ಬೆಂಗಳೂರು : ಕರ್ನಾಟಕ ನಾಟಕ ಅಕಾಡೆಮಿಯಿಂದ ರಂಗಭೂಮಿ ಕ್ಷೇತ್ರದಲ್ಲಿ ಗಣನೀಯ ಸೇವೆ ಮಾಡಿದವರಿಗೆ ನೀಡುವ ಜೀವಮಾನ ಸಾಧನೆ ಗೌರವ ಪ್ರಶಸ್ತಿಗೆ ನಟಿ ಉಮಾಶ್ರೀ, ನಾಟಕಕಾರರಾದ ಎಚ್. ಎಸ್. ಶಿವಪ್ರಕಾಶ್ ಮತ್ತು ಕೋಟಗಾನಹಳ್ಳಿ ರಾಮಯ್ಯ ಅವರು ಆಯ್ಕೆಯಾಗಿದ್ದಾರೆ.
08 ಆಗಸ್ಟ್ 2024ರ ಗುರುವಾರ ಮೂರು ವರ್ಷಗಳ ವಿವಿಧ ಪ್ರಶಸ್ತಿಗಳಿಗೆ ಆಯ್ಕೆಯಾದವರ ಹೆಸರು ಘೋಷಿಸಿದ ಅಕಾಡೆಮಿ ಅಧ್ಯಕ್ಷ ಕೆ. ವಿ. ನಾಗರಾಜಮೂರ್ತಿ, “ರಂಗಭೂಮಿ ಕ್ಷೇತ್ರದ ಸಾಧಕರಿಗೆ ಪ್ರತಿ ವರ್ಷ ಅಕಾಡೆಮಿಯಿಂದ ಪ್ರಶಸ್ತಿ ನೀಡಲಾಗುತ್ತದೆ. ಕಳೆದ ಎರಡು ಸಾಲುಗಳಲ್ಲಿ ಪ್ರಶಸ್ತಿ ನೀಡಿರಲಿಲ್ಲ. ಸದ್ಯ, 2022-23, 2023-24 ಮತ್ತು 2024-25ನೇ ಸಾಲಿಗೆ ಮೂವರಿಗೆ ಜೀವಮಾನ ಸಾಧನೆಗಾಗಿ ಗೌರವ ಪ್ರಶಸ್ತಿ, ತಲಾ 25ರಂತೆ ಒಟ್ಟು 75 ವಾರ್ಷಿಕ ಪ್ರಶಸ್ತಿ ಮತ್ತು 15 ದತ್ತಿನಿಧಿ ಪ್ರಶಸ್ತಿಗೆ ರಂಗ ಸಾಧಕರನ್ನು ಆಯ್ಕೆ ಮಾಡಲಾಗಿದೆ. ರಾಜ್ಯಾದ್ಯಂತ ವೃತ್ತಿ ರಂಗಭೂಮಿಯ 30ಕ್ಕೂ ಹೆಚ್ಚು ಕಲಾವಿದರಿಗೆ ವಾರ್ಷಿಕ ಮತ್ತು ದತ್ತಿ ಪ್ರಶಸ್ತಿ ನೀಡಲಾಗುತ್ತಿದೆ. ಎಲ್ಲಾ ಜಿಲ್ಲೆಗಳನ್ನು ಗಮನದಲ್ಲಿಟ್ಟುಕೊಂಡು ಸಾಮಾಜಿಕ ನ್ಯಾಯ ಮತ್ತು ಜಿಲ್ಲಾವಾರು ಅನ್ವಯವಾಗುವಂತೆ ಸಾಧಕರನ್ನು ಆಯ್ಕೆ ಮಾಡಿದ್ದು, ಈ ಸಾಲಿನಲ್ಲಿ ವಿಶೇಷವಾಗಿ ಯುವ ಮತ್ತು ಲೈಂಗಿಕ ಅಲ್ಪಸಂಖ್ಯಾತ ಕಲಾವಿದರನ್ನೂ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.” ಎಂದು ವಿವರಿಸಿದರು.
2022ನೇ ಸಾಲಿನ ಜೀವಮಾನ ಸಾಧನೆ ಗೌರವ ಪ್ರಶಸ್ತಿಗೆ ನಟಿ ಉಮಾಶ್ರೀ , 2023ನೇ ಸಾಲಿನ ಪ್ರಶಸ್ತಿಗೆ ನಾಟಕಕಾರ ಡಾ. ಎಚ್. ಎಸ್. ಶಿವಪ್ರಕಾಶ್ ಮತ್ತು 2024ನೇ ಸಾಲಿನ ಪ್ರಶಸ್ತಿಗೆ ಕೋಲಾರದ ನಾಟಕಕಾರ ಕೆ. ರಾಮಯ್ಯ ಆಯ್ಕೆಯಾಗಿದ್ದಾರೆ.
ವಾರ್ಷಿಕ ಪ್ರಶಸ್ತಿಗೆ ನಾಡಿನ ವಿವಿಧ ಜಿಲ್ಲೆಗಳಲ್ಲಿ ಅತ್ಯುತ್ತಮ ಕಲಾವಿದರ ಜತೆಗೆ ಈಗಾಗಲೇ ಸಾಂಸ್ಕೃತಿಕ ಕ್ಷೇತ್ರದಲ್ಲಿ ಹೆಸರು ಮಾಡಿರುವ, ಚಲನಚಿತ್ರ ಮತ್ತು ಕಿರುತೆರೆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಪ್ರಕಾಶ್ ರೈ, ಬಿ. ಸುರೇಶ್, ಅಚ್ಯುತ ಕುಮಾರ್, ರಮೇಶ್ ಪಂಡಿತ್ ಮತ್ತು ಮಕ್ಕಳ ರಂಗಭೂಮಿಯ ನಾಟಕಕಾರರಾದ ಡಾ. ಲಕ್ಷ್ಮೀಪತಿ ಕೋಲಾರ ಭಾಜನರಾಗಿದ್ದಾರೆ.
ಹೊರನಾಡ ಕಲಾವಿದರಲ್ಲಿ ಮುಂಬೈನ ಪ್ರಸಿದ್ದ ರಂಗ ನಿರ್ದೇಶಕಿಯಾಗಿರುವ ಕನ್ನಡತಿ ನಂದಿತಾ ಯಾದವ್ ಮತ್ತು ಪಾಂಡಿಚೇರಿ ವಿ. ವಿ. ಯ ರಂಗತಜ್ಞೆ ಹಾಗೂ ಪ್ರಾಧ್ಯಾಪಕಿ ಡಾ. ಪವಿತ್ರಾ ಆಯ್ಕೆಯಾಗಿದ್ದಾರೆ.
2022-23ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಅಚ್ಯುತ್ ಕುಮಾರ್, ಎಲ್. ಎಚ್. ರಂಗನಾಥ್, ಶಿವಣ್ಣ, ತುಮಕೂರಿನ ಎಸ್. ಎ. ಖಾನ್, ರಮೇಶ್ ಪಂಡಿತ್, ಆಶಾರಾಣಿ, ಆಡುಗೋಡಿ ಶ್ರೀನಿವಾಸ್, ಬೆಂಗಳೂರಿನ ಅನಿಲ್‌ಕುಮಾರ್, ಡಾ. ಲಕ್ಷ್ಮೀಪತಿ ಕೋಲಾರ, ಡಾ. ಬೇಲೂರು ರಘುನಂದನ್, ಹಾಸನದ ಗ್ಯಾರಂಟಿ ರಾಮಣ್ಣ, ಮೈಸೂರಿನ ನೂರ್ ಅಹಮದ್ ಶೇಖ್, ಮಂಡ್ಯದ ವೀರಭದ್ರಾಚಾರ್, ಚಿಕ್ಕಮಗಳೂರಿನ ರಮೇಶ್ ಬೇಗಾರ್, ಹುಬ್ಬಳ್ಳಿಯ ಆರ್.ಪ್ರಕಾಶ್, ಧಾರವಾಡದ ಶಂಕರ್ ಹಲಗತ್ತಿ, ಚಿತ್ರದುರ್ಗದ ಅಂಬಿಕಾ, ಬೆಳಗಾವಿಯ ಬಸವರಾಜ ಮುರುಗೋಡು, ವಿಜಯನಗರದ ಬಿ. ಎಂ. ಎಸ್. ಪ್ರಭು, ಉತ್ತರ ಕನ್ನಡದ ಮಂಜುನಾಥ ತಿಮ್ಮಣ್ಣ ಭಟ್, ದೊಡ್ಡ ಬಳ್ಳಾಪುರದ ಡಾ. ಕೆ. ಎಂ. ಕೃಷ್ಣಮೂರ್ತಿ, ಕೊಟ್ರಯ್ಯ ಹಿರೇಮಠ, ಕೊಪ್ಪಳದ ಗುರಯ್ಯ ಸ್ವಾಮಿ, ಬಾಗಲಕೋಟೆಯ ಗಂಗಮ್ಮ ಆರೇರ ಹಾಗೂ ಮುಂಬೈನ ನಂದಿತಾ ಯಾದವ್ ಆಯ್ಕೆಯಾಗಿದ್ದಾರೆ.
2023-24 ಸಾಲಿನ ಪ್ರಶಸ್ತಿಗೆ ಬಿ. ಸುರೇಶ್, ಜೆರ್ರಿ ಅನಂತರಾಮ್, ಮುರಡಯ್ಯ, ದೇವರಾಜ್ ದೇವನಹಳ್ಳಿ, ವೆಂಕಟೇಶ್ ಹಾಪ್‌ಕಾಮ್, ಎಂ. ಎ. ಜನಾರ್ಧನ್, ಬೆಂಗಳೂರಿನ ರಾಜಗುರು ಹೊಸಕೋಟೆ, ಬೆಂಗಳೂರು ಗ್ರಾಮಾಂತರದ ಆರ್. ಸಿ. ಉಮಾಶಂಕರ್, ಮಯ ಬ್ರಹ್ಮಾಚಾರ್, ಸತ್ಯನಾರಾಯಣ, ತುಮಕೂರಿನ ಚಿಕ್ಕ ಹನುಮಂತಯ್ಯ, ಮಹಾದೇವ್ ಕಂಬಾಗಿ, ವಿಜಯಪುರದ ಬಸವರಾಜ ಯಮನಪ್ಪ ಮಣ್ಣೂರ, ಧಾರವಾಡದ ರಜನಿ ಗರುಡ, ದಾವಣಗೆರೆಯ ಬಸವರಾಜ ನೀಲಗುಂದ, ರಾಮನಗರದ ಯ.ಮೃತ್ಯುಂಜಯ, ಪಾಂಡಿಚೇರಿಯ ಡಾ. ಪವಿತ್ರಾ, ಕುಷ್ಠಗಿಯ ಕೆ. ಹುಸೇನ್ ಸಾಬ್, ಮೈಸೂರಿನ ಪ್ರಸಾದ್ ಕುಂದೂರು, ಶಿವಮೊಗ್ಗದ ಕೆ. ಜಿ. ಮಹಾಬಲೇಶ್ವರ್, ಉ.ಕನ್ನಡದ ಸುರೇಶ್ ರಾಮಚಂದ್ರ, ಚಿಕ್ಕಬಳ್ಳಾಪುರದ ಗ. ನ. ಅಶ್ವತ್, ಬೆಳಗಾವಿಯ ನಾಗರಾಜ ಶಿವರುದ್ರಪ್ಪ ಕಮ್ಮಾರ, ಬಾಗಲಕೋಟೆಯ ಮಂಜುನಾಥ್ ಸಂಗನಾಳ, ಗದಗದ ಶೋಭಾ ರಾಘವೇಂದ್ರ ಆಯ್ಕೆಯಾಗಿದ್ದಾರೆ.
2024-25ನೇ ಸಾಲಿನ ಪ್ರಶಸ್ತಿಗೆ ಚೆನ್ನೈನ ಪ್ರಕಾಶ್ ರೈ, ಸಂಚಯ ಗಣೇಶ್, ಆರ್. ಶ್ರೀನಾಥ್, ಜಿ. ಮಲ್ಲಿಕಾರ್ಜುನ, ಕೋಟೆ ಅನಂತು ಮತ್ತು ಲೈಂಗಿಕ ಅಲ್ಪಸಂಖ್ಯಾತರಾದ ಬೆಂಗಳೂರಿನ ಚಾಂದಿನಿ, ಬೆಂಗಳೂರು ಗ್ರಾಮಾಂತರದ ರಂಗಸ್ವಾಮಿ, ಮೈಸೂರಿನ ಬಿ. ಎಸ್. ವಿದ್ಯಾರಣ್ಯ, ಚಿತ್ರದುರ್ಗದ ಚ್. ಎನ್. ದ್ಯಾಮೇಶ್, ಕೊಪ್ಪಳದ ತೋಟಪ್ಪ ಕಾಮನೂರು, ಶಿವಮೊಗ್ಗದ ಚಂದ್ರಶೇಖರ್ ಹೊನ್ನಾಳಿ, ತುಮಕೂರಿನ ಕೆ. ಪಿ. ಅಶ್ವತ್ ನಾರಾಯಣ್, ಅಬ್ರಾಹಿಂ ಡಿ.ಸಿಲ್ವಾ, ಚಾಮರಾಜನಗರದ ಚಂದ್ರಶೇಖರ್ ಆಚಾರ್, ಹಾವೇರಿಯ ಸಿದ್ದಪ್ಪ ರೊಟ್ಟಿ, ರಾಯಚೂರಿನ ರಾಯಪ್ಪ ಅನಂತಕಲ್, ಮಂಗಳೂರಿನ ವಸಂತ್ ಅಮೀನ್, ಗದಗದ ಚಂದ್ರಶೇಖರ್ ವಸ್ತ್ರದ, ಕೋಲಾರದ ಡಾ. ಮುನಿನಾರಾಯಣ, ರಾಮನಗರದ ಸಿದ್ದರಾಜು, ಬೆಳಗಾವಿಯ ಅಪ್ಪಣ್ಣ ರಾಮದುರ್ಗ, ಚಿಕ್ಕಮಗಳೂರಿನ ಶಶಿಧರ್, ಹುಬ್ಬಳ್ಳಿಯ ಮಾಲರಾಣಿ ಬೆಳವಣಕಿ, ಬಳ್ಳಾರಿಯ ರೇಣುಕಾ ಬಾವಳ್ಳಿ ಹಾಗೂ ಉತ್ತರ ಕನ್ನಡದ ಗಿರಿಜಾ ಸಿದ್ದಿ ಆಯ್ಕೆಯಾಗಿದ್ದಾರೆ.