Author: roovari

ದೆಹಲಿ: ಗುರು ಸರೋಜಾ ವೈದ್ಯನಾಥನ್ ದಿನಾಂಕ 21-09-2023ರಂದು ತನ್ನ 86ನೆಯ ವಯಸ್ಸಿನಲ್ಲಿ ದೆಹಲಿಯ ಸ್ವಗೃಹದಲ್ಲಿ ಅನಾರೋಗ್ಯದ ಕಾರಣ ನಿಧನ ಹೊಂದಿದ್ದಾರೆ. ‘ಗಣೇಶ ನಾಟ್ಯಾಲಯ’ ಸಂಸ್ಥೆಯನ್ನು 1974ರಲ್ಲಿ ಹುಟ್ಟು ಹಾಕಿದ ಇವರೊಬ್ಬ ಪ್ರಖ್ಯಾತ ನೃತ್ಯ ಸಂಯೋಜಕಿ, ಬರಹಗಾರ್ತಿ. ನೃತ್ಯ ಮತ್ತು ಸಾಹಿತ್ಯವನ್ನು ಮುಖ್ಯವಾಗಿಟ್ಟುಕೊಂಡು ಅದರ ಶುದ್ಧತೆಯನ್ನು ಉಳಿಸಿ, ಬೆಳೆಸಿ ಇತರ ಕಲಾವಿದರೂ ಅದನ್ನು ಮುಂದಿನ ಪೀಳಿಗೆಗೆ ತಲುಪಿಸುವಂತೆ ಪ್ರಯತ್ನಿಸುವಲ್ಲಿ ಪ್ರಾಮಾಣಿಕವಾಗಿ ದುಡಿದ ಇವರೊಬ್ಬ ನೃತ್ಯ ಕ್ಷೇತ್ರದ ಹರಿಕಾರರೆಂದೇ ಹೇಳಬಹುದು. ಸಂಗೀತ ಮತ್ತು ನೃತ್ಯ ಕ್ಷೇತ್ರಕ್ಕೆ ಸಂಬಂಧಪಟ್ಟ ಹಾಗೇ ಅನೇಕ ಕೃತಿಗಳನ್ನು ಬರೆದು ಪ್ರಕಟಿಸಿದ್ದಾರೆ. 2002ರಲ್ಲಿ ಪದ್ಮಶ್ರೀ ಪ್ರಶಸ್ತಿ, 2013ರಲ್ಲಿ ಪದ್ಮಭೂಷಣ ಪ್ರಶಸ್ತಿ, ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ ಮತ್ತು ತಮಿಳ್ನಾಡು ಸರಕಾರದಿಂದ ಕಲೈಮಾಮಣಿ ಪುರಸ್ಕಾರ ಇವೆಲ್ಲವೂ ನೃತ್ಯ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆಗೆ ಸಂದ ಗೌರವಗಳು.

Read More

ಸಿದ್ದಾಪುರ : ಖ್ಯಾತ ಯಕ್ಷಗಾನ ಭಾಗವತ ರಾಮಚಂದ್ರ ನಾಯ್ಕ ಹೆಮ್ಮನಬೈಲ್ ದಿನಾಂಕ 20-09-2023ರ ಬುಧವಾರ ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದರು. ಉ.ಕ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಗೌರಾ ನಾಯ್ಕ ಮತ್ತು ಕನ್ನಮ್ಮ ದಂಪತಿಗಳಿಗೆ 1-09-1959ರಲ್ಲಿ ಜನಿಸಿದ ಇವರು ಹಂಗಾರಕಟ್ಟೆ ಯಕ್ಷಗಾನ ಕೇಂದ್ರದಲ್ಲಿ 1984ರಲ್ಲಿ ತಮ್ಮ ಯಕ್ಷಗಾನ ಶಿಕ್ಷಣ ಆರಂಭಿಸಿದರು. ಮುಂದೆ ಗುರುಗಳಾದ ಶ್ರೀ ಕೆ.ಪಿ ಹೆಗಡೆ, ಸದಾನಂದ ಐತಾಳ, ದುರ್ಗಪ್ಪ ಗುಡಿಗಾರ, ಘೋರ್ಪಡೆ ವಿಠ್ಠಲಯ್ಯನವರು ಮತ್ತು ಶ್ರೀ ಸದಾನಂದ ಹೆಬ್ಬಾರರ ಮಾರ್ಗದರ್ಶನದಲ್ಲಿ ಪ್ರಬುದ್ದರಾಗಿ ಬೆಳೆದರು. ಸಣ್ಣಸ್ವರ, ಬಿಗಿಯಾದ ಲಯದ ಹಿಡಿತ ಹಾಗೂ ಸ್ಪಷ್ಟ ಸಾಹಿತ್ಯದ ಭಾಗವತರಾಗಿದ್ದ ಇವರು ಕೃತಿ ರಚನಾಕಾರರೂ ಆಗಿದ್ದರು. ಶ್ರೀಯುತರು ಗೋಳಿಗರಡಿ, ರಂಜದಕಟ್ಟೆ, ಅಮೃತೇಶ್ವರಿ, ಕುಮಟ, ಪೆರ್ಡೂರು, ಸಾಲಿಗ್ರಾಮ,ಹಾಲಾಡಿ, ಮಡಾಮಕ್ಕಿ, ಶನೀಶ್ವರ, ಆಜ್ರಿ, ಕಳವಾಡಿ, ಸಿಗಂದೂರು ಇತ್ಯಾದಿ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದಾರೆ. 57ವರ್ಷ ವಯಸ್ಸಾಗಿದ್ದ ಇವರು ಪತ್ನಿ, ಪುತ್ರ, ಪುತ್ರಿ, ಅಪಾರ ಬಂಧುಗಳು ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ.

Read More

ಮಂಗಳೂರು : ಕರಾವಳಿ ಸಂಗೀತ ಕಲಾವಿದರ ಒಕ್ಕೂಟ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ವತಿಯಿಂದ ದಿ. ಲಿಯಾಂಡರ್ ವರ್ನನ್ ನೊರೊನ್ಹಾ ಸಂಸ್ಮರಣೆಯ ಸಹ ಪ್ರಾಯೋಜಕತ್ವದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಏರ್ಪಡಿಸಿದ್ದ ‘ಸ್ವರ ಕುಡ್ಲ ಸೀಸನ್ -5’ ಸಂಗೀತ ಸ್ಪರ್ಧೆಯ ಉದ್ಘಾಟನಾ ಸಮಾರಂಭವು ದಿನಾಂಕ 17-09-2023ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರು ವಿಶ್ವವಿದ್ಯಾನಿಲಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕರ್ನಲ್ ಶರತ್ ಭಂಡಾರಿ ನಿಟ್ಟೆಗುತ್ತು ಇವರು ಮಾತನಾಡುತ್ತಾ “ಸಂಗೀತ ಕೇಳುವುದರಿಂದ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುತ್ತದೆ. ಉತ್ತಮ ಸಂಗೀತಗಳು ಮನಸ್ಸಿಗೆ ಮುದ ನೀಡುತ್ತವೆ. ಸಂಗೀತ ಕೇಳುವುದು ಉತ್ತಮ ಅಭ್ಯಾಸ” ಎಂದು ಅಭಿಪ್ರಾಯಪಟ್ಟರು. ಖ್ಯಾತ ಗಾಯಕ ಟಾಗುರ್ ದಾಸ್ ಅವರು ಸ್ಪರ್ಧೆಗೆ ಚಾಲನೆ ನೀಡಿದರು. ಒಕ್ಕೂಟದ ಅಧ್ಯಕ್ಷ ಮೋಹನ್ ಪ್ರಸಾದ್ ನಂತೂರು ಅಧ್ಯಕ್ಷತೆ ವಹಿಸಿದ್ದರು. ಸಿಂಫನಿ ಮ್ಯೂಸಿಕಲ್ ಇನ್ ಸ್ಟ್ರುಮೆಂಟ್ ಮಳಿಗೆಯ ಮಾಲಕರು ಲೊಯ್‌ ನೊರೊನ್ಹಾ ದಂಪತಿ ಹಾಗೂ ವಿಶ್ವವಿದ್ಯಾನಿಲಯ ಕಾಲೇಜು ಹಳೆ ವಿದ್ಯಾರ್ಥಿ ಸಂಘದ…

