ಮಂಗಳೂರು : ಬೈಕಾಡಿ ಪ್ರತಿಷ್ಠಾನ (ರಿ.) ಮಂಗಳೂರು ಇದರ ವತಿಯಿಂದ ‘ಬೈಕಾಡಿ ಜನಾರ್ದನ ಆಚಾರ್ ಪ್ರಶಸ್ತಿ’ ಪ್ರದಾನ ಸಮಾರಂಭವನ್ನು ದಿನಾಂಕ 05 ಜನವರಿ 2026ರಂದು ಸಂಜೆ 4-00 ಗಂಟೆಗೆ ಮಂಗಳೂರಿನ ಪುರಭವನದಲ್ಲಿ ಆಯೋಜಿಸಲಾಗಿದೆ.
ಹಿರಿಯ ಜಾನಪದ ಕಲಾವಿದರಾದ ಶ್ರೀ ರಮೇಶ್ ಕಲ್ಮಾಡಿ ಇವರಿಗೆ ಲೇಖಕರು ಮತ್ತು ಜನಪದ ವಿದ್ವಾಂಸರಾದ ಡಾ. ಕೆ. ಚಿನ್ನಪ್ಪ ಗೌಡ ಇವರು ‘ಬೈಕಾಡಿ ಜನಾರ್ದನ ಆಚಾರ್ ಪ್ರಶಸ್ತಿ’ ನೀಡಿ ಗೌರವಿಸಲಿದ್ದಾರೆ. ಹಿರಿಯ ಭರತನಾಟ್ಯ ಗುರುಗಳಾದ ಶ್ರೀ ಮೋಹನ್ ಕುಮಾರ್ ಉಳ್ಳಾಲ ಇವರಿಗೆ ‘ಜೀವಮಾನ ಸಾಧನಾ ಪುರಸ್ಕಾರ’ ಮತ್ತು ಕಲಾವಿದ ಅರವಿಂದ ಕುಡ್ಲ ಇವರಿಗೆ ‘ಯುವ ಪುರಸ್ಕಾರ’ ಪ್ರದಾನ ಮಾಡಲಾಗುವುದು. ನೃತ್ಯ ಕ್ಷೇತ್ರದಲ್ಲಿ ಅನನ್ಯ ಸಾಧನೆ ಮಾಡಿದ ನೃತ್ಯ ಗುರುಗಳ ಭಾವಚಿತ್ರ ಮತ್ತು ವಿವರವನ್ನೊಳಗೊಂಡ ಕ್ಯಾಲೆಂಡರ್ ಇದೇ ವೇದಿಕೆಯಲ್ಲಿ ಡಾ. ಎಂ. ಮೋಹನ ಆಳ್ವ ಇವರ ಅಮೃತಹಸ್ತದಿಂದ ಲೋಕಾರ್ಪಣೆಗೊಳ್ಳಲಿದೆ.
ವೇದಿಕೆಯಲ್ಲಿ ಗೌರವಾನ್ವಿತರಾದ ಕಾರ್ಕಳ ವಿಧಾನ ಸಭಾ ಕ್ಷೇತ್ರ ಶಾಸಕರಾದ ಸುನಿಲ್ ಕುಮಾರ್ ವಿ., ಕರ್ನಾಟಕ ವಿಧಾನ ಪರಿಷತ್ ಮಾಜಿ ಶಾಸಕರು ಮತ್ತು ಮಾಜಿ ಸೈನಿಕರಾದ ಕ್ಯಾ. ಗಣೇಶ್ ಕಾರ್ಣಿಕ್, ಎಸ್.ಕೆ.ಎಫ್. ಸಮೂಹ ಸಂಸ್ಥೆಗಳ ಚೇರ್ ಮ್ಯಾನ್ ಡಾ. ಜಿ. ರಾಮಕೃಷ್ಣ ಆಚಾರ್ ಮತ್ತು ಮಾರ್ನಬೈಲ್ ಬಜಾರ್ ಗ್ರೂಪ್ ಇದರ ಡೈರೆಕ್ಟರ್ ಲI ಸುಧಾಕರ ಆಚಾರ್ಯ ಅಭ್ಯಾಗತರಾಗಿ ಉಪಸ್ಥಿತರಿರುತ್ತಾರೆ. ಸಭಾ ಕಾರ್ಯಕ್ರಮದ ಬಳಿಕ ಮಂಡ್ಯ ರಮೇಶ್ ಇವರ ‘ನಟನ ರಂಗ ಶಾಲೆ’ ಮೈಸೂರು ಇಲ್ಲಿಯ ಕಲಾವಿದರಿಂದ ‘ಭಾಸ ಪಂಚಕ’ (ಭಾಸ ಮಹಾಕವಿಯ 5 ನಾಟಕಗಳ ಸಂಕಲಿತ ರೂಪ) ಎಂಬ ಕನ್ನಡ ನಾಟಕದ ಪ್ರಸ್ತುತಿ ಇದೆ. 
