Author: roovari

ಮೂಡಬಿದ್ರೆ : ದೇಶದ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲಿ ಒಂದಾದ ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ರಂಗಭೂಮಿಯಲ್ಲಿ (ಅಭಿನಯ, ಸಂಗೀತ, ತಾಂತ್ರಿಕತೆ)ಯಲ್ಲಿ ಆಸಕ್ತಿಯಿದ್ದು ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಉಚಿತ ಪಿ.ಯು.ಸಿ. ಹಾಗೂ ಡಿಗ್ರಿ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿದೆ. ಆಸಕ್ತರು ಹೆಚ್ಚಿನ ವಿವರಗಳಿಗೆ ಡಾ. ಜೀವನ್ ರಾಂ ಸುಳ್ಯ – 9448215946 ಇವರನ್ನು ಮೇ 25ರ ಒಳಗೆ ಸಂಪರ್ಕಿಸಬಹುದು.

Read More

ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯ ಸಂಯೋಜಿತ ಹಾಗೂ ಕರ್ನಾಟಕ ಸರಕಾರದ ಮಾನ್ಯತೆ ಪಡೆದ ಮಹಾಲಸಾ ದೃಶ್ಯಕಲಾ ಮಹಾವಿದ್ಯಾಲಯ, ಮಂಗಳೂರು ಇಲ್ಲಿ 2023-24ನೇ ಶೈಕ್ಷಣಿಕ ವರ್ಷದ ಪ್ರವೇಶಾತಿ ಪ್ರಾರಂಭವಾಗಿದೆ. 2 ವರ್ಷ ಫೌಂಡೇಶನ್ ಪ್ರವೇಶಕ್ಕೆ ಎಸ್‌.ಎಸ್‌.ಎಲ್‌.ಸಿ ಅಥವಾ ತತ್ಸಮಾನ ಪಾಸಾಗಿರಬೇಕು ಹಾಗೂ 4 ವರ್ಷ ದೃಶ್ಯಕಲಾ ಪದವಿಗೆ (ಬ್ಯಾಚುರಲ್ ಆಫ್ ವಿಜ್ಯೂವಲ್ ಆರ್ಟ್ಸ್) 8 ಸೆಮಿಸ್ಟರ್ ಗೆ ಪಿ.ಯು.ಸಿ ಅಥವಾ ತತ್ಸಮಾನ ಪಾಸಾಗಿರಬೇಕು. ಇದರ ಜೊತೆಗೆ ಬಿವಿಎ ಪದವಿ ಶಿಕ್ಷಣ – ಅನ್ವಯಿಕ ಕಲೆ ಹಾಗೂ ಬಿವಿಎ ಪದವಿ ಶಿಕ್ಷಣ – ಚಿತ್ರಕಲೆ ಪದವಿಗಳು ಲಭ್ಯವಿದೆ. ಹೆಚ್ಚಿನ ವಿವರಗಳಿಗಾಗಿ ನಾಗರಾಜು ಪ್ರಾಂಶುಪಾಲರು : 0824 – 2492106 ಮೊಬೈಲ್ : 9945069973 8147339778, 9901751271

