Subscribe to Updates
Get the latest creative news from FooBar about art, design and business.
Author: roovari
ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗ ಮತ್ತು ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಜಂಟಿ ಆಶ್ರಯದಲ್ಲಿ ದಿನಾಂಕ 17, 18 ಮತ್ತು 19 ಫೆಬ್ರವರಿ 2025ರಂದು ಮಂಜೇಶ್ವರದ ಗೋವಿಂದ ಪೈ ಕಾಲೇಜಿನಲ್ಲಿ ನಡೆದ ಭಾಷಾಂತರಕಾರರ ನಾಲ್ಕನೇ ಸಮಾವೇಶ ಕನ್ನಡ ಸಾಹಿತ್ಯ ಕಾರ್ಯಕ್ರಮಗಳಿಗೆ ಅಪೂರ್ವ ಮಾದರಿಯನ್ನು ಹಾಕಿಕೊಟ್ಟಿದೆ. ಮುಂದಿನ ಎರಡು ದಿನಗಳ ಕಾರ್ಯಕ್ರಮದ ಪೀಠಿಕೆ ಎಂಬಂತೆ ಆಯೋಜಿಸಿದ ಪುಸ್ತಕ ಬಿಡುಗಡೆ ಸಮಾರಂಭವು ಮನಸೂರೆಗೊಳ್ಳುವಂತಿತ್ತು. ಸಾಹಿತ್ಯಾಸಕ್ತರಿಗೆ ಖುಶಿ ಕೊಡುವಂತಿತ್ತು. ಪುಸ್ತಕ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಡಿ.ವಿ. ಪರಮಶಿವ ಮೂರ್ತಿಯವರು “ಭಾಷಾ ಶಾಸ್ತ್ರದ ವಿಷಯಕ್ಕೆ ಸಂಬಂಧಿಸಿದ ವಿದ್ವಾಂಸರು ಇತ್ತೀಚೆಗೆ ಕಡಿಮೆಯಾಗುತ್ತಿದ್ದಾರೆ. ಭಾಷಾ ಶಾಸ್ತ್ರದ ವಿಷಯ ಮರೀಚಿಕೆಯಾಗಿದೆ. ಭಾಷೆ ಮತ್ತು ಸಂಸ್ಕೃತಿಯ ವಿಚಾರ ಚಿಂತಾಜನಕವಾಗಿದೆ” ಎಂದು ಹೇಳಿದ್ದು ವಾಸ್ತವವಾದರೂ “ಈಗಿನ ವಿದ್ಯಾರ್ಥಿಗಳು ಅಂಕಗಳ ಹಿಂದೆ ಹೋಗುತ್ತಾರೆ. ಆದ್ದರಿಂದ ಭಾಷೆ ಮತ್ತು ಸಂಸ್ಕೃತಿ ಅಳಿಸಿ ಹೋಗುವ ಆತಂಕ ಎದುರಾಗಿದೆ. ಶಾಸ್ತ್ರೀಯ ಬೇರುಗಳು ಉಳಿದರೆ ಮಾತ್ರ ಹೊಸ…
ತೆಕ್ಕಟ್ಟೆ : ಯಶಸ್ವೀ ಕಲಾವೃಂದ (ರಿ.) ಕೊಮೆ, ತೆಕ್ಕಟ್ಟೆ ಸಂಯೋಜನೆಯಲ್ಲಿ ಸಿನ್ಸ್ 1999 ಶ್ವೇತಯಾನ -108 ಕಾರ್ಯಕ್ರಮದಡಿಯಲ್ಲಿ ‘ಯಶಸ್ವಿ ಮಹಿಳಾ ಸಮ್ಮಿಳನ’ ಕಾರ್ಯಕ್ರಮವು ದಿನಾಂಕ 23 ಫೆಬ್ರವರಿ 2025ರಂದು ತೆಕ್ಕಟ್ಟೆ ಹಯಗ್ರೀವದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಮುಖ್ಯೋಪಾಧ್ಯಾಯಿನಿ ಸುಧಕ್ಷಣ ಆರ್. ಉಡುಪ ಇವರು ಉದ್ಘಾಟನೆಗೊಳಿಸಿ “ಇಪ್ಪತ್ತೈದರ ಏಳು ಬೀಳುಗಳೊಂದಿಗಿನ ಸಂಭ್ರಮವು ನಮಗೂ ಲಭಿಸಿದ್ದು ಭಾಗ್ಯ. ಕೃತಕತೆಯ ಯುಗದಲ್ಲಿ ನಮ್ಮನ್ನು ನಾವು ನಾಶಗೊಳಿಸಿಕೊಳ್ಳುತ್ತಿದ್ದೇವೆ. ಕಲಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಾಗ ಸ್ವಾಭಾವಿಕತೆಯ ಅರಿವು ಮೂಡುತ್ತದೆ. ಮಕ್ಕಳಲ್ಲಿಯೂ ಕಲೆಯ ಸಂಸ್ಕಾರವನ್ನು ಮೂಡಿಸಿದರೆ ಭವಿಷ್ಯದಲ್ಲಿ ಸ್ವಾಭಾವಿಕತೆಯನ್ನು ಕಂಡುಕೊಳ್ಳಬಹುದು. ಇಲ್ಲವಾದರೆ ಬದುಕು ಬಹಳ ಕಷ್ಟ” ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಸಾಧಕಿ ಶಾಂತಾ ಗಣೇಶ್ ಕುಂಭಾಶಿ ಇವರನ್ನು ಅಭಿನಂದಿಸಲಾಯಿತು. “ಮಹಿಳಾ ಸಂಘಟನೆಗಳು ಪ್ರಸ್ತುತ ಕಾಲಘಟ್ಟದಲ್ಲಿ ಅತ್ಯಂತ ಶಕ್ತಿ ಉಳ್ಳದ್ದು. ಸಂಘಟನೆಯ ಮೌಲ್ಯವನ್ನು ಉಳಿಸಿಕೊಂಡು ಬೆಳೆಯುತ್ತಿರುವ ಹಲವು ಸಂಘಟನೆಗಳನ್ನು ನಾವು ಕಂಡಿದ್ದೇವೆ. ಆದರೆ ಇದು ಕಲೆಯನ್ನು ಮೈಗೂಡಿಸಿಕೊಂಡ ಯಶಸ್ವೀ ಕಲಾವೃಂದದ ಮಹಿಳಾ ಸಂಘಟನೆ. ಇದರಲ್ಲಿ ಮಧುರ ಮೈತ್ರಿ ಇವೆ” ಎಂದು ಅಭಿವಂದಿಸಿಕೊಂಡ…
ಬೆಂಗಳೂರು : ಜನಸಂಸ್ಕೃತಿ ಪ್ರತಿಷ್ಠಾನ, ಕಾವ್ಯಮಂಡಲ, ಸ್ನಾತಕೋತ್ತರ ಕೇಂದ್ರ ರಾಮನಗರ ಮತ್ತು ಬೆಂಗಳೂರು ವಿಶ್ವವಿದ್ಯಾನಿಲಯ ಇವುಗಳ ಜಂಟಿ ಆಶ್ರಯದಲ್ಲಿ ‘ಕಾವ್ಯ ಶಿವರಾತ್ರಿ’ ಅಹೋರಾತ್ರಿ ಕಾವ್ಯ ಗಾಯನ ಕಾರ್ಯಕ್ರಮವನ್ನು ದಿನಾಂಕ 26 ಫೆಬ್ರವರಿ 2025ರಂದು ಸಂಜೆ 6-00 ಗಂಟೆಗೆ ಬೆಂಗಳೂರು ವಿ.ವಿ. ಜ್ಞಾನ ಭಾರತಿ ಆವರಣ, ಡಾ. ವೆಂಕಟಗಿರಿ ಗೌಡ ಸ್ಮಾರಕ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಸಂಜೆ ಗಂಟೆ 6-30ಕ್ಕೆ ಬೆಂಗಳೂರು ವಿಶ್ವವಿದ್ಯಾನಿಲಯದ ಮಾನ್ಯ ಕುಲಪತಿಗಳಾದ ಡಾ. ಜಯಕರ್ ಎಸ್.ಎಂ. ಇವರ ಅಧ್ಯಕ್ಷತೆಯಲ್ಲಿ ಸಂಸ್ಕೃತಿ ಚಿಂತಕರಾದ ಶೂದ್ರ ಶ್ರೀನಿವಾಸ ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಸ್ನಾತಕೋತ್ತರ ಕೇಂದ್ರ ರಾಮನಗರದ ನಿರ್ದೇಶಕರಾದ ಪ್ರೊ. ಬಿ. ಗಂಗಾಧರ ಇವರಿಂದ ಕಾವ್ಯ ಶಿವರಾತ್ರಿ ಪ್ರಸ್ತಾವನೆ ನಡೆಯಲಿದೆ. ಅಲ್ಕೆರೆ ಶಿವಕುಮಾರ್ ಮತ್ತು ಸಂಗಡಿಗರಿಂದ ಮಂಟೇಸ್ವಾಮಿ ಮತ್ತು ಮಲೆ ಮಹಾದೇಶ್ವರ ಮಹಾಕಾವ್ಯ ಗಾಯನ ಪ್ರಸ್ತುತಗೊಳ್ಳಲಿದೆ.
