Author: roovari

ಮೂಡುಬಿದಿರೆ : ಮಂಗಳೂರು ವಿಶ್ವವಿದ್ಯಾನಿಲಯ ಕನಕದಾಸ ಅಧ್ಯಯನ ಪೀಠ ಮತ್ತು ಕನಕದಾಸ ಸಂಶೋಧನಾ ಕೇಂದ್ರದ ವತಿಯಿಂದ ಶ್ರೀ ಧವಲಾ ಕಾಲೇಜು ಮೂಡಬಿದ್ರೆ ಕನ್ನಡ ವಿಭಾಗ ಇವರ ಸಹಯೋಗದೊಂದಿಗೆ 2024 -25ನೇ ಸಾಲಿನ ಕನಕ ತತ್ವ ಚಿಂತನ ಪ್ರಚಾರೋಪನ್ಯಾಸ ಮಾಲಿಕೆಯು ದಿನಾಂಕ 3 ಸೆಪ್ಟೆಂಬರ್ 2024ರಂದು ಮೂಡಬಿದ್ರೆಯ ಶ್ರೀ ಧವಲಾ ಕಾಲೇಜಿನಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಮುನಿರಾಜ ರೆಂಜಾಳ ಇವರು ‘ಕನಕದಾಸರ ಕಾವ್ಯ : ರಸ ವಿನ್ಯಾಸ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡುತ್ತಾ “ಕಲಿಯೂ ಕವಿಯೂ ಆಗಿದ್ದ ಕನಕದಾಸರ ಕೀರ್ತನೆ ಮತ್ತು ಕಾವ್ಯಗಳು ಜನಸಾಮಾನ್ಯರಿಗೂ ತಲುಪಬಲ್ಲಷ್ಟು ಸರಳವೂ ಮತ್ತು ನವರಸಗಳಿಂದ ತುಂಬಿಕೊಂಡು ಆನಂದದಾಯಕವೂ ಆಗಿದೆ. ‘ಬಾಗಿಲನು ತೆರೆದು’ ಎಂಬ ಒಂದು ಕೀರ್ತನೆಯಲ್ಲಿಯೇ ಶೃಂಗಾರ, ಹಾಸ್ಯ, ಕರುಣ, ವೀರ, ಅದ್ಭುತ ರಸಗಳು ಕೂಡಿಕೊಂಡು ಅಪೂರ್ವವಾಗಿದೆ. ಮೋಹನ ತರಂಗಿಣಿ, ನಳಚರಿತ್ರೆಯಲ್ಲಿ ಶೃಂಗಾರ ರಸ, ಡೊಂಕು ಬಾಲದ ನಾಯಕರೇ, ಎಲ್ಲರೂ ಮಾಡುವುದು ಹೊಟ್ಟೆಗಾಗಿ ಕೀರ್ತನೆಗಳಲ್ಲಿ ಹಾಗೂ ರಾಮಧಾನ್ಯ ಚರಿತೆಯಲ್ಲಿ ಹಾಸ್ಯ ರಸ, ಕಾರ್ಕೋಟಕ ಪ್ರಸಂಗದಲ್ಲಿ…

Read More

ಮುದವಾದ ತಂಪೆರೆವ ಸಂಜೆಯ ವಾತಾವರಣದಲ್ಲಿ ರಂಗದ ಮೇಲೆ ಮುದ್ದಾದ ಹಕ್ಕಿಗಳ ಚಿಲಿಪಿಲಿ. ಪುಟಾಣಿ ಹೆಜ್ಜೆಗಳ ಕಲರವ. ಬಣ್ಣ ಬಣ್ಣದ ವಸ್ತ್ರಾಲಂಕಾರದಲ್ಲಿ, ದೇವಕನ್ನಿಕೆಯರಂತೆ ಶೋಭಿಸುವ ಉದ್ದನೆಯ ಕುಚ್ಚಿನ ಹೆರಳು, ಮಲ್ಲಿಗೆಯ ಮುಡಿಯಲ್ಲಿ ಆಭರಣ ಭೂಷಿತ ಉದಯೋನ್ಮುಖ ನೃತ್ಯ ವಿದ್ಯಾರ್ಥಿಗಳು ಪರಮೋತ್ಸಾಹದಿಂದ ಗೆಜ್ಜೆ ಕಟ್ಟಿ ನರ್ತಿಸಿದ ದೃಶ್ಯವನ್ನು ನೋಡಬೇಕಿತ್ತು. ಅಲ್ಲಿ ನೃತ್ಯದ ಶಾಸ್ತ್ರಕ್ಕೆ ದುರ್ಬೀನು ಹಚ್ಚಿ ನೋಡುವ ಅಗತ್ಯವಿರಲಿಲ್ಲ. ಮಕ್ಕಳ ಪರಿಶ್ರಮದ ನೃತ್ಯಾಭ್ಯಾಸ, ಗೆಜ್ಜೆಗಳ ಲಯಬದ್ಧ ದನಿ, ಸುಂದರ ಆಂಗಿಕಾಭಿನಯ, ಅಭಿನಯದ ವೈಖರಿ ಕಣ್ಮನ ತುಂಬಿತು. ಪುಟ್ಟಮಕ್ಕಳಿಂದ ಹಿಡಿದು ನೈಪುಣ್ಯ ಪಡೆದ ಹಿರಿಯ ನೃತ್ಯ ಕಲಾವಿದರವರೆಗೂ ಅವರ ನೃತ್ಯದ ಹೆಜ್ಜೆಗಳಿಗೆ ಅನುವು ಮಾಡಿಕೊಟ್ಟ, ಪ್ರೋತ್ಸಾಹದ ಸಿಂಚನದೊಂದಿಗೆ ಅವರ ಬೆಳವಣಿಗೆಗೆ ಇಂಬು ನೀಡಿ, ಕಲಾನೈಪುಣ್ಯದ ಆಯಾಮಗಳನ್ನು ಕಲಿಸುತ್ತಿರುವ ಭರತನಾಟ್ಯ ಗುರು ವಿದುಷಿ ಕಾವ್ಯಾ ದಿಲೀಪ್ ಅವರ ನಿರಂತರ ಕಾರ್ಯಕ್ರಮಗಳ ಉತ್ಸಾಹ ಗಮನೀಯ. ವಿ. ಕಾವ್ಯಾ ದಿಲೀಪ್ ನೇತೃತ್ವದ ‘ರಚನಾ ಡ್ಯಾನ್ಸ್ ಅಕಾಡೆಮಿ’ಯು ಮಲ್ಲೇಶ್ವರದ ಸೇವಾ ಸದನದಲ್ಲಿ ಆಯೋಜಿಸಿದ್ದ ‘ನೂಪುರ ನಿರಂತರ’ ಐದನೆಯ ವಾರ್ಷಿಕೋತ್ಸವದ ಸಮಾರಂಭ ವೈವಿಧ್ಯಪೂರ್ಣವಾಗಿ…

Read More

ಮಂಗಳೂರು : ಶಾರದಾ ಪದವಿಪೂರ್ವ ಕಾಲೇಜಿನ ಸಂಸ್ಕೃತ ಸಂಘದ ಆಶ್ರಯದಲ್ಲಿ ಸಂಸ್ಕೃತ ದಿನೋತ್ಸವ ಕಾರ್ಯಕ್ರಮವು ದಿನಾಂಕ 02 ಸೆಪ್ಟೆಂಬರ್ 2024ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಕೆನರಾ ಪ್ರೌಢಶಾಲೆ ಉರ್ವ ಇಲ್ಲಿಯ ಸಂಸ್ಕೃತ ಶಿಕ್ಷಕ ಶ್ರೀ ಬಿ. ಮುರಾರಿ ತಂತ್ರಿಯವರು “ಸಂಸ್ಕೃತ ಸಂಸ್ಕರಿಸಲ್ಪಟ್ಟ ಭಾಷೆ. ಈ ಭಾಷೆಯು ಬಹುಪ್ರಾಚೀನ ಕಾಲದಲ್ಲಿ ವ್ಯವಹಾರ ಭಾಷೆಯಾಗಿ ಜನಮಾನಸದಲ್ಲಿ ಉಳಿದ ಭಾಷೆ. ರಾಮಾಯಣದ ಸೀತಾನ್ವೇಷಣೆಯ ಕಾಲದಲ್ಲಿ ಸೀತೆಯೊಂದಿಗೆ ಆಂಜನೇಯ ಸಂಸ್ಕೃತ ಭಾಷೆಯಲ್ಲಿಯೇ ಮಾತನಾಡಿದ ಎಂದು ಮಾಲ್ಮೀಕಿ ಮಹರ್ಷಿಗಳು ವರ್ಣಿಸುತ್ತಾರೆ. ಅಂತಹ ಭಾಷಾ ಸೌಂದರ್ಯದಿಂದ ಆಕರ್ಷಿಸಲ್ಪಟ್ಟ ಭಾಷೆ ಇಂದು ವೈಜ್ಞಾನಿಕ ಭಾಷೆಯಾಗಿಯೂ ಸರ್ವಜನಾನುರಾಗಿಯಾಗಿದೆ. ಹೇಗೆ ಚಿನ್ನದ ಗಟ್ಟಿ ಆಭರಣವಾದಾಗ ಇನ್ನೂ ಹೆಚ್ಚು ಸೌಂದರ್ಯದಿಂದ ಕೂಡಿರುತ್ತದೆಯೊ ಹಾಗೆ ಸಂಸ್ಕೃತ ದೇವ ಭಾಷೆ ಎಂದು ಪೂಜಿಸಿದರೆ ಸಾಲದು ಅದನ್ನು ವ್ಯಾವಹಾರಿಕವಾಗಿ ಬಳಸುವಂತಾಗಬೇಕು” ಎಂಬುದಾಗಿ ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಶಾರದಾ ಸಮೂಹ ಸಂಸ್ಥೆಗಳ ವಿಶ್ವಸ್ಥರಾದ ಶ್ರೀ ಸುಧಾಕರ ರಾವ್ ಪೇಜಾವರ ಇವರು ಮಾತನಾಡಿ “ಸಂಸ್ಕೃತ ಭಾಷೆ…

Read More

ಮಂಗಳೂರು : ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು (ರಿ.) ಕೇಂದ್ರ ಸಮಿತಿ ಹುಬ್ಬಳ್ಳಿ, ದ.ಕ. ಜಿಲ್ಲಾ ಸಮಿತಿ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕಟೀಲು ಇವರ ವತಿಯಿಂದ ದಿನಾಂಕ 05 ಸೆಪ್ಟೆಂಬರ್ 2024ರಂದು ಕಟೀಲು ಕ್ಷೇತ್ರದಲ್ಲಿ ಶಿಕ್ಷಕ ದಿನಾಚರಣೆ ಪ್ರಯುಕ್ತ ರಾಜ್ಯಮಟ್ಟದ ಶಿಕ್ಷಕ ಸಾಹಿತಿಗಳ 7ನೇ ಸಮ್ಮೇಳನವು ನಡೆಯಲಿದೆ. ಹೊಸಕೋಟೆಯ ಹಿರಿಯ ಶಿಕ್ಷಕ ಸಾಹಿತಿಯಾದ ಶ್ರೀಕಾಂತ್ ಕೆ.ವಿ. ಇವರ ಸರ್ವಾಧ್ಯಕ್ಷತೆಯಲ್ಲಿ ಈ ಸಮ್ಮೇಳನವು ನಡೆಯಲಿದ್ದು, ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕ ಶ್ರೀಮಾನ್ ಹರಿನಾರಾಯಣ ಆಸ್ರಣರು ಉದ್ಘಾಟನೆ ಮಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು ಇವರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ವಿಚಾರಗೋಷ್ಠಿ, ಕವಿಗೋಷ್ಠಿ ಮತ್ತು ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮಗಳು ನಡೆಯಲಿದ್ದು, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಹರಿನಾರಾಯಣ ಆಸ್ರಣ್ಣ ಇವರಿಗೆ ‘ದುರ್ಗಾಪ್ರಸಾದ’ ಹಾಗೂ ಧರ್ಮದರ್ಶಿ ಹರಿಕೃಷ್ಣ ಪುನರೂರು ಇವರಿಗೆ ‘ಚುಟುಕು ದಾಸೋಹಿ ಗೌರವ ಪುರಸ್ಕಾರ’ ನೀಡಲಾಗುವುದು. ಶಿಕ್ಷಕ ಸಾಹಿತಿಗಳಾದ ವಿ.ಬಿ. ಕುಲಮರ್ವ ಕಾಸರಗೋಡು, ಡಾ.…

Read More

ಮಂಗಳೂರು : ಕೊಂಕಣಿ ಭಾಷೆ ಮತ್ತು ಸಾಹಿತ್ಯಕ್ಕೆ ಮೊದಲ ತಲೆಮಾರಿನಿಂದಲೂ ವಿಶೇಷ ಪ್ರೋತ್ಸಾಹ ನೀಡುತ್ತಾ ಬಂದಿರುವ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ 44 ವಸಂತಗಳನ್ನು ಪೂರೈಸಿದ ಹಿರಿಯ ಕೊಂಕಣಿ ಸಂಸ್ಥೆಯು ಸಾಹಿತ್ಯ ಸಾದರೀಕರಣಕ್ಕಾಗಿಯೇ ಸಂಸ್ಥೆಯ ಅಂಗಳದಲ್ಲಿ ‘ಬೊಲ್ಕಾಂವ್’ (ಬಾಲ್ಕನಿ) ಎಂಬ ವಿಶಿಷ್ಟ ಕಾರ್ಯಕ್ರಮ ಸರಣಿಯನ್ನು ಆರಂಭಿಸಲಿದೆ. ಈ ಕಾರಣಕ್ಕಾಗಿಯೇ ಪುಟ್ಟ ವೇದಿಕೆ, ದ್ವನಿ, ಬೆಳಕು ಮತ್ತು ಆಸನ ವ್ಯವಸ್ಥೆಯನ್ನು ಮಾಡಲಾಗಿದ್ದು, 40ರಿಂದ 50 ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶವಿದೆ. ಸಾಹಿತ್ಯದ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಬರಹಗಾರರಿಗೆ ಆದ್ಯತೆ ನೀಡಲಾಗಿದೆ. ಒಂದು ತಾಸು ನಡೆಯುವ ಕಾರ್ಯಕ್ರಮದಲ್ಲಿ ಹಿರಿಯ-ಕಿರಿಯ ಕತೆಗಾರ, ಕವಿ, ಪ್ರಬಂಧಕಾರ ಅಥವಾ ನಾಟಕಕಾರ ತನ್ನ ಕೃತಿಯ ಆಯ್ದ ಭಾಗವನ್ನು ವಾಚಿಸಿ, ಆಹ್ವಾನಿತರೊಂದಿಗೆ ಸಂವಾದ ನಡೆಸಲು ಅವಕಾಶ ಕಲ್ಪಿಸಲಾಗಿದೆ. ದಿನಾಂಕ 7 ಸೆಪ್ಟೆಂಬರ್ 2024ರಂದು ಪೂರ್ವಾಹ್ನ 10-00 ಗಂಟೆಗೆ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ ವಂದನೀಯ ಡಾ. ಪ್ರವೀಣ್ ಮಾರ್ಟಿಸ್ ಇವರು ಸಾಹಿತ್ಯ ಸರಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಕೊಂಕಣಿಯ ಪ್ರಮುಖ…

Read More

ಉಡುಪಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಉಡುಪಿ ತಾಲೂಕು ಘಟಕದ ವತಿಯಿಂದ ದಿನಾಂಕ 3 ಸೆಪ್ಟೆಂಬರ್ 2024ರಂದು ಡಾ. ಎ.ವಿ. ಬಾಳಿಗ ಆಸ್ಪತ್ರೆ ಸಭಾಂಗಣದಲ್ಲಿ ‘ಮನೆಯೇ ಗ್ರಂಥಾಲಯ’ ಅಭಿಯಾನದ ಶತ ಸಂಭ್ರಮ ಕಾರ್ಯಕ್ರಮವು ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಗ್ರಂಥಾಲಯಕ್ಕೆ ಪುಸ್ತಕ ಹಸ್ತಾಂತರಿಸಿದ ಖ್ಯಾತ ಸಾಹಿತಿ ಡಾ. ಬಿ. ಜನಾರ್ದನ ಭಟ್ ಇವರು ಮಾತನಾಡಿ “ಪುಸ್ತಕ ನೀಡುವ ಬೌದ್ಧಿಕ ಸತ್ಯದ ದರ್ಶನ ಯಾವುದೇ ಮಾಧ್ಯಮಗಳು ನೀಡಲು ಸಾಧ್ಯವಿಲ್ಲ. ಪುಸ್ತಕದಿಂದ ಬದುಕು ಬದಲಾಗಲು ಸಾಧ್ಯ. ಪುಸ್ತಕ ಓದುವ ಅಭ್ಯಾಸ ಇತ್ತೀಚಿಗಿನ ಶಿಕ್ಷಣ ಕ್ರಮದಿಂದ ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ಕ.ಸಾ.ಪ.ದ ಈ ಕಾರ್ಯಕ್ರಮ ಶ್ಲಾಘನೀಯ. ವಿದೇಶದಲ್ಲಿ ಯಾವುದೇ ಪುಸ್ತಕವನ್ನು ಡಿಜಿಟಲ್ ಮಾಧ್ಯಮದ ಮೂಲಕ ಕ್ಷಣಾರ್ಧದಲ್ಲಿ ಪಡೆಯುವ ವ್ಯವಸ್ಥೆ ಇದೆ. ಇದು ಕನ್ನಡದಲ್ಲಿ ಕೂಡ ನಡೆಯಬೇಕು” ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಪಿ.ವಿ. ಭಂಡಾರಿ ವಹಿಸಿ “ಮಾನಸಿಕ ಒತ್ತಡ ಕಡಿಮೆ ಮಾಡಲು ಪುಸ್ತಕ ಅತ್ಯುತ್ತಮ ಸಾಧನ” ಎಂದರು.…

Read More

ಸಾಲಿಗ್ರಾಮ : ಆದಿತ್ಯ ಟ್ರಸ್ಟ್ ಕ್ಯಾದಗಿ (ರಿ.) ಅರ್ಪಿಸುವ ‘ಪುಷ್ಪಕ ಯಾನ’ ಏಕವ್ಯಕ್ತಿ ನವರಸಾಭಿವ್ಯಕ್ತಿ ಕಾರ್ಯಕ್ರಮವು ದಿನಾಂಕ 5 ಸೆಪ್ಟೆಂಬರ್ 2024ರಂದು ಸಾಲಿಗ್ರಾಮ ಗುಂಡ್ಮಿಯ ಸದಾನಂದ ರಂಗ ಮಂಟಪದಲ್ಲಿ ಪ್ರಸ್ತುತಗೊಳ್ಳಲಿದೆ. ಈ ಕಾರ್ಯಕ್ರಮವು ಪುರಾಣ ಕಥೆಯನ್ನು ರಂಜನಾತ್ಮಕವಾಗಿ ಹೇಳುವ ಹೊಸ ಪ್ರಯತ್ನ ಇದಾಗಿದೆ. ಯಕ್ಷಹಾಸ್ಯ ಕಲಾವಿದ ಮಹಾಬಲೇಶ್ವರ ಭಟ್ ಕ್ಯಾದಗಿ ಇವರ ಪರಿಕಲ್ಪನೆ ನಿರ್ದೇಶನ ಮತ್ತು ಅಭಿನಯಕ್ಕೆ ಗಾನ ಸಾರಥಿ ವಿದ್ವಾನ್ ಗಣಪತಿ ಭಟ್ ಇವರು ಸಹಕರಿಸಲಿದ್ದಾರೆ.

