Author: roovari

23 ಮಾರ್ಚ್ 2023, ಪುತ್ತೂರು: ಶ್ರೀ ಮೂಕಾಂಬಿಕ ಕಲ್ಚರಲ್ ಅಕಾಡೆಮಿ (ರಿ) ಪುತ್ತೂರು ಪ್ರತೀ ವರ್ಷದಂತೆ ಈ ವರ್ಷವೂ ಇದರ ವಾರ್ಷಿಕ ರಾಷ್ಟ್ರೀಯ ನೃತ್ಯೋತ್ಸವ “ನರ್ತನಾವರ್ತನ – 2023” ಮಾರ್ಚ್ 05 ಭಾನುವಾರದಂದು ಸಂಜೆ 5:30ಕ್ಕೆ ಪುತ್ತೂರಿನ ಜೈನ ಭವನದಲ್ಲಿ ನಡೆಯಿತು. ಕರಾವಳಿಯ ಹಿರಿಯ ಗುರುಗಳಾದ ಶಾಂತಲಾ ನಾಟ್ಯ ಪ್ರಶಸ್ತಿ ಪುರಸ್ಕೃತ ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ನಿರ್ದೇಶಕರಾದ ತಮ್ಮ ಶಿಷ್ಯ ದೀಪಕ್ ಕುಮಾರ್ ನೃತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಯ ಬಗ್ಗೆ ಅತಿಯಾದ ಅಭಿಮಾನ-ಮೆಚ್ಚುಗೆ ವ್ಯಕ್ತ ಪಡಿಸುವುದರೊಂದಿಗೆ ದೀಪಕ್ ಕುಮಾರ್ ಇವರ ಸಾಧನೆಯಲ್ಲಿ ಅವರ ಸಹ ಧರ್ಮಿಣಿ ಶ್ರೀಮತಿ ಪ್ರೀತಿಕಲಾ ದೀಪಕ್ ಸಂಗೀತ ನಿರ್ದೇಶನದೊಂದಿಗೆ ಪತಿಗೆ ಅಪೂರ್ವ ಸಹಕಾರ ನೀಡುವುದರ ಬಗ್ಗೆ ಮತ್ತು ಅಕಾಡೆಮಿಯ ಬೆಳವಣಿಗೆಯ ಬಗ್ಗೆ ಸಂತಸ ವ್ಯಕ್ತ ಪಡಿಸಿದರು. ಅಭ್ಯಾಗತರಾಗಿ ಆಗಮಿಸಿದ ಶ್ರೀಯುತ ಗೋಪಾಲಕೃಷ್ಣ ಭಟ್, ಆಡಳಿತ ನಿರ್ದೇಶಕರು ದ್ವಾರಕಾ ಸಮೂಹ ಸಂಸ್ಥೆ ಇವರು ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ…

