ಮಂಗಳೂರು : ರಾಗತರಂಗ ಮಂಗಳೂರು ಸಂಸ್ಥೆಯು ಭಾರತೀಯ ವಿದ್ಯಾ ಭವನ ಮಂಗಳೂರು ಇದರ ಸಹಯೋಗದೊಂದಿಗೆ ವಿಶೇಷವಾಗಿ ಸರಕಾರಿ ಕನ್ನಡ ಮಾಧ್ಯಮ ಶಾಲೆಯ ಪ್ರಾಥಮಿಕ ಹಾಗೂ ಹೈಸ್ಕೂಲ್ ಮಕ್ಕಳಿಗಾಗಿ ದಿನಾಂಕ 24, 25 ಮತ್ತು 26 ಅಕ್ಟೋಬರ್ 2025ರಂದು ಬೆಳಗ್ಗೆ 9-30 ಗಂಟೆಗೆ ಮಂಗಳೂರಿನ ಪಾಂಡೇಶ್ವರ ಭಾರತೀಯ ವಿದ್ಯಾ ಭವನದಲ್ಲಿ ಆಯೋಜಿಸಲಾಗಿದೆ.
ದಿನಾಂಕ 24 ಅಕ್ಟೊಬರ್ 2025 ಶುಕ್ರವಾರದಂದು ದೇಶ ಭಕ್ತಿಗೀತೆ (ಸಮೂಹ ಗಾನ), ಜಾನಪದ ಗೀತೆ – ಕನ್ನಡ ಮತ್ತು ತುಳು), ಚಿತ್ರ ರಚನೆ ವಿಷಯ: ನಮ್ಮೂರ ಜಾತ್ರೆ ಮತ್ತು ಅಪರಾಹ್ನ 2-00 ಘಂಟೆಗೆ ಆಶು ಭಾಷಣ ಮತ್ತು ಸಾಮಾನ್ಯ ಜ್ಞಾನ ರಸ ಪ್ರಶ್ನೆ, ದಿನಾಂಕ 25 ಅಕ್ಟೊಬರ್ 2025 ಶನಿವಾರದಂದು ಛದ್ಮವೇಷ, ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಮತ್ತು ಭಾವಗೀತೆ ಮತ್ತು ದಿನಾಂಕ 26 ಅಕ್ಟೊಬರ್ 2025 ಆದಿತ್ಯವಾರದಂದು ಭರತನಾಟ್ಯ, ಕರ್ನಾಟಕ ವಾದ್ಯ ಸಂಗೀತ, ಜಾನಪದ ನೃತ್ಯ, ಹಿಂದೂಸ್ತಾನಿ ವಾದ್ಯ ಸಂಗೀತ, ಕೀ ಬೋರ್ಡ್ ಸ್ಪರ್ಧೆಗಳು ನಡೆಯಲಿದ್ದು, ಆಸಕ್ತ ವಿದ್ಯಾರ್ಥಿಗಳು ಶಾಲೆಯ ಗುರುತಿನ ಚೀಟಿಯೊಂದಿಗೆ ಬಂದು ಸ್ಪರ್ಧೆಗಳಲ್ಲಿ ಭಾಗವಹಿಸಬಹುದಾಗಿದೆ.
ಪ್ರತಿ ವರ್ಷದಂತೆ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಯ ಎಲ್ಲಾ (ಖಾಸಗಿ ಹಾಗೂ ಸರಕಾರಿ) ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳಿಗೆ ಸ್ಪರ್ಧೆಗಳು ನಡೆಯಲಿದ್ದು, ನೋಂದಣಿ, ಸ್ಪರ್ಧೆಯ ನಿಯಮಗಳು ಇತ್ಯಾದಿ ವಿವರಗಳಿಗಾಗಿ ಶ್ರೀಮತಿ ಮಮತಾ ಎಂ.ಎಸ್. 9448792748 ಮತ್ತು ಜಯಪ್ರಕಾಶ್ ಶೆಟ್ಟಿ 8618523830 ಇವರನ್ನು ಸಂಪರ್ಕಿಸಬಹುದು.