Subscribe to Updates
Get the latest creative news from FooBar about art, design and business.
Author: roovari
ಧಾರವಾಡ: ಗಿರಡ್ಡಿ ಗೋವಿಂದ ರಾಜ ಪ್ರತಿಷ್ಠಾನ ನೀಡುವ ಡಾ. ಗಿರಡ್ಡಿ ಗೋವಿಂದ ರಾಜ ವಿಮರ್ಶಾ ಪ್ರಶಸ್ತಿಗೆ ಪ್ರೊ. ರಾಜೇಂದ್ರ ಚೆನ್ನಿ ಇವರ ‘ಸಾಂಸ್ಕೃತಿಕ ರಾಜಕೀಯ’ ಕೃತಿ ಆಯ್ಕೆಯಾಗಿದೆ. ಪ್ರಶಸ್ತಿಯು ರೂಪಾಯಿ 25 ಸಾವಿರ ನಗದು ಬಹುಮಾನ, ಸ್ಮರಣಿಕೆ ಒಳಗೊಂಡಿದೆ. ಪ್ರಶಸ್ತಿಯನ್ನು ದಿನಾಂಕ 22 ಸೆಪ್ಟೆಂಬರ್ 2024ರಂದು ರಂಗಾಯಣದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು ಎಂದು ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಮಲ್ಲಿಕಾರ್ಜುನ ಹಿರೇಮಠ ತಿಳಿಸಿದ್ದಾರೆ.
ಹೂವಿನ ಹಡಗಲಿ : ಕರ್ನಾಟಕ ರಾಜ್ಯ ಬರಹಗಾರರ ಸಂಘ (ರಿ.) ಹೂವಿನ ಹಡಗಲಿ ಇದರ ವತಿಯಿಂದ ‘ಗಾನ ಕೋಗಿಲೆ’ ರಾಷ್ಟ್ರಮಟ್ಟದ ಪ್ರಶಸ್ತಿಗೆ ಹಾಡುಗಳನ್ನು ಆಹ್ವಾನಿಸಲಾಗುತ್ತಿದೆ. 2025ರಲ್ಲಿ ನಡೆಯುವ 5ನೇ ಕನ್ನಡ ನುಡಿವೈಭವ ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದ ಗಾನ ಕೋಗಿಲೆ ಪ್ರಶಸ್ತಿಗಾಗಿ ತಾವು ಹಾಡಿ ವೀಡಿಯೋ ಮಾಡಿದ ನಾಲ್ಕು ಹಾಡುಗಳನ್ನು ಕಳುಹಿಸಿ. 1. ಭಾವಗೀತೆ (ಕನ್ನಡ ಅಥವಾ ಹಿಂದಿ) 2. ಜಾನಪದ ಗೀತೆ (ಕನ್ನಡ ಅಥವಾ ಹಿಂದಿ) 3. ಚಲನಚಿತ್ರ ಗೀತೆ (ಕನ್ನಡ ಅಥವಾ ಹಿಂದಿ) 4. ರಂಗಗೀತೆ (ಕನ್ನಡ ಅಥವಾ ಹಿಂದಿ) ಈ ಮೇಲಿನಂತೆ ಹಾಡಿ ನಾಲ್ಕು ವೀಡಿಯೋಗಳನ್ನು 9902992912 ಈ ನಂಬರಿಗೆ ಕಳುಹಿಸಿ. ಆಡಿಯೋ ವೀಡಿಯೋ ಸ್ಪಷ್ಟವಾಗಿ ಇರಲಿ. ಯಾವುದೇ ವಯೋಮಾನದವರು ಇರಬಹುದು. ಕರೋಕೆ ಮತ್ತು ಸ್ವಂತವಾದ್ಯ ಬಳಸಬಹುದು. ನಾಲ್ಕು ಹಾಡುಗಳನ್ನು ಕಳುಹಿಸಲು ಕೊನೆಯ ದಿನಾಂಕ 30 ಅಕ್ಟೋಬರ್ 2024.
