Author: roovari

ಚನ್ನರಾಯಪಟ್ಟಣ: ಪ್ರತಿಮಾ ಟ್ರಸ್ಟ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಯರ ವಿದ್ಯಾರ್ಥಿ ನಿಲಯದಲ್ಲಿ ಒಂದು ತಿಂಗಳ ಸೋಬಾನೆ ಪದಗಳ ಕಲಿಕಾ ತರಬೇತಿ ದಿನಾಂಕ 16-07-2023 ರಂದು ಪ್ರಾರಂಭಗೊಂಡಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನೀನಾಸಂ ರಂಗ ನಿರ್ದೇಶಕ ಶಿವಶಂಕ‌ರ್ “ಜಾನಪದ ಪ್ರಕಾರಗಳಲ್ಲಿ ಒಂದಾದ ಸೋಬಾನೆ ಪದಗಳ ಬಗ್ಗೆ ಇತ್ತೀಚಿನ ಮಕ್ಕಳಿಗೆ ಪರಿಚಯವೇ ಇಲ್ಲದಿರುವುದು ವಿಪರ್ಯಾಸ. ಈ ಸಂದರ್ಭದಲ್ಲಿ ಪ್ರತಿಮಾ ಟ್ರಸ್ಟ್ ಸೋಬಾನೆ ಪದಗಳನ್ನು ಪರಿಚಯಾತ್ಮಕ ದೃಷ್ಟಿಯಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಒಂದು ತಿಂಗಳ ತರಬೇತಿ ಶಿಬಿರವನ್ನು ಆಯೋಜಿಸಿರುವುದು ಅಭಿನಂದನೀಯ” ಎಂದರು. ಉಮೇಶ್ ತೆಂಕನಹಳ್ಳಿ ಮಾತನಾಡಿ “ಪ್ರತಿಮಾ ಟ್ರಸ್ ಜಾನಪದ ಸೊಗಡಿನ ಬಹಳಷ್ಟು ತರಬೇತಿ ಶಿಬಿರ ಆಯೋಜನೆ ಮಾಡುತ್ತಿದ್ದು, ಈ ಬಾರಿ ಸೋಬಾನೆ ಪದಗಳನ್ನು ತರಬೇತಿಗೊಳಿಸುವುದು ಶಿಬಿದ ವಿಶೇಷತೆ. ಬಹಳ ದಿನಗಳಿಂದ ಈ ಸೋಬಾನೆ ಪದಗಳ ತರಬೇತಿ ಶಿಬಿರ ಆಯೋಜನೆ ಮಾಡಬೇಕು ಎಂದು ಅಂದುಕೊಂಡಿದ್ದರೂ ಸಾಧ್ಯವಾಗಿರಲಿಲ್ಲ. ಈಗ ಕಾಲ ಕೂಡಿ ಬಂದಿದೆ. ಅದರಲ್ಲೂ ನಮ್ಮ ಹಳ್ಳಿ…

