Subscribe to Updates
Get the latest creative news from FooBar about art, design and business.
Author: roovari
ಮಡಿಕೇರಿ : ಕೊಡಗು ಪತ್ರಕರ್ತರ ಸಂಘದ ವಿರಾಜಪೇಟೆ ತಾಲೂಕು ಘಟಕದ ವತಿಯಿಂದ ಕಾಮಧೇನು ಗೋಶಾಲಾ ಸಂರಕ್ಷಣಾ ಟ್ರಸ್ಟ್, ಅಮ್ಮತ್ತಿ ಇವರ ಸಹಯೋಗದಲ್ಲಿ ದಿನಾಂಕ 03 ಆಗಸ್ಟ್ 2025ರಂದು ಕಥಾ ಸಮಯ. ಕಥೆ ಹೇಳುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಪತ್ರಕರ್ತರ ಸಂಘದ ತಾಲೂಕು ಘಟಕದ ಅಧ್ಯಕ್ಷ ಮುದೋಷ್ ಪೂವಯ್ಯ ಮಾಹಿತಿ ನೀಡಿದ್ದಾರೆ. ಕಾವಾಡಿ ಅಮ್ಮತ್ತಿಯ ಕಾಮಧೇನು ಗೋಶಾಲಾ ಸಂರಕ್ಷಣಾ ಟ್ರಸ್ಟಿನ ಆವರಣದಲ್ಲಿ ಆಯೋಜಿತ ಕಥಾ ಸಮಯ ಕಾರ್ಯಕ್ರಮವನ್ನು ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ. ಉದ್ಘಾಟಿಸಲಿದ್ದಾರೆ. ಕೊಡಗು ಪತ್ರಿಕಾಭವನದ ಮ್ಯಾನೇಜಿಂಗ್ ಟ್ರಸ್ಟಿ ಎಂ.ಪಿ. ಕೇಶವ ಕಾಮತ್, ಕೊಡಗು ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ, ಹಿರಿಯ ಸಾಹಿತಿಗಳಾದ ಬಾಚರಣಿಯಂಡ ಅಪ್ಪಣ್ಣ, ಬಾರಿಯಂಡ ಜೋಯಪ್ಪ, ಅಸೀಮಾ ಮಾಸಪತ್ರಿಕೆಯ ಸಂಪಾದಕ ಮಾಣಿಪಂಡ ಸಂತೋಷ್ ತಮ್ಮಯ್ಯ, ಪಕ್ಷಿ ತಜ್ಞ ಡಾ. ಎಸ್.ವಿ. ನರಸಿಂಹನ್, ಕಾಮಧೇನು ಗೋಶಾಲಾ ಸಂರಕ್ಷಣಾ ಟ್ರಸ್ಟಿನ ಮ್ಯಾನೇಜಿಂಗ್ ಟ್ರಸ್ಟಿ ಕೆ. ರಾಮಚಂದ್ರ ಭಟ್, ಕೊಡಗು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ,…
