Subscribe to Updates
Get the latest creative news from FooBar about art, design and business.
Author: roovari
18 ಏಪ್ರಿಲ್ 2023, ಮಂಗಳೂರು: ಮಕ್ಕಳ ಬೇಸಿಗೆ ರಜೆಯನ್ನು ಸದುಪಯೋಗಗೊಳಿಸಲು ಕಲಾಭಿ ಹಾಗೂ ಕೆನರಾ ಕಲ್ಚರಲ್ ಅಕಾಡೆಮಿ ಇವರ ವತಿಯಿಂದ ಕೆನರಾ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆ ಕೊಡಿಯಾಲ್ ಬೈಲ್ ನಲ್ಲಿ “ಅರಳು” ಎಂಬ ಹತ್ತು ದಿನಗಳ ವೃತ್ತಿಪರ ರಂಗಭೂಮಿ ಆಯೋಜಿಸಿದ್ದು, ದಿನಾಂಕ 16.04.2023 ರವಿವಾರದಂದು ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಹಾಗೂ ಡಾ.ಶ್ರೀಪಾದ್ ಭಟ್ ಇದನ್ನು ಉದ್ಘಾಟಿಸಿದರು. ಕೆನರಾ ಹೈಸ್ಕೂಲ್ ಅಸೋಸಿಯೇಷನ್ ಕಾರ್ಯದರ್ಶಿ ಎಂ. ರಂಗನಾಥ್ ಭಟ್, ಜೊತೆ ಕಾರ್ಯದರ್ಶಿ ಸುರೇಶ ಕಾಮತ್, ಮುಖ್ಯೋಪಾಧ್ಯಾಯರು ಕವಿತಾ ಮೌರ್ಯ, ಪಿ.ಆರ್.ಒ. ಉಜ್ವಲ್ ಮಲ್ಯ, ಗೌರವ ಸಲಹೆಗಾರರು ಡಾ.ಎಂ. ದಾಮೋದರ ಶೆಟ್ಟಿ, ಸಂಸ್ಥೆಯ ಗೌರವಾಧ್ಯಕ್ಷರು ಸುರೇಶ್ ಬಿ. ವರ್ಕಾಡಿ ಇವರು ಉದ್ಘಾಟನೆಯಲ್ಲಿ ಉಪಸ್ಥಿತರಿದ್ದರು. ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಹಾಗೂ ಡಾ. ಶ್ರೀಪಾದ್ ಭಟ್ ತಮ್ಮ ಮಾತಿನ ಮೂಲಕ ಮಕ್ಕಳು ಹಾಗೂ ಅವರ ಪೋಷಕರಲ್ಲಿ ರಂಗಭೂಮಿಯ ಅಭಿರುಚಿ ಮೂಡಿಸಿದರು ಮತ್ತು ಪೋಷಕರೊಂದಿಗೆ ಸಂವಾದ ಕೂಡ ನಡೆಸಿದರು. ನಂತರ ಮಂಗಳೂರಿನ ಜರ್ನಿ ಥಿಯೇಟರ್ ತಂಡದಿಂದ ರಂಗ…
18 ಏಪ್ರಿಲ್ 2023, ಬೆಂಗಳೂರು: ತೊ.ನಂಜುಂಡಸ್ವಾಮಿ ಗೆಳೆಯರ ಬಳಗ ಇದರ ವತಿಯಿಂದ ನಡೆದ ತೊ.ನಂಜುಂಡಸ್ವಾಮಿ ನೆನಪಿನ ಪ್ರಶಸ್ತಿ ಪ್ರದಾನ ಸಮಾರಂಭವು ಬೆಂಗಳೂರಿನ ಉಳ್ಳಾಲ ಗ್ರಾಮದ ನಯನ ರಂಗಮಂದಿರದಲ್ಲಿ ದಿನಾಂಕ 15.04.2023ರಂದು ನಡೆಯಿತು. ಹಿರಿಯ ರಂಗಕರ್ಮಿ, ಬೆಳಕು ತಜ್ಞ ಹಾಗೂ ರಂಗಸಂಘಟಕ ಶ್ರೀ ಚಂದ್ರಕುಮಾರ್ ಸಿಂಗ್ ಅವರಿಗೆ ಈ ಪ್ರಶಸ್ತಿಯನ್ನು ನೀಡಿ ಅಭಿನಂದಿಸಲಾಯಿತು. ಶ್ರೀ ಪಂಡಿತಾರಾಧ್ಯ ಸ್ವಾಮಿಗಳು, ಸಾಣೇಹಳ್ಳಿ ಅವರ ಸಾನಿಧ್ಯ ಮತ್ತು ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ತೊ.ನಂಜುಂಡಸ್ವಾಮಿ ಅವರ ಶ್ರೀಮತಿಯವರಾದ ಶ್ರೀಮತಿ ಬಿ. ಜಯಮ್ಮ ಅವರಿಗೆ ರಂಗ ಗೌರವವನ್ನು ನೀಡಿ ಅಭಿನಂದಿಸಲಾಯಿತು. ಅನಿವಾರ್ಯ ಕಾರಣದಿಂದ ಕಾರ್ಯಕ್ರಮಕ್ಕೆ ಬರಲಾಗದ ಡಾ.ಸಿ ಎನ್ ಮಂಜುನಾಥ್ ಅವರು ಕಳುಹಿಸಿದ್ದ ತೊ.ನಂಜುಂಡಸ್ವಾಮಿ ಅವರ ಕುರಿತಾದ ಸಂದೇಶವನ್ನು ಸಭೆಯಲ್ಲಿ ಓದಲಾಯಿತು. ಡಾ. ಜಿ.ಟಿ. ಸುಭಾಶ್, ಶಶಿಧರ ಅಡಪ, ಶ್ರೀನಿವಾಸ್ ಜಿ. ಕಪ್ಪಣ್ಣ ಅವರುಗಳು ಮುಖ್ಯ ಅತಿಥಿಯಾಗಿ ಭಾಗವಹಿಸಿ, ತೊ.ನಂಜುಂಡಸ್ವಾಮಿ ಅವರ ಸಂಘಟನೆಯ ಕಾರ್ಯಗಳನ್ನು, ರಂಗಭೂಮಿಗೆ ಅವರು ಮಾಡಿದ ವೈದ್ಯಕೀಯ ಸೇವೆಗಳನ್ನು ನೆನಪಿಸಿದರು. ರಂಗಚಂದಿರ ಚಂದ್ರು ಅವರು ಸ್ವಾಗತ ಕೋರಿದರು.…
18 ಏಪ್ರಿಲ್ 2023, ಉಡುಪಿ: ತಲ್ಲೂರು ಫ್ಯಾಮಿಲಿ ಟ್ರಸ್ಟ್ ಉಡುಪಿ ಆಶ್ರಯದಲ್ಲಿ ಕರ್ನಾಟಕ ಜಾನಪದ ಪರಿಷತ್ ಉಡುಪಿ ಜಿಲ್ಲೆ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಭೂಮಿಕಾ ಹಾರಾಡಿ ಸಹಕಾರದಲ್ಲಿ ದಿನಾಂಕ 13-04-2023 ಗುರುವಾರದಂದು ಬ್ರಹ್ಮಾವರ ಎಸ್‌ಎಂಎಸ್ ಕಾಲೇಜಿನ ಮಕ್ಕಳ ಮಂಟಪದಲ್ಲಿ ನಡೆದ ನಾಡಿನ ಜಾನಪದ ಕಲೆಗಳ ಅನಾವರಣ `ಜಾನಪದ ವೈಭವ ‘ ಕಾರ್ಯಕ್ರಮ ಅಪಾರ ಜನಾಕರ್ಷಣೆ ಪಡೆಯಿತು. ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಸರ್ವೋತ್ತಮ ಗಾಣಿಗ ಹಾರಾಡಿ ಅವರಿಗೆ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಉಡುಪಿ ವತಿಯಿಂದ `ಜಾನಪದ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ತಲ್ಲೂರು ಫ್ಯಾಮಿಲಿ ಟ್ರಸ್ಟಿನ ಪ್ರವರ್ತಕ ಹಾಗೂ ಕರ್ನಾಟಕ ಜಾನಪದ ಪರಿಷತ್‌ನ ಉಡುಪಿ ಜಿಲ್ಲಾಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ಮಾತನಾಡಿ, “ಯಕ್ಷಗಾನ ಕ್ಷೇತ್ರಕ್ಕೆ ಹಾರಾಡಿ ಮನೆತನದ ಕೊಡುಗೆ ಅಪಾರ. ಹಾರಾಡಿ ಮನೆತನದ ಕೊನೆಯ ಕೊಂಡಿ ಸರ್ವೋತ್ತಮ ಗಾಣಿಗ ಅವರಿಗೆ ಜಾನಪದ ಪ್ರಶಸ್ತಿ ನೀಡುತ್ತಿರುವುದು ಸಂತೋಷ ತಂದಿದೆ ಎಂದರು. ನಾಡಿನ ಜಾನಪದ ಕಲೆಗಳು…
18 ಎಪ್ರಿಲ್ 2023, ಮೂಡುಬಿದಿರೆ: ಮೂಡುಬಿದಿರೆಯು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಪ್ರಸಿದ್ಧಿ ಹೊಂದುವಲ್ಲಿ ಡಾ. ಎಲ್.ಸಿ ಸೋನ್ಸ್ ಅವರ ಕೊಡುಗೆಯೂ ಮಹತ್ವದ್ದಾಗಿದೆ. ಕೃಷಿಕರು ಕೂಡಾ ಹೇಗೆ ಗೌರವಯುತವಾಗಿ ಬದುಕಬಹುದೆಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಪರಿಸರದ ಕುರಿತಾಗಿ ವಿಶೇಷ ಕಾಳಜಿ ಹೊಂದಿದ್ದ ಸೋನ್ಸ್ ಅವರು ಜಾತಿ ಮತ ಪಂಥವನ್ನು ಮೀರಿ ಬೆಳೆದ ರೀತಿ ಎಲ್ಲರಿಗೂ ಆದರ್ಶಪ್ರಾಯವಾದುದು ಎಂಬುದಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ.ಮೋಹನ ಆಳ್ವ ಅವರು ಇಲ್ಲಿ ಮಾತನಾಡುತ್ತಾ ತಿಳಿಸಿದರು. ಮೂಡುಬಿದಿರೆಯ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದ ರತ್ನಾಕರವರ್ಣಿ ಸಭಾಂಗಣದಲ್ಲಿ ಡಾ. ಎಲ್.ಸಿ.ಸೋನ್ಸ್ ಅಭಿಮಾನಿ ಬಳಗ, ಮೂಡುಬಿದಿರೆ ಇದರ ಮತಿಯಿಂದ ನಡೆದ ಸಾರ್ವಜನಿಕ ಶ್ರದ್ಧಾಂಜಲಿ ಸಭೆ ಹಾಗೂ ಕೃತಿ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಡಾ. ನರೇಂದ್ರ ರೈ ದೇರ್ಲ ಅವರ “ ಎಲ್.ಸಿ.ಸೋನ್ಸ್ ಸೃಷ್ಟಿಸಿದ ಫಲ ಪ್ರಪಂಚ ಸೋನ್ಸ್ ಫಾರ್ಮ್” ಎಂಬ ಕೃತಿಯನ್ನು ಮೂಡುಬಿದಿರೆ ಜೈನಮಠದ ಜಗದ್ಗುರು ಸ್ವಸ್ತಿಶ್ರೀ ಡಾ. ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳು ಬಿಡುಗಡೆಗೊಳಿಸಿ…
18.04.1997 ರಂದು ಕೆ.ಗುಂಡು ನಾಯ್ಕ ಹಾಗೂ ಕಾವೇರಿ ಇವರ ಮಗನಾಗಿ ದಿನೇಶ್ ನಾಯ್ಕ ಕನ್ನಾರು ಅವರ ಜನನ. ಕರೆಸ್ಪಾಂಡೆನ್ಸ್ ನಲ್ಲಿ ಡಿಗ್ರಿಯ ಜೊತೆಗೆ ಮೇಳದ ತಿರುಗಾಟವನ್ನು ಮುಗಿಸಿ ಪ್ರಸ್ತುತ ಉಡುಪಿಯ ತೆಂಕನಿಡಿಯೂರಿನ Government First Grade collage ನಲ್ಲಿ M.S.W ವ್ಯಾಸಂಗ ಮಾಡುತ್ತಿದ್ದಾರೆ. ಗಣೇಶ್ ನಾಯ್ಕ ಚೇರ್ಕಾಡಿ ಹೆಜ್ಜೆಗಾರಿಕೆಯ ಗುರುಗಳು, ಡಾ.ರವಿ ಕುಮಾರ್ ಸೂರಾಲು ಕೈ ತಾಳದ ಗುರುಗಳು, ಉದಯ ಕುಮಾರ್ ಹೊಸಾಳ ಭಾಗವತಿಕೆಯ ಗುರುಗಳು. ತಂದೆಯವರ ವೇಷ ನೋಡಿ ಪ್ರೇರಣೆಗೊಂಡು ಯಕ್ಷಗಾನ ರಂಗಕ್ಕೆ ಬಂದರು. ೭ನೇ ತರಗತಿಯ ರಜೆಯಲ್ಲಿ ಕನ್ನಾರಿನಲ್ಲಿ ಹೆಜ್ಜೆ ಕಲಿತು, ಆ ಬಳಿಕ ಕೆಲವು ವೇಷಗಳನ್ನು ಮಾಡಿ ಪಿ.ಯು.ಸಿ ರಜೆಯಲ್ಲಿ ೨ ತಿಂಗಳು ಮಂದಾರ್ತಿ ಮೇಳಕ್ಕೆ ವೇಷ ಮಾಡುವುದನ್ನು ಕಲಿಯುವುದಕ್ಕೆ ದೊಡ್ಡಪ್ಪ ಬುಕ್ಕಿಗುಡ್ಡೆ ಮಹಾಬಲ ನಾಯ್ಕ ಜೊತೆಗೆ ಹೋದೆ. ಆಗ ಪುಂಡುವೇಷದ ಬಗ್ಗೆ ಆಸಕ್ತಿಯಾಯಿತು, ವಿಶ್ವನಾಥ್ ಆಚಾರ್ಯ ತೊಂಬಟ್ಟು ಅವರ ನಾಟ್ಯಕ್ಕೆ ಪ್ರೇರಣೆಗೊಂಡು ಅವರ ಹಾಗೆ ವೇಷಧಾರಿಯಾಗಿ, ಪ್ರಜ್ವಲ್ ಕುಮಾರ್ ಗುರುವಾಯನಕೆರೆ ಹಾಗೆ All Rounder ಕಲಾವಿದನಾಗಬೇಕು…
17-04-2023,ಮಂಗಳೂರು: ವಿಶ್ವಕಲಾ ದಿನಾಚರಣೆಯ ಅಂಗವಾಗಿ ನಗರದ ಬೊಕ್ಕಪಟ್ಟಣದ ಸಮೀಪ ನದಿ ಕಿನಾರೆಯಲ್ಲಿ ದಿನಾಂಕ 15-04-2023 ಶನಿವಾರ ಬೆಳಗ್ಗೆಯಿಂದ ಸಂಜೆ ವರೆಗೆ ಆಶು ಚಿತ್ರ ಕಲಾಶಿಬಿರ ಏರ್ಪಡಿಸಲಾಗಿತ್ತು. ಉದ್ಘಾಟಕರಾಗಿದ್ದ ಮಂಗಳೂರು ವಿಶ್ವವಿದ್ಯಾಲಯ ಮಾಜಿ ಕುಲಸಚಿವ (ಪರೀಕ್ಷಾಂಗ) ಪ್ರೊ|ಪಿ.ಎಲ್ ಧರ್ಮ ಅವರು ಮಾತನಾಡಿ, ಕರಾವಳಿ ಚಿತ್ರಕಲಾ ಚಾವಡಿ ಕಳೆದ 30 ವರ್ಷಗಳಿಂದ ನಿರಂತರ ಮಂಗಳೂರಿನ ಜನತೆಗೆ ನೂರಾರು ಚಿತ್ರಕಲಾ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾ ಬಂದಿರುವುದು ಶ್ಲಾಘನೀಯ ಮತ್ತು ಇತರ ಸಂಘ ಸಂಸ್ಥೆಗಳಿಗೆ ಆದರ್ಶವಾಗಿದ್ದಾರೆ ಎಂದರು. ವಿಶ್ವಕಲಾ ದಿನಾಚರಣೆಯನ್ನು ಇಡೀ ಜಗತ್ತಿನ ಕಲಾವಿದರು ಆಚರಿಸುತ್ತಿರುವಾಗ ಮಂಗಳೂರಿನ ಕಲಾವಿದರು ಸ್ಥಳದಲ್ಲೇ ಚಿತ್ರರಚನೆ ಮಾಡುವಂತದ್ದು ಕಲಾವಿದರು. ವೈಯಕ್ತಿಕವಾಗಿ ಬೆಳೆಯಲು ಮತ್ತು ಸಮಾಜಕ್ಕೆ ಸಮಾಜದ ಜನರಿಗೆ ಚಿತ್ರಕಲೆಯ ಪರಿಚಯ ನೀಡಿದಂತಾಗುತ್ತದೆ ಎಂದರು. ಮುಖ್ಯ ಅತಿಥಿಯಾಗಿ ಮಾಜಿ ಮೇಯರ್ ದಿವಾಕರ್ ಕದ್ರಿ ಮಾತನಾಡಿ, ಇಂತಹ ಕಲಾಮೇಳ ಶಿಬಿರ ಮನಸ್ಸಿಗೆ ಮುದ ಕೊಡುವಂತದ್ದು ಇಂತಹ ಸುಂದರ ಪ್ರೇಕ್ಷಣೀಯ ಸ್ಥಳದಲ್ಲಿ ಏರ್ಪಟಿಸಿದ್ದರಿಂದ ಜನತೆಗೆ ಪ್ರವಾಸಿಗಳಿಗೆ ನೀಡಿದಂತಾಗುತ್ತದೆ ಎಂದರು. ಭಾಗವಹಿಸಿದ ಕಲಾವಿದರಿಗೆ ಎಲ್ಲರಿಗೂ ಕ್ಯಾನ್ವಾಸ್ ನೀಡಿ ಪ್ರೋತ್ಸಾಹಿಸಿದರು. ಹಿರಿಯ…
