Subscribe to Updates
Get the latest creative news from FooBar about art, design and business.
Author: roovari
29 ಮಾರ್ಚ್ 2023, ಕಾರ್ಕಳ: ಯಕ್ಷ ರಂಗಾಯಣದ ಆಶ್ರಯದಲ್ಲಿ ದಿನಾಂಕ 27-03-2023ರಂದು ಕಾರ್ಕಳದ ಕೋಟಿಚೆನ್ನಯ್ಯ ಥೀಂ ಪಾರ್ಕ್ ನಲ್ಲಿ ಏರ್ಪಡಿಸಿದ “ವಿಶ್ವರಂಗಭೂಮಿ ದಿನಾಚರಣೆ”ಯನ್ನು ಕೇಂದ್ರ ಸಂಗೀತ ನಾಟಕ ಅಕಾಡೆಮಿ ಸದಸ್ಯರಾದ ರಂಗಕರ್ಮಿ ಡಾ.ಬಿ.ವಿ.ರಾಜಾರಾಂ ಉದ್ಘಾಟಿಸಿ, “ರಂಗಭೀಷ್ಮ ಬಿ.ವಿ.ಕಾರಂತರ ಕನಸಿನ ಕರ್ನಾಟಕದ ಆರನೇ ರಂಗಾಯಣವಾಗಿರುವ ಕಾರ್ಕಳದ ಯಕ್ಷ ರಂಗಾಯಣವು ನಾಡಿನ ಸಾಂಸ್ಕೃತಿಕ ಕಿರೀಟವಾಗಿದೆ. ರಂಗಭೂಮಿ ಅನ್ನೋದು ಭಾವನೆಗಳ ಸಮುದ್ರ. ಸಂಬಂಧಗಳನ್ನು ಕಟ್ಟುವ ಕಾರ್ಯ ಮತ್ತು ಬದುಕಿನ ಪಾಠ ಕಲಿಯಲು ರಂಗಭೂಮಿ ಪೂರಕವಾಗಿದೆ” ಎಂದು ಅಭಿಪ್ರಾಯಪಟ್ಟರು. ಸಮಾರಂಭದ ಮುಖ್ಯ ಅತಿಥಿ ಶ್ರೀ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲರಾದ ಡಾ.ಮಂಜುನಾಥ ಕೋಟ್ಯಾನ್ ಮಾತನಾಡಿ ‘ಯಕ್ಷ ರಂಗಾಯಣ ನಮ್ಮೂರಿಗೆ ಹೆಮ್ಮೆ. ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಆಸಕ್ತಿಯನ್ನು ಅರಳಿಸುತ್ತಿರುವ ರಂಗಾಯಣಕ್ಕೆ ನಮ್ಮ ಬೆಂಬಲ ಯಾವತ್ತೂ ಇದೆ’ ಎಂದರು. ರಂಗ ಸಂಸ್ಕೃತಿ ಕಾರ್ಕಳ ಇದರ ಅಧ್ಯಕ್ಷರಾದ ಎಸ್.ನಿತ್ಯಾನಂದ ಪೈ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಯಕ್ಷ ರಂಗಾಯಣದ ನಿರ್ದೇಶಕರದ ಡಾ. ಜೀವನ್ ರಾಂ ಸುಳ್ಯ ಮಾತನಾಡಿ ‘ಇಂದು ರಂಗಭೂಮಿಗೆ ವಿಶ್ವ ಮಟ್ಟದಲ್ಲಿ ಮಾನ್ಯತೆ ಸಿಕ್ಕಿದ…
29 ಮಾರ್ಚ್ 2023, ಬೈಂದೂರು: ಸುರಭಿ (ರಿ.) ಬೈಂದೂರು ಹಾಗೂ ರೋಟರಿ ಕ್ಲಬ್ ಬೈಂದೂರು ಇವರ ಸಹಭಾಗಿತ್ವದೊಂದಿಗೆ ನಡೆಸಿದ “ವಿಶ್ವ ರಂಗಭೂಮಿ ದಿನಾಚರಣೆ”ಯು ದಿನಾಂಕ 27-03-2023ರಂದು ರೋಟರಿ ಭವನ ಬೈಂದೂರು ಇಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎಂ. ಗೋವಿಂದ, ಮಾಜಿ ಅಧ್ಯಕ್ಷರು ರೋಟರಿ ಕ್ಲಬ್ ಬೈಂದೂರು ಹಾಗೂ ಶ್ರೀ ಉದಯ ಆಚಾರ್ಯ ಅಧ್ಯಕ್ಷರು ರೋಟರಿ ಕ್ಲಬ್ ಬೈಂದೂರು ಇವರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಹಿರಿಯ ರಂಗ ಕಲಾವಿದ ಆರ್.ಡಿ.ಟೈಲರ್ (ರುಕ್ಕು ಟೈಲರ್) ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ನಾಗರಾಜ್ ಪಿ. ಯಡ್ತರೆ, ಅಧ್ಯಕ್ಷರು ಸುರಭಿ ಬೈಂದೂರು ಇವರ ಘನ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಭಾಸ್ಕರ ಬಾಡ ಕಾರ್ಯದರ್ಶಿ ಸುರಭಿ ಬೈಂದೂರು ಇವರು ಸ್ವಾಗತಿಸಿದರು. ಶ್ರೀ ಆನಂದ ಮುದ್ದೋಡಿ ಇವರು ರಂಗ ಭೂಮಿ ಸಂದೇಶ ವಾಚಿಸಿದರು. ಸುಧಾಕರ್ ಪಿ. ಬೈಂದೂರು ನಿರೂಪಿಸಿ, ರಾಮಕೃಷ್ಣ ದೇವಾಡಿಗ ಧನ್ಯವಾದ ಸಮರ್ಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾಜೇಂದ್ರ ಕಾರಂತ್ ಬೆಂಗಳೂರು ರಚಿಸಿ, ಯೋಗಿ ಬಂಕೇಶ್ವರ್ ನಿರ್ದೇಶಿಸಿದ…
29 ಮಾರ್ಚ್ 2023, ಉಡುಪಿ: ವಿಶ್ವ ರಂಗಭೂಮಿ ದಿನಾಚರಣೆ ಹಾಗೂ ಸಾಧಕರಿಗೆ ವಿಶ್ವ ರಂಗಭೂಮಿ ಗೌರವಾರ್ಪಣೆಯು ರಾಜ್ಯದ ಪ್ರತಿಷ್ಠಿತ ರಂಗಭೂಮಿ ಸಂಸ್ಥೆಗಳಲ್ಲಿ ಒಂದಾಗಿರುವ ರಂಗಭೂಮಿ (ರಿ.) ಉಡುಪಿ ಇದರ ವತಿಯಿಂದ ಎಂ.ಜಿ.ಎಂ. ಕಾಲೇಜು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಸೋಮವಾರ, ದಿನಾಂಕ 27-03-2023ರಂದು ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಉಡುಪಿಯ ಪ್ರಭಾಕರ ಸೌಂಡ್ಸ್ ಮಾಲೀಕ ಶ್ರೀ ಕೆ.ಪ್ರಭಾಕರ ಶೆಟ್ಟಿಗಾರ್ ಹಾಗೂ ಹಿರಿಯ ರಂಗನಟ ಶ್ರೀ ಯು.ಎಂ.ಅಸ್ಲಾಮ್ ಅವರಿಗೆ “ವಿಶ್ವ ರಂಗಭೂಮಿ” ಗೌರವಾರ್ಪಣೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಂಗಭೂಮಿ (ರಿ.) ಉಡುಪಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ಮಾತನಾಡಿ, “ರಂಗಭೂಮಿಯಲ್ಲಿ ಏನು ಉಂಟು, ಏನಿಲ್ಲ ಎನ್ನುವುದಕ್ಕಿಂತ ಬದುಕಿನ ಪಾಠವೇ ಇಲ್ಲಡಗಿದೆ ಎಂಬುದನ್ನು ಅರಿಯಬೇಕು. ರಂಗಭೂಮಿ ಉಡುಪಿ ಸಂಸ್ಥೆ ನಿರಂತರ ರಂಗ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದ್ದು, ಸಂಸ್ಥೆಗೆ ರಂಗಾಸಕ್ತರ ನಿರಂತರ ಪ್ರೋತ್ಸಾಹ ಅಗತ್ಯ” ಎಂದರು. ವಿಶ್ವ ರಂಗಭೂಮಿ ಗೌರವಕ್ಕೆ ಆಯ್ಕೆಯಾದ ಕೆ.ಪ್ರಭಾಕರ ಶೆಟ್ಟಿಗಾರ್ ಹಾಗೂ ಹಿರಿಯ…
29 ಮಾರ್ಚ್ 2023, ಕುಮಟಾ: ಪ್ರಸ್ತುತ ಸಂದರ್ಭದಲ್ಲಿ ಕೌಟುಂಬಿಕ ಕಲಹಗಳಿಗೆ ಕಾರಣವಾಗುವ ಅಂಶಗಳು ಹಾಗೂ ಗಂಡ ಹೆಂಡತಿಯ ನಡುವೆ ಬಾಂಧವ್ಯದ ಕೊರತೆಯುಂಟುಮಾಡುವ ಅಂಶಗಳನ್ನು ಗಮನದಲ್ಲಿಟ್ಟು, ಚಿಂತನ ಮಂಥನ ಮಾಡುವ ಉದ್ದೇಶದಿಂದ ಸತ್ವಾಧಾರ ಫೌಂಡೇಶನ್ ವತಿಯಿಂದ 26 ಮಾರ್ಚ್ 2023ರಂದು ತಾಲೂಕಿನ ನಾದಶ್ರೀ ಕಲಾ ಕೇಂದ್ರದಲ್ಲಿ ನಡೆಸಲಾದ “ಸಾಗುತಿರಲಿ ಬಾಳ ಬಂಡಿ” ವಿನೂತನ ಕಾರ್ಯಕ್ರಮ ಜನಮೆಚ್ಚುಗೆ ಪಡೆಯುವ ಜೊತೆಗೆ ಸಮಾಜಕ್ಕೆ ಸಂದೇಶ ನೀಡುವಲ್ಲಿಯೂ ಯಶಸ್ವಿಯಾಯಿತು. ದಾಂಪತ್ಯದಲ್ಲಿ ಬಿರುಕುಮೂಡಿಸುವ ‘ಈಗೋ, ಸ್ವಪ್ರತಿಷ್ಟೆ ಹಾಗೂ ಅಪನಂಬುಗೆ’ ಅಂಶಗಳನ್ನು ಗುರ್ತಿಸಿದ ಬಲೂನುಗಳನ್ನು ಒಡೆಯುವ ಮೂಲಕ ಕಾರ್ಯಕ್ರಮವನ್ನು ಚಲನಚಿತ್ರ ನಟ, ನಿರ್ದೇಶಕ ಕಾಸರಗೋಡು ಚಿನ್ನ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಎಲ್ಲವನ್ನೂ ಸಹಜವಾಗಿ ಒಪ್ಪಿಕೊಳ್ಳುವ ಗುಣವನ್ನು ಬೆಳೆಸುಕೊಳ್ಳಬೇಕು. ‘ಹೌದು ಮತ್ತು ಆಗಲಿ’ ಎಂಬ ಪದವನ್ನು ಬಳಸಿದರೆ ಜೀವನ ಸಾಂಗವಾಗಿ ನಡೆಯುತ್ತದೆ. ಇಂದಿನ ಯುವಜನತೆ ಪರಸ್ಪರ ಹೊಂದಿಕೊಂಡು ಹೋಗುವ ಗುಣವನ್ನು ಬೆಳೆಸಿಕೊಳ್ಳುವ ಅನಿವಾರ್ಯತೆ ಇದೆ. ಇಂತಹ ಕಾರ್ಯಕ್ರಮಗಳ ಮೂಲಕ ಜನತೆಗೆ ಸಂದೇಶ ಕೊಡಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ…
29-03-2023, ಕಲಬುರಗಿ: ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನದಿಂದ ಬಿಡುಗಡೆಗೊಂಡ 115 ಕೃತಿಗಳಲ್ಲಿ ಅಕ್ಷತಾ ರಾಜ್ ಪೆರ್ಲ ಅವರ “ ಪರಿಧಿಯಾಚೆ ” ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಹಾಗೂ ಬಸವ ಪ್ರಕಾಶನ ಕಲಬುರಗಿ ಇವರು 46ನೇ ವರ್ಷದ ವಾರ್ಷಿಕೋತ್ಸವ ಸಂದರ್ಭದಲ್ಲಿ ಆಹ್ವಾನಿಸಿದ್ದ ವಿವಿಧ ಸಾಹಿತ್ಯ ಕೃತಿಗಳ ಹಸ್ತಪ್ರತಿ ಆಯ್ಕೆಯಲ್ಲಿ ಅಕ್ಷತಾ ರಾಜ್ ಪೆರ್ಲ ಅವರ ಪರಿಧಿಯಾಚೆ ಅನುವಾದಿತ ನಾಟಕದ ಹಸ್ತಪ್ರತಿ ಆಯ್ಕೆಯಾಗಿದ್ದು ಕೃತಿ ಬಿಡುಗಡೆ ಸಮಾರಂಭ ಮಾರ್ಚ್ 25ರಂದು ಕಲಬುರಗಿಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಬಟ್ಟು ಸತ್ಯನಾರಾಯಣ ಉದ್ಘಾಟಿಸಿದರು. ಹಿರಿಯ ಸಾಹಿತಿಗಳಾದ ಪ್ರೊ. ಮಲ್ಲಿಕಾರ್ಜುನ ಹಿರೇಮಠ ಕೃತಿ ಬಿಡುಗಡೆ ಮಾಡಿದ್ದು ವಿವಿಧ ಕ್ಷೇತ್ರದ ಗಣ್ಯರು ಉಪಸ್ಥಿತರಿದ್ದರು. ಸಾಹಿತ್ಯದ ವಿವಿಧ ಪ್ರಕಾರಗಳ 115 ಕೃತಿಗಳ ಸಹಿತ ಪಠ್ಯಪುಸ್ತಕಗಳ ಲೋಕಾರ್ಪಣೆಯೂ ಈ ಸಂದರ್ಭದಲ್ಲಿ ನಡೆದಿದ್ದು ಸಿದ್ಧಲಿಂಗೇಶ್ವರ ಪ್ರಕಾಶನದ ಬಸವರಾಜ.ಜೀ.ಕೊನೇಕರಿಗೆ ಗೌರವಾರ್ಪಣೆ ಹಾಗೂ ಪುಸ್ತಕ ಪ್ರಕಟಣೆ ಸಲಹಾ ಸಮಿತಿಯ ಸದಸ್ಯರಿಗೆ ಸಂಮಾನ ಮಾಡಿದರು. ಪರಿಧಿಯಾಚೆ ಮೂಲತ: ಸಾಪೊದ ಕಣ್ಣ್ ಎಂಬ ತುಳು ನಾಟಕದ ಅನುವಾದ…
28 ಮಾರ್ಚ್ 2023, ಹೊಸಕೋಟೆ: ಹೊಸಕೋಟೆಯ “ಜನಪದರು” ಸಾಂಸ್ಕೃತಿಕ ವೇದಿಕೆ (ರಿ.) ಇವರು ನಿಂಬೆಕಾಯಿಪುರದ “ಜನಪದರು ರಂಗಮಂದಿರ”ದಲ್ಲಿ ದಿನಾಂಕ 27-03-2023ರಂದು ಆಯೋಜಿಸಿದ್ದ “ವಿಶ್ವರಂಗ ಭೂಮಿ” ದಿನಾಚರಣೆ ಹಾಗೂ ರಂಗಮಾಲೆ ವಾರ್ಷಿಕೋತ್ಸವವನ್ನು ಅಧ್ಯಕ್ಷ ಶ್ರೀ ಕೆ.ವಿ. ವೆಂಕಟರಮಣಪ್ಪ ಉದ್ಘಾಟಿಸಿ, “ರಂಗಭೂಮಿ ಮಾನವನ ಅಂತ:ಕರಣ ಕಲಕಿ ಅಂತರಂಗ ಅವಿರ್ಭಾವಗೊಳಿಸಿ ವೈಚಾರಿಕತೆ ಮೂಡಿಸಲು ಸಶಕ್ತ ಮಾಧ್ಯಮ. ಸಮುದಾಯದ ಮುಖವಾಣಿ ನಮ್ಮ ತಂಡ ಕೇವಲ ಒಂದು ರಂಗ ತಂಡವಾಗದೆ, ಸಾರ್ವಜನಿಕರ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಮತ್ತು ದಾನಿಗಳ ಸಹಕಾರದಿಂದಲೇ ಆಧುನಿಕ ತಂತ್ರಜ್ಞಾನದ ರಂಗ ಮಂದಿರ ನಿರ್ಮಾಣ ನಮ್ಮ ಹೆಮ್ಮೆಯ ರಂಗ ಸೇವೆ ಗ್ರೇಟರ್ ಬೆಂಗಳೂರು ಭಾಗದಲ್ಲಿ ಹೊಸ ಪ್ರೇಕ್ಷಕರನ್ನು ಹುಟ್ಟುಹಾಕಿ ರಂಗಭೂಮಿಗೆ ಕೊಡುಗೆ ನೀಡಿದೆ” ಎಂದರು. ಮುಖ್ಯ ಅತಿಥಿಯಾಗಿ ವೇದಿಕೆಯಲ್ಲಿದ್ದ ಸಾಹಿತಿ, ಕಲಾವಿದ ಬಾಗೆಪಲ್ಲಿ ಕೃಷ್ಣಮೂರ್ತಿ ಕೈಲಾಸಂ ಅವರ ಹಾಡು ಹಾಡಿದ್ದು ಔಚಿತ್ಯ ಪೂರ್ಣವಾಗಿತ್ತು. ವೇದಿಕೆಯಲ್ಲಿ ಸಮಾಜ ಸೇವಕ ಶ್ರೀ ನಟರಾಜ್ ಉಪಸ್ಥಿತರಿದ್ದರು. ಈ ಬಾರಿ ತಂಡದ ಕಲಾವಿದರ ಪ್ರತಿಭೆ ಸೆಳೆಯುವ ಉದ್ದೇಶದಿಂದ ರಂಗಗೀತೆ, ಹಾಸ್ಯ, ಮೈಮ್, ಅಣಕು,…
27 ಮಾರ್ಚ್ 2023, ಉಡುಪಿ: ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಎಂ.ಜಿ.ಎಂ. ಕಾಲೇಜು, ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಸಮಿತಿಯ ಆಶ್ರಯದಲ್ಲಿ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ದಿನಾಂಕ 25-03-2023 ಶನಿವಾರ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿಯನ್ನು ಸ್ವೀಕರಿಸಿದ ಲೇಖಕಿ, ಸಂಶೋಧಕಿ ಬಿ.ಎಂ.ರೋಹಿಣಿಯವರು ಮಾತನಾಡಿ “ಪಂಡಿತ ಪರಂಪರೆಗೆ ಪ್ರಸಿದ್ದಿ ಪಡೆದ ಊರು ಅವಿಭಜಿತ ದ.ಕ. ಜಿಲ್ಲೆ. ಓದುವ ಹವ್ಯಾಸ ಬೆಳೆಸಿಕೊಂಡಾಗ ಮಾತ್ರ ಕಲೆ, ಜ್ಞಾನ ಸಿದ್ಧಿಸಲು ಸಾಧ್ಯವಿದೆ” ಎಂದು ಹೇಳಿದರು. ಮಾಹೆ ಸಹಕುಲಪತಿ ಡಾ. ನಾರಾಯಣ ಸಭಾಹಿತ್ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಸಮಿತಿಯ ಅಧ್ಯಕ್ಷ ಡಾ. ಬಿ.ಎ. ವಿವೇಕ ರೈ ಅಧ್ಯಕ್ಷತೆ ವಹಿಸಿ, “ವಯಸ್ಸು ಹಾಗೂ ಸಾಧನೆಯ ಹಿರಿತನ ಪ್ರತಿಯೊಬ್ಬರಿಗೂ ಇರಬೇಕು. ಹಿರಿಯರನ್ನು ಗೌರವಿಸಬೇಕು. ಇದು ಸಾಧನೆಗಷ್ಟೇ ಅಲ್ಲ, ಎಲ್ಲದಕ್ಕೂ ಅನ್ವಯ. ಬರವಣಿಗೆ, ಅಧ್ಯಾಪನ ನಿರಂತರ ಪ್ರಕ್ರಿಯೆ. ಬರವಣಿಗೆ ಬದುಕಿನ ಭಾಗವಾಗಬೇಕು. ಅಧ್ಯಯನವನ್ನೂ ಕಾಲಕ್ಕೆ ತಕ್ಕ ಹಾಗೆ ಬದಲಾಯಿಸುತ್ತಿರಬೇಕು. ಇದರಿಂದ ವಿವಿಧ ಕ್ಷೇತ್ರಗಳ ಬಗ್ಗೆ ನಮಗೆ ಜ್ಞಾನ ಸಿಗಲು ಸಾಧ್ಯ” ಎಂದರು. ಮುಳಿಯ ಗೋಪಾಲಕೃಷ್ಣ…