ಮಂಗಳೂರು : ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ), ರಂಗ ಅಧ್ಯಯನ ಕೇಂದ್ರ, ಅಸ್ತಿತ್ವ (ರಿ.) ಮಂಗಳೂರು, ಅರೆಹೊಳೆ ಪ್ರತಿಷ್ಠಾನ ಮತ್ತು ಜೆ.ಸಿ.ಐ. ಮಂಗಳೂರು ಲಾಲ್ ಬಾಗ್ ಇವರ ಸಹಭಾಗಿತ್ವದಲ್ಲಿ ‘ರಾಷ್ಟ್ರೀಯ ಬಹುಭಾಷಾ ರಂಗೋತ್ಸವ -2024’ವನ್ನು ದಿನಾಂಕ 14-09-2024ರಿಂದ 17-09-2024ರವರೆಗೆ ಮಂಗಳೂರಿನ ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ) ಇಲ್ಲಿ ಆಯೋಜಿಸಲಾಗಿದೆ. ದಿನಾಂಕ 14 ಸೆಪ್ಟೆಂಬರ್ 2024ರಂದು ಮೈಸೂರಿನ ಅನುಭೂತಿ ತಂಡದವರಿಂದ ‘ದೀಪಧಾರಿಣಿ’ ಕೊಂಕಣಿ ನಾಟಕ, ದಿನಾಂಕ 15 ಸೆಪ್ಟೆಂಬರ್ 2024ರಂದು ಉಡುಪಿಯ ನೃತ್ಯನಿಕೇತನ ಕೊಡವೂರು (ರಿ.) ಇವರಿಂದ ಕನ್ನಡ ನಾಟಕ ‘ನೃತ್ಯಗಾಥಾ’, ದಿನಾಂಕ 16 ಸೆಪ್ಟೆಂಬರ್ 2024ರಂದು ಪಾಂಡಿಚೇರಿಯ ಆದಿಶಕ್ತಿ ತಂಡದವರಿಂದ ‘ಉರ್ಮಿಳಾ’ ಇಂಗ್ಲೀಷ್ ನಾಟಕ ಮತ್ತು ದಿನಾಂಕ 17 ಸೆಪ್ಟೆಂಬರ್ 2024ರಂದು ಮೈಸೂರಿನ ನಿರ್ದಿಗಂತ ತಂಡದವರಿಂದ ‘ಮರ ಮತ್ತು ಮನುಷ್ಯ’ (ಪಪೆಟ್ ಶೋ) ಹಾಗೂ ‘ಬ್ಲಾಕ್ ಬಲೂನ್’ ಕನ್ನಡ ನಾಟಕ ಪ್ರದರ್ಶನ ನಡೆಯಲಿದೆ.
ಹಂಗಾರಕಟ್ಟೆ : ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಮತ್ತು ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಇವರ ಸಹಯೋಗದೊಂದಿಗೆ ಎರಡು ದಿನಗಳ ‘ಯಕ್ಷಗಾನ ಬಣ್ಣಗಾರಿಕೆ ಮತ್ತು ವೇಷಗಾರಿಕೆ ಕಾರ್ಯಾಗಾರ’ವನ್ನು ದಿನಾಂಕ 14-09-2024 ಮತ್ತು 15-09-2024ರಂದು ಬೆಳಗ್ಗೆ 10-00 ಗಂಟೆಗೆ ಹಂಗಾರಕಟ್ಟೆ ಐರೋಡಿಯ ಯಕ್ಷಗಾನ ಕಲಾಕೇಂದ್ರದ ಸದಾನಂದ ರಂಗ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 14 ಸೆಪ್ಟೆಂಬರ್ 2024ರಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಮಾಹೆಯ ಸಹ ಕುಲಪತಿಗಳಾದ ಡಾ. ಹೆಚ್.