Subscribe to Updates
Get the latest creative news from FooBar about art, design and business.
Author: roovari
ಕನ್ನಡ ಮತ್ತು ತುಳು ಚಿತ್ರರಂಗದ ಹಿನ್ನೆಲೆ ಗಾಯಕರು ಮತ್ತು ಸಂಗೀತ ನಿರ್ದೇಶಕರು. ರಾಘವ ಆಚಾರ್ಯ ಹಾಗೂ ಮೀರಾ ಇವರ ಪುತ್ರರಾಗಿ ಜನಿಸಿದ ಡಾಕ್ಟರ್ ನಿತಿನ್ ಆಚಾರ್ಯ ಅವರು ತಮ್ಮ ದಂತ ವೈದ್ಯಕೀಯ ಪದವಿಯನ್ನು ಎ.ಬಿ. ಶೆಟ್ಟಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ಇಲ್ಲಿ ಪಡೆದು 2009ನೇ ಇಸವಿಯಿಂದ ಕೆ.ಸಿ.ರೋಡಲ್ಲಿ ತಮ್ಮದೇ ಆದ ಮೀರಾ ಡೆಂಟಲ್ ಕ್ಲಿನಿಕ್ ಅನ್ನು ನಡೆಸುತ್ತಿದ್ದಾರೆ. ಬಾಲ್ಯದಿಂದಲೇ ಸಂಗೀತದ ಬಗ್ಗೆ ಅಪಾರ ಒಲವನ್ನು ಹೊಂದಿದ್ದ ಇವರು ತಮ್ಮ ಸಂಗೀತ ಶಿಕ್ಷಣವನ್ನು ಸಾಂಪ್ರದಾಯಿಕವಾಗಿ ಪಡೆದವರಲ್ಲ. ಸಂಗೀತದ ಬಗೆಗಿನ ಅಪಾರವಾದ ಆಸಕ್ತಿ ಗುರುವಿಲ್ಲದೆ ಕಲಿಕೆಯ ಕಡೆಗೆ ಸೆಳೆಯಿತು. ಎ.ಆರ್. ರಹಮಾನ್, ಚಿತ್ರ, ಎಸ್.ಪಿ.ಬಿ.ಯವರು ಇವರ ಮಾನಸ ಗುರುಗಳು ಎಂದರೆ ತಪ್ಪಾಗದು. ಆರಂಭದಲ್ಲಿ ಇವರ ಪ್ರತಿಭೆಗೆ ಇವರೇ ಕಲ್ಪಿಸಿಕೊಂಡ ವೇದಿಕೆ ‘band aid’ ಎನ್ನುವ ಫ್ಯೂಶನ್ ಬ್ಯಾಂಡ್ ನ ಮುಖಾಂತರ ಇಡೀ ಕರ್ನಾಟಕದಾದ್ಯಂತ ಬೇರೆ ಬೇರೆ ವೇದಿಕೆಗಳಲ್ಲಿ ಸಂಗೀತಪ್ರಿಯರ ಮನಗೆದ್ದ ಇವರಿಗೆ ಕನ್ನಡಿಗರ ಜನಮಾನಸವನ್ನು ತಲುಪಲು ಸಿಕ್ಕ ಅದ್ಭುತ ಅವಕಾಶ ಟಿವಿ9…
ಡಾ. ಲಕ್ಷ್ಮೀ ರೇಖಾ ಅರುಣ್ – ಚಿಕಿತ್ಸಕ ದೃಷ್ಟಿಯಿಂದ ನೋಡುತ್ತಿರುವ ದಂತವೈದ್ಯೆ ಹಾಗೂ ಭರತನಾಟ್ಯ ಕಲಾವಿದೆ ಲಕ್ಷ್ಮೀ ರೇಖಾ ಅವರು ಮೂಲತಃ ಬೆಂಗಳೂರಿನವರು. ಶ್ರೀ ಜನಾರ್ದನ ಅಯ್ಯಂಗಾರ್ ತಂದೆ, ಶ್ರೀಮತಿ ಅಮೃತ ನಳಿನಿ ತಾಯಿ. ಸಾಮಾನ್ಯ ಶಿಕ್ಷಣ ಹಾಗೂ ಕಲಾಸಕ್ತಿ ತಾಳಿದ್ದು ಚಿಕ್ಕಪ್ಪ ಎ.ಶ್ರೀಕಾಂತ್ ಹಾಗೂ ಚಿಕ್ಕಮ್ಮ ಕಾಂತಿಮತಿಯವರ ಮನೆಯಲ್ಲಿದ್ದು ಬೆಳೆದಾಗ. ಕಲಾಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ತುಡಿತವೊಂದು ಹುಟ್ಟಿತೆಂದರೆ ಅದೇ ಮುಂದೆ ನಾವು ಅತಿಯಾಗಿ ಪ್ರೀತಿಸುವ, ನಮಗೆ ಭಾವಸೌಖ್ಯವೊದಗಿಸುವ, ನಮ್ಮನ್ನು ಕಾಡುವ, ಕೆಣಕುವ, ಸವಾಲಾಗುವ, ಹಳತೊಂದನ್ನು ಹುಡುಕುವ, ಹೊಸತೊಂದನ್ನು ಸೃಜಿಸುವ ವಿದ್ಯಮಾನವಾಗಿ ನಿರಂತರವಾಗಿ ಅರಳುತ್ತಾ ಸಾಗುತ್ತದೆ. ಸುಖವೋ ದುಃಖವೋ, ಮೇಲೋ ಕೆಳಗೋ, ಹಿಂದೆಯೋ ಮುಂದೆಯೋ ಎಲ್ಲ ಅನುಭವಗಳನ್ನು ಎದುರಿಸಲು ನಮ್ಮನ್ನು ಪ್ರೇರೇಪಿಸುತ್ತದೆ. ಅಂಥ ತುಡಿತವೊಂದನ್ನು ಒಪ್ಪಿ ಅಪ್ಪಿ ಪ್ರೀತಿಸಿದವರಿಂದಲೇ ಕಲೆಯ ವಿಕಸನ ಸಾಧ್ಯವಾಗಿದೆ. ಜೀವನದ ಈ ರೀತಿಯ ಆಯಾಮವನ್ನು ಕಾಣಿಸುವ ಕಲಾ ಸಾಧಕರಲ್ಲಿ ಡಾ. ಲಕ್ಷ್ಮೀ ರೇಖಾ ಅರುಣ್ ಒಬ್ಬರು. ಶಾಲೆ ಕಾಲೇಜಿನ ವಿದ್ಯಾರ್ಥಿ ಜೀವನವು ದಂತ ವೈದ್ಯಕೀಯ ಪದವಿಯೆಡೆಗೆ ಕೊಂಡೊಯ್ದರೂ ಕಲೆಯ…
ಅಗಲ್ಪಾಡಿ: ಕಾಸರಗೋಡಿನ ಪ್ರಖ್ಯಾತ ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆ ರಂಗ ಚಿನ್ನಾರಿ ಕಾಸರಗೋಡು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದೊಂದಿಗೆ ಶ್ರೀ ಕ್ಷೇತ್ರ ಅಗಲ್ಪಾಡಿಯಲ್ಲಿ ‘ಕಾಸರಗೋಡು ಕನ್ನಡ ಹಬ್ಬ’ದ ಸರಣಿ ಕಾರ್ಯಕ್ರಮಗಳ ಸಮಾರೋಪ ಸಮಾರಂಭವು ದಿನಾಂಕ 30-06-2023 ರಂದು ಅಗಲ್ಪಾಡಿಯ ಶ್ರೀ ದುರ್ಗಾಪರಮೇಶ್ವರಿ ಸಭಾಂಗಣದಲ್ಲಿ ನಡೆಯಿತು. ಶ್ರೀ ಕ್ಷೇತ್ರ ಅಗಲ್ಪಾಡಿಯ ಆಡಳಿತ ಮಂಡಳಿಯ ವಿಶ್ವಸ್ಥರಾದ ಶ್ರೀ ಎ.ಜಿ.