ಬೆಂಗಳೂರು: ಬಿ. ಎಂ. ಶ್ರೀ. ಪ್ರತಿಷ್ಠಾನವು ‘ಶಾ. ಬಾಲುರಾವ್ ಯುವ ಬರಹಗಾರ ಪ್ರಶಸ್ತಿ’ ಮತ್ತು ‘ಶಾ. ಬಾಲುರಾವ್ ಅನುವಾದ ಪ್ರಶಸ್ತಿ’ಗೆ ಕೃತಿಗಳನ್ನು ಆಹ್ವಾನಿಸಿದೆ. ಯುವ ಬರಹಗಾರ ಪ್ರಶಸ್ತಿಗೆ 35 ವರ್ಷದೊಳಗಿನವರು 2024ರಲ್ಲಿ ಮೊದಲ ಮುದ್ರಣವಾಗಿ ಪ್ರಕಟವಾಗಿರುವ ಸಾಹಿತ್ಯದ ಯಾವುದೇ ಪ್ರಕಾರದ ಕೃತಿಗಳನ್ನು ಸಲ್ಲಿಸಬಹುದು. ಅನುವಾದ ಪ್ರಶಸ್ತಿಗೆ 2024ರಲ್ಲಿ ಮೊದಲ ಮುದ್ರಣವಾಗಿ ಪ್ರಕಟಗೊಂಡ, ಅನ್ಯ ಭಾಷೆಯಿಂದ ಕನ್ನಡಕ್ಕೆ ಅನುವಾದವಾಗಿರುವ ಕೃತಿಗಳನ್ನು ಆಹ್ವಾನಿಸಲಾಗಿದೆ. ಈ ಪ್ರಶಸ್ತಿಗಳು ತಲಾ ರೂಪಾಯಿ 25 ಸಾವಿರ ನಗದು ಬಹುಮಾನವನ್ನು ಒಳಗೊಂಡಿವೆ. ಲೇಖಕರು ಸ್ವವಿವರದ ಜತೆಗೆ ಪ್ರಕಟಗೊಂಡ ಕೃತಿಯ ಮೂರು ಪ್ರತಿಗಳನ್ನು ಗೌರವ ಕಾರ್ಯದರ್ಶಿ, ಬಿ. ಎಂ. ಶ್ರೀ. ಪ್ರತಿಷ್ಠಾನ, 3ನೇ ಮುಖ್ಯರಸ್ತೆ, ನರಸಿಂಹರಾಜ ಕಾಲೊನಿ, ಬೆಂಗಳೂರು-560019 ಈ ವಿಳಾಸಕ್ಕೆ ದಿನಾಂಕ 30 ಆಗಸ್ಟ್ 2025ರೊಳಗೆ ಕಳುಹಿಸಬೇಕು ಎಂದು ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಶಾಂತರಾಜು ತಿಳಿಸಿದ್ದಾರೆ.
ನಂದಳಿಕೆ : ವಿಶಾಲ ಯಕ್ಷ ಕಲಾ ಬಳಗ ನಂದಳಿಕೆ ಕಾರ್ಕಳ ತಾಲೂಕು ಇದರ ವತಿಯಿಂದ ಹಮ್ಮಿಕೊಂಡ ತಾಳಮದ್ದಳೆ ಜ್ಞಾನಯಜ್ಞ ಶತಕೋತ್ತರ ಪ್ರಸ್ತುತಿ ಹಾಗೂ ಬೆಳ್ಮಣ್ ಜೇಸಿ ಸಂಸ್ಥೆ ಆಗಸ್ಟ್ ತಿಂಗಳ ಸಮಾರಂಭ ನಿಮಿತ್ತ ದಿನಾಂಕ 02 ಆಗಸ್ಟ್ 2025ರಂದು ಸಂಜೆ 6-00 ಗಂಟೆಗೆ ನಂದಳಿಕೆ ಬೋರ್ಡ್ ಶಾಲಾ ಸಭಾಂಗಣದಲ್ಲಿ ನಡೆಯಲಿದೆ. ಕವಿ ಸಂಕಯ ಭಾಗವತ ವಿರಚಿತ ‘ಸೊರ್ಕುದ ದಾರುಕೆ’ ಕೃಷ್ಣಾರ್ಜುನ ಕಾಳಗದ ಆಯ್ದ ಭಾಗದ ಹಿಮ್ಮೇಳದಲ್ಲಿ ಗಣೇಶ ಮಯ್ಯ ವರ್ಕಾಡಿ, ಕುಮಾರ ಮಯ್ಯ ವರ್ಕಾಡಿ ಮತ್ತು ಭವಿಷ್ಯ ಶೆಟ್ಟಿ ಪಂಜಿನಡಕ ಹಾಗೂ ಮುಮ್ಮೇಳದಲ್ಲಿ ಅರ್ಜುನ : ವಿಶ್ವನಾಥ ಸಾಂತೂರು ಮತ್ತು ದಾರುಕ : ಸುಬ್ರಹ್ಮಣ್ಯ ಪಂಜಿನಡಕ ಸಹಕರಿಸಲಿದ್ದಾರೆ.
