Author: roovari

ಉಡುಪಿ : ಯಕ್ಷಗಾನ ಕಲಾರಂಗ (ರಿ.) ಮತ್ತು ಇನ್ ಫೋಸಿಸ್ ಫೌಂಡೇಶನ್ ಯಕ್ಷಗಾನ ಡೆವಲಪ್ ಮೆಂಟ್, ಟ್ರೈನಿಂಗ್ ಮತ್ತು ರಿಸರ್ಚ್ ಸೆಂಟರ್ (ಐ.ವೈ.ಸಿ.) ಇದರ ವತಿಯಿಂದ ‘ತಾಳಮದ್ದಳೆ ಪ್ರಶಸ್ತಿ 2024’ ಪ್ರದಾನ ಕಾರ್ಯಕ್ರಮವು ದಿನಾಂಕ 23-06-2024ರಂದು ಅಪರಾಹ್ನ 3-00 ಗಂಟೆಗೆ ಉಡುಪಿಯ ಕಲಾರಂಗ ಐ.ವೈ.ಸಿ. ಸಭಾಂಗಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮೂಡಬಿದ್ರೆಯ ಶ್ರೀ ಜೈನ ಮಠದ ಸ್ವಸ್ತಿ ಶ್ರೀಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಮಹಾಸ್ವಾಮಿಗಳು ಅನುಗ್ರಹ ಸಂದೇಶ ಮತ್ತು ಪ್ರಶಸ್ತಿ ಪ್ರದಾನ ಮಾಡಲಿರುವರು. ಶಾರದಾ ವಿದ್ಯಾ ಸಂಸ್ಥೆಗಳ ಸಂಸ್ಥಾಪಕರಾದ ಡಾ. ಎಂ.ಬಿ. ಪುರಾಣಿಕ್ ಇವರು ಅಧ್ಯಕ್ಷತೆ ವಹಿಸಲಿದ್ದು, ಸುರತ್ಕಲ್ಲಿನ ಆಗಮ ವಿದ್ವಾಂಸರಾದ ವಿದ್ವಾನ್ ಪಂಜ ಭಾಸ್ಕರ ಭಟ್, ಕುಂಭಾಶಿ ಸಾಮಾಜಿಕ ಧುರೀಣರು ಶ್ರೀ ಕೃಷ್ಣ ಪ್ರಸಾದ್ ಅಡ್ಯಂತಾಯ, ಕುಂದಾಪುರ ಆದರ್ಶ ಆಸ್ಪತ್ರೆಯ ಡಾ. ಆದರ್ಶ ಹೆಬ್ಬಾರ್ ಮತ್ತು ಉಡುಪಿ ನಗರ ಸಭಾ ಸದಸ್ಯೆ ಶ್ರೀಮತಿ ರಜನಿ ಹೆಬ್ಬಾರ್ ಇವರು ಅತಿಥಿಗಳಾಗಿ ಭಾಗವಹಿಸಲಿರುವರು. ಶ್ರೀ ಜಬ್ಬಾರ್ ಸಮೊ ಇವರಿಗೆ ‘ಮಟ್ಟಿ ಮುರಲೀಧರ ರಾವ್ ಪ್ರಶಸ್ತಿ’…

Read More

ಉಡುಪಿ: ಕಲಾವಿದರ ವಿವರಗಳನ್ನು ಕ್ರೋಢಿಕರಿಸುವ ದೃಷ್ಟಿಯಿಂದ ಉಡುಪಿ ಜಿಲ್ಲೆಯಲ್ಲಿನ ಕಲಾವಿದರ ಹಾಗೂ ಕಲಾ ತಂಡಗಳ ಪಟ್ಟಿಯನ್ನು ತಯಾರಿಸಿ ಅವರಿಗೆ ಸೂಕ್ತ ಕಾರ್ಯಕ್ರಮಗಳನ್ನು ನೀಡಲು ಹಾಗೂ ನೈಜ ಕಲಾವಿದರ ಪಟ್ಟಿಯನ್ನು ತಯಾರಿಸಿ ಗುರುತಿನ ಚೀಟಿ ನೀಡಲು ಅರ್ಹ ಕಲಾವಿದರು, ಕಲಾತಂಡದವರು ಹಾಗೂ ಸಾಹಿತಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಯನ್ನು ಸಂಪರ್ಕಿಸಬಹುದಾಗಿದ್ದು, ಅರ್ಜಿಯಲ್ಲಿ ಸ್ವ-ವಿವರದ ಮಾಹಿತಿಯೊಂದಿಗೆ ಆಧಾರ್ ಗುರುತಿನ ಚೀಟಿ, ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ, ಪ್ರತಿಷ್ಠಿತ ಸಂಘ ಸಂಸ್ಥೆಗಳಿಂದ ಪಡೆದ ಪ್ರಶಸ್ತಿ ಪುರಸ್ಕಾರಗಳ ವಿವರ, ಪ್ರಮುಖ ಪ್ರದರ್ಶನಗಳ ವಿವರ, ಶಿಲ್ಪ ಚಿತ್ರಕಲೆಗಳ ಕಲಾ ಪ್ರದರ್ಶನಗಳು ಹಾಗೂ ಛಾಯಾಚಿತ್ರಗಳನ್ನು ಲಗತ್ತಿಸಬೇಕು. ಭರ್ತಿ ಮಾಡಿದ ಅರ್ಜಿಗಳನ್ನು ದಿನಾಂಕ 27-06-2024ರ ಒಳಗಾಗಿ ಸಹಾಯಕ ನಿರ್ದೇಶಕರ ಕಚೇರಿ, ಡಾ. ಶಿವರಾಮ ಕಾರಂತ ಕಲಾಗ್ರಾಮ, ಪ್ರಗತಿನಗರ, ಅಲೆವೂರು ಗ್ರಾಮ, ಮಣಿಪಾಲ ಅಂಚೆ, ಇಲ್ಲಿಗೆ ಸಲ್ಲಿಸಬಹುದಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.…

Read More

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಒಂಭತ್ತನೆಯ ಗಮಕ  ಕಲಾ  ಸಮ್ಮೇಳನವು ಸುರತ್ಕಲ್ಲಿನ ಗೋವಿಂದಾಸ್ ಪದವಿ  ಪೂರ್ವ ಕಾಲೇಜಿನಲ್ಲಿ  ದಿನಾಂಕ 13-07-2024ರಂದು ನಡೆಯಲಿದ್ದು, ಸಮ್ಮೇಳನಾಧ್ಯಕ್ಷರಾಗಿ ದ. ಕ. ಜಿಲ್ಲೆಯ ಖ್ಯಾತ ಗಮಕಿ ಶ್ರೀ ಯಜ್ಞೇಶ್ ಆಚಾರ್ ಸುರತ್ಕಲ್ ಇವರನ್ನು ಅವಿರೋಧವಾಗಿ ಆಯ್ಕೆಮಾಡಲಾಯಿತು. ಮಾನ್ಯ ಶ್ರೀ ಹರಿಕೃಷ್ಣ ಪುನರೂರು, ಶ್ರೀ ಪ್ರದೀಪ ಕುಮಾರ ಕಲ್ಕೂರು , ಡಾಕ್ಟರ್ ಎಂ. ಬಿ. ಪುರಾಣಿಕ್, ಗಮಕ ಕಲಾಪರಿಷತ್ತು ಜಿಲ್ಲಾಧ್ಯಕ್ಷ ಪ್ರೊಫೆಸರ್ ಮಧೂರು ಮೋಹನ ಕಲ್ಲೂರಾಯ, ತಾಲೂಕು ಅಧ್ಯಕ್ಷ ಗಮಕಿ ಶ್ರೀ ಸುರೇಶ್ ರಾವ್ ಅತ್ತೂರು, ಗಮಕ ಕಲಾ ಪರಿಷತ್ತಿನ ಸದಸ್ಯರು ಹೀಗೆ ಇನ್ನೂ ಹಲವು ಗಮಕ ಕಲಾ ಅಭಿಮಾನಿಗಳು ಸೇರಿದ ಸಭೆಯಲ್ಲಿ ಇವರನ್ನು ಆಯ್ಕೆ ಮಾಡಲಾಯಿತು ಎಂದು ದಕ್ಷಿಣ ಕನ್ನಡ ಜಿಲ್ಲಾ ಗಮಕ ಪರಿಷತ್ ಅಧ್ಯಕ್ಷ ಪ್ರೊ. ಮಧೂರು ಮೋಹನ ಕಲ್ಲೂರಾಯ ತಿಳಿಸಿದ್ದಾರೆ .

Read More

ಉಡುಪಿ : ಕರ್ನಾಟಕ ಗಮಕ ಕಲಾ ಪರಿಷತ್ತು ಉಡುಪಿ ಜಿಲ್ಲೆ ಮತ್ತು ಡಾ. ಟಿ. ಎಮ್. ಎ. ಪೈ. ಶಿಕ್ಷಣ ಮಹಾವಿದ್ಯಾಲಯ ಇವರ ಸಹಯೋಗದಲ್ಲಿ ಶಿಕ್ಷಣ ವಿದ್ಯಾಲಯದ ವಿದ್ಯಾರ್ಥಿ ಹಾಗೂ ಶಿಕ್ಷಕರಿಗಾಗಿ ಗಮಕ ಕಲೆಯ ಕುರಿತಾದ ವಿಶಿಷ್ಟ ಕಾರ್ಯಕ್ರಮವು ದಿನಾಂಕ 16-06-2024 ರಂದು ನಡೆಯಿತು. ಕಾರ್ಯಕ್ರಮದಲ್ಲಿ ” ಗಮಕ ಕಲೆಯ ಇತಿಹಾಸ ಮತ್ತು ವರ್ತಮಾನದ ಸ್ಥಿತಿ ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಜಿಲ್ಲಾ ಗಮಕ ಕಲಾ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಸತೀಶ ಕುಮಾರ ಕೆಮ್ಮಣ್ಣು “ಕನ್ನಡದ ಎಲ್ಲ ಶ್ರೇಷ್ಠ ಕಾವ್ಯಗಳನ್ನು ಕಾವ್ಯ ರಸಿಕರಿಗೆ ತಲುಪಿಸಲು ಗಮಕ ವಾಚನ ವ್ಯಾಖ್ಯಾನವೇ ಅತ್ಯುತ್ತಮ ಮಾರ್ಗ.” ಎಂದು ಹೇಳಿದರು. ಸಭೆಯಲ್ಲಿ ಉಪಸ್ಥಿತರಿದ್ದ ಗಮಕ ಕಲಾ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ ಎಮ್. ಎಲ್. ಸಾಮಗ ಮಾತನಾಡಿ “ಶಿಕ್ಷಣದಲ್ಲಿ ಗಮಕ ಕಲೆಯು ಅನಿವಾರ್ಯವಾಗಿದೆ. ಪುರಾಣಜ್ಞಾನ , ಭಾಷಾ ಶುದ್ಧತೆ ಮೊದಲಾದ ಉತ್ತಮ ಅಂಶಗಳು ಗಮಕದಿಂದ ಸಿದ್ಧಿಸುತ್ತವೆ.” ಎಂದು ಹೇಳಿದರು. ಶಿಕ್ಷಣ ವಿದ್ಯಾಲಯದ ಪ್ರಾಚಾರ್ಯರಾದ…

Read More

ಬೆಂಗಳೂರು : ಜೋ ಆಕ್ಟ್ ಅಕಾಡೆಮಿ ಎಂಬ ಆಕ್ಟಿಂಗ್ ಇನ್ಸ್ಟಿಟ್ಯೂಟ್ ನ ಜೋಸೆಪ್ ಜಾನ್ ಇವರಿಂದ ನಾಲ್ಕು ದಿನಗಳ ವಾರಾಂತ್ಯದ ಕಾರ್ಯಾಗಾರವನ್ನು ದಿನಾಂಕ 22-06-2024ರಿಂದ ಸಮಯ ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ಬೆಂಗಳೂರಿನ ನಾಗರಬಾವಿಯ ತೆರಿಗೆ ಭವನದ ಎದುರುಗಡೆ, 3ನೇ ಕ್ರಾಸ್, 816, ಶೃಂಗ ಇಲ್ಲಿ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ 9148250972. ಕೇರಳದ ಆಲಪ್ಪಿ ಜಿಲ್ಲೆಯಲ್ಲಿರುವ ಕುಟ್ಟನಾಡಿನಲ್ಲಿ ಚಂಬಕ್ಕುಳಮ್ ಎಂಬ ಹಳ್ಳಿಯಲ್ಲಿ ಜನನ. ರಂಗಭೂಮಿ ಕಲಾವಿದರಾಗಿದ್ದ ತಂದೆಯಿಂದಲೂ, ಸಂಗೀತಾಗಾರ್ತಿಯಾದ ತಾಯಿಯಿಂದಲೂ ಕಲಾ ಪ್ರಪಂಚಕ್ಕೆ ಪಾದಾರ್ಪಣೆ. ಶಾಲೆಯಲ್ಲಿ ಓದುತ್ತಿದ್ದ ಕಾಲದಿಂದಲೇ ರಂಗಭೂಮಿಯ ನಂಟು. ನಂತರ ತಿರುವನಂತಪುರಮ್ ಅಲ್ಲಿಗೆ ವಾಸ ಸ್ಥಳ ಬದಲಾಯಿಸಿದ ಮೇಲೆ 1991ರಲ್ಲಿ “ಅಭಿನಯ”ಎಂಬ ನಾಟಕ ಕೇಂದ್ರದಲ್ಲಿ ರಂಗ ಚಟುವಟಿಕೆಯಲ್ಲಿ ತೊಡಸಿಕೊಂಡರು. ನಟನಾಗಿ ತಂತ್ರಜ್ಞನಾಗಿ, ನೃತ್ಯ ಸಂಯೋಜಕರಾಗಿ ಆ ಸಂಸ್ಥೆಯಲ್ಲಿ ಕೆಲಸ ಮಾಡಿದರು. 1998-99ರಲ್ಲಿ “ನೀನಾಸಂ” ಎಂಬ ನಾಟಕ ಕೇಂದ್ರದಲ್ಲಿ ಕಲಿತ ನಂತರ “ತಿರುಗಾಟ” ಎಂಬ ಟ್ರಾವೆಲಿಂಗ್ ರೆಪರ್ಟರಿ ಗ್ರೂಪ್ ನಲ್ಲಿ ನಟ ಹಾಗೂ ತಂತ್ರಜ್ಞನಾಗಿ ಕೆಲಸ ಮಾಡಿ ಅನುಭವವನ್ನು…

Read More

ಮಂಗಳೂರು : ಭರತಾಂಜಲಿ ನೃತ್ಯ ಸಂಸ್ಥೆ ಕೊಟ್ಟಾರ ಮಂಗಳೂರು ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ದಿನಾಂಕ 16-06-2024ರಂದು ಡಾನ್ ಬಾಸ್ಕ್ ಹಾಲ್ ಇಲ್ಲಿ ಹಮ್ಮಿಕೊಂಡಿರುವ ‘ಪುರುಷ ನಾಟ್ಯ ವಿಲಾಸ’ ಹಾಗೂ ನೃತ್ಯ ಗುರು ಉಳ್ಳಾಲ ಮೋಹನ್ ಕುಮಾರ್ ಇವರ ಸನ್ಮಾನ ಸಮಾರಂಭವು ನಡೆಯಿತು. ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ನೃತ್ಯ ಗುರು ವಿದ್ವಾನ್ ಪಾರ್ಶ್ವನಾಥ್ ಉಪಾಧ್ಯಾಯ ಮಾತನಾಡಿ “ನೃತ್ಯ ಗುರುಗಳು ಪರೀಕ್ಷೆಗಳನ್ನು ಪೂರೈಸಿಕೊಂಡರೆ ಸಾಲದು, ಆಳವಾದ ಅಧ್ಯಯನ ಜ್ಞಾನ ಸೃಜನಶೀಲತೆ ಬೆಳೆಸಿಕೊಳ್ಳಬೇಕು, ಹಾಗಾದಾಗ ಮಾತ್ರ ಸಮರ್ಥ ನೃತ್ಯ ಗುರು ಎನಿಸಿಕೊಳ್ಳಲು ಸಾಧ್ಯ. ಸಮರ್ಥ ನೃತ್ಯ ಗುರು ಅಥವಾ ನೃತ್ಯ ಕಲಾವಿದರು ಸತ್ಯ ಘಟನೆಗಳು ಮತ್ತು ಸಮಕಾಲೀನ ಸಂಗತಿಗಳನ್ನು ತಮ್ಮ ನೈಪುಣ್ಯತೆಯಿಂದ ಮಾತ್ರ ಪ್ರತಿಬಿಂಬಿಸಲು ಸಾಧ್ಯ. ಇಂತಹ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿದ ಭರತಾಂಜಲಿ ನೃತ್ಯ ಸಂಸ್ಥೆಯ ನೃತ್ಯ ಗುರುಗಳು ಶ್ಲಾಘನೀಯರು” ಎಂದು ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ಗುರು ಮೋಹನ್ ಕುಮಾರ್ ಇವರನ್ನು ತುಳುನಾಡಿನ ಜನಪದೀಯ ಕಲೆಯಾದ…

Read More

ಬೆಂಗಳೂರು : ಆರ್ಯಭಟ ಸಾಂಸ್ಕೃತಿಕ ಸಂಸ್ಥೆ (ರಿ.) ಇದರ ವತಿಯಿಂದ ಕೊಡಮಾಡುವ 49ನೇ ವರ್ಷದ ಆರ್ಯಭಟ ಅಂತರರಾಷ್ಟ್ರೀಯ ಪ್ರಶಸ್ತಿ ಪ್ರದಾನ ಹಾಗೂ ಆರ್ಯಭಟ ನೃತ್ಯೋತ್ಸವ ಕಾರ್ಯಕ್ರಮವು ದಿನಾಂಕ 23-06-2024ರಂದು ಸಂಜೆ 4-00 ಗಂಟೆಗೆ ಬೆಂಗಳೂರಿನ ಜೆ.ಸಿ. ರಸ್ತೆಯ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ. ಈ ಸಮಾರಂಭವನ್ನು ನಿವೃತ್ತ ನ್ಯಾಯಮೂರ್ತಿ ಡಾ. ಹೆಚ್.ಬಿ. ಪ್ರಭಾಕರ ಶಾಸ್ತ್ರಿ ಇವರು ಉದ್ಘಾಟನೆ ಮಾಡಲಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ, ಭಾರತೀಯ ಚಲನಚಿತ್ರ ನಿರ್ದೇಶಕರಾದ ಶ್ರೀ ಹೆಚ್.ಆರ್. ಭಾರ್ಗವ ಮತ್ತು ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ. ಹೆಚ್.ಎಲ್.ಎನ್. ರಾವ್ ಇವರುಗಳು ಭಾಗವಹಿಸಲಿರುವರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ‘ಆರ್ಯಭಟ ಅಂತರರಾಷ್ಟ್ರೀಯ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ‘ಆರ್ಯಭಟ ನೃತ್ಯೋತ್ಸವ’ ಕಾರ್ಯಕ್ರಮದಲ್ಲಿ ದಿವಾಕರ್ ದಾಸ್ ಇವರ ನಿರ್ದೇಶನದಲ್ಲಿ ಕಾವಳಕಟ್ಟೆ ಬಂಟ್ವಾಳದ ಶೃತಿ ಆರ್ಟ್ಸ್ ಇವರಿಂದ ಜಾನಪದ ಗೊಂಬೆಗಳ ಪ್ರದರ್ಶನ ಮತ್ತು ನೃತ್ಯ, ಕೆ. ಲಕ್ಷ್ಮಣ ಸುವರ್ಣರವರಿಂದ ಮೇಲೋಡಿಕ ವಾದನ ಹಾಗೂ ರವಿರಾಜ,…

Read More

ಬಂಟ್ವಾಳ : ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಬಂಟ್ವಾಳ ತಾಲೂಕು ಸಮಿತಿಯ ಪದಗ್ರಹಣ ಸಮಾರಂಭದಲ್ಲಿ ಸಾಹಿತ್ಯ ಮತ್ತು ಪರಿಸರ ಕುರಿತು ಉಪನ್ಯಾಸ ಕಾರ್ಯಕ್ರಮವು ದಿನಾಂಕ 18-06-2024 ರಂದು ನಡೆಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿದ ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ಪ್ರಾಚಾರ್ಯ ಸಾಹಿತಿ ಗಣರಾಜ ಕುಂಬ್ಳೆ ಮಾತನಾಡಿ “ಪರಿಸರ ನಿತ್ಯನೂತನವಾಗಿದ್ದು ಪ್ರಕೃತಿಯೊಂದಿಗಿನ ಸಂವೇದನೆ ಕವಿಗಳಿಗೆ ಕವನ ರಚನೆಗೆ ಸ್ಪೂರ್ತಿಯಾಗುತ್ತದೆ.” ಎಂದು ಹೇಳಿದರು. ಕಲ್ಲಡ್ಕ ಪ. ಪೂ. ಕಾಲೇಜಿನ ಪ್ರಾಚಾರ್ಯ ವಸಂತ ಬಲ್ಲಾಳ್ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಉದ್ಯಮಿ ನಾಗೇಶ ಕಲ್ಲಡ್ಕ, ಪಿಂಗಾರ ಪತ್ರಿಕೆಯ ಸಂಪಾದಕ ರೇಮಂಡ್ ತಾಕೋಡೆ, ಶ್ರೀ ರಾಮ ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಗೋಪಾಲ ಅಮ್ಟೂರು ಅತಿಥಿಗಳಾಗಿ ಭಾಗವಹಿಸಿದ್ದರು. ಅಭಾಸಾಪ ಮಂಗಳೂರು ವಿಭಾಗ ಸಂಯೋಜಕ ಸುಂದರ ಇಳಂತಿಲ ಜವಾಬ್ದಾರಿ ಘೋಷಣೆ ಮಾಡಿದರು. ಬಂಟ್ವಾಳ ತಾಲೂಕು ಸಮಿತಿ ಮಾಜಿ ‌ಅಧ್ಯಕ್ಷ ಜಯಾನಂದ ಪೆರಾಜೆ‌ ಅಭಿನಂದನೆ ಸಲ್ಲಿಸಿದರು. ನಿಕಟಪೂರ್ವ ಅಧ್ಯಕ್ಷ ಡಾ. ಸುರೇಶ ನೆಗಳಗುಳಿ ಮಾತನಾಡಿ ಹೊಸ ಪದಾಧಿಕಾರಿಗಳಿಗೆ ಶುಭಹಾರೈಸಿದರು. ಅಧ್ಯಕ್ಷರಾಗಿ ಪ್ರೊ.…

Read More

ಮಂಗಳೂರು : ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರು ಇಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ) ಮಂಗಳೂರು ಇದರ ವತಿಯಿಂದ ನಡೆಯುವ ಎರಡನೇ ವರ್ಷದ ಯಕ್ಷ ಶಿಕ್ಷಣ ತರಗತಿಯ ಉದ್ಘಾಟನಾ ಸಮಾರಂಭವು ದಿನಾಂಕ 15-06-2024ರಂದು ಜರಗಿತು. ಈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಯಕ್ಷದ್ರುವ ಪಟ್ಲ ಫೌಂಡೇಶನ್ (ರಿ) ಕಟೀಲು-ಎಕ್ಕಾರು ಘಟಕದ ಅಧ್ಯಕ್ಷರಾದ ಶ್ರೀ ಗಿರೀಶ್ ಎಂ. ಶೆಟ್ಟಿ ಕಟೀಲು ಇವರು ಮಾತನಾಡಿ “ಯಕ್ಷ ಶಿಕ್ಷಣ ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಮೌಲ್ಯಗಳನ್ನು ಬೆಳೆಸುವುದರೊಂದಿಗೆ ಜೀವನ ಶಿಸ್ತಿನ ಅರಿವನ್ನು ಮೂಡಿಸುತ್ತದೆ. ಸಮಾಜಮುಖಿ ಚಿಂತನೆಯನ್ನು ಬಿತ್ತುತ್ತಾ ತಿಳುವಳಿಕೆಯನ್ನು ಹೆಚ್ಚಿಸುವ ಮಾಧ್ಯಮವಾಗಿ ಯಕ್ಷಗಾನವು ಒಂದು ರಮ್ಯ ಅದ್ಭುತ ಕಲೆ” ಎಂದು ತಿಳಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಎಕ್ಕಾರು ಬಂಟರ ಸಂಘದ ಅಧ್ಯಕ್ಷ ರತ್ನಾಕರ ಶೆಟ್ಟಿ ಎಕ್ಕಾರು ನೆರವೇರಿಸಿದರು. ಯಕ್ಷ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಯಕ್ಷ ಶಿಕ್ಷಣಕ್ಕೆ ಸಂಬಂಧಿಸಿ ಪುಸ್ತಕ ಹಾಗೂ ಲೇಖನ ಸಾಮಗ್ರಿ ವಿತರಿಸಲಾಯಿತು. “ಸುಮಾರು 60 ವಿದ್ಯಾರ್ಥಿಗಳು ಯಕ್ಷಶಿಕ್ಷಣ ತರಗತಿಗೆ ನೋಂದಾಯಿಸಿದ್ದು, ವಾರದಲ್ಲಿ ಎರಡು ತರಗತಿಗಳನ್ನು ನೀಡಿ ಅಭ್ಯಾಸ ಮಾಡಿಸಲಾಗುವುದು.…

Read More

ಬೆಂಗಳೂರು : ವಿಜಯನಗರ ಬಿಂಬ (ರಿ.) ರಂಗ ಶಿಕ್ಷಣ ಕೇಂದ್ರ, ಹಿರಿಯರ ವಿಭಾಗ ಇದರ ವತಿಯಿಂದ 11ನೇ ವರ್ಷದ ಡಿಪ್ಲೋಮೊ ವಿದ್ಯಾರ್ಥಿಗಳ ಮೇಜರ್ ಪ್ರೊಡಕ್ಷನ್ ಭಾಸ ಮಹಾಕವಿಯ ‘ಸ್ವಪ್ನವಾಸವದತ್ತ’ ನಾಟಕ ಪ್ರದರ್ಶನವನ್ನು ದಿನಾಂಕ 21-06-2024ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಆಯೋಜಿಸಲಾಗಿದೆ. ಈ ನಾಟಕವನ್ನು ಎಲ್. ಗುಂಡಪ್ಪ ಇವರು ಕನ್ನಡಕ್ಕೆ ಅನುವಾದಿಸಿದ್ದು, ಡಾ. ಎಸ್.ವಿ. ಕಶ್ಯಪ ಇವರು ನಿರ್ದೇಶನ ಮಾಡಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಪ್ರಸ್ತುತಗೊಳ್ಳಲಿದೆ.

Read More