Read More

ಮಡಿಕೇರಿ : ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಸಭಾಂಗಣದಲ್ಲಿ ಕೊಡವ ಎಂ.ಎ. ಸ್ನಾತಕೋತ್ತರ ವಿಭಾಗ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಹಾಗೂ ಕೊಡವ ಮಕ್ಕಡ ಕೂಟದ ಸಹಯೋಗದಲ್ಲಿ ದಿನಾಂಕ : 15-07-2023ರಂದು ನಾಲ್ಕು ಕೃತಿಗಳು ಲೋಕಾರ್ಪಣೆಗೊಂಡವು. ಲೇಖಕಿ ಐಚಂಡ ರಶ್ಮಿ ಮೇದಪ್ಪ (ತಾಮನೆ-ಕೈಪಟ್ಟಿರ) ಬರೆದಿರುವ ಕೊಡವ ಮಕ್ಕಡ ಕೂಟದ 67ನೇ ಪುಸ್ತಕ “ಚೆರ್ ಕತೆ ಮತ್ತು ಚೆರ್ ನಾಟಕ”, ಲೇಖಕಿ ಕರವಂಡ ಸೀಮಾ ಗಣಪತಿ (ತಾಮನೆ-ಮಡೆಯಂಡ) ಬರೆದಿರುವ ಕೊಡವ ಮಕ್ಕಡ ಕೂಟದ 68ನೇ ಪುಸ್ತಕ “ಕವನ ಪೊಟ್ಟಿ”, ಕೊಡವ ಎಂ.ಎ ವಿದ್ಯಾರ್ಥಿಗಳಾದ 1) ಬೊಪ್ಪಂಡ ಶ್ಯಾಮ್ ಪೂಣಚ್ಚ, 2) ಲೆ.ಕರ್ನಲ್ ಬಿ.ಎಂ.ಪಾರ್ವತಿ (ಬಲ್ಯಡಿಚಂಡ), 3) ಐಚಂಡ ರಶ್ಮಿ ಮೇದಪ್ಪ, 4) ಪುತ್ತರಿರ ವನಿತ ಮುತ್ತಪ್ಪ (ತಾಮನೆ-ಮನೆಯಪಂಡ), 5) ಆಪಾಡಂಡ ಎನ್. ಹೇಮಾವತಿ (ಜಾನ್ಸಿ-ತಾಮನೆ-ಬೊಳ್ಳಾರ್‍ಪಂಡ), 6) ಬೊಳ್ಳಜಿರ ಅಯ್ಯಪ್ಪ, 7) ಚೌಂಡಿರ ಶಿಲ್ಪ ಪೊನ್ನಪ್ಪ (ತಾಮನೆ-ಚಿಕ್ಕಂಡ), 8) ಬೊಳ್ಳಜಿರ ಯಮುನ ಅಯ್ಯಪ್ಪ (ತಾಮನೆ-ಮನ್ನೆರ) 9) ಕರವಂಡ ಸೀಮಾ ಗಣಪತಿ ಇವರೆಲ್ಲರೂ…

Read More

ಪುತ್ತೂರು : ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಹಾಗೂ ಗ್ರಾಮ ಪಂಚಾಯತ್ ನೆಕ್ಕಿಲಾಡಿಯ ಸಹಕಾರದೊಂದಿಗೆ ದಿನಾಂಕ : 22-07-2023ನೇ ಶನಿವಾರ ಬೆಳಗ್ಗೆ ‘ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ’ ಅಭಿಯಾನದ ಅಂಗವಾಗಿ ‘ಗ್ರಾಮ ಸಾಹಿತ್ಯ ಸಂಭ್ರಮ – 2023’ ಸರಣಿ ಕಾರ್ಯಕ್ರಮ-7 ನಡೆಯಲಿದೆ. ಈ ಕಾರ್ಯಕ್ರಮವು ‘ಚಿಗುರೆಲೆ ಸಾಹಿತ್ಯ ಬಳಗ’ ಪುತ್ತೂರು ಇದರ ಸಂಯೋಜನೆಯಲ್ಲಿ ನೆಕ್ಕಿಲಾಡಿಯ ಸ. ಹಿ. ಪ್ರಾ. ಶಾಲೆಯಲ್ಲಿ ನಡೆಯುವುದು. ನೆಕ್ಕಿಲಾಡಿ ಗ್ರಾಮ ಪಂಚಾಯತ್ತಿನ ಅಧ್ಯಕ್ಷರಾದ ಶ್ರೀ ಪ್ರಶಾಂತ್ ಎನ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ ಪುತ್ತೂರು ಉಮೇಶ್‌ ನಾಯಕ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ. ನೆಕ್ಕಿಲಾಡಿಯ ಅಧ್ಯಕ್ಷರಾದ ಶ್ರೀ ರಾಜೀವ ನಾಯ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸುವ ಈ ಕಾರ್ಯಕ್ರಮದಲ್ಲಿ ಸಿ.ಆರ್.ಪಿ. ನೆಕ್ಕಿಲಾಡಿಯ ಶ್ರೀ ಮಹಮ್ಮದ್ ಅಶ್ರಫ್ ಹಾಗೂ ಪುತ್ತೂರಿನ ಕ ಸಾ ಪ ದ ಕಾರ್ಯಕಾರಿ ಸಮಿತಿ…

