Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಸ್ಥಳೀಯ ಲೆಕ್ಕಪತ್ರ ಪರಿಶೋಧಕ ಎಸ್.ಎಸ್. ನಾಯಕ್ ಅವರ ಕಛೇರಿ ಸಭಾಭವನದಲ್ಲಿ ನಿವೃತ್ತ ಅರಣ್ಯಧಿಕಾರಿ ಲಕ್ಷ್ಮಣ ಮೂರ್ತಿಯವರು ಬರೆದ ‘ರಾಣಿ ಅಬ್ಬಕ್ಕದೇವಿ ಜತೆ ಪಯಣ’ ಕೃತಿಯ ಏಳನೇ ಮುದ್ರಣದ ಲೋಕಾರ್ಪಣೆಯು ದಿನಾಂಕ 30 ಜುಲೈ 2025ರಂದು ವಿಜೃಂಭಣೆಯಿಂದ ನಡೆಯಿತು. ಸಿ.ಎ. ಎಸ್.ಎಸ್. ನಾಯಕ್ ಇವರು ಅಧ್ಯಕ್ಷತೆಯನ್ನು ವಹಿಸಿದ್ದ ಈ ಕಾರ್ಯಕ್ರಮವನ್ನು ದೇಶ ವಿದೇಶ ಖ್ಯಾತಿಯ ಸಿ.ಎ. ಗೋಕುಲದಾಸ ಪೈ ಉದ್ಘಾಟಿಸಿ “ನಮ್ಮ ನೆರೆಯವರೇ ಆದ ಸಾಧರನ್ನು ನಾವು ಅರಿತಿರುವುದಿಲ್ಲ. ಬದಲಾಗಿ ದೂರದ ವಿದೇಶೀಯವರ ಸುದೀರ್ಘ ಅಧ್ಯಯನ ಮಾಡುತ್ತೇವೆ. ಈ ಸಂಕಲನವು ನಮ್ಮ ನಾಡಿನ ಪ್ರಥಮ ಸಾಹಸಿ ಮಹಿಳೆಯ ವ್ಯಕ್ತಿ ಚಿತ್ರಣ ಅಧ್ಯಯನ ಯೋಗ್ಯ” ಎಂದು ಹೇಳಿದರು. ಅನಂತರ ಎಸ್.ಎಸ್. ನಾಯಕರು ಲಕ್ಷ್ಮಣ ಮೂರ್ತಿಯವರ ನಿವೃತ್ತಿಯ ನಂತರದ ಪ್ರವೃತ್ತಿಯ ಓಘವನ್ನು ವರ್ಣಿಸುತ್ತಾ ಸುಭಾಶಿತ ಹಾಗೂ ಸ್ವರಚಿತ ಚುಟುಕು ಸಹಿತ ಗುಣಗಾನ ಮಾಡಿದರು. ಇನ್ನೋರ್ವ ಮುಖ್ಯ ಅತಿಥಿ ಡಾ. ರಾಜೇಶ ನಾಯಕ್ ರವರು ಅಬ್ಬಕ್ಕನ ಪ್ರಾಮುಖ್ಯತೆಯನ್ನು ಸವಿವರವಾಗಿ ವರ್ಣಿಸಿದರು. ಲೇಖಕ ಕೆ.ವಿ. ಲಕ್ಷ್ಮಣ…
ಬೆಂಗಳೂರು : ನವದೆಹಲಿಯ ಸಂಸ್ಕೃತಿ ಸಚಿವಾಲಯದ ಸಹಕಾರದೊಂದಿಗೆ ‘ಪದ’ ಪ್ರಸ್ತುತ ಪಡಿಸುವ ಮೂರು ದಿನಗಳ ಪೌರಾಣಿಕ ರಂಗೋತ್ಸವ ಕಾರ್ಯಕ್ರಮವು ದಿನಾಂಕ 05ರಿಂದ 07 ಆಗಸ್ಟ್ 2025ರವರೆಗೆ ನಡೆಯಲಿದೆ. ದಿನಾಂಕ 05 ಆಗಸ್ಟ್ 2025ರಂದು ಸಂಜೆ 6-00 ಗಂಟೆಗೆ ಬೆಂಗಳೂರಿನ ಜೆ.ಸಿ. ರಸ್ತೆ, ಕನ್ನಡ ಭವನ, ರವೀಂದ್ರ ಕಲಾ ಕ್ಷೇತ್ರದ ನಯನ ರಂಗಮಂದಿರದಲ್ಲಿ ಈ ಕಾರ್ಯಕ್ರಮವನ್ನು ಸಾಹಿತಿ ಡಾ. ಬಂಜಗೆರೆ ಜಯಪ್ರಕಾಶ್ ಇವರು ಉದ್ಘಾಟನೆ ಮಾಡಲಿದ್ದು, ಕೆ.