ಶರ್ಮರು ದೀಪ ಬೆಳಗಿಸಿ ಕಾಸರಗೋಡು ಕನ್ನಡ ಹಬ್ಬದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕವಿ, ಸಾಹಿತಿ, ಜನಪ್ರಿಯ ವೈದ್ಯ ಡಾ. ರಮಾನಂದ ಬನಾರಿಯವರು “ಕಾಸರಗೋಡಿನಲ್ಲಿ ಕನ್ನಡ ಉಳಿಸಿ ಬೆಳೆಸುವ ಪ್ರಯತ್ನಕ್ಕೆ ಹೊಸತನದ ಆಕರ್ಷಣೀಯ ಕಾರ್ಯಕ್ರಮಗಳು ಬೇಕು. ಹಳ್ಳಿ ಹಳ್ಳಿಗಳಲ್ಲಿ ಚಟುವಟಿಕೆಗಳು ವಿಸ್ತರಣೆಯಾಗಬೇಕು. ಕನ್ನಡದ ಪ್ರೀತಿ ಇರುವವರೆಲ್ಲ ಕೈಜೋಡಿಸಬೇಕು. ಹೆಚ್ಚು ಹೆಚ್ಚು ಜನರ ಒಳಗೊಳ್ಳುವಿಕೆಯಿಂದ ಈ ಕನ್ನಡದ ಬೇರುಗಳು ಬಲವಾಗುತ್ತವೆ. ಕಾಸರಗೋಡು ಚಿನ್ನಾ ಅವರು ಕನ್ನಡದ ಜೀವಂತಿಕೆಗೆ ನೀಡಿದ ಕೊಡುಗೆ ಅನುಕರಣೀಯ” ಎಂದು ನುಡಿದರು. ಶ್ರೀ ಕಾಸರಗೋಡು ಚಿನ್ನಾ ಹಾಗೂ…
ದಿವಂಗತರಾದ ಶ್ರೀ ರಾಮಚಂದ್ರ ಉಡುಪ ಮತ್ತು ಶ್ರೀಮತಿ ವಾಗ್ದೇವಿಯಮ್ಮ ಅವರ ಮಗಳಾಗಿ ಜನಿಸಿದ ರತೀದೇವಿಯವರು ಅದಮಾರಿನ ಪದವಿ ಪೂರ್ವ ವಿದ್ಯಾ ಸಂಸ್ಥೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತೇರ್ಗಡೆಯಾದ ಕೂಡಲೇ ವಿವಾಹವಾಯಿತು. ಇವರ ಪತಿ ದಿವಂಗತ ಶ್ರೀ ಲಕ್ಷ್ಮೀನಾರಾಯಣ ಭಟ್ಟರು ಮದುವೆಯಾದ ಎರಡೂವರೆ ವರ್ಷದೊಳಗೆ ನಿಧನರಾದರು. ಎರಡು ಪುಟ್ಟ ಗಂಡು ಮಕ್ಕಳ ತಾಯಿಯಾದ ರತೀದೇವಿಗೆ ಆಕಾಶವೇ ತಲೆ ಮೇಲೆ ಬಿದ್ದಂತಾಯಿತು. ಗಂಡನ ಮನೆಯಿಂದ ತಿರಸ್ಕೃತರಾದ ರತೀದೇವಿ ಎದೆಗುಂದಲಿಲ್ಲ. ಹೆತ್ತವರು, ಸೋದರ, ಸೋದರಿಯರು ನೀಡಿದ ಪ್ರೋತ್ಸಾಹದಿಂದ ಮತ್ತೆ ಶಿಕ್ಷಣವನ್ನು ಮುಂದುವರಿಸಿದರು. ವೈದ್ಯಕೀಯ ಶಿಕ್ಷಣದ ಕನಸುಗಳನ್ನು ಕಣ್ಣಲ್ಲಿ ತುಂಬಿಕೊಂಡು, ಗೆದ್ದೇ ಗೆಲ್ಲುತ್ತೇನೆಂಬ ಛಲವನ್ನು ಮನಸ್ಸಿನಲ್ಲಿ ಗಟ್ಟಿ ಮಾಡಿಕೊಂಡು ಪಿ.ಯು.