Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ದ. ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಎಸ್. ಡಿ. ಎಂ. ಕಾನೂನು ಮಹಾವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದಲ್ಲಿ ‘ನೀವೂ ಸಾಹಿತಿಗಳಾಗಬೇಕೆ?’ ವಿಶೇಷ ಉಪನ್ಯಾಸ ಕಾರ್ಯಕ್ರಮ ದಿನಾಂಕ 04 ಏಪ್ರಿಲ್ 2025ರ ಶುಕ್ರವಾರದಂದು ನಡೆಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿಲು ಆಗಮಿಸಿದ ಸಾಹಿತಿ ಹಾಗೂ ವಿಶ್ರಾಂತ ಪ್ರಾಧ್ಯಾಪಿಕೆ ಡಾ. ಮೀನಾಕ್ಷಿ ರಾಮಚಂದ್ರ ಮಾತನಾಡಿ “ಗೀಚಿದ್ದೆಲ್ಲವೂ ಸಾಹಿತ್ಯವಾಗಲಾರದು. ಅನುಭವಗಳು ಮೂರ್ತ ರೂಪಗೊಂಡಾಗ ಸಾಹಿತ್ಯ ರಚನೆಯಗುತ್ತದೆ. ಸಾಹಿತಿಯಾಗಲು ಸಂವೇದನೆ ಅತೀ ಮುಖ್ಯ. ಹಾಗೂ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು” ಎಂದರು. ಕ. ಸಾ. ಪ. ಜಿಲ್ಲಾಧ್ಯಕ್ಷ ಡಾ. ಎಂ. ಪಿ. ಶ್ರೀನಾಥ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಹ ಸಂಯೋಜಕರಾದ ಡಾ. ಡಿಂಪಲ್ ಮೇಸ್ತ, ಅಪೂರ್ವ ಶೆಟ್ಟಿ, ವಿದ್ಯಾರ್ಥಿ ಸಂಯೋಜಕ ತೇಜಸ್ ಗೋಪಾಲ ಪೂಜಾರಿ ಉಪಸ್ಥಿತರಿದ್ದರು. ದ. ಕ. ಜಿಲ್ಲಾ ಕ. ಸಾ. ಪ. ಸಂಘಟನಾ ಕಾಯದರ್ಶಿ ಹಾಗೂ ಕಾರ್ಯಕ್ರಮ ಸಂಯೋಜಕ ಪುಷ್ಪರಾಜ್ ಕೆ. ಸ್ವಾಗತಿಸಿ, ಕಾನೂನು ವಿದ್ಯಾರ್ಥಿಗಳಾದ ಸ್ವಾತಿ ಶೆಟ್ಟಿ…
ಉಡುಪಿ : ಖ್ಯಾತ ವಿಮರ್ಶಕ ಪ್ರೊ. ವಿ.ಎಂ. ಇನಾಂದಾರ್ ಇವರ ನೆನಪಿನಲ್ಲಿ ನೀಡುವ ‘ಇನಾಂದಾರ್ ಪ್ರಶಸ್ತಿ’ಗೆ ಖ್ಯಾತ ಕವಿ, ನಾಟಕಕಾರ ಹಾಗೂ ರಂಗನಿರ್ದೇಶಕರಾದ ರಘುನಂದನ ಅವರ ‘ತುಯ್ತವೆಲ್ಲ ನವ್ಯದತ್ತ, ಅಂದತ್ತರಉಯ್ಯಾಲೆ ಮತ್ತು ಅದರ ಸುತ್ತ’ ವಿಮರ್ಶಾ ಕೃತಿಯು 2024ರ ಸಾಲಿಗೆ ಆಯ್ಕೆಯಾಗಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ತಿಳಿಸಿದ್ದಾರೆ. ಪ್ರಶಸ್ತಿಯನ್ನು ದಿನಾಂಕ 23 ಏಪ್ರಿಲ್ 2025ರಂದು ನಡೆಯುವ ಎಂ.ಜಿ.ಎಂ. ಕಾಲೇಜಿನ ವಾರ್ಷಿಕ ಮುದ್ದಣ ಸಾಹಿತ್ಯೋತ್ಸವದ ಸಂದರ್ಭದಲ್ಲಿ ನೀಡಿ ಗೌರವಿಸಲಾಗುತ್ತದೆ. ರಘುನಂದನ ಅವರು ವೃತ್ತಿ ನಿರತ ರಂಗ ನಿರ್ದೇಶಕರು, ರಂಗ ಕಲೆಯ ಅಧ್ಯಾಪಕರು, ಕವಿ ಹಾಗೂ ನಾಟಕಕಾರರು. ಅವರು ಮೈಸೂರಿನ ರಂಗಾಯಣ ಮತ್ತು ನೀನಾಸಂ ಸಂಸ್ಥೆಯಲ್ಲಿ ತೊಡಗಿಸಿಕೊಂಡವರು. ಇವರ ಪದ್ಯಗಳು, ಗದ್ಯಲೇಖನಗಳು ನಾಡಿನ ಹಲವಾರು ಪತ್ರಿಕೆಗಳಲ್ಲಿ, ಅಂತರ್ಜಾಲತಾಣಗಳಲ್ಲಿ ಪ್ರಕಟವಾಗಿವೆ. ಇವರ ಕವನ ಸಂಕಲನ ‘ನಾನು ಸತ್ತಮೇಲೆ’ ಈಗಾಗಲೇ ಪ್ರಕಟವಾಗಿದೆ. ಇವರಿಗೆ ಪು.ತಿ.ನ.ಕಾವ್ಯ-ನಾಟಕ ಪುರಸ್ಕಾರ ಸಂದಿದೆ. ಅಲ್ಲದೆ ನೀನಾಸಂ ಪ್ರತಿಷ್ಠಾನ ನೀಡುವ ಬಿ.ವಿ.ಕಾರಂತ ಫೆಲೋಶಿಪ್…
ಬೆಂಗಳೂರು : ಯಕ್ಷದೇಗುಲ ಇದರ ವತಿಯಿಂದ ಯಕ್ಷ ಪಯಣದ ಎರಡನೇ ಕಾರ್ಯಕ್ರಮವು ದಿನಾಂಕ 06 ಏಪ್ರಿಲ್ 2025ರಂದು ಬೆಂಗಳೂರಿನ ತ್ಯಾಗರಾಜ ನಗರದ ಯಕ್ಷದೇಗುಲದ ಸಭಾಂಗಣದಲ್ಲಿ ನಡೆಯಿತು. ವಿದ್ಯಾರ್ಥಿಗಳಿಂದ ಕೋಡಂಗಿ ನೃತ್ಯ, ಬಾಲಗೋಪಾಲ, ಪೀಠಿಕಾ ಸ್ತ್ರೀ ವೇಷ ಮತ್ತು ಕಂಸವಧೆಯ ಒಂದು ಸನ್ನಿವೇಶವನ್ನು ಪ್ರದರ್ಶಿಸಲಾಯಿತು. ಅಂದಿನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಫಾನ್ಸ್ ನ ಫ್ರೆಂಚ್ ಬರಹಗಾರ ಮತ್ತು ಸಾಂಸ್ಕೃತಿಕ ಪ್ರತಿಕೋದ್ಯಮರಾದ ಫಿಲಿಪ್ ಪಾಟೆಕ್‌ರವರು ಭಾಗವಹಿಸಿದರು. ಹಾಗೇ ಮಾಜಿ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಸದಸ್ಯರಾದ ಕೆ. ಮೋಹನ್, ಯಕ್ಷಗಾನ ಗುರುಗಳಾದ ಕೋಟ ಸುದರ್ಶನ ಉರಾಳ ಮತ್ತು ಪಿಯಾಂಕ ಕೆ. ಮೋಹನ್‌ರವರು ಭಾಗವಹಿಸಿದರು.
