ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಂಸ್ಥೆ ಸ್ವಸ್ತಿಕ್ ಕಲಾ ಕೇಂದ್ರ (ರಿ.) ಜಲ್ಲಿಗುಡ್ಡೆ ಮಂಗಳೂರು ಇವರ ವತಿಯಿಂದ ಮತ್ತು ದಿ. ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ (ರಿ.) ಪಡೀಲ್ ಇವರ ಸಹಭಾಗಿತ್ವದಲ್ಲಿ ಯಕ್ಷರಂಗದ ಧೀಮಂತ ಪ್ರತಿಭೆ ‘ದಿ. ಬಾಬು ಕುಡ್ತಡ್ಕ ಪ್ರಶಸ್ತಿ’ ಪ್ರದಾನ ಸಮಾರಂಭವನ್ನು ದಿನಾಂಕ 29 ಸೆಪ್ಟೆಂಬರ್ 2024ರಂದು ಸಂಜೆ 4-00 ಗಂಟೆಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಮಹಾನಗರ ಪಾಲಿಕೆಯ ಸದಸ್ಯರಾದ ಶ್ರೀ ಕೆ. ಅಶ್ರಫ್ ಇವರ ಅಧ್ಯಕ್ಷತೆ ಹಾಗೂ ದಿ. ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಅಣ್ಣಯ್ಯ ಕುಲಾಲ್ ಮತ್ತು ಆತ್ಮಶಕ್ತಿ ವಿವಿದೋದ್ದೇಶ ಸಹಕಾರಿ ಸಂಘ (ರಿ.) ಇದರ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಬೋಳಾರ್ ಇವರುಗಳ ಗೌರವ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಯಕ್ಷರಂಗದ ಹಿರಿಯ ಸಾಧಕ ಶ್ರೀ ಎಂ.ಕೆ. ರಮೇಶ್ ಆಚಾರ್ಯ ಇವರಿಗೆ 2024-25ರ ಪ್ರತಿಷ್ಠಿತ ‘ಬಾಬು ಕುಡ್ತಡ್ಕ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಪ್ರಮೀತ ಕಲಾವಿದರು ಇವರ ತಂಡದವರಿಂದ ವಸಂತ್ ವಿ. ಅಮೀನ್ ಇವರ ನಿರ್ದೇಶನದಲ್ಲಿ ‘ಎಂಚಿತ್ತಿನಾಯೆ ಎಂಚಾಯೆ ..?’ ಹಾಸ್ಯಮಯ ತುಳು ನಾಟಕ ಪ್ರದರ್ಶನ ನಡೆಯಲಿದೆ.