ಸಿ. ಪರೀಕ್ಷೆ ತೇರ್ಗಡೆ ಹೊಂದಿದ ಕೂಡಲೇ ಕಸ್ತೂರ್ಬಾ ಮೆಡಿಕಲ್ ಕಾಲೇಜಿಗೆ ಸೇರಿ ವೈದ್ಯಕೀಯ ವಿದ್ಯೆಯನ್ನು ಪೂರೈಸಿ, ಮುಂದೆ ಸ್ತ್ರಿರೋಗ ತಜ್ಞೆಯಾಗಿ ಅವರು ಮಾಡಿದ ಸಾಧನೆ ಅತ್ಯಂತ ಶ್ಲಾಘನೀಯ. ವೈದ್ಯ ವೃತ್ತಿಯಲ್ಲಿದ್ದ ಅನೇಕರು ಕನ್ನಡದಲ್ಲಿ ಕೃತಿಗಳನ್ನು ರಚಿಸಿ ಪ್ರಸಿದ್ಧರಾಗಿದ್ದಾರೆ. ಆದರೆ ಡಾ. ರತೀದೇವಿಯವರ ಸಾಹಿತ್ಯ ಕೃಷಿಯ…
ಡಾ. ಸುಮಂತ ಶೆಣೈ ಇವರು ವೃತ್ತಿಯಲ್ಲಿ ಮೂಡಬಿದ್ರಿಯ ಆಳ್ವಾಸ್ ಆಯುರ್ವೇದ ಕಾಲೇಜಿನಲ್ಲಿ ವೈದ್ಯರು ಮತ್ತು ಉಪನ್ಯಾಸಕರು. ಮೂಲತಃ ಕಾರ್ಕಳ ತಾಲೂಕಿನ ಹೊಸ್ಮಾರಿನವರು. ಹೊಸ್ಮಾರಿನ ಶ್ರೀ ಸುದರ್ಶನ್ ಮತ್ತು ವಸುಧಾ ಶೆಣೈ ದಂಪತಿಗಳ ಸುಪುತ್ರರು. ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸ್ಮಾರು ಮತ್ತು ನಾರಾವಿ ಪ್ರೌಢಶಾಲೆಯಲ್ಲಿ ಪಡೆದು, ಪ. ಪೂರ್ವ ಶಿಕ್ಷಣವನ್ನು ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಪೂರೈಸಿ, ಆಯುರ್ವೇದ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯನ್ನು ಮೂಡುಬಿದಿರೆಯ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಪಡೆದಿರುತ್ತಾರೆ. ಆಯುರ್ವೇದದಲ್ಲಿ ದ್ರವ್ಯಗುಣ ವಿಭಾಗದಲ್ಲಿ ಪಿಎಚ್.ಡಿ ಪದವಿಯನ್ನು ರಾಜಸ್ಥಾನದ ಜೈಪುರದಲ್ಲಿರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಆಯುರ್ವೇದ ಇಲ್ಲಿ ಪೂರೈಸಿರುತ್ತಾರೆ. ಬಾಲ್ಯದಿಂದಲೇ ಕಲೆ, ಸಾಹಿತ್ಯ, ಸಂಗೀತದ ಕಡೆಗೆ ಒಲವಿದ್ದ ಇವರು ಕವಿತೆ ರಚನೆ, ಸುಗಮ ಸಂಗೀತ, ಭಕ್ತಿ ಸಂಗೀತಗಳ ಜೊತೆಗೆ ತಬಲಾ ಮತ್ತು ಹಾರ್ಮೋನಿಯಂ ಕಲಿಕೆಯಲ್ಲೂ ತಮ್ಮನ್ನು ತೊಡಗಿಸಿಕೊಂಡವರು. ತಮ್ಮ ಸಂಗೀತ ಶಿಕ್ಷಣವನ್ನು ಶ್ರೀ ಯೋಗೀಶ್ ಬಾಳಿಗಾ, ವೆಂಕಟೇಶ ಚಿಪ್ಳೂಣ್ಕರ್ ಹಾಗೂ ಶ್ರೀ ಸಂತೋಷ್…