ಮಂಗಳೂರು : ಸನಾತನ ನಾಟ್ಯಾಲಯ ಇದರ ವತಿಯಿಂದ ‘ಸನಾತನ ನೃತ್ಯ ಪ್ರೇರಣಾ’ ಮತ್ತು ‘ಭರತನಾಟ್ಯ’ ಕಾರ್ಯಕ್ರಮವು ದಿನಾಂಕ 06 ಏಪ್ರಿಲ್ 2025ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ವಿದ್ವತ್ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿನಿಯರನ್ನು ಗೌರವಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ “ನೃತ್ಯಶಿಕ್ಷಣವು ಕೇವಲ ಒಂದು ಕಲಾಶಿಕ್ಷಣವಷ್ಟೇ ಆಗಿರದೇ, ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗುತ್ತದೆ. ಜೀವನ, ಸಂಸ್ಕಾರ, ದೇಶ ಪ್ರೇಮ, ಕೌಟುಂಬಿಕ ಮೌಲ್ಯಗಳನ್ನು ಕಲಿಸಿಕೊಡುವ ಸನಾತನ ನಾಟ್ಯಾಲಯ ಸಂಸ್ಥೆಯು ನೃತ್ಯದ ಮೂಲಕ ಯಾವೆಲ್ಲ ವಿಚಾರಗಳನ್ನು ಮಕ್ಕಳಿಗೆ ಕಲಿಸಬಹುದು ಎಂಬುದನ್ನು ವಿಸ್ತಾರವಾಗಿ ತೋರಿಸಿಕೊಟ್ಟಿದೆ” ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಮಾತನಾಡಿದ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಎಂ. ಅರುಣ್ ಐತಾಳ್ ಇವರು ವಿದ್ವತ್ ಪರೀಕ್ಷೆ ತೇರ್ಗಡೆಯಾದ ವಿದ್ಯಾರ್ಥಿನಿಯರನ್ನು ಶ್ಲಾಘಿಸಿದರು. ವಿದ್ವತ್ ಪರೀಕ್ಷೆಯಲ್ಲಿ ತೇರ್ಗಡೆಯಾದ ಸಿಂಚನಾ ಎಸ್. ಕುಲಾಲ್, ವಿಜಿತಾ ಕೆ. ಶೆಟ್ಟಿ, ವೈಷ್ಣವಿ ತಂತ್ರಿ, ಜಾಹ್ನವಿ ಎಸ್. ಶೇಖ, ಧೃತಿ ಶೇರಿಗಾರ್, ಸಂಹಿತ ಕೊಂಚಾಡಿ, ಸ್ನೇಹ…
ಮಂಗಳೂರು : ನಾಟ್ಯಾಲಯ ಉರ್ವ (ರಿ.) ಮಂಗಳೂರು ಇವರು ಪ್ರಸ್ತುತ ಪಡಿಸುವ ಕೀರ್ತಿಶೇಷ ಕರ್ನಾಟಕ ಕಲಾಶ್ರೀ ವಿದುಷಿ ಕಮಲ ಭಟ್ ಸಂಸ್ಮರಣೆಯೊಂದಿಗೆ ‘ಕಮಲಾಂಜಲಿ’ ಕಾರ್ಯಕ್ರಮವನ್ನು ದಿನಾಂಕ 10 ಮತ್ತು 12 ಏಪ್ರಿಲ್ 2025ರಂದು ಸಂಜೆ 5-00 ಗಂಟೆಗೆ ಮಂಗಳೂರಿನ ಕರಂಗಲ್ಪಾಡಿ ಸುಬ್ರಹ್ಮಣ್ಯ ಸಭಾದಲ್ಲಿ ಆಯೋಜಿಸಲಾಗಿದೆ. ದಿನಾಂಕ 10 ಏಪ್ರಿಲ್ 2025ರಂದು ಗುರು ಶ್ರೀ ಉಳ್ಳಾಲ್ ಮೋಹನ್ ಕುಮಾರ್ ಇವರು ಈ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದು, ಭರತಾಂಜಲಿ (ರಿ.) ಕೊಟ್ಟಾರ ಇದರ ನಿರ್ದೇಶಕರಾದ ಗುರು ಶ್ರೀ ಶ್ರೀಧರ ಹೊಳ್ಳ ಮತ್ತು ವಿದುಷಿ ಪ್ರತಿಮಾ ಶ್ರೀಧರ ಹಾಗೂ ಕಲಾ ಪೋಷಕರಾದ ಮಾಧವ ಎಂ.