Author: roovari

ಕುಂದಾಪುರ : ಕುಂದಾಪುರ ಹಳೆ ಬಸ್ ನಿಲ್ದಾಣ ಬಳಿಯಲ್ಲಿರುವ ತ್ರಿವರ್ಣ ಆರ್ಟ್ ಗ್ಯಾಲರಿ ಆಶ್ರಯದಲ್ಲಿ ಕುಂದಾಪುರ ಸಂಸ್ಕೃತಿ ಮತ್ತು ಆಚರಣೆಗಳನ್ನು ಬಿಂಬಿಸುವ ‘ನಮ್ ಕುಂದಾಪುರ’ ತ್ರಿವರ್ಣ ಚಿತ್ರಕಲಾ ಪ್ರದರ್ಶನದ ಉದ್ಘಾಟನಾ ಸಮಾರಂಭವು ದಿನಾಂಕ 16 ಆಗಸ್ಟ್ 2025ರಂದು ನಡೆಯಿತು. ಉಧ್ಘಾಟಕರಾದ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಪ್ರಾಂಶುಪಾಲರಾದ ಶ್ರೀ ಶರಣ ಕುಮಾರ್ ರವರು ಈ ಸಂದರ್ಭದಲ್ಲಿ ಮಾತನಾಡಿ, “ವಿದ್ಯಾರ್ಥಿಗಳ ಚಿತ್ರಕಲಾ ಪ್ರೌಢಿಮೆಯನ್ನು ಉತ್ತೇಜಿಸಲು ತ್ರಿವರ್ಣ ಆರ್ಟ್ ಗ್ಯಾಲರಿ ಆಯೋಜಿಸಿರುವ ಈ ಕಾರ್ಯಕ್ರಮ ಶ್ಲಾಘನೀಯ” ಎಂದರು. ಸಮಾರಂಭದಲ್ಲಿ ಅತಿಥಿ ಅಭ್ಯಾಗತರಾಗಿ ಕುಂದಾಪುರ ಓಕ್ ವುಡ್ ಇಂಡಿಯನ್ ಸ್ಕೂಲ್ ಮ್ಯಾನೆಜ್ ಮೆಂಟ್ ಜಂಟಿ ಕಾರ್ಯದರ್ಶಿ ಶ್ರೀಮತಿ ನೀತಾ ಶೆಟ್ಟಿ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾದ ಶ್ರೀ ಸುಬ್ರಹ್ಮಣ್ಯ ಶೆಟ್ಟಿ ಹಾಗೂ ಕಲಾಕ್ಷೇತ ಕುಂದಾಪುರ ಟ್ರಸ್ಟಿಣ ಅಧ್ಯಕ್ಷ ಶ್ರೀ ಕಿಶೋರ್ ಕುಮಾರ್ ಇವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ತನುಶ್ರೀ ಸ್ವಾಗತಿಸಿ, ತ್ರಿವರ್ಣ ಆರ್ಟ್ ಗ್ಯಾಲರಿಯ ಮುಖ್ಯಸ್ಥರಾದ ಶ್ರೀ ಹರೀಶ್ ಸಾಗರವರು ಪ್ರಾಸ್ತಾವಿಕ…

