Subscribe to Updates
Get the latest creative news from FooBar about art, design and business.
Author: roovari
18 ಏಪ್ರಿಲ್ 2023, ಮಂಗಳೂರು: ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಸಂಸ್ಥೆ ಕೇರಳ ಗಡಿನಾಡ ಶಾಖೆ ಮತ್ತು ಸದ್ಬೋಧ ಗುರುಕುಲದ ಹಿಂದೂ ಸಂಸ್ಕಾರ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ “ಹಿಂದೂ ಸಂಸ್ಕಾರ ಬೇಸಿಗೆ ಶಿಬಿರ” ಏಪ್ರಿಲ್ 3 ರಿಂದ 19ರವರೆಗೆ “ಶ್ರೀ ಕೃಷ್ಣ ನಿಲಯ”, ಕೋಟೆಕಣಿ 1ನೇ ಕ್ರಾಸ್, ಉರ್ವಸ್ಟೋರ್, ಮಂಗಳೂರಿನಲ್ಲಿ ನಡೆಯುತ್ತಿದೆ. ಈ ಶಿಬಿರದ ವಿಶೇಷತೆಗಳು 1) ವೇದ ಮಂತ್ರಗಳ ಉಪದೇಶ 2) ಸಂಸ್ಕೃತ ಭಾಷಾ ಪರಿಚಯ 3) ಸುಭಾಷಿತ, ನೀತಿಯ ಕಥೆಗಳು 4) ವಿಷ್ಣುಸಹಸ್ರನಾಮ ಪಠಣಾ ತರಬೇತಿ 5) ಬೌದ್ಧಿಕ, ಒಳಾಂಗಣ ಆಟಗಳು 6) ಧಾರ್ಮಿಕ ಶೈಕ್ಷಣಿಕ ಪ್ರವಾಸ 7) ಭಜನಾ ಸಂಗೀತ ತರಬೇತಿ 8) ಪಂಚಾಂಗ, ರಂಗೋಲಿ ಕಲಿಕೆ 9) ಪುರಾಣದ ಕಥೆಗಳು 10) ರಾಮಾಯಣ, ಭಾಗವತ 11) ಪೂಜೆ ಹೋಮ – ಹಿಂದೂ ಸಂಸ್ಕಾರ 12) ಹಿಂದೂ ಧರ್ಮದ ಶ್ರೇಷ್ಠತೆ ಇತ್ಯಾದಿ ವಿಷಯಗಳಿಗೆ ಒತ್ತು ನೀಡಿ ತರಬೇತಿ ನಡೆಯುತ್ತಿದೆ. ಈ ಶಿಬಿರದಲ್ಲಿ ಸೈಂಟ್ ಆಲೋಶಿಯಶ್ ಕಾಲೇಜಿನ ನಿವೃತ್ತ ಉಪನ್ಯಾಸಕರಾದ…
17 ಏಪ್ರಿಲ್ 2023, ಉಡುಪಿ: ಉಡುಪಿಯ ರಾಗ ಧನ ಸಂಸ್ಥೆಯು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ “ರಾಗರತ್ನಮಾಲಿಕೆ” 11ನೆಯ ಗೃಹ ಸಂಗೀತ ಮಾಲಿಕೆ ಮಣಿಪಾಲದ ಶ್ರೀ ನಾರಾಯಣ ಭಟ್ ಕಿನಿಲ ಹಾಗೂ ಶ್ರೀಮತಿ ಲೀಲಾ ಭಟ್ ಇವರ ಆತಿಥ್ಯ ಹಾಗೂ ಸಹ ಪ್ರಯೋಜಕತ್ವದಲ್ಲಿ ದಿನಾಂಕ 09-04-2023ರಂದು ಅವರ ಸ್ವಗೃಹ ‘ದೇವೀ ಕೃಪಾ’ದಲ್ಲಿ ನಡೆಯಿತು. ಪ್ರಧಾನ ಕಚೇರಿಯ ಪೂರ್ವದಲ್ಲಿ ಕೆಲವು ಎಳೆಯರಿಂದ ಅವರಿಗೆ ವೇದಿಕೆಯ ಅನುಭವ ಆಗಲೆಂಬ ಸದಾಶಯದಿಂದ ಹಾಡುಗಾರಿಕೆ ಏರ್ಪಡಿಸಲಾಗಿತ್ತು. ಕು. ಸಿಯಾ ಎ. ಬಲ್ಲಾಳ್, ಕು. ಪ್ರಣತಿ ಎಸ್. ಭಟ್, ಕು. ಧೃತಿ ಎಸ್. ಭಟ್, ಕು. ಸ್ವಸ್ತಿ ಎಂ. ಭಟ್, ಕು. ಅಚಲ ಎ. ರಾವ್, ಮಾಸ್ಟರ್ ತೀಕ್ಷಣ್ ಮತ್ತು ಕು. ರೋಶ್ನಿ ಎಸ್. ಶೆಟ್ಟಿ, ಕ್ರಮ ಪ್ರಕಾರವಾಗಿ ಒಂದು ವರ್ಣ, ಒಂದು ಕೃತಿ, ಒಂದು ದೇವರನಾಮ ಪಕ್ಕ ವಾದ್ಯಗಳೊಂದಿಗೆ ಅಚ್ಚುಕಟ್ಟಾಗಿ ಹಾಡಿ ಶ್ರೋತೃಗಳ ಮೆಚ್ಚುಗೆ ಪಡೆದರು. ಆರಂಭದಲ್ಲಿ ಪ್ರಾರ್ಥನೆಯನ್ನು ಡಾ. ರಶ್ಮಿ ನಾಯಕ್ ಇವರು ಗಜಾನನಯುತಂ…
17 ಎಪ್ರಿಲ್ 2023, ಕಾರ್ಕಳ: ಏಕಚಿತ್ತವಾದ ಮನಸ್ಸಿದಿಂದ ಉತ್ತಮ ಕಾವ್ಯದ ಹುಟ್ಟು “ಋಷಿಯಲ್ಲದವ ಕವಿಯಾಗಲಾರ ಅನ್ನುವ ಮಾತಿದೆ. ಹೊರ ಜಗತ್ತನ್ನು ನೋಡುತ್ತಾ, ಅನುಭವಿಸುತ್ತಾ ಯಾರೂ ಕಾಣದೇ ಇರುವುದನ್ನು ಕವಿ ಕಾಣಬಲ್ಲ. ಅಂದರೆ ಬಹಿರ್ಮುಖವಾಗಿ ಕಾಣುವ ಸಂಗತಿಗಳೆಲ್ಲವನ್ನೂ ಅಂತರ್ಮುಖಿಯಾಗಿಸಿಕೊಂಡಾಗ ಅದು ಆತನಿಗೆ ಭಿನ್ನವಾಗಿ ಗೋಚರಿಸುತ್ತದೆ. ಅದನ್ನು ಋಷಿಯಂತೆ ಏಕ ಚಿತ್ತದ ಮನಸ್ಸಿನಿಂದ ಕಲೆಗಾರಿಕೆಯೊಂದಿಗೆ ಮಂಥನಕ್ಕೊಳಪಡಿಸಿದಾಗ ಉತ್ತಮ ಕಾವ್ಯ ಹುಟ್ಟಿಕೊಳ್ಳುತ್ತದೆ” ಎಂಬುದಾಗಿ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಕನ್ನಡ ಉಪನ್ಯಾಸಕರಾದ ಡಾ. ಯೋಗೀಶ್ ಕೈರೋಡಿಯವರು ಇಲ್ಲಿ ಮಾತನಾಡುತ್ತಾ ತಿಳಿಸಿದರು. ಕನ್ನಡ ಸಂಘ ಕಾಂತಾವರ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಇವುಗಳ ಜಂಟಿ ಸಹಯೋಗ ಹಾಗೂ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಕಾರ್ಕಳದ ಹೋಟೆಲ್ ಪ್ರಕಾಶ್ ಇದರ ಸಂಭ್ರಮ ಸಭಾಂಗಣದಲ್ಲಿ ನಡೆದ ತಿಂಗಳ ಅರಿವು ತಿಳಿವು ಉಪನ್ಯಾಸ ಕಾರ‍್ಯಕ್ರಮದಲ್ಲಿ ಅವರು “ಹೊಸಗನ್ನಡ ಕಾವ್ಯ – ಶಕ್ತಿ ಮತ್ತು ಸೌಂದರ‍್ಯ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ದಾರ್ಶನಿಕರು ಕಾವ್ಯದ ಬಗ್ಗೆ…
ಯಕ್ಷಗಾನ ಗಂಡು ಮೆಟ್ಟಿನ ಕಲೆ ಎಂದು ಲಾಗಾಯ್ತಿನಿಂದಲೂ ಕರೆಸಿಕೊಂಡು ಮೆರೆದ ಕಮನೀಯ ಕಲೆ. ಇದರಲ್ಲಿ ಹೆಂಗಳೆಯರು ಎಲ್ಲ ಅಡೆತಡೆಗಳನ್ನೂ ಮೆಟ್ಟಿನಿಂತು ಗಂಡಸರಿಗೆ ಸಮದಂಡಿಯಾಗಿ ಬೆಳೆದಿದ್ದಾರೆ ಮತ್ತು ಯಕ್ಷ ಪ್ರಮೀಳೆಯರ ವಂಶವೂ ಬೆಳೆಯುತ್ತಲೇ ಇದೆ. ತೆಂಕು-ಬಡಗು ತಿಟ್ಟುಗಳೆಂಬ ಭೇದವಿಲ್ಲದೆ, ಸರ್ವಾಂಗ ಸುಂದರವಾದ ಸಮಷ್ಟಿ ಕಲೆ ಯಕ್ಷಗಾನದ ಎಲ್ಲ ವಿಭಾಗಗಳಲ್ಲೂ ಮಹಿಳೆಯರು ಮಿಂಚುತ್ತಿದ್ದಾರೆ. ಅದು ಚೆಂಡೆ, ಮದ್ದಳೆಯಿರಲಿ, ನಾಟ್ಯ, ಗಾಯನವಿರಲಿ, ಅರ್ಥಗಾರಿಕೆಯೇ ಇರಲಿ; ಇಲ್ಲಿ ಮಹಿಳಾ ಸ್ವಾತಂತ್ರ್ಯವಿದೆ ಮತ್ತು ಪ್ರೋತ್ಸಾಹವೂ ಇದೆ. ಲಿಂಗ ಸಮಾನತೆಯನ್ನು ಯಾವುದೇ ಅಡೆತಡೆಗಳಿಲ್ಲದೆ ಸಾಧಿಸಿದ ಕಲಾಪ್ರಕಾರ ಯಕ್ಷಗಾನವೆಂದರೂ ತಪ್ಪಲ್ಲ ಇಂತಹ ಶ್ರೀಮಂತ ಕಲೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದ ಕಲಾವಿದೆ ಶ್ರೀಮತಿ ವಸುಂಧರಾ ಹರೀಶ್ ಶೆಟ್ಟಿ. 29.02.1985ರಂದು ಅಪ್ಪಯ್ಯ ರೈ ಮುಚ್ಚಿರ್ಕವೆ ಹಾಗೂ ಸುಶೀಲಾ ಎ ರೈ (ನಿವೃತ್ತ ಮುಖ್ಯೋಪಾಧ್ಯಾಯಿನಿ) ದಂಪತಿಯರ ಮಗಳಾಗಿ ವಸುಂಧರಾ ಹರೀಶ್ ಶೆಟ್ಟಿ ಅವರ ಜನನ. MA, BED in English Literature ಇವರ ವಿದ್ಯಾಭ್ಯಾಸ. ಬಾಲ್ಯದಲ್ಲಿ ನೋಡಿದ ಯಕ್ಷಗಾನ ಬಯಲಾಟಗಳು ಇವರು ಯಕ್ಷಗಾನ ರಂಗಕ್ಕೆ…