ಎಸ್. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ದಿನಾಂಕ 12 ಏಪ್ರಿಲ್ 2025ರಂದು ನಡೆಯಲಿರುವ ಕಾರ್ಯಕ್ರಮದ ಉದ್ಘಾಟನೆಯನ್ನು ನಾಟ್ಯನಿಕೇತನದ ಗುರು ವಿದುಷಿ ರಾಜಶ್ರೀ ಉಳ್ಳಾಲ್ ಇವರು ನೆರವೇರಿಸಲಿದ್ದು, ಸನಾತನ ನಾಟ್ಯಾಲಯದ ಗುರು ವಿದುಷಿ ಶಾರದಾಮಣಿ ಶೇಖರ್ ಮತ್ತು ಪಿ.ಡಿ.ಸಿ. ಶ್ರೀಮತಿ ಚಿತ್ರಾ ವಿ. ರಾವ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ…
ಕಾಸರಗೋಡು : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ಶ್ರೀ ರಾಮನವಮಿಯ ಪ್ರಯುಕ್ತ ಕಾಸರಗೋಡು ಸಮೀಪದ ಗುಡ್ಡೆ ಶ್ರೀ ಮಹಾಲಿಂಗೇಶ್ವರ ದೇವಳದ ಬಳಿ ಇರುವ ಶ್ರೀ ಮಹಾಬಲ ಶೆಟ್ಟಿ (ದೇವಕೀತನಯ) ಇವರ ಮನೆ ‘ಶ್ರೀ ರಾಮ ಧಾಮ’ದಲ್ಲಿ ದಿನಾಂಕ 06 ಏಪ್ರಿಲ್ 2025ರಂದು ಗಣೇಶ್ ಕೊಲೆಕ್ಕಾಡಿ ವಿರಚಿತ ‘ಸಮರ ಸೌಗಂಧಿಕಾ’ ಎಂಬ ಆಖ್ಯಾನದೊಂದಿಗೆ ತಾಳಮದ್ದಳೆ ಕಾರ್ಯಕ್ರಮ ಜರಗಿತು. ಹಿಮ್ಮೇಳದಲ್ಲಿ ಭಾಗವತರಾಗಿ ಭವ್ಯಶ್ರೀ ಕುಲ್ಕುಂದ ಹಾಗೂ ಚೆಂಡೆ, ಮದ್ದಲೆಗಳಲ್ಲಿ ಮುರಳೀ ಮಾಧವ ಮಧೂರು, ಗೋಪಾಲಕೃಷ್ಣ ಮಧೂರು ಸಹಕರಿಸಿದರು. ಮುಮ್ಮೇಳದಲ್ಲಿ ಶುಭಾ ಅಡಿಗ (ಭೀಮ), ಕಿಶೋರಿ ದುಗ್ಗಪ್ಪ ನಡುಗಲ್ಲು (ದ್ರೌಪದಿ), ಹರಿಣಾಕ್ಷಿ ಜೆ. ಶೆಟ್ಟಿ (ಹನೂಮಂತ), ಶುಭಾ ಗಣೇಶ್ (ಕುಬೇರ) ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ಹರಿದಾಸ ಶ್ರೀ ಮಹಾಬಲ ಶೆಟ್ಟಿ ಕೂಡ್ಲು ವಂದಿಸಿದರು. ಕೂಡ್ಲು ಕುಟುಂಬಸ್ಥರು ಕಲಾವಿದರಿಗೆ ಶಾಲು ಹೊದಿಸಿ ಗೌರವಿಸಿದರು.
ಬೆಂಗಳೂರು : ಕರ್ನಾಟಕ ಜಾನಪದ ಅಕಾಡೆಮಿಯು ಡಾ. ಕೆ. ಚಿನ್ನಪ್ಪ ಗೌಡರು ಜಾನಪದ ಕ್ಷೇತ್ರದಲ್ಲಿ ಸಲ್ಲಿಸಿರುವ ಸಾಧನೆಯನ್ನು ಗುರುತಿಸಿ 2023ನೇ ಸಾಲಿನ ಡಾ. ಜೀ.ಶಂ.