Read More

ಕಾಸರಗೋಡು : ಶ್ರೀಮದ್ ಎಡನೀರು ಮಠದಲ್ಲಿ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ತೃತೀಯ ಚಾತುರ್ಮಾಸ್ಯ ವ್ರತಾಚರಣೆಯ ಪ್ರಯುಕ್ತ ಕಾಸರಗೋಡು ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘದ ವತಿಯಿಂದ ಸಾಹಿತ್ಯ ಗಾನ ನೃತ್ಯ ವೈಭವ ಕಾರ್ಯಕ್ರಮವು ದಿನಾಂಕ 16-09-2023ರಂದು ಜರಗತು. ಕಲಾವಿದರಾದ ಗುರುರಾಜ್ ಕಾಸರಗೋಡು, ಅವನಿ ಎಂ.ಎಸ್. ಸುಳ್ಯ, ಸನುಷಾ ಸುನೀಲ್, ಪ್ರಥಮ್ಯ ಯು.ವೈ., ಶ್ರೀರಕ್ಷಾ ಸರ್ವಂಗಳ, ಅಹನಾ ಎಸ್.ರಾವ್, ತನ್ವಿ ಶೆಟ್ಟಿ ಪಾಣಾಜೆ, ಜ್ಞಾನ ರೈ ಪುತ್ತೂರು, ಆಜ್ಞಾ ರೈ ಪುತ್ತೂರು, ಉಷಾ ಸುಧಾಕರನ್‌, ವರ್ಷಾ ಶೆಟ್ಟಿ, ಬಂಬ್ರಾಣ, ಶ್ರದ್ಧಾ ಎ.ಎಸ್., ಭಾನ್ವಿ ಕುಲಾಲ್, ಮೇಧಾ ಎ.ಎಸ್., ಸನುಷಾ ಸುಧಾಕರನ್, ಶ್ವೇತಾ ಯು.ವೈ.ನೆಲ್ಯಾಡಿ, ಆದ್ಯಂತ ಅಡೂರು, ಶ್ರೀಶ ಎಂ.ಎಸ್., ಅಭಿನವ ಶಿವರಾಮ, ಧನ್ವಿತ್ ಕೃಷ್ಣ, ಅಸ್ತಾ ಶೆಟ್ಟಿ, ದೃತಿಕ್ ಆರ್.ರೈ, ಪೂಜಾ, ಕೀರ್ತಿ ಬಿ. ಮುಂತಾದವರು ಅತ್ಯದ್ಭುತ ಕಲಾ ಪ್ರದರ್ಶನ ನೀಡಿದರು. ಸಂಪೂರ್ಣ ಕಾರ್ಯಕ್ರಮದ ಸಾಹಿತ್ಯ ಪ್ರಸ್ತುತಿ ಹಾಗೂ ನಿರೂಪಣೆಯನ್ನು ಸಂಸ್ಥೆ ಅಧ್ಯಕ್ಷೆ ಡಾ.ವಾಣಿಶ್ರೀ ಕಾಸರಗೋಡು ನಿರ್ವಹಿಸಿದರು. ಎಡನೀರು ಮಠಾಧೀಶ ಶ್ರೀ…