Read More

‘ಕಲೆ’ ಎಂಬ ಬಹು ಸುಂದರ ಪುಷ್ಪದ ವಿವಿಧ ಎಸಳುಗಳಂತೆ ಇಂದು ಅನೇಕ ಪ್ರತಿಭಾವಂತ ಕಲಾವಿದರು ನಮ್ಮ ಮುಂದಿದ್ದಾರೆ. ಸದಾ ಸುಗಂಧವನ್ನು ಬೀರುತ್ತಾ, ಕಲಾರಸಿಕರಿಗೆ ನೀಡುವ ಮನೋರಂಜನೆ ಹಾಗೂ ಕಲಾಸೌಂದರ್ಯದ ಪ್ರಸ್ತುತಿಯಲ್ಲಿ ನಮ್ಮ ಕಲಾವಿದರು ಎಂದೆಂದಿಗೂ ಹಿಂದೆ ಬಿದ್ದಿಲ್ಲ. ಸಂಗೀತಗಾರರೇ ಇರಲಿ, ನೃತ್ಯ-ನಾಟಕ ಕಲಾವಿದರೇ ಇರಲಿ ಅಥವಾ ವಾದನ ಕಲಾವಿದರೇ ಆಗಿರಲಿ ಶತ-ಶತಮಾನಗಳಿಂದ ತಮ್ಮ ಪೂರ್ವಿಕರಿಂದ ತಮಗೆ ದಕ್ಕಿರುವ ಈ ದೈವಿಕ ಕಲೆಯನ್ನು, ಯಾವುದೇ ಹೆಚ್ಚಿನ ಫಲಾಪೇಕ್ಷೆಗಳಿಲ್ಲದೇ ಮುಂದಿನ ಜನಾಂಗಕ್ಕೆ ಧಾರೆ ಎರೆದುಕೊಂಡು ಬಂದಿದ್ದಾರೆ. ಶಾಸ್ತ್ರೀಯ ಕಲಾವಿದರೇ ಇರಲಿ ಅಥವಾ ಜಾನಪದ ಕಲಾವಿದರುಗಳೇ ಆಗಿರಲಿ, ಭರತ ಖಂಡದ ಸುಸಂಸ್ಕೃತ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿಹಿಡಿಯುವಲ್ಲಿ ಎಂದಿಗೂ ಹಿಂದೆ ಬಿದ್ದಿಲ್ಲ, ಬೀಳುವವರೂ ಅಲ್ಲ. ಜನರಿಗೆ ಕಲೆಯ ಬಗೆಗೆ ಭಕ್ತಿ, ಶಿಸ್ತು, ಆನಂದ, ಗೌರವ ಇತ್ಯಾದಿ ಮೂಡಿಸುವಲ್ಲಿ ಬಹುಮುಖ್ಯ ಪಾತ್ರವಿರುವುದು ಕಲಾವಿದರದ್ದೇ. ನಾನು ಮಾಡುತ್ತಿದ್ದ ಅರ್ಥಶಾಸ್ತ್ರ ಉಪನ್ಯಾಸಕ ವೃತ್ತಿಯನ್ನು ಬಿಟ್ಟು, ಪೂರ್ಣ ಪ್ರಮಾಣದ ಕಲಾವಿದನಾಗುತ್ತೇನೆಂದು ಮನೆಯಲ್ಲಿ ತಿಳಿಸಿದಾಗ ಅಜ್ಜನಿಂದ ಬಂದ ಮೊದಲ ಪ್ರಶ್ನೆಗಳು- “ವೃತ್ತಿಯನ್ನು ಬಿಟ್ಟು ಕೂತರೆ…

Read More

ಸಾಲಿಗ್ರಾಮ : ಕರ್ನಾಟಕ ಯಕ್ಷಧಾಮ, ಮಂಗಳೂರು ಹಾಗೂ ಭೂಮಿಕಾ ಕಲಾ ಪ್ರತಿಷ್ಠಾನ, ಮಂಗಳೂರು ಇದರ ಆಶ್ರಯದಲ್ಲಿ ಸನ್ಮಾನ ಹಾಗೂ ಪೌರಾಣಿಕ ಯಕ್ಷಗಾನ ಪ್ರದರ್ಶನವು ದಿನಾಂಕ : 22-05-2023, ಸೋಮವಾರ ಸಂಜೆ ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಸ್ಥಾನ ವಠಾರದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಸ್ಥಾನ, ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ. ಕೆ.ಎಸ್. ಕಾರಂತರು ನೆರವೇರಿಸಲಿದ್ದು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಶ್ರೀ ಸುದರ್ಶನ ಉರಾಳರನ್ನು ಮಂಗಳೂರಿನ ಕಲ್ಲೂರ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಎಸ್. ಪ್ರದೀಪ ಕುಮಾರ್ ಕಲ್ಕೂರ ಇವರು ಸನ್ಮಾನಿಸಲಿರುವರು. ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಕಲಾ ಸಾಹಿತಿ ಶ್ರೀ ಎಚ್. ಜನಾರ್ದನ ಹಂದೆ ಹಾಗೂ ಗೆಳೆಯರ ಬಳಗದ ಅಧ್ಯಕ್ಷರಾದ ಶ್ರೀ ಕೆ. ತಾರಾನಾಥ ಹೊಳ್ಳ ಇವರು ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ಮಯ್ಯ ಯಕ್ಷ ಬಳಗ (ರಿ) ಹಾಲಾಡಿ ಇವರಿಂದ ‘ಆದರ್ಶ ಪುತ್ರ ಭೀಷ್ಠ’ ಯಕ್ಷಗಾನ ಪ್ರದರ್ಶನವು ನಡೆಯಲಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ಜಿ.…

