ಮಂಗಳೂರು : ಕೆನರಾ ಕಲ್ಚರಲ್ ಅಕಾಡೆಮಿ ಪ್ರಸ್ತುತ ಪಡಿಸುವ ಸಂತ ಶಿಶುನಾಳ ಷರೀಫ್ ಪ್ರಶಸ್ತಿ ಪುರಸ್ಕೃತ ಶ್ರೀ ಪುತ್ತೂರು ನರಸಿಂಹ ನಾಯಕ್ ಇವರ ಮಾರ್ಗದರ್ಶನದಲ್ಲಿ ‘ಬಾಲ ಭಜನಾ ವೈಭವ’ ಮಕ್ಕಳ ಭಜನಾ ಸ್ಪರ್ಧಾ ಕೂಟವು ದಿನಾಂಕ 20 ಮತ್ತು 21 ಡಿಸೆಂಬರ್ 2025ರಂದು ಮಂಗಳೂರಿನ ಟಿ.ವಿ. ರಮಣ್ ಪೈ ಕನ್ವೆನ್ಷನ್ ಹಾಲ್ ನಲ್ಲಿ ನಡೆಯಲಿದೆ.
ಸ್ಪರ್ಧಾ ನಿಯಮಗಳು:
ತಂಡ ಕನಿಷ್ಟ 8 ಹಾಗೂ ಗರಿಷ್ಟ 12 ಸದಸ್ಯರನ್ನು ಹೊ೦ದಿರಬೇಕು (ಹಾರ್ಮೋನಿಯಂ ಹಾಗೂ ತಬಲಾ ವಾದಕರು ಸೇರಿ).
ಒಬ್ಬ ಸ್ಪರ್ಧಿ ಒಂದು ತಂಡದಲ್ಲಿ ಮಾತ್ರ ಭಾಗವಹಿಸಬೇಕು.
ಸ್ಪರ್ಧಿ ಗರಿಷ್ಟ ಹತ್ತನೇ ತರಗತಿ (ವಯಸ್ಸು ಗರಿಷ್ಠ 17 ವರ್ಷ) ಮೀರಿರಬಾರದು.
ದಾಸರ ಪದಗಳು ಮತ್ತು ಸಂತರ ಭಜನೆಗಳನ್ನು ಹಾಗೂ ಅದರೊಂದಿಗೆ ನಾಮಾವಳಿಗಳನ್ನು ಹಾಡಬಹುದು.
ಶಾಲಾ ಭಜನಾ ತಂಡಗಳು ಹಾಗೂ ಊರಿನ ಭಜನಾ ಮಂಡಳಿಗಳ ಬಾಲ ಸದಸ್ಯರು ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.
ಈ ಸ್ಪರ್ಧೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಮಕ್ಕಳಿಗಾಗಿ ಮಾತ್ರ ಸೀಮಿತ.
ಈ ಸ್ಪರ್ಧಾ ಕಾರ್ಯಕ್ರಮ ಮಂಗಳೂರಿನಲ್ಲಿ ಜರುಗಲಿದೆ.
ನಿಮ್ಮ ತಂಡದ ಹೆಸರು ನೋಂದಾಯಿಸಲು ಕೊನೆಯ ದಿನಾಂಕ 20 ನವೆಂಬರ್ 2025.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 70224 83333 ಸಂಖ್ಯೆಯನ್ನು ಸಂಪರ್ಕಿಸಿರಿ.