ಮೈಸೂರು : ಪರಿವರ್ತನ ರಂಗ ಸಮಾಜ (ರಿ.) ಇದರ 25ನೇ ವರ್ಷಾಚರಣೆಯ ಸಂದರ್ಭದಲ್ಲಿ ಪ್ರಸ್ತುತಪಡಿಸುವ ತಂಡದ 30ನೇ ನಾಟಕ ರವೀಂದ್ರ ಭಟ್ ಇವರ ಕೃತಿ ಆಧಾರಿತ ‘ಮೂರನೇ ಕಿವಿ’ ನಾಟಕ ಪ್ರದರ್ಶನವನ್ನು ದಿನಾಂಕ 02 ಮತ್ತು 03 ಆಗಸ್ಟ್ 2025ರಂದು ಸಂಜೆ 7-00 ಗಂಟೆಗೆ ಮೈಸೂರಿನ ಕಿರುರಂಗಮಂದಿರದಲ್ಲಿ ಆಯೋಜಿಸಲಾಗಿದೆ. ಪ್ರೊ. ಎಸ್.ಆರ್. ರಮೇಶ್ ಇವರು ರಂಗಪಠ್ಯ, ವಿನ್ಯಾಸ ಮತ್ತು ನಿರ್ದೇಶನ ಮಾಡಿರುತ್ತಾರೆ. ನಮನ ಕಲಾ ವೇದಿಕೆಯ ಸಹಕಾರದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಮಾತು ಬಾರದಿರುವ ಪ್ರಪಂಚದಲ್ಲಿ ಶಬ್ದ ಮತ್ತು ಮಾತಿಗೆ ಅಗಾಧವಾದ ಪ್ರಾಮುಖ್ಯತೆ ಇದೆ. ಹುಟ್ಟಿನಿಂದಲೇ ಕಿವುಡರಾದವರಿಗೆ ಮಾತನಾಡುವುದನ್ನು ಕಲಿಸಲು ನಡೆಸುವ ದೀರ್ಘ ಪ್ರಯತ್ನವೇ ಮೂರನೇ ಕಿವಿ ಕೃತಿಯ ಪ್ರಮುಖ ಉದ್ದೇಶ. ಮಾತು ಕಲಿಸುವ ಪ್ರಯತ್ನದ ಹಿನ್ನೆಲೆಯಲ್ಲಿ ವಿಜ್ಞಾನವಿದೆ. ಕಲಿಕಾ ಅಭ್ಯಾಸಗಳಿವೆ. ನಿತ್ಯ ನಡೆಸುವ ಹೋರಾಟವಿದೆ. ಉತ್ಸಾಹವಿದೆ. ನಿರಾಶೆ, ಬೇಗುದಿ, ಆಶ್ಚರ್ಯ, ಕುತೂಹಲ ಎಲ್ಲವನ್ನು ಒಳಗೊಳ್ಳುವ ಸಾಹಸ ಹೋರಾಟವಿದು. ತಾಯಿ ಮಗ ಜೊತೆಯಲ್ಲಿ ನಡೆಸುವ ಈ ಕಠಿಣ ಹೋರಾಟದಲ್ಲಿ ಬೆಂಬಲವಾಗಿ ತಂದೆ…
ಮಂಗಳೂರು : ತುಳುನಾಡಿನ ನಾಡಗೀತೆ ಪ್ರಕಟಣೆಗೊಂಡ ಆಟಿಯ 12ನೇ ದಿನದಂದು ದಿನಾಂಕ 28 ಜುಲೈ 2025ರಂದು ನಾಡ ಗೀತೆಯನ್ನು ಹಾಡುವ ಜೊತೆಗೆ ಮೋಹನಪ್ಪ ತಿಂಗಳಾಯರನ್ನು ಸ್ಮರಣೆ ಮಾಡುವ ಕಾರ್ಯವನ್ನು ಐತಿಹಾಸಿಕ ಶ್ರೀ ಜ್ಞಾನೋದಯ ಸಮಾಜ ಮಂದಿರದಲ್ಲಿ ಮಂಗಳೂರು ವಿ.ವಿ. ಕಾಲೇಜಿನ ತುಳು ಎಂ.