ಎ. ದಯಾನಂದ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಬೂಕರ್ ಪ್ರಶಸ್ತಿ ಪುರಸ್ಕೃತ ಸಾಹಿತಿ ಬಾನು ಮುಷ್ತಾಕ್ ಮತ್ತು ಪದ್ಮಶ್ರೀ ಪುರಸ್ಕೃತ ಹಾಸನ ರಘು ಇವರಿಗೆ ‘ಪದ ಗೌರವ’ ನೀಡಿ ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಡಾ. ಎಸ್.ಎಲ್.ಎನ್. ಸ್ವಾಮಿ ಇವರ ನಿರ್ದೇಶನದಲ್ಲಿ ಗೋಕುಲ ಸಹೃದಯ ಅಭಿನಯದ ‘ಪಂಚಗವ್ಯ’ ನಾಟಕ ಪ್ರದರ್ಶನ ನಡೆಯಲಿದೆ. ದಿನಾಂಕ 06 ಆಗಸ್ಟ್ 2025ರಂದು ಸಂಜೆ 4-30 ಗಂಟೆಗೆ ಬೆಂಗಳೂರಿನ ಮತ್ತಲ್ಲಹಳ್ಳಿ ಸಮುಚ್ಚಯ ಭವನ ಕಲಾಗ್ರಾಮದಲ್ಲಿ ಬಿ. ಪುಟ್ಟಸ್ವಾಮಯ್ಯ ಇವರು ರಚಿಸಿರುವ ಟಿ. ಮಂಜುನಾಥ್…
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀಯುತ ತಾರಾನಾಥ್ ಗಟ್ಟಿಯವರ ನೇತೃತ್ವದಲ್ಲಿ ಅಕಾಡೆಮಿಯ ಸದಸ್ಯರ ಸಹಕಾರದೊಂದಿಗೆ ತುಳು ಭಾಷೆ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯುತ್ತಾ ಬಂದಿವೆ . ಕಾಲೇಜು ವಿದ್ಯಾರ್ಥಿಗಳಿಗೆ ತುಳು ನಾಟಕ ಕಾರ್ಯಗಾರ ನಡೆಸಿ, ಅಲ್ಲಿ ತರಬೇತುಗೊಂಡ ವಿದ್ಯಾರ್ಥಿಗಳಿಂದ ಆ ನಾಟಕವನ್ನು ಬೇರೆ ಬೇರೆ ವೇದಿಕೆಗಳಲ್ಲಿ ಪ್ರದರ್ಶನ ಮಾಡುವ ಕಾರ್ಯಕ್ರವೂ ಇದರಲ್ಲಿ ಒಂದು. ಸರಕಾರಿ ಪದವಿ ಪೂರ್ವ ಹೆಣ್ಮಕ್ಕಳ ಕಾಲೇಜು ಬಲ್ಮಠದಲ್ಲಿ ಅಬ್ಬರವಿಲ್ಲದ, ಸರಳವಾದ, ಸುಂದರ ನಾಟಕವೊಂದು ಪ್ರದರ್ಶನಗೊಂಡಿತು. ಅಮೃತ ಕಾಲೇಜು ಪಡೀಲ್, ಮಂಗಳೂರು ಇಲ್ಲಿಯ ವಿದ್ಯಾರ್ಥಿಗಳು ಶ್ರೀ ಜಗನ್ ಪವಾರ್ ಬೇಕಲ್ ಇವರ ಅದ್ಭುತ ನಿರ್ದೇಶನದಲ್ಲಿ ರಂಗದ ಮೇಲೆ ಪ್ರದರ್ಶಿಸಿದ ನಾಟಕ “ಪಗಪು”. ಇದು ಪ್ರಥಮ ಪ್ರದರ್ಶನ. ಇನ್ನು ಬೇರೆ ಬೇರೆ ವೇದಿಕೆಗಳಲ್ಲಿ ಈ ನಾಟಕ ಪ್ರದರ್ಶನಗೊಳ್ಳಲಿದೆ. ಶಾಲಾ-ಕಾಲೇಜಿನ ವಿದ್ಯಾರ್ಥಿಗಳಲ್ಲಿ ಸೌಹಾರ್ದ ಸಂಸ್ಕೃತಿಯನ್ನು ಹಾಗೂ ನಾಟಕ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾಟಕದ ಬಗ್ಗೆ ಆಸಕ್ತಿ ಮೂಡಿಸಲು ಹಮ್ಮಿಕೊಂಡ ಕಾರ್ಯಕ್ರಮ ಇದು. “ಪಗಪು” ನಾಟಕದಲ್ಲಿ ಎಲ್ಲಾ…
ಬೆಂಗಳೂರು : ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಇವರ ವತಿಯಿಂದ ಮತ್ತು ನಾಟ್ಕ ಬೆಂಗಳೂರು ಇವರ ಸಹಕಾರದೊಂದಿಗೆ ‘ರಂಗಸಂವಾದ -07’ ಕಾರ್ಯಕ್ರಮವನ್ನು ದಿನಾಂಕ 02 ಆಗಸ್ಟ್ 2025ರಂದು ಸಂಜೆ 5-00 ಗಂಟೆಗೆ ಬೆಂಗಳೂರಿನ ಜೆ.ಸಿ. ರಸ್ತೆ, ಕನ್ನಡ ಭವನ, ಕರ್ನಾಟಕ ನಾಟಕ ಅಕಾಡೆಮಿ ಕಛೇರಿ ಆವರಣದ ರಂಗಚಾವಡಿಯಲ್ಲಿ ಹಮ್ಮಿಕೊಳ್ಳಲಾಗಿದೆ. ರಂಗಕರ್ಮಿಗಳು ಹಾಗೂ ಕಲಾ ನಿರ್ದೇಶಕರಾದ ಶಶಿಧರ್ ಅಡಪ ಇವರು ತಿಂಗಳ ಅತಿಥಿಯಾಗಿ ಭಾಗವಹಿಸಲಿದ್ದು, ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾದ ಡಾ. ಕೆ.ವಿ. ನಾಗರಾಜಮೂರ್ತಿ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಮಣಿಪಾಲ : ಹೆಜ್ಜೆ ಗೆಜ್ಜೆ ಫೌಂಡೇಶನ್ (ರಿ.) ಉಡುಪಿ-ಮಣಿಪಾಲ್ ಅರ್ಪಿಸುವ ‘ನೃತ್ಯವಾಹಿನಿ -5’ ಶಾಸ್ತ್ರೀಯ ನೃತ್ಯ ಸರಣಿ ಕಾರ್ಯಕ್ರಮವು ದಿನಾಂಕ 03 ಆಗಸ್ಟ್ 2025ರಂದು ಸಂಜೆ 6-00 ಗಂಟೆಗೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ಹತ್ತಿರ ಇರುವ ಹೆಜ್ಜೆ ಗೆಜ್ಜೆ ನೃತ್ಯ ಸ್ಟುಡಿಯೋದಲ್ಲಿ ನಡೆಯಲಿದೆ. ವೀಣಾ ವಿನೋದಿನಿ ಮತ್ತು ವಿದುಷಿ ಪವನ ಬಿ. ಆಚಾರ್ ಮಣಿಪಾಲ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವಿದುಷಿ ರಾಧಿಕಾ ಶೆಟ್ಟಿ ಇವರ ಶಿಷ್ಯೆ ಕುಮಾರಿ ಅದಿತಿ ಲಕ್ಷ್ಮಿ ಭಟ್ ಮಂಗಳೂರು ಇವರು ಭರತನಾಟ್ಯ ಪ್ರದರ್ಶನ ನೀಡಲಿದ್ದಾರೆ.
ಮಂಗಳೂರು : ಅಮೃತ ಪ್ರಕಾಶ ಪತ್ರಿಕೆ ಮಂಗಳೂರು ಹಾಗೂ ಶಾರದಾ ವಿದ್ಯಾಲಯ ಜಂಟಿ ಆಶ್ರಯದಲ್ಲಿ 111ನೇ ಸಾಹಿತ್ಯ ಅಭಿರುಚಿ ಕಾರ್ಯಕ್ರಮ ದಿನಾಂಕ 31 ಜುಲೈ 2025ರಂದು ಶಾರದಾ ವಿದ್ಯಾಲಯ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಶಾರದಾ ವಿದ್ಯಾಲಯ ಇಲ್ಲಿನ ಚೇರ್ಮೆನ್ ಡಾ. ಎಂ. ಬಿ. ಪುರಾಣಿಕ್ ಮಾತನಾಡಿ “ಸಾಹಿತ್ಯ ಕಾರ್ಯಕ್ರಮಗಳು ನಿರಂತರ ನಡೆಯಬೇಕು .ವಿದ್ಯಾರ್ಥಿಗಳು ಪತ್ರಿಕೆ ಓದುವ, ಪುಸ್ತಕ ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು” ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾರದಾ ವಿದ್ಯಾಲಯ ಪ್ರಾಂಶುಪಾಲರಾದ ಚಂದ್ರಿಕಾ ಭಂಡಾರಿ ವಹಿಸಿದರು. ಮುಖ್ಯ ಸಂಪನ್ಮೂಲ ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲರಾದ ಪ್ರೊಫೆಸರ್ ಕೃಷ್ಣ ಮೂರ್ತಿ, ನಿವೃತ್ತ ಕನ್ನಡ ಉಪನ್ಯಾಸಕಿ ಸುಮನ ಜಿ., ಹಿರಿಯ ವಿಜಯವಾಣಿ ದೈನಿಕ ವರದಿಗಾರರಾದ ಹರೀಶ್ ಮೋಟುಕಾನ, ಅಮೃತ ಪ್ರಕಾಶ ಪತ್ರಿಕೆಯ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ,ದಯಾನಂದ ಕಟೀಲು, ವೇದಿಕೆಯಲ್ಲಿ ಉಪಸ್ಥಿರಿದರು . ಮಾಲತಿ ಶೆಟ್ಟಿ ಮಾಣೂರು ಸ್ವಾಗತಿಸಿ, ಎನ್. ಸುಬ್ರಾಯ ಭಟ್ ಕಾರ್ಯಕ್ರಮ ನಿರೂಪಿಸಿ,…
ಹಾಸನ : ರತ್ನಾಕಲಾ ಪದ್ಮ ಕುಟೀರ ಟ್ರಸ್ಟ್ ಮತ್ತು ನಾಟ್ಯಕಲಾ ನಿವಾಸ್ ಹಾಸನ 18ನೇ ವಾರ್ಷಿಕೋತ್ಸವ ಪ್ರಯುಕ್ತ ಪ್ರಸ್ತುತ ಪಡಿಸುವ ‘ಹರಿ ಹರ ಸುತ’ ಮತ್ತು ‘ನಾಟ್ಯ ದಾಸೋಹಂ’ ಭರತನಾಟ್ಯ ಪ್ರದರ್ಶನವನ್ನು ದಿನಾಂಕ 02 ಆಗಸ್ಟ್ 2025ರಂದು ಹಾಸನಾಂಬ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಸಂಜೆ 4-00 ಗಂಟೆಗೆ ‘ಹರಿ ಹರ ಸುತ’ ಮತ್ತು 6-15 ಗಂಟೆಗೆ ‘ನಾಟ್ಯ ದಾಸೋಹಂ’ ಭರತನಾಟ್ಯ ಮೂಲಕ ಹರಿದಾಸ ಸಾಹಿತ್ಯದ ಪರಿಶೋಧನೆಯಲ್ಲಿ ಕರ್ನಾಟಕ ಕಲಾಶ್ರೀ ಶಾರದಾಮಣಿ ಶೇಖರ್, ಕರ್ನಾಟಕ ಕಲಾಶ್ರೀ ರಾಜಶ್ರೀ ಶೆಣೈ, ವಿದ್ಯಾಶ್ರೀ ರಾಧಾಕೃಷ್ಣ, ಮಂಜುಳ ಸುಬ್ರಹ್ಮಣ್ಯ, ಉನ್ನತ್ ಜೈನ್, ಡಾ. ಸಾಗರ್ ಟಿ.ಎಸ್., ಮಂಜರಿಚಂದ್ರ ಪುಷ್ಪರಾಜ್ ಮತ್ತು ರಾಧಿಕಾ ಶೆಟ್ಟಿ ಇವರುಗಳು ನೃತ್ಯ ಪ್ರದರ್ಶನ ನೀಡಲಿದ್ದಾರೆ.