Read More

ಬಂಟ್ವಾಳ: ದಕ್ಷಿಣ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಘಟಕ ಆಯೋಜಿಸುವ ತಾಳ ಮದ್ದಳೆ, ದತ್ತಿ ಉಪನ್ಯಾಸ ಹಾಗೂ ಕೃತಿ ಲೋಕಾರ್ಪಣೆ ಕಾರ್ಯಕ್ರಮವು ದಿನಾಂಕ 22-07-2023 ರಂದು ಬಿ.ಸಿ. ರೋಡಿನ ಕನ್ನಡ ಭವನದಲ್ಲಿ ನಡೆಯಲಿದೆ. ಅಪರಾಹ್ನ ಶ್ರೀ ಪುರುಷೋತ್ತಮ ಪೂಂಜ ವಿರಚಿತ ಪ್ರಸಂಗ ‘ಉಲೂಪಿ ವಿವಾಹ’ ಯಕ್ಷಗಾನ ತಾಳಮದ್ದಳೆ ನಡೆಯುವುದು. ಹಿಮ್ಮೇಳದಲ್ಲಿ ಸರ್ವಶ್ರೀಗಳಾದ ಗೋಪಾಲಕೃಷ್ಣ ಭಟ್ ಪುಂಡಿಕಾಯಿ, ಟಿ. ಡಿ. ಗೋಪಾಲಕೃಷ್ಣ ಭಟ್ ಪುತ್ತೂರು ಮತ್ತು ಮಾ. ಅದ್ವೈತ್ ಕನ್ಯಾನ ಭಾಗವಹಿಸಲಿದ್ದಾರೆ. ಅರ್ಥದಾರಿಗಳಾಗಿ ಸರ್ವಶ್ರೀಗಳಾದ ಶಂಭು ಶರ್ಮ ವಿಟ್ಲ, ಜಯರಾಮ್ ಭಟ್ ದೇವಸ್ಯ, ರಾಜಗೋಪಾಲ ಕನ್ಯಾನ ಭಾಗವಹಿಸಲಿರುವರು. ತಾಳಮದ್ದಳೆ ಕಾರ್ಯಕ್ರಮದ ಬಳಿಕ ದತ್ತಿ ಉಪನ್ಯಾಸ ಕಾರ್ಯಕ್ರಮವು ಲಯನ್ಸ್ ಪ್ರಾಂತೀಯ ಅಧ್ಯಕ್ಷರಾದ ಲ| ರಮಾನಂದ ನೂಜಿಪ್ಪಾಡಿ, ಎಮ್. ಜೆ. ಎಫ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ‘ಕಳಸ ಪುಟ್ಟದೇವರಯ್ಯ ನಾಗಮ್ಮ ದತ್ತಿ’ ಉಪನ್ಯಾಸದಲ್ಲಿ ಗಂಗಾ ಪಾದೆಕಲ್ಲು ಅವರ “ಮೌನ ರಾಗಗಳು” ಕಾದಂಬರಿಯ ಅವಲೋಕನ ನಡೆಯಲಿದ್ದು, ಉಪನ್ಯಾಸಕಿ ಮತ್ತು  ಕವಯತ್ರಿಯಾದ ಶ್ರೀಮತಿ ಗೀತಾ ಕೊಂಕೋಡಿಯವರು…