ಎಸ್. ಬಲ್ಲಾಳ್ ಇವರು ಈ ಕಾರ್ಯಕ್ರಮದ ಉದ್ಘಾಟನೆ ಮಾಡಲಿರುವರು. ಶ್ರೀ ಗಣೇಶ ಚೇರ್ಕಾಡಿ, ಶ್ರೀ ಗಣೇಶ ಜನ್ನಾಡಿ, ಶ್ರೀ ಮಿಥುನ್ ಬ್ರಹ್ಮಾವರ, ಶ್ರೀ ವೈಕುಂಠ ಹೇರ್ಳೆ, ಶ್ರೀ ಅಶೋಕ್ ಆಚಾರ್, ಶ್ರೀ ಕೂರಾಡಿ ರಾಮ ಬಾಯರಿ, ಶ್ರೀಕಾಂತ ವಡ್ಡರ್ಸ್, ಶ್ರೀ ಸೀತಾರಾಮ ಸೋಮಯಾಜಿ ಶ್ರೀ ವಿಭವನ್ ಗುಂಡ್ಕಿ ಇವರುಗಳು ಕಾರ್ಯಾಗಾರದಲ್ಲಿ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳಿಗೆ ಬಣ್ಣಗಾರಿಕೆ ಮತ್ತು ವೇಷಗಾರಿಕೆಯನ್ನು ಕಲಿಸಿಕೊಡುವ ಸಂಪನ್ಮೂಲ ವ್ಯಕ್ತಿಗಳು. ದಿನಾಂಕ 15 ಸೆಪ್ಟೆಂಬರ್…
ಬೆಂಗಳೂರು: ಸಾಹಿತಿ ಎಂ. ವಿ. ಸೀತಾರಾಮಯ್ಯ(ರಾಘವ) ಮತ್ತು ಪೂರ್ಣಚಂದ್ರ ತೇಜಸ್ವಿ ಇವರ ಜನ್ಮದಿನಾಚಾರಣೆಯನ್ನು ದಿನಾಂಕ 09 ಸೆಪ್ಟೆಂಬರ್ 2024 ರಂದು ಬೆಂಗಳೂರಿನಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸಾಹಿತಿಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ನಾಡೋಜ ಡಾ. ಮಹೇಶ ಜೋಶಿ “ಕನ್ನಡ ಸಾಹಿತ್ಯಕ್ಕೆ ಎಂ. ವಿ. ಸೀ. ಭದ್ರ ಬುನಾದಿ ಹಾಕಿದರೆ ತೇಜಸ್ವಿ ಘನತೆಯನ್ನು ನೀಡಿದರು. ತೇಜಸ್ವಿಯವರು ಕಥೆಗಾರರಾಗಿ ಪಡೆದ ಪ್ರಸಿದ್ಧಿಯ ಜೊತೆಗೆ, ಕೃಷಿ ಕ್ಷೇತ್ರದಲ್ಲಿ ಕಾಲಿಟ್ಟು ಪರಿಸರ ಜ್ಞಾನದ ಬಗ್ಗೆ ಅನನ್ಯ ಕಾಳಜಿ ತೋರಿದವರು. ಕನ್ನಡದಲ್ಲಿ ಬಿ. ಎ. ಆನರ್ಸ್ ಮತ್ತು ಎಂ. ಎ. ಪದವಿಗಳನ್ನು ಪಡೆದ ನಂತರ ಸ್ವತಂತ್ರ ಪ್ರವೃತ್ತಿಯ ಅವರು ಅಧ್ಯಾಪಕರಾಗಲು ಇಚ್ಛಿಸದೆ ಚಿಕ್ಕಮಗಳೂರಿನ ಮೂಡಿಗೆರೆಯ ಪರಿಸರದ ಕೃಷಿ ತೋಟದಲ್ಲಿ ಆಸಕ್ತಿ ತಳೆದು ನೆಲೆಸಿದರು.‘ಸ್ವಗತ ಲಹರಿ ಮತ್ತು ಇತರ ಕವನಗಳು’ ಕವಿತೆಗಳ ಸಂಗ್ರಹವಾದರೆ, ‘ಹುಲಿಯೂರಿನ ಸರಹದ್ದು’, ‘ಅಬಚೂರಿನ ಪೋಸ್ಟಾಫೀಸು’, ‘ಕಿರಗೂರಿನ ಗಯ್ಯಾಳಿಗಳು’, ‘ಏರೋಪ್ಲೇನ್ ಚಿಟ್ಟೆ’, ‘ಮಿಸ್ಸಿಂಗ್ ಲಿಂಕ್’, ‘ಮಿಲೇನಿಯಂ ಸರಣಿ’, ‘ಪರಿಸರದ ಕತೆ’ ಇವು…
