ಬೆಂಗಳೂರು: ಬೆಂಗಳೂರಿನ ರಂಗತಂತ್ರ ಅರ್ಪಿಸುವ ಟಿ.ಪಿ.ಕೈಲಾಸಂ ಇವರ ‘ಬಂಡ್ವಾಳ್ವಲ್ಲದ ಬಡಾಯಿ’ ನಾಟಕವು ದಿನಾಂಕ 29-07-2023 ರಂದು ಹಾಗೂ ಬಿ.ಆರ್. ಲಕ್ಷ್ಮಣರಾವ್ ಇವರ ‘ನನಗ್ಯಾಕೋ ಡೌಟು’ ನಾಟಕದ ಪ್ರದರ್ಶನವು ದಿನಾಂಕ 30-07-2023 ರಂದು ಬೆಂಗಳೂರಿನ ಬಸವನಗುಡಿಯ ವಾಡಿಯ ಸಭಾಂಗಣದಲ್ಲಿ ನಡೆಯಲಿದೆ.
‘ಬಂಡ್ವಾಳ್ವಲ್ಲದ ಬಡಾಯಿ’
ಉದ್ದಿನ ಮಣಿ, ಕಂಪೇರಿಟಿವ್ ಕೊಲೊರೊಲಿಗೆ, ಶ್ಯಾಡೋ ಆಫ್ ದ ಸನ್ comparative colorology, shadow of the sun, comparative colorology, shadow of the sun ಮುಂತಾದ ವಿಶಿಷ್ಟ ಪದ ಪ್ರಯೋಗಗಳು ಪ್ರಹಸನ ಪಿತಾಮಹ ಎಂದು ಖ್ಯಾತರಾಗಿರುವ ಟಿ.ಪಿ.ಕೈಲಾಸಂ ಅವರ ಟ್ರೇಡ್ ಮಾರ್ಕ್ ಎಂದರೆ ಉತ್ಪ್ರೇಕ್ಷೆಯಲ್ಲ.
ವ್ಯವಸ್ಥೆಯನ್ನು ವ್ಯಂಗ್ಯ ಮಾಡಿ, ನಗುವಿನ ಬುಗ್ಗೆ ಹರಿಸುವ ಬಗೆ ಕೈಲಾಸಂರವರಿಗೆ ಸುಲಭವಾಗಿ ಕರಗತ. ಅದಕ್ಕೆ ಅಲ್ಲವೇ ಇವರನ್ನು tipycal ass ಅನ್ನುವುದು.
ಇಂತಹ ಕೈಲಾಸಂರವರು 1945ರಲ್ಲಿ, ಒಬ್ಬ ಲಾಯರ್ ತನ್ನ ಬದುಕನ್ನ ಹೇಗೆಲ್ಲಾ ನಡೆಸಬಹುದು ಮತ್ತು ಅಂದಿನ ಸಾಮಾಜಿಕ ಸ್ಥಿತಿಗತಿಗಳು ಹೇಗಿದ್ದವು ಎಂಬುದನ್ನ ಉಡಾಫೆ ಮತ್ತು ವ್ಯಂಗ್ಯದ ಮೂಲಕ ಅದ್ಬುತವಾಗಿ ಬರೆದಿರುವ ನಾಟಕವೇ ‘ಬಂಡ್ವಾಳ್ವಲ್ಲದ ಬಡಾಯಿ’. ಈ ನಾಟಕ ಅಂದೇ ಬರೆದಿದ್ದರೂ ಇಂದಿಗೂ ಇಷ್ಟು ಪ್ರಸ್ತುತವಾಗಿರುವುದು ಆಶ್ಚರ್ಯವೇ ಸರಿ.
‘’ನಂಗ್ಯಾಕೋ ಡೌಟು’
ಬಿ.ಆರ್.ಲಕ್ಷ್ಮಣ ರಾಯರು ರಚಿಸಿರುವ ಸಂಶಯ ರಾಧ್ಧಾಂತವೇ ‘ನಂಗ್ಯಾಕೋ ಡೌಟು’ ಎಂಬ ನಗೆ ನಾಟಕ. ಗಂಡ ಹೆಂಡಿರ ನಡುವೆ ಬರುವ ಸಂಶಯ ಇಡೀ ನಾಟಕವನ್ನು ಕಟ್ಟಿಕೊಟ್ಟಿದೆ. ನಾಯಕನ ಅದ್ಬುತ ಗಾಯನ ನಾಟಕಕ್ಕೆ ಧನಾತ್ಮಕ ಅಂಶ . ಕವಿತೆ, ಗಾಯನ ಮತ್ತು ಅಧ್ಬುತವಾದ ಬರವಣಿಗೆಯು ನಾಟಕ ಪ್ರೇಕ್ಷಕರಿಗೆ ರಸದೌತಣವನ್ನು ಒದಗಿಸುವುದರಲ್ಲಿ ಸಂಶಯವೇ ಇಲ್ಲ.
ತಂಡದ ಬಗ್ಗೆ:
ವಾರವೆಲ್ಲ ಕಂಪ್ಯೂಟರ್ ನ ಕೀಲಿಮಣೆ ಕುಟ್ಟುವ ಕಾಯಕದಲ್ಲಿ ನಿರತರಾಗಿರುವ, ರಂಗದ ಬಗ್ಗೆ ಅಪಾರವಾದ ಆಸಕ್ತಿಯಿರುವ ತಂಡ ‘ರಂಗ ತಂತ್ರ’.
ಕಳೆದ 15 ವರ್ಷಗಳಿಂದಲೂ ರಂಗದ ಮೇಲೆ ಕೈಲಾಸಂ ಇವರ ಬಂಡ್ವಾಳ್ವಲ್ಲದ ಬಡಾಯಿ, ಅಮ್ಮಾವ್ರ ಗಂಡ, ಹುತ್ತದಲ್ಲಿ ಹುತ್ತ, ಶ್ರೀರಂಗರ ಶೋಕ ಚಕ್ರ, ಅಶ್ವತ್ ರ ಶ್ರೀಕೃಷ್ಣ ಸಂಧಾನ, ಬಿ.ಆರ್.ಲಕ್ಷ್ಮಣ ರಾವ್ ರ ನನಗ್ಯಾಕೋ ಡೌಟು, ಇಂತಹ ಹಲವು ಪ್ರಯೋಗಗಳನ್ನು ಈ ತಂಡ ಪ್ರಸ್ತುತಪಡಿಸಿದೆ.