18 ಎಪ್ರಿಲ್ 2023, ಮೂಡುಬಿದಿರೆ: ಶಿಕ್ಷಕಿ ಶ್ರೀಮತಿ ನಾಗಶ್ರೀ ನಾಗರಕಟ್ಟೆ ಅವರ ಚೊಚ್ಚಲ ಕವನ ಸಂಕಲನ ‘ಕೃಷ್ಣ ಸಿಗಲಿಲ್ಲ’ ಕೃತಿಯು ಮೂಡುಬಿದಿರೆ ಎಂ.ಸಿ.ಎಸ್.ಬ್ಯಾಂಕಿನ ಕಲ್ಪವೃಕ್ಷ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಲೋಕಾರ್ಪಣೆಗೊಂಡಿತು. ಎಂಸಿ.ಎಸ್ ಬ್ಯಾಂಕಿನ ಅಧ್ಯಕ್ಷರಾಗಿರುವ ಎಂ. ಬಾಹುಬಲಿ ಪ್ರಸಾದ್ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರೆ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅವರು ಕವನ ಸಂಕಲನ ಬಿಡುಗಡೆಗೊಳಿಸಿ ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಸಾಹಿತಿಗಳ ಪಾತ್ರವೂ ಪ್ರಮುಖವಾಗಿದ್ದು ಅವರನ್ನು ಬೆಂಬಲಿಸುವುದು ಕೂಡಾ ಸಾಹಿತ್ಯದ ಆರಾಧನೆಯೇ ಆಗುತ್ತದೆ ಎಂಬುದಾಗಿ ತಿಳಿಸಿದರು. ಪತ್ರಕರ್ತ, ಸಂಘಟಕ ಶೇಖರ್ ಅಜೆಕಾರು ಅವರು ಸಭಾಧ್ಯಕ್ಷತೆಯನ್ನು ವಹಿಸಿದ್ದು ಮುನಿರಾಜ ರೆಂಜಾಳ, ಉಗ್ಗಪ್ಪ ಪೂಜಾರಿ, ಕೆ.ಎನ್.ಪ್ರಕಾಶ್ ಭಂಢಾರಿ, ಸತೀಶ್ ಭಂಡಾರಿ, ಕಿಶೋರ್ ಬೆಳ್ತಂಗಡಿ, ಸದಾನಂದ ನಾರಾವಿ ಮತ್ತು ಪದ್ಮಶ್ರೀ ಭಟ್ ನಿಡ್ಡೋಡಿ ಇವರು ಮುಖ್ಯ ಅತಿಥಿಗಳಾಗಿದ್ದರು ಹಿರಿಯ ಪತ್ರಕರ್ತರಾದ ಧನಂಜಯ ಮೂಡುಬಿದಿರೆಯವರು ಕೃತಿಯನ್ನು ಪರಿಚಯಿಸಿದರು. ಶ್ರೀ ಮುನಿರಾಜ ರೆಂಜಾಳ ಹಾಗೂ ಶೇಖರ್ ಅಜೆಕಾರು ಅವರಿಗೆ ವಿಶೇಷ ಗುರುವಂದನೆ ಗೌರವ ಸನ್ಮಾನವನ್ನು ನೀಡಲಾಯಿತು. ಜೊತೆಗೆ…
18-04-2023,ಉಡುಪಿ: ಹೆಣ್ಣು ಈ ಸಮಾಜದ ಕಣ್ಣು ಎನ್ನುವುದು ರೂಢಿಯ ಮಾತು. ಆದರೆ ಆಕೆ ತನ್ನೊಡಲಿನ ಅವಮಾನಗಳನ್ನು ಮರೆಯಲ್ಲಿ ಮುಚ್ಚಿ, ಮರೆಯಲಾಗದ ನೋವುಗಳನ್ನು ಸೆರಗಿನಲ್ಲಿ ಬಚ್ಚಿಟ್ಟು, ನಗುವ ಮುನ್ನ ಅಳುವ ನುಂಗಿ ಮೌನದ ಸೆರೆಮನೆಯಲ್ಲಿ ಮತ್ತೆ ಮತ್ತೆ ಬಂಧಿಯಾಗುತ್ತಿದ್ದಾಳೆ..! ಇಂತಹ ಬಂಧನಗಳ ಪೊರೆ ಕಳಚಿ ಆಕಾಶದೆತ್ತರಕ್ಕೆ ರೆಕ್ಕೆ ಬಿಚ್ಚಿ ಸ್ವಚ್ಛಂದದಿ ಹಾರುವಂತೆ ಮಾಡಬೇಕಾದವರಾರು? ಎನ್ನುವ ಪ್ರಶ್ನೆಗೆ ಆತ್ಮಶೋಧನೆಯನ್ನು ತಮ್ಮ ತಮ್ಮಲ್ಲಿ ಮಾಡಿಕೊಳ್ಳುವಂತೆ ಮಾಡಿದ್ದು ಇತ್ತೀಚಿಗೆ ಬ್ರಹ್ಮಾವರದ ಎಸ್. ಎಂ. ಎಸ್. ಕಾಲೇಜಿನಲ್ಲಿ ನಡೆದ ವಿಶಿಷ್ಟ ಏಕವ್ಯಕ್ತಿ ರಂಗಪ್ರಯೋಗ ಹಕ್ಕಿ ಮತ್ತು ಅವಳು. ಒಂದು ಹೆಣ್ಣಿನ ಸೂಕ್ಷ್ಮ ಸಂವೇದನೆಗಳನ್ನು ಕಾವ್ಯಾಭಿನಯದ ಮೂಲಕ ಅಭಿವ್ಯಕ್ತಿಸಿ, ಪ್ರೇಕ್ಷಕರನ್ನು ಸೆಳೆಯುವುದು ದೊಡ್ಡ ಸವಾಲು. ಈ ಸವಾಲನ್ನು ಸುಲಭವಾಗಿ ರಂಗಭಾಷೆಯ ಮೂಲಕ ಪ್ರಸ್ತುತ ಪಡಿಸಿದ ರೀತಿ ಇಲ್ಲಿ ಅಭೂತಪೂರ್ವವಾದುದ್ದು. ಈ ಏಕವ್ಯಕ್ತಿ ರಂಗಾಭಿನಯದಲ್ಲಿ ಕುಮಾರಿ ಕಾವ್ಯ ಹಂದೆ ಎಚ್ ತನ್ನ ಪ್ರಬುದ್ಧ ಅಭಿನಯದ ಮೂಲಕ ನಾಟಕದ ಆಶಯವನ್ನು ಸಮರ್ಥವಾಗಿ ಪ್ರೇಕ್ಷಕರಿಗೆ ದಾಟಿಸಿದ್ದಾಳೆ. ಕಾವ್ಯ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ತೃತೀಯ ವರ್ಷದ…
18 ಏಪ್ರಿಲ್ 2023, ಮಂಗಳೂರು: ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಸಂಸ್ಥೆ ಕೇರಳ ಗಡಿನಾಡ ಶಾಖೆ ಮತ್ತು ಸದ್ಬೋಧ ಗುರುಕುಲದ ಹಿಂದೂ ಸಂಸ್ಕಾರ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ “ಹಿಂದೂ ಸಂಸ್ಕಾರ ಬೇಸಿಗೆ ಶಿಬಿರ” ಏಪ್ರಿಲ್ 3 ರಿಂದ 19ರವರೆಗೆ “ಶ್ರೀ ಕೃಷ್ಣ ನಿಲಯ”, ಕೋಟೆಕಣಿ 1ನೇ ಕ್ರಾಸ್, ಉರ್ವಸ್ಟೋರ್, ಮಂಗಳೂರಿನಲ್ಲಿ ನಡೆಯುತ್ತಿದೆ. ಈ ಶಿಬಿರದ ವಿಶೇಷತೆಗಳು 1) ವೇದ ಮಂತ್ರಗಳ ಉಪದೇಶ 2) ಸಂಸ್ಕೃತ ಭಾಷಾ ಪರಿಚಯ 3) ಸುಭಾಷಿತ, ನೀತಿಯ ಕಥೆಗಳು 4) ವಿಷ್ಣುಸಹಸ್ರನಾಮ ಪಠಣಾ ತರಬೇತಿ 5) ಬೌದ್ಧಿಕ, ಒಳಾಂಗಣ ಆಟಗಳು 6) ಧಾರ್ಮಿಕ ಶೈಕ್ಷಣಿಕ ಪ್ರವಾಸ 7) ಭಜನಾ ಸಂಗೀತ ತರಬೇತಿ 8) ಪಂಚಾಂಗ, ರಂಗೋಲಿ ಕಲಿಕೆ 9) ಪುರಾಣದ ಕಥೆಗಳು 10) ರಾಮಾಯಣ, ಭಾಗವತ 11) ಪೂಜೆ ಹೋಮ – ಹಿಂದೂ ಸಂಸ್ಕಾರ 12) ಹಿಂದೂ ಧರ್ಮದ ಶ್ರೇಷ್ಠತೆ ಇತ್ಯಾದಿ ವಿಷಯಗಳಿಗೆ ಒತ್ತು ನೀಡಿ ತರಬೇತಿ ನಡೆಯುತ್ತಿದೆ. ಈ ಶಿಬಿರದಲ್ಲಿ ಸೈಂಟ್ ಆಲೋಶಿಯಶ್ ಕಾಲೇಜಿನ ನಿವೃತ್ತ ಉಪನ್ಯಾಸಕರಾದ…
17 ಏಪ್ರಿಲ್ 2023, ಉಡುಪಿ: ಉಡುಪಿಯ ರಾಗ ಧನ ಸಂಸ್ಥೆಯು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ “ರಾಗರತ್ನಮಾಲಿಕೆ” 11ನೆಯ ಗೃಹ ಸಂಗೀತ ಮಾಲಿಕೆ ಮಣಿಪಾಲದ ಶ್ರೀ ನಾರಾಯಣ ಭಟ್ ಕಿನಿಲ ಹಾಗೂ ಶ್ರೀಮತಿ ಲೀಲಾ ಭಟ್ ಇವರ ಆತಿಥ್ಯ ಹಾಗೂ ಸಹ ಪ್ರಯೋಜಕತ್ವದಲ್ಲಿ ದಿನಾಂಕ 09-04-2023ರಂದು ಅವರ ಸ್ವಗೃಹ ‘ದೇವೀ ಕೃಪಾ’ದಲ್ಲಿ ನಡೆಯಿತು. ಪ್ರಧಾನ ಕಚೇರಿಯ ಪೂರ್ವದಲ್ಲಿ ಕೆಲವು ಎಳೆಯರಿಂದ ಅವರಿಗೆ ವೇದಿಕೆಯ ಅನುಭವ ಆಗಲೆಂಬ ಸದಾಶಯದಿಂದ ಹಾಡುಗಾರಿಕೆ ಏರ್ಪಡಿಸಲಾಗಿತ್ತು. ಕು. ಸಿಯಾ ಎ. ಬಲ್ಲಾಳ್, ಕು. ಪ್ರಣತಿ ಎಸ್. ಭಟ್, ಕು. ಧೃತಿ ಎಸ್. ಭಟ್, ಕು. ಸ್ವಸ್ತಿ ಎಂ. ಭಟ್, ಕು. ಅಚಲ ಎ. ರಾವ್, ಮಾಸ್ಟರ್ ತೀಕ್ಷಣ್ ಮತ್ತು ಕು. ರೋಶ್ನಿ ಎಸ್. ಶೆಟ್ಟಿ, ಕ್ರಮ ಪ್ರಕಾರವಾಗಿ ಒಂದು ವರ್ಣ, ಒಂದು ಕೃತಿ, ಒಂದು ದೇವರನಾಮ ಪಕ್ಕ ವಾದ್ಯಗಳೊಂದಿಗೆ ಅಚ್ಚುಕಟ್ಟಾಗಿ ಹಾಡಿ ಶ್ರೋತೃಗಳ ಮೆಚ್ಚುಗೆ ಪಡೆದರು. ಆರಂಭದಲ್ಲಿ ಪ್ರಾರ್ಥನೆಯನ್ನು ಡಾ. ರಶ್ಮಿ ನಾಯಕ್ ಇವರು ಗಜಾನನಯುತಂ…