ಎ. ವಿದ್ಯಾರ್ಥಿಗಳು ಮಾಡಿದರು. ಶ್ರೀ ಜ್ಞಾನೋದಯ ಸಮಾಜದ ಅಧ್ಯಕ್ಷ ಪ್ರೇಮ ಚಂದ್ರ ತಿಂಗಳಾಯ ಸ್ವಾತಂತ್ರ್ಯ ಹೋರಾಟ, ಸಾಮಾಜಿಕ ಸುಧಾರಣೆಯ ಕಾರ್ಯಗಳನ್ನು ವಿವರಿಸಿದರು. ಪ್ರಫುಲ್ಲ ಚಂದ್ರ ತಿಂಗಳಾಯರು ಶುಭ ಹಾರೈಸಿದರು. ಕೃಷ್ಣಮೂರ್ತಿ ಚಿತ್ರಾಪುರ ಮಾತನಾಡಿ “ಸ್ವಾತಂತ್ರ್ಯ ಚಳುವಳಿ, ಏಕೀಕರಣ ಹೋರಾಟ, ನವೋದಯ ಕಾಲದ ಸಾಹಿತ್ಯ ರಚನೆಯ ಕಾಲಘಟ್ಟದ ಹಿನ್ನೆಲೆಯೊಂದಿಗೆ ತಿಂಗಳಾಯರು ಮತ್ತು ಇತರ ತುಳುನಾಡ ಸಾಹಿತಿಗಳ ಕಾರ್ಯ ಚಟುವಟಿಕೆಗಳನ್ನು ಅಧ್ಯಯನ ಮಾಡಬೇಕಾಗಿದೆ” ಎಂದರು. ರಂಗ ನಿರ್ದೇಶಕ ಜಗನ್ ಪವಾರ್ ಬೇಕಲ್ ಮಾತನಾಡಿ “ಸಾಮಾಜಿಕ ಚಳುವಳಿಗಳಿಗೆ ರಂಗಭೂಮಿಯನ್ನು ಸಮರ್ಥವಾಗಿ ಬಳಕೆ ಮಾಡಲಾಗಿದ್ದು, ತುಳುನಾಡ ರಂಗಭೂಮಿಯಲ್ಲಿ ಶ್ರೀ ಜ್ಞಾನೋದಯ ಸಮಾಜಕ್ಕೆ ಮಹತ್ವದ ಸ್ಥಾನ ನೀಡಬೇಕು” ಎಂದರು. ತುಳು ವಿಭಾಗದ ಉಪನ್ಯಾಸಕರಾದ ಮಣಿ ಎಂ.…
ಮಂಗಳೂರು : ಭ್ರಾಮರೀ ಯಕ್ಷಮಿತ್ರರು ಮಂಗಳೂರು ಟ್ರಸ್ಟ್ ಇವರ ಆಶ್ರಯದಲ್ಲಿ ಎಂಟನೇ ವರ್ಷದ ‘ಯಕ್ಷ ವೈಭವ -2025’ ಕಾರ್ಯಕ್ರಮವನ್ನು ದಿನಾಂಕ 02 ಆಗಸ್ಟ್ 2025ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸಂಜೆ 7-00 ಗಂಟೆಗೆ ಆಯೋಜಿಸಲಾಗಿದ್ದು, ಯಕ್ಷಗಾನ ಮತ್ತು ಪ್ರಶಸ್ತಿ ಪ್ರದಾನ ನಡೆಯಲಿದೆ. ತೆಂಕುತಿಟ್ಟಿನ ಹಿರಿಯ ಹಿಮ್ಮೇಳ ಕಲಾವಿದ ಪೆರುವಾಯಿ ಶ್ರೀ ನಾರಾಯಣ ಭಟ್ ಇವರಿಗೆ ‘ಭ್ರಾಮರೀ ಯಕ್ಷಮಣಿ ಪ್ರಶಸ್ತಿ’ ಮತ್ತು ಯಕ್ಷಸಂಗಮ ಮೂಡಬಿದಿರೆ ಮತ್ತು ಹಿರಿಯ ನೇಪಥ್ಯ ಕಲಾವಿದ ವಸಂತ ವಾಮದಪದವು ಇವರಿಗೆ ‘ಭ್ರಾಮರೀ ಯಕ್ಷಸೇವಾ ಪುರಸ್ಕಾರ’ ಪ್ರದಾನ ಮಾಡಲಾಗುವುದು. ತೆಂಕುತಿಟ್ಟಿನ ಸುಪ್ರಸಿದ್ಧ ಹಿಮ್ಮೇಳ ಮತ್ತು ತೆಂಕು – ಬಡಗಿನ ಮುಮ್ಮೇಳ ಕಲಾವಿದರ ಕೂಡುವಿಕೆಯಲ್ಲಿ ‘ಶ್ರೀಮತಿ ಪರಿಣಯ’, ‘ಸಾಧ್ವಿ ಸೈರಂದ್ರಿ’ ಹಾಗೂ ‘ವೈಜಯಂತಿ ಪರಿಣಯ’ ಎಂಬ ಪ್ರಸಂಗದ ಯಕ್ಷಗಾನ ಪ್ರದರ್ಶನಗಳು ನಡೆಯಲಿದೆ.