Read More

23 ಮಾರ್ಚ್ 2023, ಉಳ್ಳಾಲ: “ಕನ್ನಡ ಭಾಷೆಯನ್ನು ಉಳಿಸುವ ಜೊತೆಗೆ ಅದನ್ನು ನಂಬಿಕೊಂಡಿರುವ ಸಾಂಸ್ಕೃತಿಕ ಬದುಕನ್ನು ಗಂಧದ ಕೊರಡಿನಂತೆ ಉಳಿಸುವ ಕಾರ್ಯ ಸರ್ಕಾರದಿಂದ ಆಗಬೇಕು” ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಮೋಹನ್‌ ಆಳ್ವ ಹೇಳಿದರು. ದಕ್ಷಿಣ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕದ ವತಿಯಿಂದ ಮಂಗಳೂರು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಮಂಗಳಾ ಸಭಾಂಗಣದಲ್ಲಿ ಉಳ್ಳಾಲ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ದಿನಾಂಕ 17-03-2023 ಶುಕ್ರವಾರದಂದು ನಡೆಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಳ್ವರು ಮಾತನಾಡಿದರು. ಅನುವಾದಕಿ ಶ್ಯಾಮಲಾ ಮಾಧವ್ ಕನ್ನಡ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಯು.ಟಿ. ಖಾದರ್ ಮಾತನಾಡಿ, ‘ಕ್ಷೇತ್ರದ ಅಭಿವೃದ್ಧಿ ಮತ್ತು ಸವಲತ್ತುಗಳಿಗಾಗಿ ಉಳ್ಳಾಲ ತಾಲೂಕು ರಚನೆಗೆ ಆದ್ಯತೆ ನೀಡಲಾಗಿದೆ. ನಮ್ಮ ಭಾಷೆ, ಸಂಸ್ಕೃತಿ ಹಂಚುವ ಕಾರ್ಯಕ್ಕೆ ಸಮ್ಮೇಳನ ಪೂರಕವಾಗಲಿ’ ಎಂದರು. ಉದ್ಘಾಟನೆಯ ನಂತರ ನಡೆದ ವಿಚಾರಗೋಷ್ಠಿಯಲ್ಲಿ ಇಬ್ಬರು ಸಾಹಿತಿಗಳು ಬೇರೆ ಬೇರೆ ವಿಷಯಗಳಲ್ಲಿ ತಮ್ಮ ವಿಚಾರ ಮಂಡಿಸಿದರು. “ಕರಾವಳಿ ಸಾಹಿತ್ಯದಲ್ಲಿ ಸಾಮರಸ್ಯ” ವಿಷಯದ ಬಗ್ಗೆ ಎಸ್.ವಿ.ಪಿ. ಕನ್ನಡ ಅಧ್ಯಯನ…

Read More

23 ಮಾರ್ಚ್ 2023, ಮಂಜೇಶ್ವರ: ಎಂ. ಗೋವಿಂದ ಪೈ ಅವರು ಮಂಗಳೂರಿನ ಸಾಹುಕಾರ ತಿಮ್ಮಪ್ಪ ಪೈ ಮತ್ತು ತಾಯಿ ದೇವಕಿಯಮ್ಮ ಅವರ ಸುಪುತ್ರ. ಅವರು ಕಾಸರಗೋಡು ತಾಲೂಕಿನ ಮಂಜೇಶ್ವರದ ಅಜ್ಜನ ಮನೆಯಲ್ಲಿ ಮಾರ್ಚ್ 23, 1882ರಂದು ಜನಿಸಿದರು. ಶ್ರೀಮಂತ ಮನೆತನದಲ್ಲಿ ಹುಟ್ಟಿದ ಎಂ. ಗೋವಿಂದ ಪೈಗಳ ಪ್ರಾಥಮಿಕ ಶಿಕ್ಷಣ ಮಂಗಳೂರಿನಲ್ಲಿಯೇ ಆಯಿತು. ಪದವಿ ಪೂರ್ವ ವಿದ್ಯಾಭ್ಯಾಸ ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ನಡೆಯಿತು. ಅವರ ಒಡನಾಡಿಗಳಲ್ಲಿ ಎಂ.ಎನ್.ಕಾಮತ್ ಒಬ್ಬರಾದರೆ, ಅವರಿಗೆ ಪಾಠ ಕಲಿಸಿದ ಗುರುವರ್ಯರಲ್ಲಿ ಕವಿಶಿಷ್ಯ ನಾಮಾಂಕಿತರಾದ ಪಂಜೆ ಮಂಗೇಶರಾಯರೂ ಒಬ್ಬರು. ಬಿ.ಎ ಪದವಿ ಶಿಕ್ಷಣಕ್ಕಾಗಿ 1903-1906ರವರೆಗೆ ಮದರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಬೇಕಾಯಿತು. ಅಲ್ಲಿ ಡಾ.ಎಸ್. ರಾಧಾಕೃಷ್ಣನ್ ಅವರು ಇವರ ಸಹಪಾಠಿಯಾಗಿದ್ದರು. ತಂದೆಯ ಮರಣದಿಂದಾಗಿ ಬಿ.ಎ ಪದವಿ ಪರೀಕ್ಷೆಯ ಮಧ್ಯದಲ್ಲಿಯೇ ಅವರು ಮಂಗಳೂರಿಗೆ ಹಿಂತಿರುಗಬೇಕಾಯಿತು. ಹಿರಿಯ ಮಗನಾಗಿದ್ದರಿಂದ ಮನೆಯ ಜವಾಬ್ದಾರಿ ವಹಿಸಬೇಕಾಯಿತು. ಬಿ.ಎ ಪದವಿ ಪಡೆಯಲಾಗದಿದ್ದರೂ ಬರೆದಿದ್ದ ಒಂದೇ ಪ್ರಶ್ನೆಪತ್ರಿಕೆ ಇಂಗ್ಲೀಷಿನಲ್ಲಿ ಪ್ರಥಮ ಸ್ಥಾನ ಗಳಿಸಿ ಬಂಗಾರದ ಪದಕ ಪಡೆದರು. ಅವರ…

Read More

23 ಮಾರ್ಚ್ 2023, ಮಂಗಳೂರು: “ಸಾಹಿತ್ಯ-ಸಂಸ್ಕೃತಿ ಆಧಾರಿತವಾದ ಚಿಂತನಶೀಲ ಬದುಕು ಹಿನ್ನೆಲೆಗೆ ಸರಿದು ಕೊಳ್ಳುಬಾಕತನದ ಅರ್ಥ ಸಂಸ್ಕೃತಿ ಜೀವನದಲ್ಲಿ ಮುನ್ನೆಲೆಗೆ ಬಂದಿರುವುದೇ ಸಾಮಾಜಿಕವಾದ ಹಲವು ರೋಗಗಳಿಗೆ ಕಾರಣ. ನಮ್ಮ ಶ್ರೀಮಂತ ಪರಂಪರೆ ಮತ್ತು ಸಾಂಸ್ಕೃತಿಕ ಬದುಕನ್ನು ಹೊಸ ತಲೆಮಾರಿಗೆ ದಾಟಿಸುವ ಜವಾಬ್ದಾರಿ ನಮ್ಮ ಮೇಲಿದೆ. ಜ್ಞಾನ ಮತ್ತು ಬುದ್ಧಿಬಲ ಜೀವನದ ಮುನ್ನೆಲೆಯಲ್ಲಿ ಇರಬೇಕಲ್ಲದೆ ಅರ್ಥ ಸಂಸ್ಕೃತಿ ಮತ್ತು ಅದರ ಅನುಯಾಯಿಯಾದ ರಟ್ಟೆಬಲ ಸಮಾಜದಲ್ಲಿ ಮೆರೆಯುವಂತೆ ಆಗಬಾರದು.” ಎಂದು ಕವಿ-ಸಾಹಿತಿ ಹಾಗೂ ಮಂಗಳೂರು ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ. ವಸಂತಕುಮಾರ ಪೆರ್ಲ ಹೇಳಿದರು. ಮಂಗಳೂರಿನ ಕನ್ನಡ ಬಳಗವು ಮಾರ್ಪಳ್ಳಿ ಪ್ರಕಾಶನ ಹಾಗೂ ಸುಬ್ರಹ್ಮಣ್ಯ ಸಭಾ ಇವುಗಳ ಆಶ್ರಯದಲ್ಲಿ ನಗರದ ಸುಬ್ರಹ್ಮಣ್ಯ ಸದನದಲ್ಲಿ ಏರ್ಪಡಿಸಿದ ಯುಗಾದಿ ಸಾಹಿತ್ಯೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಕನ್ನಡ ಬಳಗದ ಅಧ್ಯಕ್ಷ ಹಾಗೂ ವಿಮಾನ ನಿಲ್ದಾಣ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ.ಆರ್.ವಾಸುದೇವ ಅವರು ವಹಿಸಿದ್ದರು. “ಹಬ್ಬ ಹರಿದಿನಗಳನ್ನು ಅರ್ಥಪೂರ್ಣವಾಗಿ ಆಚರಿಸುವ ವ್ಯವಸ್ಥೆ ನಮ್ಮಲ್ಲಿ ಬರಬೇಕು. ಸಾಹಿತ್ಯ ಸಂಸ್ಕೃತಿಗಳಿಗೆ ನಮ್ಮ…