ಪ. ತಜ್ಞ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಬೀದರ್‌ನಲ್ಲಿ ನಡೆದಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಚಿನ್ನಪ್ಪ ಗೌಡರಿಗೆ ಭಾಗವಹಿಸಲು ಅಸಾಧ್ಯವಾಗಿದ್ದ ಕಾರಣ ಅವರನ್ನು ಬೆಂಗಳೂರಿನ ಅಕಾಡೆಮಿಯ ಕಚೇರಿಯಲ್ಲಿ ದಿನಾಂಕ 03 ಏಪ್ರಿಲ್ 2025ರಂದು ಏರ್ಪಡಿಸಿದ್ದ ಸಮಾರಂಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಿದರು. ಬಳಿಕ ಮಾತನಾಡಿದ ಅವರು, “ಭೂತಾರಾಧನೆಯಂತಹ ಜನಪದ ಧಾರ್ಮಿಕ ರಂಗಭೂಮಿಯನ್ನು ಮೊದಲ ಬಾರಿಗೆ ಸಮಗ್ರ ಅಧ್ಯಯನ ನಡೆಸಿದ ಚಿನ್ನಪ್ಪ ಗೌಡರು ಭೂತಾರಾಧನೆಯ ಪ್ರಭೇದವಾದ ಜಾಲಾಟವನ್ನು ಬೆಳಕಿಗೆ ತಂದು ಅದರ ವೈಶಿಷ್ಟ್ಯಗಳನ್ನು ತಿಳಿಸಿದವರು. ಅವರ ಅಧ್ಯಯನ ಒಂದು ಮಾದರಿ ಅಧ್ಯಯನ. ತುಳು ಜಾನಪದದ ಪ್ರಮುಖ ಪ್ರಕಾರಗಳ ಕುರಿತಂತೆ ಅಧ್ಯಯನ ನಡೆಸಿರುವ ಡಾ. ಗೌಡರು ಪಾಡ್ಡನಗಳು, ಸಿರಿ ಸಂಧಿ, ಕಬಿತೆಗಳು ಮತ್ತು ಅಜ್ಜಿಕತೆಗಳಿಗೆ ಹೊಸ ವ್ಯಾಖ್ಯಾನಗಳನ್ನು ನೀಡಿದ್ದಾರೆ. ಸಂಶೋಧನೆ, ಅಂತಾರಾಷ್ಟ್ರೀಯ…
ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡೆಮಿ ಮತ್ತು ನಾಗರಿಕ ಸಲಹಾ ಸಮಿತಿಗಳ ಸಹಭಾಗಿತ್ವದಲ್ಲಿ ಸುರತ್ಕಲ್ ಮೇಲುಸೇತುವೆಯ ತಳಭಾಗದಲ್ಲಿಯ ಎಂ.ಸಿ.ಎಫ್. ನಾಗರಿಕ ಸಲಹಾ ಸಮಿತಿ ಸಾಂಸ್ಕತಿಕ ವೇದಿಕೆಯಲ್ಲಿ ಉದಯರಾಗ ಸರಣಿ ಕಾರ್ಯಕ್ರಮದ ‘ಉದಯರಾಗ 61’ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯು ದಿನಾಂಕ 06 ಏಪ್ರಿಲ್ 2025ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಏಷ್ಯನ್ ಪೇಂಟ್ಸ್ ನ ನಿವೃತ್ತ ಅಧಿಕಾರಿ ಹಾಗೂ ತರಬೇತುದಾರ ಎ.ಕೆ. ಅಯ್ಯ “ನಮ್ಮ ರಾಷ್ಟ್ರದ ಸಂಸ್ಕೃತಿಯ ಪ್ರತೀಕವಾಗಿರುವ ಶಾಸ್ತ್ರೀಯ ಸಂಗೀತ ಮತ್ತು ನೃತ್ಯ ಕಲೆಗಳ ಕುರಿತು ಬದ್ಧತೆ ಹಾಗೂ ಆಸಕ್ತಿ ಅಗತ್ಯ. ಬದುಕಿನ ಚೆಲುವಿಗೆ ಮತ್ತು ನೆಮ್ಮದಿಗೆ ಸಂಗೀತ ಸಹಾಯಕವಾಗಿದ್ದು, ಯುವ ಕಲಾವಿದರಿಗೆ ಪ್ರೋತ್ಸಾಹ ಅಗತ್ಯವಿದೆ. ಸಂಘಟಿತ ಪ್ರಯತ್ನದ ಮೂಲಕ ಯುವ ಕಲಾವಿದರಿಗೆ ಪ್ರೋತ್ಸಾಹ ನೀಡಿ ಪ್ರತಿಭಾ ಪ್ರದರ್ಶನದ ಅವಕಾಶ ನೀಡಬೇಕು” ಎಂದು ನುಡಿದರು. ಯುವ ಕಲಾವಿದ ಆತ್ರೇಯ ಗಂಗಾಧರ ಹೊಸಬೆಟ್ಟು ಇವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಿತು. ಹೇಮಂತ್ ಭಾಗವತ್ ಮೂಲ್ಕಿ ಹಾರ್ಮೋನಿಯಂ…