Read More

ಗದಗ : ಸಾಹಿತ್ಯ ಮಾಸ ಪತ್ರಿಕೆಯಾದ ‘ಅಕ್ಷರ ಸಂಗಾತ’ ಮತ್ತು ‘ಸಂಗಾತ ಪುಸ್ತಕ ಪ್ರಕಾಶನ’ ಆಯೋಜಿಸುವ ಬಿ.ಶ್ರೀನಿವಾಸರಾಜು ‘ಕಾವ್ಯ ಸ್ಪರ್ಧೆ’ಗೆ ಹಸ್ತಪ್ರತಿ ಆಹ್ವಾನಿಸಲಾಗಿದೆ. ಹಸ್ತಪ್ರತಿ ಕಳಿಸಲು ಕೊನೆಯ ದಿನಾಂಕ 31-10-2023 ಆಗಿರುತ್ತದೆ. ಸ್ಪರ್ಧೆಯ ನಿಯಮಗಳು : # 45 ವರ್ಷದೊಳಗಿನ ಕವಿಗಳು ಡಿಟಿಪಿ ಮಾಡಿದ ಕವನ ಸಂಕಲನದ ಹಸ್ತಪ್ರತಿ ಕಳಿಸಬಹುದು. # ಕನಿಷ್ಠ 40ಕ್ಕಿಂತ ಹೆಚ್ಚು ಕವಿತೆಗಳ ಹಸ್ತಪ್ರತಿ ಇರಲಿ. # ಹೆಸರು ಮತ್ತು ವಿಳಾಸ ಪ್ರತ್ಯೇಕ ಪುಟದಲ್ಲಿರಬೇಕು. # ತೀರ್ಪುಗಾರರಿಂದ ಆಯ್ಕೆಯಾದ ಕವನ ಸಂಕಲನವನ್ನು ರಾಜೂರ ಗ್ರಾಮದ ‘ಸಂಗಾತ ಪುಸ್ತಕ ಪ್ರಕಾಶನ’ ಪ್ರಕಟಿಸಲಿದೆ. # ‘ಅಕ್ಷರ ಸಂಗಾತ’ ಸಾಹಿತ್ಯ ಮಾಸ ಪತ್ರಿಕೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆ ಮತ್ತು ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುವುದು. # ಹಸ್ತಪ್ರತಿಗಳನ್ನು ಅಂಚೆಯ ಮೂಲಕವೇ ಕಳಿಸಿ, ಕೊರಿಯ‌ರ್ ಮೂಲಕ ಕಳಿಸಬೇಡಿ. ನಮ್ಮ ಹಳ್ಳಿಗೆ ಕೊರಿಯರ್ ಸೌಲಭ್ಯ ಇರುವುದಿಲ್ಲ. # ಕಾವ್ಯದ ಹೊಸ ಪ್ರಯೋಗಗಳಿಗೆ ಆದ್ಯತೆ. ಹಸ್ತಪ್ರತಿ ಕಳಿಸಬೇಕಾದ ವಿಳಾಸ : ಟಿ.ಎಸ್.ಗೊರವರ, ಸಂಪಾದಕರು, ಅಕ್ಷರ…

Read More

ಬೆಂಗಳೂರು : ವೀರಲೋಕ ಇದರ ಆಶ್ರಯದಲ್ಲಿ ಕಾವ್ಯ ಪರಂಪರೆಯಲ್ಲೊಂದು ದಿಟ್ಟ ಹೆಜ್ಜೆ- ಐದು ಕವನ ಸಂಕಲನಗಳ ಲೋಕಾರ್ಪಣೆ ಸಮಾರಂಭ ‘ಕಾವ್ಯಕ್ರಮ’. ಈ ಕಾರ್ಯಕ್ರಮವು ದಿನಾಂಕ 24-09-2023ರಂದು ಬೆಳಿಗ್ಗೆ 9.30ಕ್ಕೆ ಬೆಂಗಳೂರಿನ ಎನ್.ಆರ್.ಕಾಲೋನಿಯ ಡಾ. ಸಿ.ಅಶ್ವಥ್ ಕಲಾಭವನದಲ್ಲಿ ನಡೆಯಲಿದೆ. ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಜಯಂತ್ ಕಾಯ್ಕಿಣಿ, ಟಿ.ಎನ್. ಸೀತಾರಾಮ್, ಜೋಗಿ, ಅಬ್ದುಲ್ ರಶೀದ್ ಮತ್ತು ರಾಜಶೇಖರ್ ಮಠಪತಿ ಇವರುಗಳು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ವಾಸುದೇವ ನಾಡಿಗ್ ಇವರ ‘ನಿನ್ನ ಧ್ಯಾನದ ನೂರೊಂದು ಹಣತೆ’, ನಂದಿನಿ ಹೆದ್ದುರ್ಗೆಯವರ ‘ಒಂದು ಆದಿಮ ಪ್ರೇಮ’, ಫಾಲ್ಗುಣ ಗೌಡ ಇವರ ‘ಬಿಂಜೆಮುಳ್ಳು’, ಸದಾಶಿವ ಸೊರಟೂರು ಅವರ ‘ಗಾಯಗೊಂಡ ಸಾಲುಗಳು’ ಮತ್ತು ಪಾಪುಗುರು ಇವರ ‘ಮಣ್ಣೇ ಮೊದಲು’ ಕೃತಿಗಳ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ವೀರಕಪುತ್ರ ಶ್ರೀನಿವಾಸ ಇವರು ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದು, ಆನಂದ ಮಾದಲಗೆರೆ ಮತ್ತವರ ತಂಡದಿಂದ ‘ಗೀತ ಗಾಯನ’ ಕಾರ್ಯಕ್ರಮ ನಡೆಯಲಿದೆ.