Read More

ಉಡುಪಿ : ಖ್ಯಾತ ವಿಮರ್ಶಕ ಪ್ರೊ. ವಿ.ಎಂ.ಇನಾಂದಾರ್ ನೆನಪಿನಲ್ಲಿ ನೀಡುವ 2021ರ ಸಾಲಿನ ಇನಾಂದಾರ್ ಪ್ರಶಸ್ತಿಗೆ ಲೇಖಕಿ, ವಿಮರ್ಶಕಿ ಆರ್. ತಾರಿಣಿ ಶುಭದಾಯಿನಿ ಅವರ ‘ಅಂಗುಲ ಹುಳುವಿನ ಇಂಚು ಪಟ್ಟಿ’ ವಿಮರ್ಶಾ ಕೃತಿ ಹಾಗೂ 2022ರ ಸಾಲಿನ ಪ್ರಶಸ್ತಿಗೆ ಹಿರಿಯ ಲೇಖಕ, ಕಾದಂಬರಿಕಾರ ಡಿ.ಎ.ಶಂಕರ್ ಅವರ ವಿಮರ್ಶಾ ಕೃತಿ ‘ವಾಗರ್ಥ’ ಆಯ್ಕೆಯಾಗಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ತಿಳಿಸಿದ್ದಾರೆ. ಎಂ.ಜಿ.ಎಂ. ಕಾಲೇಜಿನ ವಾರ್ಷಿಕ ಮುದ್ದಣ ಸಾಹಿತ್ಯೋತ್ಸವ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ತಾರಿಣಿ ಶುಭದಾಯಿನಿ ಮೈಸೂರಿನವರಾಗಿದ್ದು ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಅಧ್ಯಯನ ಮಾಡಿದ್ದಾರೆ. ತೋಡಿ ರಾಗ, ಚಿತ್ತಗ್ಲಾನಿಯ ಮಾತು, ಒಂದು ತುಂಡು ಬೆಲ್ಲ ಅವರ ಕವನ ಸಂಕಲನಗಳು, ಗಳಿಗೆ ಬಟ್ಟಲು, ಹೆಡೆಯಂತಾಡುವ ಸೊಡರು ವಿಮರ್ಶಾ ಕೃತಿ, ನಿರ್ವಸಾಹತೀಕರಣ, ಸ್ತ್ರೀ ಶಿಕ್ಷಣ-ಚರಿತ್ರೆಯ ಹೆಜ್ಜೆಗಳು ಮುಂತಾದವು ಅವರ ಪ್ರಕಟಿತ ಕೃತಿಗಳು. ಅವರಿಗೆ ಕರ್ನಾಟಕ ಲೇಖಕಿಯರ ಸಂಘದಿಂದ ಗುಡಿಬಂಡೆ ಪೂರ್ಣಿಮಾ ದತ್ತಿ ಪ್ರಶಸ್ತಿ, ಕಥಾರಂಗಂ…