Read More

ಎಡನೀರು : ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಪಂಚಮ ಚಾತುರ್ಮಾಸ್ಯ ವೃತಾಚರಣೆ ಪ್ರಯುಕ್ತ ದಿನಾಂಕ 22 ಆಗಸ್ಟ್ 2025ರಂದು ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಯಕ್ಷಗಾನ ಪ್ರದರ್ಶನವನ್ನು ಶ್ರೀ ಎಡನೀರು ಮಠದಲ್ಲಿ ಹಮ್ಮಿಕೊಳ್ಳಲಾಗಿದೆ. ಸಂಜೆ 6-00 ಗಂಟೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಕುಮಾರಿ ಚಾರ್ವಿ ಆರ್. ಸರಳಾಯ ಇವರ ಹಾಡುಗಾರಿಕೆಗೆ ವಯೋಲಿನ್ ನಲ್ಲಿ ಕುಮಾರಿ ಇಂಚರ ಎನ್. ಮತ್ತು ಮೃದಂಗದಲ್ಲಿ ಶ್ರೀ ಶಮಿತ್ ಕಲ್ಕೂರ್ ಸಹಕರಿಸಲಿದ್ದಾರೆ. ರಾತ್ರಿ ಗಂಟೆ 7-30ರಿಂದ ಯಕ್ಷಾರಾಧನಾ ಕಲಾ ಕೇಂದ್ರ (ರಿ) ಉರ್ವ ಮಾರ್ಕೆಟ್ ಮಂಗಳೂರಿನ ವಿದುಷಿ ಶ್ರೀಮತಿ ಸುಮಂಗಲಾ ರತ್ನಾಕರ್ ರಾವ್ ಮತ್ತು ಶಿಷ್ಯವೃಂದ ಪ್ರಸ್ತುತಪಡಿಸುವ ಆಗರಿ ಶ್ರೀನಿವಾಸ ಭಾಗವತರು ರಚಿಸಿರುವ ವಿದುಷಿ ಶ್ರೀಮತಿ ಸುಮಂಗಲಾ ರತ್ನಾಕರ್ ರಾವ್ ನಿರ್ದೆಶನದಲ್ಲಿ ‘ಶಾಂಭವಿ ವಿಜಯ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಹಿಮ್ಮೇಳದಲ್ಲಿ ಶ್ರೀ ಪುಂಡಿಕಾಯಿ ಗೋಪಾಲಕೃಷ್ಣ ಭಟ್, ಶ್ರೀ ಶಿತಿಕಂಠ ಭಟ್ ಉಜರೆ, ಶ್ರೀ ಲವಕುಮಾರ ಐಲ,…

Read More

ಉಡುಪಿ : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಮತ್ತು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಇವುಗಳ ಆಶ್ರಯದಲ್ಲಿ ‘ಸೇಡಿಯಾಪು ಪ್ರಶಸ್ತಿ’ ಹಾಗೂ ‘ಕಡೆಂಗೋಡ್ಲು ಕಾವ್ಯ ಪ್ರಶಸ್ತಿ’ ಪ್ರದಾನ ಸಮಾರಂಭವು ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ದಿನಾಂಕ 16 ಆಗಸ್ಟ್ 2025ರಂದು ನಡೆಯಿತು. ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಆಡಳಿತಾಧಿಕಾರಿ ಡಾ. ಶ್ರೀಧರ ಪೈ ಇವರು ‘ಸೇಡಿಯಾಪು ಪ್ರಶಸ್ತಿ’ಯನ್ನು ಡಾ. ಎಚ್.ವಿ. ನಾಗರಾಜ ರಾವ್ ಹಾಗೂ ‘ಕಡೆಂಗೋಡ್ಲು ಕಾವ್ಯ ಪ್ರಶಸ್ತಿ’ಯನ್ನು ಡಾ. ಪ್ರಜ್ಞಾ ಮತ್ತಿಹಳ್ಳಿ ಇವರಿಗೆ ಪ್ರದಾನ ಮಾಡಿದರು. ‘ಸೇಡಿಯಾವು ಪ್ರಶಸ್ತಿ 2025’ ಪುರಸ್ಕೃತ ಡಾ. ಎಚ್.ವಿ. ನಾಗರಾಜ ರಾವ್ ಕುರಿತು ಎಸ್‌.ಎಂ.ಎಸ್‌.ಪಿ. ಸಂಸ್ಕೃತ ಕಾಲೇಜಿನ ಪ್ರಾಧ್ಯಾಪಕ ಡಾ. ಎಚ್. ಮಹೇಶ್ ಭಟ್ ಅಭಿನಂದನಾ ಮಾತನಾಡಿದರು. ‘ಕಡೆಂಗೋಡ್ಲು ಕಾವ್ಯ ಪ್ರಶಸ್ತಿ 2025’ ಪುರಸ್ಕೃತ ಡಾ. ಪ್ರಜ್ಞಾ ಮತ್ತಿಹಳ್ಳಿ ರಚಿತ ಕೃತಿ ‘ಬೆಳದಿಂಗಳ ಸೋನೆಮಳೆ’ ಕೃತಿಯ ಪರಿಚಯವನ್ನು ಎಂ.ಜಿ.ಎಂ. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಪುತ್ತಿ ವಸಂತ್…

Read More

ಮಂಗಳೂರು : ಮಂಗಳೂರು ಸಂಸ್ಕೃತ ಸಂಘ ಹಾಗೂ ಸರೋಜಿನೀ ಮಧುಸೂದನ ಕುತೆ ಶಿಕ್ಷಣ ಸಂಸ್ಥೆ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ದಿನಾಂಕ 23 ಆಗಸ್ಟ್ 2025ರ ಶನಿವಾರ ಮಧ್ಯಾಹ್ನ 2-00 ಗಂಟೆಗೆ ಮಂಗಳೂರಿನ ಅತ್ತಾವರದ ಸರೋಜಿನೀ ಮಧುಸೂದನ ಕುಶೆ ಪ್ರ.ಪೂ. ವಿದ್ಯಾಲಯದಲ್ಲಿ ‘ಸಂಸ್ಕೃತೋತ್ಸವ ಕಾರ್ಯಕ್ರಮ’ ಹಮ್ಮಿಕೊಳ್ಳಲಾಗಿದೆ. ಸಂಸ್ಕೃತೋತ್ಸವದ ಅಂಗವಾಗಿ ವಿವಿಧ ಸಂಸ್ಕೃತ ಸ್ಪರ್ಧೆಗಳ ಅಧ್ಯಕ್ಷತೆಯನ್ನು ಸಂಸ್ಕೃತ ಸಂಘದ ಗೌರವಾಧ್ಯಕ್ಷ ಕೆ.ಪಿ. ವಾಸುದೇವ ರಾವ್ ಇವರು ವಹಿಸಲಿದ್ದು, ಶ್ರೀಮತಿ ಸರೋಜಿನೀ ಮಧುಸೂದನೆ ಕುಶೆಯವರು ಸ್ಪರ್ಧೆಯನ್ನು ಉದ್ಘಾಟನೆ ಮಾಡಲಿದ್ದಾರೆ. ಅತಿಥಿಗಳಾಗಿ ಮಂಗಳೂರು ಆಕಾಶವಾಣಿಯ ನಿವೃತ್ತ ಸಹಾಯಕ ನಿರ್ದೇಶಕರು ಶ್ರೀ ಸೂರ್ಯನಾರಾಯಣ ಭಟ್ಟ ಇವರು ಪ್ರಧಾನ ಭಾಷಣ ಮಾಡಲಿದ್ದಾರೆ ಹಾಗೂ ಸರೋಜಿನೀ ಮಧುಸೂದನ ಕುಶೆ ಪ.ಪೂ. ವಿದ್ಯಾಲಯದ ಪ್ರಾಚಾರ್ಯರು ಶ್ರೀ ಬಿಂದುಸಾರ ಶೆಟ್ಟಿ ಇವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 2-30 ಗಂಟೆಗೆ ಮಂಗಳೂರು ತಾಲೂಕು ಮಟ್ಟದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಂಸ್ಕೃತ ಸ್ತೋತ್ರ ಕಂಠಪಾಠ, ಸುಭಾಷಿತ ಕಂಠಪಾಠ, ಏಕಪಾತ್ರಾಭಿನಯ, ಸಮೂಹಗಾನ ಸ್ಪರ್ಧೆ, ಸಮೂಹ ನೃತ್ಯ,…

Read More

ಮಂಗಳೂರು : ‘ಸಂಸ್ಕಾರ ಭಾರತೀ’ ಮಂಗಳೂರು ಮಹಾನಗರ ಘಟಕದ ವತಿಯಿಂದ “ನಟರಾಜ ಪೂಜನ್” ಕಾರ್ಯಕ್ರಮವು ಮಂಗಳೂರಿನ ಸನಾತನ ನಾಟ್ಯಲಯದಲ್ಲಿ ದಿನಾಂಕ 19 ಆಗಸ್ಟ್ 2025ರ ಮಂಗಳವಾರದಂದು ಸಂಪನ್ನಗೊಂಡಿತು. ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷರೂ, ಕಲಾಚಿಂತಕರೂ, ಗಂಡು ಕಲೆ ಯಕ್ಷಗಾನವನ್ನು ಅಮೆರಿಕಾದಲ್ಲಿ ಪ್ರದರ್ಶಿಸಿದ ಹೆಗ್ಗಳಿಕೆಗೆ ಪಾತ್ರರಾದ ಪ್ರೊ. ಎಂ. ಎಲ್. ಸಾಮಗ ಇವರು ಅತಿಥಿಯ ಸ್ಥಾನದಿಂದ ಮಾತನಾಡುತ್ತಾ “ನೋಡಲಾಗದ್ದನ್ನು ನೋಡುವ ಹಾಗೆ ಮಾಡುವುದೇ ಕಲೆ. ಭಾರತೀಯವಾದ ದೇವರ ಕಲ್ಪನೆ ಮಾಡಿಕೊಳ್ಳದಿದ್ದಲ್ಲಿ ನೃತ್ಯದ ಅನುಭೂತಿಯನ್ನು ಅನುಭವಿಸಲಾಗದು. ನಮ್ಮ ನಮ್ಮ ಅನುಭವದ ಕ್ಷೇತ್ರ ವಿಸ್ತಾರವಾಗದೆ ನಾವು ವಿಕಾಸಗೊಳ್ಳಲು ಸಾಧ್ಯವಿಲ್ಲ. ನಟರಾಜನ ವಿಗ್ರಹವು ಭಾರತೀಯ ತತ್ವಶಾಸ್ತ್ರವನ್ನು ಪ್ರತಿನಿಧಿಸುವುದರೊಂದಿಗೆ ನಮ್ಮ ದೇಶದ ಕಲಾ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ. ನಾವು ಜ್ಞಾನಕ್ಕಾಗಿ ಈಶ್ವರನನ್ನು ಆರಾಧಿಸಬೇಕು” ಎನ್ನುತ್ತಾ ನಟರಾಜನ ವಿಗ್ರಹದ ಮಹತ್ತ್ವವನ್ನು ವಿವರಿಸಿದರು. 170 ಗಂಟೆಗಳ ಕಾಲ ನೃತ್ಯ ಪ್ರದರ್ಶಿಸಿ ದಾಖಲೆ ಮಾಡಿದ ಕುಮಾರಿ ರೆಮೊನಾ ಈವೆಟ್ ಪಿರೇರ ಇವರ ಸಾಧನೆಯನ್ನು ವಿದ್ವಾನ್ ಶ್ರೀಧರ ಹೊಳ್ಳ ವಿವರಿಸಿದ ನಂತರ ರೆಮೋನಾ ಪಿರೇರಾ ಇವರನ್ನು…

Read More

ಕಾಸರಗೋಡು : ಶ್ರೀಸ್ಕಂದ ಯಕ್ಷಗಾನ ಕೇಂದ್ರ ಪಾಯಿಚ್ಚಾಲು ಇಲ್ಲಿನ ಪುಟಾಣಿ ಕಲಾವಿದರಿಂದ ‘ಗಿರಿಜಾಕಲ್ಯಾಣ’ ಯಕ್ಷಗಾನ ಪ್ರದರ್ಶನ ದಿನಾಂಕ 13 ಆಗಸ್ಟ್ 2025ರಂದು ಶ್ರೀ ಎಡನೀರು ಮಠದ ಶ್ರೀಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಪಂಚಮ ಚಾತುರ್ಮಾಸ್ಯದ ಅಂಗವಾಗಿ ಶ್ರೀ ಎಡನೀರು ಮಠದಲ್ಲಿ ನಡೆಯಿತು. ನಾಟ್ಯಗುರು ರಂಜಿತ್ ಗೋಳಿಯಡ್ಕ ಇವರ ನಿರ್ದೇಶನದಲ್ಲಿ ನಡೆದ ಈ ಕಾರ್ಯಕ್ರಮದ ಹಿಮ್ಮೇಳದಲ್ಲಿ ಭಾಗವತರಾಗಿ ತಲ್ಪನಾಜೆ ವೆಂಕಟ್ರಮಣ ಭಟ್, ಚೆಂಡೆಯಲ್ಲಿ ಪೃಥ್ವಿಚಂದ್ರ ಶರ್ಮ ಪೆರುವಡಿ ಹಾಗೂ ಮದ್ದಳೆಯಲ್ಲಿ ಲವಕುಮಾರ್ ಐಲ, ಚಕ್ರತಾಳದಲ್ಲಿ ಅರ್ಪಿತ್ ಶೆಟ್ಟಿ, ವಸ್ತ್ರಾಲಂಕಾರದಲ್ಲಿ ರಾಕೇಶ್ ಗೋಳಿಯಡ್ಕ ಸಹಕರಿಸಿದರು. ಅರ್ಜುನ್ ಕೂಡ್ಲು, ಆಕಾಶ್ ಕೂಡ್ಲು, ಶ್ರೀವತ್ಸ, ಶ್ರೀಸ್ಕಂದ ಯಕ್ಷಗಾನ ಕೇಂದ್ರದ ಅಧ್ಯಕ್ಷ ಕಿರಣ್ ಪ್ರಸಾದ್ ಕೂಡ್ಲು, ಕೋಶಾಧಿಕಾರಿ ಮುರಳೀಧರ ಶೆಟ್ಟಿ, ಕಾರ್ಯದರ್ಶಿ ಕಿರಣ್ ಪಾಯಿಚ್ಚಾಲು ಸಹಕರಿಸಿದರು. ಶ್ರೀಸ್ಕಂದ ಯಕ್ಷಗಾನ ಕೇಂದ್ರದ ಮಕ್ಕಳಿಗೆ ಗುರುಗಳು ಫಲ ಮಂತ್ರಾಕ್ಷತೆ ನೀಡಿ ಹರಸಿದರು. ಪ್ರದರ್ಶನದಲ್ಲಿ ಕೇಂದ್ರದ 15ಮಕ್ಕಳು ಪಾತ್ರ ನಿರ್ವಹಿಸಿದರು.

Read More

ಮಂಗಳೂರು: ‘ಸಸಿ ಪ್ರಕಾಶನ’ದ ವತಿಯಿಂದ ಕನ್ನಡ ವಿಭಾಗ, ರಂಗ ಅಧ್ಯಯನ ಕೇಂದ್ರ ಸಂತ ಆಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯ ಮಂಗಳೂರು ಇದರ ಸಹಯೋಗದೊಂದಿಗೆ ಕಥೆಗಾರ ಮುನವ್ವರ್ ಜೋಗಿಬೆಟ್ಟು ಇವರ ಎರಡನೇ ಕಥಾ ಸಂಕಲನ ‘ಟಚ್ ಮೀ ನಾಟ್’ ಇದರ ಲೋಕಾರ್ಪಣಾ ಸಮಾರಂಭವು ದಿನಾಂಕ 17  ಆಗಸ್ಟ್ 2025ರ ಭಾನುವಾರದಂದು ಸಂತ ಆಲೋಶಿಯಸ್ ಕಾಲೇಜಿನ ರಾಬರ್ಟ್ ಸಿಕ್ವೇರ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬಾಲಸುಬ್ರಹ್ಮಣ್ಯ ಕಂಜರ್ಪಣೆ ಮಾತನಾಡಿ “ಈ ಜಗತ್ತಿನಲ್ಲಿ ಕಡ್ಡಾಯವಾಗಿ ಓದಲೇಬೇಕು ಎಂಬುದು ಏನೂ ಇಲ್ಲ. ಮನಸ್ಸಿಗೆ ತಟ್ಟುವಂತದ್ದು ಅನ್ನುವುದು ಬಿಡಿ; ಸಾಹಿತ್ಯ ಮನಸ್ಸಿಗೆ ಮುಟ್ಟಿದರೆ ಸಾಕು” ಎಂದು ಹೇಳಿದರು. ಸಾಹಿತಿ ಸುಧಾ ಆಡುಕಳಾ ಮಾತನಾಡಿ “ಮುನವ್ವರ್ ಅವರ ಭಾಷೆ ಅದ್ಭುತವಾಗಿದ್ದು, ಅವರು ಆಯ್ದುಕೊಳ್ಳುವ ಕಥಾವಸ್ತುಗಳು ಅವರನ್ನು ಈ ಕಾಲದ ಗಟ್ಟಿ ಕಥೆಗಾರರ ಸಾಲಿನಲ್ಲಿ ನಿಲ್ಲಿಸುತ್ತವೆ” ಎಂದರು. ಕಥೆಗಾರ ಮುನವ್ವರ್ ಜೋಗಿಬೆಟ್ಟು ಮಾತನಾಡಿ “ಜಗತ್ತಿನಲ್ಲಿರೋದು ಎರಡೇ ಜಾತಿ. ಒಂದು ಉಳ್ಳವರ ಜಾತಿ ಮತ್ತೊಂದು ಉಳ್ಳದೇ ಇರುವವರ ಜಾತಿ. ನನಗೆ ಮನುಷ್ಯನ…

Read More

ಕಾಸರಗೋಡು : ಶ್ರೀ ಎಡನೀರು ಮಠದ ಶ್ರೀಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಪಂಚಮ ಚಾತುರ್ಮಾಸ್ಯದ ಅಂಗವಾಗಿ ‘ನೃತ್ಯದ್ವಯ’, ‘ನೃತ್ಯಸಿರಿ’ ಹಾಗೂ’ ಕರ್ನಾಟಕ ಶಾಸ್ತ್ರೀಯ ಸಂಗೀತ’ ಕಾರ್ಯಕ್ರಮ ದಿನಾಂಕ 15ಆಗಸ್ಟ್ 2025ರ ಶುಕ್ರವಾರದಂದು ನಡೆಯಿತು. ಕಾರ್ಯಕ್ರಮದಲ್ಲಿ ಶ್ರೀ ಗೌತಮ ಕೃಷ್ಣ ದೇಂತಜೆ ಇವರ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನಕ್ಕೆ ವಯಲಿನ್ ನಲ್ಲಿ ಕುಮಾರಿ ಧನಾಶ್ರೀ ಶಬರಾಯ ಹಾಗೂ ಮೃದಂಗದಲ್ಲಿ ಶ್ರೀ ಆಶ್ಲೇಷ್ ಪಿ. ಎಸ್. ಸಹಕರಿಸಿದರು. ಬಳಿಕ ನಡೆದ ವಿದುಷಿ ಮಂಜುಳ ಸುಬ್ರಹ್ಮಣ್ಯ ಹಾಗೂ ವಿದ್ವಾನ್ ಶ್ರೀ ಮಂಜುನಾಥ್ ಎನ್. ಪುತ್ತೂರು ಇವರ ‘ನೃತ್ಯದ್ವಯ’ ಕಾರ್ಯಕ್ರಮ ಕಲಾರಸಿಕರಿಗೆ ಹೊಸ ಅನುಭೂತಿಯನ್ನು ನೀಡಿತು. ಕಾರ್ಯಕ್ರಮದ ಅಂತ್ಯದಲ್ಲಿ ನಾಟ್ಯರಂಗ ಪುತ್ತೂರು ಇಲ್ಲಿನ ಕಲಾವಿದರಿಂದ ‘ನೃತ್ಯಸಿರಿ’ ಭರತನಾಟ್ಯ ಪ್ರದರ್ಶನ ನಡೆಯಿತು. ಇವರಿಗೆ ಹಾಡುಗಾರಿಕೆಯಲ್ಲಿ ವಿದ್ವಾನ್ ಸ್ವರಾಗ್ ಮಾಹೆ, ನಾಟುವಾಂಗದಲ್ಲಿ ಕೋಲ್ಕತ್ತಾದ ಎನ್. ದೆಬಾಶಿಶ್, ಮೃದಂಗದಲ್ಲಿ ಬೆಂಗಳೂರಿನ ಗೌತಮ್ ಗೋಪಾಲಕೃಷ್ಣ ಹಾಗೂ ವಯಲಿನ್ ನಲ್ಲಿ ತನ್ಮಯಿ ಉಪ್ಪಂಗಳ ಸಹಕರಿಸಿದರು.