Read More

ಕೊಣಾಜೆ : ಮಂಗಳೂರು ವಿಶ್ವವಿದ್ಯಾನಿಲಯ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠ ಮಂಗಳಗಂಗೋತ್ರಿ ಇದರ ಆಶ್ರಯದಲ್ಲಿ ‘ಗುರು ಜಯಂತಿ – 2023’ ಹಾಗೂ ಶ್ರೀಮತಿ ರಾಜಶ್ರೀ ಟಿ. ರೈ ಪೆರ್ಲ ಇವರಿಗೆ ‘ನಾರಾಯಣಗುರು ಸಂಶೋಧನಾ ಪ್ರಶಸ್ತಿ’ ಪ್ರದಾನ ಸಮಾರಂಭ ಕಾರ್ಯಕ್ರಮವು ದಿನಾಂಕ 16-09-2023ರಂದು ವಿಶ್ವವಿದ್ಯಾನಿಲಯದ ಹಳೆಯ ಸೆನೆಟ್ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಹಾವೇರಿ ವಿ.ವಿ. ವಿಶ್ರಾಂತ ಕುಲಪತಿ ಪ್ರೊ.ಕೆ.ಚಿನ್ನಪ್ಪ ಗೌಡ ಇವರು ಮಾತನಾಡುತ್ತಾ “ವಿಶ್ವವಿದ್ಯಾನಿಲಯಗಳು ಎಂದರೆ ಕೇವಲ ಕಟ್ಟಡಗಳ ಸಮುಚ್ಛಯವಲ್ಲ. ಯುವ ಜನಾಂಗದ ಬುದ್ಧಿ, ಮನಸ್ಸುಗಳನ್ನು ಬೆಸೆದು ಮನುಷ್ಯವನ್ನು ರೂಪಿಸುವ ಕೇಂದ್ರವಾಗಬೇಕು ಬ್ರಹ್ಮಶ್ರೀ ನಾರಾಯಣ ಗುರುಗಳು ಮುಖ್ಯಸ್ಥಾನದಲ್ಲಿ ನಿಲ್ಲುತ್ತಾರೆ. ರಾಜಶ್ರೀ ಟಿ. ರೈ ಪೆರ್ಲ ಅವರು ನಾರಾಯಣ ಗುರುಗಳ ಬಗ್ಗೆ ವಿಸ್ತಾರವಾದ ಅಧ್ಯಯನ, ಕ್ಷೇತ್ರ ಕಾರ್ಯದ ಸಂಶೋಧನಾ ಕೃತಿ ರಚಿಸಿ ಸಂಶೋಧನೆಗೆ ಹೊಸ ಆಯಾಮ ಕೊಟ್ಟಿದ್ದಾರೆ. ಈ ಪ್ರಶಸ್ತಿ ಅವರಿಗೆ ಅರ್ಹವಾಗಿಯೇ ಸಂದಿವೆ” ಎಂದು ಹೇಳಿದ್ದಾರೆ. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವರಾದ ಶ್ರೀ ಕೆ. ಅಭಯಚಂದ್ರ ಜೈನ್, “ಜಾತೀಯತೆಯ ಪಿಡುಗನ್ನು…