Read More

ಉಡುಪಿ : ರಂಜನಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಉಡುಪಿಯ ಯಕ್ಷಗಾನ ಕಲಾರಂಗ ಇನ್ಫೋಸಿಸ್ ಹಾಲ್ ಇಲ್ಲಿ ಹಮ್ಮಿಕೊಂಡಿರುವ 9 ದಿನಗಳ ವಾರ್ಷಿಕ ಸಂಗೀತೋತ್ಸವವನ್ನು ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಡಿಪಾರ್ಟ್ ಮೆಂಟ್ ಆಫ್ ಸೋಶಿಯಲ್ ಸೈನ್ಸ್ ಡೀನ್ ಡಾ. ಬಿಂದಾ ಪರಾಂಜಪೆ ಇವರು ದಿನಾಂಕ 01 ಸೆಪ್ಟೆಂಬರ್ 2024ರಂದು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಗಂಗಾಧರ ರಾವ್, ಕಾರ್ಯದರ್ಶಿ ಮುರಳಿ ಕಡೆಕಾರ್ ಅವರನ್ನು ಗೌರವಿಸಲಾಯಿತು. ಈ ಸಂಗೀತೋತ್ಸವದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕಲಾವಿದರಿಂದ ಗುಣಮಟ್ಟದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮೊದಲ ದಿನದ ಕಾರ್ಯಕ್ರಮದಲ್ಲಿ ನಾಗೇಶ್ ಬಪ್ಪನಾಡು ಮತ್ತು ತಂಡದವರಿಂದ ನಾಗಸ್ವರ ವಾದನ, ವಿದ್ವಾಂಸರಾದ ಡಾ. ಬಿಂದಾ ಪರಾಂಜಪೆ ಇವರಿಂದ ‘ಕಲಾಕ್ಷೇತ್ರಕ್ಕೆ ದೇವದಾಸಿಯರ ಕೊಡುಗೆ’ ಎಂಬ ವಿಷಯದ ಕುರಿತು ಉಪನ್ಯಾಸ ನಡೆಯಿತು. ರಮಣ ಬಾಲಚಂದ್ರನ್ ಅವರು ವೀಣಾ ವಾದನದ ಮೂಲಕ ಮೊದಲ ದಿನದ ಪ್ರಧಾನ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ರಂಜನಿ ಮೆಮೋರಿಯಲ್ ಟ್ರಸ್ಟಿನ ಮುಖ್ಯಸ್ಥ ಪ್ರೊ. ಅರವಿಂದ ಹೆಬ್ಬಾರ್…