Read More

ಬೆಂಗಳೂರು: `ಟೊಟೊ ಪುರಸ್ಕಾರ’ಕ್ಕೆ ಸಾಹಿತ್ಯ ಕೃತಿಗಳನ್ನು ಆಹ್ವಾನಿಸಲಾಗಿದೆ. ಈ ಪ್ರಶಸ್ತಿಯನ್ನು ಟಿ.ಎಫ್.ಎ. (ಟೊಟೊ ಫಂಡ್ಸ್ ದಿ ಆರ್ಟ್ಸ್). ಸ್ಥಾಪಿಸಿದ್ದು, ಪ್ರಶಸ್ತಿಯು ರೂಪಾಯಿ 60 ಸಾವಿರ ನಗದು ಬಹುಮಾನ ಒಳಗೊಂಡಿದೆ. ಬರಹಗಾರರು 18 ರಿಂದ 29 ವರ್ಷ ವಯಸ್ಸಿನವರಾಗಿರಬೇಕು. ಕಥೆ, ಕವಿತೆ ಅಥವಾ ನಾಟಕ ಪ್ರಕಾರದಲ್ಲಿ ಪ್ರವೇಶಗಳನ್ನು ಕಳುಹಿಸಬಹುದು. ಪ್ರವೇಶಗಳನ್ನು ಕಳುಹಿಸಲು 30 ಸೆಪ್ಟೆಂಬರ್ 2025 ಕೊನೆಯ ದಿನವಾಗಿದ್ದು, ಪ್ರವೇಶ ಪತ್ರವನ್ನು https://totofundsthearts.org/ ಇಲ್ಲಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಬರಹ ಮತ್ತು ಪ್ರವೇಶ ಎರಡನ್ನೂ [email protected] ಇಲ್ಲಿಗೆ ಕಳುಹಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

Read More

ಬೆಂಗಳೂರು : ವಿವಿಧ ಪತ್ರಿಕೆಗಳಲ್ಲಿ ಸಂಪಾದಕೀಯ ವಿಭಾಗದಲ್ಲಿ ಸೇವೆ ಸಲ್ಲಿಸಿದ ಸಾಹಿತ್ಯ, ಸಂಸ್ಕೃತಿ ಒಲವಿನ ಹಿರಿಯ ಪತ್ರಕರ್ತ ಕಾರ್ಯಾಡಿ ಮಂಜುನಾಥ ಭಟ್ ಇವರು ಅಸೌಖ್ಯದಿಂದ ದಿನಾಂಕ 17 ಆಗಸ್ಟ್ 2025ರಂದು ಬೆಂಗಳೂರಿನಲ್ಲಿ ನಿಧನ ಹೊಂದಿದರು. ಇವರಿಗೆ 72 ವರ್ಷ ವಯಸ್ಸಾಗಿತ್ತು. ಕುಂದಾಪುರ ತಾಲೂಕಿನ ನ ಗುಡ್ಡಟ್ಟು ಸಮೀಪದ ಹೆಸ್ಕತ್ತೂರು ಗ್ರಾಮದ ಹಾರಾಡಿಯ ಎಚ್. ಲಕ್ಷ್ಮೀನಾರಾಯಣ ಭಟ್ ಮತ್ತು ಗಂಗಮ್ಮ ದಂಪತಿಯ ಪುತ್ರನಾದ ಭಟ್ ಇವರು ಉಡುಪಿಯ ಬೋರ್ಡ್ ಹೈಸ್ಕೂಲ್‌ನಲ್ಲಿ ಪ.ಪೂ. ಶಿಕ್ಷಣ, ಉಡುಪಿ ಸಂಸ್ಕೃತ ಕಾಲೇಜಿನಲ್ಲಿ ಅಧ್ಯಯನ, ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಪದವಿ, ಕುಂಜಿಬೆಟ್ಟು ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ. ಎಡ್. ಪದವಿ ಪಡೆದು ಬೆಂಗಳೂರಿನ ನ್ಯಾಶನಲ್ ಪ್ರೌಢಶಾಲೆಯಲ್ಲಿ ಕೆಲಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಕಾಲೇಜು ದಿನಗಳಿಂದಲೂ ವಾಸವಿರುತ್ತಿದ್ದ ಪೇಜಾವರ ಮಠವನ್ನು ಕೇಂದ್ರೀಕರಿಸಿಕೊಂಡು ಸಾಹಿತ್ಯ, ಸಂಸ್ಕೃತಿಯ ಕುರಿತಾದ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದ ಭಟ್, ಶಿಕ್ಷಕ ವೃತ್ತಿಯನ್ನು ಬಿಟ್ಟು ಪತ್ರಿಕಾರಂಗಕ್ಕೆ ಮಂಗಳೂರಿನ ‘ ನವಭಾರತ’ದ ಮೂಲಕ 1977ರಲ್ಲಿ ಕಾಲಿಟ್ಟರು. ಬಳಿಕ ‘ಮುಂಗಾರು’ ಪತ್ರಿಕೆಯ ಆರಂಭದಿಂದ ಕೊನೆಯವರೆಗೂ…

Read More