Read More

ಉಡುಪಿ : ಸಾಂಸ್ಕೃತಿಕ ಸಂಘಟನೆ ರಥಬೀದಿ ಗೆಳೆಯರು (ರಿ.) ಉಡುಪಿ ಮತ್ತು ತಾಲ್ಲೂರು ತೋರಣ ಯೋಜನೆಯ ಭಾಗವಾದ ‘ಕರಾವಳಿ ಕಟ್ಟು’ ಇವರ ಆಶ್ರಯದಲ್ಲಿ ‘ನಿರ್ದಿಂಗತ’ ರಂಗ ತಂಡದಿಂದ ಕಥೆ, ಕವನ, ಕಾದಂಬರಿ, ನಾಟಕ ಹಾಗೂ ರಂಗರೂಪಕ ‘ಗಾಯಗಳು’ ಇದರ ಪ್ರದರ್ಶನ ದಿನಾಂಕ 23-09-2023ರ ಶನಿವಾರ ಸಂಜೆ ಗಂಟೆ 6.30ಕ್ಕೆ ಎಂ.ಜಿ.ಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ. ಡಾ. ಶ್ರೀಪಾದ್ ಭಟ್ ನಿರ್ದೇಶನದ ಈ ನಾಟಕಕ್ಕೆ ಶ್ವೇತಾ ರಾಣಿ ಸಹ ನಿರ್ದೇಶಕಿಯಾಗಿ ಸಹಕರಿಸಿದ್ದಾರೆ. ನಾಟಕದ ಕುರಿತು : ಇಡೀಯ ಜಗತ್ತು ಯುದ್ಧೋನ್ಮದದಲ್ಲಿ ನರಳುತ್ತಿದೆ. ರಾಜಕಾರಣಿಗಳ, ಧರ್ಮ ಗುರುಗಳ ಮಾರುಕಟ್ಟೆಯ ದಲ್ಲಾಳಿಗಳ ಕೈಗಳು ಲೇಡಿ ಮ್ಯಾಕ್ ಬೆತ್ ನ ಕೈಗಳಂತೆ ಎಷ್ಟು ತೊಳೆದರೂ ತೊಡೆಯಲಾಗದ ರಕ್ತದ ಕಲೆಗಳಿಂದ ತೊಯ್ದಿದೆ. ಪುರುಷಾಹಂಕಾರದ ಈ ಗಾಯಗಳು ಮೇದಿನಿ ಮತ್ತು ಮಾನಿನಿಯರ ಕರುಳು ಕತ್ತರಿಸುತ್ತಿವೆ. ಮನುಷ್ಯರನ್ನೇ ವಿಭಜಿಸುವ ಮನುಷ್ಯತ್ವವನ್ನೇ ಅಣಕಿಸುವ ವರ್ಣಭೇದವಂತೂ ಇನ್ನೂ ಕ್ರೂರ. ಇವು ನಮಗೆ ನಾವೇ ಮಾಡಿಕೊಂಡ ಗಾಯಗಳು. ಇವುಗಳಿಗೆ ಮುಖಾಮುಖಿಯಾಗದೆ ನಮಗೆ ಬಿಡುಗಡೆ…

Read More

ಬೆಂಗಳೂರು : ಚಿತ್ಪಾವನ ಮಹಿಳಾ ಯಕ್ಷಗಾನ ಮಂಡಳಿ (ರಿ.) ಬೆಂಗಳೂರು ಪ್ರಸ್ತುತಪಡಿಸುವ ‘ಕೃಷ್ಣ ಲೀಲೆ – ಕಂಸ ವಧೆ’ ಪ್ರಸಂಗದ ಯಕ್ಷಗಾನ ಬಯಲಾಟವು ದಿನಾಂಕ 02-10 2023ರ ಸಂಜೆ ಘಂಟೆ 6.00ಕ್ಕೆ ಬೆಂಗಳೂರಿನ ನಾಗರಬಾವಿ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಕಾಲೋನಿಯ ಶ್ರೀ ಅಮ್ಮೆಂಬಳ ಸುಬ್ಬರಾವ್ ಪೈ ಕಲಾಮಂದಿರದಲ್ಲಿ ನಡೆಯಲಿದೆ. ಕಾರ್ಯಕ್ರಮದ ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ಯೋಗೀಶ್ ಶರ್ಮಾ, ಮದ್ದಳೆಯಲ್ಲಿ ಶ್ರೀ ಪ್ರಕಾಶ ಗೋಗಟೆ, ಚಂಡೆಯಲ್ಲಿ ಶ್ರೀ ಅರ್ಜುನ್ ಕೊರ್ಡೇಲ್ ಹಾಗೂ ಚಕ್ರತಾಳದಲ್ಲಿ ಶ್ರೀ ಶಂಕರ ಜೋಯಿಸ ಭಾಗವಹಿಸಲಿದ್ದು, ಮುಮ್ಮೇಳದಲ್ಲಿ ಶೈಲಜಾ ಜೋಶಿ, ಶುಭಾ ಗೋರೆ, ಗಾಯತ್ರಿ ಗುರ್ಜರ್, ರಮ್ಯಾ ಸಹಸ್ರಬುದ್ಧೇ, ಭುವನಾ ಡೋಂಗ್ರೆ, ನಾಯನಾ ಭಿಡೆ, ಸೌಮ್ಯ ಪ್ರದೀಪ್, ವರ್ಷಾ ಖಾಡಿಲ್ಕರ್, ಪೂನಂ ಗೋಖಲೆ ಹಾಗೂ ಅನುಪಮಾ ಮರಾಠೆ ಭಾಗವಹಿಸಲಿದ್ದಾರೆ.

Read More

ಸುರತ್ಕಲ್ : ಸುರತ್ಕಲ್ ಗೋವಿಂದ ದಾಸ ಕಾಲೇಜು ಗ್ರಂಥಾಲಯ ವಿಭಾಗ, ಭಾಷಾ ವಿಭಾಗ, ಆಂತರಿಕ ಗುಣಮಟ್ಟ ಖಾತರಿ ಕೋಶ, ಕರಾವಳಿ ವಿಕೀಮೀಡಿಯಾ ಯೂಸರ್ ಗ್ರೂಪ್, ಸೆಂಟರ್ ಫಾರ್ ಇಂಟರ್ನೆಟ್ ಆ್ಯಂಡ್ ಸೊಸೈಟಿ ಬೆಂಗಳೂರು ಇದರ ಸಹಯೋಗದಲ್ಲಿ ಗೋವಿಂದ ದಾಸ ಕಾಲೇಜಿನಲ್ಲಿ ಎರಡು ದಿನಗಳ ರೀ ಲೈಸನ್ಸಿಂಗ್, ಡಿಜಿಟಲೈಸೇಷನ್ ಮತ್ತು ಅಪ್‍ಲೋಡಿಂಗ್ ಆನ್ ವಿಕಿ ಮೀಡಿಯ ಕಾರ್ಯಾಗಾರ ದಿನಾಂಕ 16-09-2023ರಂದು ಉದ್ಘಾಟನೆಗೊಂಡಿತು. ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದ ಲೇಖಕ ಡಾ.ಎಂ.ಪ್ರಭಾಕರ ಜೋಷಿ “ಓದಿನ ವಿಸ್ತರಣೆಗೆ ಆಧುನಿಕ ತಂತ್ರಜ್ಞಾನದ ಮಾಧ್ಯಮ ಬಳಕೆ ಅನಿವಾರ್ಯವಾಗಿದ್ದು ವಿಕೀಪೀಡಿಯಾ ಈ ನಿಟ್ಟಿನಲ್ಲಿ ಉತ್ತಮಕಾರ್ಯ ನಿರ್ವಹಿಸುತ್ತಿದೆ.” ಎಂದು ನುಡಿದರು. ಈ ಕಾರ್ಯಗಾರದಲ್ಲಿ ಎಂ.ಪ್ರಭಾಕರ ಜೋಷಿಯವರ ಕೇದಗೆ ಪುಸ್ತಕವನ್ನು ಡಿಜಿಟಲೈಸೇಷನ್ ಮಾಡಿ ವಿಕಿ ಕಾಮನ್ಸ್‍ಗೇ ಅಪ್‍ಲೋಡ್ ಮಾಡಲಾಯಿತು. ಮುಂದಿನ ದಿನಗಳಲ್ಲಿ ಅವರ ಹದಿನೆಂಟು ಪುಸ್ತಕಗಳನ್ನು ಡಿಜಿಟಲೀಕರಣ ಮಾಡಿ ವಿಕಿ ಕಾಮನ್ಸ್‍ಗೆ ಅಪ್‍ಲೋಡ್ ಮಾಡಲು ಡಾ.ಎಂ ಪ್ರಭಾಕರ ಜೋಷಿ ಅವರು ಅನುಮತಿ ನೀಡಿದರು. ಪುಸ್ತಕಗಳ ಡಿಜಿಟಲೈಸೇಷನ್ ಮಾಡುವ ತರಬೇತಿಯನ್ನು ಸುಬೋಧ್ ಕುಲಕರ್ಣಿ ಹಾಗೂ ಸಂಜೀವ್…

Read More