ಮಳವಳ್ಳಿ : ರಂಗಬಂಡಿ ಮಳವಳ್ಳಿ (ರಿ.) ಆಯೋಜಿಸುವ 2 ತಿಂಗಳ ರಂಗ ತರಬೇತಿ ಶಿಬಿರ ಮತ್ತು ನಾಟಕ ಪ್ರದರ್ಶನವು ದಿನಾಂಕ 10 ಮಾರ್ಚ್ 2025ರಂದು 01 ಮೇ 2025ರವರೆಗೆ ಮಳವಳ್ಳಿಯ ಬಿ.ಆರ್. ಅಂಬೇಡ್ಕರ್ ಭವನದ ಹಿಂಬಾಗದಲ್ಲಿರುವ ಸಿದ್ಧಾರ್ಥ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ. ನುರಿತ ತಜ್ಞರಿಂದ ತರಬೇತಿ ನೀಡಲಾಗುವುದು. ಶಿಬಿರದಲ್ಲಿ ಅಭಿನಯ, ದೇಹ ಚಲನೆ, ಧ್ವನಿಯ ಕುರಿತ ವ್ಯಾಯಾಮಗಳು, ಪ್ರಸಾಧನ, ಬೆಳಕಿನ ವಿನ್ಯಾಸ, ರಂಗ ಸಜ್ಜಿಕೆ, ಪರಿಕರಗಳ ತಯಾರಿ, ವಸ್ತ್ರ ವಿನ್ಯಾಸದ ಬಗ್ಗೆ ಮಾಹಿತಿ ನೀಡಲಾಗುವುದು. ಮಧು ಮಳವಳ್ಳಿ ಶಿಬಿರದ ನಿರ್ದೇಶಕರಾಗಿದ್ದು, ಭರತ್ ರಾಜ್ ಎನ್.ಎಲ್. ಸಹಕಾರದೊಂದಿಗೆ ನಡೆಯುವ ಈ ಶಿಬಿರದ ಹೆಚ್ಚಿನ ಮಾಹಿತಿಗಾಗಿ 7022940964 ಮತ್ತು 9448739907 ಸಂಖ್ಯೆಯನ್ನು ಸಂಪರ್ಕಿಸಿರಿ.
ಮಂಗಳೂರು : ಪ್ರಕಾಶ್ ರಾಜ್ ಫೌಂಡೇಷನ್ ವತಿಯಿಂದ ಮಂಗಳೂರು ‘ನಿರ್ದಿಗಂತ ಉತ್ಸವ 2025’ ಕಾರ್ಯಕ್ರಮವನ್ನು ದಿನಾಂಕ 28 ಫೆಬ್ರವರಿ 2025ರಿಂದ 03 ಮಾರ್ಚ್ 2025ರವರೆಗೆ ಮಂಗಳೂರಿನ ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ) ಕಾಲೇಜಿನಲ್ಲಿ ಆಯೋಜಿಸಲಾಗಿದೆ. ದಿನಾಂಕ 28 ಫೆಬ್ರವರಿ 2025ರಂದು 9-30 ಗಂಟೆಗೆ ಈ ಕಾರ್ಯಕ್ರಮವು ರೆ. ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ. ಮತ್ತು ಪ್ರಕಾಶ್ ರಾಜ್ ಇವರಿಂದ ಉದ್ಘಾಟನೆಗೊಳ್ಳಲಿದೆ. 10-30 ಗಂಟೆಗೆ ಪುರುಷೋತ್ತಮ ಬಿಳಿಮಲೆ ಇವರಿಂದ ಆಶಯ ಭಾಷಣ, 12-00 ಗಂಟೆಗೆ ಶಕೀಲ್ ಅಹ್ಮದ್ ಇವರ ನಿರ್ದೇಶನದಲ್ಲಿ ಬಿಜಾಪುರದ ಸ್ಪಿನ್ನಿಂಗ್ ಟ್ರೀ ಥಿಯೇಟರ್ ತಂಡದವರಿಂದ ‘ಫಾರ್ ಎ ಬ್ರೈಟ್ ಆಫ್ ಫುಡ್’ ನಾಟಕ ಪ್ರದರ್ಶನ, 3-00 ಗಂಟೆಗೆ ಮಂಗಳೂರಿನ ಯಕ್ಷಮಿತ್ರರು ತಂಡದವರಿಂದ ‘ಕೋಟಿ ಚೆನ್ನಯ್ಯ’ ಯಕ್ಷಗಾನ, 4-00 ಗಂಟೆಗೆ ಡಾ. ಗಣನಾಥ ಎಕ್ಕಾರು ಇವರಿಂದ ‘ಬದಲಾಗುತ್ತಿರುವ ಯಕ್ಷಗಾನದ ಸ್ವರೂಪ’ ಎಂಬ ವಿಷಯದ ಬಗ್ಗೆ ಉಪನ್ಯಾಸ, 5-30 ಗಂಟೆಗೆ ಸಂತ ಅಲೋಶಿಯಸ್ ಕಾಲೇಜು ‘ಕಾಲೇಜ್ ಬ್ಯಾಂಡ್ ಜ್ಯಾಮಿಂಗ್’ ಮತ್ತು 7-00 ಗಂಟೆಗೆ…
