ಕಾರ್ಕಳ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಯಕ್ಷ ರಂಗಾಯಣ ಕಾರ್ಕಳ ಇವರ ಸಹಯೋಗದಲ್ಲಿ ‘ಬಿ.ವಿ. ಕಾರಂತ ನೆನಪು’ ಕಾರ್ಯಕ್ರಮವನ್ನು ದಿನಾಂಕ 18, 19 ಮತ್ತು 20 ಸೆಪ್ಟೆಂಬರ್ 2025ರಂದು ಪ್ರತಿದಿನ ಸಂಜೆ 4-00 ಗಂಟೆಗೆ ಕಾರ್ಕಳದ ಕೋಟಿ ಚೆನ್ನಯ ಥೀಂ ಪಾರ್ಕ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 18 ಸೆಪ್ಟೆಂಬರ್ 2025ರಂದು ಈ ಕಾರ್ಯಕ್ರಮವನ್ನು ಮಾನ್ಯ ಶಾಸಕರಾದ ವಿ. ಸುನಿಲ್ ಕುಮಾರ್ ಇವರು ಉದ್ಘಾಟನೆ ಮಾಡಲಿದ್ದು, ಯಕ್ಷ ರಂಗಾಯಣ ಕಾರ್ಕಳ ಇದರ ನಿರ್ದೇಶಕರಾದ ಬಿ.ಆರ್. ವೆಂಕಟರಮಣ ಐತಾಳ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಶ್ರೀ ಗುರುರಾಜ ಮಾರ್ಪಳ್ಳಿ ಮತ್ತು ನಿನಾದ ತಂಡದಿಂದ ‘ಬಿ.ವಿ. ಕಾರಂತರ ರಂಗಸಂಗೀತ’ ಎಂಬ ವಿಷಯದ ಬಗ್ಗೆ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆ ನಡೆಯಲಿದೆ.
ದಿನಾಂಕ 19 ಸೆಪ್ಟೆಂಬರ್ 2025ರಂದು ಶ್ರೀಮತಿ ಸಮುದ್ಯತಾ ವೆಂಕಟರಾಮು ಮತ್ತು ಶ್ರೀ ಅರುಣ ಬಿ.ಟಿ. ಇವರಿಂದ ಗಮಕ ಕಾವ್ಯವಾಚನ ಹಾಗೂ ದಿನಾಂಕ 20 ಸೆಪ್ಟೆಂಬರ್ 2025ರಂದು ಶ್ರೀ ರಾಧಾಕೃಷ್ಣ ಕಲ್ಚಾರ್ ಇವರಿಂದ ‘ರಾಮನ ಸ್ವಗತ’ ಪ್ರಸ್ತುತಗೊಳ್ಳಲಿದೆ.