ಬೆಂಗಳೂರು: ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರವು ಪ್ರಸಕ್ತ ಸಾಲಿನಿಂದ ಕಿಶೋರ ಕನಕ ಕಾವ್ಯ ಸ್ಪರ್ಧೆ ಆಯೋಜಿಸುತ್ತಿದೆ. ಕನಕದಾಸರ ಕಾವ್ಯಗಳನ್ನು ಮಾತ್ರ ಗಮಕ ವಾಚನಕ್ಕೆ ಪರಿಗಣಿಸಲಾಗುತ್ತದೆ. 10ರಿಂದ 15 ವರ್ಷದೊಳಗಿನವರು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಪ್ರಥಮ ಸ್ಥಾನ ಪಡೆದವರಿಗೆ ರೂಪಾಯಿ 20 ಸಾವಿರ, ದ್ವೀತಿಯ ಸ್ಥಾನ ಪಡೆದವರಿಗೆ ರೂಪಾಯಿ 15 ಸಾವಿರ, ತೃತೀಯ ಸ್ಥಾನ ಪಡೆದವರಿಗೆ ರೂಪಾಯಿ 10 ಸಾವಿರ ಹಾಗೂ ಇಬ್ಬರಿಗೆ ಸಮಾಧಾನಕರ ಬಹುಮಾನವಾಗಿ ತಲಾ ರೂಪಾಯಿ 5 ಸಾವಿರ ನೀಡಲಾಗುತ್ತದೆ. ಕಿಶೋರ ಕನಕ ಕಾವ್ಯ ಗಮಕ ಸ್ಪರ್ಧೆಯ ನಿಯಮಗಳು : 1. ಈ ಸ್ಪರ್ಧೆಯು ಕಿಶೋರ ಪ್ರತಿಭೆಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಕಿಶೋರ ಪ್ರತಿಭೆ ಅಂದರೆ 10 ರಿಂದ 15 ವರ್ಷದ ವಯೋಮಾನದವರು. 2. ಕನಕದಾಸರ ಕಾವ್ಯಗಳನ್ನು ಮಾತ್ರ ಗಮಕ ವಾಚನಕ್ಕೆ ಆಯ್ಕೆಮಾಡಿಕೊಳ್ಳುವುದು. 3. ಸ್ಪರ್ಧೆಯಲ್ಲಿ ಭಾಗವಹಿಸುವವರ ವಯಸ್ಸು 15 ವರ್ಷ ಮೀರಿರಬಾರದು. ಜನ್ಮ ದಿನಾಂಕಕ್ಕೆ ಸಂಬಂಧಿಸಿದ ದಾಖಲೆಯನ್ನು ಸಲ್ಲಿಸಬೇಕು. 4. ಗಾಯನಕ್ಕೆ ಶೃತಿ ಬಾಕ್ಸ್‌ನ್ನು ಮಾತ್ರ ಬಳಸಬೇಕು. ಮೊಬೈಲ್…
ಹೆಬ್ರಿ : ತುಳುವ ಭಾಷೆ, ಸಂಸ್ಕೃತಿ ಹಾಗೂ ಸಮುದಾಯದ ಹಕ್ಕುಗಳ ಸಂರಕ್ಷಣೆಯ ಉದ್ದೇಶದಿಂದ 1928ರಲ್ಲಿ ಸ್ಥಾಪಿತವಾದ ತುಳುವ ಮಹಾಸಭೆ, ತನ್ನ ಹೆಬ್ರಿ ತಾಲೂಕು ಘಟಕದ ನವ ಚಟುವಟಿಕೆಗಳಿಗೆ ಹೊಸ ಚೈತನ್ಯ ನೀಡುವ ನಿಟ್ಟಿನಲ್ಲಿ, ಹೆಸರಾಂತ ದಂತವೈದ್ಯರು ಮತ್ತು ಸಮಾಜಸೇವಕರಾದ ಡಾ. ಶರತ್ ಕುಮಾರ್ ಶೆಟ್ಟಿಯವರನ್ನು ಹೆಬ್ರಿ ತಾಲೂಕು ಸಂಚಾಲಕರಾಗಿ ನೇಮಕ ಮಾಡಿದೆ. ಡಾ. ಶರತ್ ಕುಮಾರ್ ಶೆಟ್ಟಿ, ಪ್ರಸ್ತುತ ಸುಳ್ಯದ ಕೆ.ವಿ.ಜಿ. ದಂತ ಕಾಲೇಜಿನಲ್ಲಿ ಪ್ರೊಫೆಸರ್, ವಿಭಾಗಾಧ್ಯಕ್ಷ ಮತ್ತು ಸ್ನಾತಕೋತ್ತರ ಅಧ್ಯಯನಗಳ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಒರ್ಥೋಡಾಂಟಿಕ್ಸ್ ಕ್ಷೇತ್ರದ ನುರಿತ ತಜ್ಞರಾಗಿದ್ದು, ವೈಜ್ಞಾನಿಕ ಮತ್ತು ಸಾಮಾಜಿಕ ಕಕ್ಷೆಯಲ್ಲಿ ಸುದೀರ್ಘ ಸೇವೆಯನ್ನು ನೀಡುತ್ತಿದ್ದಾರೆ. ಅವರು ಇಂಡಿಯನ್ ಡೆಂಟಲ್ ಅಸೋಸಿಯೇಶನ್ – ಸುಳ್ಯ ಶಾಖೆಯ ಅಧ್ಯಕ್ಷ, ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಮಂಗಳೂರು ಲೆಗಿಯನ್ ನಿರ್ದೇಶಕ, ಲಯನ್ಸ್ ಕ್ಲಬ್ ಮೆಟ್ರೋ ಗೋಲ್ಡ್ ಮಂಗಳೂರಿನ ಆರೋಗ್ಯ ಶಿಬಿರ ಸಂಯೋಜಕ ಮತ್ತು ಭಾರತೀಯ ಮಾನವ ಹಕ್ಕುಗಳ ಸಂಘದ ಮಾಜಿ ಅಧ್ಯಕ್ಷರಾಗಿ ಸಮಾಜಮುಖಿ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಅವರ…
ಬೆಂಗಳೂರು : ಕರ್ನಾಟಕ ಲೇಖಕಿಯರ ಸಂಘದ ವತಿಯಿಂದ 2024ನೇ ಸಾಲಿನ ವಿವಿಧ ಪುಸ್ತಕ ಬಹುಮಾನಕ್ಕೆ ಲೇಖಕಿಯರಿಂದ ಕೃತಿಗಳನ್ನು ಆಹ್ವಾನಿಸಲಾಗಿದೆ. ಕಾದಂಬರಿ, ವಿಜ್ಞಾನ ಸಾಹಿತ್ಯ, ಲಲಿತ ಪ್ರಬಂಧ, ಭಾರತದ ಯಾವುದೇ ಭಾಷೆಯ ಅನುವಾದಿತ ಕಾದಂಬರಿ/ಕಥಾ ಸಂಕಲನ/ ಜೀವನ ಚರಿತ್ರೆ, 50 ವರ್ಷದ ಒಳಗಿನವರಿಗಾಗಿ ಕಾವ್ಯಕ್ಕಾಗಿ ಪ್ರಶಸ್ತಿ, ವಚನ ಸಾಹಿತ್ಯದಲ್ಲಿ ಪ್ರಕಟವಾದ ಯಾವುದೇ ಪ್ರಕಾರದ ಕೃತಿ, ಸಣ್ಣಕಥೆ, ಪ್ರವಾಸ ಸಾಹಿತ್ಯ, ಹಾಸ್ಯ ಕೃತಿ, ಮಕ್ಕಳ ಸಾಹಿತ್ಯ, ನಾಟಕ, ಸಂಶೋಧನೆ, ಆತ್ಮಕಥನ, 2024ರಲ್ಲಿ ಡಿಜಿಟಲ್ ಮತ್ತು ಮುದ್ರಣ ಮಾಧ್ಯಮದಲ್ಲಿ ಪ್ರಕಟಗೊಂಡ ಕಥೆಗಳ ಕೃತಿಗಳನ್ನು ದಿನ್ನಕ 20 ಆಗಸ್ಟ್ 2025ರ ಒಳಗೆ ಕರ್ನಾಟಕ ಲೇಖಕಿಯರ ಸಂಘ (ರಿ.) ಬೆಂಗಳೂರು, ನಂ.206, 2ನೇ ಮಹಡಿ, ವಿಜಯ ಮ್ಯಾನ್ ಶನ್, 2ನೇ ಕ್ರಾಸ್, 2ನೇ ಮುಖ್ಯ ರಸ್ತೆ, ಚಾಮರಾಜಪೇಟೆ, ಬೆಂಗಳೂರು-560018 ಇಲ್ಲಿಗೆ ಕಳುಹಿಸಿಕೊಡಬೇಕು.