Subscribe to Updates
Get the latest creative news from FooBar about art, design and business.
Author: roovari
ಮಧೂರು : ಉಳಿಯ ದನ್ವಂತರಿ ಯಕ್ಷಗಾನ ಕಲಾಸಂಘ ಮಧೂರು ಇದರ ವಾರದ ಕೂಟ ಉಳಿಯ ಮನೆಯ ಸುಧಾ ಮಂದಿರದಲ್ಲಿ ದಿನಾಂಕ 5 ಅಕ್ಟೋಬರ್ 2025 ಭಾನುವಾರದಂದು ‘ವೀರಮಣಿ ಕಾಳಗ’ ಎಂಬ ಪ್ರಸಂಗದ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರು ಶ್ರೀ ವಾಸುದೇವ ಕಲ್ಲೂರಾಯ ಮಧೂರು ಮತ್ತು ಶ್ರೀ ರವಿಶಂಕರ ಮಧೂರು ಹಾಗೂ ಮದ್ದಳೆಯಲ್ಲಿ ಮುರಳಿ ಮಾಧವ ಮಧೂರು ಇವರುಗಳು ಸಹಕರಿಸಿದರು. ಮುಮ್ಮೇಳದಲ್ಲಿ ಬ್ರಹ್ಮಶ್ರೀ ಉಳಿಯತಾಯ ವಿಷ್ಣು ಆಸ್ರ, ಶ್ರೀ ಗೋಪಾಲ ಅಡಿಗಳು ಕೂಡ್ಲ, ಶ್ರೀ ಮಯೂರ ಆಸ್ರ ಉಳಿಯ, ಶ್ರೀಮತಿ ರಕ್ಷಾ ರಾಮ್ ಕಿಶೋರ ಆಸ್ರ, ಶ್ರೀಮತಿ ಧನ್ಯಮುರಳಿ ಕೃಷ್ಣ ಆಸ್ರ, ಶ್ರೀ ನರಸಿಂಹ ಬಲ್ಲಾಳ್, ಶ್ರೀ ಜಯರಾಮ ದೇವಾಸ್ಯ, ಶ್ರೀ ವಿಷ್ಣು ಭಟ್, ಸರಸ್ವತಿ ಗೋಪಾಲ ಅಡಿಗ ಕೂಡ್ಲು ಇವರುಗಳು ಸಹಕರಿಸಿದರು.
ಮಂಗಳೂರು : ಸನಾತನ ನಾಟ್ಯಾಲಯ ಪ್ರಸ್ತುತ ಪಡಿಸುವ ಗುರು ಶಾರದಾಮಣಿ ಶೇಖರ್ ಮತ್ತು ವಿದುಷಿ ಶ್ರೀಲತಾ ನಾಗರಾಜ್ ಇವರ ಶಿಷ್ಯೆ ವಿದುಷಿ ಸಿಂಚನಾ ಎಸ್. ಕುಲಾಲ್ ಇವರ ‘ಭರತನಾಟ್ಯ ರಂಗಪ್ರವೇಶ’ವು ದಿನಾಂಕ 12 ಅಕ್ಟೋಬರ್ 2025ರಂದು ಸಂಜೆ 5-00ಕ್ಕೆ ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ. ಕರ್ನಾಟಕ ಕಲಾತಿಲಕ ನಾಟ್ಯಾಚಾರ್ಯ ಶ್ರೀ ಉಳ್ಳಾಲ್ ಮೋಹನ್ ಕುಮಾರ್ ಇವರಿಂದ ದೇವತಾ ದೀಪ ಪ್ರಜ್ವಲನೆಯೊಂದಿಗೆ ಪ್ರಾರಂಭವಾಗುವ ಈ ಕಾರ್ಯಕ್ರಮದಲ್ಲಿ ಆಳ್ವಾಸ್ ನ ಡಾ. ಮೋಹನ್ ಆಳ್ವ ಮತ್ತು ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ್ ಗಟ್ಟಿ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಭರತನಾಟ್ಯ ಕಾರ್ಯಕ್ರಮಕ್ಕೆ ನಟುವಾಂಗಂನಲ್ಲಿ ಗುರು ಶಾರದಾಮಣಿ ಶೇಖರ್, ಹಾಡುಗಾರಿಕೆಯಲ್ಲಿ ವಿನೀತ್ ಪುರವಂಕರ, ಮೃದಂಗದಲ್ಲಿ ರಾಜನ್ ಪಯ್ಯನೂರ್ ಮತ್ತು ಕೊಳಲು ನಿತೀಶ್ ಅಮ್ಮಣ್ಣಯ್ಯ ಇವರುಗಳು ಸಹಕರಿಸಲಿದ್ದಾರೆ.
ಮಂಗಳೂರು : ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ (ರಿ.) ಪುತ್ತೂರು ಸಂಸ್ಥೆಯ 30ನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ‘ಮೂಕಾಂಬಿಕಾ ಮೂವತ್ತರ ಮಾರ್ದನಿ’ ಶೀರ್ಷಿಕೆಯಲ್ಲಿ ಮಂಗಳೂರಿನ ಕಲಾಸೂರ್ಯ ನೃತ್ಯಾಲಯ ಪ್ರಸ್ತುತ ಪಡಿಸುವ ‘ಕಲಾಭವ -03’ ಪ್ರಸ್ತುತಿಯನ್ನು ದಿನಾಂಕ 12 ಅಕ್ಟೋಬರ್ 2025ರಂದು ಸಂಜೆ 5-30 ಗಂಟೆಗೆ ಮಂಗಳೂರಿನ ಜೈಲ್ ರೋಡ್, ಮೊದಲನೇ ಮಹಡಿ ಸುಬ್ರಹ್ಮಣ್ಯ ಸದನದಲ್ಲಿ ಹಮ್ಮಿಕೊಳ್ಳಲಾಗಿದೆ. ವಕೀಲರಾದ ಪ್ರವೀಣ್ ಕುಮಾರ್ ಅದ್ಯಾಪಾಡಿ ಇವರು ಅಭ್ಯಾಗತರಾಗಿ ಭಾಗವಹಿಸಲಿದ್ದು, ವಿದ್ವಾನ್ ಬಿ. ದೀಪಕ್ ಕುಮಾರ್ ಪುತ್ತೂರು ಇವರ ಶಿಷ್ಯೆ ವಿಭಾಶ್ರೀ ವಿ. ಗೌಡ ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ.
ತುಮಕೂರು : ಕರ್ನಾಟಕ ವಿಕಾಸ ರಂಗ ತುಮಕೂರು ಮತ್ತು ನವೋದಯ ಐ.ಎ.ಎಸ್. ಅಕಾಡೆಮಿ ಇವರ ಸಹಯೋಗದೊಂದಿಗೆ ‘ಉಚಿತ ಶಾಸ್ತ್ರೀಯ ಸಂಗೀತ ಅಭ್ಯಾಸ’ವು ದಿನಾಂಕ 12 ಅಕ್ಟೋಬರ್ 2025ರಂದು ಸಂಜೆ 4-00 ಗಂಟೆಗೆ ತುಮಕೂರಿನ ನವೋದಯ ಐ.ಎ.ಎಸ್. ಅಕಾಡೆಮಿ ಆವರಣದಲ್ಲಿ ಪ್ರಾರಂಭಗೊಳ್ಳಲಿದೆ. ಪ್ರತಿ ಭಾನುವಾರ ಮತ್ತು ಸೋಮವಾರ ಸಂಜೆ 5-00 ಗಂಟೆಗೆ ತರಗತಿಗಳು ನಡೆಯಲಿದೆ.
