Subscribe to Updates
Get the latest creative news from FooBar about art, design and business.
Author: roovari
ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡೆಮಿ ಮತ್ತು ನಾಗರಿಕ ಸಲಹಾ ಸಮಿತಿ ಸುರತ್ಕಲ್ ಸಹಭಾಗಿತ್ವದಲ್ಲಿ ಅನುಪಲ್ಲವಿಯಲ್ಲಿ ಶಾಸ್ತ್ರೀಯ ಸಂಗೀತ ಸರಣಿಯ ಉದಯರಾಗ-44ನೇ ಕಾರ್ಯಕ್ರಮವು ದಿನಾಂಕ 04-06-2023ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬೈಕಂಪಾಡಿ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಘಟಕ ಮುಖ್ಯಸ್ಥರಾದ ಶ್ರೀ ಕುಮಾರಸ್ವಾಮಿ ಬಿ.ಎಸ್. ಮಾತನಾಡುತ್ತಾ “ಇತ್ತೀಚೆಗೆ ಉದಯೋನ್ಮುಖ ಪ್ರತಿಭಾವಂತ ಶಾಸ್ತ್ರೀಯ ಸಂಗೀತ ಕಲಾವಿದರಿಗೆ ಅವಕಾಶ ಕಲ್ಪಿಸುವ ಮೂಲಕ ಪ್ರತಿಭೆಯ ಅನಾವರಣಕ್ಕೆ ವೇದಿಕೆ ಲಭ್ಯವಾಗುತ್ತಿದೆ” ಎಂದು ನುಡಿದರು. ಬಹುವಚನ ಸಂಸ್ಥೆಯ ಸಂಯೋಜಕ ಡಾ. ಶ್ರೀಶಕುಮಾರ್ ಪುತ್ತೂರು ಮಾತನಾಡಿ, “ಸಾಮಾಜಿಕ ವ್ಯವಸ್ಥೆಯ ವಿರುದ್ಧದ ಸಾತ್ವಿಕ ಪ್ರತಿರೋಧವು ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟನೆಗೆ ಮೂಲ ಪ್ರೇರಣೆಯಾಗಿರುತ್ತದೆ” ಎಂದರು. ಶ್ರೀಯುತ ಸುನಾದ ಪಿ.ಎಸ್. ಇವರಿಂದ ಹಾಡುಗಾರಿಕೆ ನಡೆಯಿತು. ವಯಲಿನ್ ನಲ್ಲಿ ಸುಪ್ರಿತಾ ಪಿ.ಎಸ್., ಮೃದಂಗದಲ್ಲಿ ಕೃಷ್ಣ ಪವನ್ ಕುಮಾರ್ ಸಹಕರಿಸಿದರು. ಸುರತ್ಕಲ್ ನಾಗರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ. ಕೆ. ರಾಜಮೋಹನ್ ರಾವ್ ಉಪಸ್ಥಿತರಿದ್ದರು. ಮಣಿಕೃಷ್ಣ ಸ್ವಾಮಿ ಅಕಾಡೆಮಿಯ ಕಾರ್ಯದರ್ಶಿ…