Read More

ಕೋಟ: ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯದ ಸಾಂಸ್ಕೃತಿಕ ಸಂಪನ್ಮೂಲ ಮತ್ತು ತರಬೇತಿ ಕೇಂದ್ರ ನಡೆಸಿದ 2020-21ಸಾಲಿನ ಭಾರತದ ಯುವ ಪ್ರತಿಭಾ ಶೋಧದಲ್ಲಿ ಜಾನಪದ ರಂಗಭೂಮಿ (ಯಕ್ಷಗಾನ) ಯುವ ಪ್ರತಿಭೆ, ವಿಧ್ಯಾರ್ಥಿ ವೇತನ ಪ್ರಶಸ್ತಿಗೆ ಉಡುಪಿ ಜಿಲ್ಲೆಯ ಸುದೀಪ್ ಉರಾಳರು ಆಯ್ಕೆಯಾಗಿದ್ದಾರೆ. ಯಕ್ಷದೇಗುಲದ ಹಂದಟ್ಟು ಶ್ರೀ ಸುದರ್ಶನ ಉರಾಳ ಹಾಗೂ ಶ್ರೀಮತಿ ರಾಧಿಕಾ ದಂಪತಿಗಳ ಸುಪುತ್ರರಾದ ಇವರು ಯಕ್ಷಗಾನ ಚಂಡೆವಾದನದಲ್ಲಿ ಕರಾವಳಿ ಭಾಗದಲ್ಲಿ ಗುರುತಿಸಿಕೊಂಡಿದ್ದು, ಹಿಂದೆ ಸಾಲಿಗ್ರಾಮ ಮಕ್ಕಳ ಮೇಳದ ಕಲಾವಿದನಾಗಿ ಹಲವಾರು ಪ್ರದರ್ಶನಗಳಲ್ಲಿ ವೇಷ ಧರಿಸಿದ್ದರು. ಸುದರ್ಶನ ಉರಾಳರು ಯಕ್ಷಗಾನದ ಚಂಡೆ ವಾದನದ ವಿಭಾಗದಲ್ಲಿ ಆಸಕ್ತಿ ತಳೆದು ಏಕಲವ್ಯನಂತೆ ಮನೆಯಲ್ಲಿಯೇ ಅಭ್ಯಾಸ ಪ್ರಾರಂಭಿಸಿದವರು. ಮಾಧವ ಮಣೂರು, ಕೋಟ ಶಿವಾನಂದರವರಿAದ ಕೆಲವು ಪೆಟ್ಟು, ಉರುಳಿಕೆಗಳನ್ನು ತನ್ನದಾಗಿಸಿಕೊಂಡ ಸುದೀಪ್ ಹವ್ಯಾಸಿ ಕಲಾವಿದನಾಗಿ ಗುರುತಿಸಿಕೊಳ್ಳುತ್ತಾ ಇತ್ತೀಚೆಗೆ ಯಶಸ್ವೀ ಕಲಾವೃಂದದ ಹಲವು ವೇದಿಕೆಯಲ್ಲಿ ಚಂಡೆ ನುಡಿಸುತ್ತಾ ಜನಪ್ರಿಯರಾದರು. ಡೇರೆ ಮೇಳವಾದ ಸಾಲಿಗ್ರಾಮ ಮೇಳದಲ್ಲಿಯೂ ಅತಿಥಿಯಾಗಿ ಚಂಡೆವಾದಕರಾಗಿ ಕಾಣಿಸಿಕೊಂಡದ್ದಲ್ಲದೇ ಅಮೃತೇಶ್ವರಿ ಮೇಳದ ಸ್ಥಳೀಯ ಪ್ರದರ್ಶನಗಳಲ್ಲಿ ಖಾಯಂ ಸದಸ್ಯ. ವೃತ್ತಿ…

Read More

ಜಪ್ಪಿನಮೊಗರು : ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಜೈ ತುಳುನಾಡು ಸಂಘಟನೆ ಆಶ್ರಯದಲ್ಲಿ ತುಳು ಲಿಪಿ ಕಲಿಕಾ ಕಾರ್ಯಾಗಾರದ ಉದ್ಘಾಟನ ಕಾರ್ಯಕ್ರಮ ದಿನಾಂಕ : 25-06-2023ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ನಾಗರಾಜ್‌ ಬಿ.ವಿ. ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಚೇತಕ್‌ ಪೂಜಾರಿ ಜಪ್ಪು, ಜೈ ತುಳುನಾಡು ಮಾಜಿ ಅಧ್ಯಕ್ಷ ವಿಶು ಶ್ರೀಕರ, ಮನಪಾ ಸದಸ್ಯೆ ವೀಣಾಮಂಗಳ, ಕಂಕನಾಡಿ ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರದ ಮೊಕ್ತೇಸರ ಜೆ. ದಿನೇಶ್ ಅಂಚನ್, ಮಂದಿರದ ಸ್ಥಳದಾನಿ ರಾಜೇಶ್ ಸಾಲ್ಯಾನ್, ಕಂರ್ಭಿಸ್ಥಾನ ಶ್ರೀ ವೈದ್ಯನಾಥ ದೈವಸ್ಥಾನದ ಅರ್ಚಕ ಉಮಾನಾಥ ಪೂಜಾರಿ, ಮಹಿಳಾ ಸಮಿತಿ ಅಧ್ಯಕ್ಷೆ ಸುಮತಿ ಚಂದ್ರಶೇಖರ ಮೇಗಿನ ಮನೆ ಮೊದಲಾದವರು ಉಪಸ್ಥಿತರಿದ್ದರು. ಉದ್ಘಾಟನೆಯ ನಂತರ ಪ್ರತೀ ಭಾನುವಾರ ಮಾತ್ರ ಒಟ್ಟು ಆರು ದಿನಗಳು ಕಲಿಕಾ ತರಬೇತಿ ಮತ್ತು ಕೊನೆಯಲ್ಲಿ ಪರೀಕ್ಷೆ ನಡೆಯಲಿದೆ. ಸಂಘದ ಕೋಶಾಧಿಕಾರಿ ಚಿತ್ರಾಕ್ಷ ಪೂಜಾರಿ ಅವರು ಸ್ವಾಗತಿಸಿ,…

