ತುಮಕೂರು : ತುಮಕೂರಿನ ‘ವೀಚಿ ಸಾಹಿತ್ಯ ಪ್ರತಿಷ್ಠಾನ’ದ ವತಿಯಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತುಮಕೂರು ಇದರ ಸಹಯೋಗದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 16-06-2024ರಂದು ತುಮಕೂರಿನ ಅಮಾನಿಕೆರೆ ರಸ್ತೆ, ಕನ್ನಡ ಭವನದಲ್ಲಿ ನಡೆಯಲಿದೆ.
ಬೆಂಗಳೂರಿನ ಕೇಂದ್ರ ವಲಯದ ಮಾನ್ಯ ಪೋಲೀಸ್ ಮಹಾನಿರ್ದೇಶಕರಾದ ಡಾ. ಬಿ.ಆರ್. ರವಿಕಾಂತೇ ಗೌಡ ಇವರು ಈ ಕಾರ್ಯಕ್ರಮ ಉದ್ಘಾಟನೆ ಹಾಗೂ ಪ್ರಶಸ್ತಿ ಪ್ರದಾನ ಮಾಡಲಿದ್ದು, ವೀಚಿ ಸಾಹಿತ್ಯ ಪ್ರತಿಷ್ಠಾನದ ಕಾರ್ಯಾಧ್ಯಕ್ಷರಾದ ಶ್ರೀ ಎಸ್. ನಾಗಣ್ಣ ಇವರು ಅಧ್ಯಕ್ಷತೆ ವಹಿಸಲಿರುವರು. ಕನ್ನಡ ಪುಸ್ತಕ ಪ್ರಾಧಿಕಾರದ ಲೇಖಕರು ಮತ್ತು ಮಾಜಿ ಅಧ್ಯಕ್ಷರಾದ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಇವರು ಕವಿ ವೀಚಿಯವರ ಕುರಿತು ಮಾತನಾಡಲಿದ್ದಾರೆ.
ಪ್ರಶಸ್ತಿ ಪುರಸ್ಕೃತ ‘ವಿನೂತನ ಕಥನ ಕಾರಣ’ (ಸಾಹಿತ್ಯ ವಿಮರ್ಶೆ) ಕೃತಿಯ ಲೇಖಕರಾದ ಡಾ. ಬಿ. ಜನಾರ್ದನ ಭಟ್, ಪ್ರಶಸ್ತಿ ಪುರಸ್ಕೃತ ‘ಅರಸು ಕುರನ್ಗರಾಯ’ (ಸಂಶೋಧನೆ) ಕೃತಿಯ ಲೇಖಕರಾದ ಡಾ. ರವಿಕುಮಾರ್ ನೀಹ ಇವರಿಗೆ ‘ವೀಚಿ ಸಾಹಿತ್ಯ ಪ್ರಶಸ್ತಿ 2023’, ಪ್ರಶಸ್ತಿ ಪುರಸ್ಕೃತ ‘ಬುದ್ಧನ ಕಿವಿ’ (ಕತೆಗಳು) ಕೃತಿಯ ಲೇಖಕರಾದ ಶ್ರೀ ದಯಾನಂದ ಇವರಿಗೆ ‘ವೀಚಿ ಯುವ ಸಾಹಿತ್ಯ ಪ್ರಶಸ್ತಿ 2023’, ‘ವೀಚಿ ಜಾನಪದ ಪ್ರಶಸ್ತಿ’ ಪುರಸ್ಕೃತ ತತ್ವಪದ ಗಾಯಕರಾದ ಶ್ರೀ ಮರಿರಂಗಯ್ಯ ಬಿದಲೋಟಿ ಮತ್ತು ಕನಕ ಕಾಯಕ ಪ್ರಶಸ್ತಿ ಪುರಸ್ಕೃತ ಅಕ್ಷರ ವಿನ್ಯಾಸಕರಾದ ಶ್ರೀಮತಿ ಪಿ. ಉಮಾದೇವಿ ಇವರುಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.