ಕಾಸರಗೋಡು : ಕಾಸರಗೋಡು ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಮತ್ತು ಗ್ರಂಥಾಲಯದ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡು ಜಿಲ್ಲಾ ಘಟಕದ ಆಶ್ರಯದಲ್ಲಿ ವಿದ್ಯಾರ್ಥಿಗಳಿಗಾಗಿ ನಡೆಯುವ ಏಕದಿನ ಕನ್ನಡ ಸಾಹಿತ್ಯ ಅಭಿಯಾನವಾದ, ‘ಕನ್ನಡದ ನಡಿಗೆ ಶಾಲೆಯ ಕಡೆಗೆ’ ಶೈಕ್ಷಣಿಕ ಶಿಬಿರದ 4ನೇ ಕಾರ್ಯಕ್ರಮವು ದಿನಾಂಕ 02 ಆಗಸ್ಟ್ 2025ರಂದು ಬೆಳಗ್ಗೆ 10-00 ಗಂಟೆಗೆ ಎಡನೀರಿನ ಸ್ವಾಮೀಜೀಸ್ ಪ್ರೌಢಶಾಲೆಯಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಎಡನೀರು ಶ್ರೀಮಠದ ವ್ಯವಸ್ಥಾಪಕ ರಾಜೇಂದ್ರ ಕಲ್ಲೂರಾಯರು ಉದ್ಘಾಟಿಸುವರು. ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮದ ಕೋಶಾಧಿಕಾರಿ ಪ್ರೊ. ಅನಂತ ಪದ್ಮನಾಭ ರಾವ್ ಸಭೆಯ ಅಧ್ಯಕ್ಷತೆ ವಹಿಸುವರು. ಎಡನೀರು ಸ್ವಾಮೀಜೀಸ್ ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಜ್ಯೋತಿಲಕ್ಷ್ಮಿ, ಎಡನೀರು ಸ್ವಾಮೀಜೀಸ್ ಪ್ರೌಢಶಾಲೆಯ ಪಿಟಿಎ ಅಧ್ಯಕ್ಷ ನಾರಾಯಣನ್ ಶುಭ ಹಾರೈಸುವರು. ಕಾರ್ಯಕ್ರಮದಲ್ಲಿ ಅಕ್ಷರ ಲೋಕದ ಮತ್ತು ಸಾಂಸ್ಕೃತಿಕ ಕ್ಷೇತ್ರದ ಸಾಧಕರಾದ ರಾಜೇಂದ್ರ ಕಲ್ಲೂರಾಯರಿಗೆ ಕನ್ನಡ ಪಯಸ್ವಿನಿ ಪ್ರಶಸ್ತಿ-2025 ಪ್ರದಾನ ನಡೆಯಲಿದೆ. ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಸಾಹಿತಿಗಳಾದ…
ಬಂಟ್ವಾಳ : ಏರ್ಯ ಆಳ್ವ ಫೌಂಡೇಷನ್ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ಇದರ ಸಹಯೋಗದಲ್ಲಿ ವಿದ್ಯಾರ್ಥಿಗಳ ‘ಸಾಹಿತ್ಯ ಸಾಂಸ್ಕೃತಿಕ ಕಮ್ಮಟ’ ಏರ್ಯ ಬೀಡುವಿನಲ್ಲಿ ದಿನಾಂಕ 27 ಜುಲೈ 2025ರಂದು ನಡೆಯಿತು. ಏರ್ಯ ಬಾಲಕೃಷ್ಣ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿದರು. ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕರಾಂ ಪೂಜಾರಿ, ಬಂಟ್ವಾಳ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ವಿ.ಸು. ಭಟ್, ಅಮ್ಮಾಡಿ ಗ್ರಾ.ಪಂ. ಅಧ್ಯಕ್ಷ ವಿಜಯ್ಕುಮಾರ್, ಕಲಾವಿದ ಸದಾಶಿವ ಡಿ. ತುಂಬೆ, ನಿವೃತ್ತ ಮುಖ್ಯ ಶಿಕ್ಷಕ ಮಹಾಬಲೇಶ್ವರ ಹೆಬ್ಬಾರ್, ಶಿಕ್ಷಕ ಜಯರಾಮ ಪಡ್ರೆ ಉಪಸ್ಥಿತರಿದ್ದರು. ಕೇಶವ ಎಚ್. ಕಟೀಲು ಸ್ವಾಗತಿಸಿ, ಏರ್ಯರ ನೆನಪುಗಳನ್ನು ಮೆಲುಕು ಹಾಕಿದರು. ನಲ್ಕೆಮಾರು ಶಾಲೆಯ ಶಿಕ್ಷಕ ಜಗನ್ನಾಥ ವಂದಿಸಿದರು. ಕಾರ್ಯಕ್ರಮ ಸಂಯೋಜಕ ದಾಮೋದರ್ ಮಾಸ್ತರ್ ಏರ್ಯ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮಹಾಬಲೇಶ್ವರ ಹೆಬ್ಬಾರ್ ‘ಓದುವ ಹವ್ಯಾಸ’, ಚಿತ್ರಕಲಾ ಶಿಕ್ಷಕ ತಾರಾನಾಥ ಕೈರಂಗಳ ‘ಚಿತ್ರ ಕಮ್ಮಟ’, ಶಿಕ್ಷಕ ವಿಠಲ ನಾಯಕ್ ‘ಮಕ್ಕಳ…
ಬೆಂಗಳೂರು : ಬೆಂಗಳೂರಿನ ಪ್ರವರ ಥಿಯೇಟರ್ ಪ್ರಸ್ತುತ ಪಡಿಸುವ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ‘ಅಣ್ಣನ ನೆನಪು’ ಸಾಕ್ಷ್ಯ ನಾಟಕವು ದಿನಾಂಕ 03 ಆಗಸ್ಟ್ 2025ರಂದು ಸಂಜೆ ಗಂಟೆ 7-00ಕ್ಕೆ ಬೆಂಗಳೂರಿನ ಎನ್.ಆರ್. ಕಾಲೋನಿಯಲ್ಲಿರುವ ಡಾ. ಸಿ. ಅಶ್ವಥ್ ಕಲಾಭವನದಲ್ಲಿ ಪ್ರದರ್ಶನಗೊಳ್ಳಲಿದೆ. ಈ ನಾಟಕದ ರಂಗರೂಪ ಕರಣಂ ಪವನ್ ಪ್ರಸಾದ್ ಮಾಡಿದ್ದು, ಸಂಗೀತ ಅಕ್ಷಯ್ ಭೊಂಸ್ಲೆ ಮತ್ತು ಬೆಳಕು ವಿನ್ಯಾಸ ಮಂಜು ನಾರಾಯಣ್ ನೀಡಿದ್ದು, ಹನು ರಾಮಸಂಜೀವ ಇವರು ವಿನ್ಯಾಸ ಮತ್ತು ನಿರ್ದೇಶನ ಮಾಡಿರುತ್ತಾರೆ. ಮಹೇಶ್ ಎಸ್.ಪಿ., ಹನು ರಾಮಸಂಜೀವ, ನಾಗಶ್ರೀ ಪುಟ್ಟರಾಜು, ಸುಶಾಂತ್ ರಾಜ್ ಆರಾಧ್ಯ, ಋತ್ವಿಕ್ ಕೆ.ಸಿ., ಅಂಬಿಕಾ ಶೆಟ್ಟಿ, ಅಜಯ್ ಕುಮಾರ್, ಸಂಜೀವಿನಿ, ಚಂದನ್ ರಾಮಚಂದ್ರೇಗೌಡ, ಶ್ರೀನಾಥ್ ಎನ್., ಪ್ರವೀಣ್ ಭಟ್, ಚರಣ್ ಗೌಡ, ದಿಲೀಪ್ ಮಹದೇವ್, ಭರಣಿ ವಿನಾಯಕ್, ಲೇಖನ, ಹರ್ಷಿತಾ, ಯಶಸ್ವಿನಿ, ಮನ್ವಿತ್ ವಿನಯ್ ಕುಮಾರ್ ರಂಗದ ಮೇಲೆ ರಂಜಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9686869676 ಸಂಖ್ಯೆಯನ್ನು ಸಂಪರ್ಕಿಸಿರಿ.