Read More

ಬದಿಯಡ್ಕ : ಕೊಡಗಿನ ಗೌರಮ್ಮ ಹಾಗೂ ಹವ್ಯಕ ಮಹಾ ಮಂಡಲದ ಮಾತೃಮಂಡಳಿ ಸಹಯೋಗದಲ್ಲಿ ಹವ್ಯಕ ಮಹಿಳೆಯರಿಗಾಗಿ ಅಖಿಲ ಭಾರತ ಮಟ್ಟದ ಸಣ್ಣ ಕಥಾ ಸ್ಪರ್ಧೆ ಏರ್ಪಡಿಸಲಾಗಿದೆ. ಯಾವುದೇ ವಯೋಮಾನದ ಹವ್ಯಕ ಮಹಿಳೆಯರು, ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿನಿಯರು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಇದುವರೆಗೆ ನಡೆಸಿದ ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನ ಪಡೆದವರಿಗೆ ಅವಕಾಶ ಇಲ್ಲ. 8 ಪುಟಕ್ಕೆ ಮೀರದ, ಇದುವರೆಗೆ ಪ್ರಕಟವಾಗದ, ಭಾಷಾಂತರವಲ್ಲದ, ಸಾಮಾಜಿಕ ಕತೆಗಳನ್ನು ಕಾಗದದ ಒಂದೇ ಬದಿಯಲ್ಲಿ ಬರೆದು ಅಥವಾ ಟೈಪ್ ಮಾಡಿ ಕಳುಹಿಸಬೇಕು. ಸ್ಪರ್ಧಿಗಳ ಹೆಸರು ಮತ್ತು ವಿಳಾಸ ಹಾಗೂ ಮುಖ್ಯವಾಗಿ ಸಂಪರ್ಕ ಸಂಖ್ಯೆಯನ್ನು ಪ್ರತ್ಯೇಕವಾಗಿ ಲಗತ್ತಿಸಿರಬೇಕು. ಪ್ರಥಮ ಬಹುಮಾನ ರೂ.4,000/-, ದ್ವಿತೀಯ ಬಹುಮಾನ ರೂ.3,000/-, ತೃತೀಯ ಬಹುಮಾನ – ರೂ.2,000/-, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ. ಕಥೆಗಳನ್ನು ದಿನಾಂಕ : 30-09-2023ರೊಳಗೆ ತಲುಪುವಂತೆ ಕಳುಹಿಸಬೇಕು. ವಿಳಾಸ: ವಿಜಯಾ ಸುಬ್ರಹ್ಮಣ್ಯ ಕುಂಬಳೆ, ಸಂಚಾಲಕಿ, ಕೊಡಗಿನ ಗೌರಮ್ಮ ಕಥಾ ಸ್ಪರ್ಧೆ, ಕಾರ್ತಿಕೇಯ, ನಾರಾಯಣಮಂಗಲ, ಅಂಚೆ ಕುಂಬಳೆ, ಕಾಸರಗೋಡು ಜಿಲ್ಲೆ -…