ಉಡುಪಿ : ತುಳು ಕೂಟ ಉಡುಪಿ ಮತ್ತು ಕ್ಷಿಪ್ರ ಪದ್ಮ ಪ್ರಕಾಶನ ದೊಡ್ಡಣಗುಡ್ಡೆ ಆಶ್ರಯದಲ್ಲಿ ದಿನಾಂಕ 03-06-2023ರಂದು ಅಂಬಲಪಾಡಿಯ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಭವಾನಿ ಮಂಟಪದಲ್ಲಿ ‘ಕವಿಗೋಷ್ಟಿ ಮತ್ತು ಪುಸ್ತಕ ಬಿಡುಗಡೆ’ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಉಪ್ಪುಂದ ಸ.ಪ.ಪೂ. ಕಾಲೇಜಿನ ನಿವೃತ್ತ ಪ್ರಾಂಶುಪಾಲ ಶ್ರೀ ಯಾದವ ಕರ್ಕೇರಾ ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಡಾ. ಪಿ. ಕೃಷ್ಣ ಪ್ರಸಾದ್, ಯಶೋದಾ ಕೇಶವ್, ದಯಾನಂದ ಶೆಟ್ಟಿ ದೆಂದೂರ್ ಕಟ್ಟೆ, ಪ್ರಕಾಶ್ ಸುವರ್ಣ ಕಟಪಾಡಿ, ಅಮಿತಾಂಜಲಿ ಕಿರಣ್, ಉಮೇಶ್ ಆಚಾರ್ಯ, ಅಮೃತಾ ಸಂದೀಪ್, ಮಲ್ಲಿಕಾ ಎಚ್. ಶೆಟ್ಟಿ, ಜ್ಯೋತಿ ಎಸ್. ದೇವಾಡಿಗ, ಪೂರ್ಣಿಮಾ ಶೆಟ್ಟಿ ಮತ್ತು ಸುಷ್ಮಾ ಎ. ಎಸ್. ಕವಿಗೋಷ್ಠಿಯಲ್ಲಿ ಪಾಲ್ಗೊಂಡರು. ಕಾರ್ಯಕ್ರಮವನ್ನು ವಿದ್ಯಾ ಸರಸ್ವತಿ ನಿರೂಪಿಸಿದರು. ವಾಸಂತಿ ಅಂಬಲಪಾಡಿ ಬರೆದ ‘ಪಿಜಿನ್‌ದ ಬಾಸೆ ನಿಗಲೆಗ್ ತೆರಿಯುಂಡಾ’ ತುಳು ಕವನ ಸಂಕಲನ ಬಿಡುಗಡೆಗೊಳಿಸಿದ ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನದ ಕ್ಷೇತ್ರಾಧಿಕಾರಿ ಡಾ.ನಿ.ಬೀ.ವಿಜಯ ಬಲ್ಲಾಳ್ “ತುಳು ಭಾಷೆಗೆ ಮಹತ್ವರವಾದ ಸ್ಥಾನವಿದೆ. ಮುಂದಿನ…
ಉಡುಪಿ : ಉಡುಪಿಯ ಪ್ರತಿಷ್ಠಿತ ರಾಗ ಧನ ಸಂಸ್ಥೆಯ ಆಶ್ರಯದಲ್ಲಿ ದಿನಾಂಕ 12-05-2023ರಂದು ‘ರಾಗರತ್ನ ಮಾಲಿಕೆ -12’ ಶೀರ್ಷಿಕೆಯಡಿಯಲ್ಲಿ ಉತ್ತಮ ಸಂಗೀತ ಕಾರ್ಯಕ್ರಮವೊಂದು ಸಂಪನ್ನಗೊಂಡಿತು. ಮೈಸೂರು ಎ. ಚಂದನ್ ಕುಮಾರ್ ಅವರ ಕೊಳಲು ವಾದನ ಕಛೇರಿಯು ಶ್ರೀಮತಿ ಮತ್ತು ಶ್ರೀ ದಿನೇಶ್ ಅಮ್ಮಣ್ಣಾಯ ಇವರ ಆತಿಥ್ಯ ಹಾಗೂ ಪ್ರಾಯೋಜಕತ್ವದಲ್ಲಿ ಉಡುಪಿಯ ‘ಉಷಾ ನಿಲಯ’ದಲ್ಲಿ ನಡೆಯಿತು. ಆರಂಭದಲ್ಲಿ ಪುಟಾಣಿ ಕು. ಸ್ತುತಿ ಧೀಮಹಿ ಇವಳಿಂದ ಶ್ರುತಿ ಶುದ್ಧವಾಗಿ ಆತ್ಮವಿಶ್ವಾಸದಿಂದ ಮಾಡಿದ ದೇವರ ಸುತ್ತಿಯ ಬಳಿಕ ರಾಗ ಧನ ಸಂಸ್ಥೆಯ ಅಧ್ಯಕ್ಷರಾದ ಡಾ. ಶ್ರೀ ಕಿರಣ್ ಹೆಬ್ಬಾರ್ ಶ್ರೀಮತಿ ಮತ್ತು ಶ್ರೀ ದಿನೇಶ್ ಅಮ್ಮಣ್ಣಾಯ, ಶ್ರೀ ನಿತೀಶ್ ಅಮ್ಮಣ್ಣಾಯ, ಕಲಾವಿದರಾದ ಮೈಸೂರು ಎ. ಚಂದನ್ ಕುಮಾರ್ ಡಾ. ಉದಯ ಶಂಕರ್ ಎಲ್ಲರೂ ಜತೆಗೂಡಿಕೊಂಡು ದೀಪ ಪ್ರಜ್ವಲನೆ ಮಾಡಿದರು. ವಿದ್ವಾನ್ ಮೈಸೂರು ಎ.ಚಂದನ್ ಕುಮಾರ್ _ಕೊಳಲುವಾದನ, ವಯೊಲಿನ್ _ವಿದ್ವಾನ್ ಮತ್ತೂರು ಆರ್.ಶ್ರೀನಿಧಿ ಬೆಂಗಳೂರು, ಮೃದಂಗ _ಶ್ರೀ ಅನಿರುದ್ಧ್ ಯಸ್.ಭಟ್ ಬೆಂಗಳೂರು, ಖಂಜೀರ _ಶ್ರೀ ಸುನಾದ ಆನೂರು…
ಮುಂಬಯಿ : 2016ರಿಂದ ಜಾಗತಿಕ ಮಟ್ಟದಲ್ಲಿ ಕನ್ನಡ ಕವನ ಸ್ಪರ್ಧೆ, ಕಥಾ ಸ್ಪರ್ಧೆ ಹಾಗೂ ಏಕಾಂಕ ನಾಟಕ ರಚನಾ ಸ್ಪರ್ಧೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದ ಖ್ಯಾತಿ ಮುಂಬಯಿ ಮೈಸೂರು ಅಸೋಸಿಯೇಷನ್ನಿನದು. 2023ರಲ್ಲಿ ನಡೆಸಿದ ಏಕಾಂಕ ನಾಟಕ ರಚನಾ ಸ್ಪರ್ಧೆಗೆ 39 ನಾಟಕಗಳು ಬಂದಿದ್ದು, ಅದರಲ್ಲಿ ಬಹುಮಾನ ವಿಜೇತರಿಗೆ ಮೇ 28ರಂದು ಮುಂಬಯಿಯ ಮೈಸೂರು ಅಸೋಸಿಯೇಷನ್ ಸಭಾಗೃಹದಲ್ಲಿ ‘ಬಹುಮಾನ ವಿತರಣಾ ಸಮಾರಂಭ’ ಯಶಸ್ವಿಯಾಗಿ ಸಂಪನ್ನಗೊಂಡಿತು. ನಾಟಕ ರಚನಾ ಸ್ಪರ್ಧೆಯ ತೀರ್ಪು ಎರಡು ಸುತ್ತಿನಲ್ಲಿ ನಡೆದಿದ್ದು, ಮೊದಲ ಸುತ್ತಿನ ತೀರ್ಪುಗಾರರಾಗಿ ಖ್ಯಾತ ರಂಗ ಕರ್ಮಿ ಶ್ರೀಮತಿ ಅಹಲ್ಯಾ ಬಳ್ಳಾಲ್ ಇವರು ಮೈಸೂರು ಅಸೋಸಿಯೇಷನ್ನಿನ ಕೇಳಿಕೆಯಂತೆ 39 ನಾಟಕಗಳಲ್ಲಿ 10 ನಾಟಕಗಳನ್ನು ಆಯ್ಕೆ ಮಾಡಿದರು. ಎರಡನೆಯ ಸುತ್ತಿನ ತೀರ್ಪುಗಾರರಾಗಿ ಖ್ಯಾತ ಚಲನಚಿತ್ರ ನಟರಾದ ಶ್ರೀ ಶ್ರೀನಿವಾಸ ಪ್ರಭು ಅವರು ಅಸೋಸಿಯೇಷನ್ನಿನ ಕೇಳಿಕೆಯಂತೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳಿಗೆ ನಾಟಕಗಳನ್ನು ಆಯ್ಕೆ ಮಾಡಿರುತ್ತಾರೆ. ಅದರಂತೆ ಡಾ. ಶ್ರೀ ಬೇಲೂರು ರಘುನಂದನ್ ಬೆಂಗಳೂರು ಇವರ ‘ಶರ್ಮಿಷ್ಠೆ’ ನಾಟಕಕ್ಕೆ…
