Author: roovari

ಉಡುಪಿ : ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ವತಿಯಿಂದ ರೇಡಿಯೋ ಮಣಿಪಾಲ್ ಸಹಯೋಗದಲ್ಲಿ ನಡೆಯುತ್ತಿರುವ ಸರಣಿ ಕಾರ್ಯಕ್ರಮ ‘ಕಥೆ ಕೇಳೋಣ’ದ ಭಾಗವಾಗಿ, ಕೇಳುಗರಿಗೆ ರೇಡಿಯೋ ಸೆಟ್ ಗಳನ್ನು ಉಚಿತವಾಗಿ ಹಸ್ತಾಂತರಿಸುವ ಅಭಿಯಾನವು ದಿನಾಂಕ 09 ಫೆಬ್ರವರಿ 2025ರಂದು ಮ್ಯಾಕ್ಸ್ ಮೀಡಿಯಾ ಆವರಣದಲ್ಲಿ ನಡೆಯಿತು. ಖ್ಯಾತ ಚಲನಚಿತ್ರ ನಟ ರಂಗ ನಿರ್ದೇಶಕ ಮಂಡ್ಯ ರಮೇಶ್ ಫಲಾನುಭವಿಗಳಿಗೆ ರೇಡಿಯೋಗಳನ್ನು ವಿತರಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ರೇಡಿಯೋ ಮಣಿಪಾಲ್ ಸಮುದಾಯ ಬಾನುಲಿ ಕೇಂದ್ರದ ಮುಖ್ಯಸ್ಥರಾದ ಡಾ. ರಶ್ಮಿ ಅಮ್ಮೆಂಬಳ, ಕ.ಸಾ.ಪ. ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ, ಕ.ಸಾ.ಪ. ಜಿಲ್ಲಾ ಮಹಿಳಾ ಪ್ರತಿನಿಧಿ ಪೂರ್ಣಿಮಾ ಜನಾರ್ದನ್, ಗೌರವ ಕಾರ್ಯದರ್ಶಿ ಜನಾರ್ದನ್ ಕೊಡವೂರು, ಸಾಮಾಜಿಕ ಜಾಲತಾಣದ ಸಂಚಾಲಕ ಸಿದ್ಧಬಸಯ್ಯಸ್ವಾಮಿ ಚಿಕ್ಕಮಠ, ರೇಡಿಯೊ ಮಣಿಪಾಲದ ಸ್ವಯಂ ಸೇವಕರಾದ ಸುನೀತಾ ಅಂಡಾರು ಮುಂತಾದವರು ಉಪಸ್ಥಿತರಿದ್ದರು.

Read More

ದೆಹಲಿಯ ರಾಷ್ಟ್ರೀಯ ರಂಗಶಾಲೆಯು (ಎನ್.ಎಸ್.ಡಿ.) ಫೆಬ್ರವರಿ 1ರಿಂದ ಎಂಟು ದಿನಗಳ ಕಾಲ ಬೆಂಗಳೂರಿನ ಕಲಾಗ್ರಾಮದಲ್ಲಿ ಆಯೋಜಿಸಿದ್ದ ‘ಭಾರತ ರಂಗ ಮಹೋತ್ಸವ ಅಂತರಾಷ್ಟ್ರೀಯ ನಾಟಕೋತ್ಸವ’ದ ಕೊನೆಯ ದಿನವಾದ ಫೆಬ್ರವರಿ 8ರಂದು ಬೆಂಗಳೂರಿನ ಎನ್.ಎಸ್.ಡಿ. ಕೇಂದ್ರದ ವಿದ್ಯಾರ್ಥಿಗಳು ಬಿ. ಜಯಶ್ರೀಯವರ ನಿರ್ದೇಶನದಲ್ಲಿ ‘ಜಸ್ಮಾ ಓಡನ್’ ನಾಟಕವನ್ನು ಅಭಿನಯಿಸಿ ಗಮನ ಸೆಳೆದರು. ಗುಜರಾತಿನ ಜನಪ್ರಿಯ ಜಾನಪದ ಕಥೆಯಾಧರಿಸಿ ಶಾಂತಾ ಗಾಂಧಿಯವರು ಬರೆದ ‘ಜಸ್ಮಾ ಓಡನ್’ ನಾಟಕವು ಬಿ. ಜಯಶ್ರೀಯವರ ಪರಿಕಲ್ಪನೆಯಲ್ಲಿ ದೃಶ್ಯಕಾವ್ಯವಾಗಿ ಅರಳಿದೆ. ಹಾಡು ಸಂಗೀತ ನೃತ್ಯ ಕಲಾಪ್ರಕಾರಗಳ ಸಂಯೋಜನೆಯಿಂದಾಗಿ ಇಡೀ ನಾಟಕ ನೋಡುಗರ ಕಣ್ಮನ ಸೆಳೆಯುವಂತೆ ಮೂಡಿ ಬಂದಿದೆ. ಈ ಜಾನಪದ ಪ್ಯಾಂಟಸಿ ಕಥೆ ಹೀಗಿದೆ. ಮುನಿಯೊಬ್ಬನ ತಪಸ್ಸಿನ ಪ್ರಭಾವಕ್ಕೆ ಇಂದ್ರನ ಸಿಂಹಾಸನವೇ ಕಂಪಿಸುತ್ತದೆ. ಮುನಿಯ ತಪಸ್ಸು ಭಂಗಕ್ಕೆ ಇಂದ್ರ ಅಪ್ಸರೆಯರನ್ನು ಕಳುಹಿಸುತ್ತಾನೆ. ತಪೋಭಂಗಗೊಂಡ ಮುನಿ ಅಪ್ಸರೆ ಕಾಮಕುಂಡಲಿಯ ಮೇಲೆ ಅನುರಕ್ತನಾಗುತ್ತಾನೆ. ಮುನಿಯ ಬಯಕೆಯನ್ನು ಆ ಅಪ್ಸರೆ ತಿರಸ್ಕರಿಸಿ ಆತನನ್ನು ಅವಮಾನಿಸಿದಾಗ ಸಿಟ್ಟಿಗೆದ್ದ ಋಷಿ ‘ಭೂಲೋಕದಲ್ಲಿ ವಡ್ಡರ ಕುಲದ ಕುರೂಪಿ ಕುಂಟ ಗಂಡನ ಹೆಂಡತಿಯಾಗಿ…

Read More

ಮಂಗಳೂರು: ಸಂಗೀತ ಭಾರತಿ ಪ್ರತಿಷ್ಠಾನ ಆಯೋಜನೆಯ ರಾಷ್ಟ್ರಮಟ್ಟದ ಸಂಗೀತ ಸ್ಪರ್ಧೆ, ವಿಜೇತರಿಗೆ ಪುರಸ್ಕಾರ ಪ್ರದಾನ ಕಾರ್ಯಕ್ರಮ ‘ಡಾ. ಪಿ. ದಯಾನಂದ ಪೈ ‘ಎಸ್‌. ಬಿ. ಎಫ್. ಯುವ ಮಹೋತ್ಸವ್-2025’ಇದರ ಉದ್ಘಾಟನಾ ಸಮಾರಂಭವು ದಿನಾಂಕ 08 ಫೆಬ್ರವರಿ 2025ರ ಶನಿವಾರದಂದು ಮಂಗಳೂರಿನ ಡಾನ್‌ಬಾಸ್ಕೊ ಸಭಾಂಗಣದಲ್ಲಿ sನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಪದ್ಮಶ್ರೀ ಪುರಸ್ಕೃತ ಹಿರಿಯ ಬಾನ್ಸುರಿ ಕಲಾವಿದ ಪಂ. ರೋನು ಮುಜುಂದಾರ್ ಮಾತನಾಡಿ “ಯುವಜನರಲ್ಲಿ ಹಿಂದುಸ್ತಾನಿ ಶಾಸೀಯ ಸಂಗೀತವನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ಸಂಗೀತ ಭಾರತಿ ಫೌಂಡೇಶನ್ ಮಂಗಳೂರಿನಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆ ಆಯೋಜಿಸಿರುವುದು ಶ್ಲಾಘನೀಯ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಯುವ ಕಲಾವಿದರು ಉತ್ತಮ ಪ್ರದರ್ಶನ ನೀಡಿರುವುದು ಸಂತಸ ತಂದಿದೆ.” ಎಂದರು. ಸಂಗೀತ ಭಾರತಿ ಪ್ರತಿಷ್ಠಾನ ಅಧ್ಯಕ್ಷ ಉಸ್ತಾದ್ ರಫೀಕ್ ಖಾನ್, ಉಪಾಧ್ಯಕ್ಷರಾದ ಪ್ರೊ. ನರೇಂದ್ರ ಎಲ್. ನಾಯಕ್, ಅಂತಾರಾಷ್ಟ್ರೀಯ ಕಲಾವಿದರಾದ ಪಂ. ಜಯತೀರ್ಥ ಮೇವುಂಡಿ, ಯುವ ತಬ್ಲಾ ವಾದಕ ಪಂ. ಯಶವಂತ್ ವೈಷ್ಣವ್, ವಿದುಷಿ ಪೂರ್ಣಿಮಾ ಭಟ್ ಕುಲಕರ್ಣಿ, ಡಾ. ಶಶಾಂಕ್ ಮಕ್ತೇದಾರ್, ಉಜ್ಜೈನ್ ಸ್ಮಾಲ್…

Read More

ಮಂಗಳೂರು : ಕೂಟ ಮಹಾಜಗತ್ತು (ರಿ.) ಸಾಲಿಗ್ರಾಮ ಇದರ ಮಂಗಳೂರು ಅಂಗ ಸಂಸ್ಥೆಯವರು ಆಯೋಜಿಸಿದ್ದ ‘ನಮ್ಮವರು ನಮ್ಮ ಹೆಮ್ಮೆ’ ಕಾರ್ಯಕ್ರಮವು ದಿನಾಂಕ 09 ಫೆಬ್ರವರಿ 2025ರಂದು ಪಾಂಡೇಶ್ವರದ ಗುರು ನರಸಿಂಹ ಸಭಾಭವನದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಕೂಟ ಸಮಾಜದ ಐದು ಜನ ಸಾಧಕರಿಗೆ ‘ಕೂಟ ಸಮಾಜದ ಕಣ್ಮಣಿ’ ಎಂಬ ಬಿರುದು ಪ್ರಧಾನ ಮಾಡಲಾಯಿತು. ಸಮಾರಂಭದ ಸಾಂಸ್ಕೃತಿಕ ವೇದಿಕೆಯಲ್ಲಿ ಭರತಾಂಜಲಿ (ರಿ.) ಕೊಟ್ಟಾರ ಮಂಗಳೂರು ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ‘ಭರತನಾಟ್ಯ ಸಂಭ್ರಮ’ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನವನ್ನು ಪ್ರಸ್ತುತಗೊಳಿಸಿದರು. ಕೊನೆಯಲ್ಲಿ ಸಂಸ್ಥೆಯ ಕಲಾ ಗುರುಗಳನ್ನು ಗೌರವಿಸಲಾಯಿತು.

Read More

ಕಾಸರಗೋಡು : ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಕಾಸರಗೋಡು ಕನ್ನಡ ಗ್ರಾಮದಲ್ಲಿ ದಿನಾಂಕ 27 ಮಾರ್ಚ್ 2025 ಗುರುವಾರದಂದು ನಡೆಯುವ ಕಾಸರಗೋಡು ಜಿಲ್ಲಾ 7ನೇ ಚುಟುಕು ಸಾಹಿತ್ಯ ಸಮ್ಮೇಳನದ ಅಂಗವಾಗಿ ಕೇರಳ ರಾಜ್ಯ ಸಹಿತ ಕಾಸರಗೋಡು ಜಿಲ್ಲೆಯ ಸಾಹಿತ್ಯಾಸಕ್ತರಿಗೆ ಸಣ್ಣ ಕಥೆ, ಕವನ, ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಸಣ್ಣ ಕಥೆ ರಚನೆ (ಎ4 ಅಳತೆಯ ಹಾಳೆಯಲ್ಲಿ ಒಂದು ಪುಟ ಮೀರದಂತೆ ಇರಬೇಕು), ಕವನ ರಚನೆ ಸ್ಪರ್ಧೆ (12 ಸಾಲು ಮೀರಬಾರದು), ನಾನು ಓದಿದ ಉತ್ತಮ ಪುಸ್ತಕ (ಎ4 ಹಾಳೆಯಲ್ಲಿ ಎರಡು ಪುಟ) ಮೀರದಂತೆ ಇರಬೇಕು. ಕಾಸರಗೋಡು ಜಿಲ್ಲೆಯಲ್ಲಿ ವಾಸವಾಗಿರುವ, ಉದ್ಯೋಗ, ವ್ಯವಹಾರದಲ್ಲಿರುವವರು ಮತ್ತು ಮೂಲತಃ ಕಾಸರಗೋಡು ಜಿಲ್ಲೆಯವರಾಗಿದ್ದು ರಾಜ್ಯ, ದೇಶ, ವಿದೇಶಗಳಲ್ಲಿ ವಾಸವಾಗಿರುವ ಸಾಹಿತ್ಯಾಸಕ್ತರು ಮುಕ್ತವಾಗಿ ಭಾಗವಹಿಸಬಹುದು. ಪ್ರತಿ ಸ್ಪರ್ಧಾ ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ಮತ್ತು 25 ಮಂದಿಗೆ ಆಯ್ಕೆ ಸಮಿತಿಯವರು ಗುರುತಿಸಲ್ಪಟ್ಟ ಸಣ್ಣ ಕಥೆ, ಕವನ, ಪ್ರಬಂಧ ರಚಿಸಿದ ಸಾಹಿತ್ಯಾಸಕ್ತರಿಗೆ ವಿಶೇಷ ಬಹುಮಾನ, ಪ್ರಮಾಣ ಪತ್ರ,…

Read More

ಬೆಳ್ತಂಗಡಿ : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ಬಾರ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಹಾಗೂ ಪರಿವಾರ ದೈವಗಳ ಐದನೇ ವರ್ಷದ ಪ್ರತಿಷ್ಠಾ ಮಹೋತ್ಸವ ಹಾಗೂ ನೇಮೋತ್ಸವದ ಅಂಗವಾಗಿ ದಿನಾಂಕ 07 ಫೆಬ್ರವರಿ 2025ನೇ ಶುಕ್ರವಾರ ‘ಶ್ಯಮಂತಕ ಮಣಿ’ ಎಂಬ ತಾಳಮದ್ದಳೆಯು ಶ್ರೀ ದೇವಳದ ಪ್ರಾಂಗಣದಲ್ಲಿ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಗಿರೀಶ್ ರೈ ಕಕ್ಕೆಪದವು ಮತ್ತು ಪದ್ಮನಾಭ ಕುಲಾಲ್ ಹಾಗೂ ಚೆಂಡೆ ಮದ್ದಳೆಗಳಲ್ಲಿ ಪಿ.ಟಿ. ಜಯರಾಮ್ ಭಟ್, ಮುರಳೀಧರ ಕಲ್ಲೂರಾಯ ಸಹಕರಿಸಿದರು. ಮುಮ್ಮೆಳದಲ್ಲಿ ಶುಭಾ ಜೆ.ಸಿ. ಅಡಿಗ (ಶ್ರೀ ಕೃಷ್ಣ), ಕಿಶೋರಿ ದುಗ್ಗಪ್ಪ ನಡುಗಲ್ಲು (ಜಾಂಬವಂತ), ಹರಿಣಾಕ್ಷಿ ಜೆ. ಶೆಟ್ಟಿ (ಬಲರಾಮ) ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ವಂದಿಸಿದರು. ಸ್ವರ್ಣಲತಾ ಬಾರ್ಯ ಮತ್ತಿತರರು ಕಲಾವಿದರಿಗೆ ಶಾಲು ಹೊದಿಸಿ ಗೌರವಿಸಿದರು.

Read More

ಕಾಸರಗೋಡು : ಕೇರಳ ರಾಜ್ಯ ಕನ್ನಡ ಭಾಷಾ ಅಲ್ಪಸಂಖ್ಯಾತರ ಸಾಂಸ್ಕೃತಿಕ ಮತ್ತು ಸಾಹಿತ್ಯಕ ಸಂಘಟನೆಯಾದ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಕನ್ನಡ ಗ್ರಾಮ, ಕಾಸರಗೋಡು ಇದರ 35ನೇ ಸಂಸ್ಥಾಪನಾ ವರ್ಷಾಚರಣೆ (04/11/1990 – 04/11/2025)ಯ ಸಂಭ್ರಮದ ಪ್ರಯುಕ್ತ ಕಾಸರಗೋಡು ನಗರ ಸಭೆಯ 8ನೇ ವಾರ್ಡ್ ನ ಕನ್ನಡ ಗ್ರಾಮದಲ್ಲಿ ಇರುವ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ‘ಕನ್ನಡ ಗ್ರಾಮದಲ್ಲಿ ತಿಂಗಳ ಕನ್ನಡ ಉತ್ಸವ’ ಪ್ರತಿ ತಿಂಗಳ 4ನೇ ಆದಿತ್ಯವಾರದಂದು ಅಪರಾಹ್ನ ಗಂಟೆ 3-00ರಿಂದ 6-00ರ ತನಕ ನಿರಂತರವಾಗಿ ಸಾಂಸ್ಕೃತಿಕ, ಸಾಹಿತ್ಯಕ ಮತ್ತು ಸಾಮಾಜಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಕನ್ನಡ ಗ್ರಾಮದಲ್ಲಿ ಸಭಾ ವೇದಿಕೆ, ಆಸನದ ವ್ಯವಸ್ಥೆ, ಧ್ವನಿವರ್ಧಕ ವ್ಯವಸ್ಥೆ ಇರುತ್ತದೆ. ಕನ್ನಡ ಗ್ರಾಮದ ಸಾಂಸ್ಕೃತಿಕ ಭವನದಲ್ಲಿ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಯೋಜನೆ ಪ್ರದರ್ಶನಕ್ಕಾಗಿ ಸಾಂಸ್ಕೃತಿಕ ಕಲಾತಂಡಗಳ ಸಂಘ ಸಂಸ್ಥೆಗಳಿಗೆ ಅವಕಾಶ ನೀಡಲು ತೀರ್ಮಾನಿಸಿದೆ. ವಿವಿಧ ಉತ್ಸವ ಸಮಾವೇಶ, ಸಾಹಿತ್ಯ ಗೋಷ್ಠಿ, ವಿಚಾರಗೋಷ್ಠಿ, ಕವಿಗೋಷ್ಠಿ, ಸಮೂಹ ಗಾಯನ, ಸಮೂಹ ನೃತ್ಯ, ಯಕ್ಷಗಾನ ತಾಳಮದ್ದಳೆ,…

Read More

ಬೆಂಗಳೂರು : ಕಲಾವಿಲಾಸಿ ತಂಡದ ಕಲಾವಿದರಿಂದ ‘ಕ್ರಾಂತಿ ಬಂತು # ಕ್ರಾಂತಿ’ ಎಂಬ ನಾಟಕ ಪ್ರದರ್ಶನವನ್ನು ದಿನಾಂಕ 16 ಫೆಬ್ರವರಿ 2025ರಂದು ಸಂಜೆ 7-30 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ. ಯುವ ನಿರ್ದೇಶಕ ಅಭಿಷೇಕ ಚಕ್ರಣ್ಣವರ ನಿರ್ದೇಶಿಸುತ್ತಿರುವ ನಾಟಕವನ್ನು ಹಿರಿಯ ರಂಗಕರ್ಮಿ ಮಹಾದೇವ ಹಡಪದ ಇವರು ವಿನ್ಯಾಸ ಮಾಡಿದ್ದಾರೆ. ನಾಟಕದ ಅವಧಿ 100 ನಿಮಿಷಗಳು. ಹೆಚ್ಚಿನ ಮಾಹಿತಿಗೆ 9739398819 ಸಂಖ್ಯೆಗೆ ಕರೆ ಅಥವಾ ವಾಟ್ಸಪ್‌ ಮಾಡಬಹುದು. ‘ಕ್ರಾಂತಿ ಬಂತು # ಕ್ರಾಂತಿ’ ನಾಟಕವನ್ನು ಸಾಹಿತಿ ಪಿ. ಲಂಕೇಶ್‌ ಅವರ ‘ಕ್ರಾಂತಿ ಬಂತು ಕ್ರಾಂತಿ’ ನಾಟಕದ ಪಠ್ಯವನ್ನು ಪ್ರಸ್ತುತಕ್ಕೆ ಅಳವಡಿಸಿಕೊಂಡು ಕಟ್ಟಲಾಗಿದೆ. ಈ ನಾಟಕವು ಮೊದಲ ಬಾರಿಗೆ ಪ್ರಕಟವಾಗಿದ್ದು 1971ರಲ್ಲಿ. ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಗಳಲ್ಲಿ ಅಂದಿಗೂ – ಇಂದಿಗೂ ಸಾಕಷ್ಟು ಬದಲಾವಣೆಗಳು ಕಂಡುಬಂದರೂ, ಆ ಬದಲಾದ ಪರಿಸ್ಥಿತಿಗಳು ತಮ್ಮ ಮೂಲ ಸ್ವರೂಪವನ್ನು ಹಾಗೆಯೇ ಉಳಿಸಿಕೊಂಡಿರುವುದು ನೋವಿನ ಸಂಗತಿ. ಸಮಾಜವಾದ, ಸಮತಾವಾದ, ಕ್ರಾಂತಿಯಂತಹ ವಿಚಾರಗಳ ಘರ್ಷಣೆ ಉತ್ತುಂಗದಲ್ಲಿದ್ದಾಗ ಬರೆಯಲ್ಪಟ್ಟಿರುವ ನಾಟಕ ಇಂದಿನ…

Read More

ಮಂಜೇಶ್ವರ : ಹೊಸಪೇಟೆಯ ‘ಯಾಜಿ ಪ್ರಕಾಶನ’ ಮತ್ತು ಕಾಸರಗೋಡು ಮಂಜೇಶ್ವರದ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಕನ್ನಡ ವಿಭಾಗ ಜಂಟಿಯಾಗಿ ಆಯೋಜಿಸಿರುವ ನಾಲ್ಕು ಪುಸ್ತಕಗಳ ಬಿಡುಗಡೆ ಸಮಾರಂಭವನ್ನು ದಿನಾಂಕ 17 ಫೆಬ್ರವರಿ 2025ರಂದು ಮಧ್ಯಾಹ್ನ 2-00 ಗಂಟೆಗೆ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಸಮಾರಂಭದಲ್ಲಿ ಡಾ. ಸುಭಾಷ್ ಪಟ್ಟಾಜೆ ಇವರ’ಬಹುಮುಖಿ’,ವಿಶ್ವನಾಥ ನಾಗಠಾಣ ಇವರ  ‘ಕೃತಿ ಶೋಧ’, ಮೋಹನ ಕುಂಟಾರ್ ಇವರ ಖ್ಯಾತ ಮಲಯಾಳಂ ಸಾಹಿತಿ  ಎಂ. ಟಿ. ವಾಸುದೇವನ್ ನಾಯರ್ ಇವರ ಆಯ್ದ ಕತೆಗಳು ಕನ್ನಡಾನುವಾದ ‘ಇರುಳಿನ ಆತ್ಮ’  ಹಾಗೂ ‘ಪುರಾಣ ಕಥಾ ಕೋಶ’ ಪುಸ್ತಕಗಳು ಲೋಕಾರ್ಪಣೆಗೊಳ್ಳಲಿದೆ. ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಹಮ್ಮದಾಲಿ ಕೆ. ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ  ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಕುಲಪತಿಗಳಾದ ಡಾ. ಡಿ.ವಿ. ಪರಮಶಿವಮೂರ್ತಿ ಇವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಸುಭಾಷ್ ಪಟ್ಟಜೆ, ವಿಶ್ವನಾಥ ನಾಗಠಾಣ ಮತ್ತು ಮೋಹನ ಕುಂಟಾರ್ ಇವರುಗಳು ಕೃತಿ…

Read More

ಬೆಂಗಳೂರು : ಸಂಸ ಥಿಯೇಟರ್ ಬೆಂಗಳೂರು ಇದರ ಮೈಸೂರಿನ ಕರ್ನಾಟಕ ರಾಜ್ಯ ಡಾ. ಗಂಗಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವ ವಿದ್ಯಾನಿಲಯದ ಮಾನ್ಯತೆ ಪಡೆದಿರುವ ‘ಸಂಸ ರಂಗಶಿಕ್ಷಣ ಕೇಂದ್ರ’ದ ವತಿಯಿಂದ ಒಂದು ವರ್ಷದ ಥಿಯೇಟರ್ ಡಿಪ್ಲೋಮಾ ಕೋರ್ಸ್ ಗೆ ಅರ್ಜಿ ಆಹ್ವಾನಿಸಲಾಗಿದೆ. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ರಂಗಾಸಕ್ತರಿಗೆ ಒಂದು ವರ್ಷದ ಅಭಿನಯ ಹಾಗೂ ರಂಗಭೂಮಿಯ ವಿವಿಧ ಪ್ರಕಾರಗಳ ಬಗ್ಗೆ ತರಬೇತಿಯನ್ನು ನೀಡಲಾಗುವುದು. ಪ್ರತಿದಿನ ಸಂಜೆ ಹಾಗೂ ಶನಿವಾರ ಮತ್ತು ಭಾನುವಾರ ತರಗತಿಗಳು ನಡೆಯುತ್ತವೆ. ಹೆಚ್ಚಿನ ಮಾಹಿತಿ ಮತ್ತು ಅರ್ಜಿಗಳಿಗೆ 9742067427 ಮತ್ತು 8050643467 ಸಂಖ್ಯೆಯನ್ನು ಸಂಪರ್ಕಿಸಿರಿ.

Read More