Read More

ಉಡುಪಿ : ಕಾರ್ಕಳ ತಾಲೂಕು, ಕಾಂತಾವರದಲ್ಲಿರುವ ಶ್ರೀ ಯಕ್ಷದೇಗುಲ ಕಾಂತಾವರ (ರಿ.) ಇದರ 21ನೇ ವಾರ್ಷಿಕೋತ್ಸವ ಪ್ರಯುಕ್ತ ಸಂಯೋಜಿಸುವ ನಿರಂತರ ಹನ್ನೆರಡು ತಾಸಿನ ಕಲೆಗಾಗಿ, ಕಲಾವಿದನಿಗಾಗಿ, ಕಲಾಸೇವೆ ‘ಯಕ್ಷೋಲ್ಲಾಸ -2023’ ಯಕ್ಷಗಾನ, ಸಂಸ್ಕರಣೆ, ಪ್ರಶಸ್ತಿ ಪುರಸ್ಕಾರ ಹಾಗೂ ತಾಳಮದ್ದಳೆ ಬಯಲಾಟವು ದಿನಾಂಕ : 23-07-2023ನೇ ಆದಿತ್ಯವಾರ ಬೆಳಿಗ್ಗೆ ಗಂಟೆ 10-00ರಿಂದ ರಾತ್ರಿ 10-00ರ ತನಕ ಶ್ರೀ ಕ್ಷೇತ್ರ ಕಾಂತಾವರದಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಶ್ರೀಕ್ಷೇತ್ರ ಕಾಂತಾವರದ ಪ್ರಧಾನ ಅರ್ಚಕರಾದ ಶ್ರೀ ಕೃಷ್ಣಮೂರ್ತಿ ಭಟ್ ಇವರ ಉಪಸ್ಥಿತಿಯಲ್ಲಿ ಬಾರಾಡಿಬೀಡಿನ ಶ್ರೀಮತಿ ಸುಮತಿ ಆರ್. ಬಲ್ಲಾಳ್ ಇವರು ಉದ್ಘಾಟಿಸಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ‘ನಾಸ ಛ್ಛೇಧನ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ನಂತರ ನಡೆಯಲಿರುವ ಸಭಾ ಸಂಭ್ರಮ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಕಾಂತಾವರದ ಧರ್ಮದರ್ಶಿಗಳಾದ ಡಾ. ಕೆ. ಜೀವಂಧರ ಬಲ್ಲಾಳ್‌ ಬಾರಾಡಿಬೀಡು ಇವರು ವಹಿಸಲಿದ್ದಾರೆ. ಯಕ್ಷಗಾನ ಕಲಾ ಪೋಷಕರಾದ ಶ್ರೀ ಬಿ. ಭುಜಬಲಿ ಧರ್ಮಸ್ಥಳ, ಮೂಡಬಿದ್ರಿಯ ವಿಜಯಲಕ್ಷ್ಮೀ ಕ್ಯಾಶ್ಯೂಸ್ ಮಾಲಕರಾದ ಶ್ರೀ ಎ.ಕೆ. ರಾವ್, ಬಜಗೋಳಿಯ…

