ಬೆಂಗಳೂರು : ಹವ್ಯಾಸಿ ಯಕ್ಷಗಾನ ರಂಗಭೂಮಿಯಲ್ಲಿ ತನ್ನದೇ ಆದ ಸಾಧನೆಯನ್ನು ಮಾಡಿರುವ ಯಕ್ಷಸಿಂಚನ ಟ್ರಸ್ಟ್ (ರಿ), ಬೆಂಗಳೂರು ಇವರು 16ನೇ ವರುಷದ ವಾರ್ಷಿಕೋತ್ಸವದ ಅಂಗವಾಗಿ ದಿನಾಂಕ 21 ಸೆಪ್ಟೆಂಬರ್ 2024ನೇ ಭಾನುವಾರ ಮಧ್ಯಾಹ್ನ 3-00 ಗಂಟೆಗೆ ‘ಬಡಗುತಿಟ್ಟು ಪೌರಾಣಿಕ ಯಕ್ಷೋತ್ಸವ’ವನ್ನು ಬೆಂಗಳೂರಿನ ಬಸವನಗುಡಿ ವರ್ಲ್ಡ್ ಕಲ್ಚರ್ ಬಿ.ಪಿ. ವಾಡಿಯಾ ಹಾಲ್ ನಲ್ಲಿ ಆಯೋಜಿಸಿದ್ದಾರೆ.
ಇದೇ ಸಂದರ್ಭದಲ್ಲಿ ಖ್ಯಾತ ಹಿರಿಯ ಯಕ್ಷಗುರು ಹಾಗೂ ಮದ್ದಲೆ ವಾದಕರಾದ ಮಂಜುನಾಥ ಪ್ರಭು ಇವರಿಗೆ 2025ನೇ ಸಾಲಿನ ‘ಸಾರ್ಥಕ ಸಾಧಕ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಮಧ್ಯಾಹ್ನ 3-00 ಗಂಟೆಗೆ ಬೆಂಗಳೂರಿನ ಯಕ್ಷಕಲಾ ಅಕಾಡೆಮಿಯ ಬಾಲ ಕಲಾವಿದರಿಂದ ಪಾರ್ತಿಸುಬ್ಬ ರಚಿತ ‘ರಾಮ –ಪರಶುರಾಮ’ ಮತ್ತು 5-00 ಗಂಟೆಗೆ ಯಕ್ಷಸಿಂಚನ ತಂಡದ ಕಲಾವಿದರಿಂದ ದಿನಕರ ಪಚ್ಚನಾಡಿ ರಚಿತ ‘ತರಣಿಸೇನ ಕಾಳಗ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.