Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಧ್ಯಾನ ಸಂಗೀತ ಅಕಾಡೆಮಿ ಕಲಾ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರ ಇದರ ಸಹಯೋಗದೊಂದಿಗೆ ಟ್ರಸ್ಟ್ ನ ಐದನೇ ವಾರ್ಷಿಕೋತ್ಸವದ ಪ್ರಯುಕ್ತ ‘ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತೋತ್ಸವ’ವು ದಿನಾಂಕ 07-05-2023ರಂದು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಮಂಗಳೂರು ವಿಶ್ವವಿದ್ಯಾನಿಲಯ ಕುಲಸಚಿವ ಪ್ರೊ. ಕಿಶೋರ್ ಕುಮಾರ್ ಸಿ.ಕೆ. ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಪಂಡಿತ್ ರವಿಕಿರಣ್ ಮಣಿಪಾಲ್, ಎಂ.ಆರ್.ಪಿ.ಎಲ್. ಹಾಗೂ ಒ.ಎನ್.ಜಿ.ಸಿ. ಜನರಲ್ ಮ್ಯಾನೇಜರ್ ಮಂಜುನಾಥ ಎಚ್.ವಿ. ಮೊದಲಾದವರು ಉಪಸಿತರಿದ್ದರು. ಧ್ಯಾನ ಸಂಗೀತ ಅಕಾಡೆಮಿ ಕಲಾ ಟಸ್ಟ್ ಇದರ ಆಧ್ಯಕ್ಷರಾದ ಶ್ರೀಮತಿ ಲೋಕೇಶ್ ಇವರು ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ, ಸಂಗೀತಗಾರರಾದ ಹಿರಿಯ ಕಲಾವಿದ ರಮಾನಾಥ್ ಕೋಟೆಕಾರ್ ಅವರನ್ನು ಸಮ್ಮಾನಿಸಲಾಯಿತು. ಅನಂತರ ನಡೆದ ಪ್ರಖ್ಯಾತ ಹಿಂದೂಸ್ಥಾನಿ ಗಾಯಕರಾದ ಪಂಡಿತ್ ಕುಮಾರ್ ಮರ್ಡೂರ್ ಧಾರವಾಡ, ಶ್ರೀಮತಿ ಮೇಧಾ ಭಟ್ ಸಿದ್ದಾಪುರ, ಶ್ರೀ ವಿಶಾಲ ಭಗವಾನ್ ರಾವ್ ಮಹರ್ ಗುಡೆ, ಅಮಿತ್ ಕುಮಾರ್ ಬೆಂಗ್ರೆ ಹಾಗೂ ಧ್ಯಾನ ಸಂಗೀತ…
ಉಡುಪಿ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಹಾಗೂ ಉಡುಪಿ ತಾಲೂಕು ಘಟಕದಿಂದ ‘ಹಿರಿಯರೆಡೆಗೆ ಸಾಹಿತ್ಯದ ನಡಿಗೆ’ ಕಾರ್ಯಕ್ರಮ ಮಣಿಪಾಲದಲ್ಲಿ ದಿನಾಂಕ 16-05-2023ರಂದು ನಡೆಯಿತು. 91 ವರ್ಷದ ಹಿರಿಯರಾದ ಶ್ರೀ ವಿಠಲ ರಾವ್ ಗಂಭೀರ್ ಅವರನ್ನು ಅವರ ಸ್ವಗೃಹ ಮಣಿಪಾಲದಲ್ಲಿ ಗೌರವಿಸಲಾಯಿತು. ಸರ್ಕಾರಿ ಕೆಲಸದಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ ವಿಠಲ್ ರಾವ್ ಅವರು ಕನ್ನಡ ನಾಡು ನುಡಿ ಸಂಸ್ಕೃತಿಗೆ ಅನನ್ಯ ಸೇವೆ ಸಲ್ಲಿಸಿದ್ದಾರೆ. ಎಂಟು ವಿವಿಧ ವಾದ್ಯಗಳನ್ನು ನುಡಿಸಬಲ್ಲ ಇವರು ಸುಮಾರು 50ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಜ್ಯೋತಿಷ್ಯ ಶಾಸ್ತ್ರದಲ್ಲೂ ಪರಿಣಿತರಾಗಿರುವ ವಿಠಲ್ ರಾವ್ ಅವರನ್ನು ಗೌರವಿಸುವುದು ನಮ್ಮ ಭಾಗ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀ ನೀಲಾವರ ಸುರೇಂದ್ರ ಅಡಿಗರು ತಿಳಿಸಿದರು. ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಹಿರಿಯರಾದ ಉಪೇಂದ್ರ ಸೋಮಯಾಜಿ, ಭುವನ ಪ್ರಸಾದ್ ಹೆಗ್ಡೆ, ಚಂದ್ರಶೇಖರ್ ನಾವಡ, ನರಸಿಂಹಮೂರ್ತಿ, ಕಸಾಪ…
ಬೈಂದೂರು : ಬೈಂದೂರಿನಲ್ಲಿ ನಡೆದ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಸಹಭಾಗಿತ್ವದಲ್ಲಿ ದಿ. ಕೂರಾಡಿ ಸೀತಾರಾಮ ಶೆಟ್ಟಿ ಸ್ಮರಣಾರ್ಥ ಆಯೋಜಿಸಿದ ಲಾವಣ್ಯದ ಮಕ್ಕಳ ‘ರಂಗತರಬೇತಿ ಶಿಬಿರದ ನಾಟಕೋತ್ಸವ’ವನ್ನು ದಿನಾಂಕ 03-05-2023ರಂದು ಭಗವದ್ಗೀತಾ ಅಭಿಯಾನದ ಜಿಲ್ಲಾ ಸಂಚಾಲಕ ಬಿಜೂರು ರಾಮಕೃಷ್ಣ ಶೇರುಗಾರ್ ಉದ್ಘಾಟಿಸಿದರು. “ನಮ್ಮ ಶ್ರೀಮಂತ ಪರಂಪರೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಹಾಗೂ ಜನಮಾನಸದಲ್ಲಿ ಕಾಪಿಡುವಲ್ಲಿ ರಂಗಕಲೆಗಳು ಮಹತ್ವದ ಪಾತ್ರವಹಿಸುತ್ತವೆ. ರಂಗಭೂಮಿಗಳು ಸಮಾಜಕ್ಕೆ ಹೊಸ ಸಂದೇಶ ನೀಡಿ, ಮನುಷ್ಯನ ಜೀವನ ರೂಪಿಸಿಕೊಳ್ಳಲು ಮಾರ್ಗದರ್ಶನ ನೀಡುವುದಲ್ಲದೇ, ಜೀವನದಲ್ಲಿನ ಲೋಪದೋಷಗಳನ್ನು ತಿದ್ದಿಕೊಳ್ಳಲು ಸಹಕಾರಿಯಾಗುತ್ತದೆ” ಎಂದು ಹೇಳಿದರು. ನಿನಾಸಂ ಪದವೀಧರ, ಮರವಂತೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಸತ್ಯನಾ ಕೊಡೇರಿ ಮಾತನಾಡಿ, “ಲಾವಣ್ಯವು ಮಕ್ಕಳಿಗೆ ನಾಟಕ ಪೂರ್ವಾಭ್ಯಾಸ ಮಾಡಿ ನಾಟಕ ಮಾಡಿಸುತ್ತಿಲ್ಲ. ಬದಲಾಗಿ ಮಕ್ಕಳಿಗೆ ರಂಗತರಬೇತಿ ಮೂಲಕ ಹೊರಹೊಮ್ಮಿದ ಒಂದು ಕೃತಿಯನ್ನು ಈ ವೇದಿಕೆಯಲ್ಲಿ ಪ್ರದರ್ಶನ ನೀಡಲಾಗುತ್ತಿದೆ. ಬೇಸಿಗೆ ರಜಾದಿನಗಳಲ್ಲಿ ಎಲ್ಲೆಲ್ಲೋ ಆಟವಾಡಿಕೊಂಡಿರುವ ದಿನಕಳೆಯುವ ಮಕ್ಕಳನ್ನು ಕರೆತಂದು ಒಟ್ಟಾಗಿ ಕೂಡಿ ಕಲಿಯುವಿಕೆ ವಾತಾವಣ ಸೃಷ್ಟಿಸಿ…
ಮಂಗಳೂರು : ನಗರದ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಹಿಂದಿ ಸಂಘದ ವತಿಯಿಂದ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ದಂಡತೀರ್ಥ ಪದವಿ ಪೂರ್ವ ಕಾಲೇಜು, ಕಾಪು ಇಲ್ಲಿನ ಹಿಂದಿ ವಿಭಾಗದ ಮುಖ್ಯಸ್ಥರಾದ ಶ್ರೀ ಶಿವಣ್ಣ ಬಾಯರ್ ಮಾತನಾಡುತ್ತಾ “ಭಾಷೆ ನಮ್ಮ ಮನಸ್ಸಿನಲ್ಲಿರುವ ಭಾವನೆಯನ್ನು ವ್ಯಕ್ತಪಡಿಸುತ್ತದೆ. ಹಿಂದಿ ಭಾಷೆ ನಮ್ಮ ರಾಷ್ಟ್ರ ಭಾಷೆಯಾಗಿದ್ದು, ತುಂಬಾ ಸರಳವಾದ ಭಾಷೆಯಾಗಿದೆ ಹಾಗೂ ಇದನ್ನು ಅನಕ್ಷರಸ್ಥರು ಕೂಡಾ ಮಾತನಾಡಬಲ್ಲರು” ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ. ಆಶಾಲತಾ ಸುವರ್ಣ ವಹಿಸಿದರು. ಡೀನ್ ಅಕಾಡೆಮಿಕ್ ಡಾ. ಉಮ್ಮಪ್ಪ ಪೂಜಾರಿ ಪಿ. ಉಪಸ್ಥಿತರಿದ್ದರು. ಹಿಂದಿ ಸಂಘದ ಮುಖ್ಯಸ್ಥರಾದ ಉಮೇಶ್ ಹೆಗಡೆ ಸ್ವಾಗತಿಸಿ, ಹಿಂದಿ ಸಂಘದ ನಾಯಕಿ ಲಿಖಿತ ವಂದಿಸಿ, ಅರ್ಚಿತಾ ನಿರೂಪಿಸಿದರು.
ನಾಗಪುರ: ಶ್ರೀ ಪ್ರಶಾಂತ್ ರಾಜ್ ಮತ್ತು ಪೂಜಾ ರಾಜ್ ಅವರ 11 ವರ್ಷದ ಸುಪುತ್ರ ಅರ್ಣವ್ ರಾಜ್ ಭರತನಾಟ್ಯದ ಬಾಲಪ್ರತಿಭೆ. ನೃತ್ಯಕಲೆ ಅವನಿಗೊಲಿದು ಬಂದ ದೈವದತ್ತ ವರ. ಅಂತರರಾಷ್ಟ್ರೀಯ ನೃತ್ಯಕಲಾವಿದ ಮತ್ತು ‘ಶಿವಪ್ರಿಯ’ ನೃತ್ಯಶಾಲೆಯ ಗುರು ಡಾ. ಸಂಜಯ್ ಶಾಂತಾರಾಂ ಅವರಲ್ಲಿ ಸತತ ಪರಿಶ್ರಮದಿಂದ ನೃತ್ಯಾಭ್ಯಾಸ ಮಾಡುತ್ತಿರುವ ಈ ಅನನ್ಯ ಪ್ರತಿಭಾನ್ವಿತನಾದ ಬಾಲಕನಿಗೆ ಇತ್ತೀಚೆಗೆ ಕಲ್ಚುರಲ್ ಫೌಂಡೆಶನ್ ಆಫ್ ಇಂಡಿಯಾ ಮತ್ತು ವಿದರ್ಭ ವಿಭಾಗದ ನೃತ್ಯ ಪರಿಷತ್ತಿನ ಪ್ರತಿಷ್ಠಿತ ರಾಷ್ಟ್ರಮಟ್ಟದ ‘ನೃತ್ಯ ಕಲಾಭೂಷಣ ಬಾಲಪುರಸ್ಕಾರ-2023’ ಪ್ರಶಸ್ತಿಯನ್ನು ವಿಶ್ವ ದಿನಾಚರಣೆಯಂದು ನೀಡಿ ಸನ್ಮಾನಿಸಲಾಗಿದೆ. ಇಡೀ ಭಾರತಾದ್ಯಂತ ಬಂದಿದ್ದ 150 ನಾಮಿನೇಷನ್ ಗಳಲ್ಲಿ ಚಿ. ಅರ್ಣವ್ ಆಯ್ಕೆಯಾಗಿದ್ದು ಇದು ಅವನ ಪ್ರತಿಭೆಗೆ ಹಿಡಿದ ಕನ್ನಡಿಯಾಗಿದ್ದು, ಇತ್ತೀಚಿಗೆ ಅವನಿಗೆ ನಾಗಪುರದ ಸುರೇಶ ಭಟ್ ಆಡಿಟೋರಿಯಂ ನಲ್ಲಿ ಈ ಉನ್ನತ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ‘ಬೆಳೆಯುವ ಪೈರು ಮೊಳಕೆಯಲ್ಲೇ’ಎಂಬಂತೆ ಅತ್ಯಂತ ಪ್ರತಿಭಾಶಾಲಿಯಾದ ಇವನು ಸ್ಕಲ್ವಿ ಇಂಟರ್ನ್ಯಾಷನಲ್ ಶಾಲೆಯಲ್ಲಿ 5 ನೆಯ ತರಗತಿಯಲ್ಲಿ ಓದುತ್ತಿದ್ದು, ತನ್ನ 8 ನೆಯ…
ಪುತ್ತೂರು : ಶ್ರೀ ಮೂಕಾಂಬಿಕ ಕಲ್ಚರಲ್ ಅಕಾಡಮಿ (ರಿ.) ಪುತ್ತೂರು ಇದರ ನೃತ್ಯಾಂತರಂಗ -97ನೇ ಕಾರ್ಯಕ್ರಮವು ದಿನಾಂಕ 21-04-2023 ಶುಕ್ರವಾರ ಶಶಿಶಂಕರ ಸಭಾಂಗಣ ಪುತ್ತೂರು ಇಲ್ಲಿ ಅದ್ಭುತವಾಗಿ ನೆರವೇರಿತು. ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪ್ಪಿನಂಗಡಿಯ ಪ್ರಾಂಶುಪಾಲರಾದ ಶ್ರೀ ಸುಬ್ಬಪ್ಪ ಕೈಕಂಬ ಅಭ್ಯಾಗತರಾಗಿ ಆಗಮಿಸಿದ್ದು, ದೀಪ ಬೆಳಗಿ ಅಂದಿನ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡುತ್ತಾ “ನೃತ್ಯಾಂತರಂಗ ಹುಟ್ಟಿಕೊಂಡ ಉದ್ದೇಶ, ರೂಪುಗೊಳ್ಳುತ್ತಿರುವ ರೀತಿ, ಅದರ ಉತ್ತಮ ಬೆಳವಣಿಗೆ ಎಲ್ಲವೂ ಇಂದಿನ ಈ ಕಾರ್ಯಕ್ರಮದಲ್ಲಿ ಎದ್ದು ಕಾಣುತ್ತದೆ. ವಿದ್ಯಾರ್ಥಿಗಳಲ್ಲಿನ ಶಿಸ್ತು, ಪ್ರೇಕ್ಷಕರಲ್ಲಿ ಹುಟ್ಟಿದ ಆಸಕ್ತಿ ಇದು ಜ್ವಲಂತ ನಿದರ್ಶನವಾಗಿದೆ” ಎಂಬ ಮೆಚ್ಚುಗೆಯ ಮಾತಿನೊಂದಿಗೆ ನೃತ್ಯಾಂತರಂಗದ ಯಶಸ್ಸಿಗೆ ಶುಭ ಕೋರಿದರು. ಸಂಸ್ಥೆಯ ಪುಟಾಣಿಗಳ ತ್ರಿಪತಾಕ ತಂಡದಿಂದ ಗಣಪತಿ ಸ್ತುತಿಯೊಂದಿಗೆ ನೃತ್ಯ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ನಿರೂಪಣೆಯನ್ನು ಸಂಸ್ಥೆಯ ವಿದ್ಯಾರ್ಥಿನಿ ಕುಮಾರಿ ಆಪ್ತಚಂದ್ರಮತಿ ಮುಳಿಯ ಇವರು ಬಹಳ ಸಮರ್ಥವಾಗಿ ನಿರ್ವಹಿಸಿದರು. ಆರಂಭದಲ್ಲಿ ಶ್ರೀ ಮೂಕಾಂಬಿಕ ಕಲ್ಚರಲ್ ಅಕಾಡಮಿಯ ಸಹ ನಿರ್ದೇಶಕರಾದ ವಿದ್ವಾನ್ ಶ್ರೀ ಗಿರೀಶ್ ಕುಮಾರ್…
ಕೋಟ: ಬೆಂಗಳೂರಿನ ಯಕ್ಷಾಂಗಣ ಟ್ರಸ್ಟ್ ನಡೆಸುತ್ತಿರುವ ಯಕ್ಷಗಾನ ನೃತ್ಯ ಮತ್ತು ತಾಳಾಭ್ಯಾಸದೊಂದಿಗೆ ಪದಾಭ್ಯಾಸ ಎಂಬ ವಿಷಯದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ದಿನಾಂಕ 06-05-2023 ರಂದು ಕೋಟದ ಹಂದೆ ಶ್ರೀ ವಿಷ್ಣುಮೂರ್ತಿ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ನಡೆಯಿತು. ಸಾಲಿಗ್ರಾಮ ಮೇಳದ ಪ್ರದಾನ ಚಂಡೆವಾದಕರಾದ ಕೋಟ ಶಿವಾನಂದರು ‘ಯಾವುದೇ ಕಲೆ ಮಾರಾಟದ ಸರಕಾಗಬಾರದು. ಹೃದಯ, ಹೃದಯಗಳ ನಡುವಿನ ಮನೋ ವ್ಯಾಪಾರವಾಗಬೇಕು. ನಮ್ಮ ಯಕ್ಷಗಾನ ನಮ್ಮ ಮನಸ್ಸನ್ನು ಅರಳಿಸಬೇಕೆ ವಿನಹ ಕೆರಳಿಸಬಾರದು. ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ಶಿಬಿರಾರ್ಥಿಗಳೇ ಈ ಕಲೆಯನ್ನು ನೀವುಗಳು ಮುಂದೆ ಹವ್ಯಾಸಿಯಾಗಿ ಬಳಸಿಕೊಳ್ಳಿ ಹಾಗೂ ಒಳ್ಳೆಯ ಪ್ರೇಕ್ಷಕರಾಗಿ, ಬದಲಾಗಿ ವೃತ್ತಿಯಾಗಿ ತೆಗೆದುಕೊಳ್ಳಬೇಡಿ’ ಎಂದು ಹೇಳಿದರು. ನಿವೃತ್ತ ಎಲ್.ಐ.ಸಿ. ಅಧಿಕಾರಿಯಾದ ಹಂದಟ್ಟು ಗಣಪಯ್ಯ ಭಟ್‌ರು ಮಾತನಾಡಿ ನಮ್ಮ ಕಾಲದಲ್ಲಿ ಯಕ್ಷಗಾನ ಕಲಿಕೆಗೆ ಕಲಾ ಶಾಲೆಗಳು ಇರಲಿಲ್ಲ, ಚೌಕಿ ಹಾಗೂ ರಂಗಸ್ಥಳಗಳೇ ಕಲಾವಿದರಿಗೆ ಅಭ್ಯಾಸ ಶಾಲೆಯಾಗಿತ್ತು. ಹಿರಿಯ ಕಲಾವಿದರೇ ಕಿರಿಯ ಕಲಾವಿದರಿಗೆ ಮಾರ್ಗದರ್ಶಕರಾಗಿದ್ದರು. ಈಗ ಕಾಲ ಬದಲಾಗಿದೆ. ಸಾಕಷ್ಟು ತರಬೇತಿ ಶಾಲೆಗಳಿವೆ. ನಿಜವಾದ ಕಲಾಸಕ್ತರಿಗೆ…