Read More

ಪುತ್ತೂರು : ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು, ಜಿಲ್ಲಾ ಕನ್ನಡ ಲೇಖಕರ ಸಂಘ ಕಾಸರಗೋಡು, ಕನ್ನಡ ಸಂಘ ಮತ್ತು ಐ.ಕ್ಯೂ.ಎ.ಸಿ. ಇದರ ಸಹಯೋಗದಲ್ಲಿ ಕೃತಿ ಲೋಕಾರ್ಪಣೆ ಮತ್ತು ಸ್ವರಚಿತ ಕವನ ವಾಚನ ಸಮಾರಂಭವನ್ನು ದಿನಾಂಕ 05 ಸೆಪ್ಟೆಂಬರ್ 2024ರಂದು ಇಳಿಹಗಲು 2-00 ಗಂಟೆಗೆ ಸುವರ್ಣ ಮಹೋತ್ಸವ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ. ಶ್ರೀಪತಿ ಕಲ್ಲೂರಾಯ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಪಿ. ಶ್ರೀಕೃಷ್ಣ ಭಟ್ ಇವರು ಕೃತಿ ಲೋಕಾರ್ಪಣೆ ಮಾಡಲಿರುವರು. ಪ್ರಾಧ್ಯಾಪಕರಾದ ಡಾ. ರಾಧಾಕೃಷ್ಣ ಬೆಳ್ಳೂರು ಇವರು ಕೃತಿ ಪರಿಚಯ ಮಾಡಲಿದ್ದು, ಸಭಾ ಕಾರ್ಯಕ್ರಮದ ಬಳಿಕ ಸ್ವರಚಿತ ಕವನ ವಾಚನ ನಡೆಯಲಿದೆ.

Read More

ಸುರತ್ಕಲ್  : ಗೋವಿಂದದಾಸ ಕಾಲೇಜಿನ ಗ್ರಂಥಾಲಯ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಖಾತರಿಕೋಶದ ಸಹಭಾಗಿತ್ವದಲ್ಲಿ ನಡೆಸುತ್ತಿರುವ ಪುಸ್ತಕ ಪ್ರೀತಿ  ಪರಿಚಯ ಸರಣಿ ಕಾರ್ಯಕ್ರಮ ದಿನಾಂಕ 28 ಆಗಸ್ಟ್ 2024 ರಂದು ಕಾಲೇಜಿನ ಗ್ರಂಥಾಲಯದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ  ದ್ವಿತೀಯ ಬಿ. ಎ. ವಿದ್ಯಾರ್ಥಿನಿ ಮುಂಜುಳಾ ಇವರು  ಮಹೇಶ್ ಆರ್. ನಾಯಕ್ ಬರೆದಿರುವ ‘ಜಪಾನೀ ಪ್ಲೇಟ್’ ಎಂಬ ಕಥಾ ಸಂಕಲನವನ್ನು ಪರಿಚಯಿಸಿ “ಮಾನವೀಯ ಸಂಬಂಧಗಳ ಕುರಿತು ವಿವಿಧ ನೆಲೆಗಳಲ್ಲಿ ಕಥೆಗಳು ವ್ಯಾಖ್ಯಾನ ಮಾಡುತ್ತಿವೆ. ಆಧುನಿಕ ಬದುಕಿನ ವಿವಿಧ ಸ್ತರಗಳನ್ನು ಈ ಪುಸ್ತಕದ ಕಥೆಗಳು ನಿರೂಪಿಸುತ್ತವೆ.” ಎಂದರು. ಮಂಜುಳಾ ಅವರಿಗೆ ಮಹೇಶ್ ಆರ್. ನಾಯಕ್ ಸ್ಮರಣಿಕೆ ನೀಡಿ ಗೌರವಿಸಿದರು ಬಳಿಕ ಮಾತನಾಡಿದ ಅವರು “ಪುಸ್ತಕ ಪ್ರೀತಿ ವಿದ್ಯಾರ್ಥಿಗಳಲ್ಲಿ ಪುಸ್ತಕ ಅಭಿರುಚಿ ಮೂಡಿಸುವ ವಿಶಿಷ್ಟ ಕಾರ್ಯಕ್ರಮವಾಗಿದೆ.” ಎಂದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಪಿ. ಕೃಷ್ಣಮೂರ್ತಿ ಇವರು ಮಹೇಶ್ ಆರ್. ನಾಯಕ್ ಇವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಆಂತರಿಕ ಗುಣಮಟ್ಟ ಖಾತರಿಕೋಶದ ಸಂಯೋಜಕರಾದ ಪ್ರೊ. ಹರೀಶ್ ಆಚಾರ್ಯ, ಪ್ರಾಧ್ಯಾಪಕರುಗಳಾದ…

Read More