Read More

22 ಮಾರ್ಚ್ 2023, ಮಂಗಳೂರು: ಮಂಗಳೂರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನ ಸ್ನಾತಕೋತ್ತರ ಹಾಗೂ ಸಂಶೋಧನಾ ಕೇಂದ್ರದ ವತಿಯಿಂದ ನಡೆದ ಅಂತರ್ ಕಾಲೇಜು ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆ ‘ಯಕ್ಸೋತ್ಸವ 2023’ ಇದರಲ್ಲಿ ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ ಆಫ್ ಕ್ಯಾಂಪಸ್ ಸೆಂಟರ್ ನ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಕಲಾಸಂಗಮ ತಂಡವು ರಕ್ಷಿತ್ ಶೆಟ್ಟಿ ಪಡ್ರೆ ಇವರ ನಿರ್ದೇಶನದಲ್ಲಿ ಪ್ರಸ್ತುತ ಪಡಿಸಿದ “ತರಣಿ ಸೇನ ಕಾಳಗ”ವು ಪ್ರಥಮ ಸ್ಥಾನ ಪಡೆದುಕೊಂಡಿದೆ. ವೈಯಕ್ತಿಕ ವಿಭಾಗದಲ್ಲಿ ನಿಟ್ಟೆ ಕಾಲೇಜಿನ ವಿದ್ಯಾರ್ಥಿ ವರುಣ್ ಆಚಾರ್ಯ ಪ್ರಥಮ ಹಾಗೂ ಸರಿತಾ ರಾವ್ ಸಮಾಧಾನಕರ ಬಹುಮಾನ ಪಡೆದಿದ್ದಾರೆ. ವರುಣ್ ಆಚಾರ್ಯ ಸರಿತಾ ರಾವ್

Read More

22 ಮಾರ್ಚ್ 2023, ಬೆಳ್ತಂಗಡಿ: ಉಜಿರೆಯ ಸಾನಿಧ್ಯ ಕೌಶಲ ತರಬೇತಿ ಕೇಂದ್ರ, ಶ್ರೀ ಗಣೇಶ ಸೇವಾ ಟ್ರಸ್ಟಿನ ಸೇವಾ ಘಟಕ ಮತ್ತು ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್ (ರಿ) ಇದರ ಅಶ್ರಯದಲ್ಲಿ ರಾಜಕೇಸರಿ ಸಂಘಟನೆಯ ಸಂಸ್ಥಾಪಕರಾದ ದೀಪಕ್ ಜಿ. ಬೆಳ್ತಂಗಡಿ ಇವರ ನೇತೃತ್ವದಲ್ಲಿ 536ನೇ ಸಾಂಸ್ಕೃತಿಕ ಸೇವಾ ಯೋಜನೆಯಾಗಿ ಎಂಡೋಸಲ್ಫಾನ್‌ ಪೀಡಿತ ಹಾಗೂ ಮಾನಸಿಕ ಭಿನ್ನ ಸಾಮರ್ಥ್ಯದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ‘ಸಾನಿಧ್ಯ ಉತ್ಸವ -2023’ ಮಾರ್ಚ್ 25ರಂದು ಬೆಳ್ತಂಗಡಿಯ ಮಾರಿಗುಡಿ ಮೈದಾನದಲ್ಲಿ ಸಂಜೆ 7 ಗಂಟೆಗೆ ನಡೆಯಲಿದೆ. ಶಾಸಕ ಹರೀಶ್‌ ಪೂಂಜ ಕಾರ್ಯಕ್ರಮ ಉದ್ಘಾಟಿಸಲಿರುವರು. ಸಾನಿಧ್ಯ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ವಸಂತ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸುವರು. ವಿಧಾನ ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್, ಬೆಳ್ತಂಗಡಿ ತಹಶೀಲ್ದಾರ್ ಸುರೇಶ್ ಕುಮಾರ್, ಸರ್ಕಲ್‌ ಇನ್‌ಸ್ಪೆಕ್ಟರ್ ಶಿವಕುಮಾರ್, ಜಿಲ್ಲಾ ಎಂಡೋಸಲ್ಫಾನ್ ಕಾರ್ಯಕ್ರಮ ವ್ಯವಸ್ಥಾಪಕ ಸಾಜುದ್ದೀನ್ ಹಾಗೂ ಮತ್ತಿರರರು ಉಪಸ್ಥಿತರಿರಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ ಶೃಂಗೇರಿ ಶ್ರೀ ಶಾರದಾ ಅಂಧರ ಗೀತಾ ಗಾಯನ ಕಲಾ…

