Subscribe to Updates
Get the latest creative news from FooBar about art, design and business.
Author: roovari
ಹಾಸನ : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ.) ಬೆಂಗಳೂರು ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಹಾಸನ ವತಿಯಿಂದ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಮುದಾಯ ಭವನದಲ್ಲಿ ಹಮ್ಮಿಕೊಂಡ ‘ಚಿಣ್ಣರ ಪ್ರತಿಭಾ ಕಲರವ’ ಶಿಬಿರದ ಸಮಾರೋಪ ಸಮಾರಂಭವು ದಿನಾಂಕ 18 ಮೇ 2025 ರಂದು ಜರಗಿತು. ಈ ಸಮಾರಂಭದಲ್ಲಿ ಸಮಾರೋಪ ನುಡಿಗಳನ್ನಾಡಿದ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ “ಕೇವಲ ಪಠ್ಯಕ್ಕೆ ಸೀಮಿತವಾಗದೇ ಮಕ್ಕಳು ಪಠ್ಯೇತರ ಚಟವಟಿಕೆಗಳಲ್ಲಿ ತೊಡಗಿಕೊಂಡಾಗ ಮಾತ್ರ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ವೈವಿಧ್ಯಮಯ ಚಟವಟಿಕೆಗಳನ್ನೊಳಗೊಂಡ ಬೇಸಿಗೆ ಶಿಬಿರಗಳು ಮಕ್ಕಳ ಮನೋವಿಕಾಸಕ್ಕೆ ಸಹಕಾರಿಯಾಗಿವೆ. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯು 2020ರಿಂದಲೂ ಪ್ರತಿವರ್ಷ ಮಕ್ಕಳಿಗಾಗಿ ಪಠ್ಯೇತರ ಚಟವಟಿಕೆಗಳಾದ ಕ್ರೀಡೆ, ಯೋಗ, ಸಂಗೀತ, ಸಾಹಿತ್ಯ, ನೃತ್ಯ, ರಂಗಭೂಮಿ, ಹೊರಾಂಗಣ ಆಟಗಳು, ಒಳಾಂಗಣ ಆಟಗಳು, ಗ್ರಾಮೀಣ ಕ್ರೀಡೆಗಳು ಹೀಗೆ ವಿಭಿನ್ನವಾದ ಹಮ್ಮಿಕೊಳ್ಳುತ್ತಾ ಬಂದಿದೆ. ಮಕ್ಕಳ ಅಭ್ಯುದಯಕ್ಕಾಗಿ ಹಾಗೂ ಎಲೆಮರೆ ಕಾಯಿಯಂತಹ ಸಾಧಕರನ್ನು…
ಬೆಂಗಳೂರು : ಸ್ಟುಡಿಯೋ ಕಲಾವಿಸ್ತಾರ ಪ್ರಸ್ತುತ ಪಡಿಸುವ ಬೆಂಗಳೂರಿನ ಖ್ಯಾತ ಶಿಲ್ಪಿ ವೆಂಕಟಾಚಲಪತಿ ಇವರಿಂದ ಹೆಸರಾಂತ ವ್ಯಕ್ತಿತ್ವದ ಕ್ಲೇ ಮಾಡೆಲಿಂಗ್ ಪ್ರದರ್ಶನವನ್ನು ದಿನಾಂಕ 24 ಮೇ 2025ರಂದು ಬೆಳಗ್ಗೆ 11-00 ಗಂಟೆಗೆ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಇಲ್ಲಿ ಆಯೋಜಿಸಲಾಗಿದೆ. ಭಾರತೀಯ ಸಂಗೀತ ಶಾಸ್ತ್ರಜ್ಞ ಕರ್ಣಾಟಕ ಶಾಸ್ತ್ರೀಯ ಸಂಗೀತ ಸಾಹಿತ್ಯದ ಸಂಯೋಜಕಿ ವಿದುಷಿ ಡಾ. ಟಿ. ಎಸ್. ಸತ್ಯಾವತಿ ಇವರ ಉಪಸ್ಥಿತಿಯಲ್ಲಿ ನಡೆಯಲಿದೆ.