ನನ್ನ ಮನಸ್ಸಿನ ಜೊತೆಗೆ ಸಂವಾದ ನಡೆಸಲು ನಾನು ಬಳಸಿಕೊಂಡ ಮಾಧ್ಯಮ ನೃತ್ಯ ಕ್ಷೇತ್ರ. ನೃತ್ಯದ ಕಲಿಕೆಯ ಜೊತೆಗೆ, ಅದರ ವಿಭಿನ್ನವಾದ ಆಯಾಮಗಳನ್ನು ತಿಳಿದುಕೊಳ್ಳುತ್ತಾ, ಅದರೊಂದಿಗೆ ನಡೆಸುವ ಸೂಕ್ಷ್ಮ ಸಂವೇದನೆಯನ್ನು ತಿಳಿಸುವ ಸಾಧನವೇ ಮನಸ್ಸು. ಮನಸ್ಸು ಮರ್ಕಟನಂತೆ, ಈಗೊಮ್ಮೆ ಆಗೊಮ್ಮೆ ಬದಲಾಗುತ್ತಾ ಹೋಗುತ್ತದೆ. ಕೆಲವೊಂದನ್ನು ಸ್ವೀಕರಿಸುತ್ತಾ, ಇನ್ನೂ ಕೆಲವನ್ನು ವಿರೋಧಿಸುತ್ತಾ, ವಿಭಿನ್ನ ಗತಿಯೊಳಗೆ ಚಲಿಸುತ್ತದೆ. ನೃತ್ಯ ಮಾಧ್ಯಮವಿಂದು ಸಮಾಜದ ಒಳಿತು ಕೆಡುಕುಗಳನ್ನು ವೇದಿಕೆಯಲ್ಲಿ ಪ್ರಸ್ತುತಪಡಿಸುತ್ತಾ, ಸಾಮಾಜಿಕ ಬದಲಾವಣೆಗಳನ್ನು ತರುವ ನಿಟ್ಟಿನಲ್ಲಿ ತನ್ನದೇ ಆದ ಪ್ರಯತ್ನವನ್ನು ಮಾಡುತ್ತಾ ಪ್ರೇಕ್ಷಕರನ್ನು ಹೆಚ್ಚಿಸಿಕೊಳ್ಳುತ್ತಿದೆ. ನೃತ್ಯವು ಮನೋವಿಕಾರಗಳನ್ನು ಶಮನ ಮಾಡಿ, ಮಾನಸಿಕ ಆಘಾತಗಳನ್ನು ನಿವಾರಿಸಿ, ವ್ಯಕ್ತಿಗಳ ಆತ್ಮಸಂವೇದನೆಯನ್ನು ಉತ್ತಮ ರೀತಿಯಲ್ಲಿ ಪ್ರಚುರಪಡಿಸುವ ಮತ್ತು ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾದ ಫಲಿತಾಂಶಗಳನ್ನು ನೀಡುತ್ತಾ ಬರುತ್ತಿರುವ ಶ್ರೇಷ್ಠ ಮಾಧ್ಯಮಗಳಲ್ಲೊಂದು. ‘ನನ್ನ ಮಗನನ್ನು ನೃತ್ಯಪಟುವಾಗಿ ರೂಪಿಸಿಯೇ ತೀರುತ್ತೇನೆ’ ಎಂಬ ಹಠ ಹೊತ್ತ ಕೆಚ್ಚೆದೆಯ ತಾಯಿಯ ಆಸೆಯಂತೆ ನೃತ್ಯವನ್ನು ನನ್ನ ಆರನೆಯ ವಯಸ್ಸಿನಲ್ಲಿಯೇ ಕಲಿಯಲು ಪ್ರಾರಂಭಿಸಿದೆ. ಗಾತ್ರದಲ್ಲಿ ಸಣ್ಣಕ್ಕಿದ್ದ ನನ್ನನ್ನು ನೋಡಿದ ನೃತ್ಯ ಗುರುಗಳು, “ಇನ್ನೊಂದು…