Read More

ಮಂಗಳೂರು : ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠದ ಆಡಳಿತಕ್ಕೊಳಪಟ್ಟ ಪುರಾತನ ಪೆರಣಂಕಿಲ ಶ್ರೀ ಮಹಾಲಿಂಗೇಶ್ವರ ಶ್ರೀ ಮಹಾಗಣಪತಿ ಕ್ಷೇತ್ರದ ಬಗೆಗಿನ 2 ತುಳು ಮತ್ತು 6 ಕನ್ನಡ ಹಾಡುಗಳ ಸಂಗಮ ‘ಪುಣ್ಯನೆಲ ಪೆರಣಂಕಿಲ’ ಭಕ್ತಿಗೀತೆಗಳ ಧ್ವನಿ ಕರಂಡಿಕೆ ಬಿಡುಗಡೆಗೆ ಸಿದ್ಧವಾಗಿದೆ. ಮುಂಬಯಿಯ ಖ್ಯಾತ ಗಾಯಕ ಮತ್ತು ಸಂಗೀತ ನಿರ್ದೇಶಕ ಪದ್ಮನಾಭ ಸಸಿಹಿತ್ಲು ಅವರ ನೇತೃತ್ವದಲ್ಲಿ ಬೆಂಗಳೂರಿನ ಓಂಕಾರ್ ಸ್ಟುಡಿಯೋದಲ್ಲಿ ಧ್ವನಿಮುದ್ರಣ ಕಾರ್ಯ ನೆರವೇರಿದೆ. ಮುಂಬೈ ವಿದ್ಯಾ ವಿಹಾರ್ ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಾಲಯದ ಧರ್ಮದರ್ಶಿ ಹಾಗೂ ಪೆರ್ಣಂಕಿಲ ಕ್ಷೇತ್ರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವೇದಮೂರ್ತಿ ಪೆರ್ಣಂಕಿಲ ಶ್ರೀ ಹರಿದಾಸ್ ಭಟ್ ಅವರು ಈ 8 ಹಾಡುಗಳ ಆಡಿಯೋ ಆಲ್ಬಂನ ನಿರ್ಮಾಪಕರಾಗಿ ಯೋಜನೆಯ ಸಂಪೂರ್ಣ ಪ್ರಾಯೋಜತ್ವ ವಹಿಸಿದ್ದಾರೆ. ಡಾ. ವಿದ್ಯಾ ಭೂಷಣರ ಹಾಡುಗಾರಿಕೆ: ಮಂಗಳೂರಿನ ಕವಿ – ಸಾಹಿತಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರ ಸಾಹಿತ್ಯದಲ್ಲಿ ಮೂಡಿ ಬಂದಿರುವ ಕ್ಷೇತ್ರ ಇತಿಹಾಸ, ಸುಪ್ರಭಾತ ಮತ್ತು ಸಾನಿಧ್ಯ ಮಹಿಮೆಗಳನ್ನೊಳಗೊಂಡ ಭಕ್ತಿ…

Read More

ಬೆಂಗಳೂರು: ಜ್ಞಾನಪೀಠ ಪುರಸ್ಕೃತ ಡಾ.ಗಿರೀಶ್ ಕಾರ್ನಾಡ್ ಅವರು ನಾಡಿನ ಮಹಾನ್ ಪ್ರತಿಭೆ. ಖ್ಯಾತ ಉದ್ಯಮಿ ಹಾಗೂ ಚಲನಚಿತ್ರ ನಿರ್ಮಾಪಕ ಶ್ರೀಹರಿ ಖೋಡೆ ಅವರು ನಿರ್ಮಿಸಿದ ʻಸಂತ ಶಿಶುನಾಳ ಶರೀಫʼ ಚಲನಚಿತ್ರದಲ್ಲಿ ಗುರು ಗೋವಿಂದ ಭಟ್ಟರ ಪಾತ್ರದಲ್ಲಿ ಅತ್ಯುತ್ತಮವಾಗಿ ನಟಿಸಿದ್ದರು. ಚಿತ್ರೀಕರಣ ಸಂದರ್ಭದಲ್ಲಿ ಗುರು ಗೋವಿಂದ ಭಟ್ಟರ ವಂಶಸ್ಥನಾಗಿದ್ದ ತಮ್ಮೊಂದಿಗೆ ಸೂಕ್ಷ್ಮಾತಿ ಸೂಕ್ಷ್ಮ ವಿಷಯಗಳನ್ನು ಚರ್ಚಿಸಿದ್ದರು. ಆ ಮೂಲಕ ಗೋವಿಂದ ಭಟ್ಟರ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದರು. ದೂರದರ್ಶನದಲ್ಲಿ ʻಈಶ್ವರ ಅಲ್ಲಾ ನೀನೇ ಎಲ್ಲಾʼ ಧಾರಾವಾಹಿಯಲ್ಲಿಯೂ ಗಿರೀಶ ಕಾರ್ನಾಡ್‌ ಅವರೇ ಗುರು ಗೋವಿಂದ ಭಟ್ಟರ ಪಾತ್ರ ನಿರ್ವಹಿಸಬೇಕು ಬೇಡಿಕೆಯು ನಾಡಿನಾದ್ಯಂತ ಕೇಳಿ ಬಂದಿತ್ತು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಗಿರೀಶ್ ಕಾರ್ನಾಡರ ಕುರಿತ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟರು. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಮ್ಮಿಕೊಂಡ ಗಿರೀಶ್‌ ಕಾರ್ನಾಡ್‌ರ 89ನೆಯ ಜನ್ಮದಿನಾಚರಣೆಯ ಹಿನ್ನೆಲೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡುತ್ತಿದ್ದರು. ಶ್ರೀ ರಘುನಾಥ್ ಕಾರ್ನಾಡ್ ಹಾಗೂ ಶ್ರೀಮತಿ ಕೃಷ್ಣಾಬಾಯಿ…