ನೃತ್ಯ ಕಲಾವಿದ/ ಕಲಾವಿದೆಯಾಗಿ ಕಲಾಮಾತೆಯ ಸೇವಾ ಕೈಂಕರ್ಯದಲ್ಲಿ ನಿರಂತರವಾಗಿ ಮುಂದುವರೆದು, ನಟರಾಜನ ದಯೆಗೆ ಪಾತ್ರರಾಗಿ, ಕಲಾ ರಸಿಕರ ಮನದಲ್ಲಿ ಸದಾ ನೆಲೆಗೊಂಡು ಅತ್ಯುತ್ತಮ ಸ್ಥಾನ ಗಳಿಸಿಕೊಳ್ಳುವುದು ಒಂದು ದೊಡ್ಡ ಸಾಧನೆ. ಈ ಸಾಧನೆಗೆ ಪರಿಪಕ್ವ ಮನಸ್ಸು ಮತ್ತು ಶಾಂತ ಚಿತ್ತದಿಂದ ಎಲ್ಲವನ್ನೂ ಒಂದೇ ರೀತಿಯಲ್ಲಿ ಒಪ್ಪಿಕೊಳ್ಳುವ – ಅಪ್ಪಿಕೊಳ್ಳುವ ಗುಣವು ಬೇಕೇ ಬೇಕು. ಧನಾತ್ಮಕ ಮತ್ತು ಮುಖ್ಯವಾಗಿ ಋಣಾತ್ಮಕ ಅಂಶಗಳನ್ನೂ ಪಡೆದುಕೊಂಡು, ಅದನ್ನು ಮನದಲ್ಲಿ ಅಳೆದು ತೂಗಿ, ತಪ್ಪುಗಳಿದ್ದರೆ ತಿದ್ದಿಕೊಂಡು ಮುಂದಿನ ದಿನಗಳಲ್ಲಿ ಹೊಸ ಬದಲಾವಣೆಯನ್ನು ಸೃಷ್ಟಿಸಿ ಎಲ್ಲರಿಂದ ಸೈ ಅನ್ನಿಸಿಕೊಳ್ಳಲು ಬಹಳ ಕಾಲ ಹಿಡಿಯುತ್ತದೆ. ಈ ಮಧ್ಯೆ ಅದೆಷ್ಟೋ ಅಡಚಣೆಗಳು, ಕಠೋರ ಮಾತುಗಳು, ಮೂಕ ರೋದನೆ ಮತ್ತು ಕೆಲವೊಮ್ಮೆ ಪ್ರತಿಭಟನೆ ಹೀಗೆ ಹಲವಾರು ಆಪತ್ತನ್ನು ಎದುರಿಸುತ್ತಾ, ಒಳ್ಳೆಯದನ್ನು ಸ್ವೀಕರಿಸಿ, ಖುಷಿ ಪಟ್ಟುಕೊಳ್ಳುತ್ತಾ ಸಾಗುತ್ತದೆ ಕಲಾ ಬದುಕು. ನಾವು ಮಾಡುವ ಕೆಲಸಗಳು ಎಲ್ಲರನ್ನೂ ತಲುಪುವುದಿಲ್ಲ, ತಲುಪಿದರೂ ಸಹಜವಾದ ಬದಲಾವಣೆಯನ್ನು ಅವರವರ ದೃಷ್ಟಿಕೋನದಲ್ಲಿ ಉಂಟುಮಾಡಿ ನಮ್ಮನ್ನು ಕ್ರಿಯಾತ್ಮವಾಗಿ ಬೆಳೆಸುತ್ತದೆ. ಇಂತಹ ಕ್ರಿಯಾತ್ಮಕ ಕಲಾವಿದ/ಕಲಾವಿದೆಯರು…
ಮಡಿಕೇರಿ : ಕರ್ನಾಟಕ ಜಾನಪದ ಅಕಾಡೆಮಿ ಮತ್ತು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಂಯುಕ್ತಾಶ್ರಯದಲ್ಲಿ ‘ಕೊಡಗು ಜಾನಪದ ಬೆಡಗು-ಜಾನಪದ ನಡೆ ವಿದ್ಯಾರ್ಥಿಗಳ ಕಡೆ’ ಎನ್ನುವ ವಿಶಿಷ್ಟ ಕಾರ್ಯಕ್ರಮ ದಿನಾಂಕ 24 ಫೆಬ್ರವರಿ 2025 ರಂದು ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕ ಡಾ. ಕಾವೇರಿ ಪ್ರಕಾಶ್ ಮಾತನಾಡಿ “ಜಾನಪದ ಎನ್ನುವುದು ಸಾಹಿತ್ಯದ ಮೂಲಬೇರು. ಇಂತಹ ಅಮೂಲ್ಯ ಜಾನಪದ ಸಂಸ್ಕೃತಿ ಪರಂಪರೆಗಳು ತಲೆತಲಾಂತರಗಳಿಂದ ಹರಿದು ಬಂದಿದ್ದು, ಇದನ್ನು ಯುವ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿನವಾಗಿದೆ. ಅಂದು ಬೆಳಗ್ಗೆ ಘಂಟೆ 10.30ಕ್ಕೆ ‘ಕೊಡಗು ಜಾನವದ ಬೆಡಗು’ ಕಾರ್ಯಕ್ರಮವನ್ನು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಗೊಲ್ಲಹಳ್ಳಿ ಶಿವ ಪ್ರಸಾದ್ ಅವರು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ವೆಂಕಟೇಶ ಪ್ರನನ್ನ ಪಿ. ಕೆ. ವಹಿಸಲಿದ್ದಾರೆ” ಎಂದು ಹೇಳಿದರು. ಕಾರ್ಯಕ್ರಮದ ಸಹ ಸಂಚಾಲಕರು ಹಾಗೂ ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ಮೋಹನ್ ಕುಮಾರ್…
ಬೆಂಗಳೂರು : ಕಲಾ ಕದಂಬ (ಮೈಸೂರು ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯದ ಮಾನ್ಯತೆ ಪಡೆದ ಸಂಸ್ಥೆ) ಆಯೋಜಿಸುವ ‘ರಂಗಉದ್ಭೋಧ -3’ ಯಕ್ಷಗಾನ ಒಂದು ನೋಟ – ಉಪನ್ಯಾಸ ಕಾರ್ಯಕ್ರಮವು ದಿನನಕ 23 ಫೆಬ್ರವರಿ 2025ರ ಭಾನುವಾರದಂದು ಸಂಜೆ ಘಂಟೆ 4.00 ರಿಂದ 7.30ರ ವರೆಗೆ ನಡೆಯಲಿದೆ ಬೆಂಗಳೂರಿನ ವಿಶ್ವೇಶ್ವರಯ್ಯ ಬಡಾವಣೆ 4ನೇ ವಿಭಾಗದ ಉಲ್ಲಾಳ ಉಪನಗರದಲ್ಲಿರುವ ಕಲಾ ಕದಂಬ ಆರ್ಟ್ ಸೆಂಟರ್ (ಕಲಾಗುಡಿ ) ಇಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಯಕ್ಷಗಾನ ವಿದ್ವಾಂಸರಾದ ಡಾ ಆನಂದರಾಮ ಉಪಾಧ್ಯ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಯಕ್ಷಗಾನ ಸರ್ಟಿಫಿಕೇಟ್ ಹಾಗೂ ಡಿಪ್ಲೊಮೊ ಪರೀಕ್ಷೆ ಸಿದ್ಧತೆ ಕುರಿತು ಮಾಹಿತಿ ನೀಡಲಾಗುವುದು. ಸರ್ಟಿಫಿಕೇಟ್, ಡಿಪ್ಲೋಮ ವಿದ್ಯಾರ್ಥಿಗಳಲ್ಲದ ಯಕ್ಷಗಾನ ಆಸಕ್ತರೂ ಈ ಒಂದು ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.