15 ಏಪ್ರಿಲ್ 2023, ಮಂಗಳೂರು: ತುಳು ಪರಿಷತ್ ಮತ್ತು ಮ್ಯಾಪ್ಸ್ ಕಾಲೇಜು ಇದರ ಜಂಟಿ ಆಶ್ರಯದಲ್ಲಿ ಮುಂಬಯಿಯ ಲೇಖಕಿ ಶಾರದಾ ಎ. ಅಂಚನ್ ಅವರ ‘ನಂಬಿ ಸತ್ಯೋಲು’ ಅನುವಾದಿತ ಕೃತಿ ಮತ್ತು ‘ರಕ್ತ ಶುದ್ಧಿ-ಆರೋಗ್ಯ ವೃದ್ಧಿ’ ಎಂಬ ವೈದ್ಯಕೀಯ ಲೇಖನಗಳ ಸಂಕಲನ ಕೃತಿ ಹಾಗೂ ಡಾ. ಪ್ರಭಾಕರ್ ನೀರುಮಾರ್ಗ ಅವರ ‘ಓಲಗ’ ಕಾದಂಬರಿ ಬಿಡುಗಡೆ ಸಮಾರಂಭ ಮತ್ತು ಬಿಸು ಹಬ್ಬದ ವಿಚಾರ ವಿನಿಮಯ ಕಾರ್ಯಕ್ರಮವು ಮಂಗಳೂರಿನ ಬಂಟ್ಸ್ ಹಾಸ್ಟಲ್ ಸಮೀಪದ ಮ್ಯಾಪ್ಸ್ ಕಾಲೇಜು ಸಭಾಂಗಣದಲ್ಲಿ ದಿನಾಂಕ 13-04-2023ರಂದು ನಡೆಯಿತು. ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿ ಬಿ.ಎಂ. ರೋಹಿಣಿ ಕೃತಿಗಳನ್ನು ಬಿಡುಗಡೆಗೊಳಿಸಿ “ಪುಸ್ತಕ ಪ್ರಕಟಣೆ ಮಾಡುವಷ್ಟೆ ಕಷ್ಟದ ಕೆಲಸ ಅದನ್ನು ಮಾರಾಟ ಮಾಡುವುದು. ಆದರೆ ಲೇಖಕರು ವರ್ಷಕ್ಕೆ ಒಂದು ಅಥವಾ ಎರಡು ಪುಸ್ತಕಗಳ ಬಿಡುಗಡೆ ಮಾಡುವ ಮೂಲಕ ಆಶ್ಚರ್ಯ ಮೂಡಿಸುತ್ತಿದ್ದಾರೆ ಹಾಗೂ ಮೂರು ಪುಸ್ತಕಗಳನ್ನು ಬಿಡುಗಡೆಗೊಳಿಸುವುದು ತುಂಬಾ ವಿಶೇಷವಾಗಿದೆ”ಎಂದು ಹೇಳಿದರು. ತುಳು ಸಾಹಿತಿ ಕುಶಾಲಾಕ್ಷಿ ವಿ. ಕುಲಾಲ್ ಕಣ್ವತೀರ್ಥ ಮಾತನಾಡಿ ತುಳು ನಾಡಿನಲ್ಲಿ ಬಿಸು ಹಬ್ಬದ…
15 ಏಪ್ರಿಲ್ 2023, ಮಂಗಳೂರು: “ಕಲಾಕುಂಚ” (ರಿ) ಸಾಂಸ್ಕೃತಿಕ ಸಂಸ್ಥೆ ದಾವಣಗೆರೆ- ಇದರ ಕೇರಳ, ಗಡಿನಾಡ ಘಟಕದಿಂದ ಸೌರಮಾನ ಯುಗಾದಿ (ವಿಷು) ಪ್ರಯುಕ್ತ ಸಾಹಿತ್ಯಕ್ಕೆ ಸಂಬಂಧ ಪಟ್ಟ ಸ್ಪರ್ಧೆಯೊಂದನ್ನು