ಉಡುಪಿ : ದಕ್ಷಿಣೋತ್ತರ ಜಿಲ್ಲೆಯ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಮಳೆಗಾಲದ ಯಕ್ಷಗಾನ ಪ್ರದರ್ಶನವನ್ನು ದಿನಾಂಕ 03 ಆಗಸ್ಟ್ 2025ರಂದು ಮಧ್ಯಾಹ್ನ 3-00 ಗಂಟೆಗೆ ಉಡುಪಿಯ ಅಜ್ಜರಕಾಡು ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಕರ್ನಾಟಕದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಖ್ಯಾತ ಪ್ರಸಂಗಕರ್ತರಾದ ಎಂ.ಕೆ. ರಮೇಶ ಆಚಾರ್ಯರ ಕಲಾಕುಂಚದಲ್ಲಿ ಮೂಡಿಬಂದ ಕಥಾನಕ ‘ತಿಂತಿಣಿ ಮೌನೇಶ್ವರ’ ಪ್ರಸಂಗವು ಮೌನೇಶ ಆಚಾರ್ಯ ಪರ್ಕಳ ಇವರ ಕಥಾ ಸಂಯೋಜನೆಯಲ್ಲಿ ಮೂಡಿ ಬರಲಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ಗಾನ ಸಾರಥಿ ರಾಘವೇಂದ್ರ ಆಚಾರ್ಯ ಜನ್ಸಾಲೆ ಮತ್ತು ಕೆ.ಜೆ. ಗಣೇಶ ಆಚಾರ್ಯ, ಮದ್ದಲೆಯಲ್ಲಿ ಶಶಾಂಕ ಆಚಾರ್ಯ ಮತ್ತು ಕೆ.ಜೆ. ಸುಧೀಂದ್ರ ಆಚಾರ್ಯ ಹಾಗೂ ಚಂಡೆಯಲ್ಲಿ ಕೆ.ಜೆ. ಕೃಷ್ಣ ಆಚಾರ್ಯ, ದೀಪ್ತ ಆಚಾರ್ಯ ಮತ್ತು ಪ್ರಣೀತ ಆಚಾರ್ಯ ಇವರುಗಳು ಸಹಕರಿಸಲಿದ್ದಾರೆ. ಮುಮ್ಮೇಳದಲ್ಲಿ ಶಶಿಕಾಂತ ಶೆಟ್ಟಿ ಕಾರ್ಕಳ, ಸುಧೀರ್ ಉಪ್ಪೂರು, ಶಂಕರ ದೇವಾಡಿಗ ಉಳ್ಳೂರು, ಆನಂದ ರಾವ್ ಉಪ್ಪಿನಕುದ್ರು, ಸೀತಾರಾಮ ಕುಮಾರ್ ಕಟೀಲು, ಪ್ರಜ್ವಲ್ ಗುರುವಾಯನಕೆರೆ, ವಾಸುದೇವ ರಂಗ ಭಟ್ ಮಧೂರು, ಜಯಪ್ರಕಾಶ ಶೆಟ್ಟಿ ಪೆರ್ಮುದೆ, ಪ್ರಸನ್ನ ಶೆಟ್ಟಿಗಾರ್…