Read More

22.03.2023, ಮೈಸೂರು ಮತ್ತು ಹೊನ್ನಾವರ: ವಿಶ್ವ ರಂಗ ದಿನದ ಅಂಗವಾಗಿ ಮೈಸೂರು ಮತ್ತು ಹೊನ್ನಾವರದಲ್ಲಿ  ಬಹುರೂಪಿ ಪ್ರಕಾಶನದ ಡಾ.ಶ್ರೀಪಾದ ಭಟ್ ಇವರ ರಂಗಪಯಣದ ಕಥನವಾದ ‘ದಡವ ನೆಕ್ಕಿದ ಹೊಳೆ’ ಕೃತಿ  ಲೋಕಾರ್ಪಣೆಗೊಳ್ಳಲಿದೆ. ದಿನಾಂಕ 26 ಮಾರ್ಚ್2023 ಭಾನುವಾರದಂದು ಸಂಜೆ ಗಂಟೆ 4.30ಕ್ಕೆ ನಟನ ರಂಗಮಂದಿರ ಮೈಸೂರಿನಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ರಾಮೇಶ್ವರಿ ವರ್ಮ, ಬಿ. ಸುರೇಶ್, ದೀಪಾ ಹಿರೇಗುತ್ತಿ ಇವರೊಂದಿಗೆ ಕೃತಿಯ ಕರ್ತೃ ಡಾ. ಶ್ರೀಪಾದ ಭಟ್ ಇವರ ಉಪಸ್ಥಿತಿಯಲ್ಲಿ ಪ್ರಕಾಶ್ ರೈ ಇವರು ಕೃತಿ ಅನಾವರಣ ಮಾಡಲಿದ್ದಾರೆ. ಸಂಜೆ 6.30 ಕ್ಕೆ ಸರಿಯಾಗಿ ನಟನ ಪಯಣ: ರೆಪರ್ಟರಿ ತಂಡದ ಹೊಸಪ್ರಯೋಗ ಡಾ.ಶ್ರೀಪಾದ ಭಟ್ ವಿನ್ಯಾಸ ಮತ್ತು ನಿರ್ದೇಶನದ, ಮೇಘ ಸಮೀರ ಮತ್ತು ದಿಶಾ ರಮೇಶ್ ಅಭಿನಯದ  “ಕಣಿವೆಯ ಹಾಡು” ಪ್ರದರ್ಶನಗೊಳ್ಳಲಿದೆ. ಈ ಕಾರ್ಯಕ್ರಮಕ್ಕೆ ಮಂಡ್ಯ ರಮೇಶ್ ಮತ್ತು ಜಿ. ಎನ್. ಮೋಹನ್ ಸರ್ವರಿಗೂ ಸ್ವಾಗತ  ಬಯಸಿದ್ದಾರೆ. 27 ಮಾರ್ಚ್ 2023 ಸೋಮವಾರದಂದು ಸಂಜೆ 6 ಗಂಟೆಗೆ ಚಿಂತನ ರಂಗ ಅಧ್ಯಯನ ಕೇಂದ್ರ…