ಹಮ್ಮಿಕೊಂಡಿದೆ. ಸಾಹಿತ್ಯದ ಹಲವು ಪ್ರಕಾರಗಳಲ್ಲಿ “ಜೋಗುಳ” ಹಾಡೂ ಪ್ರಧಾನವಾಗಿದೆ. ತೊಟ್ಟಿಲಲ್ಲಿ ಮಲಗಿದ ಪುಟ್ಟ ಮಗುವನ್ನು ತಾಯಿಯು ಜೋಗುಳ ಹಾಡಿ ತೂಗುತ್ತಿರುವ ದೃಶ್ಯ ಸುಮನೋಹರವಾದುದು. ಎಳೆಯ ಕಂದನನ್ನು ಶ್ರೀಕೃಷ್ಣ ಪರಮಾತ್ಮನಿಗೆ ಹೋಲಿಸಿ ರಾಗವಾಗಿ ಹಾಡುವಾಗ ತೊಟ್ಟಿಲ ಕಂದ ಹಾಡಿನ ಲಯ, ಇಂಪನ್ನು ಆಸ್ವಾದಿಸುತ್ತಾ ನಿದ್ರಾಲೋಕಕ್ಕೆ ಜಾರುತ್ತದೆ. ಜೋಗುಳವನ್ನಾಲಿಸಿದ ಪುಟ್ಟ ಮಗುವಿನ ಏಕಾಗ್ರತಾ ಶಕ್ತಿಹೆಚ್ಚಾಗುತ್ತದೆ. ಚೆನ್ನಾಗಿ ನಿದ್ರೆ ಮಾಡುತ್ತದೆ.ಇತ್ತೀಚೆಗೆ ಈ ಪದ್ಧತಿ ನಶಿಸಿ ಹೋಗುತ್ತಿದೆ. ಈ ಪದ್ದತಿ ಪುನರಾವರ್ತನೆ ಆಗಬೇಕು. ಇಂದಿನ ಯಾಂತ್ರಿಕ ಬದುಕಿನ ಜಂಜಾಟದಿಂದ ಜನ ಹೊರಗೆ ಬರಬೇಕು. ಅದಕ್ಕಾಗಿ ಇದೊಂದು ವೇದಿಕೆ ತಯಾರಾಗಿದೆ. ಜೋಗುಳ ಹಾಡು ರಚನಾ ಸ್ಪರ್ಧೆಯ ನಿಯಮಗಳು : ಒಬ್ಬರು ಒಂದೇ ಹಾಡನ್ನು ಕಳಿಸಬೇಕು. ಮೊಬೈಲಿನಲ್ಲಿ ಟೈಪಿಸಿದ ಹಾಡುಗಳನ್ನೇ ಕಳಿಸಿರಿ. ಅಕ್ಷರ ತಪ್ಪುಗಳಿಲ್ಲದ ಸುಂದರ ರಚನೆಯಾಗಿರಲಿ ಹನ್ನೆರಡರಿಂದ ಹದಿನಾರು ಸಾಲುಗಳ ಮಿತಿಯಲಿರಲಿ…
ಧೀರಜ್ ರೈ ಸಂಪಾಜೆ 15.04.1989 ರಂದು ಕೆ.ಆರ್. ಚಂದ್ರಶೇಖರ ರೈ ಸಂಪಾಜೆ ಹಾಗೂ ಪದ್ಮಾವತಿ ಸಿ. ರೈ ದಂಪತಿಯವರ 3 ಮಂದಿ ಮಕ್ಕಳಲ್ಲಿ ಹಿರಿಯ ಮಗನಾಗಿ ಜನನ. ಧನ್ ರಾಜ್ ರೈ, ಹರ್ಷರಾಜ್ ರೈ ಇವರ ತಮ್ಮಂದಿರು. ಸಿವಿಲ್ ಎಂಜಿನಿಯರಿಂಗ್ ಇವರ ವಿದ್ಯಾಭ್ಯಾಸ. ಅಜ್ಜ ಮಾದೇಪಾಲು ದಿ.ರಾಮಣ್ಣ ರೈ ಯವರು ಯಕ್ಷಗುರುಗಳು, ಸ್ತ್ರೀ ಪಾತ್ರಧಾರಿಯಾಗಿ ಕಲಾಸೇವೆ ಗೈದವರು. ತಂದೆ ಕೆ.ಆರ್.