29 ಮಾರ್ಚ್ 2023, ಉಳ್ಳಾಲ: ‘ಶಾರದಾಮೃತ’ ಸ್ಮರಣಸಂಚಿಕೆ ಮುಂದಿನ ಪೀಳಿಗೆಗೆ ಮಾರ್ಗದರ್ಶಿ – ಯು.ಎಸ್.ಪ್ರಕಾಶ್ ಉಳ್ಳಾಲದ ಸಾರ್ವಜನಿಕ ನವರಾತ್ರಿ ಶ್ರೀ ಶಾರದಾ ಉತ್ಸವ ಸಮಿತಿಯು ತನ್ನ ಅಮೃತ ವರ್ಷಾಚರಣೆಯ ಸವಿನೆನಪಿಗಾಗಿ ಪ್ರಕಟಿಸಿದ ‘ ಶಾರದಾಮೃತ’ ಸ್ಮರಣಸಂಚಿಕೆಯ ಅನಾವರಣ ಸಮಾರಂಭ ಇತ್ತೀಚೆಗೆ ಉಳ್ಳಾಲದ ಮುಖ್ಯ ರಸ್ತೆಯಲ್ಲಿರುವ ಶ್ರೀ ಶಾರದಾ ನಿಕೇತನದಲ್ಲಿ ಜರಗಿತು. ಉತ್ಸವ ಸಮಿತಿಯ ಗೌರವಾಧ್ಯಕ್ಷ ಶ್ರೀ ಯು.ಎಸ್.ಪ್ರಕಾಶ್ ಸಂಚಿಕೆಯನ್ನು ಅನಾವರಣಗೊಳಿಸಿ ಮಾತನಾಡುತ್ತಾ, ಉಳ್ಳಾಲದಲ್ಲಿ ಕಳೆದ 75 ವರ್ಷಗಳಿಂದ ಸಮಸ್ತ ಹಿಂದು ಸಮಾಜ ಬಾಂಧವರು ಶ್ರದ್ಧಾಭಕ್ತಿಯಿಂದ ಆಚರಿಸಿಕೊಂಡು ಬರುತ್ತಿರುವ ಶಾರದಾ ಉತ್ಸವವು,ಉಳ್ಳಾಲ ನರಸಿಂಹ ಮಲ್ಯ, ಉಳ್ಳಾಲ ದಯಾನಂದ ನಾಯಕ್ ರಂತಹ ಹಿರಿಯರ ದೂರದರ್ಶಿತ್ವದ ಫಲಸ್ವರೂಪವಾಗಿ ನಿರಂತರವಾಗಿ ನಡೆದುಬಂದಿದೆ. ಈ ಉತ್ಸವವು ಅನೂಚಾನವಾಗಿ ನಡೆದುಕೊಂಡು ಬಂದ ದಾರಿ ಮುಂದಿನ ಪೀಳಿಗೆಗೆ ಮಾರ್ಗದರ್ಶನ ನೀಡುವಲ್ಲಿ ‘ ಶಾರದಾಮೃತ ‘ ಸ್ಮರಣ ಸಂಚಿಕೆಯು ಖಂಡಿತವಾಗಿಯೂ ಸಹಕಾರಿಯಾಗಲಿದೆ. ಈ ಅಮೂಲ್ಯ ಸಂಚಿಕೆಯನ್ನು ರೂಪುಗೊಳಿಸಿದ ಪ್ರಧಾನ ಸಂಪಾದಕ ಎಂ.ವಾಸುದೇವ ರಾವ್ ಸಹಿತವಾಗಿ ಸಂಪಾದಕೀಯ ಮಂಡಳಿಯ ಸದಸ್ಯರೆಲ್ಲರೂ ಅಭಿನಂದನಾರ್ಹರು ಎಂದು ನುಡಿದರು.…
29 ಮಾರ್ಚ್ 2023, ಕಾಂತಾವರ: ಅನುಭಾವದಿಂದಲೇ ಸಮಾಜಕ್ಕೆ ಬೆಳಕಾದ ಅಲಕ್ಷಿತ ವಚನಕಾರರು 12ನೇ ಶತಮಾನದಲ್ಲಿ ಅಲಕ್ಷಿತ ವಚನಕಾರರೆಂದು ಗುರುತಿಸಲ್ಪಟ್ಟವರೆಲ್ಲರೂ ಅತ್ಯಂತ ಕೆಳಸ್ತರದಿಂದ ಬಂದವರಾಗಿದ್ದರು. ಇವರೆಲ್ಲ ನಿರಕ್ಷರಕುಕ್ಷಿಗಳಾಗಿದ್ದರೂ ತಮ್ಮ ಅನುಭವ ಅನುಭಾವದಿಂದಲೇ ಸಮಾಜಕ್ಕೆ ಬೆಳಕಾದರು. ದನಿ ಕಳೆದುಕೊಂಡ ತಳಸಮುದಾಯಗಳ ಜನರ ಸಾಮಾಜಿಕ ಮುಖವಾಣಿಯಾಗಿ ಕಾರ್ಯನಿರ್ವಹಿಸಿದ ಬಸವಣ್ಣನವರು ಆ ಸಮುದಾಯಗಳ ಆತ್ಮಸ್ವರೂಪ ಜಾಗೃತಿಗೆ ಶ್ರಮಿಸಿದರು. ಅದು ಒತ್ತಾಯದ ನೆಲೆಯಿಂದ ಆಗದೆ ಮನೋವಿಕಾಸದಿಂದಾಯಿತು ಎಂಬುದಾಗಿ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಕನ್ನಡ ಉಪನ್ಯಾಸಕರಾಗಿರುವ ಡಾ. ಡಿ.ವಿ.ಪ್ರಕಾಶ್ ಅವರು ಇಲ್ಲಿ ಮಾತನಾಡುತ್ತಾ ತಿಳಿಸಿದರು. ಕನ್ನಡ ಸಂಘ ಕಾಂತಾವರ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಇವರ ಜಂಟಿ ಸಹಯೋಗ ಹಾಗೂ ಕರ್ನಾಟಕ ಸರಕಾgದÀ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದೊಂದಿಗೆ ಕಾರ್ಕಳದ ಸುಂದರ ಪುರಾಣಿಕ ಸ್ಮಾರಕ ಪ್ರೌಢಶಾಲಾ ಸಭಾಂಗಣದಲ್ಲಿ ನಡೆದ ಅರಿವು – ತಿಳಿವು ತಿಂಗಳ ಕಾರ್ಯಕ್ರಮದಲ್ಲಿ ಅವರು “ಅಲಕ್ಷಿತ ವಚನಕಾರರ ವಚನಗಳಲ್ಲಿ ಸಾಮಾಜಿಕ ಕಳಕಳಿ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಬಹುಸಂಖ್ಯಾತ ಉಪೇಕ್ಷಿತ ಜನಸಮುದಾಯ…
29 March 2023, Mangaluru: The poetry session began with the recitation of a few ghazals in Tulu and Kannada by Muhammad Baddoor while Deevith S.K. Peradi, Mahesh Nayak and Raghu Idkidu read poems in Kannada. Jayalakshmi R. Shetty and Lathish Paldane read out Tulu poems Mangaluru Chapter of the Indian National Trust for Art and Cultural Heritage (INTACH) and Art Kanara Trust organised “Kare Barita Kabitelu,” a multilingual poetry session to coincide with World Poetry Day (March 21), on Saturday, March 25 here. The poetry session began with the recitation of a few ghazals in Tulu and Kannada by Muhammad…