ಬೆಂಗಳೂರು: ಪರಿಣತ ಅಭಿನಯ- ಹರಿತ ನೃತ್ಯ ಪಾಂಡಿತ್ಯದಲ್ಲಿ ಪಂದನಲ್ಲೂರು ಬಾನಿಯಲ್ಲಿ ಹೆಸರು ಮಾಡಿರುವ ‘’ಉಷಾಸ್ ಫೌಂಡೇಶನ್ ‘ ನೃತ್ಯಸಂಸ್ಥೆಯ ಕಲಾತ್ಮಕ ನಿರ್ದೇಶಕಿ, ಗುರು ಕಲೈಮಾಮಣಿ ಡಾ. ಸಂಗೀತಾ ಕಪಿಲನ್ ಅವರ ನುರಿತ ಗರಡಿಯಲ್ಲಿ ರೂಪುಗೊಂಡ ನೃತ್ಯ ಪ್ರತಿಮೆ ಕು. ರಿಷಾ ಪ್ರಶಾಂತ್ ಕುಮಾರ್. ಕಳೆದ ಹತ್ತುವರ್ಷಗಳಿಂದ ನಿಷ್ಠೆಯಿಂದ ಅವರಲ್ಲಿ ನೃತ್ಯಾಭ್ಯಾಸ ಮಾಡುತ್ತಿರುವ ನಂದಿನಿ ಮತ್ತ್ತು ಪ್ರಶಾಂತ್ ಕುಮಾರ್ ಪುತ್ರಿ ಬಹುಮುಖ ಪ್ರತಿಭೆಯ ರಿಷಾ, ಇದೇ ಮೇ ತಿಂಗಳ 21 ಭಾನುವಾರದಂದು ಮಲ್ಲೇಶ್ವರದ ‘ಸೇವಾಸದನ’ದಲ್ಲಿ ಸಂಜೆ 5.30 ಗಂಟೆಗೆ ತನ್ನ ನೃತ್ಯದ ಕಲಾಸೊಬಗನ್ನು ಪ್ರದರ್ಶಿಸಲು ವಿದ್ಯುಕ್ತವಾಗಿ ರಂಗಪ್ರವೇಶ ಮಾಡುತ್ತಿದ್ದಾಳೆ. ಆಕೆಯ ನೃತ್ಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಎಲ್ಲ ಕಲಾರಸಿಕರಿಗೂ ಆದರದ ಸ್ವಾಗತ. ಕು. ರಿಷಾ ಬಾಲಪ್ರತಿಭೆ. ನಾಲ್ಕುವರ್ಷದ ಮಗು ಸಂಗೀತದಲೆಗಳಿಗೆ ಹೆಜ್ಜೆ ಹಾಕುತ್ತ ಕುಣಿಯುವ ಪರಿ ತಂದೆ-ತಾಯಿಯರಿಗೆ ಅವಳಲ್ಲಿ ಅಡಗಿದ್ದ ಸುಪ್ತಪ್ರತಿಭೆ ಅರಿವಾಯಿತು. ತಂದೆ-ಪ್ರಶಾಂತ್ ಕುಮಾರ್ ತಾಯಿ ನಂದಿನಿ ಮಗುವನ್ನು ಡಾ. ಸಂಗೀತಾ ಕಪಿಲನ್ ಅವರಲ್ಲಿ ಭರತನಾಟ್ಯ ಕಲಿಯಲು ಸೇರಿಸಿದರು. ಅಲ್ಲಿಂದ ರಿಷಾಗೆ ಕ್ರಮಬದ್ಧ…
ಪಾಂಬೂರು : ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸುವ ಪಾಂಬೂರಿನ ಪರಿಚಯ ಪ್ರತಿಷ್ಠಾನವು ವಸಂತ ಕಲಾ ಸೌರಭ : ಬಹುಮುಖಿ ಸಾಂಸ್ಕೃತಿಕ ಉತ್ಸವವನ್ನು ಇದೇ ಮೇ 17ರಿಂದ ಮೇ 20ರವರೆಗೆ ಪಾಂಬೂರು ರಂಗಪರಿಚಯದಲ್ಲಿ ಆಯೋಜಿಸಿದೆ. ಮೇ 17ರಂದು ಬುಧವಾರ, ಖ್ಯಾತ ಸಾಹಿತಿ ಹಾಗೂ ಕವಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಕೊಂಕಣಿ ಭಾಷಾ ಸಂಚಾಲಕರಾಗಿರುವ ಮಾನ್ಯ ಮೆಲ್ವಿನ್ ರೊಡ್ರಿಗಸ್ ರವರೊಂದಿಗೆ ಮುಖಾಮುಖಿ, ವಾಚನ, ಗಾಯನ, ಕಥಾಪ್ರಸ್ತುತಿಯ ‘ಕವಿತಾರಂಗ್’ ಕಾರ್ಯ ಕ್ರಮ ಜರಗಲಿದೆ. ಖ್ಯಾತ ಸಿತಾರ್ ಕಲಾವಿದ ಉಸ್ತಾದ್ ರಫೀಕ್ ಖಾನ್ ರವರ ಸಂಗೀತ ನಿರ್ದೇಶನದಲ್ಲಿ ಖ್ಯಾತ ಕಲಾವಿದರು ಭಾಗವಹಿಸಲಿದ್ದಾರೆ. ಮೇ 18ರಂದು ಮಂಗಳೂರು ಸಂತ ಅಲೋಶಿಯಸ್ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಂದ ರಂಗಗೀತೆಗಳು ಹಾಗೂ ಹ್ಯಾಂಗ್‌ಆನ್ ನಾಟಕ ಪ್ರದರ್ಶನಗೊಳ್ಳಲಿದೆ. ಮೇ 19 ಮತ್ತು 20ರಂದು ಕನ್ನಡ ಸಿನೆಮಾ ರಂಗದ ಸೃಜನಶೀಲ ನಿರ್ದೇಶಕ ಮಂಸೋರೆಯವರ ‘ಮಂಸೋರೆ ಸಿನೆಹಬ್ಬ’ ಜರಗಲಿದೆ. ಮೇ 19ರಂದು ಇತ್ತೀಚೆಗೆ ಅತೀ ಚರ್ಚಿತ ‘19.20.21’ ಹಾಗೂ ಮೇ 20ರಂದು ರಾಷ್ಟ್ರ…
ತೆಕ್ಕಟ್ಟೆ : ಯಶಸ್ವೀ ಕಲಾವೃಂದ (ರಿ.) ಕೊಮೆ, ತೆಕ್ಕಟ್ಟೆ ಹಾಗೂ ಶ್ರೀ ಕೈಲಾಸ ಕಲಾಕ್ಷೇತ್ರ ತೆಕ್ಕಟ್ಟೆ ಇವುಗಳ ಜಂಟಿ ಆಶ್ರಯದಲ್ಲಿ ತೆಕ್ಕಟ್ಟೆ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಮೇ 14ರಂದು ಬೆಳಿಗ್ಗೆ ‘ರಜಾರಂಗು-ರಂಗ ಮಂಚ’ ಜ್ಞಾನರಂಜನಾ ಶಿಬಿರವನ್ನು ಗುರುಗಳಾದ ಕೊಯಿಕೂರು ಸೀತಾರಾಮ ಶೆಟ್ಟಿ ರಜಾರಂಗು ರಂಗ ಮಂಚ ಗೋಡೆಗೆ ಮಕ್ಕಳೊಂದಿಗೆ ಚಿಟ್ಟೆ ಅಂಟಿಸುವ ಮುಖೇನ ಉದ್ಘಾಟಿಸಿದರು. “ರಜಾರಂಗು ಶಿರೋನಾಮೆಯಡಿಯಲ್ಲಿ ಅನೇಕಾನೇಕ ಸಂಪನ್ಮೂಲ ವ್ಯಕ್ತಿಗಳು ಸಂಪರ್ಕಿಸಿ ದಾಖಲೆಯನ್ನು ಸಾಧಿಸಿದ ಶಿಬಿರವಿದು. ರೋಹಿತ್ ಎಸ್. ಬೈಕಾಡಿ ನೇತೃತ್ವದ ಶಿಬಿರ ಪಕ್ವತೆಯನ್ನು ಸಾಧಿಸುವುದು ಎಂಬುದು ಸಾಬೀತಾಗಿದೆ. ಈ ನಿಟ್ಟಿನಲ್ಲಿ ಚಿಣ್ಣರಿಗೆ ಆಟದ ಮೂಲಕ ಪಠ್ಯೇತರ ಚಟುವಟಿಕೆಗಳ ಪಾಠವನ್ನು ಅರಿವಿಲ್ಲದಂತೆಯೇ ಬೋಧಿಸುತ್ತಾ ಮುನ್ನಡೆದು ರಂಗವನ್ನು ಕಲ್ಪಿಸುವ ಕಾರ್ಯವೇ ರಂಗ ಮಂಚವಾಗಿರುತ್ತದೆ. 15 ದಿನಗಳ ನಿರಂತರ ದಿನ ಪೂರ್ತಿ ಮೈಮರೆತು ಒಂದಿಷ್ಟು ಕಲಿತು ಹೊರನಡೆದರೆ ಸಂಸ್ಥೆಯ ಕೆಲಸ ಸಾರ್ಥಕವಾಗುತ್ತದೆ” ಎಂದು ಅಭಿಪ್ರಾಯಪಟ್ಟರು. “ಬದುಕನ್ನು ಕಲಿಸುವ ಶಿಬಿರ ಬೆಳೆದು ಬೆಳೆದು ಇತಿಹಾಸವನ್ನು ಸೃಷ್ಟಿಸಿದೆ. ಹಿಂದಿನ ಅನೇಕ ಶಿಬಿರದಲ್ಲೂ ಹೊಸ ಹೊಸ ಪರಿಕಲ್ಪನೆಯಲ್ಲಿ…