ಚಂದ್ರಶೇಖರ ರೈ ಸಂಪಾಜೆಯವರು ತೆಂಕು-ಬಡಗು ಉಭಯ ತಿಟ್ಟುಗಳಲ್ಲೂ ಸ್ತ್ರೀ ವೇಷ, ಪುಂಡುವೇಷ, ಕಿರೀಟ ವೇಷಧಾರಿಯಾಗಿ, ಚೌಡೇಶ್ವರಿ ಮೇಳ, ಸಾಲಿಗ್ರಾಮ ಮೇಳ,ಕಟೀಲು ಮೇಳ ನಂತರ ಹವ್ಯಾಸಿಯಾಗಿ ಸೇವೆ ಸಲ್ಲಿಸಿದರು. ದೊಡ್ಡಪ್ಪ ಯಕ್ಷ ರತ್ನ ರಾ.ಪ್ರ.ವಿ.ದಿ.ಶೀನಪ್ಪ ರೈ ಸಂಪಾಜೆಯವರು ತೆಂಕುತಿಟ್ಟಿನ ಅಗ್ರಮಾನ್ಯ ಕಲಾವಿದರು. ಚಿಕ್ಕಪ್ಪ ಕೆ.ಆರ್.ಗಂಗಾಧರ ರೈ ಯವರು ಹವ್ಯಾಸಿ ಮದ್ದಳೆಗಾರರು. ಹಾಗಾಗಿ ಯಕ್ಷಗಾನ ಪರಂಪರೆಯಿಂದಾಗಿ ಅಭಿರುಚಿ ತಾನಾಗಿಯೇ ಬಂತು ಎಂದು ಹೇಳುತ್ತಾರೆ ಧೀರಜ್ ರೈ ಸಂಪಾಜೆ. ಯಕ್ಷಗಾನದ ಗುರುಗಳು:- ಭಾಗವತಿಕೆ:- ನಾದಬ್ರಹ್ಮ ಶ್ರೀ ಸುಬ್ರಹ್ಮಣ್ಯ ಭಟ್ ಮಾಂಬಾಡಿ. ಅಭಿನವ ವಾಲ್ಮೀಕಿ ದಿ. ಪುರುಷೊತ್ತಮ…
14-04-2023,ಮಂಗಳೂರು: ಉಡುಪಿಯ ಚಿತ್ರ ಕಲಾವಿದ ಸಕು ಅವರ ಶಿಲ್ಪ ಕಲಾಕೃತಿ (ರಿಲೀಫ್)ಗಳ ಪ್ರದರ್ಶನ ಹ್ಯುಮಾನೆ -2 ಮಂಗಳೂರಿನ ಬಲ್ಲಾಳ್ ಬಾಗ್‌ನ ಪ್ರಸಾದ ಆರ್ಟ್ ಗ್ಯಾಲರಿಯಲ್ಲಿ ದಿನಾಂಕ 14-04-2023ರಂದು ಉದ್ಘಾಟನೆಗೊಂಡಿತು. ಈ ಶಿಲ್ಪಕಲಾ ಪ್ರದರ್ಶನವನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಶ್ರೀ ಆನಂದ ಕೆ. ಉದ್ಘಾಟಿಸಿದರು. ಅತಿಥಿಗಳಾಗಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ| ತುಕರಾಮ್ ಪೂಜಾರಿ, ಡಾ| ಟಿ.ಡಿ. ರಾಮಮೂರ್ತಿ, ಪ್ರಸಾದ್ ಆರ್ಟ್ ಗ್ಯಾಲರಿಯ ನಿರ್ದೇಶಕರಾದ ಕೋಟಿ ಪ್ರಸಾದ್ ಆಳ್ವ, ಹಿರಿಯ ಚಿತ್ರ ಕಲಾವಿದರಾದ ಗಣೇಶ ಸೋಮಯಾಜಿ ಭಾಗವಹಿಸಿದರು ಚಿತ್ರ ಕಲಾವಿದ ಸಕು ಪಾಂಗಾಳ ಅವರು ಮಾತನಾಡಿ ’’ಈ ಶಿಲ್ಪ ಕಲಾಕೃತಿಗಳು ಕಪ್ಪೆ ಬೊಂಡಾಸ್ ಮೀನಿನ ಚಿಪ್ಪಿನಿಂದ (cuttlefish bone) ಮಾಡಲಾಗಿದೆ. 