Read More

22 ಮಾರ್ಚ್ 2023, ಕುಂಬಳೆ: ‘ಭಾಷೆ ಬೆಳೆಯಬೇಕಾದರೆ ಅದರ ಬಳಕೆಯಾಗಬೇಕು. ಬಹುಭಾಷೆಗಳು ರಾಷ್ಟ್ರದ ಶಕ್ತಿಯಾಗಿದ್ದು, ಪ್ರತಿಯೊಂದು ಭಾಷೆಯ ರಕ್ಷಣೆ ಇತರ ಭಾಷೆಗಳ ಜವಾಬ್ದಾರಿ’ ಎಂದು ವಿದ್ವಾಂಸ ಡಾ. ಪಾದೆಕಲ್ಲು ವಿಷ್ಣು ಭಟ್ ಹೇಳಿದರು. ಕುಂಬಳೆ ಸಮೀಪದ ನಾರಾಯಣಮಂಗಲದ ‘ಶ್ರೀನಿಧಿ’ಯಲ್ಲಿ ಸಿರಿಗನ್ನಡ ಕಾಸರಗೋಡು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ದಿನಾಂಕ 19-03-2023 ಭಾನುವಾರದಂದು ನಡೆದ ಬೆಂಗಳೂರಿನ ಸಿರಿಗನ್ನಡ ಕೇಂದ್ರ ಸಮಿತಿಯ ವಿಂಶತ್ಯುತ್ಸವ, ಎರಡು ಮುಕ್ತಕ ಕೃತಿಗಳ ಬಿಡುಗಡೆ, ಗಮಕ ವಾಚನ ಹಾಗೂ ವಸಂತ ಕಾವ್ಯೋತ್ಸವದಲ್ಲಿ ಅವರು ಮಾತನಾಡಿದರು. ಟಿ.ಕೆ.ವಿ. ಭಟ್ ಅವರ ‘ಮುಕ್ತಕ ಸುಮ’ ಕೃತಿ ಬಿಡುಗಡೆ ಮಾಡಿದ ಅವರು ‘ಮುಕ್ತಕಗಳು ಮುತ್ತಿನ ಹಾಗೆ. ಸ್ವತಂತ್ರವಾಗಿರುವ ಅವುಗಳನ್ನು ಕೃತಿಯೆಂಬ ದಾರದಿಂದ ಪೋಣಿಸಿದಾಗ ಇನ್ನಷ್ಟೂ ಸುಂದರವಾಗಿ ಕಾಣುತ್ತವೆ’ ಎಂದರು. ಮಂಜೇಶ್ವರದ ಲಕ್ಷ್ಮಿ ವಿ.ಭಟ್ ಅವರ ‘ಜನಮಾನ್ಯ ಮುಕ್ತಕಗಳು’ ಕೃತಿಯನ್ನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ತಜ್ಞ ವಿ.ಬಿ.ಕುಳಮರ್ವ ಬಿಡುಗಡೆ ಮಾಡಿದರು. ಲಲಿತಾಲಕ್ಷ್ಮಿ ಕುಳಮರ್ವ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತೆಕ್ಕಕೆರೆ ಶಂಕರನಾರಾಯಣ ಭಟ್, ಕೆ.ವಾಮನ್…

Read More

22 ಮಾರ್ಚ್ 2023, ಮಂಗಳೂರು: ಇದೇ ಬರುವ ತಾರೀಕು 26-03-2023ರ ಬೆಳಿಗ್ಗೆ ಗಂಟೆ 10ಕ್ಕೆ ಮಂಗಳೂರು ರಥ ಬೀದಿಯ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆವರಣದಲ್ಲಿ “ವಿಶ್ವಕರ್ಮ ಕಲಾ ಪರಿಷತ್” ಇದರ ಉದ್ಘಾಟನಾ ಸಮಾರಂಭ ಹಾಗೂ “ಸಮರ್ಪಣಂ” – ವಿಶ್ವಕರ್ಮ ಕಲೋತ್ಸವ ನಡೆಯಲಿದೆ ಎಂದು ವಿಶ್ವಕರ್ಮ ಕಲಾ ಪರಿಷತ್ತಿನ ಅಧ್ಯಕ್ಷ ಡಾ. ಎಸ್.ಪಿ.ಗುರುದಾಸ್ ತಿಳಿಸಿದರು. ಶ್ರೀಮದ್ ಜಗದ್ಗುರು ಆನೆಗುಂದಿ ಸರಸ್ವತೀ ಪೀಠಾಧೀಶ್ವರರಾದ ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳು ವಿಶ್ವಕರ್ಮ ಕಲಾ ಪರಿಷತ್ತನ್ನು ಉದ್ಘಾಟಿಸಿ ಆಶೀರ್ವಚನ ನೀಡಲಿದ್ದಾರೆ. ಶ್ರೀ ಕೆ. ಕೇಶವ ಆಚಾರ್ಯ, ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಡಳಿತ ಮೊಕ್ತೇಸರ್ ಇವರು ವಿಶ್ವಕರ್ಮ ಕಲೋತ್ಸವವನ್ನು ಉದ್ಘಾಟಿಸಲಿದ್ದಾರೆ. ಗೌರವ ಸನ್ಮಾನ: ಶ್ರೀ ಕ್ಷೇತ್ರದಲ್ಲಿ ಕಲಾ ಪೋಷಕರಾಗಿ ಸೇವೆ ಸಲ್ಲಿಸಿದ ಸ್ವರ್ಣ ಶಿಲ್ಪಿಗಳಾದ ಪಿ. ಶಿವರಾಮ ಆಚಾರ್ಯ ಕಂಕನಾಡಿ, ಮುನಿಯಾಲ್ ದಾಮೋದರ ಆಚಾರ್ಯ, ಪೈಯಾಲ್ ಭಾಸ್ಕರ ಆಚಾರ್ಯ, ಹಿರಿಯ ಕಲಾ ಪೋಷಕರಾದ ಶಕುಂತಳಾ ಬಿ. ರಾವ್, ಹಿರಿಯ ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದ ಯೋಗೀಶ್ ಬೋಳೂರು…

