Subscribe to Updates
Get the latest creative news from FooBar about art, design and business.
Author: roovari
ಬೈಂದೂರು : ಲಾವಣ್ಯ ಬೈಂದೂರು ಅಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಬೈಂದೂರು ತಾಲೂಕು ಘಟಕ ಹಾಗೂ ಅಶೋಕ ಜುವೆಲ್ಲರ್ಸ್ ಉಪ್ಪುಂದ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ನಾಟಕ ಪ್ರದರ್ಶನ ಸಮಾರಂಭವು ದಿನಾಂಕ 04 ಫೆಬ್ರವರಿ 2025ರಂದು ಯಡ್ತರೆ-ಬೈಂದೂರು ಜೆ.ಎನ್.ಆರ್. ಹೊರಾಂಗಣ ವೇದಿಕೆಯಲ್ಲಿ ನಡೆಯಿತು. ಈ ಸಮಾರಂಭದಲ್ಲಿ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ರಂಗ ಅಧ್ಯಯನ ಕೇಂದ್ರ ನಿರ್ದೇಶಕ ಡಾ. ಜೀವನರಾಂ ಸುಳ್ಯ ಮಾತನಾಡುತ್ತಾ “ಚಿಂತನೆಗಳಿಲ್ಲದ ಮನುಷ್ಯ, ಮನಸ್ಸಿಲ್ಲದ ದೇಹ ಯಾವಾಗಲೂ ನಿರ್ಜಿವ ಸ್ಥಿತಿಯಲ್ಲಿರುತ್ತದೆ. ಶ್ರೀಮಂತಿಕೆ ಉದ್ದೇಶಕ್ಕಿಂತ ಧೀಮಂತ ಮನುಷ್ಯರಾಗುವ ಕನಸು ಕಾಣುವಂತಾಗಬೇಕು” ಎಂದು ಹೇಳಿದರು. “ಸಾಹಿತ್ಯ ಮೌಲ್ಯಭರಿತವಾಗಲು ಆಧ್ಯಾತ್ಮಿಕ ಜ್ಞಾನ, ಅಭ್ಯಾಸ, ಸಂಸ್ಕಾರ, ಮೌಲ್ಯಗಳು ಬರಹಗಾರರಲ್ಲಿ ಸಮ್ಮಿಳಿತವಾಗಿರಬೇಕು. ಜನಪದ ಮತ್ತು ಶಿಷ್ಟಮಹಾಕಾವ್ಯಗಳ ತಿರುಳು ಆಧ್ಯಾತ್ಮಿಕ ಬದುಕಿನ ದರ್ಶನ. ಇಂತಹ ಸಾಹಿತ್ಯವನ್ನು ಇಂದಿನ ಸಾಹಿತಿಗಳು ನಿಷ್ಠೆಯಿಂದ ಅಧ್ಯಯನ ಮಾಡುವ ಮೂಲಕ ಗಟ್ಟಿ ಸಾಹಿತ್ಯ ಹಾಗೂ ಶ್ರೇಷ್ಠ ಸಾಹಿತ್ಯ ಸೃಷ್ಟಿ ಮಾಡುವಂತಾಗಬೇಕು” ಎಂದು ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ…
“ನಿನ್ನ ಕೈ ನನ್ನ ಕೈಯ್ಯಂತೆ ಏಕಿಲ್ಲ? ಸುಕ್ಕು ಸುಕ್ಕಾಗಿದೆ. ನೀಲಿ ಗೆರೆಗಳಿವೆ” “ನನ್ನ ಕೈಯೂ ಹಿಂದೆ ನಿನ್ನ ಕೈಯಂತೆಯೇ ಇತ್ತು” “ಎಲ್ಲ ಸೈನಿಕರೂ ಕೆಟ್ಟವರಲ್ಲ. ನನ್ನಪ್ಪ ತುಂಬ ಒಳ್ಳೆಯವನು” “ಇಲ್ಲ. ಒಳ್ಳೆ ಸೈನಿಕರು ಇರೋದೇ ಇಲ್ಲ” “ನಿನಗೆ ನೋವಾಗುವದಿಲ್ಲವಾ?” “ನನಗೆ ನೋವೇನೆಂದರೇ ಮರೆತುಹೋಗಿದೆ” ನಾಝಿ ಕಮಾಂಡಂಟ್ ವ್ಯಾಗ್ನೆಟ್ ನ ಮಗ ಅಲೆಕ್ಸ್ ಮತ್ತು ನಿರಾಶ್ರಿತರ ಕ್ಯಾಂಪ್ ನ ಹುಡುಗ ಈತನ್ ಹೀಗೆ ಮಾತಾಡುತ್ತಿದ್ದರೆ ಪ್ರೇಕ್ಷಕರ ಕಣ್ಣುಗಳು ಹನಿಗೂಡುತ್ತಿದ್ದವು. ದಿನಾಂಕ 01 ಫೆಬ್ರವರಿ 2025ರಂದು ಬೆಂಗಳೂರು ‘ಭಾರತ ರಂಗ ಮಹೋತ್ಸವ’ದಲ್ಲಿ ಪ್ರದರ್ಶಿತವಾದ ‘ಎ ಫ್ರೆಂಡ್ ಬಿಯಾಂಡ್ ದ ಫೆನ್ಸ್’ನ ಪ್ರದರ್ಶನವಿದು. ಎರಡನೆಯ ಮಹಾಯುದ್ಧದ ಕರಾಳ ಮುಖಗಳನ್ನು, ನಾಝಿಗಳ ಕ್ರೌರ್ಯವನ್ನು ಮಕ್ಕಳ ಬದುಕಿನ ಮೂಲಕ ಕಾಣುವ ಪ್ರಯತ್ನವಿದು. ಕನ್ನಡದ ಮಕ್ಕಳ ರಂಗಭೂಮಿಯಲ್ಲಿ ಇಂಥ ಪ್ರಯತ್ನಗಳು ಅಲ್ಲಲ್ಲಿ ನಡೆದಿವೆ. ಬಿ ಸುರೇಶ್ ರ ‘ರೆಕ್ಕೆ ಕಟ್ಟುವಿರಾ’ ನಾಟಕದಲ್ಲಿ ಮೊದಲ ಅಣುಬಾಂಬು ಮಾಡಿದ ವಿನಾಶವನ್ನು ‘ಕಿನ್ಲೆ’ ಎಂಬ ಹುಡುಗಿಯ ನೆನಪುಗಳ ಕಿಂಡಿಯಲ್ಲಿ ನೋಡುವ ಪ್ರಯತ್ನವಿದೆ. ಸುಧಾ ಆಡುಕಳರ…
ಬೆಂಗಳೂರು : ರಂಗಮಂಡಲ ಸಾಂಸ್ಕೃತಿಕ ಸಂಘ (ರಿ.) ಇದರ ವತಿಯಿಂದ ‘ಶಿವಗಂಗ ಸಂಡೆ ಸ್ಕೂಲ್ ಆಫ್ ಆಕ್ಟಿಂಗ್’ ತರಗತಿಗಳು ದಿನಾಂಕ 20 ಏಪ್ರಿಲ್ 2025ರಿಂದ ಬೆಂಗಳೂರಿನ ಕೆಂಗೇರಿ ಉಪನಗರ, 1ನೇ ವಿಭಾಗ, ಸರ್ ಎಂ.ವಿ. ಬಡಾವಣೆಯಲ್ಲಿರುವ ಶಿವಗಂಗ ರಂಗ ಮಂದಿರದಲ್ಲಿ ಪ್ರಾರಂಭವಾಗಲಿದೆ. ಈ ತರಗತಿಯು ಜನವರಿ 2026ರವರೆಗೆ ಪ್ರತಿ ಭಾನುವಾರ ಬೆಳಿಗ್ಗೆ 10-00 ಗಂಟೆಯಿಂದ ಮಧ್ಯಾಹ್ನ 4-30 ಗಂಟೆ ತನಕ ನಡೆಯಲಿದ್ದು, ಹೆಚ್ಚಿನ ಮಾಹಿತಿ ಹಾಗೂ ನೋಂದಾವಣೆಗೆ ಮಲ್ಲಿಕಾರ್ಜುನಸ್ವಾಮಿ ಮಹಾಮನೆ 9448970731 ಸಂಖ್ಯೆಯನ್ನು ಸಂಪರ್ಕಿಸಿರಿ.