ಧಾರವಾಡ : ಕರ್ನಾಟಕ ಕಲಾ ಮಹಾವಿದ್ಯಾಲಯ ಧಾರವಾಡ, ಸಂತೋಷ ಲಾಡ ಫೌಂಡೇಶನ್ ಹಾಗೂ ಶರ್ವಿಲ್ ಪ್ರಕಾಶನ ಇವರ ಸಂಯುಕ್ತ ಆಶ್ರಯದಲ್ಲಿ ಯುವಲೇಖಕ ಶ್ರೀ ಕರಣ್ ಲಾಡ ಇವರ ‘ಗ್ಲಿಚ್ ಇನ್ ದ ಸಿಮುಲೇಶನ್’ ಗ್ರಂಥದ ಕನ್ನಡ ಅನುವಾದ ‘ಪ್ರತ್ಯನುಕರಣೆಯ ನ್ಯೂನತೆಗಳು’ ಎಂಬ ಕೃತಿಯ ಬಿಡುಗಡೆ ಸಮಾರಂಭವನ್ನು ದಿನಾಂಕ 11 ಸೆಪ್ಟೆಂಬರ್ 2024ರ ಬುಧವಾರ ಬೆಳಿಗ್ಗೆ 11-00 ಗಂಟೆಗೆ ಧಾರವಾಡದ ಕರ್ನಾಟಕ ಕಲಾ ಮಹಾವಿದ್ಯಾಲಯದ ಆವರಣದಲ್ಲಿರುವ ಸೃಜನಾ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಸಮಾರಂಭದ ದಿವ್ಯಸನ್ನಿಧಾನವನ್ನು ಪರಮಪೂಜ್ಯ ಶ್ರೀ ತೋಂಟದ ನಿಜಗುಣಪ್ರಭು ಮಹಾಸ್ವಾಮಿಗಳು ವಹಿಸಿಕೊಳ್ಳಲಿದ್ದು, ಪುಸ್ತಕವನ್ನು ಡಾ. ವೀರಣ್ಣ ರಾಜೂರ ಇವರು ಬಿಡುಗಡೆಗೊಳಿಸಲಿದ್ದಾರೆ. ಪುಸ್ತಕ ಪರಿಚಯವನ್ನು ಕರ್ನಾಟಕ ವಿಶ್ವವಿದ್ಯಾಲಯದ ತತ್ವಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಎಂ.ಪಿ. ರಮೇಶ ಇವರು ನಿರ್ವಹಿಸಲಿದ್ದು, ಮೂಲ ಲೇಖಕ ಶ್ರೀ ಕರಣ್ ಲಾಡ ಇವರೊಂದಿಗೆ ಅನುವಾದಕರಾದ ಡಾ. ವಿನಾಯಕ ನಾಯಕ ಮತ್ತು ಡಾ. ಲೋಹಿತ ನಾಯ್ಕರ ಭಾಗವಹಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಸಂತೋಷ ಲಾಡ ಫೌಂಡೇಶನ್ ಸಂಸ್ಥಾಪಕರಾದ ಮಾನ್ಯಶ್ರೀ ಸಂತೋಷ ಲಾಡ ವಹಿಸಿಕೊಳ್ಳಲಿದ್ದಾರೆ.…
ಉಪ್ಪಿನಕುದ್ರು : ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ವತಿಯಿಂದ 2024ರ ವಿನೂತನ ಕಾರ್ಯಕ್ರಮ ಸರಣಿಯ ಸೆಪ್ಟೆಂಬರ್ ತಿಂಗಳ ಕಾರ್ಯಕ್ರಮದಲ್ಲಿ ನಾಡ ಗುಡ್ಡೆಯಂಗಡಿಯ ಶ್ರೀಧರ್ ನಾಯಕ್ ಹಾಗೂ ತಂಡದವರಿಂದ ‘ವೇಣು ವಾದನ’ವನ್ನು ದಿನಾಂಕ 15-09-2024ರಂದು ಸಂಜೆ 4-00 ಗಂಟೆಗೆ ಉಪ್ಪಿನಕುದ್ರು ಗೊಂಬೆ ಮನೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಶಿವಮೊಗ್ಗ : ಬಹುಮುಖಿ ಶಿವಮೊಗ್ಗ ಇದರ ವತಿಯಿಂದ ಪತ್ರಕರ್ತ, ಲೇಖಕರು, ಸಾಮಾಜಿಕ ಹೋರಾಟಗಾರರಾದ ಶ್ರೀ ಎನ್. ರವಿಕುಮಾರ್ ಇವರಿಂದ ಉಪನ್ಯಾಸ ಕಾರ್ಯಕ್ರಮವನ್ನು ದಿನಾಂಕ 11 ಸೆಪ್ಟೆಂಬರ್ 2024ರಂದು ಸಂಜೆ 5-00 ಗಂಟೆಗೆ ಶಿವಮೊಗ್ಗದ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಫ್ರೆಂಡ್ ಸೆಂಟರ್ ಇಲ್ಲಿ ಆಯೋಜಿಸಲಾಗಿದೆ. ಬಹುಮುಖಿ : ಸಮಾನ ಮನಸ್ಕರ ಒಂದು ಮುಕ್ತ ವೇದಿಕೆ. ಯಾವುದೇ ಇಸಂ ಹಾಗೂ ಪಂಥಕ್ಕೆ ಜೋತು ಬೀಳದೆ ಎಲ್ಲಾ ವಿಚಾರಧಾರೆಗಳನ್ನು ಮುಕ್ತ ಮನಸ್ಸಿನಿಂದ ಅರ್ಥೈಸುವ ಹಾಗೂ ಚರ್ಚಿಸುವ ಒಂದು ಸಂದರ್ಭ. ಇಲ್ಲಿ ಯಾವುದೇ ಹಾರ ತುರಾಯಿಗಳಿಲ್ಲದೆ ನೇರವಾಗಿ ವಿಷಯವನ್ನು ಪ್ರವೇಶಿಸುವ ಪ್ರಯತ್ನ. ತಿಂಗಳಿಗೆ ಕನಿಷ್ಠ ಒಂದಾದರೂ ಕಾರ್ಯಕ್ರಮ ಆಯೋಜಿಸುವ ಹಂಬಲ. ಅದು ಉಪನ್ಯಾಸ, ಪ್ರಾತ್ಯಕ್ಷಿಕೆ, ಚರ್ಚೆ, ಸಿನಿಮಾ ಪ್ರದರ್ಶನ, ರಂಗ ಪ್ರಯೋಗಗಳ ವಿಮರ್ಶೆ, ಪ್ರಚಲಿತ ವಿದ್ಯಮಾನ, ಸಾಹಿತ್ಯ, ಸಂಸ್ಕೃತಿ, ರಾಜಕೀಯ… ಹೀಗೆ ಯಾವುದೇ ವಿಷಯವಾಗಿರಬಹುದು. ಹೆಚ್ಚಿನ ಮಾಹಿತಿಗಾಗಿ : 9449284495, 9845014229, 95380 20367
ಮಂಗಳೂರು : ಮಂಗಳೂರಿನ ಬೋಳೂರಿನಲ್ಲಿರುವ ಶ್ರೀ ಅಮೃತಾನಂದಮಯಿ ಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ದಿನಾಂಕ 26 ಆಗಸ್ಟ್ 2024ರಂದು ಜರಗಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಲಾವಿದೆ ವಿದುಷಿ ಅಯನಾ ಪೆರ್ಲ ಇವರ ಶ್ರೀಕೃಷ್ಣನ ಕುರಿತ ವಿಶೇಷ ಭರತನಾಟ್ಯ ಕಾರ್ಯಕ್ರಮ ಜನಮನ ರಂಜಿಸಿತು. ‘ಶ್ರೀಕೃಷ್ಣ ಲೀಲಾತರಂಗಿಣಿ’ಯಿಂದ ಆಯ್ದ ‘ದಿವ್ಯ ಗೋವೃಂದಗಳು’ ಎಂಬ ಭಾಗವನ್ನು ತನ್ನ ನೃತ್ಯಪ್ರಸ್ತುತಿಗೆ ಅಯನಾ ಪೆರ್ಲ ಆಯ್ದುಕೊಂಡಿದ್ದರು. ಶ್ರೀಕೃಷ್ಣನಿಗೆ ಗೋವುಗಳೊಂದಿಗೆ ಇರುವ ಸಂಬಂಧ, ಒಡನಾಟ ಮತ್ತು ಆ ಮೂಲಕ ಗೋಪಿಕಾ ಸ್ತ್ರೀಯರ ಗೆಳೆತನ ಮೊದಲಾದ ಭಾಗವನ್ನು ವಿವಿಧ ನೃತ್ತಭಂಗಿ, ಲಾಸ್ಯಭರಿತ ನೃತ್ಯ ಹಾಗೂ ಭಾವಪೂರ್ಣ ಅಭಿನಯಗಳೊಂದಿಗೆ ಅಯನಾ ಪೆರ್ಲ ಮನೋಜ್ಞವಾಗಿ ಪ್ರಸ್ತುತಪಡಿಸಿದರು. ರಾಗಮಾಲಿಕೆ, ತಾಳಮಾಲಿಕೆಯಲ್ಲಿರುವ ಈ ರಚನೆಗೆ ಖ್ಯಾತ ಅಭಿನೇತ್ರಿ ದೆಹಲಿಯ ವಿದುಷಿ ರಮಾ ವೈದ್ಯನಾಥನ್ ನೃತ್ಯಸಂಯೋಜನೆ ಮಾಡಿದ್ದಾರೆ. ಅನಂತರ ಅಯನಾ ಇವರು ದಾಸರ ಪದ ‘ಕಡೆಗೋಲ ತಾರೆನ್ನ ಚಿಣ್ಣವೇ’ ಎಂಬುದನ್ನು ಭಾವಪೂರ್ಣವಾಗಿ ಅಭಿನಯಿಸಿದರು. ಯಶೋದೆ ಮತ್ತು ಕೃಷ್ಣನ ನಡುವಿನ ಪ್ರೀತಿಯ ಆಟ – ಜಗಳ, ಆಕೆಯ ವಾತ್ಸಲ್ಯ ಮತ್ತು ಪ್ರೇಮಗಳು…
ಶಿವಮೊಗ್ಗ : ಕರ್ನಾಟಕ ಸಂಘ (ರಿ) ಶಿವಮೊಗ್ಗ ಇದರ ವತಿಯಿಂದ ಮಹಿಳಾ ಲೇಖಕರು ಪ್ರಕಾರಕ್ಕಾಗಿ ನೀಡುವ ‘ಎಂ.ಕೆ. ಇಂದಿರಾ ಪುಸ್ತಕ ಬಹುಮಾನ’ವನ್ನು ಘೋಷಿಸಿದೆ. ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಅವರ ‘ಇರವಿನ ಅರಿವು’ ವಿಮರ್ಶಾ ಕೃತಿಯು ‘ಎಂ.ಕೆ. ಇಂದಿರಾ ಪ್ರಶಸ್ತಿ’ಗೆ ಪಾತ್ರವಾಗಿದೆ. ಪ್ರಶಸ್ತಿಯು ಹತ್ತು ಸಾವಿರ ರೂಪಾಯಿ ನಗದು, ಪ್ರಶಸ್ತಿಪತ್ರ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದ್ದು, ದಿನಾಂಕ 22 ಸೆಪ್ಟೆಂಬರ್ 2024ರಂದು ಸಂಜೆ ಗಂಟೆ 5-30ಕ್ಕೆ ಶಿವಮೊಗ್ಗದಲ್ಲಿ ಪುಸ್ತಕ ಬಹುಮಾನ ಪ್ರದಾನ ಸಮಾರಂಭವು ನಡೆಯಲಿದೆ. ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಇವರು ಸಾಹಿತ್ಯದ ಕಾವ್ಯ , ಕತೆ, ನಾಟಕ, ವಿಮರ್ಶೆ, ಅಂಕಣ ಬರಹ, ಅನುವಾದ, ಸಂಶೋಧನೆ ಮಂತಾದ ಪ್ರಕಾರಗಳಲ್ಲಿ ಈಗಾಗಲೇ ಸುಮಾರು 30ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ‘ಕಾಯಕಾವ್ಯ’, ‘ಅವನು ಹೆಣ್ಣಾಗಬೇಕು’ ಹಾಗೂ ‘ನಕ್ಷತ್ರ ನಕ್ಕ ರಾತ್ರಿ’ ಮುಂತಾದ ಕವನ ಸಂಗ್ರಹಗಳು, ‘ತೊಗಲು ಗೊಂಬೆ’ ಕಾದಂಬರಿ, ‘ಇರವಿನ ಅರಿವು’ ಮತ್ತು ‘ಮೊಗ್ಗಿನ ಮಾತು’, ಮುಂತಾದವು ಇವರ ಕೆಲವು ಕೃತಿಗಳು. ಕನಕದಾಸರ ಕೀರ್ತನೆಗಳನ್ನು ಮತ್ತು ವಚನಗಳನ್ನು…