ಬೆಂಗಳೂರು : ಶ್ರೀ ಮಾರಿಕಾಂಬಾ ನೃತ್ಯ ಕಲಾಕೇಂದ್ರ (ರಿ.) ಇದರ 9ನೇ ವಾರ್ಷಿಕೋತ್ಸವ ಪ್ರಯುಕ್ತ ಯುಗಾದಿ ನೃತ್ಯೋತ್ಸವ ಕಾರ್ಯಕ್ರಮವು ದಿನಾಂಕ 04 ಏಪ್ರಿಲ್ 2025ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಸಚಿವರಾದ ಸನ್ಮಾನ್ಯ ಶ್ರೀ ರಾಮಲಿಂಗ ರೆಡ್ಡಿ ಉದ್ಘಾಟಿಸಿದರು. ಅಧ್ಯಕ್ಷರಾದ ಶ್ರೀ ಎನ್. ಸಂತೋಷ್ ಹೆಗಡೆ, ಮುಖ್ಯ ಅತಿಥಿಗಳಾಗಿ ಶ್ರೀ ವಿಶ್ವನಾಥ ಪ್ರಸಾದ್, ಮಂಜುನಾಥ ಪುತ್ತೂರು, ಮಂಜುಶ್ರೀ ಇವರು ಪಾಲ್ಗೊಂಡರು. ನೃತ್ಯ ಶಾಲೆಯ ಸಂಸ್ಥಾಪಕಿಯಾದ ವಿದುಷಿ ಸ್ಮಿತಾ ಪ್ರಕಾಶ್ ಇವರ ನಿರ್ದೇಶನದಲ್ಲಿ ಶಾಲೆಯ 80ಕ್ಕೂ ಅಧಿಕ ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮ ಹಾಗೂ ‘ವೀರ ಸನ್ಯಾಸ’ ಎಂಬ ವಿಶೇಷ ನೃತ್ಯ ರೂಪಕ ಪ್ರದರ್ಶನಗೊಂಡಿತು. ನೃತ್ಯ ಶಾಲೆಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು. ವಿದ್ವಾನ್ ಶ್ರೀ ರೋಹಿತ್ ಭಟ್ ಉಪ್ಪೂರು ಇವರ ತಂಡದ ಅದ್ಭುತ ಹಿಮ್ಮೇಳದಲ್ಲಿ ನೃತ್ಯ ಪ್ರದರ್ಶನ ಮೂಡಿಬಂದವು.
ಕಾಸರಗೋಡು : ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿಯ ಸಹಕಾರದಲ್ಲಿ, ಕಾಸರಗೋಡು ಜಿಲ್ಲಾ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಕಾಸರಗೋಡು ಜಿಲ್ಲಾ ಮಟ್ಟದ ‘ಕನ್ನಡ ಚುಟುಕು ರಚನಾ ಸ್ಪರ್ಧೆ -2025’ ನಡೆಯಲಿದೆ. ಚುಟುಕು ವಿಷಯ ನಿರ್ಬಂಧ ಇಲ್ಲ. ಒಬ್ಬರು ನಾಲ್ಕು ಸಾಲಿನ ಉತ್ತಮ ಎನಿಸುವ ಐದು ಚುಟುಕುಗಳನ್ನು ಕಳುಹಿಸಬೇಕು. ಸ್ಪರ್ಧಾ ವಿಜೇತರಿಗೆ ‘ಕಾಸರಗೋಡು ಜಿಲ್ಲಾ ಚುಟುಕು ಕಾವ್ಯ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು. ಸಂಘಟಕರ ತೀರ್ಮಾನವೇ ಅಂತಿಮ. ಆಸಕ್ತರು ದಿನಾಂಕ 15 ಏಪ್ರಿಲ್ 2025ರ ಮೊದಲು 9746093552 ಅಥವಾ 9633073400 ಸಂಖ್ಯೆಗೆ ವಾಟ್ಸಪ್ ಮೂಲಕ ಚುಟುಕುಗಳನ್ನು ಕಳುಹಿಸಬಹುದು. ಚುಟುಕುಗಳ ಜತೆಗೆ ಸ್ಪಷ್ಟ ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ಬರೆಯಬೇಕು ಎಂದು ಕಾಸರಗೋಡು ಜಿಲ್ಲಾ ಘಟಕದ ಅಧ್ಯಕ್ಷ ವಿರಾಜ್ ಅಡೂರು ತಿಳಿಸಿದ್ದಾರೆ.