1997 ರಿಂದಲೇ ಕಡಲ ಬದಿಯಲ್ಲಿ ಸಿಗುವ ಈ ನಿರುಪಯುಕ್ತ ವಸ್ತುವಿನಿಂದ ಕಲಾಕೃತಿಗಳನ್ನು ರಚಿಸಲು ಪ್ರಾರಂಭಿಸಿದ್ದು ಇದರ ಮೊದಲ ಪ್ರದರ್ಶನ ಏಪ್ರಿಲ್ 3 ರಿಂದ 9 ರ ವರೆಗೆ ಉಡುಪಿಯಲ್ಲಿ ಯಶಸ್ವಿಯಾಗಿ ನಡೆದಿದೆ’’ ಎಂದರು. . ಈ…
15 ಏಪ್ರಿಲ್ 2023, ಬೆಂಗಳೂರು: ಮಗುವಿನ ಮನೋವಿಜ್ಞಾನವನ್ನು ಅರ್ಥಮಾಡಿಕೊಳ್ಳಲು ಥಿಯೇಟರ್ ವಿಧಾನವನ್ನುಬಳಸುವ ವಿಭಿನ್ನ ಶಿಬಿರವು ಚುಕ್ಕಿರಮಾ ಇವರ ನಿರ್ದೇಶನದಲ್ಲಿ ಸಂಚಾರಿ ಥಿಯೇಟರ್ ಇದರ ಸಹಭಾಗಿತ್ವ ದೊಂದಿಗೆ ಏಪ್ರಿಲ್ 17 ಮತ್ತು ಏಪ್ರಿಲ್ 20ರಂದು ಎರಡು ಬ್ಯಾಚ್ ಗಳಲ್ಲಿ ಬೆಂಗಳೂರಿನ ಬಸವನಗುಡಿಯ ಪುಟ್ಟಣ್ಣ ರಸ್ತೆಯ ಸ್ಕಂದ ಕಟ್ಟಡದಲ್ಲಿ ನಡೆಯಲಿದೆ. ಕಾಲೇಜಿನ ಪ್ರಾಜೆಕ್ಟಿಗೆ ‘ನಲಿ ಮನ’ ಎಂಬ ಕಲ್ಪನೆ ನನ್ನ ಮನದಲ್ಲಿ ಮೂಡಿತು. ಎಂ.ಎಸ್ಸಿ.ಸೈಕಾಲಜಿಯ ನಮ್ಮ 4ನೇ ಸೆಮಿಸ್ಟರ್ ನಲ್ಲಿ ನಾವೆಲ್ಲರೂ ಈ ಪ್ರಾಜೆಕ್ಟ್ ಮಾಡಬೇಕಾಗಿತ್ತು. ನನ್ನ ಯೋಜನೆ ಸೈಕಾಲಜಿ ಮತ್ತು ಥಿಯೇಟರ್‌ನ ಸಂಯೋಜನೆಯಾಗಿರಬೇಕು ಎಂಬ ಅಸ್ಪಷ್ಟ ಕಲ್ಪನೆ ನನಗಿತ್ತು . ಬಾಲ್ಯದಿಂದಲೂ ರಂಗಭೂಮಿಯೊಂದಿಗೆ ಸದಾ ಸಂಬಂಧ ಹೊಂದಿದ್ದ ನನಗೆ ಮನೋವಿಜ್ಞಾನವನ್ನು ಅಧ್ಯಯನ ಮಾಡುವುದರಿಂದ ನಾನು ಆಯ್ಕೆ ಮಾಡಿದ ವಿಷಯಕ್ಕೆ ಬಹಳ ಪೂರಕವಾಗಿರುತ್ತದೆ ಎಂಬುದು ನನ್ನ ಯೋಚನೆಗೆ ಬಂದಿತು. ನನ್ನ ಜೀವನದಲ್ಲಿ ರಂಗಭೂಮಿಯ ಮಹತ್ವವನ್ನು ನಾನು ಆಳವಾಗಿ ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದೆ. ಆದ್ದರಿಂದ ಈ ಎರಡೂ ಅಂಶಗಳನ್ನು ನನ್ನ ಮನಸ್ಸಿನಲ್ಲಿಟ್ಟುಕೊಂಡು ನನ್ನ ಯೋಜನೆಯಲ್ಲಿ ಕೆಲಸ ಮಾಡಲು ನಾನು…