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ಕೊಡ ಮಾಡುವ 2022ನೇ ಸಾಲಿನ ʻಕನ್ನಡ ಕಾಯಕ ದತ್ತಿ ಪ್ರಶಸ್ತಿʼ ಪ್ರಕಟಿಸಲಾಗಿದೆ.ರಾಜ್ಯದ ಗಡಿಜಿಲ್ಲೆ ಬೆಳಗಾವಿಯ ಅಥಣಿಯ ಶ್ರೀ ಪ್ರಭು ಚೆನ್ನಬಸವ ಸ್ವಾಮೀಜಿ, ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಶ್ರೀ ಶಿವಾನಂದ ಕಳವೆ ಹಾಗೂ ಹೆಲನ್ ಮೈಸೂರು ಅವರು ಆಯ್ಕೆಯಾಗಿದ್ದಾರೆ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಿಗೆ ನೀಡುವ ಮಾಸಿಕ ಗೌರವ ಸಂಭಾವನೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವ ಕಾರ್ಯದರ್ಶಿಗಳಾದ ಶ್ರೀ ವ. ಚ. ಚನ್ನೇಗೌಡರು ದತ್ತಿ ರೂಪದಲ್ಲಿ ಪರಿಷತ್ತಿನಲ್ಲಿಯೇ ಉಳಿಸಿದ್ದರು. ದತ್ತಿ ದಾನಿಗಳ ಆಶಯದಂತೆ ಕನ್ನಡ ಪರ ಹೋರಾಟ ಮಾಡುತ್ತಾ ನಾಡು ನುಡಿಗೆ ಸೇವೆ ಸಲ್ಲಿಸಿದವರು, ನೆಲ ಮತ್ತು ಜಲದ ಕುರಿತು ಕೃತಿ ರಚಿಸಿದವರು ಹಾಗೂ ಕನ್ನಡ ರಂಗಭೂಮಿ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಮೂವರು ಗಣ್ಯರಿಗೆ ‘ಕನ್ನಡ ಕಾಯಕ ದತ್ತಿ ಪ್ರಶಸ್ತಿ’ ನೀಡಲು ನಿರ್ಧರಿಸಲಾಗಿದೆ. ಪ್ರಶಸ್ತಿಯು ತಲಾ ರೂ.10,000(ಹತ್ತು ಸಾವಿರ) ನಗದಿನೊಂದಿಗೆ ಫಲ ತಾಂಬೂಲ ಹಾಗೂ ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ಬೆಳಗಾವಿ ಜಿಲ್ಲೆಯ ಅಥಣಿಯ…
ಯಕ್ಷಗಾನ ಕರಾವಳಿಯಲ್ಲಿ ಹುಟ್ಟಿ ಮಲೆನಾಡಿನವರೆಗೂ ಹಬ್ಬಿರುವ ಆಕರ್ಷಕ ಕಲೆ. ಕರಾವಳಿಯ ಈ ಗಂಡುಕಲೆ ಕನ್ನಡದ ಕಂಪನ್ನು ರಾಷ್ಟ್ರ , ಅಂತಾರಾಷ್ಟ್ರೀಯ ಮಟ್ಟಕ್ಕೆ ಬಿತ್ತರಿಸಿದೆ. ಕರಾವಳಿ ತೀರದ ಸಮುದ್ರದ ಅಲೆಗಳಂತೆ ಯಕ್ಷಗಾನಕ್ಕೂ ಸಮುದ್ರದ ಅಲೆಗಳ ನಾದವಿದೆ; ಭೋರ್ಗರೆತವಿದೆ. ಸಾಹಿತ್ಯ, ಸಂಗೀತ, ನೃತ್ಯ, ವಾದ್ಯ, ಅಭಿನಯ ಚಿತ್ರ ಮತ್ತಿತರ ಹಲವು ಬಗೆಯ ಉಪಾಂಗಗಳಿಂದ ಕೂಡಿದ ಯಕ್ಷಗಾನ ಒಂದು ಸಂಕೀರ್ಣ ಕಲೆ. ಯಕ್ಷಗಾನ-ಪ್ರಸಂಗ, ಆಟ, ಬಯಲಾಟ, ಹರಕೆಯಾಟ, ದಶಾವಾತಾರದ ಆಟ ಎಂಬೆಲ್ಲ ಹೆಸರುಗಳಿಂದ ಪ್ರಚಾರದಲ್ಲಿದೆ. ಕರ್ನಾಟಕದ ಪಶ್ಚಿಮ ಘಟ್ಟಗಳ ಕೆಳಗೆ ಮತ್ತು ಅದರ ಸೆರಗಂಚಿನ ಹಲವು ತಾಲೂಕು-ಜಿಲ್ಲೆಗಳಲ್ಲಿ ಪ್ರಚಾರದಲ್ಲಿರುವ ಪ್ರಾದೇಶಿಕ ಕಲೆಯಾಗಿ ಯಕ್ಷಗಾನ ಹೆಸರಾಗಿದೆ. ಅತ್ಯಾಕರ್ಷಕ ವೇಷಭೂಷಣಗಳಿಂದ ಅದು ಪ್ರೇಕ್ಷಕರನ್ನು ಹಿಡಿದಿಡುತ್ತದೆ. ಬಣ್ಣ ಹಾಗೂ ವೇಷಭೂಷಣಗಳಿಂದ ಯಕ್ಷಗಾನವೂ ಯಕ್ಷಲೋಕವನ್ನು ಸೃಷ್ಟಿಸುತ್ತದೆ. ಯಕ್ಷಗಾನ ಉಗಮ:- ಯಕ್ಷಗಾನದ ಮೊದಲ ಉಲ್ಲೇಖ ಶಾರ್ಣದೇವನ “ಸಂಗೀತ ರತ್ನಾಕರ”ದಲ್ಲಿ (೧೨೧೦ ಕ್ರಿಶ) “ಜಕ್ಕ” ಎಂದು ಆಗಿದ್ದು ಮುಂದೆ “ಯಕ್ಕಲಗಾನ” ಎಂದು ಕರೆಯಲ್ಪಟ್ಟಿತು ಎಂಬುದು ಒಂದು ಅಭಿಪ್ರಾಯ. ಕ್ರಿಶ ೧೫೦೦ ರ ವೇಳೆಗೆ ವ್ಯವಸ್ಥಿತವಾಗಿ…
ಮಂಗಳೂರು : ಜೂನ್ 9 ಶುಕ್ರವಾರ 2023 ರಂದು ಸಂಜೆ ಆರು ಗಂಟೆಗೆ ಮಂಗಳೂರಿನ ಕುದ್ಮಲ್ ರಂಗರಾವ್ ಪುರಭವನದಲ್ಲಿ ‘ಸ್ವರುಣ್ ಸ್ಮರಣಾಂಜಲಿ 2023’ ಕಾರ್ಯಕ್ರಮವು ನಡೆಯಲಿದೆ. ಅದ್ವಿತೀಯ ಪ್ರತಿಭಾ ಶಾಲಿ, ಕಲಾಸಾಧಕ, ಸಮಾಜ ಸೇವಕ, ಸ್ಪೂರ್ತಿಯ ಚಿಲುಮೆ ಸ್ವರುಣ್ ರಾಜ್ ಇವರು ಈಗ ನಮ್ಮೊಂದಿಗಿಲ್ಲ. ಇವರ ಸಂಸ್ಮರಣೆಯ ಹತ್ತನೇ ವರ್ಷದ ಕಾರ್ಯಕ್ರಮ ‘ಸ್ವರುಣ್ ಸ್ಮರಣಾಂಜಲಿ’. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದ್ರೆ ಇದರ ಅಧ್ಯಕ್ಷರಾದ ಡಾಕ್ಟರ್ ಎಂ. ಮೋಹನ್ ಆಳ್ವ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಶಾಸಕರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಇವರು ಸ್ವರುಣ್ ರಾಜ್ ಗೆ ನುಡಿ ನಮನ ಸಲ್ಲಿಸಲಿದ್ದಾರೆ. ಸ್ವರುಣ್ ರಾಜ್ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಸುರೇಶ್ ರಾಜ್ ಮುಖ್ಯ ಅತಿಥಿಯಾಗಿ ಭಾಗಿಯಾಗಲಿದ್ದಾರೆ. ಇದೇ ವೇದಿಕೆಯಲ್ಲಿ ಕನ್ನಡದ ಪೂಜಾರಿ ಶ್ರೀ ಹಿರೇಮಂಗಳೂರು ಕಣ್ಣನ್ ರಾಷ್ಟ್ರ ಧರ್ಮ ಜಾಗತಿಯ ಸಂದೇಶ ನೀಡಲಿರುವರು. ಸಭಾ ಕಾರ್ಯಕ್ರಮದ ನಂತರ ಕಲಾಶ್ರೀ ವಿದುಷಿ ಶಾರದಾ ಮಣಿ ಶೇಖರ್ ಇವರ…