Read More

21-03-2023, ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಡಾ. ಪಿ. ದಯಾನಂದ ಪೈ ಮತ್ತು ಶ್ರೀ ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ದಶಮಾನೋತ್ಸವ ಪ್ರಶಸ್ತಿ ಮತ್ತು ಯಕ್ಷ ಮಂಗಳ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣದಲ್ಲಿ ದಿನಾಂಕ 18-03-2023ರ ಶನಿವಾರದಂದು ನಡೆಯಿತು. ಆಳ್ವಾಸ್ ಪ್ರತಿಷ್ಠಾನದ ಡಾ.ಎಂ.ಮೋಹನ್ ಆಳ್ವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ‘ವಿದ್ಯಾರ್ಥಿಗಳನ್ನು ಕಲಾ ಸಂಪತ್ತಾಗಿ ಬೆಳೆಸುವುದು ನಮ್ಮ ಜವಾಬ್ದಾರಿ. ಹಾಗಾದರೆ ಮಾತ್ರ ಕಲೆ ಭವಿಷ್ಯಕ್ಕೆ ಉಳಿಯಬಲ್ಲುದು. ವಿಜ್ಞಾನದಂತೆಯೇ ಸಾಂಸ್ಕೃತಿಕ ಬದುಕಿನಲ್ಲಿ ಸತ್ಯವಿದೆ. ಕಲೆ – ಸಂಸ್ಕೃತಿಯಲ್ಲಿರುವ ಸತ್ಯ ಉಳಿಯಬೇಕು. ತನ್ನದೇ ಆದ ಕ್ರೀಡೆ ಹಾಗೂ ಸಾಂಸ್ಕೃತಿಕ ನೀತಿಯನ್ನು ಹೊಂದಿರುವುದು ಮಂಗಳೂರು ವಿಶ್ವವಿದ್ಯಾನಿಲಯದ ಹೆಮ್ಮೆ. ಇವೆರಡೂ ಸಂಸ್ಥೆಯ ಕಣ್ಣುಗಳಿದ್ದಂತೆ’ ಎಂದರು. “ಆಶೀರ್ವಚನ ನೀಡಿದ ಎಡನೀರು ಮಠದ ಶ್ರೀ ಸಚ್ಛಿದಾನಂದ ಭಾರತಿ ಸ್ವಾಮೀಜಿ, “ಶಿಕ್ಷಣ ಸಂಸ್ಥೆಗಳು ಕಲೆ ಸಂಸ್ಕೃತಿಗೆ ಬೆಂಬಲ ನೀಡಿದರಷ್ಟೇ ಅದನ್ನು ಮುಂದಿನ ತಲೆಮಾರಿಗೆ ವರ್ಗಾಯಿಸಬಹುದು. ಇದಕ್ಕಾಗಿ ಸಾಂಸ್ಕೃತಿಕ ನೀತಿ ರೂಪಿಸಿರುವ ಮಂಗಳೂರು ವಿಶ್ವವಿದ್ಯಾನಿಲಯದ ಇತರ ಸಂಸ್ಥೆಗಳಿಗೆ…

Read More