Read More

ಇಂದು ಅಂತರರಾಷ್ಟ್ರೀಯ ಭರತನಾಟ್ಯ ಕಲಾವಿದೆಯಾಗಿ ಮತ್ತು ಸಮಾಜ ಸೇವಾ ಧುರೀಣೆ ಗುರುತಿಸಿಕೊಂಡಿರುವ  ಬಹುಮುಖ ಪ್ರತಿಭೆಯ ಪೂರ್ಣಿಮಾ ರಜಿನಿ ಅವರದು ಅನನ್ಯ ಸೇವೆ. ಏಳರ ಎಳವೆಯಲ್ಲೇ ಹಿರಿಯ ನಾಟ್ಯಗುರು ರಾಧಾ ಶ್ರೀಧರ್ ಅವರಲ್ಲಿ ಭರತನಾಟ್ಯ ಕಲಿತು, ಗುರುಗಳ ಸಮರ್ಥ ಮಾರ್ಗದರ್ಶನದಲ್ಲಿ ಪರಿಶ್ರಮಿಸಿ, ಸಾಧನೆಯ ಪಥದಲ್ಲಿ ಸಾಗಿರುವ ಪೂರ್ಣಿಮಾ ಅವರದು, ಎರಡೂವರೆ ದಶಕಗಳ ಕಾಲದ ಅವಿರತ ಪರಿಶ್ರಮ.  ಭರತನಾಟ್ಯ ವಿದ್ವತ್ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದ ಇವರ ವೈಶಿಷ್ಟ್ಯವೆಂದರೆ ಚಿಕ್ಕವಯಸ್ಸಿನಲ್ಲೇ ಭಾರತ ಸರ್ಕಾರದ ಫೆಲೋಶಿಪ್ ದೊರೆತದ್ದು ಆಕೆಯ ಪ್ರತಿಭೆಗೆ ಸಾಕ್ಷಿ. ಜೊತೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತಾಭ್ಯಾಸ ಮತ್ತು ನಟುವಾಂಗದಲ್ಲೂ ಸಮರ್ಥ ತರಬೇತಿ ಪಡೆದರು. ದೇಶಾದ್ಯಂತ ಅನೇಕ ಏಕವ್ಯಕ್ತಿ ಪ್ರದರ್ಶನಗಳನ್ನು ನೀಡಿದ ಖ್ಯಾತಿ. ಮೈಕ್ರೋ ಬಯಾಲಜಿಯಲ್ಲಿ ಸ್ನಾತಕೋತ್ತರ ಪದವಿ, ಜೊತೆಯಲ್ಲೇ ಬೆಂಗಳೂರು ವಿಶ್ವವಿದ್ಯಾಲಯದಿಂದ ಭರತನಾಟ್ಯದಲ್ಲಿ ಎಂ.ಎ.ಪದವಿಯನ್ನೂ ಪಡೆದುಕೊಂಡರು. ಪಿ.ಇ.ಎಸ್. ವಿಶ್ವವಿದ್ಯಾಲಯದಲ್ಲಿ ಫ್ಯಾಕಲ್ಟಿ ಯಾಗಿರುವ ಇವರು ಬೆಂ. ವಿ.ವಿ.ದಿಂದ ಪಿ.ಹೆಚ್.ಡಿ. ಮಾಡುತ್ತಿದ್ದಾರೆ. ಇವರಿಗೆ ಕಲ್ಕತ್ತೆಯ ಐ.ಐ.ಎಂ.ನಿಂದ ‘ವುಮನ್ ಎಂಟರ್ಪ್ರಿನರ್ಷಿಪ್ ಮತ್ತು ಲೀಡರ್ ರ್ಶಿಪ್ ಪ್ರೋಗ್ರಾಮ್’ ಪದವಿ ಲಭ್ಯ.  ದೂರದರ್ಶನದಲ್ಲಿ…

