜಿಲ್ಲೆಯ ರಾಮದಾಸ ನಗರದಲ್ಲಿರುವ ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರ (ರಿ.) ವತಿಯಿಂದ ಕೇಂದ್ರದ 25ನೇ ವರ್ಷದ ಅಂಗವಾಗಿ ಆಯೋಜಿಸಿದ ಸರಣಿ ಕಾರ್ಯಕ್ರಮ “ರಜತ ರಂಗ” ಇದರ ಉದ್ಘಾಟನಾ ಸಮಾರಂಭವು ದಿನಾಂಕ 20 ಅಕ್ಟೋಬರ್ 2025ರ ಸೋಮವಾರದಂದು ಎಡನೀರು ಮಠಾಧೀಶರಾದ ಶ್ರೀಶ್ರೀ ಸಚ್ಚಿದಾನಂದ ಭಾರತಿ ಶ್ರೀಗಳು ಹಾಗೂ ಕೊಂಡೆವೂರು ಮಠಾಧೀಶರಾದ ಶ್ರೀ ಶ್ರೀ ಯೋಗಾನಂದ ಸರಸ್ವತೀ ಶ್ರೀಗಳ ಆಶೀರ್ವಾದದೊಂದಿಗೆ ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆಯಿತು. ಕುತ್ಯಾಳ ಶ್ರೀ ಕ್ಷೇತ್ರದ ಮೊಕ್ತೇಸರರಾದ ಕೆ. ಜಿ. ಶ್ಯಾನುಭೋಗ್ ಇವರು ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಸರಕಾರಿ ಜನರಲ್ ಆಸ್ಪತ್ರೆ, ಕಾಸರಗೋಡು, ಇಲ್ಲಿನ ವೈದ್ಯರಾದ ಡಾ. ಜನಾರ್ದನ ನಾಯ್ಕ ಸಿ.ಎಚ್. ದೀಪ ಬೆಳಗಿಸಿ ಉದ್ಘಾಟಿಸಿದರು. ರಜತ ಮಹೋತ್ಸವ ಸಮಿತಿ ಅಧ್ಯಕ್ಷರಾದ ಡಾ. ಹರಿಕಿರಣ್ ಬಂಗೇರ, ಪ್ರಧಾನ ಕಾರ್ಯದರ್ಶಿ ಹರಿನಾರಾಯಣ ಮಯ್ಯ ಹಾಗೂ ತರಬೇತಿ ಕೇಂದ್ರದ ಅಧ್ಯಕ್ಷರಾದ ಚಂದ್ರ ಮೋಹನ್ ಕೂಡ್ಲು, ಕೆ. ಕೆ. ಶ್ಯಾನುಭಾಗ್ ಮತ್ತು ಬಲಿಪ ಶಿವಶಂಕರ ಭಟ್…
ಪುತ್ತೂರು : ಕರ್ನಾಟಕ ಗಮಕ ಕಲಾ ಪರಿಷತ್ ಬೆಂಗಳೂರು, ಕರ್ನಾಟಕ ಗಮಕ ಕಲಾ ಪರಿಷತ್ ದ. ಕ. ಜಿಲ್ಲೆ, ಕರ್ನಾಟಕ ಗಮಕ ಕಲಾ ಪರಿಷತ್ ಪುತ್ತೂರು ತಾಲೂಕು ಘಟಕ, ಹಾಗೂ ಇತರ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ದ. ಕ. ಜಿಲ್ಲಾ 10ನೇ ಗಮಕ ಸಮ್ಮೇಳನ ದಿನಾಂಕ 17 ಅಕ್ಟೋಬರ್ 2025ರಂದು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಾಲಯದ ನಟರಾಜ ವೇದಿಕೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿದ ಒಡಿಯೂರು ಸಂಸ್ಥಾನದ ಯೋಗಿನಿ ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀ ಮಾತನಾಡಿ “ಗಮಕ ಕಲೆಗೆ ಪ್ರಚಾರ ಸಿಗಬೇಕು. ಜಿಲ್ಲಾ ಅಧ್ಯಕ್ಷರು ಹೇಳಿದ ಹಾಗೆ ಮಠ ಮಂದಿರಗಳಲ್ಲಿ ವಾರಕ್ಕೆ ಒಮ್ಮೆಯಾದರೂ ಪುರಾಣ ವಾಚನಗಳು ನಡೆಯಬೇಕು. ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ಗಮಕಲಾ ಪರಿಷತ್ತು ಇದರ ಅಧ್ಯಕ್ಷರಾದ ಪ್ರೊಫೆಸರ್ ಮಧೂರು ಮೋಹನ ಕಲ್ಲೂ ರಾಯ ಮಾತನಾಡಿ “ಕನ್ನಡ ಕಾವ್ಯಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವಲ್ಲಿ ಗಮಕ ಅಥವಾ ಕಾವ್ಯವಾಚನವು ಮಹತ್ತಾದಂತಹ ಕೆಲಸವನ್ನು ಮಾಡುತ್ತಿದೆ.…
ಉಡುಪಿ : ಗಿರಿಬಳಗ (ರಿ.) ಕುಂಜಾರುಗಿರಿ ಇವರ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಪ್ರಸ್ತುತ ಪಡಿಸುವ ‘ಛತ್ರಪತಿ ಶಿವಾಜಿ’ ಕನ್ನಡ ಐತಿಹಾಸಿಕ ನಾಟಕ ಪ್ರದರ್ಶನವನ್ನು ದಿನಾಂಕ 25 ಅಕ್ಟೋಬರ್ 2025ರಂದು ಸಂಜೆ 6-30 ಗಂಟೆಗೆ ಉಡುಪಿಯ ಶಾರದಾ ಕಲ್ಯಾಣ ಮಂಟಪ ರಸ್ತೆ, ಯಕ್ಷಗಾನ ಕಲಾರಂಗದ ಐ.ವೈ.ಸಿ. ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಈ ನಾಟಕದ ರಚನೆ ಶಶಿರಾಜ್ ರಾವ್ ಕಾವೂರು, ಗಿರೀಶ್ ತಂತ್ರಿ ಉಡುಪಿ ಇವರು ಸಂಗೀತ ಹಾಗೂ ಗಣೇಶ್ ರಾವ್ ಎಲ್ಲೂರು ಇವರು ರಂಗ ಕಲ್ಪನೆ, ವಿನ್ಯಾಸ ಮತ್ತು ನಿರ್ದೇಶನ ಮಾಡಿರುತ್ತಾರೆ.
ಸುಳ್ಯ : ತೆಂಕು ತಿಟ್ಟನ ಶ್ರೇಷ್ಠ ಯಕ್ಷಗಾನ ಕಲಾವಿದ ಸುಳ್ಯದ ‘ರಂಗಮನೆ’ಯ ಯಜಮಾನ ಸುಜನಾ ಸುಳ್ಯ ದಿನಾಂಕ 24 ಅಕ್ಟೋಬರ್ 2025ರಂದು ವಯೊ ಸಹಜ ಅನಾರೋಗ್ಯದಿಂದ ದೈವಾಧೀನರಾದರು. ಅವರಿಗೆ 89ವರ್ಷ ವಯಸ್ಸಾಗಿತ್ತು. ಇವರು ಪುತ್ರ ರಂಗಕರ್ಮಿ ಜೀವನರಾಂ ಸುಳ್ಯ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಸುಳ್ಯದ ಪ್ರಸಿದ್ಧ ನಾವೂರು ಮನೆತನದಲ್ಲಿ ಜನಿಸಿದ ಸುಜನಾ ಅವರು ನಾಟಕ ನಟರಾಗಿ ವೃತ್ತಿ ಆರಂಭಿಸಿದರು. ಮಾವ ಕಾವು ಶ್ರೀನಿವಾಸ ರಾಯರ ಪ್ರೇರಣೆಯಿಂದ ಯಕ್ಷಗಾನ ಕಲಾವಿದರಾಗಿ ಬಳ್ಳಂಬೆಟ್ಟು, ಧರ್ಮಸ್ಥಳ, ಇರಾ ಸೋಮನಾಥೇಶ್ವರ, ಕುದ್ರೋಳಿ, ಕೂಡ್ಲು, ಆದಿಸುಬ್ರಹ್ಮಣ್ಯ, ಸುಂಕದಕಟ್ಟೆ, ಕಟೀಲು ಮೇಳಗಳಲ್ಲಿ ಮುವತ್ತಾರು ವರ್ಷ ಕಲಾಸೇವೆ ಗೈದಿದ್ದರು. ಹಾಸ್ಯ ಪಾತ್ರಗಳಲ್ಲಿ ವಿಶೇಷ ಸಿದ್ಧಿ ಪ್ರಸಿದ್ಧಿ ಪಡೆದಿದ್ದ ಇವರು ಎಲ್ಲಾ ರೀತಿಯ ಸ್ತ್ರೀ, ಪುರುಷ ಪಾತ್ರಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಿ ಕಲಾಭಿಮಾನಿಳ ಪ್ರೀತಿಗೆ ಪಾತ್ರರಾಗಿದ್ದರು. ಹಿಮ್ಮೇಳದ ಎಲ್ಲಾ ವಿಭಾಗಗಳಲ್ಲೂ ಪರಿಣತರಾಗಿದ್ದು, ತಾಳಮದ್ದಲೆ ಅರ್ಥಧಾರಿಯಾಗಿ, ಪ್ರಸಾಧನ ತಜ್ಞರಾಗಿ ಯಕ್ಷಗಾನದ ಸರ್ವಾಂಗವನ್ನೂ ಬಲ್ಲ ಕಲಾವಿದರಾಗಿದ್ದರು. ಯಕ್ಷಗಾನ ಗುರುಗಳಾಗಿ ಸುಳ್ಯದಲ್ಲಿ ‘ವಿದೇಯದೇವಿ ನಾಟ್ಯಕಲಾ ಸಂಘ’ ಸ್ಥಾಪಿಸಿ, ರಂಗ…
ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘ ಮತ್ತು ತುಳು ಪರಿಷತ್ ಇವರ ಸಹಯೋಗದಲ್ಲಿ ಇತ್ತೀಚೆಗೆ ನಮ್ಮನ್ನಗಲಿದ ಹಿರಿಯ ಲೇಖಕಿ ಲಲಿತಾ ರೈ ಹಾಗೂ ಹಿರಿಯ ಯಕ್ಷಗಾನ ಭಾಗವತರಾದ ದಿನೇಶ್ ಅಮ್ಮಣ್ಣಾಯ ಇವರಿಗೆ ಶ್ರದ್ಧಾಂಜಲಿ ಸಭೆ ಹಾಗೂ ನುಡಿ ನಮನ ಸಲ್ಲಿಕೆ ಕಾರ್ಯಕ್ರಮವನ್ನು ದಿನಾಂಕ 25 ಅಕ್ಟೋಬರ್ 2025ರಂದು ಸಂಜೆ 4-00 ಗಂಟೆಗೆ ಮಂಗಳೂರಿನ ಉರ್ವಾಸ್ಟೋರ್ ತುಳು ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾಸರಗೋಡು : ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆ ರಂಗಚಿನ್ನಾರಿ ಕಾಸರಗೋಡು (ರಿ.) ಮತ್ತು ‘ಸ್ವರ ಚಿನ್ನಾರಿ’ (ಸಂಗೀತ ಘಟಕ) ಪ್ರಸ್ತುತ ಪಡಿಸುವ ಪ್ರತಿಭಾನ್ವಿತ ಕರೋಕೆ ಗಾಯಕರ ಸಮ್ಮಿಲನ ‘ಅಂತರ್ಧ್ವನಿ -10’ ಸಂಗೀತ ಕಾರ್ಯಕ್ರಮವನ್ನು ದಿನಾಂಕ 26 ಅಕ್ಟೋಬರ್ 2025ರಂದು ಬೆಳಿಗ್ಗೆ 10-00 ಗಂಟೆಗೆ ಕಾಸರಗೋಡಿನ ಕರೆಂದಕ್ಕಾಡು ಪದ್ಮಗಿರಿ ಕಲಾ ಕುಟೀರದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸಂಗೀತ ಕಾರ್ಯಕ್ರಮವನ್ನು ಮಂಗಳೂರು ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ ಸಿ.ಎ. ನಂದಗೋಪಾಲ್ ಶೆಣೈ ಇವರು ಉದ್ಘಾಟನೆ ಮಾಡಲಿದ್ದು, ಕೇರಳ ಮಿಷನ್ ಚಾನೆಲ್ ನಿರ್ದೇಶಕರಾದ ಶುಕೂರ್ ಕೋಳಿಕ್ಕರ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.