ಧಾರವಾಡ : ಕಲಾ ಸಂವಹನ ಟ್ರಸ್ಟ್ ನೀಡುವ ಸಿತಾರ್ ಮಾಂತ್ರಿಕ ಉಸ್ತಾದ್ ಹಮೀದ್ ಖಾನ್ ‘ಸಂಗೀತ ಸಾಧಕ ಪ್ರಶಸ್ತಿ’ಗೆ ಗಾಯಕಿ ಎಂ.ಡಿ. ಪಲ್ಲವಿ ಹಾಗೂ ಸಿತಾರ್ ಮಾಂತ್ರಿಕ ಉಸ್ತಾದ್ ಹಮೀದ್ ಖಾನ್ ‘ವಾದ್ಯ ನಿರ್ಮಾತೃ ಪ್ರಶಸ್ತಿ’ಗೆ ಸಿತಾರ್ ವಾದ್ಯ ತಯಾರಕ ಮೆಹಬೂಬಸಾಬ್ ಆಯ್ಕೆಯಾಗಿದ್ದಾರೆ. ಎರಡೂ ಪುರಸ್ಕಾರಗಳು ತಲಾ ರೂ.25,000/- ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿವೆ. ಉಸ್ತಾದ್ ಹಮೀದ್ ಖಾನ್ ಇವರ ಐದನೇ ಸ್ಮರಣೆ ಪ್ರಯುಕ್ತ ಧಾರವಾಡದ ಸೃಜನಾ ರಂಗಮಂದಿರದಲ್ಲಿ ದಿನಾಂಕ 12 ಅಕ್ಟೋಬರ್ 2025ರಂದು ನಡೆಯುವ ಸಂಗೀತೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಉಡುಪಿ : ಉಡುಪಿ ಯಕ್ಷಗಾನ ಕಲಾರಂಗದ ಐ.ವೈ.ಸಿ. ಸಭಾಂಗಣದಲ್ಲಿ ದಿನಾಂಕ 11 ಅಕ್ಟೋಬರ್ 2025ರಂದು ಸಂಜೆ 5-00 ಗಂಟೆಗೆ ‘ಸರ್ಪಂಗಳ ಯಕ್ಷೋತ್ಸವ -2025’ ಕಾರ್ಯಕ್ರಮವು ನಡೆಯಲಿದೆ. ಸರ್ಪಂಗಳ ಸುಬ್ರಹ್ಮಣ್ಯ ಭಟ್ ಸಂಸ್ಮರಣೆ, ಪ್ರಶಸ್ತಿ ಪುರಸ್ಕಾರ ಪ್ರದಾನ ಮತ್ತು ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ‘ಸರ್ಪಂಗಳ ಯಕ್ಷೋತ್ಸವ’ದ ಮಾರ್ಗದರ್ಶಕರಾದ ಶ್ರೀಮತಿ ನಳಿನಿ ಸುಬ್ರಹ್ಮಣ್ಯ ಭಟ್ ಇವರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಕ್ಷಗಾನ ಕಲಾರಂಗದ ಅಧ್ಯಕ್ಷರಾದ ಎಂ. ಗಂಗಾಧರ ರಾವ್ ಇವರು ವಹಿಸಲಿದ್ದಾರೆ. ಪ್ರಸಿದ್ಧ ಯಕ್ಷಗಾನ ಕಲಾವಿದರಾದ ವೇಣೂರು ಸದಾಶಿವ ಕುಲಾಲ್ ಇವರಿಗೆ ಕಲಾಪೋಷಕ ಸರ್ಪಂಗಳ ಸುಬ್ರಹ್ಮಣ್ಯ ಭಟ್ ಸ್ಮಾರಕ ಪ್ರಶಸ್ತಿ ಮತ್ತು ಪ್ರಸಿದ್ಧ ಚಕ್ರತಾಳ ವಾದಕರಾದ ಪಿ. ಸುರೇಶ್ ಕಾಮತ್ ಇವರಿಗೆ ಶ್ರೀ ಸರ್ಪಂಗಳ ಕಲಾಸೇವೆ ಪುರಸ್ಕಾರ ನೀಡಿ ಗೌರವಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಪ್ರಸಿದ್ಧ ಕಲಾವಿದರಿಂದ ‘ಉಷಾ ಪರಿಣಯ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಕಾರ್ಕಳ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯಕ್ಷ ರಂಗಾಯಣ ಕಾರ್ಕಳ ಮತ್ತು ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ ಡಾ. ಶಿವರಾಮ ಕಾರಂತರ ಜನ್ಮ ದಿನಾಚರಣೆ ಪ್ರಯುಕ್ತ ‘ಕಾರಂತ ಉಪನ್ಯಾಸ ಮತ್ತು ರಂಗಪ್ರದರ್ಶನ’ವನ್ನು ದಿನಾಂಕ 12 ಅಕ್ಟೋಬರ್ 2025ರಂದು ಸಂಜೆ 4-00 ಗಂಟೆಗೆ ಕಾರ್ಕಳದ ಕೋಟಿ ಚೆನ್ನಯ ಥೀಂ ಪಾರ್ಕ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಯಕ್ಷ ರಂಗಾಯಣ ಕಾರ್ಕಳ ಇದರ ನಿರ್ದೇಶಕರಾದ ಬಿ.ಆರ್. ವೆಂಕಟರಮಣ ಐತಾಳ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಖ್ಯಾತ ವಿಮರ್ಶಕರಾದ ಎಸ್.ಆರ್. ವಿಜಯಶಂಕರ್ ಇವರು ಉಪನ್ಯಾಸ ನೀಡಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ನಿರ್ದಿಗಂತ ತಂಡದವರಿಂದ ಡಾ. ಶಿವರಾಮ ಕಾರಂತ ಕಾದಂಬರಿ ಆಧಾರಿತ ಅಮಿತ್ ರೆಡ್ಡಿ ಇವರ ನಿರ್ದೇಶನದಲ್ಲಿ ‘ಮೈಮನಗಳ ಸುಳಿಯಲ್ಲಿ’ ನಾಟಕ ಪ್ರಯೋಗ ಪ್ರಸ್ತುತಗೊಳ್ಳಲಿದೆ.
ಮೈಸೂರು : ರಂಗಾಯಣ ಮೈಸೂರು ಇದರ ಹಿರಿಯ ಕಲಾವಿದರು ಅಭಿನಯಿಸುವ ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಅವರ ‘ಎದೆಯ ಹಣತೆ’ ಸಂಕಲನದಿಂದ ಆಯ್ದ ಕತೆಯನ್ನಾಧರಿಸಿದ ‘ಒಮ್ಮೆ ಹೆಣ್ಣಾಗು’ ನಾಟಕ ಪ್ರದರ್ಶನವನ್ನು ದಿನಾಂಕ 12 ಅಕ್ಟೋಬರ್ 2025ರಂದು ಸಂಜೆ 6-30 ಗಂಟೆಗೆ ಮೈಸೂರು ರಂಗಾಯಣದ ಭೂಮಿಗೀತ ರಂಗ ಮಂದಿರದಲ್ಲಿ ಆಯೋಜಿಸಲಾಗಿದೆ. ಸವಿತಾ ರಾಣಿ ಇವರ ಪರಿಕಲ್ಪನೆ, ವಿನ್ಯಾಸ ಮತ್ತು ನಿರ್ದೇಶನದಲ್ಲಿ ಶಶಿಕಲಾ ಬಿ.ಎನ್. ಮತ್ತು ನಂದಿನಿ ಕೆ. ಆರ್. ಇವರು ರಂಗದ ಮೇಲೆ ಕಾಣಿಸಿಕೊಳ್ಳಲಿದ್ದು, ಮಹೇಶ್ ಕಲ್ಲತ್ತಿ ಇವರು ಬೆಳಕಿನ ವಿನ್ಯಾಸ ಹಾಗೂ ಶ್ವೇತಾರಾಣಿ ಹೆಚ್.ಕೆ. ಇವರು ಸಹ ವಿನ್ಯಾಸ ಮತ್ತು ಸಹ ನಿರ್ದೇಶನ ಮಾಡಿರುತ್ತಾರೆ.
ಮಂಗಳೂರು : ಕಲಾಸೂರ್ಯ ನೃತ್ಯಾಲಯ ಮಂಗಳೂರು ಆಯೋಜಿಸುತ್ತಿರುವ ‘ಕಲಾಭವ’ ಮಾಸಿಕ ನೃತ್ಯ ಸರಣಿಯ ದ್ವಿತೀಯ ಕಾರ್ಯಕ್ರಮವು ದಿನಾಂಕ 13 ಸೆಪ್ಟೆಂಬರ್ 2025ರಂದು ಮಂಗಳೂರಿನ ಸುಬ್ರಹ್ಮಣ್ಯ ಸದನದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ನಿರ್ದೇಶಕರಾದ ವಿದ್ವಾನ್ ಬಿ. ದೀಪಕ್ ಕುಮಾರ್ ಇವರ ಶಿಷ್ಯೆ ಕುಮಾರಿ ಪ್ರಣಮ್ಯ ಪಾಲೆಚ್ಚರ್ ಇವರ ಭರತನಾಟ್ಯ ಪ್ರಸ್ತುತಿ ಕಲಾಸಕ್ತರ ಮನಸೂರೆಗೊಂಡಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಡಾ. ಎ.ಪಿ. ಕೃಷ್ಣ ಇವರು “ಇಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳು ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಬಹಳ ಅಗತ್ಯ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕುಮಾರಿ ಮನ್ವಿತಾ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಕುಮಾರಿ ಸಾನಿಧ್ಯ ಇವರ ಓಂಕಾರನಾದ, ಕುಮಾರಿ ಶ್ರೀಲಕ್ಷ್ಮಿ ಇವರ ಶಂಖನಾದ, ಕುಮಾರಿ ಶ್ರೇಯ ಇವರ ಪಂಚಾಂಗ ಪಠಣ, ಕುಮಾರಿ ಪ್ರಾರ್ಥನಾ ಇವರಿಂದ ಹಸ್ತಗಳ ಬಗ್ಗೆ ವಿಷಯ ಮಂಡಣೆ ಹೆಚ್ಚಿನ ಮೆರುಗು ನೀಡಿತು. ಅತಿಥಿಗಳಿಗೆ ಸ್ಮರಣಿಕೆಯಾಗಿ ಮಕ್ಕಳು ನೆಟ್ಟ ಗಿಡ ಕೊಡುವ ಮೂಲಕ…
ಮುಂಬೈ : ‘ಧ್ರುಪದ್’ ಕೊಳಲು ವಾದನ ಕಾರ್ಯಕ್ರಮವನ್ನು ದಿನಾಂಕ 12 ಅಕ್ಟೋಬರ್ 2025ರಂದು ಸಂಜೆ 6-00 ಗಂಟೆಗೆ ಮುಂಬೈಯ ಮಾಟುಂಗಾ ಮಹೇಶ್ವರಿ ಭುವನ್ ಇಲ್ಲಿ ಹಮ್ಮಿಕೊಳ್ಳಲಾಗಿದೆ. ಶ್ರೀ ಲಿಖಿತ್ ಕಜ್ರೋಲ್ಕರ್ ಇವರ ಕೊಳಲು ವಾದನ ಪ್ರಸ್ತುತಿಗೆ ಶ್ರೀ ಪ್ರಶಾಂತ್ ಘರತ್ ಪಖಾವಾಜ್ ಸಾಥ್ ನೀಡಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9022525612 ಸಂಖ್ಯೆಯನ್ನು ಸಂಪರ್ಕಿಸಿರಿ.