ಮಡಿಕೇರಿ : ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ದಿನಾಂಕ : 27-06-2023ರಂದು ನಡೆದ ಕೊಡಗು ಪ್ರೆಸ್ ಕ್ಲಬ್ ನಿರ್ದೇಶಕ ಶ್ರೀ ಕೆ.ಆರ್. ಪ್ರಸಿನ್ ಗೌಡ ರಚಿತ ಚೊಚ್ಚಲ ಕೃತಿ ‘ಮನ ಮಾತದಾಗ’ ಬಿಡುಗಡೆ ಸಮಾರಂಭ ಜರಗಿತು. ಈ ಸಮಾರಂಭವನ್ನು ಉದ್ಘಾಟಿಸಿದ ಮಕ್ಕಳ ತಜ್ಞ ವೈದ್ಯ ಡಾ.ಬಿ.ಸಿ.ನವೀನ್ ಕುಮಾರ್ ಅವರು ಮಾತನಾಡಿ “ಪುಸ್ತಕಗಳು ಸಂವಹನ ಶೀಲತೆ, ಸಾಮಾಜಿಕ ಕಳಕಳಿ, ಕ್ರಿಯಾಶೀಲತೆ, ಸೃಜನಶೀಲತೆ ಮತ್ತು ಬುದ್ದಿಯ ಮಟ್ಟವನ್ನು ಹೆಚ್ಚಿಸುವ ಶಕ್ತಿಯನ್ನು ಹೊಂದಿದೆ. ಆದ್ದರಿಂದ ಪುಸ್ತಕಗಳ ಮಹತ್ವದ ಕುರಿತು ಬಾಲ್ಯದಿಂದಲೇ ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು. ಯಾವುದೇ ವೃತ್ತಿಯಲ್ಲಿ ತೊಡಗಿಸಿಕೊಂಡರೂ ಅಲ್ಲಿ ನಮ್ಮದೇ ಆದ ಹೆಜ್ಜೆಯನ್ನು ಮೂಡಿಸುವಂತಾಗಬೇಕು ಎಂಬುದು ಮಕ್ಕಳಿಗೆ ಮಾತ್ರವಲ್ಲ ಸಮಾಜಕ್ಕೂ ತಿಳುವಳಿಕೆ ಮೂಡಲು ಪುಸ್ತಕಗಳು ಹೆಚ್ಚು ಸಹಕಾರಿಯಾಗಲಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ. “ಸಮಾಜಕ್ಕಾಗಿ ತ್ಯಾಗ ಮಾಡಿದವರನ್ನು ಸದಾ ನೆನಪಿಸುವುದು ಪುಸ್ತಕಗಳು, ಹೊರ ಜಗತ್ತಿಗೆ ಸ್ನೇಹಿತನಂತಿರುವ ಪುಸ್ತಕಗಳೇ ಕಿಟಕಿಗಳು. ಆದ್ದರಿಂದ ಪುಸ್ತಕ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಪುಸ್ತಕ…