ತೆಕ್ಕಟ್ಟೆ : ಯಶಸ್ವೀ ಕಲಾವೃಂದ (ರಿ.) ಕೊಮೆ, ತೆಕ್ಕಟ್ಟೆ ಇವರ ವತಿಯಿಂದ ಸಿನ್ಸ್ 1999 ಶ್ವೇತಯಾನ -108 ಕಾರ್ಯಕ್ರಮದಡಿಯಲ್ಲಿ ‘ಯಶಸ್ವಿ ಕಲೋತ್ಸವ 2’ ಮಹಿಳಾ ಸಮ್ಮಿಲನವನ್ನು ದಿನಾಂಕ 23 ಫೆಬ್ರವರಿ 2025ರಂದು ಬೆಳಿಗ್ಗೆ 9-30 ಗಂಟೆಗೆ ತೆಕ್ಕಟ್ಟೆ ಹಯಗ್ರೀವದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ನೃತ್ಯ ಹಾಡು ಯಕ್ಷಗಾನ ಪ್ರಸ್ತುತಗೊಳ್ಳಲಿದೆ. 25ರ ಸಂಭ್ರಮದ ಯಾನದಲ್ಲಿ ಯಶಸ್ವೀ ಕಲಾವೃಂದ ಈ ಕಾರ್ಯಕ್ರಮವು ಆನಂದ್ ಉರಾಳ್ ಹಂದಟ್ಟು ಮತ್ತು ಶಾಂತ ಗಣೇಶ್ ಕುಂಭಾಶಿ ಇವರ ಸಹಕಾರದೊಂದಿಗೆ ನಡೆಯಲಿದೆ.
ಕೋಲಾರ : ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೋಲಾರ ಇವರ ಸಹಯೋಗದಲ್ಲಿ ವಿಶೇಷ ಘಟಕ ಯೋಜನೆಯಡಿ ರಾಜ್ಯಮಟ್ಟದ ‘ಜನಪರ ಉತ್ಸವ -2025’ವನ್ನು ದಿನಾಂಕ 24 ಮತ್ತು 25 ಫೆಬ್ರವರಿ 2025ರಂದು ಕೋಲಾರದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 24 ಫೆಬ್ರವರಿ 2025ರಂದು ಕೋಲಾರದ ಟಿ. ಚನ್ನಯ್ಯ ರಂಗಮಂದಿರದಲ್ಲಿ ಮಧ್ಯಾಹ್ನ 3-00 ಗಂಟೆಗೆ ರಾಜ್ಯ ಮಟ್ಟದ ಕವಿಗೋಷ್ಠಿ, ಹಾಡು ಹುಟ್ಟಿದ ಗಳಿಗೆ ಮಕ್ಕಳ ರಂಗ ರೂಪಕ ಪ್ರಸ್ತುತಗೊಳ್ಳಲಿದೆ. 5-30 ಗಂಟೆಗೆ ಕೋಲಾರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಜನಪರ, ಜನಪದ ಮತ್ತು ಗೀತ ಗಾಯನ ಸಂಭ್ರಮದಲ್ಲಿ ಜನಪದ, ಸುಗಮ ಸಂಗೀತ, ವಚನ, ತತ್ವಪದ, ರಂಗ ಸಂಗೀತ, ನೃತ್ಯ ರೂಪಕ, ನೃತ್ಯ ಪ್ರದರ್ಶನ, ವಾದ್ಯ ಸಂಗೀತ ಮತ್ತು ನಾಟಕ ಪ್ರದರ್ಶನ ನಡೆಯಲಿದೆ. ದಿನಾಂಕ 25 ಫೆಬ್ರವರಿ 2025ರಂದು ಕೋಲಾರದ ಟಿ. ಚನ್ನಯ್ಯ ರಂಗಮಂದಿರದಲ್ಲಿ ಬೆಳಿಗ್ಗೆ 11-00 ಗಂಟೆಗೆ ‘ಸಮಕಾಲೀನ ಸಂದರ್ಭದಲ್ಲಿ ದಲಿತ ಸಮುದಾಯದ ಮುಂದಿರುವ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ…