Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು : ಸಮರ್ಥ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಬೆಂಗಳೂರು ಇವರು ಕೊಡ ಮಾಡುವ ಹಳ್ಳೂರು ಹನುಮಂತಪ್ಪ ವರಮಹಾಲಕ್ಷ್ಮಮ್ಮ ರಾಜ್ಯ ಪ್ರಶಸ್ತಿಯನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಆರಿಸಲ್ಪಟ್ಟ ಪ್ರೊಫೆಸರ್ ಮಧೂರು ಮೋಹನ ಕಲ್ಲೂರಾಯರಿಗೆ ನೀಡಲಾಗಿದೆ. ರಾಜ್ಯದ ಪ್ರತಿಷ್ಠಿತ ಪತ್ರಿಕೆ ‘ವಿಜಯವಾಣಿ ‘ಪತ್ರಿಕೆಯಿಂದ ಜಿಲ್ಲಾವಾರು ಆರಿಸಲ್ಪಟ್ಟಂತಹ ಸಾಧಕರಿಗೆ ಇದನ್ನು ನೀಡಲಾಗಿದೆ. ಗಮಕ, ಯಕ್ಷಗಾನ, ವಿವಿಧ ಕಲಾ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ಪ್ರೊಫೆಸರ್ ಮಧೂರು ಮೋಹನ ಕಲ್ಲೂರಾಯರಿಗೆ ಈ ಪ್ರಶಸ್ತಿಯನ್ನು ದಿನಾಂಕ 6 ಜುಲೈ 2025ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಸಮಾರಂಭದಲ್ಲಿ ಮಠಾಧಿಪತಿಗಳ ದಿವ್ಯ ಸಾನಿಧ್ಯದಲ್ಲಿ, ಗಣ್ಯರ ಉಪಸ್ಥಿತಿಯಲ್ಲಿ ಪ್ರದಾನ ಮಾಡಲಾಯಿತು. ಮೋಹನ ಕಲ್ಲೂರಾಯರ ಪರವಾಗಿ ಅವರ ಪುತ್ರ ಮಧೂರು ವಿಷ್ಣು ಪ್ರಸಾದ ಕಲ್ಲೂರಾಯ ಬೆಂಗಳೂರಿನಲ್ಲಿ ಸನ್ಮಾನವನ್ನು ಸ್ವೀಕರಿಸಿದರು.ಮಧೂರು ಮೋಹನ ಕಲ್ಲೂರಾಯರು ದ.ಕ ಜಿಲ್ಲೆಯ ಕರ್ನಾಟಕ ಗಮಕ ಕಲಾ ಪರಿಷತ್ತಿನ ಅಧ್ಯಕ್ಷರಾಗಿದ್ದಾರೆ.
ಬೆಳಾಲು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ತಾಲೂಕು ಘಟಕ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆ ಬೆಳಾಲು ಇದರ ಸಂಯುಕ್ತ ಆಶ್ರಯದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು : ಉಪನ್ಯಾಸ ಮಾಲೆ – 2ರ ಕಾರ್ಯಕ್ರಮದಲ್ಲಿ ವರಕವಿ ಬೇಂದ್ರೆಯವರ ಕುರಿತು ಉಪನ್ಯಾಸ ದಿನಾಂಕ 11 ಜುಲೈ 2025ರಂದು ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆಯಲ್ಲಿ ಜರಗಿತು. ದೀಪ ಬೆಳಗಿಸಿ, ಬೇಂದ್ರೆಯವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು. ಉಪನ್ಯಾಸಕರಾಗಿ ಆಗಮಿಸಿದ ಶ್ರೀ ಧ. ಮಂ. ಪದವಿ ಕಾಲೇಜು ಉಜಿರೆ ಇಲ್ಲಿನ ಸಹಾಯಕ ಪ್ರಾಧ್ಯಾಪಕರಾದ ಡಾ. ನಾಗಣ್ಣ ಡಿ.ಎ. ಮಾತನಾಡಿ “ಬೇಂದ್ರೆಯವರು ಆಡು ಮಾತಿನ ಶೈಲಿಯಲ್ಲಿ ಕವನಗಳನ್ನು ರಚಿಸಿ ಜನಜನಿತರಾದವರು, ಸರಳ ಜೀವನ, ವ್ಯಕ್ತಿತ್ವದಿಂದ ಶ್ರೇಷ್ಠತೆಯನ್ನು ಪಡೆದುಕೊಂಡವರು” ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ ಯದುಪತಿ ಗೌಡ ಮಾತನಾಡಿ “ಸಾಹಿತ್ಯಾಸಕ್ತಿ ಮತ್ತು ಓದುವ…
ಪುತ್ತೂರು: ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ( ಸ್ವಾಯತ್ತ ), ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಕೇಂದ್ರ, ವಿವೇಕಾನಂದ ಸಂಶೋಧನ ಕೇಂದ್ರ ಮತ್ತು ಐಕ್ಯೂಎಸಿ ಘಟಕದ ಸಹಭಾಗಿತ್ವದಲ್ಲಿ ಜಗತ್ತಿಗೆ ಭಾರತದ ಆಧ್ಯಾತ್ಮಿಕ ಚಿಂತನೆಯನ್ನು ಪರಿಚಯಿಸಿದ ರಾಷ್ಟ್ರ ಸಂತ ಸ್ವಾಮಿ ವಿವೇಕಾನಂದ ಕುರಿತಾದ ಚಿಂತನೆಗಳ ಉಪನ್ಯಾಸ ಮಾಲಿಕೆ, ವಿವೇಕ ಸ್ಮೃತಿಯ 18ನೇ ಕಾರ್ಯಕ್ರಮವು ದಿನಾಂಕ 14 ಜುಲೈ 2025ರಂದು ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ದಂತ ವೈದ್ಯ ಹಾಗೂ ಮಂಗಳೂರಿನ ರಾಮಕೃಷ್ಣ ಮಿಷನ್ ಇದರ ತರಬೇತುದಾರರಾದ ಡಾ. ರಾಹುಲ್ ಜಿ. ಟಿ. ಮಾತನಾಡಿ “ನಮ್ಮ ಜೀವನವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಲು ಹಲವಾರು ಅವಕಾಶಗಳಿವೆ. ಆದರೆ ಅವಕಾಶ ಎಂದಿಗೂ ನಮ್ಮನ್ನು ಹುಡುಕಿಕೊಂಡು ಬರುವುದಿಲ್ಲ. ಸದಾವಕಾಶ ಸಿಕ್ಕಾಗ ಅದನ್ನು ಸದುಪಯೋಗಗೊಳಿಸಿಕೊಳ್ಳಬೇಕು. ನಮ್ಮ ದೇಶದ, ಜಗತ್ತಿನ ಭವಿಷ್ಯವನ್ನು ನಿರ್ಧರಿಸುವವರು ವಿದ್ಯಾರ್ಥಿಗಳು. ಆದ್ದರಿಂದ ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ತಮ್ಮ ಗುರಿಯತ್ತ ಯೋಚಿಸಬೇಕು” ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ…
ಮಂಗಳೂರು : ಮಂಗಳೂರಿನ ವಿಶ್ವಕರ್ಮ ಕಲಾ ಪರಿಷತ್ ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಶ್ರಯದಲ್ಲಿ ದಿನಾಂಕ 13 ಜುಲೈ 2025ರಂದು 24 ಗಂಟೆಗಳ ನಿರಂತರ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂರವರ ಹಾಡುಗಳನ್ನು ಹಾಡಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ನಲ್ಲಿ ವಿಶ್ವದಾಖಲೆ ಮೂಡಿಸಿರುವ ಗಾಯಕ ವಿದ್ವಾನ್ ಯಶವಂತ್ ಎಂ.ಜಿ. ಇವರಿಗಾಗಿ ಏರ್ಪಡಿಸಿದ್ದ ‘ಯಶೋಭಿನಂದನೆ’ ಸಮಾರಂಭ ನಡೆಯಿತು. ಈ ಸಮಾರಂಭದಲ್ಲಿ ಅಭಿನಂದನೆಯನ್ನು ಸ್ವೀಕರಿಸಿದ ವಿದ್ವಾನ್ ಯಶವಂತ್ ಎಂ.ಜಿ. ಮಾತನಾಡಿ “ಸಾಧನೆ ಮಾಡುವವರಿಗೆ ಸವಾಲುಗಳು ಎದುರಾಗುವುದು ಸಹಜ. ಆದರೆ ಶ್ರದ್ಧೆ, ಛಲ ಹಾಗೂ ದೈವಾನುಗ್ರಹದಿಂದ ಆ ಸವಾಲುಗಳನ್ನೆದುರಿಸಿ ಯಶಸ್ಸನ್ನು ಸಾಧಿಸಲು ಸಾಧ್ಯ. ಸಂಗೀತಪ್ರೇಮಿಗಳ ನಿರಂತರ ಪ್ರೋತ್ಸಾಹವೇ ನನ್ನ ಸಾಧನೆಗೆ ಶಕ್ತಿ ತುಂಬಿತು” ಎಂದು ಹೇಳಿದರು. “ಗಾಯನದಲ್ಲಿ ವಿಶ್ವದಾಖಲೆ ಮಾಡಿರುವ ಯಶವಂತ್ ಎಂ.ಜಿ.ಯವರ ಸಾಧನೆ ಅನುಪಮವಾದುದು. ಅವರ ಮುಂದಿನ ಸಾಧನೆಗೆ ಎಲ್ಲಾ ರೀತಿಯ ಸಹಯೋಗ ನೀಡುವುದಲ್ಲದೆ, ವಿಶ್ವಕರ್ಮ ಕಲಾ ಪರಿಷತ್, ಕಲಾವಿದರ ಹಾಗೂ ಕುಶಲಕರ್ಮಿಗಳ ಅಭ್ಯುದಯಕ್ಕಾಗಿ ಹಮ್ಮಿಕೊಂಡಿರುವ ಯೋಜನೆಗಳ ಅನುಷ್ಠಾನಕ್ಕೆ ಎಲ್ಲಾ ರೀತಿಯ ನೆರವು ನೀಡುವುದಾಗಿ”…
ತೆಕ್ಕಟ್ಟೆ: ಕೈಲಾಸ ಕಲಾಕ್ಷೇತ್ರ ಟ್ರಸ್ಟ್ ತೆಕ್ಕಟ್ಟೆ ಆಶ್ರಯದಲ್ಲಿ ಚಿತ್ರಕಲಾ ತರಗತಿಯಲ್ಲಿ ಗುರುಗಳಿಗೆ ಗೌರವ ಅಭಿನಂದನೆ ಕಾರ್ಯಕ್ರಮವು ದಿನಾಂಕ 14 ಜುಲೈ 2025 ರಂದು ನಡೆಯಿತು. ಸಮಾರಂಭದಲ್ಲಿ ಗೌರವ ಅಭಿನಂದನೆಗೊಳಗಾದ ಚಿತ್ರಕಲಾ ಗುರು ಗಿರೀಶ್ ವಕ್ವಾಡಿ ಮಾತನಾಡಿ “ಗುರುವೆಲ್ಲರೂ ಶಿಷ್ಯನ ಏಳ್ಗೆಯನ್ನೇ ಬಯಸುತ್ತಾರೆ. ನಮ್ಮೆಲ್ಲರನ್ನು ತಿದ್ದಿ ತೀಡಿದ ಗುರುವನ್ನು ಸ್ಮರಿಸಬೇಕಾದದ್ದು ಬದುಕಿನ ಬಹು ಮುಖ್ಯ ಅಂಶ. ಸನ್ಮಾರ್ಗದತ್ತ ಕೊಂಡೊಯ್ಯುವ ಪ್ರಯತ್ನ ಗುರು ಮಾಡುತ್ತಾನೆ. ನಮಗಾಗಿ ಸ್ವಲ್ಪ, ದೇಶಕ್ಕಾಗಿ ಸರ್ವಸ್ವ ಎಂಬ ನೀತಿಯನ್ನು ಗುರು ತಿಳಿಸುತ್ತಾನೆ. ಗುರು ಪೂರ್ಣಿಮೆಯಂದು ಗೌರವ ಅಭಿನಂದನೆಗೊಳಗಾದ ನಾನೇ ಧನ್ಯ. ಶಿಷ್ಯರನೇಕರ ಉಪಸ್ಥಿತಿಯಲ್ಲಿ ಅಭಿನಂದನೆಗೊಳಗಾದದ್ದು ನನಗೆ ಹಿತವೆನಿಸಿದೆ. ಶಿಷ್ಯನ ಸರ್ವತೋಮುಖ ಅಭಿವೃದ್ಧಿಯೇ ನನ್ನ ಉದ್ದೇಶ. ಶಿಷ್ಯ ಬೆಳಗಬೇಕು. ಶಿಷ್ಯ ಬೆಳಗಿದರೆ ಗುರುವಾದವನ ವಿದ್ಯೆ ಸಾರ್ಥಕ” ಎಂದರು. ಕುಮಾರಿ ಪರಿಣಿತ ವೈದ್ಯ ಕಾರ್ಯಕ್ರಮ ನಿರೂಪಿಸಿ, ಕುಮಾರಿ ದೀಪಾ ಸ್ವಾಗತಿಸಿ, ಗುರುಗಳನ್ನು ಪರಿಚಯಿಸಿದರು.
ಧಾರವಾಡ : ಮನೋಹರ ಗ್ರಂಥ ಮಾಲಾ ಧಾರವಾಡ ಇದರ ವತಿಯಿಂದ ದಿನಾಂಕ 14 ಜುಲೈ 2025ರಂದು ಮನೋಹರ ಗ್ರಂಥ ಮಾಲಾಅಟ್ಟದ ಮೇಲೆ ‘ರಂ. ಶಾ. ಲೋಕಾಪುರ ಇವರ ಜನ್ಮದಿನಾಚರಣೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಲೇಖಕ ಡಾ. ಕೃಷ್ಣ ಕಟ್ಟಿ “ರಂ. ಶಾ. ಲೋಕಾಪುರ ಅವರು ಪ್ರಸಿದ್ಧಿ, ಪ್ರಚಾರ ಮತ್ತು ಪ್ರಶಸ್ತಿಗಳನ್ನು ಬಯಸಿ ಕೆಲಸ ಮಾಡಲಿಲ್ಲ. ತಮ್ಮದೇ ಆದ ಶಿಸ್ತು ಮತ್ತು ಬದ್ಧತೆಯನ್ನು ತಮ್ಮ ಜೀವನದುದ್ದಕ್ಕೂ ಪಾಲಿಸಿಕೊಂಡು ಬಂದರು. ಅವರು ಕನ್ನಡ ಮತ್ತು ಮರಾಠಿ ಭಾಷೆಗಳೆರಡರಲ್ಲೂ ಅಪಾರವಾದ ಪಾಂಡಿತ್ಯವನ್ನು ಪಡೆದವರಾಗಿದ್ದರು. ಹೀಗಾಗಿ ಅವರ ‘ಜ್ಞಾನೇಶ್ವರಿ’ ಅನುವಾದ ಮತ್ತು ‘ಜ್ಞಾನೇಶ್ವರಿ ಕಾಲದ ಮರಾಠಿ ಭಾಷೆಯ ಮೇಲೆ ಕನ್ನಡದ ಪ್ರಭಾವ’ ಎರಡೂ ಭಾಷೆಯ ವಿದ್ವಾಂಸರ ಮನ್ನಣೆಗೆ ಪಾತ್ರವಾದವು. ಜ್ಞಾನೇಶ್ವರಿ ಅವರ ಮೂವತ್ತು ವರ್ಷ ಶ್ರಮದ ಫಲ. ಬೇಂದ್ರೆಯವರ ಆಶೀರ್ವಾದ ಪಡೆದು, ಕುರ್ತಕೋಟಿ ಅವರ ಜತೆ ಪ್ರತಿ ಹೆಜ್ಜೆಯಲ್ಲೂ ಚರ್ಚಿಸಿದ ಅನುವಾದಿತ ಗ್ರಂಥ.” ಎಂದು ಹೇಳಿದರು. ಡಾ. ಹ. ವೆಂ. ಕಾಖಂಡಿಕಿ ಅವರು ಮಾತನಾಡುತ್ತಾ…
ತೆಕ್ಕಟ್ಟೆ: ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ ಆಯೋಜಿಸುತ್ತಿರುವ ಸರಣಿ ಕರೋಕೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ದಿನಾಂಕ 12 ಜುಲೈ 2025ರಂದು ತೆಕ್ಕಟ್ಟೆಯ ಹಯಗ್ರೀವದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕರೋಕೆ ಸಂಗೀತದ ಪ್ರಸಿದ್ಧ ಗಾಯಕ ರಾಘವೇಂದ್ರ ಕೋಟೇಶ್ವರ ಮಾತನಾಡಿ “ಶಾಸ್ತ್ರೀಯವಾಗಿ ಸಂಗೀತ ಕಲಿತವರಿಗೆ ಕರೋಕೆ ಸಂಗೀತ ಅಭ್ಯಾಸ ಹತ್ತಿರವಾಗುತ್ತದೆ. ಈಜು ಕಲಿತು ಸಮುದ್ರದ ಆಳವನ್ನು ಲೆಕ್ಕ ಹಾಕಿದಂತೆ. ಕರೋಕೆ ಸಂಗೀತವು ಪ್ರಸಿದ್ಧಿ ಹೊಂದುವುದಕ್ಕೆ ಸುಲಭ ಸಾಧ್ಯವಾಗುತ್ತದೆ. ಶೃತಿಜ್ಞಾನ ಯಥೇಚ್ಛವಾಗಿ ಇದ್ದರೆ ಸಂಗೀತವು ಕಾರ್ಯಕ್ರಮದಲ್ಲಿ ಗೆಲ್ಲುತ್ತದೆ” ಎಂದರು. ರಂಗಭೂಮಿ ಕಲಾವಿದೆ ಸುಧಾ ಮಣೂರು, ಪಾರ್ವತಿ ಮೈಯ್ಯ, ಭಾಗ್ಯಲಕ್ಷ್ಮೀ ವೈದ್ಯ, ಶ್ರೀಮತಿ ವಂದನಾ ರಾಘವೇಂದ್ರ, ಪ್ರಶಾಂತ್ ಪಡುಕೆರೆ ಉಪಸ್ಥಿತರಿದ್ದರು.
ಮಂಗಳೂರು : ಕೊಟ್ಟಾರದ ಭರತಾಂಜಲಿ ಸಂಸ್ಥೆಯು ಪ್ರಸ್ತುತ ಪಡಿಸಿದ ಕಿಂಕಿಣಿ ತ್ರಿಂಶತ್ – ಭರತಾಂಜಲಿಯ 30 ಸಂವತ್ಸರಗಳ ಸಂಭ್ರಮಾಚರಣೆಯ ಪ್ರಯುಕ್ತ ‘ನೃತ್ಯಾಮೃತಂ 2025’ ಭರತನಾಟ್ಯ ಕಾರ್ಯಕ್ರಮವು ದಿನಾಂಕ 12 ಜುಲೈ 2025ರಂದು ಮಂಗಳೂರಿನ ಪುರಭವನದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ವಿದ್ವಾನ್ ಬಾಳಂಭಟ್ ಮನೆತನದ ಡಾ. ಸತ್ಯಕೃಷ್ಣ ಭಟ್ “ಸಂಸ್ಕೃತ ಭಾಷೆ ಮತ್ತು ಭಾರತದ ಶ್ರೀಮಂತ ಸಂಸ್ಕೃತಿಯು ದೇಶವನ್ನು ವಿಶ್ವಗುರುವಿನ ಪಥದತ್ತ ಕೊಂಡೊಯ್ಯುವ ಪ್ರಮುಖ ಶಕ್ತಿ. ನಮ್ಮ ದೇಶದ ಸಂಸ್ಕೃತಿ, ನೃತ್ಯ ಪ್ರಕಾರ, ಸಂಗೀತ, ವೇದ, ಗುರುಪರಂಪರೆಯು ವಿಶ್ವವನ್ನೇ ಸೆಳೆಯುತ್ತಿದೆ. ಶಾಸ್ತ್ರಗಳ ತತ್ವಗಳನ್ನು ಸಂಪೂರ್ಣವಾಗಿ ಅರಿತು, ಅವುಗಳನ್ನು ಮೈಗೂಡಿಸಿಕೊಂಡು, ತನ್ನ ಶಿಷ್ಯನ ಏಳಿಗೆಗಾಗಿ ಅವುಗಳನ್ನು ಸಂಪೂರ್ಣವಾಗಿ ಧಾರೆ ಎರೆದು, ಶಿಷ್ಯನ ಏಳಿಗೆಗಾಗಿ ಹಗಲು – ಇರುಳು ಯಾರು ಶ್ರಮಿಸುತ್ತಾರೋ ಅವರು ನಿಜವಾದ ಗುರುಗಳು ಎಂದು ಶಾಸ್ತ್ರ ಹೇಳಿದೆ. ಅಂತಹ ಗುರು ಶಿಷ್ಯ ಪರಂಪರೆಯನ್ನು ಇಂದು ನಾವು ಭರತನಾಟ್ಯ ಕ್ಷೇತ್ರದಲ್ಲಿ ಕಾಣುತ್ತಿದ್ದೇವೆ. ಸರ್ವಶ್ರೇಷ್ಠ ಗುರು ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಭರತಾಂಜಲಿ ಸಂಸ್ಥೆಯು…
ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದರ ವತಿಯಿಂದ ದಿನಾಂಕ 13 ಜುಲೈ 2025ರಂದು ಮಂಗಳೂರಿನ ಸಂದೇಶ ಸಭಾಭವನದಲ್ಲಿ ಆಯೋಜಿಸಿದ ಕೊಂಕಣಿ ಕನ್ನಡ ಲಿಪಿಯ ಪ್ರಥಮ ಕಾದಂಬರಿ ‘ಆಂಜೆಲ್’ ಇದರ 75ನೇ ಸಂಭ್ರಮಾಚರಣೆ ಜರಗಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾದಂಬರಿಯ ಸ್ವರೂಪದ ಬಗ್ಗೆ ಮಾತಾನಾಡಿದ ಡಾ. ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ್ ಡಾ. ಗಣನಾಥ ಶೆಟ್ಟಿ ಎಕ್ಕಾರು “ಕಾದಂಬರಿ ಚರಿತ್ರೆ ಅಲ್ಲ, ಆದರೆ ಕಾದಂಬರಿಯಲ್ಲಿ ಚರಿತ್ರೆ ಇರಬಹುದು. ಕಾದಂಬರಿ ಸವಿಸ್ತಾರವಾಗಿ ಜೀವನವನ್ನು ವಿಶ್ಲೇಷಣೆ ಮಾಡಬಲ್ಲುದು. ಆಂಜೆಲ್ 75 ವರ್ಷಗಳ ಹಿಂದಿನ ಜನಜೀವನವನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದೆ. ಕೊಂಕಣಿ ಅಕಾಡೆಮಿ ಒಂದು ಔಚಿತ್ಯಪೂರ್ಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದರಿಂದ ಮುಂದೆ ಸಾಹಿತ್ಯ ರಚಿಸುವವರಿಗೆ ಪ್ರೇರಣೆ ದೊರೆಯಲಿದೆ. ಅಕಾಡೆಮಿ ಸಾಹಿತ್ಯಾಸಕ್ತ ಯುವಜನತೆ ಹಾಗೂ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಕ್ರಮ ವಹಿಸಿದರೆ ಈ ಪರಂಪರೆ ಮುಂದುವರಿಯಲಿದೆ.” ಎಂದು ಅಭಿಪ್ರಾಯಪಟ್ಟರು. ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ…
ತೆಕ್ಕಟ್ಟೆ: ಶ್ರೀ ಕೈಲಾಸ ಕಲಾಕ್ಷೇತ್ರ ಟ್ರಸ್ಟ್ (ರಿ.) ತೆಕ್ಕಟ್ಟೆ ಆಶ್ರಯದಲ್ಲಿ ನಡೆಯುವ ವು ದಿನಾಂಕ 13 ಜುಲೈ 2025ರಂದು ತೆಕ್ಕಟ್ಟೆ ಹಯಗ್ರೀವದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಯಕ್ಷಗುರು ಕೃಷ್ಣಯ್ಯ ಆಚಾರ್ ಬಿದ್ಕಲ್ಕಟ್ಟೆ ಇವರು ಸಂಗೀತ ಗುರು ಶಾರದ ಹೊಳ್ಳ ಇವರನ್ನು ಗೌರವಿಸಿ ಮಾತನಾಡಿ “ಸಂಗೀತ ಕ್ಷೇತ್ರದ ಜ್ಞಾನಗಳು ಮಾನವನ ಬದುಕಿಗೆ ತೀರ ಅಗತ್ಯ. ಗುರುವಿನ ಗುಲಾಮನಾಗದೇ ಮುಕುತಿ ಇಲ್ಲ ಎಂದು ದಾಸರೇ ಉಲ್ಲೇಖಿಸಿದ್ದಾರೆ. ಮೊದಲು ಗುರುವಿನ ನಿರ್ದೇಶನಕ್ಕೊಳಪಡಬೇಕು. ಆಗಲೇ ಸಂಗೀತ ಅಭ್ಯಾಸಕ್ಕೆ ಪರಿಪೂರ್ಣತೆ ಸಾಧ್ಯ. ಗುರು ತಮ್ಮ ಅಮೂಲ್ಯ ಸಮಯವನ್ನು, ಕಲಿತ ಕಲೆಯನ್ನು ಕಲಿಸುವುದಕ್ಕಾಗಿ ಮೀಸಲಿಡುತ್ತಾರೆ. ಎಲ್ಲವೂ ಮೊಬೈಲ್ನಿಂದ ಸಾಧ್ಯವಿಲ್ಲ. ಆನ್ಲೈನ್ನಲ್ಲಿ ಕಲಿಕೆ ಪರಿಪೂರ್ಣತೆಯನ್ನು ಸಾಧಿಸುವುದಕ್ಕೆ ಸಾಧ್ಯವಿಲ್ಲ. ಗುರುವಿನ ಮಹತ್ವ ತಿಳಿಯಲೂ ಸಾಧ್ಯವಿಲ್ಲ” ಎಂದರು. . ರು ಶಾರದ ವಿ. ಹೊಳ್ಳ ಇವರನ್ನು ಶಿಷ್ಯರೊಂದಿಗೆ ಗೌರವಿಸಿ ಅಭಿನಂದನೆ ಸಲ್ಲಿಸಿದರು. ರಂಗ ನಿರ್ದೇಶಕಿ ಸುಧಾ ಮಣೂರು, ಪಾರ್ವತಿ ಮೈಯ್ಯ, ಭಾಗ್ಯಲಕ್ಷ್ಮೀ ವೈದ್ಯ, ರಾಹುಲ್ ಕುಂದರ್ ಕೋಡಿ, ಸುಕುಮಾರ ಶೆಟ್ಟಿ ಕಮಲಶಿಲೆ ಉಪಸ್ಥಿತರಿದ್ದರು.…