ಲಂಡನ್ : ಕನ್ನಡದ ಪ್ರಸಿದ್ಧ ಸಾಹಿತಿ ಬಾನು ಮುಷ್ತಾಕ್ ಇವರು ಪ್ರತಿಷ್ಠಿತ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬಾನು ಮುಸ್ತಾಕ್ ಇವರ ‘ಹಸೀನಾ ಮತ್ತು ಇತರ ಕತೆಗಳು’ ಎಂಬ ಕೃತಿಯ ಇಂಗ್ಲೀಷ್ ಅನುವಾದಿತ ‘ಹಾರ್ಟ್ ಲ್ಯಾಂಪ್’ ಕೃತಿಗೆ ಪ್ರಶಸ್ತಿ ದೊರಕಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಕನ್ನಡದ ಕೃತಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಿರುವುದು ವಿಶೇಷ. ಬೂಕರ್ ಪ್ರಶಸ್ತಿಯು 50 ಸಾವಿರ ಪೌಂಡ್ (ಅಂದಾಜು ರೂ.57.28 ಲಕ್ಷ) ಒಳಗೊಂಡಿದೆ. ಇದೇ ಅನುವಾದಿತ ಕೃತಿಗೆ ‘ಪೆನ್ ಟ್ರಾನ್ಸ್ ಲೇಟ್ಸ್ ಪ್ರಶಸ್ತಿ’ಯೂ ದೊರೆತಿದೆ. 1990 ಮತ್ತು 2023ರ ನಡುವೆ ಪ್ರಕಟಗೊಂಡ 12 ಕತೆಗಳನ್ನೊಳಗೊಂಡ ಈ ಸಂಕಲನವನ್ನು ದೀಪಾ ಭಸ್ತಿ ಇವರು ಕನ್ನಡದಿಂದ ಇಂಗ್ಲೀಷ್ಗೆ ಅನುವಾದಿಸಿದ್ದರು. ಮುಸ್ಲಿಂ ಸಮುದಾಯದ ಬಾಲಕಿಯರು ಹಾಗೂ ಹೆಣ್ಣುಮಕ್ಕಳ ದೈನಂದಿನ ಬದುಕನ್ನು ಆಧಾರಿಸಿ ಈ ಕತೆಯನ್ನು ಬರೆಯಲಾಗಿತ್ತು. ದಿನಾಂಕ 21 ಮೇ 2045ರಂದು ಲಂಡನ್ನಲ್ಲಿ ಟೇಟ್ ಮಾಡರ್ನ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಪ್ರಶಸ್ತಿಯನ್ನು ಘೋಷಿಸಲಾಯಿತು. ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿರುವ…
ಹರಿಹರಪುರ : ಕಲಾಭಿಮಾನಿ ಬಳಗ, ಯಕ್ಷವೇದಿಕೆ ಮತ್ತು ರೋಟರಿ ಸಮುದಾಯದಳ ಹರಿಹರಪುರ ಇವರ ಆಶ್ರಯದಲ್ಲಿ ಯಕ್ಷ ಗಾನಗಂಧರ್ವ ದಿ. ಕಾಳಿಂಗ ನಾವಡ ಹಾಗೂ ಗಾನ ಕೋಗಿಲೆ ದಿ. ಸುಬ್ರಹ್ಮಣ್ಯ ಧಾರೇಶ್ವರ ‘ಭಾಗವತರ ಸಂಸ್ಮರಣೆ ಗಾನಾರಾಧನೆ’ ಕಾರ್ಯಕ್ರಮವನ್ನು ದಿನಾಂಕ 25 ಮೇ 2025ರಂದು ಸಂಜೆ 4-30 ಗಂಟೆಗೆ ಹರಿಹರಪುರ ಶ್ರೀ ನುಗ್ಗಿಮಕ್ಕಿ ಮಲೇಶಯ್ಯನವರ ಛತ್ರದಲ್ಲಿ ಆಯೋಜಿಸಲಾಗಿದೆ. ಗಾನಾರಾಧನೆಯಲ್ಲಿ ಸ್ವರವಾರಿಧಿ ಶ್ರೀಮತಿ ಕಾವ್ಯಶ್ರೀ ಅಜೇರು ಇವರಿಗೆ ಶ್ರೀಪತಿ ನಾಯಕ್ ಅಜೇರು ಮತ್ತು ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ ಇವರು ಮೃದಂಗ ಮತ್ತು ಚಂಡೆಯಲ್ಲಿ ಸಹಕರಿಸಲಿದ್ದಾರೆ.
ಬೆಂಗಳೂರು : ಕರ್ನಾಟಕ ಲೇಖಕಿಯರ ಸಂಘದ ವತಿಯಿಂದ ‘ಡಾ. ನಳಿನಿ ಮೂರ್ತಿ ದತ್ತಿ ಪ್ರಶಸ್ತಿ’ಗೆ ವಿಜ್ಞಾನ ಕೃತಿಗಳನ್ನು ಲೇಖಕಿಯರಿಂದ ಆಹ್ವಾನಿಸಲಾಗಿದೆ. ಖ್ಯಾತ ವಿಜ್ಞಾನ ಲೇಖಕಿ ದಿವಂಗತ ಡಾ. ನಳಿನಿ ಮೂರ್ತಿ ಹೆಸರಿನಲ್ಲಿ ಅವರ ಪತಿ ಎಸ್. ನರಸಿಂಹ ಮೂರ್ತಿಯವರು ಕರ್ನಾಟಕ ಲೇಖಕಿಯರ ಸಂಘದಲ್ಲಿ ದತ್ತಿನಿಧಿಯನ್ನು ಸ್ಥಾಪಿಸಿದ್ದು, ಪ್ರಶಸ್ತಿಯು 25 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ ಎಂದು ಸಂಘದ ಅಧ್ಯಕ್ಷೆ ಡಾ. ಎಚ್.ಎಲ್. ಪುಷ್ಪ ತಿಳಿಸಿದ್ದಾರೆ. ವಿಜ್ಞಾನಕ್ಕೆ ಸಂಬಂಧಿಸಿದ ಕೃತಿಗಳು ಹಾಗೂ ವೈಜ್ಞಾನಿಕ ಕತೆ, ಕಾದಂಬರಿ ಹಾಗೂ ಸಂಕೀರ್ಣ (ವೈದ್ಯಕೀಯ/ ತಂತ್ರಜ್ಞಾನ/ ಕೃಷಿ ವಿಜ್ಞಾನ/ ಪರಿಸರ ವಿಜ್ಞಾನ)ಕ್ಕೆ ಸಂಬಂಧಿಸಿದ ಕೃತಿಗಳನ್ನು ಲೇಖಕಿಯರಿಂದ ಆಹ್ವಾನಿಸಲಾಗಿದ್ದು, ಜನವರಿ 2024ರಿಂದ ಡಿಸೆಂಬರ್ 2024ರ ಅವಧಿಯಲ್ಲಿ ಪ್ರಕಟಗೊಂಡಿರಬೇಕು, ಕೃತಿಗಳು ಸ್ವತಂತ್ರವಾಗಿದ್ದು, ಅನುವಾದ ಕೃತಿಗಳನ್ನು ಪರಿಗಣಿಸುವುದಿಲ್ಲ. ಮೂರು ಪ್ರತಿಗಳನ್ನು, ಕರ್ನಾಟಕ ಲೇಖಕಿಯರ ಸಂಘ, ಫ್ಲಾಟ್ ನಂಬ್ರ 206, ವಿಜಯ ಮಾನ್ಷನ್, 2ನೆಯ ಮಹಡಿ, 2ನೆಯ ಮುಖ್ಯರಸ್ತೆ, 2ನೆಯ ತಿರುವು, ಚಾಮರಾಜಪೇಟೆ, ಬೆಂಗಳೂರು – 560018 ಇಲ್ಲಿಗೆ ಕಳುಹಿಸಬೇಕು.…
ಉಡುಪಿ : ಗೋವಿಂದ ಪೈ ಸಂಶೋಧನ ಕೇಂದ್ರ, ಯಕ್ಷಗಾನ ಕೇಂದ್ರ, ಆರ್.ಆರ್.ಸಿ.ಯ ನಿರ್ದೇಶಕರಾಗಿ, ಎಂ.ಜಿ.ಎಂ. ಕಾಲೇಜಿನ ಸಂಸ್ಕೃತ ಉಪನ್ಯಾಸಕರಾಗಿ, ಎಸ್ಟೇಟ್ ಮ್ಯಾನೇಜರರಾಗಿ, ಹಲವು ಬಾರಿ ಪರ್ಯಾಯ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ತಾನು ವಹಿಸಿಕೊಂಡ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿರ್ವಹಿಸಿ ಉಡುಪಿಯ ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ ಕ್ಷೇತ್ರಕ್ಕೆ ಅಪೂರ್ವ ಕೊಡುಗೆ ನೀಡಿ, ನಮ್ಮನ್ನಗಲಿದ ಹಿರಿಯ ಚೇತನ ಪ್ರೊ. ಹೇರಂಜೆ ಕೃಷ್ಣ ಭಟ್ಟರ ಶ್ರದ್ಧಾಂಜಲಿ ಕಾರ್ಯಕ್ರಮ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ದಿನಾಂಕ 14 ಮೇ 2025ರಂದು ಜರಗಿತು. ಪರ್ಯಾಯ ಶ್ರೀ ಪುತ್ತಿಗೆ ಮಠ ಆಯೋಜಿಸಿದ್ದ ಈ ಸಭೆಯಲ್ಲಿ ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮಾತನಾಡಿ “ಕೃಷ್ಣ ಭಟ್ಟರು ಶ್ರೀಕೃಷ್ಣ ಗೀತೆಯಲ್ಲಿ ಹೇಳಿದ ನಿಷ್ಕಾಮ ಕರ್ಮಕ್ಕೆ ವ್ಯಾಖ್ಯಾನ ಸ್ವರೂಪದಂತಿದ್ದರು. ಅವರೊಬ್ಬ ಶ್ರದ್ಧಾವಂತ ಭಕ್ತರಾಗಿದ್ದರು” ಎಂದು ಹೇಳಿದರು. ಸಾನಿಧ್ಯ ವಹಿಸಿದ್ಧ ಶ್ರೀ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಅವರ ಅಸಾಧಾರಣ ವ್ಯಕ್ತಿತ್ವ ಬೆರಗು ಪಡುವಂತಹದ್ದೆಂದು ಅಭಿಪ್ರಾಯಪಟ್ಟರು. ಹಿರಿಯ ವಿದ್ವಾಂಸ ಡಾ. ಎಂ. ಪ್ರಭಾಕರ…
ಉಪ್ಪಿನಕುದ್ರು : ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಇದರ ವತಿಯಿಂದ 2025ರ ವಿನೂತನ ಕಾರ್ಯಕ್ರಮ ಸರಣಿಯ ಮೇ ತಿಂಗಳ ಕಾರ್ಯಕ್ರಮದಲ್ಲಿ ಕುಮಾರಿ ಆಕಾಂಕ್ಷಾ ಎಸ್. ಪೈ ಕುಂದಾಪುರ ಇವರಿಂದ ‘ಸುಗಮ ಸಂಗೀತ’ ಕಾರ್ಯಕ್ರಮವನ್ನು ದಿನಾಂಕ 25 ಮೇ ಮಾರ್ಚ್ 2025ರಂದು ಸಂಜೆ ಗಂಟೆ 4-00ರಿಂದ ಉಪ್ಪಿನಕುದ್ರು ಗೊಂಬೆ ಮನೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಬೆಂಗಳೂರು : ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರಿನ ಕಲಾಗ್ರಾಮದಲ್ಲಿ ಹಮ್ಮಿಕೊಂಡಿದ್ದ ‘ತಿಂಗಳ ನಾಟಕ ಸಂಭ್ರಮ’ ಕಾರ್ಯಕ್ರಮವು ದಿನಾಂಕ 17 ಮೇ 2025ರಂದು ನಡೆಯಿತು. ಅತಿಥಿ ಗೌರವವನ್ನು ಸ್ವೀಕರಿಸಿ ಮಾತನಾಡಿದ ಹಿರಿಯ ಪತ್ರಕರ್ತ, ಸಾಹಿತಿ ಜಿ.