ಮಂಗಳೂರು : ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಆ್ಯಂಡ್ ಕಲ್ಚರಲ್ ಹೆರಿಟೇಜ್ (ಇಂಟಾಕ್)ನ ಮಂಗಳೂರು ಶಾಖೆ, ಆರ್ಟ್ ಕೆನರಾ ಟ್ರಸ್ಟ್ ಮತ್ತು ಚಿರಂತನ ಚಾರಿಟೇಬಲ್ ಟ್ರಸ್ಟ್ ಇದರ ಸಹಯೋಗದೊಂದಿಗೆ ಪ್ರಸ್ತುತ ಪಡಿಸುವ ಕರ್ನಾಟಕದ ಸಂಗೀತ ಪರಂಪರೆ ಸರಣಿ 7ರಲ್ಲಿ ವಿಶ್ವ ಸಂಗೀತ ದಿನದಂದು ಬೈಠಕ್ @ ಕೊಡಿಯಾಲ್ಗುತ್ತು ಸಂಗೀತ ಕಛೇರಿಯನ್ನು ದಿನಾಂಕ 21 ಜೂನ್ 2025ರಂದು ಸಂಜೆ 5-30 ಗಂಟೆಗೆ ಕೊಡಿಯಾಲ್ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ.
ಹಿಂದೂಸ್ತಾನಿ ಗಾಯಕಿ ವಿಭಾ ಎಸ್. ನಾಯಕ್ ಇವರ ಹಾಡುಗಾರಿಕೆಗೆ ರಾಜೇಶ್ ಭಾಗವತ್ ತಬಲಾ ಹಾಗೂ ಕುಮಾರಿ ಮೇಧಾ ಭಟ್ ಇವರು ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ.