ಮೈಸೂರು : ಆಯಾಮ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ವತಿಯಿಂದ ದಿನಾಂಕ 07 ಫೆಬ್ರವರಿ 2026ರಂದು ಮೈಸೂರಿನ ಕಲಾಮಂದಿರದಲ್ಲಿ ‘ಆಯಾಮೋತ್ಸವ – ಸಂಗೀತ, ನೃತ್ಯ, ನಾಟಕಗಳ ಉತ್ಸವ’ ಕಾರ್ಯಕ್ರಮವು ಉದ್ಘಾಟನೆಗೊಂಡಿತು.

ಈ ಕಾರ್ಯಕ್ರಮವನ್ನು ಉದ್ಘಾಟಸಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ವಿ.ಎಸ್. ಮಲ್ಲಿಕಾರ್ಜುನ ಸ್ವಾಮಿ “ಇಂದಿನ ಮೊಬೈಲ್ ಯುಗದಲ್ಲಿ ಮಕ್ಕಳಿಗೆ ಸಂಗೀತ, ನೃತ್ಯ, ನಾಟಕ ಸಾಹಿತ್ಯದ ಮೂಲಕ ಬೆಳವಣಿಗೆಗೆ ಸಹಕಾರಿಯಾಗಿರುವ ವಿದುಷಿ ಡಾ. ಶಾಂಭವಿ ಸ್ವಾಮಿ ಮತ್ತು ಆಯಾಮ ಸಂಸ್ಥೆಗೆ ಅಭಿನಂದನೆಗಳು. ಮಕ್ಕಳನ್ನೇ ಕೇಂದ್ರೀಕರಿಸಿ ನಡೆಯುತ್ತಿರುವ ಈ ಚಟುವಟಿಕೆಗಳು ಅವರಿಗಾಗಿ ಮಾತ್ರವಲ್ಲ ನಮಗಾಗಿಯೂ ಕೂಡ. ನಾವು ಯಾವ ಸಮಾಜವನ್ನು ನಮ್ಮಿಂದ ಪೂರ್ಣವಾಗಿ ಸುಸಂಸ್ಕೃತವಾಗಿ ಇರಲು ಆಗೋದಿಲ್ಲವೋ ಆ ಸಮಾಜದ ಭವಿಷ್ಯವನ್ನ ಇಂಥ ಕಲೆಗಳ ಮೂಲಕ ಪರಿಪೂರ್ಣವಾದ ಸಮಾಜವಾಗಿ ಎಲ್ಲರಿಗೂ ಶಾಂತಿ ಮತ್ತು ಸಹನೆ ಸಹಬಾಳ್ವೆಯನ್ನ ಒದಗಿಸುವಂತಹ ಸಮಾಜವನ್ನು ಕಟ್ಟುವ ದಿಕ್ಕಿನಲ್ಲಿ ಈ ಮಕ್ಕಳ ಮನಸ್ಸುಗಳು ತುಂಬ ನಿರ್ಮಲವಾಗಿ ಸಮಾಜದೊಂದಿಗೆ ಬೆರೆತುಕೊಳ್ಳಿ ಅಂತ ಆಶಿಸುತ್ತೇನೆ” ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಎಂ.ಡಿ. ಸುದರ್ಶನ್ ಅವರು ಮಾತನಾಡುತ್ತಾ “ಆಯಾಮ ಅಕಾಡೆಮಿ ವತಿಯಿಂದ ಬಹಳ ವಿಶೇಷವಾಗಿ ಮಕ್ಕಳಿಂದ ಹಲವಾರು ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ಭವಿಷ್ಯ ನಾವು ನೋಡುತ್ತಿರುವ ಹಾಗೆ ಶಾಲಾ ಶಿಕ್ಷಣ ವ್ಯವಸ್ಥೆ ಹೇಗೆ ನಮ್ಮ ಮಕ್ಕಳನ್ನ ವಿದ್ಯಾರ್ಥಿಗಳನ್ನು ನಡೆಸಿಕೊಂಡು ಹೋಗ್ತಾ ಇದೆ ಅನ್ನೋದು ಗಮನಿಸಿದಾಗ ಒಂದು ರೀತಿಯಲ್ಲಿ ಮಕ್ಕಳನ್ನ ನಾವು ಹೇಗೆ ಬೆಳೆಸಬೇಕು ಅಂತ ದೊಡ್ಡ ಸವಾಲಾಗಿ ಕಣ್ಣೆದುರಿಗೆ ಬಂದು ನಿಲ್ಲುತ್ತೆ, ಯಾಕೆ ಅಂತ ಹೇಳಿದ್ರೆ ಸಂಪೂರ್ಣವಾಗಿ ಶಿಕ್ಷಣ ವ್ಯವಸ್ಥೆಯೇ ಮಕ್ಕಳ ಹಿಂದೆ ಓಡುವ ಸ್ವರೂಪದಲ್ಲಿ ನಮಗೆ ಕಂಡು ಬರುತ್ತೆ ಮತ್ತು ಇನ್ನೊಂದು ಬಹಳ ಮುಖ್ಯವಾದ ಸಂಗತಿ ಅಂದ್ರೆ ನಾವು ನಮ್ಮ ಮಕ್ಕಳನ್ನ ಬೆಳೆಸುವ ರೀತಿ ಸಂದರ್ಭದಲ್ಲಿ ಒಳಗಡೆ ಅವರನ್ನು ಹೇಗೆ ನಾವು ಅವರದೇ ಚಟುವಟಿಕೆಗಳನ್ನ ಮಾಡೋದಕ್ಕೆ ನಾವು ಬಿಟ್ಟು ನಾವು ಹೇಗೆ ಅವರನ್ನ ವ್ಯಕ್ತಿತ್ವವನ್ನ ರೂಪಿಸ್ತೀವಿ ಅಂತ ಸಂಗತಿಯನ್ನ ತಿಳ್ಕೊಂಡ್ರೆ ನೈಸರ್ಕವಾಗಿ ಸ್ವಾಭಾವಿಕವಾಗಿ ಮಕ್ಕಳನ್ನ ಬೆಳೆಯಲಿಕ್ಕೆ ಬಿಡ್ತಾಯಿಲ್ಲ ಅಂತ ಅನ್ಸುತ್ತೆ, ಹೇಗೆ ಅಂತ ಅಂದ್ರೆ ಒಂದು ಗಿಡ ಅದು ನೈಸರ್ಗಿಕವಾಗಿ ಬೆಳಿಬೇಕು, ಆದರೆ ನಾವು ಅದನ್ನು ಒಂದು ಪಾಟಲ್ಲಿ ಹಾಕ್ಬಿಟ್ಟು ನಮಗೆ ಯಾವ್ ರೀತಿ ಬೆಳೆಯಬೇಕು ಆ ರೀತಿ ಬೆಳೆಸಿ ಪ್ರಯತ್ನ ಪಡ್ತೀವಿ, ಅದು ಸ್ವಾಭಾವಿಕ ಬೆಳವಣಿಗೆ ಅಲ್ಲ ಅಂತ ನನಗನಿಸುತ್ತೆ, ಅಂದ್ರೆ ಇದೇ ರೀತಿ ಮಕ್ಕಳನ್ನು ಕೂಡ ಅವನ ಸ್ವಾಭಾವಿಕ ಬೆಳೆಯಲಿಕ್ಕೆ ಬಿಡಲ್ಲ ನಾವೆಲ್ಲ ನಮಗೆ ಯಾವ ರೀತಿ ಬೇಕು ಆ ರೀತಿ ಬೆಳೆಯಲು ಪೂರ್ವ ಕೆಲಸ ಮಾಡ್ತೀವಿ, ಅವಕ್ ಇಷ್ಟ ಇದ್ಯೋ ಇಲ್ವೋ, ಮಾಡ್ಕೋ ಇಲ್ಲವೋ ನಾವು ತಲೆನೆ ಕೆಡ್ಸ್ಕೊಳಲ್ಲ, ಆಗ್ಬಾರ್ದು ಮಕ್ಕಳ ಬೆಳವಣಿಗೆಗೆ ಪೂರಕವಾಗಿ ಎಲ್ರೂ ಕೆಲಸ ಮಾಡಬೇಕು ಅನ್ನೋದೇ ನನ್ನ ಆಶಯ” ಎಂದು ತಮ್ಮ ಅನಿಸಿಕೆಯನ್ನು ತಿಳಿಸಿದರು. 
ಇನ್ನೊಬ್ಬ ಅತಿಥಿಯಾದ ಮೈಸೂರು ಹವ್ಯಾಸಿ ರಂಗ ವೇದಿಕೆಯ ಅಧ್ಯಕ್ಷರಾದ ಶ್ರೀ ರಾಜೇಶ್ ಎಚ್. ರವರು ಆಯಾಮ ಅಕಾಡೆಮಿಯವರು ಮಾಡುತ್ತಿರುವ ಕಾರ್ಯಗಳನ್ನು ಕೆಲಸಗಳನ್ನ ಶ್ಲಾಘಿಸಿದರು, ಕಾರ್ಯಕ್ರಮದಲ್ಲಿ ಆಯಾಮ ಕಾರ್ಯದರ್ಶಿಯಾದ ಶಾಂಭವಿ ಸ್ವಾಮಿಯವರು ಎಲ್ಲರನ್ನೂ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ನಿರಂತರದ ಶ್ರೀನಿವಾಸ್ ಪಾಲಹಳ್ಳಿ, ಧರ್ಮರಾಜ ಎಲ್ಲದಕೆರೆ, ರವಿಕುಮಾರ್, ಶ್ರೀ ಸ.ವೆ.ರ. ಸ್ವಾಮಿ ಅವರು ಮತ್ತು ಮಕ್ಕಳ ಪೋಷಕರು ಹಾಜರಿದ್ದರು, ಕಾರ್ಯಕ್ರಮದ ನಂತರ ಮಕ್ಕಳಿಂದ ನಾಡಗೀತೆಗಳು, ನೃತ್ಯವನ್ನು ಪ್ರದರ್ಶಿಸಲಾಯಿತು.