ಎನ್. ಮೋಹನ್ “ಸಾಂಸ್ಕೃತಿಕ ಲೋಕವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಕಾರ್ಪೊರೇಟ್ ಲೋಕ ಯತ್ನಿಸುತ್ತಿದೆ. ಈ ಬಗ್ಗೆ ಎಚ್ಚರದಿಂದಿರಬೇಕು. ನಾಲ್ಕು ಗೋಡೆಗಳ ಮಧ್ಯೆ ಇದ್ದ ರಂಗಭೂಮಿಯನ್ನು ಅಲ್ಲಿಂದ ಬಿಡುಗಡೆ ಮಾಡಿ ಜನರ ಬಳಿಗೆ ಕೊಂಡೊಯ್ಯಲು ದೊಡ್ಡ ಚಳವಳಿ ನಡೆಯಿತು. ಜನರ ಸಮಸ್ಯೆಗಳನ್ನು ಬಿಂಬಿಸುವ ಕೆಲಸ ನಡೆಯಿತು. ಆದರೆ ಈಗ ಕಾರ್ಪೊರೇಟ್ ಜಗತ್ತು ಜನರ ಬಳಿಯಿಂದ ಕಿತ್ತು ಮತ್ತೆ ಅದನ್ನು ನಾಲ್ಕು ಗೋಡೆಯ ಮಧ್ಯೆ ಬಂಧಿಸಲು ಯತ್ನಿಸುತ್ತಿದೆ. ರಂಗಭೂಮಿ ಜನರ ಒಡನಾಡಿ. ಅದು ಪ್ರಶ್ನಿಸಲು ಪ್ರೇರೇಪಿಸುತ್ತದೆ. ಸಮಾಜ ಬದಲಾವಣೆಗೆ ದಾರಿಮಾಡಿಕೊಡುತ್ತದೆ. ಆದ ಕಾರಣಕ್ಕಾಗಿಯೇ ರಂಗಭೂಮಿಯ ಮನಸ್ಥಿತಿಯನ್ನು ಬದಲಿಸುವ ತುರ್ತು ಪ್ರಭುತ್ವಕ್ಕೆ ಇದೆ. ಸಾಹಿತ್ಯ ಹಾಗೂ ರಂಗಭೂಮಿಯ ಮೇಲೆ ಭಯದ ಪರದೆಯನ್ನು ಸೃಷ್ಟಿಸಿ ಅವು ಸ್ವಯಂ ಸೆನ್ಸಾರ್ ಶಿಪ್ ಹೇರಿಕೊಳ್ಳುವಂತೆ ಪ್ರಭುತ್ವ…
ಬೆಂಗಳೂರು : ಮಹಾನಗರದಲ್ಲೊಂದು ಮಾತಿನ ಮಂಟಪ ರವೀಂದ್ರ ಕಲಾಕ್ಷೇತ್ರದಲ್ಲಿ ದಿನಾಂಕ 25 ಮೇ 2025ರಂದು ಮಧ್ಯಾಹ್ನ 2-30 ಗಂಟೆಗೆ ದಿಗ್ಗಜ ಕಲಾವಿದರಿಂದ ‘ತಾಳಮದ್ದಳೆ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಹಲಸಿನ ಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ‘ಕರ್ಮಬಂಧ’ ಎಂಬ ಪ್ರಸಂಗದಲ್ಲಿ ಜಬ್ಬಾರ್ ಸಮೋ ಸಂಪಾಜೆ – ಕೌರವ, ವಾಸುದೇವ ರಂಗಾಭಟ್ ಮಧೂರು – ಭೀಷ್ಮ 1, ರಾಧಾಕೃಷ್ಣ ಕಲ್ಚಾರ್ – ಭೀಷ್ಮ 2 ಮತ್ತು ಹರೀಶ್ ಬೋಳಂತಿಮೊಗೆರು – ಕೃಷ್ಣನಾಗಿ ಹಾಗೂ ಗೇರುಸೊಪ್ಪೆ ಶಾಂತಪ್ಪಯ್ಯ ವಿರಚಿತ ‘ಶಲ್ಯ ಸಾರಥ್ಯ’ ಎಂಬ ಪ್ರಸಂಗದಲ್ಲಿ ಕೌರವನಾಗಿ ಸಂಕದಗುಂಡಿ ಗಣಪತಿ ಭಟ್, ಶಲ್ಯನಾಗಿ ಪವನ ಕಿರಣಕೆರೆ ಹಾಗೂ ಕರ್ಣನಾಗಿ ಅವಿನಾಶ ಶೆಟ್ಟಿ ಉಬರಡ್ಕ ಇವರುಗಳು ಭಾಗವಹಿಸಲಿದ್ದಾರೆ. ಹಿಮ್ಮೇಳದಲ್ಲಿ ಚಂದ್ರಕಾಂತ್ ರಾವ್ ಮೂಡುಬೆಳ್ಳೆ, ಪ್ರಸನ್ನ ಭಟ್ ಬಾಳ್ಕಲ್, ಅಕ್ಷಯ ಆಚಾರ್ಯ ಬಿದ್ಕಲ್ ಕಟ್ಟೆ, ಸಂಪತ್ ಆಚಾರ್ಯ ಮತ್ತು ಮನೋಜ್ ಆಚಾರ್ ಸಹಕರಿಸಲಿದ್ದಾರೆ.
ಹಾಸನ : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ.), ಬೆಂಗಳೂರು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಹಾಸನ ಇವರ ಸಹಯೋಗದಲ್ಲಿ ಜನನಿ ಫೌಂಡೇಶನ್ ಚಿಕ್ಕ ಕೊಂಡಗೋಳ ಹಾಗೂ ಹಾಸನಾಂಬ ಮಹಿಳಾ ಸಂಘ ಹೇಮಾವತಿ ನಗರ ಇವರ ಸಹಕಾರದಲ್ಲಿ 10ರಿಂದ 16 ವಯೋಮಾನದ ಮಕ್ಕಳಿಗಾಗಿ ಉಚಿತ ‘ಚಿಣ್ಣರ ಪ್ರತಿಭಾ ಕಲರವ’ ಶಿಬಿರವು ದಿನಾಂಕ 16 ಮೇ 2025 ರಿಂದ 18 ಮೇ 2025 ರವರೆಗೆ ಹಾಸನದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಮುದಾಯ ಭವನದಲ್ಲಿ ನಡೆಯಿತು. ಈ ಶಿಬಿರದ ಕಾರ್ಯಕ್ರಮದಲ್ಲಿ ‘ಕವಿ ಸಮಯ’ ವಿಷಯದಡಿ ಮಾತನಾಡಿದ ತುಮಕೂರು ಜಿಲ್ಲೆ ಪ್ರಸಿದ್ಧ ಕವಯಿತ್ರಿ ಲತಾಮಣಿ ಎಂ.ಕೆ. ತುರುವೇಕೆರೆ “ಭಾಷೆಯಲ್ಲಿನ ಅತ್ಯಂತ ವಿನೋದದ ಭಾಗವೇ ಶಿಶುಪ್ರಾಸ. ಮಕ್ಕಳ ತೊದಲು ನುಡಿಗಳಿಗೆ ಇದು ಅಡಿಪಾಯ ಹಾಕುತ್ತದೆ. ಶಿಶು ಕಾವ್ಯ ಜಗತ್ತಿನ ಜಂಜಡಗಳನ್ನೆಲ್ಲಾ ಮರೆಸಿ ಆನಂದದ ಕಡಲಲ್ಲಿ ತೇಲುವಂತೆ ಮಾಡುತ್ತದೆ. ಮಕ್ಕಳ ಮನೋವಿಕಾಸದಲ್ಲಿ ಶಿಶು ಪ್ರಾಸಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ದಿನಕರ ದೇಸಾಯಿ, ಪಂಜೆ ಮಂಗೇಶರಾಯ,…