ಬೆಂಗಳೂರು: ಕಂಠೀರವ ನರಸಿಂಹರಾಜ ಒಡೆಯರ್ ಅವರ 135 ನೆಯ ಜನ್ಮ ದಿನಾಚರಣೆಯು ದಿನಾಂಕ 05-06-2023 ರಂದು ಕನ್ನಡ ಸಾಹಿತ್ಯ ಪರಿಷತ್ತಿನ ಪಂಪ ಸಭಾಗಂಣದಲ್ಲಿ ಪುಷ್ಪನಮನ ಕಾರ್ಯಕ್ರಮದೊಂದಿಗೆ ನೆರವೇರಿತು. “ ಕಂಠೀರವ ನರಸಿಂಹರಾಜ ಒಡೆಯರ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತ ಕಚೇರಿಯನ್ನು ಹಾಗೂ ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಸಂಘವನ್ನು ಸ್ಥಾಪಿಸಿದವರು, ಕನ್ನಡ ಸಾಹಿತ್ಯ ಪರಿಷತ್ತಿಗೆ ಸತತ ಹದಿನಾರು ವರ್ಷಗಳ ಕಾಲ ಅಧ್ಯಕ್ಷರಾಗಿ ನಿರಂತರ ಕನ್ನಡ ಸೇವೆ ಮಾಡಿದ ಮಹಾನ್ ಚೇತನವಾಗಿದ್ದರು. ಕನ್ನಡದ ಧೀಮಂತ ಸಾಹಿತಿ ಡಿ.ವಿ.ಜಿ ಅವರನ್ನು ಪರಿಷತ್ತಿಗೆ ಕರೆದುಕೊಂಡು ಬಂದು ಉಪಾಧ್ಯಕ್ಷರನ್ನಾಗಿ ಮಾಡಿ ಪರಿಷತ್ತು ಬೆಳೆಯವುದಕ್ಕೆ ಮೂಲ ಕಾರಣರಾದವರು. ಕಂಠೀರವ ನರಸಿಂಹರಾಜ ಒಡೆಯರಿಗೆ ಸಂಸ್ಥಾನದ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿ ಕಾರ್ಯಗಳಲ್ಲಿ ವಿಶೇಷ ಆಸಕ್ತಿಯಿತ್ತು. ಇವರು ಸಂಸ್ಥಾನದ ಸ್ಕೌಟ್ ಚಳವಳಿಯ ಮುಖ್ಯರಾಗಿದ್ದುದಲ್ಲದೆ ರೆಡ್ ಕ್ರಾಸ್ ಸಂಸ್ಥೆಯ ಸದಸ್ಯರೂ ಆಗಿದ್ದರು. ಗರ್ಭಿಣಿ ಮತ್ತು ಶಿಶು ಸಂರಕ್ಷಣೆಯ ಕಾರ್ಯದಲ್ಲಿ ವಿಶೇಷ ಆಸ್ಥೆ ವಹಿಸಿದ್ದು, ಅದಕ್ಕಾಗಿ ಅನೇಕ ಚಿಕಿತ್ಸಾಲಯಗಳ ಸ್ಥಾಪನೆ ಮಾಡಿದರು. ವಿಶೇಷ ಚೇತನರ…
ಮಂಗಳೂರು : ಕರ್ನಾಟಕ ಮುಸ್ಲಿಂ ಲೇಖಕರ ಸಂಘವು ಮುಸ್ಲಿಂ ಬರಹಗಾರರ ಅತ್ಯುತ್ತಮ ಕನ್ನಡ ಕೃತಿಗೆ ನೀಡುವ ರಾಜ್ಯಮಟ್ಟದ ‘ಮುಸ್ಲಿಂ ಸಾಹಿತ್ಯ ಪ್ರಶಸ್ತಿ’ಗೆ ಕೃತಿಗಳನ್ನು ಆಹ್ವಾನಿಸಿದೆ. ಈ ಪ್ರಶಸ್ತಿಯು ರೂ. ಹತ್ತು ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. 2022ನೇ ಸಾಲಿನ ಕೃತಿಯ ನಾಲ್ಕು ಪ್ರತಿಗಳನ್ನು ಜೂನ್ 20ರ ಒಳಗಾಗಿ ಸಂಚಾಲಕರು, ಮುಸ್ಲಿಂ ಸಾಹಿತ್ಯ ಪ್ರಶಸ್ತಿ, ಮುಸ್ಲಿಂ ಲೇಖಕರ ಸಂಘ, ಹಿದಾಯತ್ ಸೆಂಟರ್, ಬೀಬಿ ಅಲಾಬಿ ರಸ್ತೆ , ಮಂಗಳೂರು. 575001. ಈ ವಿಳಾಸಕ್ಕೆ ಕಳುಹಿಸಲು ಮುಸ್ಲಿಂ ಲೇಖಕರ ಸಂಘದ ಅಧ್ಯಕ್ಷರಾದ ಉಮರ್ ಯು.ಎಚ್. ತಿಳಿಸಿರುತ್ತಾರೆ. ಸಂಪರ್ಕ ಸಂಖ್ಯೆ 9845054191, 0824-2410358
ಬಜಪೆ: ಕಟೀಲು ದುರ್ಗಾ ಮಕ್ಕಳ ಮೇಳದ 14ನೇ ವಾರ್ಷಿಕ ಕಲಾ ಪರ್ವ ದಿನಾಂಕ 04-06-2023ರ ಶನಿವಾರ ಕಟೀಲಿನ ಸರಸ್ವತೀ ಸದನದಲ್ಲಿ ನಡೆಯಿತು. ಈ ಸಂದರ್ಭ ಯುವ ಹಾಗೂ ಹಿರಿಯ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎರಡೂವರೆ ಸಾವಿರಕ್ಕೂ ಹೆಚ್ಚು ಬಾರಿ ‘ಶ್ರೀದೇವಿ’ ಪಾತ್ರವನ್ನು ಅತ್ಯಂತ ಸಮರ್ಪಕವಾಗಿ ನಿಭಾಯಿಸಿ ಪ್ರಸಿದ್ಧರಾಗಿರುವ ಹಿರಿಯ ಕಲಾವಿದ ಬಾಯಾರು ರಮೇಶ ಭಟ್ಟ ಅವರಿಗೆ ಕಟೀಲು ದುರ್ಗಾ ಮಕ್ಕಳ ಮೇಳ ಪ್ರಶಸ್ತಿ ಹಾಗೂ ಉದಯೋನ್ಮುಖ ಯುವ ಪ್ರತಿಭೆ ಪ್ರದ್ಯುಮ್ನ ಮೂರ್ತಿ ಕಡಂದಲೆ ಯವರಿಗೆ ಶ್ರೀನಿಧಿ ಆಸ್ರಣ್ಣ ಸ್ಮರಣಾರ್ಥ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. ಹಿರಿಯಕಲಾವಿದ, ಯಕ್ಷಗಾನದ ಗುರು ಸಂಘಟಕ ಮತ್ತು ಸರಯೂ ಮಕ್ಕಳ ಮೇಳದ ಸಂಚಾಲಕ ರವಿ ಅಲೆವುರಾಯ ಅವರಿಗೆ ವಿಶೇಷ ಗೌರವಾರ್ಪಣೆ ನೀಡಿ ಸನ್ಮಾನಿಸಲಾಯಿತು. ಉದ್ಯಮಿ ರಾಮ ಪ್ರಕಾಶ್ ಹೊಳ್ಳ ಮಾತನಾಡಿ ‘ ಯಕ್ಷಗಾನದ ಪರಂಪರೆ ಹಾಗೂ ಮರೆತು ಹೋಗುತ್ತಿರುವ ಪೂರ್ವ ರಂಗದ ಅಭ್ಯಾಸ- ಪ್ರದರ್ಶನದ ಜತೆಗೆ ಸುಸಂಸ್ಕೃತ ಬದುಕಿನ ಪಾಠಗಳನ್ನು ಮಕ್ಕಳಲ್ಲಿ ಜಾಗೃತಗೊಳಿಸುವಲ್ಲಿ ದುರ್ಗಾ ಮಕ್ಕಳ ಮೇಳ…