Read More

ಬಜಪೆ: ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಪಿ.ಯು ಕಾಲೇಜಿನಲ್ಲಿ ಯಕ್ಷಗಾನ ತರಬೇತಿ ಕೇಂದ್ರದ ಉದ್ಘಾಟನೆ ದಿನಾಂಕ 13-07-2023ರ ಗುರುವಾರದಂದು ನಡೆಯಿತು. ಯಕ್ಷಗಾನ ಕಲಾವಿದ, ಸಂಘಟಕ ಮತ್ತು ಪ್ರಸಂಗಕರ್ತರಾಗಿದ್ದ ತಿಮ್ಮಪ್ಪ ಗುಜರನ್ ತಳಕಲ ಅವರ ಸ್ಮರಣಾರ್ಥ ಯಕ್ಷಗಾನ ತರಬೇತಿ ಕೇಂದ್ರವನ್ನು ಕೊಳಂಬೆ ಕಜೆ ಮಹಿಷಂದಾಯ-ಖಂಡಿಗತ್ತಾಯ-ಪಿಲ್ಚಾಂಡಿ ದೈವಸ್ಥಾನದ ಆನುವಂಶಿಕ ಆಡಳಿತ ಮೊಕ್ತಸರ ಹರಿಪ್ರಸಾದ್ ಶೆಟ್ಟಿ ಉದ್ಘಾಟಿಸಿದರು. ಟ್ರಸ್ಟಿ ದೀಪಕ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ತಳಕಲ ಕಾಶೀ ವಿಶ್ವನಾಥೇಶ್ವರ ಯಕ್ಷಗಾನ ಮಂಡಳಿಯ ಸಂಚಾಲಕಿ ಯೋಗಾಕ್ಷಿ ತಳಕಲ, ತರಬೇತುದಾರರಾದ ಶ್ರಾವ್ಯ ತಳಕಲ, ಅನನ್ಯ ಮುರನಗರ, ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸುಧಾಕರ ಶೆಟ್ಟಿ ಉಪಸ್ಥಿತರಿದ್ದರು. ಯಕ್ಷಗಾನ ತರಬೇತಿ ಕೇಂದ್ರದ ಕಾರ್ಯದರ್ಶಿ ಯಶಸ್ವಿನಿ ವಂದಿಸಿ, ನಿರ್ದೇಶಕ ಶ್ರೀ ವಿನಯ್‌ ಕುಮಾರ್ ಅದ್ಯಪಾಡಿ ನಿರೂಪಿಸಿದರು.

Read More

ಬಂಟ್ವಾಳ: ಯಕ್ಷಕಲಾ ಪೊಳಲಿ, ಎಸ್. ಆರ್ ಹಿಂದೂ ಫ್ರೆಂಡ್ಸ್, ಪೊಳಲಿಯ ಷಷ್ಟಿ ಯಕ್ಷಗಾನ ಸಮಿತಿ ಹಾಗೂ ಜಗದೀಶ್ ನಲ್ಕ ಅಭಿಮಾನಿ ಬಳಗ ಇವುಗಳ ಸಹಭಾಗಿತ್ವದಲ್ಲಿ ಇತ್ತೀಚೆಗೆ ನಿಧನರಾದ ಶ್ರೀ ಸಸಿಹಿತ್ಲು ಮೇಳದ ಹಿರಿಯ ಕಲಾವಿದರಾದ ದಿ. ಜಗದೀಶ ನಲ್ಕೆಯವರ ಸಂಸ್ಮರಣಾ ಕಾರ್ಯಕ್ರಮವು ದಿನಾಂಕ 16-07-2023 ರಂದು ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆಯಿತು. ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್‌ ಶೆಟ್ಟಿ ಅವರು ಸಂಸ್ಮರಣಾ ಭಾಷಣಗೈದರು. ಪೊಳಲಿಯ ಯಕ್ಷಕಲಾ ಸಂಚಾಲಕ ವೆಂಕಟೇಶ್‌ ನಾವಡ ಪೊಳಲಿ, ಸಸಿಹಿತ್ಲು ಮೇಳದ ಸಂಚಾಲಕ ರಾಜೇಶ್‌ ಗುಜರನ್, ಚಂದ್ರಶೇಖರ ದೇವಾಡಿಗ ಪೊಳಲಿ, ಸೇಸಪ್ಪ ದೇವಾಡಿಗ ಪೊಳಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ . ದಿ. ಜಗದೀಶ್ ನಲ್ಕೆ ಯವರ ಪತ್ನಿ ಹೇಮಾವತಿ ಜಗದೀಶ್ ನಲ್ಕೆ ಅವರಿಗೆ ದಾನಿಗಳಿಂದ ಸಂಗ್ರಹಿಸಿದ ಮೊತ್ತವನ್ನು ನೀಡಲಾಯಿತು. ಬಿ ಜನಾರ್ದನ ಅಮ್ಮುಂಜೆ ಕಾರ್ಯಕ್ರಮ ನಿರೂಪಿಸಿದರು. ಸಂಸ್ಮರಣ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ‘ಕರ್ಣಪರ್ವ’ ಯಕ್ಷಗಾನ ಬಯಲಾಟ ನಡೆಯಿತು.

Read More