Read More

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ 18ನೇ ಅಧ್ಯಕ್ಷರಾಗಿ ಅಪಾರ ಸೇವೆಯನ್ನು ಸಲ್ಲಿಸಿದ ಹಾಗೂ ಜಾನಪದ ಸಾಹಿತಿಯಾಗಿ, ಸಂಘಟಕರಾಗಿ, ಸಾರ್ವಜನಿಕ ಸೇವಾಗ್ರೇಸರರೂ ಆಗಿರುವ ನಾಡೋಜ ಡಾ. ಗೊ.ರು. ಚನ್ನಬಸಪ್ಪನವರ 95ನೆಯ ಜನ್ಮದಿನದ ಹಿನ್ನೆಲೆಯಲ್ಲಿ ದಿನಾಂಕ 18-05-2023ರಂದು ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಶ್ರೀಯುತರಿಗೆ ಶುಭಾಶಯಗಳನ್ನು ಸಲ್ಲಿಸಿ ಗೌರವಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಹಾಗೂ ಪರಿಷತ್ತಿನ ಪದಾಧಿಕಾರಿಗಳು ಬೆಂಗಳೂರಿನಲ್ಲಿ ಇರುವ ಡಾ. ಗೊ.ರು.ಚನ್ನಬಸಪ್ಪ ಅವರ ಮನೆಗೆ ತೆರಳಿ ಜನ್ಮದಿನದ ಶುಭಾಶಯಗಳನ್ನು ಹೇಳುವುದರೊಂದಿಗೆ, ಗೊರುಚ ಅವರು ನೂರುಕಾಲ ಆರೋಗ್ಯವಂತರಾಗಿ ಬಾಳಲಿ ಎಂದು ಹಾರೈಸಿದ್ದರು. ಕನ್ನಡಿಗರ ಸ್ವಾಭಿಮಾನದ ಪ್ರತೀಕವಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿಗೆ ಅವರ ಮಾರ್ಗದರ್ಶನ, ಸಲಹೆ ಸೂಚನೆಗಳನ್ನು ಸದಾ ದೊರಕುತ್ತಿರಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು. ಡಾ. ಗೊ.ರು.ಚನ್ನಬಸಪ್ಪನವರು 1992ರಿಂದ 1995ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ 18ನೆಯ ಅಧ್ಯಕ್ಷರಾಗಿ ಅಪಾರ ಸೇವೆ ಸಲ್ಲಿಸಿದ್ದವರು. ಕೊಪ್ಪಳ (1993), ಮಂಡ್ಯ (1994),…

Read More

ಕಡಬ : ನೃತ್ಯ ನಿನಾದ, ಕಡಬ ನೃತ್ಯ ಸಂಸ್ಥೆಯು ತಮ್ಮ ವಿದ್ಯಾರ್ಥಿಗಳಿಗಾಗಿ ಯುವ ನೃತ್ಯ ಕಲಾವಿದರಾದ ತಾಳ ಪ್ರವೀಣ ವಿದ್ವಾನ್ ಮಂಜುನಾಥ ಎನ್. ಪುತ್ತೂರು ಅವರ ಮೂಲಕ ಎರಡು ದಿನಗಳ ‘ತಾಳ ಕಾರ್ಯಗಾರ’ವನ್ನು 2023 ಮೇ ತಿಂಗಳ 20 ಮತ್ತು 21ರಂದು ಏರ್ಪಡಿಸಿದೆ ಎಂದು ನೃತ್ಯ ಸಂಸ್ಥೆಯ ನಿರ್ದೇಶಕರಾದ ಗುರು ವಿದುಷಿ ಪ್ರಮೀಳಾ ಲೋಕೇಶ್ ಅವರು ತಿಳಿಸಿದ್ದಾರೆ.

Read More