ಮಂಗಳೂರು : ಧ್ವನಿ ಬಳಗದವರಿಂದ ಪದವಿ ಪೂರ್ವ, ಪದವಿ ಹಂತ, ಸ್ನಾತಕೋತ್ತರ ಹಾಗೂ ಸಾರ್ವಜನಿಕರಿಗೆ ‘ಧ್ವನಿ ಕವನ ಸ್ಪರ್ಧೆ’ಯನ್ನು ಆಯೋಜಿಸಿದೆ. ಸ್ಪರ್ಧೆಗೆ ನೋಂದಾಯಿಸಿಕೊಳ್ಳಲು ಕೊನೆಯ ದಿನಾಂಕ : 20-07-2023 ಆಗಿರುತ್ತದೆ. ನಿಬಂಧನೆಗಳು : 1. ಸ್ಪರ್ಧೆಯು ಎರಡು ಹಂತಗಳಲ್ಲಿ ನಡೆಯಲಿರುವುದು 1) ಪದವಿ ಪೂರ್ವ ಮತ್ತು ಪದವಿ ವಿದ್ಯಾರ್ಥಿಗಳಿಗೆ 2) ಸ್ನಾತಕೋತ್ತರ ಮತ್ತು ಸಾರ್ವಜನಿಕ 2) ಕೈಪಿಡಿಯಲ್ಲಿ ನೀಡಿರುವ ಎರಡು ವಿಷಯಗಳಲ್ಲಿ ಒಂದು ವಿಷಯದ ಕುರಿತು ಹನ್ನೆರಡು ಸಾಲುಗಳ ಕವಿತೆ ರಚಿಸಬೇಕು ಪದವಿ ಪೂರ್ವ ಮತ್ತು ಪದವಿ ಹಂತ 1) ಚಿಗುರು 2) ಮಳೆ ಸ್ನಾತಕೋತ್ತರ ಮತ್ತು ಸಾರ್ವಜನಿಕ 1) ಅಂಬೆಗಾಲು 2) ಕೈತುತ್ತು 3) ಕವಿತೆಯನ್ನು ಕನ್ನಡ ಭಾಷೆಯಲ್ಲಿಯೇ ರಚಿಸಬೇಕು. ಕೃತಿ ಚೌರ್ಯ ಕಂಡುಬಂದಲ್ಲಿ ಕವಿತೆಯನ್ನು ಸರ್ಧೆಗೆ ಪರಿಗಣಿಸಲಾಗುವುದಿಲ್ಲ. 4) ಸ್ಪರ್ಧಿಯು ರಚಿಸಿದ ಕವಿತೆ ಈಗಾಗಲೇ ಯಾವುದೇ ಜಾಲತಾಣ ಮಾಧ್ಯಮಗಳಲ್ಲಿ ಪ್ರಕಟಗೊಂಡಿರಬಾರದು. 5) ಸ್ಪರ್ಧಿಯು ತಮ್ಮ ಕವಿತೆಯನ್ನು ಸಂಸ್ಥೆ ವತಿಯಿಂದ ಪಡೆದ ಕೈ ಪಿಡಿಯಲ್ಲಿಯೇ ಬಾಲ್ ಪೆನ್ ಬಳಸಿ ಬರೆಯಬೇಕು.…
ವಿದ್ಯಾಗಿರಿ : ಆಳ್ವಾಸ್ ಕಾಲೇಜಿನ ಸ್ನಾತಕ ಮತ್ತು ಸ್ನಾತಕೋತ್ತರ ಕನ್ನಡ ಹಾಗೂ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗಗಳು ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ದಿನಾಂಕ : 24-06-2023ರಂದು ‘ಘಾಂದ್ರುಕ್’ ಕಾದಂಬರಿ ಅವಲೋಕನ – ಸಂವಾದ ಕಾರ್ಯಕ್ರಮ ನಡೆಯಿತು. ‘ಘಾಂದ್ರುಕ್’ ಕಾದಂಬರಿ ಅವಲೋಕನ – ಸಂವಾದದಲ್ಲಿ ಕಾದಂಬರಿಕಾರ ಶ್ರೀ ಸತೀಶ್ ಚಪ್ಪರಿಕೆ ಮಾತನಾಡಿ “ಮನುಷ್ಯನಿಗೆ ಮನುಷ್ಯನಾಗಿ ಬದುಕಲು ಕಲಿಸದ ಧರ್ಮ ಯಾಕೆ? ಎಂಬುದು ‘ಘಾಂದ್ರುಕ್’ ಕೃತಿಯ ಒಳನೋಟವೂ ಹೌದು’ ಎಂದು ಹೇಳಿದರು. ಧರ್ಮ ಇಂದು ವ್ಯಾಪಾರಿ ಸರಕಾಗುತ್ತಿದೆ. ಮನುಕುಲದ ಉದ್ಧಾರಕ್ಕಾಗಿ ಬಳಕೆಯಾಗುತ್ತಿಲ್ಲ. ಒಕ್ಕಲೆಬ್ಬಿಸುವುದೂ ಹಿಂಸೆ. ಜಾಗತಿಕ ಮಟ್ಟದಲ್ಲಿ ಏನಾಗುತ್ತಿದೆ ಎಂದು ತಿಳಿದುಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಅವರು ಕಿವಿಮಾತು ಹೇಳಿದ ಅವರು ಮುಂದುವರಿದು ಕೃತಿಕಾರನ ಬದುಕು ಆತನ ಬರಹದಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಬಿಂಬಿತವಾಗಿರುತ್ತದೆ. ‘ಇಲ್ಲ’ ಎನ್ನುವುದಾದದರೆ, ಆತ ಸುಳ್ಳು ಹೇಳುತ್ತಿರಬಹುದು ಅಥವಾ ಬರಹ ಕದ್ದಿರಬಹುದು. ಪುಸ್ತಕದಷ್ಟು ದೊಡ್ಡ ಆಸ್ತಿ ಬೇರೆ ಇಲ್ಲ. ಪುಸ್ತಕ ಓದಿ. ಬರಹ ತೃಪ್ತಿ ನೀಡುತ್ತದೆ. ಬರೆಯಿರಿ, ಓದಿ. ನಿಮ್ಮ…
ಪ್ರೇಕ್ಷಕರ ಮನಸೂರೆಗೊಂಡ ಲಾವಣ್ಯ ಮಕ್ಕಳ ನಾಟಕ ತಂಡ ಪ್ರದರ್ಶಿಸಿದ ‘ಜುಂ ಜುಂ ಆನೆ ಮತ್ತು ಪುಟ್ಟಿ’, ನಾಟಕದ ರಚನೆ ವೈದೇಹಿ ಹಾಗೂ ನಿರ್ದೇಶನ ಗಣೇಶ್ ಕಾರಂತ್. ಪ್ರತಿ ವರ್ಷ ಲಾವಣ್ಯ ಕಲಾ ತಂಡ ಮಕ್ಕಳಿಗಾಗಿ ನಾಟಕ ರಂಗ ತರಬೇತಿ ಶಿಬಿರವನ್ನ ಆಯೋಜಿಸುತ್ತದೆ. ಹಲವಾರು ಶಾಲೆಯ ಮಕ್ಕಳು ಈ ತರಬೇತಿ ಶಿಬಿರದಲ್ಲಿ ಭಾಗವಹಿಸುತ್ತಾರೆ. ಕೂಡಿ ಕಲಿಯುವ ವಿಶೇಷ ಅನುಭವವನ್ನು ಪಡೆಯುತ್ತಾ ಕಲಿಕೆಗೆ ಪೂರಕವಾದಂತ ಸಾಕಷ್ಟು ಪಠ್ಯೇತರ ಚಟುವಟಿಕೆಗಳನ್ನು ಇಲ್ಲಿ ಪಡೆಯುತ್ತಾರೆ. ಲಾವಣ್ಯ ಬೈಂದೂರು ಪ್ರತಿ ವರ್ಷ ಮಕ್ಕಳಿಗೆ ಉಚಿತವಾಗಿ ರಂಗ ತರಬೇತಿಯನ್ನು ಆಯೋಜಿಸುತ್ತಾ ಹಲವಾರು ವರ್ಷಗಳಿಂದ ಜನರ ಪ್ರೀತಿಗೆ ಪಾತ್ರವಾದ ತಂಡವಾಗಿ ಗುರುತಿಸಿದೆ. ಈ ವರ್ಷ ತರಬೇತಿಯ ಜೊತೆಯಲ್ಲೇ ಪ್ರದರ್ಶನಗೊಂಡಂತಹ ನಾಟಕ ‘ಜುಮ್ ಜುಮ್ ಆನೆ ಮತ್ತು ಪುಟ್ಟಿ’. ಮಕ್ಕಳ ನಾಟಕ ರಂಗದ ಮೇಲೆ ಮಕ್ಕಳು ಹಬ್ಬದ ರೀತಿಯಲ್ಲಿ ಆಚರಿಸಬೇಕೆನ್ನುವುದು ಖ್ಯಾತ ರಂಗ ಚಿಂತಕ ಬಿ.ವಿ ಕಾರಂತರ ಅನಿಸಿಕೆ. ಗಣೇಶ್ ಕಾರಂತರು ಮತ್ತು ಜೊತೆಯಾಗಿ ಸಹಕರಿಸಿದ ರೋಶನ್ ಬೈಂದೂರು ಇವರು ಮಕ್ಕಳ ನಾಡಿಮಿಡಿತವನ್ನು…
ಮುಡಿಪು : ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕವು ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಹಯೋಗದೊಂದಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಂಬಲಪಾಡಿ ವ್ಯಾಸ ಬಲ್ಲಾಳ ಜಾನಕಿ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮವು ದಿನಾಂಕ : 28-06-2023 ರಂದು ಮಂಗಳೂರು ವಿವಿಯ ಯು.ಆರ್. ರಾವ್ ಸಭಾಂಗಣದಲ್ಲಿ ನಡೆಯಿತು. ಕಾಸರಗೋಡು ಸರಕಾರಿ ಸ್ನಾತಕೋತ್ತರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕಿ ಡಾ. ಯು. ಮಹೇಶ್ವರಿ ಇವರು ಸೇಡಿಯಾಪು ಕೃಷ್ಣ ಭಟ್ಟರ ಬದುಕು ಮತ್ತು ಸಾಹಿತ್ಯದ ಕುರಿತು ಮಾತನಾಡುತ್ತಾ “ಆರ್ಯ ದ್ರಾವಿಡ ಚಿಂತನೆ ಬ್ರಿಟಿಷರ ಒಡಕಿನ ರಾಜಕೀಯ ದಾಳದ ಸೃಷ್ಟಿ. ಇದನ್ನು ಭಾರತೀಯ ಪರಂಪರೆ ಮತ್ತು ಇತಿಹಾಸ ಸಾಕ್ಷ್ಯಗಳ ಬೆಳಕಿನಲ್ಲಿ ವಿಶ್ಲೇಷಿಸಿದವರು ಸೇಡಿಯಾಪು ಕೃಷ್ಣಭಟ್ಟರು. ಅವರ ತಥ್ಯದರ್ಶನ ಕೃತಿ ಇದನ್ನು ಅನಾವರಣ ಮಾಡಿದೆ. ಸೇಡಿಯಾಪು ಅವರು ಗಾಂಧೀವಾದಿಯಾಗಿ ಜೀವನದುದ್ದಕ್ಕೂ ನಡೆದು ಬಂದ ಹಾದಿ ವಿಶೇಷವಾದುದು. ದೇಶೀಯತೆಗೆ ಒತ್ತುಕೊಟ್ಟು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅವರ ಚಿಂತನೆ ನಮಗೆ ದಾರಿದೀಪ. ಗಡಿಪ್ರದೇಶದಲ್ಲಿ ಕನ್ನಡದ ಚಟುವಟಿಕೆಗಳಿಗೆ ಸಕ್ರಿಯತೆಯನ್ನು…