ವೃತ್ತಿಯಲ್ಲಿ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ಪ್ರಾಧ್ಯಾಪಕ, ಪ್ರವೃತ್ತಿಯಲ್ಲಿ ಯಕ್ಷಗಾನ ಕಲಾವಿದರಾಗಿ ಮಿಂಚುತ್ತಿರುವವರು ವಾಸುದೇವ. ಉಡುಪಿ ಜಿಲ್ಲೆಯ ಪಡುಬಿದ್ರಿಯ ದಿ.ಸುಬ್ಬರಾವ್ ಮತ್ತು ದಿ.ರೇವತಿ ಇವರ ಮಗನಾಗಿ 10.02.1977ರಂದು ಜನನ. ವಿದ್ಯಾಭ್ಯಾಸ: ಕಳತ್ತೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿವರೆಗೆ ಅಭ್ಯಾಸ. ಶಿರ್ವದ ಸಂತ ಮೇರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರೌಢ ಶಾಲೆ ಮತ್ತು ವಿಜ್ಞಾನ ವಿಭಾಗದಲ್ಲಿ ಪದವಿಪೂರ್ವ ಅಧ್ಯಯನ, ಉಡುಪಿಯ ಮಹಾತ್ಮ ಗಾಂಧಿ ಸ್ಮಾರಕ ಮಹಾವಿದ್ಯಾಲಯದಲ್ಲಿ ಬಿ.ಎಸ್ ಸಿ, ಕರ್ನಾಟಕ ಪ್ರಾದೇಶಿಕ ತಾಂತ್ರಿಕ ವಿದ್ಯಾಲಯ (ಕೆ ಆರ್ ಈ ಸಿ) ಮತ್ತು ಮಂಗಳೂರು ವಿಶ್ವವಿದ್ಯಾಲಯಗಳಿಂದ ಸ್ನಾತಕೋತ್ತರ ಪದವಿ, ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯ(ಎನ್.ಐ.ಟಿ.ಕೆ)ದಿಂದ ಗಣಿತ ಮತ್ತು ಗಣಕಶಾಸ್ತ್ರದಲ್ಲಿ ಪಿ ಹೆಚ್ ಡಿ ಪದವಿ. ಪ್ರಸ್ತುತ ನಿಟ್ಟೆಯ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ಪ್ರಾಧ್ಯಾಪಕ. ಯಕ್ಷಗಾನ ಗುರುಗಳು: ಬಾಲಪಾಠ ಕಳತ್ತೂರಿನ ಶ್ರೀ ಮಹಾಲಿಂಗೇಶ್ವರ…
ಉಡುಪಿ : ಸಾಂಸ್ಕೃತಿಕ ವೇದಿಕೆ ರಥಬೀದಿ ಗೆಳೆಯರು (ರಿ.), ಉಡುಪಿ ಇದರ ವತಿಯಿಂದ ಡಾ. ನಿ. ಮುರಾರಿ ಬಲ್ಲಾಳ್ ಮತ್ತು ಪ್ರೊ. ಕೆ.ಎಸ್. ಕೆದ್ಲಾಯ ನೆನಪಿನ ‘ಮುರಾರಿ-ಕೆದ್ಲಾಯ ರಂಗೋತ್ಸವ’ವನ್ನು ದಿನಾಂಕ 15 ಫೆಬ್ರವರಿ 2025ರಿಂದ 17 ಫೆಬ್ರವರಿ 2025ರವರೆಗೆ ಪ್ರತಿದಿನ ಗಂಟೆ 6-30ಕ್ಕೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಡಾ. ಎನ್. ಮುರಾರಿ ಬಲ್ಲಾಳ್ ಚಿಂತನ ಫೌಂಡೇಶನ್ (ರಿ.) ಅಂಬಲಪಾಡಿ ಇವರ ಸಹಕಾರದೊಂದಿಗೆ ನಡೆಯಲಿದೆ. ದಿನಾಂಕ 15 ಫೆಬ್ರವರಿ 2025ರಂದು ಮಂಗಳೂರಿನ ಸಾಮಾಜಿಕ ಕಾರ್ಯಕರ್ತರಾದ ಶ್ರೀ ಮುನೀರ್ ಕಾಟಿಪಳ್ಳ ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಉಡುಪಿ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಪೂರ್ಣಿಮಾ ಮತ್ತು ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಲಕ್ಷ್ಮೀನಾರಾಯಣ ಕಾರಂತ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು. ದಿನಾಂಕ 15 ಫೆಬ್ರವರಿ 2025ರಂದು ಹುಲುಗಪ್ಪ ಕಟ್ಟಿಮನಿ ಇವರ ನಿರ್ದೇಶನದಲ್ಲಿ ಸಂಕಲ್ಪ…
ಅಪ್ಪನ ಕಾಯುತ್ತಾ ಇನ್ನೂ ನೆನೆಪಿದೆ… ಅದೊಂದು ಬದುಕಿತ್ತು ಅಪ್ಪ ಅಮ್ಮನಿಂದ ಜಗತ್ತು ಬೆಳಗಿತ್ತು ಅಮ್ಮನ ಮಡಿಲು ಅಪ್ಪನ ಹೆಗಲು ಎಲ್ಲವೂ ಚೆನ್ನಾಗಿತ್ತು! ನಾನು ಕಿಲ ಕಿಲ ನಗುತ್ತ ಕಣ್ಣು ಅರಳಿಸಿ ನೋಡುತ್ತಾ ಜಗತ್ತು ಚೆಂದ ವಿತ್ತು. ಅಪ್ಪನಿಗೆ ಕನಸಿತ್ತು ಮನೆಯಲ್ಲಿ ನಗುವಿತ್ತು! ಅಂಗಳದ ತುಂಬಾ ಸಂಭ್ರಮವಿತ್ತು! ಅಪ್ಪನಿಗೆ ಸ್ನೇಹಿತರ ಗುಂಪು ಜೊತೆಯಾಯ್ತು ಮೊದ ಮೊದಲು ಖುಷಿಗೆಂದು, ನಂತರ ತಲೆಬಿಸಿಗೆಂದು ಕುಡಿತ ನಮ್ಮನೇಲಿ ತಳವೂರಿತು! ಕುರುಕಲು ತಿಂಡಿಯೇನೋ ಸಿಗುತಿತ್ತು! ಆದರೆ ಬಾಲ್ಯವೇ ಸುಟ್ಟು ಕರಕಲಾಯ್ತು! ಅಪ್ಪನೆಂಬ ಆಕಾಶ ಮುರಿದು ಬಿದ್ದಿತು! ಅಪ್ಪನೆಂದರೆ ಈಗ ಅಭದ್ರತೆ ! ಅಮ್ಮ ಎಂದರೆ ರೋಧನ! ನೆಂಟರ ಅವಹೇಳನ, ಸ್ನೇಹಿತರ ಅಪಹಾಸ್ಯ. ಕುಸಿದು ಕುಳಿತಿದ್ದೇನೆ ಕುರುಡು ದೀಪವಿಟ್ಟು ಕಳೆದು ಹೋದ ಅಪ್ಪನ ದಾರಿ ಕಾಯುತ್ತಾ… ಮರಳಿ ಬಂದು ಬಿಡಪ್ಪ. ನನ್ನನ್ನು ನಾನು. ಕಳೆದು ಕೊಳ್ಳುವ ಮೊದಲು! -ಅಕ್ಷತಾ ಪ್ರಶಾಂತ್ ಕವಯಿತ್ರಿ/ಆಪ್ತಸಮಾಲೋಚಕಿ/ ಬ್ಯಾಂಕ್ ಉದ್ಯೋಗಿ, ಟೀಚರ್ಸ್ ಬ್ಯಾಂಕ್ ಉಡುಪಿ
ಬೆಂಗಳೂರು : ‘ಪದ’ ಬೆಂಗಳೂರು ಆಯೋಜಿಸುವ ‘ಬಂಜೆಗೆರೆ ಜಯಪ್ರಕಾಶ ಅವರ ಸಾಹಿತ್ಯ ಮತ್ತು ಸಾಂಸ್ಕೃತಿಕ ಕೊಡುಗೆ ರಾಜ್ಯ ಮಟ್ಟದ ವಿಚಾರ ಸಂಕಿರಣ ಹಾಗೂ ಅಭಿನಂದನಾ ಸಮಾರಂಭ’ವು ದಿನಾಂಕ 11 ಫೆಬ್ರವರಿ 2025ರ ಮಂಗಳವಾರ ಬೆಳಿಗ್ಗೆ ಘಂಟೆ 10.00ರಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ. ಕಾರ್ಯಕ್ರಮದ ಆರಂಭದಲ್ಲಿ ಕಿಕ್ಕೇರಿ ಕೃಷ್ಣಮೂರ್ತಿ ಹಾಗೂ ಶಂಕರ ಭಾರತೀಪುರ ಇವರಿಂದ ಗಾಯನ ಕಾರ್ಯಕ್ರಮ ನಡೆಯಲಿದ್ದು, ಬಳಿಕ ಸಾಹಿತಿಗಳಾದ ಡಾ. ಕೆ. ಮರುಳಸಿದ್ದಪ್ಪ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಸಾಹಿತಿಗಳಾದ ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಇದರ ಅಧ್ಯಕ್ಷರಾದ ಪ್ರೊ. ಎಲ್. ಎನ್. ಮುಕುಂದರಾಜ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ಡಾ. ಎಚ್. ಎಸ್. ರಾಘವೇಂದ್ರ ರಾವ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಮೊದಲ ಗೋಷ್ಠಿಯಲ್ಲಿ ಡಾಕ್ಟರ್ ಮಂಜುನಾಥ ಅದ್ದೆ ಹಾಗೂ ಡಾಕ್ಟರ್ ಸ್ವಾಮಿ ಆನಂದ್ ಆರ್. ಇವರು ‘ಬಂಜೆಗೆರೆಯವರ…
ಹಳೆಬೇರು ಹೊಸಚಿಗುರಿನಿಂದ ಕೂಡಿದಾಗಲೇ ಕಲಾ ವಿಕಸನ ಸಾಧ್ಯ. “ಪ್ರಜ್ಞಾ ನವನವೋನ್ಮೇಷ ಶಾಲಿನಿ ಕಸ್ಯಚಿತ್ ಪ್ರತಿಭಾ ಮತ” ಎಂದು ಭಟ್ಟ ತೌತನು ಹೇಳಿದಂತೆ ಜ್ಞಾನದ ವಿಕಸನದಿಂದ ಶೋಭಾಯಮಾನವಾದ್ದು ಪ್ರತಿಭೆ. ಅಧ್ಯಯನಶೀಲರು, ಚಿಂತನಾಶೀಲರು ಜತೆಗೆ ಶ್ರದ್ಧೆ, ಉತ್ಸಾಹ, ಪರಿಶ್ರಮವುಳ್ಳವರಿಗೆ ಮಾತ್ರ ಅದು ಸಿದ್ಧಿಸುತ್ತದೆ. ಈ ಮಾತುಗಳನ್ನು ನೆನಪಾಗುವಂತೆ ಮಾಡಿದವರು ಧಾರಾವಾಡದ ರತಿಕಾ ನೃತ್ಯ ನಿಕೇತನದ ಗುರು ಶ್ರೀಮತಿ ನಾಗರತ್ನ ಹಡಗಲಿ ಅವರ ವಿದ್ಯಾರ್ಥಿನಿಯರಾದ ವಿದುಷಿ ಡಾ.ಸಮತಾ ಗೌತಮ್ ಹಾಗೂ ವಿದುಷಿ ಸೃಷ್ಟಿ ಕುಲಕರ್ಣಿ. ಇತ್ತೀಚೆಗೆ ತಮ್ಮ ನೃತ್ಯ ಜೀವನದ ಮೈಲಿಗಲ್ಲನ್ನು ನೆನಪಿಸುವ ನೆಪದಲ್ಲಿ ಪರಿಪೂರ್ಣ ಭರತನಾಟ್ಯ ಮಾರ್ಗಂ ನ ರಂಗಪ್ರಸ್ತುತಿಯನ್ನು ಅದ್ಭುತವಾಗಿ ನೀಡಿ ಜನಮನ ಗೆದ್ದವರು ಸಮತಾ ಮತ್ತು ಸೃಷ್ಟಿ. ಕಳೆದ 2024 ಸಪ್ಟಂಬರ್ ನಲ್ಲೇ ಸಮತಾ ಕರೆ ಮಾಡಿ ತಮ್ಮ ಒಂದು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಧಾರಾವಾಡದ “ಸೃಜನಾ” ರಂಗಂಮಂದಿರಕ್ಕೆ ಬರಬೇಕೆಂದು ವಿನಂತಿಸಿಕೊಂಡಿದ್ದರು. ಒಪ್ಪಿದೆ. “ಸಮಸೃಷ್ಟಿ ನೃತ್ಯಾರ್ಪಣಂ” – ರಜತದಶ ಸಂಭ್ರಮ ಎಂಬ ಶೀರ್ಷಿಕೆಯಲ್ಲಿ 01 ಫೆಬ್ರವರಿ 2025ರಂದು ನಡೆದ ಕಾರ್ಯಕ್ರಮ. ತಮ್ಮ…
ತುಮಕೂರು : ನಾಟಕ ಮನೆ ತುಮಕೂರು ಇವರು ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸುವ ಎರಡು ದಿನಗಳ ನಾಟಕೋತ್ಸವ ಕಾರ್ಯಕ್ರಮವು ದಿನಾಂಕ 13 ಮತ್ತು 14 ಫೆಬ್ರವರಿ 2925ರಂದು ತುಮಕೂರಿನ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ತಡೆಯಲಿದೆ. ದಿನಾಂಕ 13 ಫೆಬ್ರವರಿ 2025ರ ಗುರುವಾರದಂದು ಮೇದೂರು ತೇಜ ರಚನೆ ಹಾಗೂ ಧೀಮಂತ್ ರಾಮ್ ನಿರ್ದೇಶನದದಲ್ಲಿ ಸರ್ಕಾರಿ ಕಲಾ ಕಾಲೇಜು ಚಿತ್ರದುರ್ಗ ಇಲ್ಲಿನ ವಿದ್ಯಾರ್ಥಿಗಳು ಅಭಿನಯಿಸುವ ದಯಾನದಿ ದಂಡೆಯ ಮೇಲೆ ನಾಟಕ ಪ್ರದರ್ಶನಗೊಳ್ಳಲಿದ್ದು, ದಿನಾಂಕ 14 ಫೆಬ್ರವರಿ 2025ರಂದು ಮಂಡ್ಯ ರಮೇಶ್ ಇವರ ಮರುರೂಪ, ವಿನ್ಯಾಸ ಮತ್ತು ನಿರ್ದೇಶನದಲ್ಲಿ ‘ನಟನ’ ಮೈಸೂರು ಅಭಿನಯಿಸುವ ಚೋರ ಚರಣದಾಸ ನಾಟಕ ಪ್ರದರ್ಶನ ಗೊಳ್ಳಲಿದೆ.
ಮೈಸೂರು : ರಂಗಾಯಣ ಮೈಸೂರು ಇದರ ವತಿಯಿಂದ ರಂಗಾಯಣ ವಾರಾಂತ್ಯ ರಂಗಪ್ರದರ್ಶನದ ಪ್ರಯುಕ್ತ ರೆಪರ್ಟರಿ ಹಿರಿಯ ಕಲಾವಿದರು ಅಭಿನಯಿಸುವ ಡಿವೈಸ್ಡ್ ನಾಟಕ ‘ಕಾಣೆ ಆದವರು’ ಇದರ ಪ್ರದರ್ಶನವನ್ನು ದಿನಾಂಕ 09 ಫೆಬ್ರವರಿ 2025ರಂದು ಸಂಜೆ 6-30 ಗಂಟೆಗೆ ಮೈಸೂರು ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ಆಯೋಜಿಸಲಾಗಿದೆ. ಈ ನಾಟಕವನ್ನು ಸೌರವ್ ಪೋದ್ದಾರ್ ಇವರ ವಿನ್ಯಾಸ, ಸಂಗೀತ ಮತ್ತು ನಿರ್ದೇಶನದಲ್ಲಿ ನಂದಿನಿ ಕೆ.ಆರ್., ಶಶಿಕಲಾ ಬಿ.ಎನ್. ಮತ್ತು ಗೀತಾ ಮೋಂಟಡ್ಕ ಇವರು ಅಭಿನಯಿಸಲಿದ್ದಾರೆ.